Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News Districts | Districts Yadgir

ಬೋರಬಂಡದಲ್ಲಿ ಶ್ರೀ ಲಕ್ಷ್ಮೀ ತಿಮ್ಮಪ್ಪ ಜಾತ್ರಾ ಮಹೋತ್ಸವ

ನ. 23 ಮತ್ತು 24ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, ಕಲ್ಯಾಣೋತ್ಸವ ಹಾಗೂ ರಥೋತ್ಸವ

ಗುರುಮಠಕಲ್: ತಾಲೂಕಿನ ಬೋಡಬಂಡ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರ ಜಾತ್ರಾ ಮಹೋತ್ಸವ ಹಾಗೂ ಕಲ್ಯಾಣೋತ್ಸವವು ನವೆಂಬರ್ 23 ಮತ್ತು 24ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ ಎಂದು ನರೇಂದ್ರ ರಾಥೋಡ್ ತಿಳಿಸಿದರು.

ನ. 23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು: ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಸೇವೆ, 6.30ಕ್ಕೆ ಪಂಚಾಮೃತ ಅಭಿಷೇಕ ಹಾಗೂ ದೇವರಿಗೆ ವಿಶೇಷ ಅಲಂಕಾರ, ಬೆಳಿಗ್ಗೆ 9ಕ್ಕೆ ಪುರುಷಸೂಕ್ತ ಹೋಮ ಮತ್ತು ಶ್ರೀಸೂಕ್ತ ಹೋಮ ನೆರವೇರಲಿದೆ. ಸಂಜೆ 6ಕ್ಕೆ ಕಾರ್ತಿಕ ದೀಪೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಇದೇ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಳ್ಳಲಿದೆ. ಸಂಜೆ 6.15ಕ್ಕೆ ಮಹಾಮಂಗಳಾರತಿ, ರಾತ್ರಿ 8ಕ್ಕೆ ಸಾಬಣ್ಣ ಕಿಂಡಿಚೋಳ್ ಅವರ ಮನೆಯಿಂದ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ನಂತರ ಶ್ರೀರಾಮ ಅಡುಗುಲ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಪೂಜ್ಯ ಮ.ನಿ.ಪ್ರ. ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಶರಣಗೌಡ ಕಂದಕೂರು ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ.

ನ. 24ರಂದು ಗೌರಿ ಹುಣ್ಣಿಮೆ ಹಾಗೂ ರಥೋತ್ಸವ: ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಸೇವೆ, 6.30ಕ್ಕೆ ಪಂಚಾಮೃತ ಅಭಿಷೇಕ, 8ಕ್ಕೆ ರಥಾಂಗ ಹೋಮ, 9.30ಕ್ಕೆ ಪುಷ್ಕರಣಿಯಲ್ಲಿ ಅಭ್ಯಂಗ ಸ್ನಾನ ಹಾಗೂ ಕಲ್ಯಾಣೋತ್ಸವ ನೆರವೇರಲಿದೆ. ಬೆಳಿಗ್ಗೆ 11.35ಕ್ಕೆ ರಥೋತ್ಸವ, ಉಂಜರಿ ಸೇವೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಾಜಿ ಲೋಕಸಭಾ ಸದಸ್ಯ ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಸುರಪುರದ ಮಾಜಿ ಶಾಸಕ ನರಸಿಂಹ ನಾಯಕ್ (ರಾಜುಗೌಡ), ಗುರುಮಠಕಲ್ ಕಾಂಗ್ರೆಸ್ ಮುಖಂಡ ಸಾಯಿಬಣ್ಣ ಬೋಡಬಂಡ, ರಾಜ್ಯ ಕಾರ್ಯದರ್ಶಿ ಕುಮಾರಿ ಲಲಿತಾ ಅನಪುರ್, ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ನರಸಿಮುಲು ನೀರೇಟಿ, ಯಾದಗಿರಿ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರ ಮಾಗನೂರು, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶ್ ರೆಡ್ಡಿ ಮುದ್ನಾಳ, ಸಿ.ಪಿ.ಐ. ಗೋಪಾಲ್ ರಾಥೋಡ್ ಸೇರಿದಂತೆ ಹಲವು ಗಣ್ಯರು ಹಾಗೂ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12 ಗಂಟೆಯಿಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಕೈಕುಸ್ತಿ ಕಾರ್ಯಕ್ರಮ ನಡೆಯಲಿದೆ.

ವೇದಮೂರ್ತಿ ಪವನಾಚಾರ್ಯ ಮೋಟನಹಳ್ಳಿ ಹಾಗೂ ಅರ್ಚಕ ಮೋಹನಾಚಾರ್ಯ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಮಣಿಕಂಠ ರಾಥೋಡ್ ಹಾಗೂ ಸಮಸ್ತ ಬೋಡಬಂಡ ಗ್ರಾಮಸ್ಥರು ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

Author
Vijaykumar Hiremath
Journalist
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಾರ್ವರ್ಡ್ ಪಿಯು ಕಾಲೇಜಿಗೆ ದ್ವಿತೀಯ ಸ್ಥಾನಗಳ ಗರಿಬೋರಬಂಡದಲ್ಲಿ ಶ್ರೀ ಲಕ್ಷ್ಮೀ ತಿಮ್ಮಪ್ಪ ಜಾತ್ರಾ ಮಹೋತ್ಸವಕೆಕೆಆರ್‌ಡಿಬಿ ಅಧ್ಯಕ್ಷರಾಗಿ ಬಸನಗೌಡ ದದ್ದಲ್ ಆಯ್ಕೆಕನ್ನೇರಿ ಸ್ವಾಮೀಜಿ ಗಡಿಪಾರಿಗೆ ಲಿಂಗಾಯತ ಮಹಾಸಭಾ ಆಗ್ರಹಸುರಪುರ: ಉದ್ಯೋಗ ಖಾತ್ರಿ ಹಣ ದುರುಪಯೋಗ: ಇಬ್ಬರಿಗೆ ಜೈಲು ಶಿಕ್ಷೆಚಳಿಗಾಲದ ಅಧಿವೇಶನದಲ್ಲಿ ಸರ್ಕಾರಿ ಆತಿಥ್ಯ ತಿರಸ್ಕರಿಸಲು ಶಾಸಕ ಶರಣಗೌಡ ಕಂದಕೂರ ನಿರ್ಧಾರಔರಾದ್ ಬಂದ್ ಸಂಪೂರ್ಣ ಯಶಸ್ವಿ; ವಾರದೊಳಗೆ ನೀರಿನ ಸಮಸ್ಯೆ ಪರಿಹಾರದ ಭರವಸೆಬೆಳಗಾವಿ ಮಾದರಿ ದರ ನೀಡದಿದ್ದರೆ ಯರಗಲ್ಲ್ ಕಾರ್ಖಾನೆ ಬಂದ್'ಗೆ ರೈತರ ಸಂಘ ನಿರ್ಧಾರ; ಶಾಂತಗೌಡ ಪಾಟೀಲ್ಕಳ್ಳತನ ಪ್ರಕರಣ ರಾಜಿ ಮಾಡಿಸಲು 50 ಸಾವಿರ ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಸಿಬ್ಬಂದಿರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡನೆ: ನ.12 ರಂದು ಜೆಡಿಎಸ್ ನಿಂದ ಬೃಹತ್ ಬೈಕ್ ರ್ಯಾಲಿ