
ಬೀದರ :— ಬೀದರ ಪೊಲೀಸರ ಸಾಹಸಕ್ಕೆ ಮತ್ತೊಂದು ವಿಜಯದ ಗರಿ ಸೇರಿದೆ. ಅಪರಾಧ ಜಗತ್ತಿನ ಕಾಳ ಸಂತೆಯಲ್ಲಿ ನಿರ್ಭೀತಿಯಿಂದ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಪಡೆದ ಬೀದರ ಜಿಲ್ಲಾ ರೌಡಿ ನಿಗ್ರಹದಳದ ಪೊಲೀಸರು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಖದೀಮರನ್ನು ಬಂಧಿಸಿ ಗಾಂಜ ಜಪ್ತಿ ಮಾಡಿ ಪ್ರಕರಣ ಒಂದು ದಾಖಲಿಸಿಕೊಂಡ ಘಟನೆಯೊಂದು ವರದಿಯಾಗಿದೆ .
ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಚೆನ್ನಬಸಣ್ಣ ಎಸ್ ಎಲ್, ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್ ದಿವ್ಯ ನಿರ್ದೇಶನದಲ್ಲಿ ಖಚಿತ ಮಾಹಿತಿ ಪಡೆದ ಬೀದರ್ ನಗರದ ರೌಡಿ ನಿಗ್ರಹದಳದ ಅಧಿಕಾರಿ ಶ್ರೀ ಹಣಮರೆಡ್ಡೆಪ್ಪ ಪಿ ಐ ಗಾಂಧಿ ಪೊಲೀಸ್ ಠಾಣೆ ತಮ್ಮ ತಂಡದವರೊಂದಿಗೆ ಗಾಂಧಿ ಗಂಜ್ ಠಾಣೆ ವ್ಯಾಪ್ತಿಯಲ್ಲಿರುವ ಮಕ್ದುಮ್ ಜಿ ಬಡಾವಣೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಿಂಚಿನ ದಾಳಿ ನಡೆಸಿ 23. 498 ಕಿಲೋ ಗಾಂಜಾ ಹಾಗೂ 20,000 ರೂ .ನಗದು ಮತ್ತು ಒಂದು ಮೊಬೈಲ್ ಹೀಗೆ 23 ಲಕ್ಷ 70 ಸಾವಿರ 300 ರೂ. ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ತೀವ್ರ ಗತಿಯಲ್ಲಿ ನಡೆಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶ್ರಮಿಸಿದ ರೌಡಿನಿಗ್ರಹದಳದ ಟೀಮ್ಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲೆಯಲ್ಲಿ ಅಹಿತಕರ ಚಟುವಟಿಕೆಗೆ ಕಡಿವಾಣ ಹಾಕಲು ಪೊಲೀಸರು ಹೆಚ್ಚಿನ ನಿಗ ವಹಿಸಿದ್ದಾರೆ ಎಂದು ಎಸ್ ಪಿ ಶ್ರೀ ಚನ್ನಬಸಣ್ಣ ರವರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
Blog
-
ಪೊಲೀಸರ ಮಿಂಚಿನ ದಾಳಿ ಲಕ್ಷಾಂತರ ರೂ. ಗಾಂಜಾ ಜಪ್ತಿ
Post Views: 3 -
ಭಾರತದಲ್ಲಿ ಹಸಿರು ಕ್ರಾಂತಿ
ಭಾರತದಲ್ಲಿ ಹಸಿರು ಕ್ರಾಂತಿ
(
ಆಕಾಶ ಮ. ಶೇರಖಾನೆ)ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಸುಸ್ಥಿರತೆಗೆ ದೇಶವು ಆದ್ಯತೆ ನೀಡುವುದನ್ನು ಮುಂದುವರಿಸುವುದರಿಂದ ಭಾರತದಲ್ಲಿ ಹಸಿರು ಶಕ್ತಿಯ ಭವಿಷ್ಯವು ಆಶಾದಾಯಕವಾಗಿದೆ. ಭಾರತದಲ್ಲಿ ಹಸಿರು ಶಕ್ತಿಯ ಭವಿಷ್ಯವನ್ನು ರೂಪಿಸುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
* ಸರ್ಕಾರದ ಉಪಕ್ರಮಗಳು: ಭಾರತ ಸರ್ಕಾರವು ವಿವಿಧ ನೀತಿಗಳು ಮತ್ತು ಉಪಕ್ರಮಗಳ ಮೂಲಕ ನವೀಕರಿಸಬಹುದಾದ ಶಕ್ತಿಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ದೇಶವು 2030 ರ ವೇಳೆಗೆ 280 GW ಸೌರ ವಿದ್ಯುತ್ ಸೇರಿದಂತೆ 450 ಗಿಗಾವ್ಯಾಟ್ (GW) ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ನವೀಕರಿಸಬಹುದಾದ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರವು ಪ್ರೋತ್ಸಾಹ, ಸಬ್ಸಿಡಿಗಳು ಮತ್ತು ತೆರಿಗೆ ಪ್ರಯೋಜನಗಳನ್ನು ಪರಿಚಯಿಸಿದೆ.
* ಸೌರಶಕ್ತಿ: ಭಾರತದ ಹಸಿರು ಶಕ್ತಿ ಭವಿಷ್ಯದಲ್ಲಿ ಸೌರ ಶಕ್ತಿಯು ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ. ದೇಶವು ವರ್ಷವಿಡೀ ಹೇರಳವಾದ ಸೂರ್ಯನ ಬೆಳಕನ್ನು ಹೊಂದಿದ್ದು, ಸೌರ ವಿದ್ಯುತ್ ಉತ್ಪಾದನೆಗೆ ಇದು ಸೂಕ್ತ ಸ್ಥಳವಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಸೌರ ಗುರಿಗಳು ಮತ್ತು ಅನುಕೂಲಕರ ನೀತಿಗಳು ಸೌರ ಯೋಜನೆಗಳಲ್ಲಿ ದೇಶೀಯ ಮತ್ತು ವಿದೇಶಿ ಹೂಡಿಕೆಗಳನ್ನು ಆಕರ್ಷಿಸಿವೆ.
* ಪವನ ಶಕ್ತಿ: ಭಾರತದಲ್ಲಿ ಹಲವು ವರ್ಷಗಳಿಂದ ಪವನ ಶಕ್ತಿಯು ನವೀಕರಿಸಬಹುದಾದ ಶಕ್ತಿಯ ಪ್ರಬಲ ಮೂಲವಾಗಿದೆ. ದೇಶವು ವಿಶಾಲವಾದ ಕರಾವಳಿಯನ್ನು ಹೊಂದಿದೆ ಮತ್ತು ಗಾಳಿ ಸಾಕಣೆ ಕೇಂದ್ರಗಳಿಗೆ ಸೂಕ್ತವಾದ ಸ್ಥಳಗಳನ್ನು ಹೊಂದಿದೆ. ಭಾರತವು 2022 ರ ವೇಳೆಗೆ 60 GW ಪವನ ಶಕ್ತಿ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ನಿರಂತರ ತಾಂತ್ರಿಕ ಪ್ರಗತಿಗಳು ಮತ್ತು ಕಡಲಾಚೆಯ ವಿಂಡ್ ಫಾರ್ಮ್‌ಗಳಲ್ಲಿನ ಹೂಡಿಕೆಗಳು ಪವನ ಶಕ್ತಿ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
* ಜಲವಿದ್ಯುತ್ ಶಕ್ತಿ: ಭಾರತವು ಗಣನೀಯ ಜಲವಿದ್ಯುತ್ ಸಾಮರ್ಥ್ಯವನ್ನು ಹೊಂದಿದೆ, ವಿಶೇಷವಾಗಿ ಉತ್ತರ ಮತ್ತು ಈಶಾನ್ಯ ಪ್ರದೇಶಗಳಲ್ಲಿ. ಪರಿಸರ ಸುಸ್ಥಿರತೆಯನ್ನು ಖಾತ್ರಿಪಡಿಸುವ ಸಂದರ್ಭದಲ್ಲಿ ಸರ್ಕಾರವು ಸಣ್ಣ ಮತ್ತು ಮಧ್ಯಮ ಗಾತ್ರದ ಜಲವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದೆ. ಪಂಪ್ಡ್ ಸ್ಟೋರೇಜ್ ಯೋಜನೆಗಳ ಮೂಲಕ ಇತರ ನವೀಕರಿಸಬಹುದಾದ ಮೂಲಗಳೊಂದಿಗೆ ಜಲವಿದ್ಯುತ್ ಶಕ್ತಿಯ ಏಕೀಕರಣವನ್ನು ಸಹ ಅನ್ವೇಷಿಸಲಾಗುತ್ತಿದೆ.
* ಶಕ್ತಿ ಶೇಖರಣಾ ಪರಿಹಾರಗಳು: ಸಮರ್ಥ ಶಕ್ತಿಯ ಶೇಖರಣಾ ಪರಿಹಾರಗಳ ಅಭಿವೃದ್ಧಿಯು ಸಮರ್ಥನೀಯ ಶಕ್ತಿ ಪರಿವರ್ತನೆಗೆ ನಿರ್ಣಾಯಕವಾಗಿದೆ. ಗ್ರಿಡ್‌ಗೆ ನವೀಕರಿಸಬಹುದಾದ ಶಕ್ತಿಯ ಏಕೀಕರಣವನ್ನು ಹೆಚ್ಚಿಸಲು ಮತ್ತು ಮಧ್ಯಂತರ ಸವಾಲುಗಳನ್ನು ಎದುರಿಸಲು ಭಾರತವು ಲಿಥಿಯಂ-ಐಯಾನ್ ಬ್ಯಾಟರಿಗಳಂತಹ ಬ್ಯಾಟರಿ ಶೇಖರಣಾ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿದೆ.
* ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿಗಳು): ಭಾರತದಲ್ಲಿ ಹಸಿರು ಶಕ್ತಿಯ ಬೆಳವಣಿಗೆಯು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ನಿಕಟ ಸಂಬಂಧ ಹೊಂದಿದೆ. EVಗಳನ್ನು ಉತ್ತೇಜಿಸಲು ಸರ್ಕಾರವು ಆರ್ಥಿಕ ಪ್ರೋತ್ಸಾಹ, ಶುಲ್ಕ ವಿಧಿಸುವ ಮೂಲಸೌಕರ್ಯ ಅಭಿವೃದ್ಧಿ ಮತ್ತು ಅನುಕೂಲಕರ ನೀತಿಗಳನ್ನು ಒಳಗೊಂಡಂತೆ ವಿವಿಧ ಉಪಕ್ರಮಗಳನ್ನು ಜಾರಿಗೆ ತಂದಿದೆ. ಹೆಚ್ಚಿದ EV ಅಳವಡಿಕೆಯು ಈ ವಾಹನಗಳಿಗೆ ಶಕ್ತಿ ತುಂಬಲು ನವೀಕರಿಸಬಹುದಾದ ಶಕ್ತಿಯ ಬೇಡಿಕೆಯನ್ನು ಸೃಷ್ಟಿಸುತ್ತದೆ.
* ನಾವೀನ್ಯತೆ ಮತ್ತು ಸಂಶೋಧನೆ: ಭಾರತವು ಹಸಿರು ಶಕ್ತಿ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಸಂಶೋಧನೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಹಲವಾರು ಸಂಶೋಧನಾ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳು, ಇಂಧನ ದಕ್ಷತೆ ಮತ್ತು ಸ್ಮಾರ್ಟ್ ಗ್ರಿಡ್ ವ್ಯವಸ್ಥೆಗಳನ್ನು ಸುಧಾರಿಸುವಲ್ಲಿ ಕೆಲಸ ಮಾಡುತ್ತಿವೆ. ಈ ಪ್ರಯತ್ನಗಳು ಸಮರ್ಥನೀಯ ಮತ್ತು ವೆಚ್ಚ-ಪರಿಣಾಮಕಾರಿ ಪರಿಹಾರಗಳ ಅಭಿವೃದ್ಧಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.
* ಅಂತರರಾಷ್ಟ್ರೀಯ ಸಹಕಾರ: ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಶುದ್ಧ ಇಂಧನವನ್ನು ಉತ್ತೇಜಿಸಲು ಜಾಗತಿಕ ಪ್ರಯತ್ನಗಳಲ್ಲಿ ಭಾರತವು ಸಕ್ರಿಯವಾಗಿ ಭಾಗವಹಿಸುತ್ತಿದೆ. ಜ್ಞಾನ, ತಂತ್ರಜ್ಞಾನ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ದೇಶವು ಅಂತರರಾಷ್ಟ್ರೀಯ ಸೌರ ಒಕ್ಕೂಟದಂತಹ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿದೆ. ಈ ಸಹಯೋಗವು ಕಲ್ಪನೆಗಳು ಮತ್ತು ಸಂಪನ್ಮೂಲಗಳ ವಿನಿಮಯವನ್ನು ಸುಗಮಗೊಳಿಸುತ್ತದೆ, ಭಾರತದ ಹಸಿರು ಶಕ್ತಿ ಪರಿವರ್ತನೆಯನ್ನು ಬೆಂಬಲಿಸುತ್ತದೆ.
ಭಾರತದಲ್ಲಿ ಹಸಿರು ಶಕ್ತಿಗೆ ಗಮನಾರ್ಹ ಅವಕಾಶಗಳಿದ್ದರೂ, ನವೀಕರಿಸಬಹುದಾದ ಮೂಲಗಳ ಮಧ್ಯಂತರ, ಗ್ರಿಡ್ ಏಕೀಕರಣ ಮತ್ತು ಹಣಕಾಸಿನ ಪ್ರವೇಶದಂತಹ ಸವಾಲುಗಳು ಉಳಿದಿವೆ. ಆದಾಗ್ಯೂ, ಮುಂದುವರಿದ ಸರ್ಕಾರದ ಬೆಂಬಲ, ತಾಂತ್ರಿಕ ಪ್ರಗತಿಗಳು ಮತ್ತು ಹೆಚ್ಚಿದ ಸಾರ್ವಜನಿಕ ಜಾಗೃತಿಯೊಂದಿಗೆ, ಭಾರತವು ತನ್ನ ಹಸಿರು ಶಕ್ತಿಯ ಪ್ರಯಾಣದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಲು ಉತ್ತಮ ಸ್ಥಾನದಲ್ಲಿದೆ.
Post Views: 40 -
ಶ್ರೀ ಆಕಾಶ ಶೇರಖಾನೆ ಅವರಿಗೆ ಶ್ರೀ ಬಸವರಾಜ ಭೀಮಳ್ಳಿರವರಿಂದ ಸನ್ಮಾನ
75ನೇ ವರ್ಷಾಚರಣೆ ಮಾಡುತ್ತಿರುವ ಪಿಎಂ ಮಣ್ಣೂರರವರ ಜೀವನ ಆಧಾರಿತ ಚಿತ್ರಕಥೆ ಬಿಡುಗಡೆ ಮಾಡಿದ್ದಕ್ಕೆ ಫಸ್ಟ ಫಿಲ್ಂ ಪ್ರೋ ಮಾಲಿಕರಾದ ಶ್ರೀ ಆಕಾಶ ಶೇರಖಾನೆ ಅವರಿಗೆ ಶ್ರೀ ಬಸವರಾಜ ಭೀಮಳ್ಳಿರವರು ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡಿದರು, ಈ ಅದ್ಭುತ ಸಮಾರಂಭದಲ್ಲಿ ಶ್ರೀ ಲಿಂಗರಾಜ ಅಪ್ಪಾಜಿ ಅಧ್ಯಕ್ಷತೆವಹಿಸಿದ್ದರು ಹಾಗೂ ಸಂಪಾದಕರಾದ ಶ್ರೀ ಆನಂದ ಪ. ಮಣ್ಣೂರ ಜೊತೆಗಿದ್ದರು.

Post Views: 5 -
Talukawise rainfall

Post Views: 3 -
ಜೀವನದಲ್ಲಿ ತಂದೆಯ ಕೈ ಹಿಡಿದರೆ, ಜಗತ್ತಿನಲ್ಲಿ ಬೇರೆ ಯಾವ ವ್ಯಕ್ತಿಯ ಕಾಲು ಹಿಡಿಯುವ ಅವಶ್ಯಕತೆ ಬರುವುದಿಲ್ಲ : ಸಜ್ಜನ್
ಕಲಬುರಗಿ ನಗರದ ಭವಾನಿ ನಗರದಲ್ಲಿ ಬಬಲಾದ ಮಠದಲ್ಲಿ
ದಲ್ಲಿ ಮಾತನಾಡುತ್ತ ಮನುಷ್ಯನ ಒಬ್ಬರಿಗೊಬ್ಬರ ಸಂಬಂಧಗಳು ಯಾವ ರೀತಿ ಇರಬೇಕೆಂದು ಕಳೆದ ಕೋವಿಡ್ ಸಂದರ್ಭದಲ್ಲಿ ನಾವೆಲ್ಲರೂ ಪಾಠ ಕಲಿತಿದ್ದೇವೆ. ಹುಟ್ಟು ಸಹಜ ಸಾವು ಅನಿವಾರ್ಯ ಹುಟ್ಟು ಸಾವಿನ ಮಧ್ಯ ಉತ್ತಮವಾದ ಜೀವನ ಸಾಗಿಸಿ ಒಳ್ಳೆಯ ಸಮಾಜ ನಿರ್ಮಿಸುವ ಕಾರ್ಯ ಮಾಡಬೇಕೆಂದು ಮಾರ್ಮಿಕವಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಸೇವೆಗೈಯಿತ್ತಿರುವ ಸಂಜೀವಕುಮಾರ ಖೇಳಗಿ ಆಗಮಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂಗಮೇಶ ನಾಗೂರ, ಮಾಣಿಕ್ ಮಿರ್ಕಲ್, ಶರಣು ಜವಳಗಾ, ಸಿದ್ದಣ್ಣ ವಾಡಿ, ಗುರುರಾಜ ಹಸರಗುಂಡಗಿ, ಜಗನ್ನಾಥ ಸಜ್ಜನ, ಶಿವಶರಣಪ್ಪ ಮಾಲಿಪಾಟೀಲ, ಮಹೇಶ್ವರಿ ನಾಗೂರ ಸೇರಿದಂತೆ ಅನೇಕ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Post Views: 12 -

ಹಿಂಗುಲಾಂಬಿಕಾ ಸೊಸೈಟಿಯಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ
ಕಲಬುರಗಿ :— ಇಂದಿನ ಕಂಪ್ಯೂಟರ್ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಗಳ ಬಳಕೆ ಅವಶ್ಯಕತೆಗಿಂತ ಜಾಸ್ತಿ ಉಪಯೋಗಿಸಿ ಅವುಗಳನ್ನೇ ಅವಲಂಬಿಸಿ, ಒಂದು ವೇಳೆ ಅವುಗಳಿಂದ ನಾವು ದೂರ ಉಳಿದರೆ ನಮ್ಮ ಸರ್ವಸ್ವವನ್ನೇ ಕಳೆದುಕೊಳ್ಳುತ್ತೇವೆ ಎಂಬ ಮಟ್ಟಿಗೆ ಅನೇಕ ಯುವಕ ಯುವತಿಯರು ಅದರಲ್ಲಿಯೂ ವಿದ್ಯಾರ್ಥಿಗಳು ತೀರ್ಮಾನಕ್ಕೆ ಬಂದಿದ್ದಾರೆ . ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಕೆಲವು ವಿದ್ಯಾರ್ಥಿಗಳು ಇವುಗಳಿಂದ ದೂರ ಉಳಿದು ಕೇವಲ ತಮ್ಮ ವಿದ್ಯಾಭ್ಯಾಸದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಪಿಯುಸಿ ದ್ವಿತೀಯ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತಮಟ್ಟದ ಅಂಕಗಳನ್ನು ಪಡೆದು ರಾಜ್ಯ ,ಜಿಲ್ಲಾಮಟ್ಟದ ಹಾಗೂ ಶಾಲೆಗೆ ,ಸಮಾಜಕ್ಕೆ, ಹಾಗೂ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆಂದು ಶ್ರೀ ಎಂ ಜಿ ಘನಾತೆ ಅಧ್ಯಕ್ಷರು ಶ್ರೀ ಹಿಂಗುಲಾಂಬಿಕಾ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಹಾಗೂ ಭಾವಸಾರ್ ಛತ್ರಿ ಸಮಾಜದ ಮುಖಂಡರು ಮಾತನಾಡುತ್ತಿದ್ದರು.

ಅವರು ನಗರದ ಪ್ರತಿಷ್ಠಿತ ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆ ಏರ್ಪಡಿಸಿದ ಭಾವಸಾರ್ ಸಮಾಜದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಿಷಯ ವ್ಯಕ್ತಪಡಿಸಿದರು.
ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಕುಮಾರಿ ಭೂಮಿಕಾ ಕಠಾರೆ 86. 83 ಪ್ರತಿಶತ ಅಂಕ ಪಡೆದು ಟಾಪ್ ಮಾಡಿದ ಅವಳಿಗೆ 5,000 ಕ್ಯಾಶ್ ಪ್ರೈಸ್, 79 ಪ್ರತಿಶತ ಅಂಕ ಪಡೆದ ದೀಕ್ಷಾಗೆ 2500 ರೂಪಾಯಿ ಹಾಗೂ ಶ್ರೇಯಸ್ ವೈಚೋಲೆ ಇವರಿಗೆ 1100 ಕ್ಯಾಶ್ ಪ್ರೈಸ್ ನೀಡಿ ಸನ್ಮಾನಿಸಲಾಯಿತು.
ಅದೇ ತರಹ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಟಾಪ್ ಮಾಡಿದ ಭಾವಸಾರ್ ಕ್ಷತ್ರಿಯ ಸಮಾಜದ ವಿವಿಧ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದ ಟಾಪ್ ಮಾಡಿದ ಪ್ರಿಯಾಲ್ ನೌಲೇ 5000 ಕ್ಯಾಶ್ ಪ್ರೈಸ್, ದೀಕ್ಷಾ ಹಿಬಾರೆ 2500 ಹಾಗೂ ಕೃಪಾ ರಂಗದಾಳಗೆ 1100 ರೂಪಾಯಿ ಕ್ಯಾಶ್ ಪ್ರೈಸ್ ಹಾಗೂ ಭವ್ಯ ಸನ್ಮಾನ ಮಾಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಹಿಂಗುಲಾಂಬಕಾ ಸಂಸ್ಥೆಯ ಉಪಾಧ್ಯಕ್ಷ ಲಕ್ಷ್ಮಿಕಾಂತ್ ರಂಗ ದಾಳ ನಿರ್ದೇಶಕರಾದ ನಂದ ಕಿಶೋರ್ ಚೌಹಾಣ ರಮೇಶ್ ರಂಗದಾಲ್ ನಂದಕುಮಾರ್ ಪುಕಾಳೆ ಸುನಿಲ್ ರಂಗ ದಾಳ ದೇವಿ ದಾಸ್ ಪಿಸ್ಸೆ ದತ್ತ ಕಠಾರೆ ರಾಜಕುಮಾರ್ ರಂಗ ದಾಳ ದಯಾನಂದ್ ಕಬಾಡೆ ಸುರೇಶ್ ತಲ್ವಾರ್ ಸುರೇಖಾ ಘನಾತೆ ಹಾಗೂ ಸದಸ್ಯರಾದ ವಿಠಾಬಾಯಿ ಹಿಬಾರಿ ಉಪಸ್ಥಿತರಿದ್ದರು.
Post Views: 7 -

ಸಿರಸಿ ಮಡ್ಡಿಯ ಸಾಯಿ ದರ್ಬಾರ್ ನಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ ಆಚರಣೆ !
ಕಲಬುರಗಿ :- ನಗರದ ಶರಣ ಸಿರಸಿ, ಮಡ್ಡಿಯ ನಿಸರ್ಗ ಕಾಲೋನಿಯ ಶ್ರೀ ಸಾಯಿ ದರ್ಬಾರ್ ಮಂದಿರದಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ ಕಾರ್ಯಕ್ರಮ ಜರುಗಿತು.
ಬೆಳಗಿನ ಜಾವ 8:00 ಗಂಟೆಗೆ ಸಾಯಿಬಾಬಾರವರ ಭವ್ಯಮೂರ್ತಿಗೆ ಮಹಾ ಅಭಿಷೇಕ ಅನೇಕ ಸದ್ಭಕ್ತರ ಉಪಸ್ಥಿತಿಯಲ್ಲಿ ಗುರುಗಳಾದ ಶ್ರೀ ಸುರೇಶ್ ಬಾಬಾ ಗುರೂಜಿಯವರ ನೇತೃತ್ವದಲ್ಲಿ ಜರುಗಿತ್ತು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸಾಯಿಬಾಬಾರವರ ಮಧ್ಯದ ಆರತಿ ಗುರೂಜಿ ಅವರ ನೇತೃತ್ವದಲ್ಲಿ ನೆರವೇರಿತು.
ಗುರುಪೂರ್ಣಿಮೆಯ ಮಹಾ ಅಭಿಷೇಕ ಮತ್ತು ಆರತಿಯಲ್ಲಿ ಪತ್ರಕರ್ತ ಶ್ರೀ ಆನಂದ್ ಪಿ ಮಣ್ಣೂರ್ ಪತ್ರಕರ್ತ ಶ್ರೀ ದಸ್ತಯ್ಯ ಗುತ್ತೇದಾರ್ ಪತ್ರಕರ್ತ ಹಾಗೂ ಸಾಹಿತಿ ಶ್ರೀ ಕಿರಣ್ ಪಾಟೀಲ್ ಅಶೋಕ್ ಗುತ್ತೇದಾರ್ ಶಿವರಾಜ್ ಬಿರಾದಾರ್ ಜನರಲ್ ಮ್ಯಾನೇಜರ್ ನಿವೃತ್ತ, ಶ್ರೀ ದಶರಥ ಏಖೆಳ್ಳಿಕರ್ ಇನ್ನು ಅನೇಕರು ಉಪಸ್ಥಿತರಿದ್ದರು. ಆರತಿಯ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಹುಮನಾಬಾದ್ ತಾಲೂಕಿನ ಶ್ರೀಮತಿ ಸುಗಂಧಾ ನರೂಣಿ ರವರು ಏರ್ಪಡಿಸಿದರು.
Post Views: 3 -

ಇಂದು ಮಣ್ಣೂರ್ ರವರ ಹುಟ್ಟುಹಬ್ಬ ಆಚರಣೆ : ಸನ್ಮಾನ ಸಮಾರಂಭ
ಕಲಬುರಗಿ :— ಸತ್ಯಕಾಮ ಪತ್ರಿಕೆಯ ಪ್ರಧಾನ ಸಂಪಾದಕರು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಸನ್ಮಾನ್ಯ ಶ್ರೀ ಪಿ ಎಂ ಮಣ್ಣೂರ ಅವರ 75ನೇ ಹುಟ್ಟು ಹಬ್ಬದ ಭವ್ಯ ಸಮಾರಂಭ ಶ್ರೀ ಶ್ರೀನಿವಾಸರಾವ್ ಆರ್ ರಘೋಜಿ ಸಭಾ ಗ್ರಹ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸೂಪರ್ ಮಾರ್ಕೆಟ್ ಕಲಬುರಗಿಯಲ್ಲಿ ದಿನಾಂಕ 01-07-2023 ರಂದು ಸಾಯಂಕಾಲ 5-00 ಗಂಟೆಗೆ ವಿಜ್ರಮಣೆಯಿಂದ ಆಚರಿಸಲಾಗುತ್ತಿದೆ ಎಂದು ಸತ್ಯಕಾಮ ಪತ್ರಿಕೆಯ ಕಲಬುರಗಿ ಸ್ಥಾನಿಕ ಸಂಪಾದಕ ಶ್ರೀ ಆನಂದ್ ಮಣ್ಣೂರ ರವರು ತಿಳಿಸಿದ್ದಾರೆ.
ಪರಮಪೂಜ್ಯ ಶ್ರೀ ಜಗದ್ಗುರು ಡಾ .ಸಾರಂಗಧರ , ಸಾರಂಗ ಮಠ ಶ್ರೀಶೈಲಂ, ಸುಲಫಲ ಮಠ ಶಹ ಬಜಾರ್ ಕಲಬುರಗಿ ರವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸನ್ಮಾನ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯರು ಸತ್ಯಕಾಮ ವೆಬ್ಸೈಟ್ ಉದ್ಘಾಟಿಸಲಿದ್ದಾರೆ. ಸನ್ಮಾನ್ಯ ಶ್ರೀ ಪ್ರೊಫೆಸರ್ ದಯಾನಂದ ಅಗಸರ ಉಪಕುಲಪತಿಗಳು ಗುಲ್ಬರ್ಗ ವಿವಿ ಕಲಬುರಗಿ ಸಮಾರಂಭದ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆ ಸನ್ಮಾನ್ಯ ಶ್ರೀ ಲಿಂಗರಾಜಪ್ಪ ಅಪ್ಪ ಉಪಾಧ್ಯಕ್ಷರು ವಿಶ್ವ ಹಿಂದೂ ಪರಿಷತ್( ಉತ್ತರ) ವಹಿಸಲಿದ್ದಾರೆ. ಪಿ ಪಿ ಟಿ ಚಾಲನೆ ಸನ್ಮಾನ್ಯ ಶ್ರೀ ಬಸವರಾಜ ಮತ್ತಿಮೂಡ ಮಾನ್ಯ ಶಾಸಕರು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರ ರವರ ಅಮೃತ ಹಸ್ತಗಳಿಂದ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಶ್ರೀ ಟಿ ವಿ ಶಿವಾನಂದನ್ ಹಾಗೂ ಶಶಿಕಾಂತ್ ಬಿ ಪಾಟೀಲ್ ಅಧ್ಯಕ್ಷರು ಕೆ ಕೆ ಸಿ ಸಿ ಐ ಕಲಬುರಗಿ ಆಗಮಿಸಲಿದ್ದಾರೆ.
ಭವ್ಯ ಸನ್ಮಾನ:- ಇದೆ ಸನ್ಮಾನ ಸಮಾರಂಭದಲ್ಲಿ ಸತ್ಯಕಾಮ ಪತ್ರಿಕೆಯು ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದು, ಹಿರಿಯ ಹಾಗೂ ಯುವ ಪತ್ರಕರ್ತರನ್ನು ಸನ್ಮಾನಿಸಲಾಗುವುದು ಎಂದು ಆನಂದ್ ಮಣ್ಣೂರ ತಿಳಿಸಿದ್ದಾರೆ. ಸನ್ಮಾನಿತ ಪುರಸ್ಕೃತರಲ್ಲಿ ಶ್ರೀ ಶಿವಕಾಂತಾಚಾರ್ಯ ಮಣ್ಣೂರ ಹಿರಿಯ ಪತ್ರಕರ್ತರು, ಶ್ರೀ ಎಸ್ ಬಿ ಜೋಶಿ ಹಿರಿಯ ವರದಿಗಾರರು ಪಿಟಿಐ ಕಲಬುರಗಿ, ಶ್ರೀಮತಿ ಶೀಲಾ ತಿವಾರಿ ಸಂಪಾದಕರು ಕನ್ನಡ ಚಿಂತಕ ಪತ್ರಿಕೆ, ಶ್ರೀ ಕೇದಾರ ಲಿಂಗಯ್ಯ ಹಿರೇಮಠ ಕಲಬುರ್ಗಿ ವಾಣಿ ಕನ್ನಡ ಪತ್ರಿಕೆ, ಶ್ರೀ ಮುಹಿಯುದ್ದೀನ್ ಪಾಷಾ ಸಂಪಾದಕರು ಇನ್ ಕ್ಲಾಬ್ ಎ ಡೆಕ್ಕನ್ ಸಂಪಾದಕರು ಉರ್ದು ಪತ್ರಿಕೆ ಹಾಗೂ ಶ್ರೀ ಮಹಿಪಾಲ ರೆಡ್ಡಿ ಮುನೂರ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳು ಇವರನ್ನು ಸನ್ಮಾನಿಸಲಾಗುವುದು ಎಂದು ಆನಂದ್ ಮಣ್ಣೂರ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
Post Views: 9

