Blog

  • ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಹೇಳಿದ್ದೇನು

    ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಹೇಳಿದ್ದೇನು

    ಸತ್ಯಕಾಮ ವಾರ್ತೆ ಕಲಬುರಗಿ:

    ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಇದು ಆಕ್ಸಿಜನ ಟ್ಯಾಂಕ್ ತುಂಬಿದ ನಂತರ ಅದರ ಒತ್ತಡವನ್ನು ಗ್ಯಾಸ್ ರೂಪದಲ್ಲಿ ಹೊರಹಾಕುವ ಸಾಮಾನ್ಯ ಪ್ರಕ್ರಿಯೆ ಇದಾಗಿದೆ ಎಂದು (DHO)ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

    ರವಿವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿನ ಆಕ್ಸಿಜನ್ ಪ್ಲ್ಯಾಂಟ್ ನಲ್ಲಿ ಸೋರಿಕೆಯಾಗುತ್ತಿದ್ದೆ ಎಂದು ಪಟ್ಟಣದಾದ್ಯಂತ ಸುದ್ದಿ ಹಬ್ಬಿತ್ತು.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಶುಕ್ರವಾರವಷ್ಟೆ ಆಸ್ಪತ್ರೆಯಲ್ಲಿನ 6 ಕೆ.ಎಲ್. ಸಾಮರ್ಥ್ಯದ ಟ್ಯಾಂಕಿಗೆ ವೈದ್ಯಕೀಯ ದ್ರವ ಆಮ್ಲಜನಕ ಭರ್ತಿ ಮಾಡಿದೆ. ಟ್ಯಾಂಕ್ ಸಂಪೂರ್ಣ ಭರ್ತಿಯಾದ ನಂತರ ಅದರಲ್ಲಿನ ಆಂತರಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಎ,ಬಿ,ಸಿ ಎಂಬ ವಾಲ್ ಗಳ ಮುಖೇನ ಹಂತ ಹಂತವಾಗಿ ಗ್ಯಾಸ್ ಲೀಕ್ ಮಾಡುತ್ತದೆ. ಇದಕ್ಕೆ ಯಾರು ಆತಂಕ ಪಡಬೇಕಿಲ್ಲ‌. ಇದು ಎಲ್.ಎಂ.ಓ ಟ್ಯಾಂಕ್ ನಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ.

    apvc-iconPost Views: 16
  • ಸರ್ಕಾರಿ ನೌಕರರ ಗಮನಕ್ಕೆ

    ಸರ್ಕಾರಿ ನೌಕರರ ಗಮನಕ್ಕೆ

    ಅಪರಿಚಿತ ವ್ಯಕ್ತಿ ಸರ್ಕಾರಿ ಅಧಿಕಾರಿ, ನೌಕರರಿಗೆ ಹೆದರಿಸಿ ವಂಚನೆ:

     

    ಸತ್ಯಕಾಮ ವಾರ್ತೆ ಯಾದಗಿರಿ :

    ಅಪರಿಚಿತ ವ್ಯಕ್ತಿಗಳು ಸರ್ಕಾರಿ ಅಧಿಕಾರಿ, ನೌಕರರ ಹೆಸರು ಮೊಬೈಲ್ ಸಂಖ್ಯೆಗಳನ್ನು ತಿಳಿದುಕೊಂಡು, ಮೊ.ನಂ.9156540734 ಹಾಗೂ ಇತರೆ ನಂಬರಗಳಿಂದ ಕರೆ ಮಾಡಿ ವಂಚನೆ ಮಾಡುತ್ತಿದ್ದಾನೆ ಎಂದು ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಆ್ಯಂಟನಿ ಜಾನ್ ಜೆ.ಕೆ ಅವರು ತಿಳಿಸಿದ್ದಾರೆ.

    ವಂಚನೆ ಮಾಡುವ ಅಪರಿಚಿತ ತಾನು ಡಿ.ಎಸ್.ಪಿ ಲೋಕಾಯುಕ್ತ ಬೆಂಗಳೂರು, ಕಲಬುರಗಿ, ಬೀದರ, ಅಥವಾ ಯಾದಗಿರಿ ಎಂದು ಬಿಂಬಿಸಿಕೊಂಡು ಸರ್ಕಾರಿ ಅಧಿಕಾರಿ, ನೌಕರರಿಗೆ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದೂರು ಇದೆ ಎಂದು ತಿಳಿಸಿ ತನ್ನನ್ನು ಕಾಣುವಂತೆ ನಿಗದಿತ ಸ್ಥಳಕ್ಕೆ ಬರಲು ತಿಳಿಸಿ ಅಲ್ಲದೆ ಗೂಗಲ್ ಪೇ ಅಥವಾ ಪೋನ್ ಪೇ ಅಥವಾ ಅಕೌಂಟ ನಂಬರಿಗೆ ಮೂಲಕ ಹಣ ಹಾಕಲು ಬೆದರಿಕೆ ಹಾಕುತ್ತಿರುವದು ಅಲ್ಲದೇ ಸರ್ಕಾರಿ ಅಧಿಕಾರಿಯವರಿಗೆ ಒಂದು ವೇಳೆ ತಾನು ತಿಳಿಸಿದ ಸ್ಥಳಕ್ಕೆ ಬರದೇ ಇದ್ದರೆ ನಿಮ್ಮ ಮೇಲೆ ಲೋಕಾಯುಕ್ತ ರೇಡ್ ಅಥವಾ ಟ್ಯಾಂಪ್ ಮಾಡುತ್ತೇವೆ ಅಂತಾ ಹೆದರಿಸುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ.

    ಕಾರಣ ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಅಧಿಕಾರಿ, ನೌಕರರಿಗೆ ಈ ಮೂಲಕ ಗಮನಕ್ಕೆ ಮೇಲ್ಕಂಡಂತೆ ಈ ರೀತಿಯಾಗಿ ಯಾವುದೇ ಫೋನ್ ಕರೆ ಮಾಡಿ ಲೋಕಾಯುಕ್ತ ಹೆಸರಿನಲ್ಲಿ ನಿಮ್ಮನ್ನು ಹೆದರಿಸುತ್ತಿದ್ದರೆ, ಅದನ್ನು ನಿಮ್ಮ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡು ತಕ್ಷಣದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ಈ ಬಗ್ಗೆ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಯಾದಗಿರಿ ಮೊ.ನಂ.9364062529, 08473 253802ಗೆ ಮಾಹಿತಿ ಸಲ್ಲಿಸಲು ತಿಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    apvc-iconPost Views: 245
  • ಮರೆಯಲಾಗದ ಮಣ್ಣೂರರಿಗೆ 76ನೇ ಹುಟ್ಟುಹಬ್ಬ

    ಮರೆಯಲಾಗದ ಮಣ್ಣೂರರಿಗೆ 76ನೇ ಹುಟ್ಟುಹಬ್ಬ

    ಪತ್ರಕರ್ತ ಪಿ ಎಂ ಮಣ್ಣೂರ್ ಈಗ ನೆನಪು ಮಾತ್ರ

    ವಿಶೇಷ ಲೇಖನ : ಸುರೇಶ ಕೊಟಗಿ.

    ಪತ್ರಿಕಾರಂಗದ ಅಪ್ರತಿಮ ವ್ಯಕ್ತಿತ್ವ, ಮಹಾನಚೇತನ ಶ್ರೀ ಪಿ ಎಂ ಮಣ್ಣೂರರವರು ಜುಲೈ 1 ಪತ್ರಿಕಾ ದಿನಾಚರಣೆಯಂದು ಜನಿಸಿದರು. ಅವರ ಬದುಕು ಎಲ್ಲರಿಗೂ ಆದರ್ಶಮಯವಾಗಿತ್ತು. 2023 ಜೂಲೈ 1 ಅವರ 79ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ತುಂಬಾ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸಲಾಗಿತ್ತು, ಇಂದು ಅದು ಇತಿಹಾಸ ಮಾತ್ರ.ಅನೇಕ ಗಣ್ಯರು, ಪತ್ರಕರ್ತರು, ಆಪ್ತರು ಹಾಗೂ ಮಿತ್ರರು ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಮಣ್ಣೂರ್ ರವರ ಮಾತುಗಳು ಯುವ ಜನಾಂಗಕ್ಕೆ ಪತ್ರಕರ್ತರಿಗೆ ಧೈರ್ಯ, ಸಾಮರ್ಥ್ಯ ಮತ್ತು ಸ್ಪೂರ್ತಿ ತುಂಬುವ ಅವರ ಮನದಾಳದ ಮಾತುಗಳು ಇಂದಿಗೂ ಎಲ್ಲರ ಹೃದಯದಲ್ಲಿ ಹಚ್ಚು ಹಸಿರಾಗಿದೆ. ಪತ್ರಿಕಾ ರಂಗದ ಮಹತ್ವವನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದು ಪತ್ರಿಕಾ ಮಿತ್ರರಿಗೆ ಟಾನಿಕ್ ನೀಡಿದಂತೆ ಪರಿಣಮಿಸಿತು ಆ ದಿನ.

    ಆದರೆ ದುರಾದುಷ್ಟಕರ ಜುಲೈ 1, 2024ರ ಜನ್ಮದಿನಕ್ಕೆ ಅವರಿಲ್ಲ, ಅವರ ನೆನಪು ಮಾತ್ರ. ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವನು ನಮ್ಮಿಂದ ದೂರ ಹೋದ ಮೇಲೆ ಅರ್ಥವಾಗುತ್ತದೆ. ಅವರು ತಮ್ಮ ಕೊನೆಯ ದಿನಗಳಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪ್ರತಿದಿನ ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಸತ್ಯಕಾಮ ಕಾರ್ಯಾಲಯಕ್ಕೆ ಬಂದು ಒಂದೆರಡು ಗಂಟೆ ಕಾರ್ಯಾಲಯದ ಕಾರ್ಯವನ್ನು ನೋಡಿಕೊಂಡು ಅವರ ಪುತ್ರ ಆನಂದರಿಗೆ ಪತ್ರಿಕೆಯತ್ತ ವಿಶೇಷ ಗಮನ ಹರಿಸಲು ಸೂಚಿಸುತ್ತಿದ್ದರು. ಅವರನ್ನು ಭೇಟಿಯಾಗಲು ಅವರ ಮಿತ್ರರು ಪತ್ರಕರ್ತರು ಬಂದು ಹೋಗುವ ವಾಡಿಕೆ, ಆ ಸಂದರ್ಭದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಎಂಥ ಮನುಷ್ಯರಿದ್ದರೆಂದರೆ, ಅವರ ಎದುರು ತಪ್ಪು ಮಾಡಿದ ಎಂತಹ ವ್ಯಕ್ತಿಯನ್ನು ಕ್ಷಮಿಸಿ ತಿಳಿ ಹೇಳುವ ದೊಡ್ಡ ಗುಣ ಅವರಲ್ಲಿತ್ತು. ಸತ್ಯಕಾಮ ಪತ್ರಿಕೆಯ ಸಿಬ್ಬಂದಿಗಳೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದರು. ಆದ ಕಾರಣ ಇಂದಿಗೂ ಸಿಬ್ಬಂದಿ ವರ್ಗ ಅವರೊಂದಿಗಿನ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಕಳವಳ ಪಡುತ್ತಾರೆ.

    ಇದು ಪಿ ಎಂ ಮಣ್ಣೂರ್ ರವರು ನಡೆದು ಬಂದ ದಾರಿ. ಪತ್ರಿಕೆಯ ಜವಾಬ್ದಾರಿ ಹೊರೆ ಹೊತ್ತ ಅವರ ಪುತ್ರ ಶ್ರೀ ಆನಂದ ಮಣ್ಣೂರ ರವರು ತಂದೆಯವರ ಆಶೋತ್ತರ ಗಳ ಕಡೆಗೆ ಕಾಳಜಿ ವಹಿಸುತ್ತಾ ಅಪ್ಪಾಜಿಯವರು ಪತ್ರಿಕೆಯನ್ನು ರಾಜ್ಯಮಟ್ಟದ ಪತ್ರಿಕೆಯನ್ನಾಗಿ ಮಾಡುವ ಹಿರಿಯ ಗುರಿಯಾಗಿತ್ತು. ಇದು ಅನೇಕ ಸಲ ಚರ್ಚೆಗೂ ಬಂದಿದೆ. ಅವರ ಈ ಕನಸಿನ ಸಂಕಲ್ಪ, ಜವಾಬ್ದಾರಿಯಿಂದ ನಿಭಾಯಿಸಿ ನನಗೆ ಎಷ್ಟೇ ತೊಂದರೆ ಬಂದರೂ ನನಸಾಗಿ ಮಾಡುವ ಧ್ಯೇಯ ಹೊಂದಿದ್ದೇನೆ. ಅವರು ತೀರಿ ಹೋದಾಗಿನಿಂದ ಇಲ್ಲಿಯವರೆಗೆ ಅನೇಕ ಸಮಸ್ಯೆಗಳು ಎದುರಾಗಿವೆ ಕೆಲವು ಕಾಣದ ಕೈಗಳಿಂದ ತೊಂದರೆಗಳು ಎದುರಾಗುತ್ತಿವೆ. ಪರವಾಗಿಲ್ಲ, ಅಪ್ಪಾಜಿ ಅವರು ಭೌತಿಕವಾಗಿ ನನ್ನೊಂದಿಲ್ಲದಿದ್ದರೂ ಅವರ ಕೃಪಾಶೀರ್ವಾದ ದಿವ್ಯ ಚೇತನ ಶಕ್ತಿ ನನ್ನೊಂದಿಗೆ ಇದೆ ಬರುವ ಎಲ್ಲಾ ಸಮಸ್ಯೆಗಳಿಗೂ ಎದೆ ತಟ್ಟಿ ನಿಂತು ಪರಿಹಾರ ಕಂಡುಕೊಳ್ಳುವೆ. ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾ ನನಗೆ ಬೆನ್ನೆಲುಬಾಗಿ ಸಮಾಜದ ಶಕ್ತಿ, ಸ್ವತಹ ಜನರೇ ಬೆಂಬಲಕ್ಕೆ ನಿಂತಿದ್ದಾರೆ.

    ಪ್ರಿಂಟ್ ಮೀಡಿಯಾದಲ್ಲಿ ಸಾಕಷ್ಟು ಸಾಧನೆ ಮಾಡಿದ ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲೂ, ಸಾಮಾಜಿಕ ರಾಜಕೀಯ ಸಮಸ್ಯೆಗಳ ಬಗ್ಗೆ ಸಾಕಷ್ಟು ಸತ್ಯ ಸುದ್ದಿಗಳನ್ನು ಬಯಲಿಗೆಳೆದು ಗುಣಮಟ್ಟದ ಲೇಖನಗಳು ಹಾಗೂ ಸುದ್ದಿಗಳನ್ನು ಪ್ರಕಟಗೊಳಿಸುತ್ತಿರುವುದು ವಿಸ್ಮಯ. ರಾಜಕೀಯ ಮತ್ತು ಆಡಳಿತದ ಅವ್ಯವಸ್ಥೆಯಾಗರಕ್ಕೆ ಕನ್ನಡಿ ಹಿಡಿದಂತಾಗಿದೆ. ಸಮಾಜದ ಜಾಗೃತಿಗೆ ಪತ್ರಿಕೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಶ್ರಮಿಸುವೆ, ಇದೇ ನನ್ನ ದೃಢ ವಿಶ್ವಾಸ ವೀರ ಸಂಕಲ್ಪ ಎಂದು ಹೇಳಿದರು.

    apvc-iconPost Views: 20
  • ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಕೋರಿ ಕೇಂದ್ರಕ್ಕೆ ಪತ್ರ ಬರೆದ ಸಚಿವ ಶರಣಪ್ರಕಾಶ್ ಪಾಟೀಲ್

    ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಕೋರಿ ಕೇಂದ್ರಕ್ಕೆ ಪತ್ರ ಬರೆದ ಸಚಿವ ಶರಣಪ್ರಕಾಶ್ ಪಾಟೀಲ್

    • >ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರಿಗೆ ಪತ್ರ 
    • >ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಎನ್ ಆರ್ ಐ ಕೋಟಾ ಕೊಡಿ
    • >508 ಸೂಪರ್ ನ್ಯೂಮೆರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರುಮಾಡುವಂತೆ ಕೇಂದ್ರಕ್ಕೆ ಒತ್ತಾಯ

    ಸತ್ಯಕಾಮ ವಾರ್ತೆ ಬೆಂಗಳೂರು:

    ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಅನಿವಾಸಿ ಭಾರತೀಯ (ಎನ್ ಆರ್ಐ) ಕೋಟಾ ಆರಂಭಿಸಲು ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಪತ್ರ ಬರೆದಿದೆ.

    ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಅಧ್ಯಕ್ಷರಿಗೆ ಈಕುರಿತು ಪತ್ರ ಬರೆದಿದ್ದು, ರಾಜ್ಯದಲ್ಲಿರುವ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ 508 ಹೆಚ್ಚುವರಿ ಸೂಪರ್ ನ್ಯೂಮರರಿ (supernumerary) ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಮೂಲಕ ಶೇ 15ರಷ್ಟು ಎನ್ಆರ್ ಐ ಕೋಟಾ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.

    ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಯುಜಿ-ಎಂಬಿಬಿಎಸ್ ವಾರ್ಷಿಕ ಮಂಜೂರಾದ ಸೀಟುಗಳ ಮೇಲೆ ಹೆಚ್ಚುವರಿ ಸೀಟುಗಳನ್ನು ರಚಿಸುವುದು ಸೂಪರ್ ನ್ಯೂಮರರಿ ಉದ್ದೇಶವಾಗಿದೆ. ಪ್ರಸ್ತಕ ವೈದ್ಯಕೀಯ ಶಿಕ್ಷಣ ಇಲಾಖೆಯಡಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು 2023-24ನೇ ಸಾಲಿನಲ್ಲಿ 3,450 ಸೀಟುಗಳ ಸಾಮಥ್ರ್ಯವನ್ನು ಹೊಂದಿದ್ದು ಅದರಲ್ಲಿ 85% (2929 ಸೀಟುಗಳು) ಕರ್ನಾಟಕ ಕೋಟಾ ಮತ್ತು 521 ಅಂದರೆ15% ಅಖಿಲ ಭಾರತ ಕೋಟಾ ಆಗಿದೆ.

    ಈಗಾಗಲೇ ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.7-15ರಷ್ಟು ಎನ್ ಆರ್ ಐ ಕೋಟಾವನ್ನು ನೀಡಿರುವ, ನಿದರ್ಶನಗಳನ್ನು ಹಾಗು ಈ ರಾಜ್ಯಗಳು ಎನ್ ಆರ್ ಐ ವಿದ್ಯಾರ್ಥಿಗಳಿಗೆ ವಾರ್ಷಿಕ 75,000 ಡಾಲರ್ ದಿಂದ 100,000 ಡಾಲರ್ ಗಿಂತ ಹೆಚ್ಚು ಶುಲ್ಕ ವಿಧಿಸಿರುವುದ್ದನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಬಜೆಟ್ ಹಂಚಿಕೆ, ವಿದ್ಯಾರ್ಥಿಗಳ ಶುಲ್ಕ, ಕೇಂದ್ರ ಮತ್ತು ರಾಜ್ಯಅನುದಾನಗಳು ಮತ್ತು ಇತರ ದೇಣಿಗೆಗಳ ಹೊರತಾಗಿಯೂ ರಾಜ್ಯದ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಹಣದ ಕೊರತೆಯನ್ನು ಎದುರಿಸುತ್ತಿವೆ ಎಂದು ಪಾಟೀಲ್ ಪತ್ರದಲ್ಲಿ ಹೇಳಿದ್ದಾರೆ.

    ಕರ್ನಾಟಕದಲ್ಲಿ ಎನ್ ಆರ್ ಐ ಕೋಟಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಅನುಮತಿಯಿದ್ದು, ಪ್ರತಿ ವಿದ್ಯಾರ್ಥಿ ವಾರ್ಷಿಕ 1 ಕೋಟಿ ರೂ ಯಿಂದ 2.5 ಕೋಟಿ ರೂ. ಕೋರ್ಸ್ ಶುಲ್ಕ ಪಾವತಿಸಬೇಕಾಗುತ್ತದೆ. ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಜಾರಿಯಾದಲ್ಲಿ ವಿದ್ಯಾರ್ಥಿಗೆ ವಾರ್ಷಿಕ ರೂ. 25 ಲಕ್ಷ ಶುಲ್ಕ ನಿಗದಿಪಡಿಸಬಹುದು, ಇದು ವೈದ್ಯಕೀಯ ಶಿಕ್ಷಣ ಇಲಾಖೆಗೆ ಮೊದಲ ವರ್ಷಕ್ಕೆ 127 ಕೋಟಿ ರೂ ಮತ್ತು 5ನೇ ವರ್ಷಕ್ಕೆ 571.5 ಕೋಟಿ ರೂ. ಸಂದಾಯವಾಗುತ್ತದೆ. ಈ ಸಂಸ್ಥೆಗಳನ್ನು ಶ್ರೇಷ್ಠತೆಯ ಕೇಂದ್ರವನ್ನಾಗಿ ಮಾಡಲು, ಗುಣಮಟ್ಟದ ಶಿಕ್ಷಣ, ತರಬೇತಿ, ನಿರ್ವಹಣೆ, ವೈದ್ಯಕೀಯ ಉಪಕರಣಗಳು, ಔಷಧಗಳ ಖರೀದಿ, ರೋಗಿಗಳ ಹೊರೆ ನಿರ್ವಹಣೆ, ಮೂಲಸೌಕರ್ಯ ಸುಧಾರಣೆ, ಅಧ್ಯಾಪಕರ ಸಾಮರ್ಥ್ಯ ಮತ್ತು ಸಂಶೋಧನೆಗೆ ಎನ್‌ಆರ್‌ಐ ಕೋಟಾದ ಮೂಲಕ ಹೆಚ್ಚುವರಿ ಹಣದ ಅಗತ್ಯವಿದೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ.

    ಲಭ್ಯವಿರುವ ವಾರ್ಷಿಕ ಸೀಟುಗಳ ಒಳಗೆ ಎನ್ ಆರ್ ಐ ಕೋಟಾವನ್ನು ರಚಿಸುವುದು ಕಾರ್ಯಸಾಧ್ಯವಲ್ಲ. ಹಾಗೆ ಮಾಡಿದರೆ ಬಡವರು ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕಡಿಮೆ ಸೀಟು ಸೃಷ್ಟಿಯಾಗುತ್ತವೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ನಾವು ವಿರೋಧ ಎದುರಿಸಬೇಕಾಗುತ್ತದೆ ಎಂದು ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ರಾಜ್ಯದಲ್ಲಿರುವ ಸರ್ಕಾರಿ ಪಶು ವೈದ್ಯಕೀಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು 15% ಎನ್ ಆರ್ ಐ ಕೋಟಾವನ್ನು ಹೊಂದಿವೆ. ಎನ್ ಆರ್ ಐ ಕೋಟಾದಿಂದ ಈ ವಿಶ್ವವಿದ್ಯಾಲಯಗಳು ಉತ್ತಮ ಸೌಲಭ್ಯಗಳು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಹಾಯ ಮಾಡುತ್ತವೆ ಎಂದು ಯುಜಿಸಿ ಅಧ್ಯಕ್ಷರಿಗೆ ಸಚಿವರು ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

    2025-26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% ಎನ್ ಆರ್ ಐ ಕೋಟಾವನ್ನು ಪ್ರಾರಂಭಿಸಲು ರಾಜ್ಯದ ಪ್ರಸ್ತಾವನೆಗೆ ಅನುಮತಿ ಸಿಗುತ್ತದೆ ಎಂಬ ಭರವಸೆಯನ್ನು ಶರಣಪ್ರಕಾಶ್ ಪಾಟೀಲ್ ವ್ಯಕ್ತಪಡಿಸಿದ್ದಾರೆ.

     

    apvc-iconPost Views: 38
  • ಬಡಜನರ ಸಮಸ್ಯೆ ಅಂತಃಕರಣದಿಂದ ಪರಿಹರಿಸಿ: ಜಿಲ್ಲಾಡಳಿತಕ್ಕೆ ಒತ್ತಾಯಿಸಿದ ನಟ

    ಬಡಜನರ ಸಮಸ್ಯೆ ಅಂತಃಕರಣದಿಂದ ಪರಿಹರಿಸಿ: ಜಿಲ್ಲಾಡಳಿತಕ್ಕೆ ಒತ್ತಾಯಿಸಿದ ನಟ

    • ಶಾಸ್ತಿçನಗರ ಮದನಪುರ ಸ್ಲಂ ನಿವಾಸಿಗಳ ಹೋರಾಟದ 220ನೇ ದಿನಕ್ಕೆ ಚಿತ್ರನಟ ಚೇತನ ಅಹಿಂಸಾ ಭೇಟಿ; ಬೆಂಬಲ

    ಯಾದಗಿರಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಕಳೆದ 7 ತಿಂಗಳಿನಿAದ ನಡೆಸುತ್ತಿರುವ ಹೋರಾಟದ 220ನೇ ದಿನವಾದ ಶನಿವಾರ ಸಾಮಾಜಿಕ ಚಿಂತಕ, ಚಿತ್ರನಟ ಚೇತನ ಅಹಿಂಸಾ ಭೇಟಿ ನೀಡಿ ಸಮಸ್ಯೆ ಆಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ವೀರಭಾರತಿ [ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಶಾಸ್ತಿçನಗರದಲ್ಲಿ ವಾಸಿಸುತ್ತಿರುವ ಬಡವರು ಕೂಲಿಕಾರರು ಕಳೆದ 70 ವರ್ಷಕ್ಕೂ ಹಿಂದಿನಿAದ ಸರ್ಕಾರಿ ಜಾಗೆಯಲ್ಲಿಯೇ ವಾಸಿಸುತ್ತಿದ್ದು ಹಕ್ಕು ಪತ್ರ ನೀಡುವಂತೆ ಮಾಡಿದ ಹೋರಾಟ ನಿರಂತರವಾಗಿ ನಡೆಯುತ್ತಿದೆ ಆದರೆ ಭೂಮಾಫಿಯಾದವರ ಕಪಿಮುಷ್ಟಿಯಿಂದ ಸತ್ಯ ಹೊರಬರದೆ ಜನತೆಗೆ ಅನ್ಯಾಯವಾಗುತ್ತಿದೆ.

    ಬಡ ಜನತೆಯ ಬಳಿ ಭೂಮಾಫಿಯಾದವರು ಷಡ್ಯಂತ್ರ ಮಾಡಿ ನಗರಸಭೆಗೆ ಎಸ್.ಎ.ಎಸ್ ತೆರಿಗೆ ಪಾವತಿಸುವ ವೇಳೆ ಪಕ್ಕದ ಖಾಸಗಿ ಜಮೀನು ಸರ್ವೇ ನಂ.ನ್ನು ಬರೆÀದು ತುಂಬಿಸಿಕೊAಡು ವಂಚಿಸಲಾಗಿದೆ ಇದರಲ್ಲಿ ಭೂ ಮಾಫಿಯಾಗಳ ಕೈವಾಡವಿದೆ ಎಂದು ಹೇಳಿ ಸಮಸ್ಯೆಯನ್ನು ವಿವರಿಸಿದರು.

    ನಟ ಚೇತನ ಅಹಿಂಸಾ ಅವರು ಮಾತನಾಡಿ, ಬಡಜನರು ಮಳೆ, ಚಳಿ, ಬಿಸಿಲು ಎನ್ನದೆ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾಡಳಿತ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಬೇಕು ಎಂದು ಹೇಳಿದರು.

    ಸುಮಾರು 50 ವರ್ಷಗಳಿಂದ ಸ್ಥಳದಲ್ಲಿ ವಾಸಿಸುತ್ತಿರುವ ಬಡ ಕೂಲಿಕಾರ ಜನಗಳಿಗೆ ಅವರ ಬೇಡಿಕೆ ಈಡೇರಿಸಲು ಹಿಂದೇಟು ಹಾಕಬಾರದು ಎಂದು ಒತ್ತಾಯಿಸಿದ ಅವರು ಜಿಲ್ಲಾಧಿಕಾರಿಗಳು ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು ಬಡಜನತೆಯ ಗೋಳು ಪರಿಹರಿಸಲು ಮುಂದಾಗಬೇಕೆAದು ನುಡಿದರು.

    ಸುದೀರ್ಘ ಕಾಲದಿಂದ ವಾಸವಾಗಿರುವ ಸ್ಥಳದ ಬಗ್ಗೆ ಒಂದು ನಿರ್ಣಯಕ್ಕೆ ಬರಲು ಆಗುವುದಿಲ್ಲ ಎಂದರೆ ಸ್ಥಳೀಯ ಆಡಳಿತ ಹಾಗೂ ಸಂಬAಧಪಟ್ಟವರು ಜನತೆಯ ಅಹವಾಲು ಆಲಿಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಅವರು ನುಡಿದರು.

    ತದನಂತರ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರನ್ನು ಭೇಟಿ ಮಾಡಿ ಬಡ ಜನತೆಯ 220 ದಿನಗಳ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

    ಈ ಕುರಿತು ಜಿಲ್ಲಾಧಿಕಾರಿಗಳಿಗೂ ಮಾತನಾಡುವುದಾಗಿ ತಿಳಿಸಿದ ಅವರು ಜನಪ್ರತಿನಿಧಿಗಳು ಜಿಲ್ಲಾಡಳಿತ ನಗರಾಡಳಿತಗಳು ಶಾಸ್ತಿçನಗರ ಜನಗಳ ನೋವಿಗೆ ಸ್ಪಂದಿಸಬೇಕೆAದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ರಂಗನಾಥ ಬಾಗ್ಲಿ, ಸೈದಪ್ಪ ಕೂಲೂರು, ಗಿರೀಶ ಚಟ್ಟೇರಕರ್, ರಮೇಶ ಕಟ್ಟಿಮನಿ ಸೇರಿದಂತೆ ಶಾಸ್ತಿçನಗರ ನಿವಾಸಿಗಳಾದ ಗೌರಮ್ಮ, ವಿಜಯಲಕ್ಷಿö್ಮÃ, ಗಂಗಮ್ಮ, ಮಹೆಬೂಬಿ, ಖಾಜಾಬಿ ಇನ್ನಿತರರು ಉಪಸ್ಥಿತರಿದ್ದರು.

    apvc-iconPost Views: 29
  • ಕಲಿಕೆಯ ಜೊತೆಗೆ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಿ – ಸಿದ್ದಪ್ಪ ಹೊಟ್ಟಿ

    ಕಲಿಕೆಯ ಜೊತೆಗೆ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಿ – ಸಿದ್ದಪ್ಪ ಹೊಟ್ಟಿ

    ಸತ್ಯಕಾಮ ವಾರ್ತೆ ಶಹಾಪುರ: 
    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನ್ಯ ಭಾಷೆಗಳ ಕಲಿಕೆಯ ಜೊತೆಗೆ ನಮ್ಮ ಕನ್ನಡದ ಭಾಷಾಭಿಮಾನ ಬೆಳೆಸಿಕೊಳ್ಳುವುದು ಅತ್ಯಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ ಹೇಳಿದರು.

    ತಾಲೂಕಿನ ರಸ್ತಾಪುರ ಸರಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿರುವ “ಮಾತೃ ಭಾಷೆ ಮತ್ತು ಶಿಕ್ಷಣ” ಎಂಬ ವಿಚಾರ ಸಂಕಿರಣ ಹಾಗೂ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು,ನಮ್ಮ ಮಾತೃಭಾಷೆ ಕನ್ನಡವಾಗಿರುವುದರಿಂದ ಸ್ವಾಭಿಮಾನಕ್ಕಾಗಿ ಇಂದು ನಾವು ನೀವೆಲ್ಲರೂ ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ನುಡಿದರು.

    ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆ:ಗಂಗಾಧರ ಸ್ವಾಮೀಜಿ ಅಭಿಮತ

    ಮಾತೃಭಾಷೆ ಮತ್ತು ಶಿಕ್ಷಣ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಡಾ. ಸುಭಾಷ್ ಚಂದ್ರ ಕೌಲಗಿ ಮಾತನಾಡುತ್ತಾ,ಪ್ರಾಥಮಿಕ ಹಂತದಲ್ಲಿ ಮಗುವಿಗೆ ಮಾತೃಭಾಷೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು,ಜಾಗತೀಕರಣದ ಪ್ರಭಾವಕ್ಕೆ ಕನ್ನಡವು ಸೇರಿದಂತೆ ಹಲವು ಭಾಷೆಗಳು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು,ಮಾತೃಭಾಷೆಯಲ್ಲಿ ಮಗುವಿಗೆ ಶಿಕ್ಷಣವನ್ನು ನೀಡಿದಾಗ ಬಹುಬೇಗ ವಿಷಯವನ್ನು ಗ್ರಹಿಸುವುದಲ್ಲದೆ ಕಲಿಕೆಯಲ್ಲಿ ಮುಂದುವರೆಯುವುದಕ್ಕೆ ಸಹಾಯವಾಗುತ್ತದೆ ಎಂದರು.

    VIDEO:ಯಾದಗಿರಿ:ಭಾರತೀಯ ವೈದ್ಯಕೀಯ ಸಂಘದಿಂದ ಜುಲೈ ೦೧ ರಂದು ವೈದ್ಯರ ದಿನಾಚರಣೆ ಕಾರ್ಯಕ್ರಮ|| ಡಾ.ಭಗವಂತ ಅನ್ವಾರ್||SATYAKAM

    ಕನ್ನಡ ಕಲಿಕೆಯನ್ನು ಮೈಗೂಡಿಸಿಕೊಂಡಿದ್ದೆ ಆದರೆ ನಮ್ಮೊಳಗೆ ಅಂತರಂಗದ ಅರಿವು ಉತ್ತಮಗೊಳ್ಳುವುದಲ್ಲದೆ, ಭಾವನಾತ್ಮಕ ಸಂಬಂಧಗಳು ಬೆಸೆಯುವುದರ ಜೊತೆಗೆ ವ್ಯಕ್ತಿತ್ವದ ವಿಕಾಸನಕ್ಕೆ ಪೂರಕವಾಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ: ರವೀಂದ್ರನಾಥ್ ಹೊಸಮನಿ ಮಾತನಾಡಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಶಂಕರ್ ರೆಡ್ಡಿ,ಸುರೇಶಕುಮಾರ,ದೈಹಿಕ ಶಿಕ್ಷಕ ಚಂದ್ರಶೇಖರ್ ವೈದ್ಯ,ಸೇರಿದಂತೆ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸತ್ಕರಿಸಲಾಯಿತು,

    ಬಡಜನರ ಸಮಸ್ಯೆ ಅಂತಃಕರಣದಿಂದ ಪರಿಹರಿಸಿ: ಜಿಲ್ಲಾಡಳಿತಕ್ಕೆ ಒತ್ತಾಯಿಸಿದ ನಟ

    ಈ ಸಮಾರಂಭದ ವೇದಿಕೆಯ ಮೇಲೆ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತರಾಯ ಸೋಂಪುರ, ಸಗರ ವಲಯ ಕಸಾಪ ಅಧ್ಯಕ್ಷ ಡಾ: ದೇವೇಂದ್ರಪ್ಪ ಹಡಪದ,ಗೌರವ ಕಾರ್ಯದರ್ಶಿ ಸುರೇಶಬಾಬು ಅರುಣಿ, ಶ್ರೀಕಾಂತ ಜುಗೇರಿ, ಅಯ್ಯಾಳಪ್ಪ,ಚಂದ್ರಶೇಖರ್ ಪತ್ತಾರ,ಮುಂತಾದವರು ಉಪಸ್ಥಿತರಿದ್ದರು,ಶಾಲೆಯ ಮುಖ್ಯ ಗುರುಗಳಾದ ವಾಣಿಶ್ರೀ ಅಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ರವಿಕಾಂತ್ ಸ್ವಾಗತಿಸಿದರು ಮಾನಪ್ಪ ನಿರೂಪಿಸಿದರು ಶರಣಬಸಪ್ಪ ವಂದಿಸಿದರು,

    apvc-iconPost Views: 30
  • ಅರಣ್ಯ ಸಚಿವರ ಪ್ರವಾಸ

    ಅರಣ್ಯ ಸಚಿವರ ಪ್ರವಾಸ

    ಕಲಬುರಗಿ: ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅವರು ಜುಲೈ 1 ರಂದು ಬೀದರ ನಿಂದ ರಸ್ತೆ ಮಾರ್ಗವಾಗಿ ಕಲಬುರಗಿ ನಗರಕ್ಕೆ ಮಧ್ಯಾಹ್ನ 2 ಗಂಟೆಗೆ ಆಗಮಿಸುವರು.

    ಅಂದು ಮಧ್ಯಾಹ್ನ 2.30 ಗಂಟೆಗೆ ಕಲಬುರಗಿಯ ಕೆ.ಕೆ.ಆರ್.ಡಿ.ಬಿ ಕಚೇರಿ ಸಭಾಂಗಣದಲ್ಲಿ ನಡೆಯುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಭಾಗವಹಿಸುವ ಸಚಿವರು, ಸಂಜೆ 7 ಗಂಟೆಗೆ ರಸ್ತೆ ಮೂಲಕ ಹೈದ್ರಾಬಾದ್ ಗೆ ಪ್ರಯಾಣಿಸುವರು.

    apvc-iconPost Views: 2
  • ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆ:ಗಂಗಾಧರ ಸ್ವಾಮೀಜಿ ಅಭಿಮತ

    ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆ:ಗಂಗಾಧರ ಸ್ವಾಮೀಜಿ ಅಭಿಮತ

    ಸತ್ಯಕಾಮ ವಾರ್ತೆ ಯಾದಗಿರಿ:
    ಆಧುನಿಕ ಯುಗದಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಿರುವುದು ವಿಶೇಷವಾಗಿದೆ ಇಂತಹ ವಿವಾಹಗಳು ಹೆಚ್ಚಾಗಿ ನಡೆಯುವದರಿಂದ  ಬಡತನ ಕುಟುಂಬಗಳಿಗೆ ಹಣ ಉಳಿತಾಯವಾಗಿ  ಸಾಲದ ಹೊರೆ ತಪ್ಪುತ್ತದೆ ಎಂದು ಗಂಗಾಧರ ಮಹಾಸ್ವಾಮಿಗಳು ಸದ್ಗುರು ವಿಶ್ವಾರಾಧ್ಯ ಮಹಾ ಸಂಸ್ಥಾನ ಮಠ ಅಬ್ಬೆ ತುಮಕೂರು ಶ್ರೀಗಳು ನುಡಿದರು.
    ನಗರದ ಹೈದರಾಬಾದ್ ರಸ್ತೆ ಸಮೀಪದ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಯುವ ಬ್ರಿಗೇಡ್ ಹಾಗೂ ಹರ್ಷವರ್ಧನ್ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಅಣಬಿ, ಇವರ ಸಂಯುಕ್ತಾಶ್ರಯದಲ್ಲಿ ನಡೆದ 21 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು ಇತ್ತೀಚಿನ ದಿನಗಳಲ್ಲಿ ಪೋಷಕರು ನಿಶ್ಚಯಿಸಿದ ಮದುವೆಗಳೇ ನಡೆಯುವುದೇ ಕಡಿಮೆಯಾಗಿದೆ ಅಂತದರಲ್ಲಿ ಸಾಮೂಹಿಕ ವಿವಾಹಗಳನ್ನು ಅದು ಉಚಿತವಾಗಿ ಏರ್ಪಡಿಸುವುದು ತುಂಬಾ ಜವಾಬ್ದಾರಿ ಕಾರ್ಯ ಮಾಡುವ ಅತ್ಯಂತ ಪುಣ್ಯದ ಕೆಲಸವಾಗಿದೆ ಎಂದು ನುಡಿದರು.
    ವೇದಿಕೆಯ ಮೇಲೆ ದಿವ್ಯ ಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಶ್ರೀ  ಶಾಂತ ವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು  ಖಾಸ ಮಠ ಗುರುಮಠಕಲ್ ಸಾಮೂಹಿಕ ವಿವಾಹ ಎಂದರೆ ಅದು ಸಾಮರಸ್ಯ ಸಾರುವ ವಿವಾಹವಾಗಿವೆ, ಇಂತಹ ವಿವಾಹ ಏರ್ಪಾಟುಗಳು ವಿರಳಾತಿ ವಿರಳವಾಗಿವೆ ವಿವಾಹ ಏರ್ಪಾಟುಗಳು ಉಚಿತವಾಗಿ ಏರ್ಪಡಿಸುವುದು ತುಂಬಾ ಶ್ಲಾಘನೀಯ ಕಾರ್ಯ ಎಂದು ನುಡಿದರು.
    ಮತ್ತೊರ್ವ ಶ್ರೀಗಳಾದ  ಶ್ರೀ ಜ್ಞಾನ ಪ್ರಕಾಶ ಸ್ವಾಮಿ ಉರಿಲಿಂಗ ಪೆದ್ದಿ ಮಹಾ ಸಂಸ್ಥಾನ ಮಠ ಮೈಸೂರು ಶ್ರೀಗಳು ರಾಜ್ಯದಲ್ಲಿ ಹಿಂದುಳಿದ ಪ್ರದೇಶಗಳ ಪೈಕಿ ಯಾದಗಿರಿ ಜಿಲ್ಲೆಯೂ ಒಂದಾಗಿದ್ದು ಇಂತಹ ಜಿಲ್ಲೆಯಲ್ಲಿ ಇಂತಹ ವಿವಾಹ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಸಮಾನತೆ ಸಂದೇಶ ಸಾರುವ ಜೋತೆ ಜೋತೆಗೆ ಬಡತನ ನಿರ್ಮೂಲನೆ ಮಾಡುವ ಜೋತೆ ಜೋತೆಗೆ ಬಡ ಕುಟುಂಬಗಳಿಗೆ ಹಣದ ಉಳಿತಾಯವಾಗಿ ತಂದೆ ತಾಯಿಯರಿಗೆ ಇರುವ ಭಾರವನ್ನು ಇಳಿಸುವ ಮಹಾ ಕಾರ್ಯ  ಇಲ್ಲಿ ಆಯೋಜಿಸಿರುವ ತಂಡಕ್ಕೆ ಸಲ್ಲುತ್ತದೆ ಎಂದರು.
    ಶ್ರೀ ಸಿದ್ದರಾಮ ಶಿವಯೋಗಿಗಳು ಉರಿಲಿಂಗ ಪೆದ್ದಿ ಮಹಾ ಸಂಸ್ಥಾನ ಮಠ ಮುಡುಕುತೊರೆ ಶ್ರೀ ಗಳು ನವ ವಿವಾಹಿತ ವಧು ವರರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರತಿ ಜೋಡಿಗಳಿಗೆ ಶುಭ ಹಾರೈಸಿ ಆಶೀರ್ವಾದ ನೀಡಿದರು.
    ಕಾರ್ಯಕ್ರಮದಲ್ಲಿ ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಚಲನಚಿತ್ರ ನಟ ಚೇತನ್ ಅಹಿಂಸಾ,ಡಿ ಎಸ್ ರಾಜಗೋಪಾಲ್, ರಾಜ್ಯಾಧ್ಯಕ್ಷ ಭೀಮ ಆರ್ಮಿ ಭಾರತ ಏಕ್ತಾ ಮಿಶನ್ ಬೆಂಗಳೂರು, ಜಿಲ್ಲಾ ಗೌರವ ಅಧ್ಯಕ್ಷ ಚಂದ್ರಕಾಂತ ಮಾಸ್ಟರ್,ಸವ್ಯಸಾಚಿ ಡಾ.ಜಿ, ಪರಮೇಶ್ವರ್ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷ ಬಸ್ಸು ನಾಟೇಕರ್, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಪ್ರಭು ಬುಕ್ಕಲ್ ರಾಜು ಅಣಬಿ, ಹರ್ಷವರ್ಧನ್ ಗ್ರಾ,ಸೇ,ಸ. ಯುವ ಮುಖಂಡ ಅನೀಲ್ ಕುಮಾರ್ ಹೆಡಿಗಿಮದ್ರಾ, ಸೈದಪ್ಪ ಕೂಲುರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    apvc-iconPost Views: 28
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು:ಅಮೀನರಡ್ಡಿ ಯಾಳಗಿ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು:ಅಮೀನರಡ್ಡಿ ಯಾಳಗಿ

    • ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ಜಿಲ್ಲಾ ಘಟಕದಿಂದ ಬೃಹತ್‌ ಪ್ರತಿಭಟನೆ

     

    ಸತ್ಯಕಾಮ ವಾರ್ತೆ ಯಾದಗಿರಿ:-

    ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ 187 ಕೋಟಿ ರೂ.ಹಗರಣಕ್ಕೆ ಸಂಬಂಧಿಸಿದಂತೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್‌ ಪ್ರತಿಭಟನೆ ನಡೆಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ಮಾತನಾಡಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ.ಹಗರಣಕ್ಕೆ ಸಂಬಂಧಿಸಿದಂತೆ ಕೂಡಲೇ ನೈತಿಕ ಹೊಣೆ ಹೊತ್ತು, ಸಿ.ಎಂ.ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ಈ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ನಾಯಕರು ಬೀದಿಗಿಳಿದು ಹೋರಾಟ ನಡೆಸಿದ ಹಿನ್ನೆಲೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದು, ನವರ ತಲೆದಂಡವಾದರೆ ಸಾಲದು, ಈ ಹಗರಣದ ಕಿಂಗ್ ಪಿನ್ ಯಾರು ಎಂಬುದು ಬಯಲಾಗಬೇಕು, ಆತ್ಮಹತ್ಯೆ ಮಾಡಿಕೊಂಡ ಕಚೇರಿ ಅಧೀಕ್ಷಕ ಚಂದ್ರಶೇಖರ ಕುಟುಂಬಕ್ಕೆ ನ್ಯಾಯ ಸಿಗಬೇಕು, ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅನುಮಾನವಿದೆ, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಕೇವಲ ಭ್ರಷ್ಟಾಚಾರ ಅಲ್ಲ ಇದು, ಬುಡಕಟ್ಟು ಸಮುದಾಯಗಳ ಹಣವನ್ನು ಕಳ್ಳತನ ಮಾಡಿದ ಸರ್ಕಾರವಿದು, ಇದರ ಕಿಂಗ್ ಪಿನ್ ಯಾರು ಎಂಬುದು ತನಿಖೆಯಾಗಬೇಕು ಎಂದಿದ್ದಾರೆ.

    ಬಿಜೆಪಿ ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಯಂಕ್ಷಿಂತಿ ಮಾತನಾಡಿದ ಅವರು ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಹೈದರಾಬಾದ್ ಮೂಲದ ವಿವಿಧ ಕಂಪೆನಿಗಳಿಗೆ ಹಣ ವರ್ಗಾಯಿಸಿ, ಅಲ್ಲಿಂದ ಹಣ ಡ್ರಾ ಮಾಡಿ, ಲೋಕಸಭೆ ಚುನಾವಣೆಗೆ ಬಳಸಿದ್ದು ಹಣ ದುರುಪಯೋಗ ಆಗಿದೆ ಹಾಗೂ ಬಾರ್‌ನಲ್ಲಿ ಕುಳಿತು ಕುಡಿದ ಬಿಲ್ ನಿಗಮದ ಹಣ ನೀಡಿ ದುರುಪಯೋಗ ಮಾಡಿದ್ದಾರೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕು.ಲಲಿತಾ ಅನಪುರ, ನಾಗರತ್ನ ಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ,ಪರುಶುರಾಮ ಕುರಕುಂದಿ,ಮೆಲಪ್ಪ ಗುಳಗಿ,ದೆವಿಂದ್ರನಾಥ ನಾದ,ವೆಂಕಟರಡ್ಡಿ ಅಬ್ಬೆತುಮಕೂರು,ಬಸವರಾಜ ವಿಭೂತಿಹಳ್ಳಿ,ದೇವರಾಜ ನಾಯಕ, ನಗರಸಭೆ ಸದಸ್ಯ ವಿಲಾಸ ಪಾಟೀಲ್ ಮತ್ತು ಸ್ವಾಮಿದೇವ ದಾಸನಕೇರಿ, ಶ್ರೀದೇವಿ ಶೆಟ್ಟಿಹಳ್ಳಿ,ಮಂಜುನಾಥ ಜಡಿ, ವೀಣಾ ಮೋದಿ, ಶಂಕರ್ ಕರಣಗಿ,

    ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಶಹಾಪುರ ಮಂಡಲ ಅಧ್ಯಕ್ಷ ಚಂದ್ರಶೇಖರ ಕಂಬಾರ, ಮಲ್ಲಿಕಾರ್ಜುನ ಕಟ್ಟಿಮನಿ,ಕರಬಸಪ್ಪ ಬಿಳಾರ, ಗೋವಿಂದಪ್ಪ ಖಾನಾಪುರ, ಶಿವು ಕೊಂಕಲ,ರಾಜು ಸ್ವಾಮಿ ಅಲಂಪಲ್ಲಿ, ಪ್ರಭಾವತಿ ಕಲಾಲ,ಭೀಮಬಾಯಿ ಶೆಂಡಿಗಿ, ಮಲ್ಲು ಕೋಲಿವಾಡ,ಸಾಬು ಚಂಡ್ರಕಿ ಸೇರಿದಂತೆ ಅನೇಕರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

    apvc-iconPost Views: 38
  • ಸೇಡಂ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಚಿವ ಡಾ.ಶರಣಪ್ರಕಾಶ ದಿಢೀರ್ ಭೇಟಿ

    ಸೇಡಂ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಚಿವ ಡಾ.ಶರಣಪ್ರಕಾಶ ದಿಢೀರ್ ಭೇಟಿ

    ಮನಸ್ಸಿಗೆ ಬಂದ ರೀತಿ ಆಡಬೇಡಿ : ಸಚಿವ ಪಾಟೀಲ್ ಗರಂ

    ಸತ್ಯಕಾಮ ವಾರ್ತೆ ಸೇಡಂ:

    ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರು ಬುಧವಾರ ದಿಢೀರನೆ ಭೇಟಿ ನೀಡಿದರು.

    ಕಾಲೇಜಿನ ಅಧ್ಯಾಪಕರ ಹಾಜರಾತಿ ಪುಸ್ತಕ ಪರಿಶೀಲನೆ ನಡೆಸಿದ ಸಚಿವರು ಕಾಲೇಜಿಗೆ‌ ಮೋಜು, ಮಸ್ತಿ ಮಾಡಲು ಬರುತ್ತೀರಾ ಅಥವಾ ಮಕ್ಕಳಿಗೆ ಪಾಠ ಮಾಡಲು ಬರುವಿರಾ ಎಂದು ಕೋಪಗೊಂಡರು

    ಕಳೆದ ಮೂರು ದಿನಗಳಿಂದ ಹಾಜರಾತಿ ಪುಸ್ತಕದಲ್ಲಿ ಅಧ್ಯಾಪಕರ ಸಹಿ ಹಾಕದಿರುವುದನ್ನು ಗಮನಿಸಿದ ಸಚಿವರು ಪ್ರಾಂಶುಪಾಲರ ವಿರುದ್ಧ ಹರಿಹಾಯ್ದರು.

    ಪ್ರತಿ ದಿನವೂ ಹಾಜರಾತಿ ಪುಸ್ತಕ ಖಾಲಿ ಇದ್ದರೆ ದಾಖಲೆಗಳನ್ನು ಹೇಗೆ ನಿಭಾಯಿಸುವಿರಿ, ಪದೆ ಪದೆ ಈ ತರ ಅಪಸ್ವರ ಕೇಳಿ ಬರುತ್ತಿದೆ, ಹೀಗೆ ಮುಂದುವರೆದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರಾಂಶುಪಾಲರಾದ ಬಸವರಾಜ ಕೊನೇರಿ ಅವರಿಗೆ ಎಚ್ಚರಿಕೆ ನೀಡಿದರು.

    ಯಾವ ಕಾರಣಕ್ಕೆ ರಜೆ ಮೇಲೆ ತೆರಳಿದ್ದೀರಾ ಎನ್ನುವುದನ್ನು ಸಹ ಹಾಜರಾತಿ ಪುಸ್ತಕದಲ್ಲಿ ನಮೂದಿಸಿಲ್ಲ, ಈ ತರ ವ್ಯವಸ್ಥೆ ಮುಂದುವರೆದರೆ ನಿಜಕ್ಕೂ ನಾನಂತು‌ ಸುಮ್ಮನೆ ಕೂರುವುದಿಲ್ಲ, ಪ್ರಾಂಶುಪಾಲರೇ ಇದಕ್ಕೆ ನೇರ ಹೊಣೆ ಎಂದು ಹೇಳಿದರು.

    ಕಳೆದ ಒಂದು ವಾರದಿಂದ ಕಾಲೇಜಿನ ಬಗ್ಗೆ ದೂರುಗಳು ಬಂದಿವೆ, ಸರಿಪಡಿಸಿಕೊಳ್ಳಲು ಅವಕಾಶ ನೀಡಿದರೂ ಸಹ‌ ಆಡಳಿತದಲ್ಲಿ ಬದಲಾವಣೆ ಬರದೇ ಇರುವುದು ಸಚಿವರ ಕೆಂಗಣ್ಣಿಗೆ ಗುರಿಯಾದರು.

    ಮನಸ್ಸಿಗೆ ಬಂದಂತೆ ಬರಲು ಹೋಗಲು ಇದು ಮಾರುಕಟ್ಟೆ ಅಲ್ಲ, ಸರಕಾರಿ ಕಾಲೇಜಿದೆ, ಸಹಿ ಹಾಕದೇ ಕಾಲೇಜಿಗೆ ಬರುವುದು ಮನಸ್ಸಿಗೆ ಬಂದಂತೆ ಹೋಗುವುದು ಯಾರ ಜಹಾಗೀರು ಇಲ್ಲ ಎಂದು ಕೋಪಗೊಂಡರು.

    ಅನೇಕ‌ ವಿದ್ಯಾರ್ಥಿಗಳ ಕಂಪ್ಲೇಟ್ ಇದೆ, ಸರಿಯಾದ ಬೋಧನೆ ಮಢುವುದಿಲ್ಲ, ಒಂದು ಗಂಟೆಯಲ್ಲಿ ಕಾಲೇಜಿಗೆ ಇರಬೇಕು, ಪ್ರಾಂಶುಪಾಲರ ಸಮೇತ ಸಂಜೆ ಐದು ಗಂಟೆಯವರೆಗೂ ಕಾಲೇಜಿನಲ್ಲಿ ಇರಬೇಕು ಎಂದರು.

    apvc-iconPost Views: 4