Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News | State News | Districts Yadgir

ಲೋಕಾಯುಕ್ತ ದಾಳಿ: 3 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ವಶಕ್ಕೆ

ಯಾದಗಿರಿ: ಎನ್‌ಎ (NA) ಜಮೀನುಗಳನ್ನು ವಾಣಿಜ್ಯ ನಿವೇಶನಗಳಾಗಿ (Commercial Sites) ಪರಿವರ್ತಿಸಿಕೊಡಲು 3 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಇಲ್ಲಿನ ನಗರ ಯೋಜನಾ ಕಚೇರಿಯ ಇಬ್ಬರನ್ನು ರಾಯಚೂರು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರ ಯೋಜನಾ ಸದಸ್ಯ ಕಾರ್ಯದರ್ಶಿ ಶರಣಪ್ಪ ಮತ್ತು ಚಾಲಕ ಸಂತೋಷಕುಮಾರ್ ವಶಕ್ಕೆ ಪಡೆದವರು. ಮಾನ್ವಿ ನಿವಾಸಿ ಸುಧಾಕರ್ ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಎನ್‌ಎ ಜಮೀನುಗಳನ್ನು ವಾಣಿಜ್ಯ ನಿವೇಶನಗಳಾಗಿ ಪರಿವರ್ತಿಸಿಕೊಡುವ ಕೆಲಸಕ್ಕೆ ಸಂಬಂಧಿಸಿದಂತೆ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

ರಾಯಚೂರು ಲೋಕಾಯುಕ್ತ ಪೊಲೀಸ್ ವಿಭಾಗದ ಎಸ್‌ಪಿ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಮೇಲ್ವಿಚಾರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ರವಿ ಪುರುಷೋತ್ತಮ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಈ ಸಂಬಂಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Author
Kudhan Sab
ನಾನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಸತ್ಯಕಾಮ ಪ್ರಾದೇಶಿಕ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಜನಪರ ವಿಚಾರಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೋಕಾಯುಕ್ತ ದಾಳಿ: 3 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ವಶಕ್ಕೆರೈಲ್ವೆ ಮೇಲ್ಸೇತುವೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ಟಿಪ್ಪರ್ ಮಾಲೀಕರ ಪ್ರತಿಭಟನೆ: ಶಾಸಕ ಕಂದಕೂರ ವಿರುದ್ಧ ಅವಹೇಳನಕಾರಿ ಹೇಳಿಕೆ, ದೂರು ದಾಖಲುಕೋಳಿ ಪಂಜದ ಮೇಲೆ ಪೊಲೀಸರ ದಾಳಿ- 10 ಮಂದಿ ವಿರುದ್ಧ ಕೇಸ್‌ಬಿಲ್ ಮಂಜೂರಿಗೆ ಲಂಚದ ಬೇಡಿಕೆ: ಇಬ್ಬರು ಜೆಸ್ಕಾಂ ಜೆಇಗಳ ವಿರುದ್ಧ ಲೋಕಾಯುಕ್ತ ಟ್ರ್ಯಾಪ್‌ಪ್ರವಾಸಿ ತಾಣಗಳ ಪರಿಚೆಯಾತ್ಮಕ ಪುಸ್ತಕ  ಬಿ ಎಸ್ ದೇಸಾಯಿ ಅವರ ಕನಸುಗಳ ಕಡಲಾಚೆಜಗನ್ಮಾತೆ ಭಘಳಾಂಬದೇವಿ ನವರಾತ್ರಿ ಉತ್ಸವಕ್ಕೆ ಅಬ್ಬೆತುಮಕೂರು ಸಜ್ಜುಶಾಸಕ ಕಂದಕೂರ ಕ್ಷಮೆಗೆ ಟಿಪ್ಪರ್ ಮಾಲೀಕರ ಆಗ್ರಹಅಕ್ರಮ ಮದ್ಯ ಮಾರಾಟ: ಮಾರುವವರು ಸಿಕ್ಕಿಬಿದ್ದರು, ಪೂರೈಕೆದಾರರು ಪಾರಾದರೇ?ಸೈನಿಕರ ತ್ಯಾಗಕ್ಕೆ ಸಮಾಜದ ಗೌರವ ಅಗತ್ಯ.!