Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Districts Yadgir

ರೈಲ್ವೆ ಮೇಲ್ಸೇತುವೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

ಯಾದಗಿರಿ: ಗುರುಮಠಕಲ್ ಕ್ಷೇತ್ರದ ಸೈದಾಪೂರ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಸೈದಾಪೂರ ಸೇರಿದಂತೆ ಯಾದಗಿರಿ ತಾಲೂಕಿನ ಮುಷ್ಟೂರು, ಮುದ್ನಾಳ ಗ್ರಾಮಗಳಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಕೇಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರಿಗೆ ಫೆಬ್ರವರಿ ೧೭ ರಂದು ಮನವಿ ಸಲ್ಲಿಸಿದ್ದರಿಂದ ಈ ಮನವಿಗೆ ಸ್ಪಂದಿಸಿರುವ ಸಚಿವರು ಅಕ್ಟೋಬರ್ ೫ ರಂದು ಪತ್ರ ಬರೆದು ಸೈದಾಪೂರ ರೈಲ್ವೆ ಮೇಲ್ಸೇತುವೆ ಮಂಜೂರಾತಿ ನೀಡಲಾಗಿದ್ದು, ಮುಷ್ಟೂರು ಮತ್ತು ಮುದ್ನಾಳ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.

ಜನರ ಬಹು ವರ್ಷದ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆಗೆ ಕೊನೆಗೂ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಸಂತೋಷದ ವಿಷಯವಾಗಿದೆ. ಸೈದಾಪೂರ ರೈಲ್ವೆ ಮೇಲ್ಸೇತುವೆ ನಿರ್ಮಾಣವಾದರೆ ಗಂಟೆಗಟ್ಟಲೆ ಲೆವೆಲ್ ಕ್ರಾಸಿಂಗ್ ಬಳಿ ವಾಹನ ಕಾಯುವ ಪರಿಸ್ಥಿತಿ ಇಲ್ಲವಾಗಲಿದ್ದು, ದೇವದುರ್ಗ ಮತ್ತು ವಡಗೇರಾ ತಾಲೂಕುಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದರಿಂದ ಅಲ್ಲಿನ ಜನರಿಗೆ ಆಸರೆಯಾಗಲಿದ್ದು, ಸುತ್ತಮುತ್ತಲಿನ ನೂರಾರು ಹಳ್ಳಿಗಳ ಜನರಿಗೆ, ರೈತರಿಗೆ ಮತ್ತು ವಾಹನ ಸವಾರರಿಗೆ ಆಗುತ್ತಿದ್ದ ತೊಂದರೆ ತಪ್ಪಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಜನರ ಅಭಿವೃದ್ಧಿಗಾಗಿ ಸದಾ ಸ್ಪಂದಿಸುವಲ್ಲಿ ನಿರಂತರವಾಗಿರುವ ಕೇಂದ್ರ ಸಚಿವ ವಿ.ಸೋಮಣ್ಣ ನವರು ಈ ಭಾಗದಲ್ಲಿ ಸದಾ ಒಂದಿಲ್ಲೊAದು ಸ್ಪಂದನೆ ನೀಡುತ್ತಿದ್ದಾರೆ, ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ವಂದೇ ಭಾರತ್, ರಾಜಧಾನಿ ಸೇರಿದಂತೆ ಹಲವು ರೈಲುಗಳನ್ನು ನಿಲುಗಡೆಗೆ ಸ್ಪಂದಿಸಿದ್ದಾರೆ. ಗುರುಮಠಕಲ್ ಪಟ್ಟಣಕ್ಕೆ ಶಾಶ್ವತ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ವಂದೇ ಭಾರತ್ ಸ್ಲೀಪರ್ ಹೊಸ ರೈಲು ಯಾದಗಿರಿಯಲ್ಲಿ ನಿಲುಗಡೆಗೆ ಶಾಸಕ ಕಂದಕೂರ ಮನವಿ ಸಲ್ಲಿಸಿದ್ದು, ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ 
ಯಾದಗಿರಿ ಜಿಲ್ಲೆಯ ಜನರ ಸಮಸ್ಯೆಗಳನ್ನು ಕೇಂದ್ರ ಸಚಿವರಾದ ವಿ.ಸೋಮಣ್ಣ ರವರ ಗಮನಕ್ಕೆ ತಂದಾಗ ಹಂತ ಹಂತವಾಗಿ ಪರಿಹರಿಸುವ ಭರವಸೆಯ ಫಲವಾಗಿ ಗುರುಮಠಕಲ್ ಕ್ಷೇತ್ರದ ಸೈದಾಪೂರ, ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅದರ ಜೊತೆಗೆ ಹತ್ತಿಕುಣಿ ಡ್ಯಾಂಗೆ ೭೫ ಕೋಟಿ ಅನುದಾನ ಬಿಡುಗಡೆ, ಕಡೆಚೂರು ಬಾಡಿಯಾಳ ರೈಲ್ವೇ ಕೋಚ್ ಕಾರ್ಖಾನೆ ಉನ್ನತಿಕರಣ ಅಭಿವೃದ್ಧಿಗೆ ೨೦೦ಕೋಟಿ ರೈಲ್ವೆ ಬೋರ್ಡ್ಗೆ ಪ್ರಸ್ತಾವನೆ ಸಲ್ಲಿಸಿರುವುದು ಸಂತೋಷದಾಯವಾಗಿದ್ದು, ಕೇಂದ್ರ ಸಚಿವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ತಿಳಿಸಲಾಗುವುದು.

- ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್

 

Author
Kudhan Sab
ನಾನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಸತ್ಯಕಾಮ ಪ್ರಾದೇಶಿಕ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಜನಪರ ವಿಚಾರಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೋಕಾಯುಕ್ತ ದಾಳಿ: 3 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ವಶಕ್ಕೆರೈಲ್ವೆ ಮೇಲ್ಸೇತುವೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ಟಿಪ್ಪರ್ ಮಾಲೀಕರ ಪ್ರತಿಭಟನೆ: ಶಾಸಕ ಕಂದಕೂರ ವಿರುದ್ಧ ಅವಹೇಳನಕಾರಿ ಹೇಳಿಕೆ, ದೂರು ದಾಖಲುಕೋಳಿ ಪಂಜದ ಮೇಲೆ ಪೊಲೀಸರ ದಾಳಿ- 10 ಮಂದಿ ವಿರುದ್ಧ ಕೇಸ್‌ಬಿಲ್ ಮಂಜೂರಿಗೆ ಲಂಚದ ಬೇಡಿಕೆ: ಇಬ್ಬರು ಜೆಸ್ಕಾಂ ಜೆಇಗಳ ವಿರುದ್ಧ ಲೋಕಾಯುಕ್ತ ಟ್ರ್ಯಾಪ್‌ಪ್ರವಾಸಿ ತಾಣಗಳ ಪರಿಚೆಯಾತ್ಮಕ ಪುಸ್ತಕ  ಬಿ ಎಸ್ ದೇಸಾಯಿ ಅವರ ಕನಸುಗಳ ಕಡಲಾಚೆಜಗನ್ಮಾತೆ ಭಘಳಾಂಬದೇವಿ ನವರಾತ್ರಿ ಉತ್ಸವಕ್ಕೆ ಅಬ್ಬೆತುಮಕೂರು ಸಜ್ಜುಶಾಸಕ ಕಂದಕೂರ ಕ್ಷಮೆಗೆ ಟಿಪ್ಪರ್ ಮಾಲೀಕರ ಆಗ್ರಹಅಕ್ರಮ ಮದ್ಯ ಮಾರಾಟ: ಮಾರುವವರು ಸಿಕ್ಕಿಬಿದ್ದರು, ಪೂರೈಕೆದಾರರು ಪಾರಾದರೇ?ಸೈನಿಕರ ತ್ಯಾಗಕ್ಕೆ ಸಮಾಜದ ಗೌರವ ಅಗತ್ಯ.!