ಕಲಬುರ್ಗಿ, ನ.18- ಸಂವಿಧಾನದಲ್ಲಿ ಮನುಸ್ಮೃತಿ ಅಡಗಿದೆ ಎಂಬ ಸಂವಿಧಾನ ಬಾಹಿರ ಹೇಳಿಕೆ ನೀಡಿರುವ ಕನ್ಹೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ ಗಡಿಪಾರು ಮಾಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಗಂಗಾವತಿಯಲ್ಲಿ ಕನೇರಿ ಕಾಡಸಿದ್ದೇಶ್ವರ ಸ್ವಾಮಿಜಿ ಸಂವಿಧಾನದಲ್ಲಿ ಮನುಸ್ಮೃತಿ ಅಡಕವಾಗಿದೆ ಎಂದು ಹೇಳಿಕೆ ನೀಡಿರುವುದು ಉಗ್ರವಾಗಿ ಖಂಡಿಸುತ್ತೇವೆ ಎಂದರು.
ವಿವಾದಾತ್ಮಕ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡಿಸುವದರೊಂದಿಗೆ ಸಾರ್ವಜನಿಕ ಮನಸ್ಸಿಗೆ ಘಾಸಿಗೊಳಿಸುತ್ತಿದ್ದಾರೆ. ಸಂವಿಧಾನದ ಬಗ್ಗೆ ಅದ್ಯಯನ ಮತ್ತು ಅರಿವು ಇಲ್ಲದೆ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿರುವುದು ಕುಚೋದ್ಯಮದ ಕ್ರಮವಾಗಿದೆ. ಭಾರತದ ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಗೆ ಸಮಾನ ಅವಕಾಶ ಮತ್ತು ತಮ್ಮ ಧರ್ಮದ ಆಚರಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮನುಸ್ಮೃತಿ ವರ್ಗಾಶ್ರಯವನ್ನು ಬೋಧಿಸುತ್ತದೆ. ಸಂವಿಧಾದನಲ್ಲಿ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿರುವಾಗ ಯಾವ ಧೋರಣೆಯಿಂದ ಕಣ್ಣೀರಿ ಸ್ವಾಮಿಜಿ ಕುತಂತ್ರದ ಹೇಳಿಕೆ ನೀಡಿ ಸಂವಿಧಾನಕ್ಕೆ ಅವಮಾನಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕನ್ಹೇರಿ ಸ್ವಾಮೀಜಿಯವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಂಡು ಸಮಾಜದಲ್ಲಿ ಕ್ಷೆÆÃಬೆ ಉಂಟು ಮಾಡುತ್ತಿರವುದರಿಂದ ರಾಷ್ಟ್ರದಿಂದ ಆಚೆಗೆ ಗಡಿಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಅಶೋಕ್ ಘೂಳಿ, ಹಣಮಂತರಾವ್ ಪಾಟೀಲ್, ಬಸವರಾಜ್ ಕೋಣಿನ್ ಮುಂತಾದವರು ಉಪಸ್ಥಿತರಿದ್ದರು.