Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Yadgir

ಜಗದಾಂಬೆ ಜಗತ್ತಿನ ರಕ್ಷಕಿ: ಡಾ. ಗಂಗಾಧರ ಶ್ರೀ

44 ಬುಡಕಟ್ಟು ಮಕ್ಕಳಿಗೆ ಸೈಕಲ್ ವಿತರಣೆ

ಯಾದಗಿರಿ: ಜಗತ್ತಿನ ಸಕಲ ಜೀವರಾಶಿಗಳನ್ನು ರಕ್ಷಿಸುವ ಜಗದಂಬೆಯನ್ನು ಪ್ರತಿಯೊಬ್ಬರೂ ಭಕ್ತಿ ಮತ್ತು ಶ್ರದ್ಧೆಯಿಂದ ಆರಾಧಿಸಬೇಕು ಎಂದು ಶ್ರೀ ವಿಶ್ವಾರಾಧ್ಯರ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಅಬ್ಬೆತುಮಕೂರಿನ ಶ್ರೀಮಠದಲ್ಲಿ ಭಾನುವಾರ ಶೀಗೆ ಹುಣ್ಣಿಮೆ ನಿಮಿತ್ತ ಹಮ್ಮಿಕೊಂಡಿದ್ದ ಅಂಬಾ ಭವಾನಿ ಪೂಜೆಯ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಆದಿಶಕ್ತಿ, ಪರಾಶಕ್ತಿಯ ಸ್ವರೂಪಿಣಿಯಾದ ದೇವಿ ಜಗತ್ತಿನ ಜನರನ್ನು ಕಾಪಾಡುವ ಅದ್ಭುತ ಶಕ್ತಿಯನ್ನು ಹೊಂದಿದ್ದಾಳೆ. ಮನುಷ್ಯರು ಭಕ್ತಿ ಭಾವದಿಂದ ಶಕ್ತಿ ದೇವತೆಯನ್ನು ಆರಾಧಿಸಿದಾಗ ದೇವಿಯ ಕೃಪೆಗೆ ಪಾತ್ರರಾಗಬಹುದು. ಭಕ್ತಿಯ ಆಚರಣೆಗಳನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಪಾಲಿಸಬೇಕು. ಯಾವುದೇ ಫಲಾಪೇಕ್ಷೆಯಿಲ್ಲದ ನಿಷ್ಕಾಮ ಭಕ್ತಿಗೆ ದೇವಿ ಒಲಿಯುತ್ತಾಳೆ ಎಂದು ತಿಳಿಸಿದರು.

ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಕಾರ್ಯವನ್ನು ಮಹಾಮಾತೆ ನಿರಂತರವಾಗಿ ಮಾಡುತ್ತಾ ಬಂದಿದ್ದಾಳೆ. ಪುರಾಣಗಳಲ್ಲಿ ಉಲ್ಲೇಖವಾಗಿರುವ ಮಧು-ಕೈಟಭ, ಚಂಡ-ಮುಂಡ, ರಕ್ತಬೀಜಾಸುರ ಹಾಗೂ ಶುಂಭ-ನಿಶುಂಭ ಸೇರಿದಂತೆ ಅನೇಕ ರಾಕ್ಷಸರನ್ನು ಸಂಹರಿಸಿ ದೇವತೆಗಳು ಹಾಗೂ ಲೋಕದ ಜನರನ್ನು ರಕ್ಷಿಸಿದ ಮಹಾಶಕ್ತಿ ದೇವಿ ಎಂದು ಹೇಳಿದರು.

ಶ್ರೀ ವಿಶ್ವಾರಾಧ್ಯರು ದೇವಿಯ ಪರಮ ಆರಾಧಕರಾಗಿದ್ದರು. ಕಠಿಣ ತಪಸ್ಸಿನ ಬಲದಿಂದ ದೇವಿಯನ್ನು ಒಲಿಸಿಕೊಂಡು ಅಣಿಮಾದಿ ಅಷ್ಟಸಿದ್ಧಿಗಳನ್ನು ಸಂಪಾದಿಸಿದ ಸಿದ್ಧಿಪುರುಷರಾಗಿದ್ದರು. ಅಂತಹ ಮಹಾತ್ಮರು ನೆಲೆಸಿದ್ದ ಈ ಪುಣ್ಯಕ್ಷೇತ್ರದಲ್ಲಿ ದೇವಿಯು ಸದಾ ಜಾಗೃತಳಾಗಿದ್ದಾಳೆ ಎಂದು ನುಡಿದರು.

ಬೆಳಿಗ್ಗೆ ಶ್ರೀ ವಿಶ್ವಾರಾಧ್ಯರ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಶ್ರೀಮಠದಲ್ಲಿರುವ ಭವಾನಿ ಮೂರ್ತಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಜರುಗಿತು. ಬಸವರಾಜ ಶಾಸ್ತ್ರಿ ಎಲೆಕೂಡ್ಗಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಡಾ. ಸುಭಾಷ್ ಚಂದ್ರ ಕೌಲಗಿ, ವೆಂಕಟರಡ್ಡಿ ಗೌಡ ಸೇರಿದಂತೆ ಅಬ್ಬೆತುಮಕೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಯಾದಗಿರಿ: ಪಿಡಬ್ಲ್ಯುಸಿ ಫೌಂಡೇಶನ್ ವತಿಯಿಂದ ಭಾನುವಾರ ತಾಲೂಕಿನ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಸಿದ್ಧ ಸಂಸ್ಥಾನ ಮಠದಲ್ಲಿ ಬುಡಕಟ್ಟು ಹಾಗೂ ಹಿಂದುಳಿದ ಸಮುದಾಯಗಳ 44 ಮಕ್ಕಳಿಗೆ ಸೈಕಲ್‌ಗಳನ್ನು ವಿತರಿಸಲಾಯಿತು.

ಸೈಕಲ್ ವಿತರಿಸಿ ಮಾತನಾಡಿದ ಮಠದ ಪೀಠಾಧಿಪತಿ ಡಾ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು, ಬುಡಕಟ್ಟು ಹಾಗೂ ಹಿಂದುಳಿದ ಮಕ್ಕಳಿಗೆ ನೆರವಾಗುವ ಮೂಲಕ ಪುಣ್ಯದ ಕಾರ್ಯ ಕೈಗೊಂಡಿರುವ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು.

ಸೈಕಲ್‌ಗಳನ್ನು ಪಡೆದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಭವಿಷ್ಯದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮಾಶಂಕರ ಮೇಟಿ, ಗಂಗಾಧರ ನಾಯಕ ತಿಂಥಣಿ, ಪ್ರಾಂತ ಶಿಕ್ಷಣ ಪ್ರಮುಖ ರಾಮಚಂದ್ರ, ರಾಘವೇಂದ್ರ ಯಕ್ಚಿಂತಿ, ಪರಮಣ್ಣ ವಡಕೇರ, ಕಾಶಪ್ಪ, ರಾಜಾ ಪಿಡ್ಡನಾಯಕ್, ಶಿವರಾಜ್ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author
Kudhan Sab
ನಾನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಸತ್ಯಕಾಮ ಪ್ರಾದೇಶಿಕ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಜನಪರ ವಿಚಾರಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಗದಾಂಬೆ ಜಗತ್ತಿನ ರಕ್ಷಕಿ: ಡಾ. ಗಂಗಾಧರ ಶ್ರೀಬೀದರ್ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನದ ಸರ್ವಾಧಕ್ಷ್ಯರಾಗಿ ಮಾರುತಿ ಬೌದ್ಧೆ ಆಯ್ಕೆಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಬೀದರ್‌ನಲ್ಲಿ ತಿರಂಗಾ ಮೆರವಣಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ರಾಜೀನಾಮೆಗೆ ಒತ್ತಾಯಸೋಲಾಪುರ ರೈಲ್ವೆ ವಿಭಾಗೀಯ ಸಲಹಾ ಸಮಿತಿಗೆ ಶಾಂತರೆಡ್ಡಿ ಪೆಠಶಿರೂರ ನೇಮಕಸ್ಪಾ ಮೇಲೆ ದಾಳಿ: ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ :ಇಬ್ಬರ ವಿರುದ್ಧ ಪ್ರಕರಣ ದಾಖಲುಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ಶಾಸಕ ಪ್ರಭು ಚವ್ಹಾಣ ಗರಂ; ಸುಧಾರಣೆಗೆ ಖಡಕ್ ಸೂಚನೆವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮಹತ್ತರ ಕೊಡುಗೆ; ಮೂವರು ಶಿಕ್ಷಕರು ಹಾಗೂ ಸಾಹಿತಿಯಿಂದ ದೇಹದಾನವಿಜಯದಶಮಿ ಆಚರಣೆಗೆ ಅ.20ರ ಮುಹೂರ್ತ ಸೂಕ್ತಡಾ. ನಾಗಲಕ್ಷ್ಮಿ ಚೌಧರಿವರಿಗೆ ರಾಜಕೀಯ ರಂಗದಲ್ಲಿ ಉನ್ನತ ಭವಿಷ್ಯ : ಮುತ್ತು ಟಕ್ಕಳಕಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣ: ಆರು ಆರೋಪಿಗಳ ಜಾಮೀನು ಅರ್ಜಿ ವಜಾ