Blog

  • ಆಧಾರ್ ಗೆ ಮೊಬೈಲ್ ಲಿಂಕ್ ಮಾಡಲು ಡಿ.ಸಿ. ಸೂಚನೆ

    ಆಧಾರ್ ಗೆ ಮೊಬೈಲ್ ಲಿಂಕ್ ಮಾಡಲು ಡಿ.ಸಿ. ಸೂಚನೆ

     

    ಕಲಬುರಗಿ,ಆ.2- ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ 30,05,090 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 7,74,644 ಜನರ ಆಧಾರ್ ಗೆ ಮೋಬೈಲ್ ಲಿಂಕ್ ಮಾಡಿಲ್ಲ. ಸರ್ಕಾರದ ಹಲವಾರು ಯೋಜನೆಗಳು ಆಧಾರ್, ಡಿ.ಬಿ.ಟಿ ಮೂಲಕ ಜಾರಿಗೆ ತರಲಾಗುತ್ತಿರುವುದರಿಂದ ಆಧಾರ್ ಗೆ ಮೋಬೈಲ್ ಲಿಂಕ್ ಅನಿವಾರ್ಯವಾಗಿದೆ. ಆಧಾರ್ ಗೆ ಇದೂವರೆಗೆ ಮೋಬೈಲ್ ಲಿಂಕ್ ಮಾಡಿಸದವರು ಕೂಡಲೇ ಲಿಂಕ್ ಮಾಡಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

    ಮಂಗಳವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಆಧಾರ್ ನೋಂದಣಿ ಮೇಲುಸ್ತುವಾರಿ ಸಮಿತಿ ಸಭೆ ನಡೆಸಿ ಅವರು ಮಾತನಾಡಿದ್ದರು.

    ಇದಲ್ಲದೆ 5 ವರ್ಷ ಮತ್ತು ಮೇಲ್ಪಟ್ಟ 1,66,849 ಜನರು ಮತ್ತು 15 ವರ್ಷ ಮತ್ತು ಮೇಲ್ಪಟ್ಟ 6,03,331 ಜನರ ಆಧಾರ್ ಕಾರ್ಡ್ ಗೆ ಬಯೋಮೆಟ್ರಿಕ್ ಅಪ್ಲೋಡ್ ಆಗಿಲ್ಲ. ಕೂಡಲೆ ಇವರೆಲ್ಲರು ಬಯೋಮೆಟ್ರಿಕ್ ನೀಡಬೇಕು. ಅದೇ ರೀತಿ 9,80,037 ಜನರು ಗುರುತಿನ‌ ಚೀಟಿ ಮತ್ತು ವಾಸಸ್ಥಳ‌ ಕುರಿತು ಡಾಕೂಮೆಂಟ್ ಅಪಲೋಡ್ ಮಾಡಬೇಕಿದೆ ಎಂದರು.

    *199 ಆಧಾರ್ ನೋಂದಣಿ ಕೇಂದ್ರಗಳು:*

    ಕಲಬುರಗಿ-40, ಅಫಜಲಪೂರ-38, ಆಳಂದ-29, ಚಿಂಚೋಳಿ-19, ಚಿತ್ತಾಪೂರ-29, ಜೇವರ್ಗಿ-18 ಹಾಗೂ ಸೇಡಂ-26 ಸೇರಿದಂತೆ ಜಿಲ್ಲೆಯಾದ್ಯಂತ 199 ಆಧಾರ್ ನೋಂದಣಿ ಕೆಂದ್ರಗಳನ್ನು ತೆರಯಲಾಗಿದೆ. ಬಿ.ಎಸ್.ಎನ್.ಎಲ್, ಬ್ಯಾಂಕ್, ಅಂಚೆ ಕಚೇರಿ, ನಾಡ ತಹಶೀಲ ಕಚೇರಿ, ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಗಳು ಆಧಾರ್ ನೋಂದಣಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸಮೀಪದ ಕೇಂದ್ರಕ್ಕೆ ಹೋಗಿ ಡಾಕೂಮೆಂಟ್, ಬಯೋಮೆಟ್ರಿಕ್ ಅಪಲೋಡ್ ಮತ್ತು ಮೋಬೈಲ್ ಲಿಂಕ್ ಮಾಡಿಸಬಹುದಾಗಿದೆ ಎಂದು ಡಿ.ಸಿ. ತಿಳಿಸಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಬೆಂಗಳೂರು ಪ್ರಾದೇಶಿಕ ಕಚೇರಿಯ ಯೋಜನಾ ವ್ಯವಸ್ಥಾಪಕ ವಿಜಯ, ಜಿಲ್ಲಾ ಆಧಾರ್ ಕನ್ಸಲಟೆಂಟ್ ಆನಂದ ಗಢಾಳೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

    apvc-iconPost Views: 0
  • ಮಳೆಯಿಂದ 283 ಮನೆಗಳು ಭಾಗಶಃ ಹಾನಿ -ಡಿ.ಸಿ. ಬಿ.ಫೌಜಿಯಾ ತರನ್ನುಮ್

    ಮಳೆಯಿಂದ 283 ಮನೆಗಳು ಭಾಗಶಃ ಹಾನಿ -ಡಿ.ಸಿ. ಬಿ.ಫೌಜಿಯಾ ತರನ್ನುಮ್

    ಕಲಬುರಗಿ-ಕಳೆದ ಜೂನ್ 1 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ 283 ಮನೆಗಳು ಭಾಗಶ: ಹಾನಿಗೊಂಡಿದ್ದು, ಹಾನಿಯಾದ ಮನೆಗಳ ಕುರಿತು ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

    ಇದಲ್ಲದೇ 20 ಕಿ.ಮೀ. ರಾಜ್ಯ ಹೆದ್ದಾರಿ, 27.50 ಕಿ.ಮೀ. ಜಿಲ್ಲಾ ಹೆದ್ದಾರಿ, 100 ಕಿ.ಮೀ. ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 147.50 ಕಿ.ಮೀ. ರಸ್ತೆ, 84 ಸೇತುವೆಗಳು, 89 ಶಾಲಾ ಕೊಠಡಿಗಳು ಹಾಗೂ 38 ಅಂಗನವಾಡಿ ಕೇಂದ್ರಗಳು ಸಹ ಹಾನಿಗೊಳಗಾಗಿವೆ ಎಂದು ಅವರು ತಿಳಿಸಿದ್ದಾರೆ.

    ತೀವ್ರ ಮಳೆಯಿಂದ ಜಿಲ್ಲೆಯಾದ್ಯಂತ 281 ವಿದ್ಯುತ್ ಕಂಬ್‌ಗಳು, 35 ಟ್ರಾನ್ಸ್ಫಾರ್ಮರ್‌ಗಳು ಹಾನಿಗೊಂಡಿದ್ದು, ಈ ಪೈಕಿ ಕ್ರಮವಾಗಿ 203 ವಿದ್ಯುತ್ ಕಂಬಗಳು ಮತ್ತು 31 ಟ್ರಾನ್ಸ್ಫಾರ್ಮರ್‌ಗಳನ್ನು ದುರಸ್ತಿಗೊಳಿಸಿ ವಿದ್ಯುತ್ ಪ್ರಸರಣಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ಇನ್ನೂ ಜಿಲ್ಲೆಯಾದ್ಯಂತ ಮಳೆಯಿಂದ ಯಾವುದೇ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿನ ಮಳೆಯ ಪರಿಸ್ಥಿತಿ ಕುರಿತು ಈಗಾಗಲೇ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದು, ಅವರು ಅಗತ್ಯ ಸಲಹೆ ಸೂಚನೆ ನೀಡಿದ್ದು, ಅದನ್ನು ಪಾಲಿಸಲಾಗುತ್ತಿದೆ ಎಂದಿದ್ದಾರೆ.

    *5 ಲಕ್ಷ ರೂ. ಪರಿಹಾರ ವಿತರಣೆ:*

    ಕಳೆದ ಜುಲೈ 24 ರಂದು ಜೇವರ್ಗಿ ತಾಲೂಕಿನ ಬಿರಾಳ (ಬಿ) ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿತ ಪರಿಣಾಮ ಗ್ರಾಮದ 38 ವರ್ಷದ ಬಸಮ್ಮ ಗಂಡ ಬಸವರಾಜ ಬಳಗಾರ ಅವರು ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಇನ್ನು ಜಿಲ್ಲೆಯಾದ್ಯಂತ ಯಾವುದೇ ಜಾನುವಾರುಗಳ ಪ್ರಾಣ ಹಾನಿ ಕುರಿತು ವರದಿಯಾಗಿಲ್ಲ ಎಂದು ಡಿ.ಸಿ. ಬಿ. ಫೌಜಿಯಾ ತರನ್ನುಮ್ ಅವರು ಸ್ಪಷ್ಟಪಡಿಸಿದ್ದಾರೆ.

    *ಸಹಾಯವಾಣಿ ಸ್ಥಾಪನೆ:*

    ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಭಾರಿ ಮಳೆಯಿಂದ ಸಾರ್ವಜನಿಕರಿಗೆ ಏನಾದರೂ ತೊಂದರೆಯಾದಲ್ಲಿ ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 08472-278677, ಟೋಲ್ ಫ್ರೀ ಸಂಖ್ಯೆ 1077ಗೆ ಸಂಪರ್ಕಿಸಲು ಕೋರಿದೆ.

    ಇದಲ್ಲದೇ ತಾಲೂಕು ಹಂತದಲ್ಲಿ ಅಫಜಲಪುರ 08470-282020, ಆಳಂದ-08477-202428, ಚಿಂಚೋಳಿ-8475200113, ಚಿತ್ತಾಪುರ-08474-236250, ಜೇವರ್ಗಿ 08442-236024, ಕಲಬುರಗಿ-08472-278657/ 278636, ಕಾಳಗಿ 9741680444, ಕಮಲಾಪುರ-7411843393, ಸೇಡಂ 08441-276184, ಶಹಾಬಾದ-08477-202428 ಹಾಗೂ ಯಡ್ರಾಮಿ 8147003348ಗೆ ಸಂಪರ್ಕಿಸಬಹುದಾಗಿದೆ.

    apvc-iconPost Views: 0
  • 26 ರಂದು ಶಾಲಾ, ಅಂಗನವಾಡಿ ಕೇಂದ್ರಗಳಿಗೆ ರಜೆ: ಜಿಲ್ಲಾಧಿಕಾರಿ

    26 ರಂದು ಶಾಲಾ, ಅಂಗನವಾಡಿ ಕೇಂದ್ರಗಳಿಗೆ ರಜೆ: ಜಿಲ್ಲಾಧಿಕಾರಿ

     


    ಕಲಬುರ್ಗಿ:26 ಹವಾಮಾನ ಇಲಾಖೆಯ ವರದಿನ್ವಯ ಕಲಬುರ್ಗಿ ಜಿಲ್ಲೆಯಲ್ಲಿ ಭಾರಿ ಮಳೆ ಯಾಗುವ ಸಾಧ್ಯತೆ ಇರುವ ಪ್ರಯುಕ್ತ ಹವಾಮಾನ ಇಲಾಖೆಯಿಂದ ಕಲಬುರ್ಗಿ ಜಿಲ್ಲೆಗೆ Red alert ಎಂದು ಉಲ್ಲೇಖಿತ ಮೂಲಕ ಮುನ್ಸೂಚನೆ ನೀಡಲಾಗಿದೆ.
    ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಕಾರಣ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂದು ( ಜುಲೈ 26) ಬುಧವಾರ ದಂದು ಕಲಬುರಗಿ ಜಿಲ್ಲೆಯ ಎಲ್ಲಾ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005 ಕಲಂ 34( ಎಂ) ರ ಅಡಿಯಲ್ಲಿ ಪ್ರದತ್ತ ವಾದ ಅಧಿಕಾರವನ್ನು ಚಲಾಯಿಸಿ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    apvc-iconPost Views: 0
  • ಮನರಂಜಿಸಿದ ಮುಸ್ಸಂಜೆಯ ಮನೋಹರ ಗಾನ ಸಂಭ್ರಮ

    ಮನರಂಜಿಸಿದ ಮುಸ್ಸಂಜೆಯ ಮನೋಹರ ಗಾನ ಸಂಭ್ರಮ

    ಕಲಬುರಗಿ. ಮಸ್ಸಂಜೆಯ ಮನೋಹರ ಗಾನ ಸಂಭ್ರಮ ಪ್ರೇಕ್ಷಕರ ಮನ ರಂಜಿಸಿರುವುದು ನನಗೂ ಖುಷಿ ಎನಿಸಿದೆ ಎಂದು ಚಲನ ಚಿತ್ರ ಸಂಗೀತ ನಿರ್ದೇಶಕರಾದ ವಿ ಮನೋಹರ ಹೇಳಿದರು.
    ನಗರದ ಕಲಾ ಮಂಡಲದಲ್ಲಿ ಸುಕಿ ಸಂಸ್ಕೃತಿಕ ಸಂಸ್ಥೆ ಹಾಗೂ ರಾಷ್ಟ್ರ ಕೂಟ ಪುಸ್ತಕ ಮನೆ ಸಹಯೋಗದಲ್ಲಿ ನಡೆದ ಮಹಿಪಾಲ ರೆಡ್ಡಿ ಮುನ್ನೂರು ಅವರ ಮುಗಿಲು ಸುರಿದ ಮುತ್ತು ಪುಸ್ತಕ ಲೋಕಾರ್ಪಣೆ ಹಾಗೂ ವಿ ಮನೋಹರ ಅವರ ರಚನೆ ಹಾಗೂ ಸಂಗೀತ ನಿರ್ದೇಶನದ ಗೀತೆಗಳ ಗಾನ ಸಂಭ್ರಮ ದಲ್ಲಿ ಸುಕಿ ಮೆಲೋಡಿಸ್ ತಂಡದವರಿಂದ ಮನೋಹರ ಗಾನ ಸಂಭ್ರಮ ದಲ್ಲಿ ಗಾಯಕರ ಗಾನಗಳನ್ನು ಕೇಳಿ ಆನಂದಿಸಿದ್ದೇನೆ ಅವರುಗಳು ಬಲು ಸಂಭ್ರಮ ದಿಂದ ನನ್ನ ಹಾಡುಗಳನ್ನು ಹಾಡಿದ್ದು ಒಂದು ಕುಟುಂಬ ಕಾರ್ಯಕ್ರಮ ವೆಂದು ಅನಿಸುತ್ತದೆ ಇಂತಹ ಮಳೆಯ ವಾತಾವರಣದಲ್ಲಿ ಅದರಲ್ಲೂ ಬಾನುವಾರ ವಾಗಿದ್ದು ಮನೆಯಲ್ಲಿ ಹಾಯಾಗಿ ಮಿರ್ಚಿ ಬಝಿ ಮಂಡಕ್ಕಿ ತಿನ್ನುತ್ತಾ ಟಿವಿ ನೋಡುತ್ತಾ ಕೂಡ್ರುವ ಜಾಯಮಾನದಲ್ಲಿ ಇಲ್ಲಿ ಅದೆಂತಹ ಸಂಭ್ರಮ ದಲ್ಲಿ ಕೂತು ಹಾಡು ಕೇಳುತ್ತಿರುವುದು ಇದೊಂದು ಸ್ವರ್ಗದ ಹಾಗೆ ಆಗಿದೆ ಎಂದು ಹೇಳುತ್ತ ಪ್ರೇಕ್ಷಕರ ಕೋರಿಕೆಯ ಮೆರೆಗೆ ಓ ಮಲ್ಲಿಗೆ ಹಾಡನ್ನು ಹಾಡಿ ಮನರಂಜಸಿದರು.
    ಕಲಾ ಮಂಡಳ ಗಾಯನ ಅಭಿಮಾನಿಗಳಿಗೆ ಕಿಕ್ಕಿರಿದು ತುಂಬಿ ಮನೋಹರ ಗಾನ ಸಂಭ್ರಮದ ವಾತಾವರಣಕ್ಕೆ ಸಾಕ್ಷಿ ಆದರು.
    ಗಾಯನದಲ್ಲಿ ಕಿರಣ್ ಪಾಟೀಲ ಕವಿರಾಜ್ ಕಾವೇರಿ ಹಿರೇಮಠ ಮಹೇಶ ಕುಮಾರ. ಪ್ರಕಾಶ ದಂಡೋತಿ ಆನಂದ ಪಾಟೀಲ್ ಸಿದ್ದಣ್ಣ ಡಿಗ್ಗಾವಿ. ಶರಣು ವಿಜಯಲಕ್ಷ್ಮಿ ಮುಂತಾದ ಗಾನದಲ್ಲಿ ಬಾಗಿಯಾಗಿ ಮನೋಹರ ಅವರ ಹಾಡುಗಳನ್ನು ಹಾಡಿದರು.

    apvc-iconPost Views: 8
  • ಪತ್ರಕರ್ತರ ಸಂಘದಿಂದ 20 ಜನ ಸಾಧಕ ಪತ್ರಕರ್ತರನ್ನು 25ರಂದು ಬೆಂಗಳೂರಿನಲ್ಲಿ ಸತ್ಕಾರ

    ಪತ್ರಕರ್ತರ ಸಂಘದಿಂದ 20 ಜನ ಸಾಧಕ ಪತ್ರಕರ್ತರನ್ನು 25ರಂದು ಬೆಂಗಳೂರಿನಲ್ಲಿ ಸತ್ಕಾರ


    ಕಲಬುರಗಿ, ಜು.೨4- ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಾಧಕ ಪತ್ರಕರ್ತರಿಗೆ ಜು.25 ರಂದು ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಲಬುರಗಿ ಜಿಲ್ಲೆಯ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ಸತ್ಕರಿಸಲಾಗುವುದು.

    ಕರ್ನಾಟಕದ ಸುಮಾರು 20 ಜನ ಸಾಧಕ ಪತ್ರಕರ್ತರನ್ನು ಸತ್ಕರಿಸುವ ಈ ಸಮಾರಂಭದಲ್ಲಿ ಭಾರತೀಯ ಪತ್ರಕರ್ತರ ಒಕ್ಕೂಟದ 132 ನೇ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಜು.25 ರಂದು ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗಿನ 10.30 ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಡಗೂರು ಸೇರಿದಂತೆ ಅನೇಕರು ಭಾಗವಹಿಸುವರು.
    ಮಧ್ಯಾಹ್ನ 3.30 ಕ್ಕೆ ನಡೆಯಲಿರುವ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಪ್ರಿಯಕೃಷ್ಣ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ್, ಕೆಯುಡಬ್ಲೂಜೆ ಕಾರ್ಯದರ್ಶಿ ಬಿ.ಸಿ.ಲೋಕೇಶ, ಶೇಷಚಂದ್ರಿಕ ಭಾಗವಹಿಸುವರು. ಸುಮಾರು 20 ಜನ ಪತ್ರಕರ್ತ ಸಾಧಕರನ್ನು ಸತ್ಕರಿಸಲಿದ್ದು, ಕಲಬುರಗಿ ಜಿಲ್ಲೆಯ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ಸಹ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

    apvc-iconPost Views: 0
  • ಅನೈತಿಕ ಸಂಬಂಧ ಪತ್ನಿಯಿಂದಲೇ ಪತಿಯ ಹತ್ಯೆ !

    ಅನೈತಿಕ ಸಂಬಂಧ ಪತ್ನಿಯಿಂದಲೇ ಪತಿಯ ಹತ್ಯೆ !

     

    ಗುರುಮಠಕಲ್ :— ತಾಲೂಕಿನ ಕೊಂಕಲ್ ಗ್ರಾಮದಲ್ಲಿ ದಿನಾಂಕ 16 .06 .2023 ರಂದು ಕಾಶಪ್ಪ ತಂದೆ ನಾಗಪ್ಪ ಮಲ್ಲಪ್ಪೋಳ ಸಾಕಿನ್ ಕೊಂಕಲ ಗ್ರಾಮ ಈತನ ಮೃತ ದೇಹ ಬನ್ನಿ ಗಿಡಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ದೊರೆತಿದ್ದರಿಂದ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮೃತನ ಅಕ್ಕ ಕಾಶಮ್ಮ ಗಂಡ ರಾಜು ಕುಡ್ಲೂರು ಸಾಕಿನ್ ತೊಟ್ಟೂರ್ ಇವರ ಫಿರ್ಯಾದಿನ ಮೇರೆಗೆ ಇವರ ತಮ್ಮನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯುಡಿಆರ್ ಸಂಖ್ಯೆ 08/2023 ಕಲಂ 174( ಸಿ) ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು.

    ಯಾದ್ಗೀರ್ ಪೊಲೀಸ್ ಅಧೀಕ್ಷಕರು ಹಾಗೂ ಉಪವಿಭಾಗ ಡಿಎಸ್ಪಿ ಯವರ ಘನ ಮಾರ್ಗದರ್ಶನದಲ್ಲಿ ದೌಲತ್ ಎನ್ಕೆ ಗುರುಮಿಟ್ಕಲ್ ಠಾಣೆ ಇವರ ನೇತೃತ್ವದಲ್ಲಿ ಪಿಎಸ್ಐ ಹಾಗೂ ಸಿಬ್ಬಂದಿಗಳಾದ ನರಸಿಂಗರಾವ್ ವಿಶ್ವನಾಥ್ ರೆಡ್ಡಿ ದೇವೇಂದ್ರ ನಾಗೇಂದ್ರ ರೆಡ್ಡಿ ರಹೀಮ್ ಮೊಹಮ್ಮದ್ ಶರೀಫ್ ನರಸರೆಡ್ಡಿ ಸಾಹೇಬ್ ರೆಡ್ಡಿ ಅಶೋಕ್ ಮತ್ತು ರಾಮಲಿಂಗಪ್ಪ ಇವರನ್ನೊಳಗೊಂಡ ತಂಡವನ್ನು ರಚಿಸಿದರು.
    ಸಾರಾಂಶ :- ಪ್ರಕರಣದ ಜಾಲವನ್ನು ಹಿಡಿದು ವ್ಯಾಪಕ ತನಿಖೆ ಕೈಕೊಂಡು ದಿನಾಂಕ್ 21.07.2023 ರಂದು ಮೃತನ ಹೆಂಡತಿ ಅನಿತಾ ಗಂಡ ಕಾಶಪ್ಪ ಸಾಕಿನ್ ಕೊಂಕಲ್ ಮತ್ತು ನಾಗರಾಜ್ ಅಲಿಯಾಸ್ ನಾಗೇಶ್ ತಂದೆ ಮಲ್ಲಪ್ಪ ಹತ್ತಿಕುಣಿ ಇವರಿಬ್ಬರನ್ನು ದಸ್ತಗೀರ್ ಮಾಡಿ ವಶಕ್ಕೆ ಪಡೆದುಕೊಂಡು ವ್ಯಾಪಕ ತನಿಖೆಗೊಳಪಡಿಸಿದಾಗ ಇವರಿಬ್ಬರು ಸೇರಿ ದಿನಾಂಕ 15 .6. 2023 ರಂದು ರಾತ್ರಿ ವೇಳೆಯಲ್ಲಿ ಕಾಶಪ್ಪ ತನ್ನ ಮನೆಯಲ್ಲಿ ಮಲಗಿದ್ದಾಗ ಸಿನಿಮಯ ಶೈಲಿಯಲ್ಲಿ ಆತನ ಕುತ್ತಿಗೆಗೆ ಹಗ್ಗ ಬಿಗಿದು ಮೃತಪಟ್ಟ ನಂತರ ಸಾಕ್ಷಾಧಾರಗಳನ್ನು ನಾಶಪಡಿಸಿದ ನಂತರ ನಾಗರಾಜ್ ತನ್ನ ಮೋಟರ್ ಸೈಕಲ್ ಮೇಲೆ ಶವ ವನ್ನು ತೆಗೆದುಕೊಂಡು ಹೋಗಿ ಕೊಂಕಲ್ ಗ್ರಾಮದ ಸೀಮೆಯಲ್ಲಿರುವ ಹೊಲಕ್ಕೆ ಸಾಗಿಸಿ ಗಿಡವೊಂದಕ್ಕೆ ಕಾಶಪ್ಪನೆ ಸ್ವತಃ ನೇಣು ಹಾಕಿಕೊಂಡು ವೃತ್ತಪಟ್ಟಿರುವಂತೆ ಸೀನ್ ಕ್ರಿಯೇಟ್ ಮಾಡಿ ಹೆಣವನ್ನು ತೂಗಿ ಹಾಕಿದ್ದಾಗಿ, ತನಿಖೆ ಯಿಂದ ತಿಳಿದು ಬಂದಿದೆ. ಈ ಕೊಲೆಗೆ ಅನಿತಾ ಮತ್ತು ನಾಗರಾಜನ ಅನೈತಿಕ ಸಂಬಂಧ ಇರುವದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಸದರಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
    ಈ ಪ್ರಕರಣದಲ್ಲಿ ಶ್ರಮಿಸಿದ ಎಲ್ಲಾ ಸಿಬ್ಬಂದಿಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಯಾದಗೀರ್ ರವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

    apvc-iconPost Views: 1
  • ಜಾನಪದ ಕಲೆ ಉಳಿಸಿ ಬೆಳೆಸಲು ಕರೆ – ಸಿ.ಎಸ್.ಮಾಲಿ ಪಾಟೀಲ

    ಜಾನಪದ ಕಲೆ ಉಳಿಸಿ ಬೆಳೆಸಲು ಕರೆ – ಸಿ.ಎಸ್.ಮಾಲಿ ಪಾಟೀಲ


    ಕಲಬುರಗಿ : ನಗರದ ಸಂತ ಗಾಡಗೆ ಬಾಬಾ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತ ಕಲಬುರಗಿ ಘಟಕದಿಂದ ಕಲಬುರಗಿ ಜಿಲ್ಲೆಯ ತಾಲ್ಲೂಕು ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ.ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೇಲ್ಲರ ಆದ್ಯ ಕರ್ತವ್ಯ ಎಂದು ಅದೇಶ ಪತ್ರ ನೀಡಿ ಗೌರವಿಸಿ.ಎಲ್ಲರೂ ಒಗ್ಗಟಿನಿಂದ ಕೆಲಸ ಮಾಡೊಣ ಎಂದು ಕಲಬುರಗಿ ಜಿಲ್ಲಾಧ್ಯಕ್ಷರಾದ ಸಿ.ಎಸ್.ಪಾಟೀಲ ಅವರು ಕರೆ ನೀಡಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಸಲಹಾ ಸಮಿತಿಯ ಅಧ್ಯಕ್ಷರಾದ ಎ.ಕೆ.ರಾಮೇಶ್ವರ ,ಕಾರ್ಯದರ್ಶಿ ಮಲ್ಲಿಕಾರ್ಜುನ ರೋಣದ,ಸಂಘಟನಾ ಕಾರ್ಯದರ್ಶಿ ಡಿ.ಪಿ.ಸಜ್ಜನ,ಖಜಾಂಚಿ ಭಾನುಕುಮಾರ ಗೀರೆಗೋಳ,ಮಹಿಳಾ ಪ್ರತಿನಿಧಿ ಮಹಾಲಕ್ಷ್ಮಿ ಪಾಟೀಲ,ಶಹಾಬಾದ ತಾಲ್ಲೂಕು ಅಧ್ಯಕ್ಷರಾದ ಎನ್.ಸಿ.ವಾರದ,ಸೇಡಂ ತಾಲ್ಲೂಕು ಅಧ್ಯಕ್ಷರಾದ ವೀರಯ್ಯ ಮಠಪತಿ,ಯಡ್ರಾಮಿ ತಾಲ್ಲೂಕು ಅಧ್ಯಕ್ಷರಾದ ಬಸವರಾಜ ಬೋರಗಿ,ಕಮಲಾಪುರ ತಾಲ್ಲೂಕು ಅಧ್ಯಕ್ಷರಾದ ಶ್ರೀಕಾಂತ ಪಾಟೀಲ,ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
    ಪ್ರಾರ್ಥನ ಗೀತೆ ಮಹಾಲಕ್ಷ್ಮಿ ಪಾಟೀಲ, ಸ್ವಾಗತ ಮಲ್ಲಿಕಾರ್ಜುನ ರೋಣದ,ನಿರೂಪಣೆ ಡಿ.ಪಿ.ಸಜ್ಜನ,ವಂದನಾರ್ಪಣೆ ಬಾನುಕುಮಾರ ಗೀರೆಗೊಳ ವಹಿಸಿದರು. ಎಂದು ಪತ್ರಿಕಾ ಪ್ರಕಟಣೆಗಾಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ಪಿ.ಸಜ್ಜನ ಅವರು ತಿಳಿಸಿದರು.

    apvc-iconPost Views: 1
  • ಜೈನ ಮುನಿಗಳಾದ ಕಾಮಕುಮಾರ ನಂದಿ ಹತ್ಯೆ ಪ್ರಕರಣ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ವಿ.ಹೆಚ್.ಪಿ ಆಗ್ರಹ

    ಕಲಬುರಗಿ…… ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಪೂಜ್ಯ ಜೈನ ಮುನಿಗಳಾದ ಕಾಮಕುಮಾರ ನಂದಿ ಅವರನ್ನು ದುಷ್ಕರ್ಮಿಗಳು ಬಬ೯ರವಾಗಿ,ಅಮಾನವೀಯವಾಗಿ ಹತ್ಯೆ ಮಾಡಿದ್ದು,ವಿಶ್ವ ಹಿಂದೂ ಪರಿಷತ್ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರಿಯ ಧಮಾ೯ಚಾಯ೯ ಸಂಪರ್ಕ ಪ್ರಮುಖರಾದ ಬಸವರಾಜ ಹಿರೇಮಠ ತಿಳಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಸಾಧು ಸಂತರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಹೇಳಿದರು.

    ಸಮಾಜಕ್ಕಾಗಿ ಬದುಕುವ ಸಾಧು ಸಂತರನ್ನು ಈ ರೀತಿ ಬಬ೯ರವಾಗಿ ಕೊಲೆ ಮಾಡಿದ್ದು,ಸಮಾಜಕ್ಕೆ ಅವಮಾನವಾದ ಸಂಗತಿಯಾಗಿದ್ದು,ಕೂಡಲೇ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಪರಿಹಾರ ನೀಡುವಲ್ಲಿಯೂ ಸಹ ಚಿಂತನೆ ಮಾಡಬೇಕು ಎಂದರು.

    ಭಾರತ ದೇಶದಲ್ಲಿರುವ ಎಲ್ಲರಿಗೂ ಸಮಾನ ಕಾನೂನು ಇರಬೇಕೆಂಬ ಉದ್ದೇಶದಿಂದ ಶೀಘ್ರವೇ ಸಮಾನ ನಾಗರೀಕ ಸಂಹಿತೆ ದೇಶದಲ್ಲಿ ಜಾರಿಗೊಳಿಸಬೇಕು. ರಾಷ್ಟದಲ್ಲಿ ಎಲ್ಲರಿಗೂ ಒಂದೆ ಕಾನೂನು ಮೂಲಕ ರಾಷ್ಟ್ರದ ಹಿತ ಕಾಪಾಡಲು ಸಮಾನ ನಾಗರೀಕ ಸಂಹಿತೆಯನ್ನು ಆದಷ್ಟು ಬೇಗ ತರಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

    ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಲಿಂಗರಾಜಪ್ಪಾ ಅಪ್ಪಾ,ವಿಭಾಗದ ಕಾಯ೯ದಶಿ೯ ಶಿವರಾಜ್ ಸಂಗೋಳಗಿ,ನಗರ ಅಧ್ಯಕ್ಷ ಶ್ರೀಮಂತ ನವಲದಿ,ನಗರ ಕಾಯ೯ದಶಿ೯ ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು.

    apvc-iconPost Views: 1
  • ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಅವರಿಗೆ ಫೋಟೋಗ್ರಾಫರ್ಸ ಅಸೋಸಿಯೇಷನ್ ವತಿಯಿಂದ ನೆನಪಿನ ಕಾಣಿಕೆ


    ಕಲಬುರಗಿ: ಇಂದು ಕಲಬುರಗಿಯಲ್ಲಿ ಐ.ಟಿ.ಬಿ.ಟಿ ಮತ್ತು ಪಂಚಾಯತ ರಾಜ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವರು. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಗಳಾದ ಶ್ರೀ ಪ್ರಿಯಾಂಕ್ ಎಮ್ ಖರ್ಗೆಜಿ ಅವರಿಗೆ ಕಲಬುರಗಿ ಜಿಲ್ಲಾ ಫೋಟೊಗ್ರಾಫರ್ಸ ಅಸೋಸಿಯೇಷನ್ ವತಿಯಿಂದ ಅದ್ಯಕ್ಷರಾದ ಬಸವರಾಜ ಸಿ ತೋಟದ ಹಾಗೂ ಅಸೋಸಿಯೇಷನ್ ಸದಸ್ಯರಾದ ಪ್ರಕಾಶ ಎಂ ಶೆರಖಾನೆ . ಅನೀಲಕುಮಾರ ಗಣೇಶಕರ್. ಗಂಗಾರಾಮ ರಾಠೊಡ ಮಂಜುನಾಥ ಜಂಬಗಿ ಆಕಾಶ ಎಸ್ ಪೂಜಾರಿ. ಶ್ರೀನಿವಾಸ ಮಡಕಿ. ಸುನೀಲ್ ಕಟ್ಟಿಮನಿ ಛಾಯಾಗ್ರಾಹಕರಾದ ಷಣ್ಮುಖ ಹಾಗೂ ಅನೇಕ ಛಾಯಾಗ್ರಾಹಕರಿಂದ ನೆನಪಿನ ಕಾಣಿಕೆ . ಪುಸ್ತಕ ನಿಡಿ ಗೌರವಿಸಲಾಯಿತು.

    apvc-iconPost Views: 1
  • ಹುಮ್ನಾಬಾದ್ :ಸಿಂಥೆಟಿಕ್ ಮಾದಕ ವಸ್ತು ಜಪ್ತಿ ಜಿಲ್ಲೆಯಲ್ಲಿಯೇ ಪ್ರಥಮ ಪ್ರಕರಣ : ಎಸ್ ಪಿ.


    ಹುಮ್ನಾಬಾದ್
    :—– ಬೀದರ್ ಜಿಲ್ಲಾಧ್ಯಂತ
    ಸಿಂಥೆಟಿಕ್ ಮಾದಕ ವಸ್ತು ಪ್ರಕರಣ ದಾಖಲಾಗಿದ್ದು, ಇದು ಜಿಲ್ಲೆಯಲ್ಲಿಯೇ ಪ್ರಥಮ ಪ್ರಕರಣ ವಾಗಿದೆ ಎಂದು ಬೀದರ್ ಜಿಲ್ಲಾ ಎಸ್ ಪಿ ಶ್ರೀ ಚನ್ನ ಬಸಣ್ಣ ಎಸ್ ಎಲ್ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹುಮ್ನಾಬಾದ್ ನಲ್ಲಿ ಈ ಪ್ರಕರಣ ಪತ್ತೆಯಾಗಿದ್ದು ,ಅಪರಾಧ ತಡೆಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದ್ದು ಹೆದ್ದಾರಿಗಳಲ್ಲಿ ಪ್ರತಿಯೊಂದು ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅಪರಾಧ ಸಂಖ್ಯೆ ಬಹುತೇಕ ಇಳಿಮುಖ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.
    ಹುಮ್ನಾಬಾದ್ ಮಾರ್ಗದಿಂದ ಹಾದುಹೋಗುವ ಮುಂಬೈಯಿಂದ ಹೈದರಾಬಾದಕ್ಕೆ ಹೋಗುತ್ತಿದ್ದ ಕಾರು ಒಂದರಲ್ಲಿ ಸಿಂಥೆಟಿಕ್ ಮಾದಕ ವಸ್ತು ಕೊಂಡೊಯ್ಯಲಾಗುತ್ತಿದೆ ಎಂದು ಖಚಿತ ಮಾಹಿತಿ ಮೇರೆಗೆ ಆಂಟಿ ನೆರಕೊಟಿಕ್ಸ್ ಕಾರ್ಡ್ ಶಿವಂಶೂ ರಜಪೂತ್ ಎಸ್‌ಪಿ ರವರ ನೇತೃತ್ವದಲ್ಲಿ ರಚಿತಗೊಂಡ ಸ್ಕಾಡ ಹಠಾತನೆ ದಾಳಿ ನಡೆಸಿ 499 ಗ್ರಾಂ ಅಂದಾಜು 49 ಲಕ್ಷ 90,000 ರೂಪಾಯಿ ಮುದ್ದೆಮಾಲು ಹಾಗೂ ಕಾರು ಎರಡು ಮೊಬೈಲ್ ಹೀಗೆ 55 ಲಕ್ಷ 8 500 ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

    apvc-iconPost Views: 50002