Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Districts Bijapur

ಬಸವಣ್ಣನವರ ವಿರುದ್ಧ ಅವಹೇಳನಕಾರಿ ಲೇಖನ ಖಂಡಿಸಿ ಮುದ್ದೇಬಿಹಾಳದಲ್ಲಿ ಪ್ರತಿಭಟನೆ

ಮುದ್ದೇಬಿಹಾಳ: ಬಸವ ಮಂಟಪ ಪುಸ್ತಕದಲ್ಲಿ ವಿಶ್ವಗುರು ಬಸವಣ್ಣನವರನ್ನು ಹಿಂಸಾಚಾರ, ಕೊಲೆಗಡುಕರು ಎಂಬಂತೆ ಪ್ರಸ್ತಾಪಿಸಿರುವುದು ಖಂಡನೀಯ. ದೇಶದಲ್ಲಿ ಸಾಮಾಜಿಕ ಬದಲಾವಣೆಯ ಕಿಚ್ಚು ಹೊತ್ತಿಸಿ, ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ವಿಶ್ವಕ್ಕೆ ಗುರು ಎಂದು ಕರೆಸಿಕೊಂಡವರು ಎಂದು ಮಾಜಿ ಎಪಿಎಂಸಿ ಉಪಾಧ್ಯಕ್ಷ ವಾಯ್. ಎಚ್. ವಿಜಯಕರ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಕಸಪ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಸವಣ್ಣನವರ ವಿರುದ್ಧ ಅವಹೇಳನಕಾರಿ ಲೇಖನ ಬರೆದ ರವಿ ಹಂಜ್ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಲಿಂಗಾಯತ ಸಮಾಜದ ಕಲಬುರಗಿ ಅವರ ಹತ್ಯೆಯಂತಹ ಘಟನೆಗಳು ನಡೆದಾಗಲೂ ವೀರಶೈವ ಪರಂಪರೆ ಹಾಗೂ ಬಸವಾದಿ ಶರಣರು ಶಾಂತಿ ಮತ್ತು ಸಹನೆಗೆ ಆದ್ಯತೆ ನೀಡುತ್ತ ಬಂದಿದ್ದಾರೆ. ಆದರೆ ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಬರೆದಿರುವ ಹಂಜ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಸಾಹಿತಿ ರಹಿಮಾನಸಾಬ್ ಬಿದರಕುಂದಿ ಮಾತನಾಡಿ, ಜಗಜ್ಯೋತಿ ಬಸವಣ್ಣನವರ ಕುರಿತು ಹಂಜ್ ಎಂಬ ವ್ಯಕ್ತಿ ಪಿತೂರಿಯ ರೀತಿಯಲ್ಲಿ ಅವಹೇಳನಕಾರಿ ಲೇಖನ ಬರೆದಿದ್ದಾರೆ. ಬಸವಣ್ಣನವರ ವಿರುದ್ಧ ಇಂತಹ ಅಪಪ್ರಚಾರ 12ನೇ ಶತಮಾನದಿಂದಲೂ ನಡೆಯುತ್ತ ಬಂದಿದೆ. ಸಮಾಜದಲ್ಲಿನ ಮೇಲು-ಕೀಳು, ಜಾತಿ ಭೇದಗಳನ್ನು ತೊಲಗಿಸಿ ಸಮಾನತೆಯ ಸಮಾಜ ನಿರ್ಮಿಸುವ ಅಗತ್ಯವಿರುವ ಈ ಸಂದರ್ಭದಲ್ಲಿ ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿರುವುದು ನೋವುಂಟು ಮಾಡಿದೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಸಮಾಜ ಸೇವಕಿ ಕಾಶಿಬಾಯಿ ರಾಂಪುರ, ಸಾಹಿತಿ ಬಿ. ಎಂ. ಹಿರೇಮಠ ಹಾಗೂ ಕಾಮರಾಜ ಬಿರಾದಾರ ಮಾತನಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Author
ಶ್ರೀಶೈಲ್ ಪೂಜಾರಿ
ನಾನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಏಳು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಸತ್ಯಕಾಮ ಪ್ರಾದೇಶಿಕ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಜನಪರ ವಿಚಾರಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿಮ್ಮಲಗಿ-ಮುಳವಾಡ ಏತ ನೀರಾವರಿ, ಆಲಮಟ್ಟಿ ಎಡದಂಡೆ ಕಾಲುವೆಗಳಿಗೆ ಹರಿದು ಬರುತ್ತಿರುವ ನೀರು.!ಬಸವಣ್ಣನವರ ವಿರುದ್ಧ ಅವಹೇಳನಕಾರಿ ಲೇಖನ ಖಂಡಿಸಿ ಮುದ್ದೇಬಿಹಾಳದಲ್ಲಿ ಪ್ರತಿಭಟನೆಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಭೇಟಿ ಗುಟ್ಟಾಗಿರಬೇಕೇ? ಪತ್ರಕರ್ತರನ್ನು ಹೊರಗಿಟ್ಟಿದ್ದೇಕೆ?ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಾರ್ವರ್ಡ್ ಪಿಯು ಕಾಲೇಜಿಗೆ ದ್ವಿತೀಯ ಸ್ಥಾನಗಳ ಗರಿಬೋರಬಂಡದಲ್ಲಿ ಶ್ರೀ ಲಕ್ಷ್ಮೀ ತಿಮ್ಮಪ್ಪ ಜಾತ್ರಾ ಮಹೋತ್ಸವಕೆಕೆಆರ್‌ಡಿಬಿ ಅಧ್ಯಕ್ಷರಾಗಿ ಬಸನಗೌಡ ದದ್ದಲ್ ಆಯ್ಕೆಕನ್ನೇರಿ ಸ್ವಾಮೀಜಿ ಗಡಿಪಾರಿಗೆ ಲಿಂಗಾಯತ ಮಹಾಸಭಾ ಆಗ್ರಹಸುರಪುರ: ಉದ್ಯೋಗ ಖಾತ್ರಿ ಹಣ ದುರುಪಯೋಗ: ಇಬ್ಬರಿಗೆ ಜೈಲು ಶಿಕ್ಷೆಚಳಿಗಾಲದ ಅಧಿವೇಶನದಲ್ಲಿ ಸರ್ಕಾರಿ ಆತಿಥ್ಯ ತಿರಸ್ಕರಿಸಲು ಶಾಸಕ ಶರಣಗೌಡ ಕಂದಕೂರ ನಿರ್ಧಾರಔರಾದ್ ಬಂದ್ ಸಂಪೂರ್ಣ ಯಶಸ್ವಿ; ವಾರದೊಳಗೆ ನೀರಿನ ಸಮಸ್ಯೆ ಪರಿಹಾರದ ಭರವಸೆ