ವಾಲಿಬಾಲ್: ಕ್ಯಾತನಾಳ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
ಶಹಾಪುರ ನಗರದಲ್ಲಿ ನಡೆದ ಹೋಬಳಿ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ವಡಗೇರಾ ತಾಲೂಕಿನ ಕ್ಯಾತನಾಳ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಆಸ್ಪತ್ರೆಗೆ ಶಾಸಕ ಪಾಟೀಲ್ ಭೇಟಿ
ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಗುರುವಾರ ಭೇಟಿ ನೀಡಿ ಅಲ್ಲಿ ನಡೆದಿರುವ ವಿವಿಧ ಕಾಮಗಾರಿಗಳನ್ನು ಮತ್ತು ಆಸ್ಪತ್ರೆ ಕೋಣೆಗಳನ್ನು ಪರಿಶೀಲಿಸಿದರು.
ಎರಡು ಗುಂಪುಗಳ ನಡುವೆ ಹೊಡೆದಾಟ: 25 ಮಂದಿ ವಿರುದ್ಧ ಪ್ರಕರಣ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳು ಹಿಡಿದು ಹೊಡೆದಾಟ ನಡಿಸಿದ ಸಂಬಂಧ ಇಬ್ಬರನ್ನು ಬಂಧಿಸಿ, 25 ಆರೋಪಿಗಳ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೈಯ್ಯಾಳಲಿಂಗೇಶ್ವರ ಜಾತ್ರೆಯಲ್ಲಿ ಪ್ರಾಣಿ ಬಲಿ, ಮದ್ಯಪಾನ, ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೆ ಸೂಚನೆ
ಹೈಯ್ಯಾಳಲಿಂಗೇಶ್ವರ ಜಾತ್ರೆಯಲ್ಲಿ ಪ್ರಾಣಿ ಬಲಿ ಹಾಗೂ ಮದ್ಯಪಾನ ಮತ್ತು ಮದ್ಯ ಮಾರಾಟ 2025ರ ಆಗಸ್ಟ್ 9 ರಿಂದ 13ರ ಮಧ್ಯರಾತ್ರಿ ವರೆಗೆ ನಿಷೇಧ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಹೊರಡಿಸಿದ್ದಾರೆ.
ಮಾಧ್ವಾರದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟಿಸಿದ ಶಾಸಕ ಕಂದಕೂರ
ಮಾಧ್ವಾರದಂತಹ ಗ್ರಾಮೀಣ ಭಾಗದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಶಾಖೆಯನ್ನು ಆರಂಭಿಸಿದ್ದು, ಸ್ವಾಗತಾರ್ಹ ಈ ಭಾಗದ ಜನರು ಬ್ಯಾಂಕ್ ನ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ತಿಳಿಸಿದರು.
ದೂರುದಾರರಿಂದ ಪೊನ್ ಪೇ ಮೂಲಕ ಹಣ ಸ್ವೀಕರಿಸಿದ್ದ ಇಬ್ಬರು ಪೊಲೀಸರು ಅಮಾನತು.
ಯಾದಗಿರಿ : ದೂರುದಾರರಿಂದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆಯೇ ಇಬ್ಬರು ಪೊಲೀಸ್ ರನ್ನು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಸೇವೆಯಿಂದ ಅಮಾನತುಗೊಳಿಸಿದ ಪ್ರಕರಣ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪೊಲೀಸ್ ಪೇದೆಗಳಾದ ವಿಶ್ವನಾಥರಡ್ಡಿ ಮತ್ತು ಗೋಪಾಲರೆಡ್ಡಿ (ಯಾದಗಿರಿ ವಲಯ) ಎಂಬುವವರೇ…
ಗೃಹ ಸಚಿವರಾಗಿ ಅಮಿತ್ ಶಾ ಹೊಸ ದಾಖಲೆ ಸೃಷ್ಟಿ: ಕು.ಲಲಿತಾ ಅನಪುರ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ ಹೇಳಿದರು.
ಸರ್ಕಾರದ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಟಾನಗೊಳಿಸಿ : ಶಾಸಕ ಚೆನ್ನಾರಡ್ಡಿ ಪಾಟೀಲ್
ಸರ್ಕಾರದ ಯೋಜನೆಗಳು ವಿವಿಧ ಇಲಾಖೆಗಳಿಂದ ಅನುಷ್ಟಾನಗೊಳ್ಳುತ್ತಿದ್ದು, ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಎಂ ಅನ್ನಭಾಗ್ಯ’ಗೆ ಪರೋಕ್ಷವಾಗಿ ಆಹಾರ ಇಲಾಖೆ ಅಧಿಕಾರಿಗಳು ಕನ್ನ.?
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಪಡಿತರ ಅಕ್ಕಿ ಅಕ್ರಮ ಮಾರಾಟ ವ್ಯವಹಾರ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಮುಂದುವರೆದಿದೆ. ಈ ಮಧ್ಯೆ ಗ್ರಾಮಗಳಿಗೆ ತೆರಳಿ ಫಲಾನುಭವಿಗಳಿಂದ ಅನ್ನಭಾಗ್ಯದ ಅಕ್ಕಿಯನ್ನು ಕಡಿಮೆ ದರಕ್ಕೆ ಕೊಂಡುಕೊಂಡು ಹೆಚ್ಚಿನ ದರಕ್ಕೆ ಬೇರೆ ಪ್ರದೇಶಗಳಿಗೆ…
ಬೆರಳಚ್ಚಿನ ಗುರುತಿನ ಮೂಲಕ ಕುಖ್ಯಾತ ಖಧೀಮನ ಸೆರೆ ಹಿಡಿದ ಪೊಲೀಸ್ ಪಡೆ
ತಾಲೂಕಿನ ಗೋಗಿ ಹಾಗೂ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನದ ವರದಿಗಳನ್ನು ಬೆನ್ನಟ್ಟಿ ಬೆರಳಚ್ಚು ಸೇರಿದಂತೆ ವಿವಿಧ ಆಯಾಮಗಳ ಮೂಲಕ ತನಿಖೆ ಕೈಗೊಂಡು ಪ್ರಕರಣ ಭೇದಿಸಿ ನಾಲ್ಕು ಲಕ್ಷ ಹದಿನೈದು ಸಾವಿರದ ಐದುನೂರು ರೂಪಾಯಿ ನಗದು ಸೇರಿ…