Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News | State News | Districts Yadgir

Yadgir: ನಿರ್ಮಾಣ ಹಂತದ ಸೇತುವೆಗೆ ಕಾರು ಡಿಕ್ಕಿ; ನಾಲ್ವರು ಸಾವು

ಯಾದಗಿರಿ: ತುಳಜಾಪುರಕ್ಕೆ ತೆರಳಿ ಮರಳುವ ಪ್ರಯಾಣದಲ್ಲಿದ್ದ ನಾಲ್ವರು ಯುವಕರ ಬದುಕು ರಾಷ್ಟ್ರೀಯ ಹೆದ್ದಾರಿಯಲ್ಲೇ ದುರಂತ ಅಂತ್ಯ ಕಂಡಿದೆ. ವೇಗವಾಗಿ ಬಂದ ಬ್ರಿಜಾ ಕಾರು ನಿಯಂತ್ರಣ ತಪ್ಪಿ ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಮೃತಪಟ್ಟ ಘಟನೆ ಶಹಾಪುರ ತಾಲ್ಲೂಕಿನ ಇಬ್ರಾಹಿಂಪುರ ಸೀಮಾಂತರದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಇಬ್ರಾಹಿಂಪುರ ಗ್ರಾಮದ ಸಮೀಪದ ಡಿಬಿಎಲ್ ಕ್ಯಾಂಪ್ ಬಳಿಯ ಸೂರತ್‌-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಸಿಕ್ಸ್‌ವೇ ರಸ್ತೆಯಲ್ಲಿ ನ.6ರ ರಾತ್ರಿ 11ರಿಂದ 11.30ರ ನಡುವೆ ಅಪಘಾತ ಸಂಭವಿಸಿದೆ. ಕೆಎ-34 ಎನ್-6622 ನೋಂದಣಿ ಸಂಖ್ಯೆಯ ಬ್ರಿಜಾ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಕಾರು ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಅಪ್ಪಳಿಸಿದ ರಭಸಕ್ಕೆ ವಾಹನ ಜಖಂಗೊಂಡಿದೆ.

ಕಾರಿನ ಚಾಲಕ ಗುರುರಾಜ್ ಸುರೇಶ ಚವ್ಹಾಣ (29) ಹಾಗೂ ಮುಂಭಾಗದಲ್ಲಿ ಕುಳಿತಿದ್ದ ರೆಡ್ಡಿ ಬಾಮ್ಲಾ ರಾಠೋಡ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿಯ ಸೀಟಿನಲ್ಲಿದ್ದ ಗೋವಿಂದ ಸೀತ್ಯಾ ಚವ್ಹಾಣ (28) ಮತ್ತು ಕುಮಾರ ರಾಮು ರಾಠೋಡ (26) ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಂಬ್ಯುಲೆನ್ಸ್ ಮೂಲಕ ಯಾದಗಿರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ 1.20ರ ಸುಮಾರಿಗೆ ಮೃತಪಟ್ಟಿದ್ದಾರೆ.

ನಾಲ್ವರೂ ಯಾದಗಿರಿ ತಾಲೂಕಿನ ವಿವಿಧ ತಾಂಡಾಗಳ ನಿವಾಸಿಗಳಾಗಿದ್ದಾರೆ. ನಾಲ್ವರು ಯುವಕರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಅತಿವೇಗವೇ ಅಪಘಾತಕ್ಕೆ ಕಾರಣ?

ಕಾರು ಚಾಲಕ ಗುರುರಾಜ್ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ನಿರ್ಮಾಣ ಹಂತದ ಸೇತುವೆಗೆ ಡಿಕ್ಕಿ ಹೊಡೆದಿದೆ ಎಂದು ಮೃತ ರೆಡ್ಡಿ ಅವರ ಸಹೋದರ ಮಂಗ್ಯಾ ಬಾಮ್ಲಾ ರಾಠೋಡ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author
Kudhan Sab
ನಾನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಸತ್ಯಕಾಮ ಪ್ರಾದೇಶಿಕ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಜನಪರ ವಿಚಾರಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
Yadgir: ನಿರ್ಮಾಣ ಹಂತದ ಸೇತುವೆಗೆ ಕಾರು ಡಿಕ್ಕಿ; ನಾಲ್ವರು ಸಾವುಪಂಚಾಯಿತಿಯ ಸ್ಥಿತಿಯೇ ಹೀಗಾದರೆ ಗ್ರಾಮದ ಗತಿಯೇನು?ಬಿಎಸ್‌ಎನ್‌ಎಲ್ ಟವರ್ ಅಳವಡಿಸುವ ನೆಪದಲ್ಲಿ 2.43 ಲಕ್ಷ ವಂಚನೆಶಹಾಪುರ: ನಿವೃತ್ತ ಉಪನ್ಯಾಸಕರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 10 ಲಕ್ಷ ವಂಚನೆ!ಜಗದಾಂಬೆ ಜಗತ್ತಿನ ರಕ್ಷಕಿ: ಡಾ. ಗಂಗಾಧರ ಶ್ರೀಬೀದರ್ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನದ ಸರ್ವಾಧಕ್ಷ್ಯರಾಗಿ ಮಾರುತಿ ಬೌದ್ಧೆ ಆಯ್ಕೆಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಬೀದರ್‌ನಲ್ಲಿ ತಿರಂಗಾ ಮೆರವಣಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ರಾಜೀನಾಮೆಗೆ ಒತ್ತಾಯಸೋಲಾಪುರ ರೈಲ್ವೆ ವಿಭಾಗೀಯ ಸಲಹಾ ಸಮಿತಿಗೆ ಶಾಂತರೆಡ್ಡಿ ಪೆಠಶಿರೂರ ನೇಮಕಸ್ಪಾ ಮೇಲೆ ದಾಳಿ: ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ :ಇಬ್ಬರ ವಿರುದ್ಧ ಪ್ರಕರಣ ದಾಖಲುಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ಶಾಸಕ ಪ್ರಭು ಚವ್ಹಾಣ ಗರಂ; ಸುಧಾರಣೆಗೆ ಖಡಕ್ ಸೂಚನೆ