Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News | Districts Yadgir

ಟಿಪ್ಪರ್ ಮಾಲೀಕರ ಪ್ರತಿಭಟನೆ: ಶಾಸಕ ಕಂದಕೂರ ವಿರುದ್ಧ ಅವಹೇಳನಕಾರಿ ಹೇಳಿಕೆ, ದೂರು ದಾಖಲು

ಯಾದಗಿರಿ: ಟಿಪ್ಪರ್ ಮಾಲೀಕರ ಪ್ರತಿಭಟನಾ ರ‍್ಯಾಲಿಯಲ್ಲಿ ಶಾಸಕ ಶರಣಗೌಡ ಕಂದಕೂರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದ ಮೇರೆಗೆ ಮೊಹಮ್ಮದ್ ಅನೀಫ್ ಎಂಬುವವರ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ. 12ರಂದು ನಗರದ ಹೊಸ ಬಸ್ ನಿಲ್ದಾಣದ ಸಮೀಪದ ಆಕ್ಸಿಸ್ ಬ್ಯಾಂಕ್ ಎದುರಿನ ರಸ್ತೆಯಲ್ಲಿ ಟಿಪ್ಪರ್ ಮಾಲೀಕರ ಸಂಘದ ವತಿಯಿಂದ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿತ್ತು. ಟಿಪ್ಪರ್‌ಗೆ ಬೆಂಕಿ ಹಚ್ಚುವ ಕುರಿತು ಶಾಸಕ ಶರಣಗೌಡ ಕಂದಕೂರ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಗಿತ್ತು,  ಈ ಸಂದರ್ಭದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೊಹಮ್ಮದ್ ಅನೀಫ್, ಶಾಸಕ ಶರಣಗೌಡ ಕಂದಕೂರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನಾಗಪ್ಪ ಹೊಸಮನಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಸಕರು ಟಿಪ್ಪರ್‌ಗಳ ರಾಯಲ್ಟಿ ನಕಲಿ ಎಂಬುದಾಗಿ ಆರೋಪಿಸಿ ಟಿಪ್ಪರ್ ಮಾಲೀಕರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಅನೀಫ್ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಯಲ್ಟಿ ನಕಲಿಯೆಂದು ಸಾಬೀತುಪಡಿಸಬೇಕು ಅಥವಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಲ್ಲದೆ, ಶಾಸಕರ ವಿರುದ್ಧ ಅವಾಚ್ಯ ಹಾಗೂ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಮಾತುಗಳನ್ನು ತಾವು ಸೇರಿದಂತೆ ಇತರ ಕೆಲವರು ಪ್ರತ್ಯಕ್ಷವಾಗಿ ಕೇಳಿದ್ದಾಗಿ ದೂರುದಾರರು ತಿಳಿಸಿದ್ದಾರೆ. ಸಾರ್ವಜನಿಕ ರ‍್ಯಾಲಿಯಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮೊಹಮ್ಮದ್ ಅನೀಫ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ದೂರಿನ ಆಧಾರದ ಮೇಲೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ  ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) 2023ರ ಕಲಂ 351(2) ಮತ್ತು 352ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Author
Kudhan Sab
ನಾನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಸತ್ಯಕಾಮ ಪ್ರಾದೇಶಿಕ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಜನಪರ ವಿಚಾರಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೋಕಾಯುಕ್ತ ದಾಳಿ: 3 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ವಶಕ್ಕೆರೈಲ್ವೆ ಮೇಲ್ಸೇತುವೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ಟಿಪ್ಪರ್ ಮಾಲೀಕರ ಪ್ರತಿಭಟನೆ: ಶಾಸಕ ಕಂದಕೂರ ವಿರುದ್ಧ ಅವಹೇಳನಕಾರಿ ಹೇಳಿಕೆ, ದೂರು ದಾಖಲುಕೋಳಿ ಪಂಜದ ಮೇಲೆ ಪೊಲೀಸರ ದಾಳಿ- 10 ಮಂದಿ ವಿರುದ್ಧ ಕೇಸ್‌ಬಿಲ್ ಮಂಜೂರಿಗೆ ಲಂಚದ ಬೇಡಿಕೆ: ಇಬ್ಬರು ಜೆಸ್ಕಾಂ ಜೆಇಗಳ ವಿರುದ್ಧ ಲೋಕಾಯುಕ್ತ ಟ್ರ್ಯಾಪ್‌ಪ್ರವಾಸಿ ತಾಣಗಳ ಪರಿಚೆಯಾತ್ಮಕ ಪುಸ್ತಕ  ಬಿ ಎಸ್ ದೇಸಾಯಿ ಅವರ ಕನಸುಗಳ ಕಡಲಾಚೆಜಗನ್ಮಾತೆ ಭಘಳಾಂಬದೇವಿ ನವರಾತ್ರಿ ಉತ್ಸವಕ್ಕೆ ಅಬ್ಬೆತುಮಕೂರು ಸಜ್ಜುಶಾಸಕ ಕಂದಕೂರ ಕ್ಷಮೆಗೆ ಟಿಪ್ಪರ್ ಮಾಲೀಕರ ಆಗ್ರಹಅಕ್ರಮ ಮದ್ಯ ಮಾರಾಟ: ಮಾರುವವರು ಸಿಕ್ಕಿಬಿದ್ದರು, ಪೂರೈಕೆದಾರರು ಪಾರಾದರೇ?ಸೈನಿಕರ ತ್ಯಾಗಕ್ಕೆ ಸಮಾಜದ ಗೌರವ ಅಗತ್ಯ.!