Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Districts Yadgir

ಶಾಸಕ ಕಂದಕೂರ ಕ್ಷಮೆಗೆ ಟಿಪ್ಪರ್ ಮಾಲೀಕರ ಆಗ್ರಹ

ಯಾದಗಿರಿ: ಅಕ್ರಮ ಮರಳು ಸಾಗಿಸುವ, ನಂ. ಪ್ಲೆಟ್ ಇಲ್ಲದೇ ಓಡಾಡುವ ಮತ್ತು ಓವರ್ ಲೋಡ್‌ದಿಂದ ಸಂಚರಿಸುವ ಟಿಪ್ಪರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿರುವ ಶಾಸಕ ಶರಣಗೌಡ ಕಂದಕೂರ ವಿರುದ್ಧ ಸಿಡಿದೆದ್ದಿರುವ ಜಿಲ್ಲಾ ಟಿಪ್ಪರ್ ವಾಹನಗಳ ಮಾಲಿಕರ ಸಂಘದ ಪದಾಧಿಕಾರಿಗಳು, ಈ ಕೂಡಲೇ ಶಾಸಕರು ಬಹಿರಂಗವಾಗಿ ಕ್ಷಮೆ ಕೇಳಬೇಕು, ಇಲ್ಲದಿದ್ದರೇ ಅ.12ರಂದು ನಗರದಲ್ಲಿ 200ಕ್ಕೂ ಅಧಿಕ ಟಿಪ್ಪರ್‌ಗಳ ಸಮೇತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರಘಪತಿ ಗೌಡಗೇರಿ, ಖಜಾಂಚಿ ಶಂಶಾಕ ನಾಲಡಗಿ, ಅಹಿಂದ ಸಂಘಟನೆ ರಾಜ್ಯ ಮುಖಂಡ ಹಣೆಮೇಗೌಡ ಬೀರನಕಲ್, ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಕಾರ್ಯದರ್ಶಿ ಉಮೇಶ ಮುದ್ದಾಳ ಅವರುಗಳು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಮೂರು ಅಂಗಗಳು ಕೆಲಸ ನಿರ್ವಹಿಸುತ್ತವೆ, ಆದರೇ ಶಾಸಕಾಂಗ ವ್ಯಾಪ್ತಿಯಲ್ಲಿರುವ ಕಂದಕೂರ ಅವರು ಜಿಲ್ಲಾಧಿಕಾರಿಗಳಿಗೆ ಟಿಪ್ಪರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಹೇಳಿದ್ದು ಖಂಡನೀಯ ಎಂದರು. ಅವರು ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೇ ಅವರ ಮೇಲೆ ಪ್ರಕರಣ ದಾಖಲಿಸಬೇಕು ಮತ್ತು ಅಕ್ರಮ ಮರಳು ದಂಧೆಯಲ್ಲಿ ತೊಡಗುವವರ ಮೇಲೆಯೂ ಕಾನೂನಿನ ಕ್ರಮ ಜರುಗಿಸಬೇಕೆಂದು ಅವರುಗಳು ಆಗ್ರಹಸಿದರು.

ಅಕ್ರಮ ಮರಳು ಸಾಗಣೆ ಅಥವಾ ಓವ‌ರ್ ಲೋಡ್ ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಆದರೆ ವಾಹನಗಳಿಗೆ ಬೆಂಕಿ ಹಚ್ಚುವ ಎಚ್ಚರಿಕೆ ನೀಡುವುದು ಸರಿಯಲ್ಲ. ಶಾಸಕರು ಜನರ ಮತ ಪಡೆದು ಆಯ್ಕೆಯಾಗಿರುವುದು ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಾಗಿ. ಅಧಿಕಾರಿಗಳ ಮೇಲೆ ಒತ್ತಡ ಹೇರುವ ಬದಲು, ಕಾನೂನುಬದ್ದವಾಗಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದರು. ಟಿಪ್ಪರ್ ಮಾಲಕರು ಸಾಲ ಮಾಡಿ ವಾಹನ ಖರೀದಿಸಿದ್ದಾರೆ. ಕೆಲಸದ ಕೊರತೆಯಿಂದ ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ವಾಹನಗಳಿಗೆ ಬೆಂಕಿ ಹಚ್ಚುವ ಹೇಳಿಕೆ ನೀಡಿದರೆ ಮಾಲಕರು ಮತ್ತು ಅವರ ಕುಟುಂಬಗಳು ಆತಂಕಕ್ಕೆ ಒಳಗಾಗುತ್ತವೆ. ಜನಪ್ರತಿನಿಧಿಗಳು ಮಾತನಾಡುವಾಗ ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಹೇಳಿದರು. 

ಅ.12ರಂದು ಬೆಳಗ್ಗೆ 10.30ಕ್ಕೆ ಗಂಜ್ ಏರಿಯಾದಿಂದ ಮೆರವಣಿಗೆ ಹೊರಟು ಸುಭಾಷ ಸರ್ಕಲ್‌ನಲ್ಲಿ ಜಮಾಗೊಂಡು ಪ್ರತಿಭಟನೆ ನಡೆಸಿ ಡಿಸಿ ಅವರಿಗೆ ಮನವಿ ಸಲ್ಲಿಸುವುದಾಗಿ ಅವರು ಹೇಳಿದರು. ಈ ವೇಳೆ ಸಂಘದ ಪದಾಧಿಕಾರಿಗಳು ಮತ್ತು ಮಾಲಿಕರಾದ ಪ್ರವೀಣಕುಮಾರ, ಮಲ್ಲಯ್ಯ ರವಿಕುಮಾರ, ಮಲ್ಲು ಮಾಳಿಕೇರಿ, ಭೀಮರಾಯ ಬಂಕಲಗಿ, ಮಲ್ಲಣ್ಣ, ಎಂ.ಡಿ.ಶೋಫ್. ಪರುಶುರಾಮ ನಾಯಕ, ಕಾಶಿನಾಥ ಸೇರಿದಂತೆಯೇ ಇತರರಿದ್ದರು.

ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಲಿ

ಅಕ್ರಮ ಸಾಗಣೆ ನಡೆಯುತ್ತಿದ್ದರೆ ಸಂಬಂಧಪಟ್ಟ ಪೊಲೀಸ್, ಸಾರಿಗೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲಿ. ನಿಯ ಮ ಉಲ್ಲಂಘಿಸಿದ ವಾಹನಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ದಂಡ ವಿಧಿಸಲಿ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ ಶಾಸಕರು ಬೆದರಿಕೆಯ ಭಾಷೆ ಬಳಸುವುದು ಸರಿಯಲ್ಲ, ಹೀಗೆ ಮುಂದುವರೆದರೇ ನಾವು ಸುಮ್ಮನೇ ಕೂಡುವುದಿಲ್ಲ ಎಂದು ಅಹಿಂದ ಜಿಲ್ಲಾ ಮುಖಂಡ ಹಣಮೇಗೌಡ ಬೀರನಕಲ್ ಎಚ್ಚರಿಸಿದ್ದಾರೆ.

ವಾದ-ಪ್ರತಿವಾದ

ಅಕ್ರಮ ಸಾಗಣೆ ಹಲವು ವರ್ಷಗಳಿಂದ ನಡೆಯುತ್ತಿದೆ ಎಂಬ ಆರೋಪಗಳಿರುವಾಗ ಟಿಪ್ಪರ್ ಮಾಲಕರ ಸಂಘದ ಜವಾಬ್ದಾರಿ ಏನು? ಅಕ್ರಮ ಸಾಗಣೆಯಲ್ಲಿ ತೊಡಗಿರುವ ವಾಹನಗಳ ಮಾಹಿತಿ ಸಂಘದ ಬಳಿ ಇದೆಯೇ? ನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಸಂಘ ಏಕೆ ಕ್ರಮಕ್ಕೆ ಮುಂದಾಗಿಲ್ಲ? ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಣಮೇಗೌಡ, ಶಶಾಂಕ, ಅಕ್ರಮ ಸಾಗಣೆಯನ್ನು ಸಂಘ ಸಮರ್ಥಿಸುವುದಿಲ್ಲ. ಅಕ್ರಮದಲ್ಲಿ ತೊಡಗಿರುವ ವಾಹನಗಳ ಮಾಹಿತಿ ದೊರೆತರ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲು ಸಿದ್ಧರಿದ್ದೇವೆ. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ ಎಂದರು. ಕೆಲವು ಟಿಪ್ಟರ್‌ಗಳಲ್ಲಿ ನಂಬ‌ರ್ ಪ್ಲೇಟ್ ಇಲ್ಲದಿರುವುದಕ್ಕೆ ಹಣಕಾಸು ಸಂಸ್ಥೆಗಳ ಸಾಲದ ಕಂತುಗಳ ಹಿನ್ನೆಲೆ ಕಾರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟರು. ಈ ವಿಚಾರವಾಗಿ ಪತ್ರಕರ್ತರು ಮತ್ತಷ್ಟು ಪ್ರಶ್ನೆಗಳನ್ನು ಮುಂದಿಟ್ಟಾಗ ಸಂಘದ ಪ್ರತಿನಿಧಿಗಳು ಮತ್ತು ಪತ್ರಕರ್ತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಅಕ್ರಮ ಸಾಗಣೆ ಶಡೆಯುವ ಜವಾಬ್ದಾರಿ ಅಧಿಕಾರಿಗಳು, ವಾಹನ ಮಾಲಕರು ಹಾಗೂ ಸಂಘ ಸೇರಿದಂತೆ ಎಲ್ಲರಿಗೂ ಇದೆ ಎಂದು ಪತ್ರಕರ್ತರು ಪ್ರತಿಪಾದಿಸಿದರು. ಕಾನೂನು ಉಲ್ಲಂಘನೆ ಕಂಡು ಬಂದರ ಸಾಕ್ಷಾಧಾರಗಳೊಂದಿಗೆ ದೂರು ನೀಡಬೇಕು. ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

Author
Kudhan Sab
ನಾನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಸತ್ಯಕಾಮ ಪ್ರಾದೇಶಿಕ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಜನಪರ ವಿಚಾರಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST