Blog

  • ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು: ನೀಲಹಳ್ಳಿ ಅಭಿನಂದನೆ.

    ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು: ನೀಲಹಳ್ಳಿ ಅಭಿನಂದನೆ.

    ಸತ್ಯಕಾಮ ವಾರ್ತೆ ವಡಗೇರಾ:
    ರಾಯಚೂರು ಜಿಲ್ಲೆಯಲ್ಲಿ ನೂತನವಾಗಿ ಸ್ಥಾಪಿತವಾಗಿರುವ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಘೋಷಣೆ ಮಾಡಿದ್ದು ಹಾಗೂ ಎಸ್ ಟಿ ವಸತಿ ಶಾಲೆಗಳಿಗೆ ವಾಲ್ಮೀಕಿ ಹೆಸರಿಡುವುದಾಗಿ ತಿಳಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ಬಸವರಾಜ ನೀಲಹಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು ವಾಲ್ಮೀಕಿ ಸಮಾಜ ಹಾಗೂ ಈ ಭಾಗದ ಜನರ ಆಶಯದಂತೆ ಈ ನಾಮಕರಣ ಮಾಡಿರುವುದಾಗಿ ತಿಳಿಸಿದ್ದು. ನಮಗೆಲ್ಲಾ ಸಂತಸ ತಂದಿದೆ ಮಹರ್ಷಿ ವಾಲ್ಮೀಕಿ ರವರು ರಾಮಾಯಣದಂತ ಮಹಾಕಾವ್ಯ ಬರೆದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಅವರು ಸತ್ಯ ಸ್ಮರಣೀಯರು ಮಹಾನ್ ಶರಣರು ಅವರ ಆದರ್ಶಗಳು ಚಿರಕಾಲ ಉಳಿಯಲಿ ಮಕ್ಕಳಿಗೆ ದಾರಿದೀಪವಾಗಲಿ ಎಂಬ ಉದ್ದೇಶದಿಂದ ರಾಯಚೂರಿನ ವಿವಿಯನ್ನು ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನಾಗಿ ನಾಮಕರಣ ಮಾಡಿದ್ದಾಗಿ ನುಡಿದ ಅವರು ರಾಯಚೂರು ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಹೆಸರಿಡುವಲ್ಲಿ ಹಗಲಿರುಳು ಶ್ರಮಿಸಿದಂತ ಶಾಸಕರು ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸನಗೌಡ ದದ್ದಲ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹಾಗೂ ಸರಕಾರಕ್ಕೂ ವಾಲ್ಮೀಕಿ ಸಮಾಜದ ವತಿಯಿಂದ ಅಭಿನಂದನೆ ತಿಳಿಸಿದ್ದಾರೆ.

    apvc-iconPost Views: 2
  • ಒಂದು ವಾರದಲ್ಲಿ ತಗ್ಗು,ಗುಂಡಿಗಳು ಮುಚ್ಚಲಾಗುವುದು:ಕು. ಲಲಿತಾ ಅನಪುರ.

    ಒಂದು ವಾರದಲ್ಲಿ ತಗ್ಗು,ಗುಂಡಿಗಳು ಮುಚ್ಚಲಾಗುವುದು:ಕು. ಲಲಿತಾ ಅನಪುರ.

    ಸತ್ಯಕಾಮ ವಾರ್ತೆ ಯಾದಗಿರಿ :
    ನಗರದ ರಸ್ತೆಗಳಲ್ಲಿ ಬಿದ್ದಿರುವ ತಗ್ಗು, ಗುಂಡಿಗಳನ್ನು ಮುಚ್ಚಿ ಡಾಂಬರಿಕರಣ ಮಾಡಲು ನಗರಸಭೆ ಮುಂದಾಗಿದೆ ಎಂದು ಅಧ್ಯಕ್ಷೆ ಕು. ಲಲಿತಾ ಅನಪುರ ಹೇಳಿದರು.

     

    ಶುಕ್ರವಾರ ನಗರದಲ್ಲಿ ಹದಗೆಟ್ಟ ವಿವಿಧ ರಸ್ತೆಗಳನ್ನು ಸದಸ್ಯರ ಹಾಗೂ ಅಧಿಕಾರಿಗಳ ತಂಡದೊಂದಿಗೆ ವಿಕ್ಷೀಸಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಏಳು ಲಕ್ಷ ರೂ.ಅಂದಾಜು ಪಟ್ಟಿ ತಯಾರಿಸಲಾಗಿದೆ. ಇನ್ನೂ ಹೆಚ್ಚಿಗೆ ಬೇಕಾದರೂ ಸಹ ಖರ್ಚು ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದೆಂದರು.

     

    ನಗರದ ಮೈಲಾಪುರ ಅಗಸಿ, ಗಾಂಧಿ ಚೌಕ್, ಕನಕ ವೃತ್ತ, ಲುಂಬಿಣಿ ಉದ್ಯಾನದ ಮಾರ್ಗ, ಗಂಜ ರಸ್ತೆ, ಲಕ್ಷ್ಮಿ ಗುಡಿ ರಸ್ತೆ ಸೇರಿದಂತೆಯೇ ಸುಮಾರು ಐದಾರು ಕಿಮೀ ರಸ್ತೆಗಳಲ್ಲಿ ಎಲ್ಲ ತಗ್ಗು, ಗುಂಡಿಗಳನ್ನು ಮುಚ್ಚಿಸಲಾಗುವು, ಇದಿನಿಂದಲೇ  ಕೆಲಸ ಆರಂಭಿಸಲಾಗಿದೆ. ಈಗ ಮಳೆ ಬರುತ್ತಿರುವುದರಿಂದ ಒಂದೆರಡು ದಿನ ವಿಳಂಬವಾಗಬಹುದು, ಆದರೂ ಒಂದು ವಾರದಲ್ಲಿ ಈ ಕೆಲಸ ಪೂರ್ಣಗೊಳಿಸಲಾಗುವುದೆಂದರು.

     

    ನಗರಸಭೆ ಪೌರಯುಕ್ತ ರಜನಿಕಾಂತ ಕೆಲಸದ ಬಗ್ಗೆ ಮಾಹಿತಿ ನೀಡಿದರು.

     

    ನಗರಸಭೆ ಸದಸ್ಯ ಮತ್ತು ಜಿಲ್ಲಾ ವಕ್ತಾರ ಹಣಮಂತ ಇಟಗಿ,ಮಂಜು ದಾಸನಕೇರಿ,ಮಹೇಶ ಕುರಕುಂಬಾ, ಗುತ್ತಿಗೆದಾರ ಪೀರ್ ಅಹ್ಮದ್ ಸೇರಿದಂತೆಯೇ ಇತರರಿದ್ದರು.

    ——–
    ನಗರದ ಈ ಹದಗೆಟ್ಟ ರಸ್ತೆಗಳು ನಗರಸಭೆ ವ್ಯಾಪ್ತಿಗೆ ಬರದಿದ್ದರೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನೀಗಿಸಲು ಈ ತುರ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

    ಕು.ಲಲಿತಾ ಅನಪುರ
    ಅಧ್ಯಕ್ಷರು, ನಗರಸಭೆ ಯಾದಗಿರಿ.

    apvc-iconPost Views: 97
  • ಮಹಾ ಮಳೆಗೆ ಮನೆ ಕುಸಿದು ಮಹಿಳೆ ಸಾವು

    ಮಹಾ ಮಳೆಗೆ ಮನೆ ಕುಸಿದು ಮಹಿಳೆ ಸಾವು

    ಸತ್ಯಕಾಮ ವಾರ್ತೆ ಗುರುಮಠಕಲ್ :

    ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಜರುಗಿದೆ.

    ಗುಂಜಲಮ್ಮ ಗಂಡ ಚಂದಪ್ಪ (58) ಮೃತ ದುರ್ದೈವಿಯಾಗಿದ್ದೂ, ಮನೆಯಲ್ಲಿದ್ದ ಗುಂಜಲಮ್ಮ ಅವರ ಸಹೋದರ ಚಂದ್ರಪ್ಪ ಅಮ್ಮಣ್ಣೋರ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

    ಘಟನೆಯು ಮಧ್ಯರಾತ್ರಿ 3 ಘಂಟೆ ಸುಮಾರಿಗೆ ಜರುಗಿದೆ ಎಂದು ಸ್ಥಳೀಯರು ತಿಳಿಸಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    apvc-iconPost Views: 246
  • ಗೋಲ್ಡನ್ ಹವರ್ ನಲ್ಲಿ ಚಿಕಿತ್ಸೆಯಿಂದ 3 ಜೀವ ರಕ್ಷಣೆ: ಡಾ|| ಅಮೋಘ ಸಿದ್ದೇಶ್ವರ

    ಗೋಲ್ಡನ್ ಹವರ್ ನಲ್ಲಿ ಚಿಕಿತ್ಸೆಯಿಂದ 3 ಜೀವ ರಕ್ಷಣೆ: ಡಾ|| ಅಮೋಘ ಸಿದ್ದೇಶ್ವರ

    ಸತ್ಯಕಾಮ ವಾರ್ತೆ ಯಾದಗಿರಿ:

    ತುರ್ತು ಪರಿಸ್ಥಿತಿಯಲ್ಲಿ ಕಲ್ಬುರ್ಗಿ, ರಾಯಚೂರು ಮುಖಮಾಡುವ ಪರಿಸ್ಥಿತಿ ಇರುವ ವೇಳೆ ನಗರದಲ್ಲಿ ಸಿಪಾಕಾದೊಂದಿಗೆ ಆರಂಭಿಸಿದ 24*7 ಸೇವೆ ನೀಡುವ ಐಸಿಯು ಸೇವೆ ಹಾಗೂ (ಸುವರ್ಣ ತಾಸುಗಳ) ಗೋಲ್ಡನ್ ಹವರ್ (Golden Hour)ಅವಧಿಯ ಚಿಕಿತ್ಸೆಯಿಂದ ಮೂರು ಅಮೂಲ್ಯ ಜೀವ ಉಳಿದಿವೆ ಎಂದು ಇಲ್ಲಿನ ವಿಬಿಆರ್ ಮುದ್ನಾಳ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ವೈದ್ಯರಾದ ಡಾ. ಅಮೋಘ ಸಿದ್ದೇಶ್ವರ ನರಸಣಗಿ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕದ ಮೊದಲ ಸಿಪಾಕಾ ಜಾಗತಿಕ ಗುಣಮಟ್ಟದ ಐಸಿಯು ಸೇವೆಯ ಸೌಲಭ್ಯ ಆರಂಭಿಸಿದ ನಂತರ ಅನೇಕ ಜನತೆಗೆ ಇದರಿಂದ ಉಪಯೋಗವಾಗಿದೆ.

    ಅದರಲ್ಲೂ ವಿಶೇಷವಾಗಿ ಕಳೆದ ತಿಂಗಳೊಪ್ಪತ್ತಿನಲ್ಲಿ ಮೂರು ವಿಶಿಷ್ಟ ಸವಾಲಿನ ಪ್ರಕರಣಗಳು ಯಶಸ್ವಿಯಾಗಿ ನಿಭಾಯಿಸಿ ಜೀವ ಉಳಿಸಿದ ಘಟನೆಗಳು ನಡೆದಿವೆ ಎಂದು ವಿವರಿಸಿದ ಅವರು, ಬೆನ್ನು ಮೂಳೆ ನರ ಅಪ್ಪಚ್ಚಿಯಾಗಿದ್ದ ಪ್ರಕರಣವನ್ನು ಶಸ್ತçಚಿಕಿತ್ಸೆ ಮೂಲಕ ಗುಣಪಡಿಸಿದ್ದಲ್ಲದೇ ಕೇವಲ 6 ತಾಸಿನಲ್ಲಿಯೇ ರೋಗಿ ಐಸಿಯುನಿಂದ ಸಾಮಾನ್ಯ ನಂತೆ ನಡೆದುಕೊಂಡು ಹೋಗುವಂತೆ ಮಾಡಿದ ಪ್ರಕರಣ ಯಶಸ್ವಿಯಾಗಿತ್ತು ಎಂದು ತಿಳಿಸಿದರು.

    ಎರಡನೇ ಪ್ರಕರಣದಲ್ಲಿ ರೋಗಿ 15 ಬಿಪಿ ಮಾತ್ರೆ ಸೇವಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಸಂದರ್ಭದಲ್ಲಿ ತಕ್ಷಣವೇ ಗೋಲ್ಡನ್ ಹವರ್ಸ್ ನಲ್ಲಿ ಐಸಿಯುಗೆ ಸೇರಿಸಿ ಚಿಕಿತ್ಸೆ ಕೊಟ್ಟ ಪರಿಣಾಮ ಬಹುತೇಕ ಸತ್ತೇ ಹೋಗಿದ್ದ ವ್ಯಕ್ತಿ 4 ದಿನಗಳಲ್ಲಿ ಬಿಪಿ ಹತೋಟಿಗೆ ತಂದು ಪುನರ್ಜನ್ಮದೊಪಾದಿಯಲ್ಲಿ ಬದುಕಿದ ಪ್ರಕರಣ ದಾಖಲಾಯಿತು ಎಂದು ತಿಳಿಸಿದರು.

    ಜೊತೆಗೆ ಹೊಲದಲ್ಲಿ ಕ್ರಿಮಿನಾಶಕ ಸಿಂಪಡನೆ ವೇಳೆ ಅಪಾಯಕಾರಿ ಕ್ರಿಮಿನಾಶಕ ದೇಶ ಸೇರಿದ ಕೆವಲ ಅರ್ಧ ತಾಸಿನಲ್ಲಿ ಐಸಿಯುಗೆ ಸೇರಿಸಿ ಚಿಕಿತ್ಸೆ ನೀಡಿದ್ದರಿಂದ ಆ ರೋಗಿಯೂ ಪ್ರಾಣ ಉಳಿಸಿದ ಪ್ರಕರಣ ಯಶಸ್ವಿಯಾಗಿ ನಿಭಾಯಿಸಲಾಯಿತು ಎಂದು ವಿವರಣೆ ನೀಡಿದರು.

    ಮೂರು ಪ್ರಕರಣಗಳಿಂದ ಗೋಲ್ಟನ್ ಹವರ್ ಎಂತಹ ಪವಾಡ ಮಾಡುತ್ತದೆ ಎಂಬುದು ನಮ್ಮ ಭಾಗದ ಜನತೆಗೆ ತಿಳಿಸುವ ಅಗತ್ಯತೆ ಮನಗಂಡು ಮಾಧ್ಯಮಗಳ ಮುಂದೆ ಬಂದುದಾಗಿ ಹೇಳಿದ ಅವರು, ಜಿಲ್ಲೆಯಲ್ಲಿ ವಿಶೇಷವಾಗಿ ಅಪಘಾತ, ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಬರುವ ತುರ್ತು ಸಂದರ್ಭಗಳಲ್ಲಿ ಗೋಲ್ಡನ್ ಹವರ್ ನ ಸದುಪಯೋಗಕ್ಕೆ ಚೆನ್ನೆöÊನ ಸಿಪಾಕಾ ನೆರವಿನೊಂದಿಗೆ ಆರಂಭಿಸಿದ ಐಸಿಯು ನಲ್ಲಿ ಯುಕೆ (ಲಂಡನ್) ನ ಗುಣಮಟ್ಟದ ಮಾರ್ಗದರ್ಶಿ ಸೂತ್ರಗಳನ್ವಯ ಕಾರ್ಯನಿರ್ವಹಣೆಯಿಂದಾಗಿ ಅಮೂಲ್ಯ ಮೂರು ಜೀವಗಳು ಉಳಿಸಲು ಸಾದ್ಯವಾಯಿತು ಎಂದು ವಿವರಿಸಿದರು.

    ಈ ಸಂದರ್ಭದಲ್ಲಿ ಮಾರುತಿ ಕಲಾಲ್, ಭೀಮು ಹಾಗೂ ಗುಣಮುಖರಾದ ರೋಗಿಗಳ ಕುಟುಂಬದವರು ಇನ್ನಿತರರು ಇದ್ದರು.

    apvc-iconPost Views: 1228
  • ಪಗಲಾಪುರ – ಭೀಮನಬಂಡಿ ಸೇತುವೆಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಭೇಟಿ 

    ಪಗಲಾಪುರ – ಭೀಮನಬಂಡಿ ಸೇತುವೆಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಭೇಟಿ 

    • ಪಗಲಾಪುರ – ಭೀಮನಬಂಡಿ ಹಳ್ಳ ಸೇತುವೆ ಕುಸಿತ: ಸಂಪರ್ಕ ಕಡಿತ
    • ಸ್ಥಳಕ್ಕೆ ಶಾಸಕರ ಭೇಟಿ- ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಕಳೆದ ಮೂರು ದಿನಗಳ ಹಿಂದೆ ಕುಸಿದು ಬಿದ್ದಿರುವ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಗಲಾಪುರ-ಭೀಮನದಡ್ಡಿ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಪರಿಶೀಲಿಸಿದರು.

    ಅತ್ಯಂತ ಹಳೆ ಸೇತುವೆಯಾಗಿರುವ ಇದು ಸುಮಾರು ಹದಿನೈದು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದ್ದು, ಹರಿದು ಬಂದ ಮಳೆ ನೀರಿನ‌ ಒತ್ತಡ ತಾಳದೆ ಸೇತುವೆ ಕುಸಿದಿದೆ.

    ಇದರಿಂದ ಜನಸಂಪರ್ಕಕ್ಕೆ ತುಂಬಾ ತೊಂದರೆಯಾಗಿದ್ದು, ಇದನ್ನು ಕೂಡಲೇ ದುರಸ್ತಿ ಕಾರ್ಯ ಮಾಡಿಸಲಾಗುವುದೆಂದು ಶಾಸಕರು ಹೇಳಿದರು.

    ಸೋಮವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಶಾಸಕರು ಸುಮಾರು ಅರ್ಧ ಗಂಟೆಗಳ ಕಾಲ ಕುಸಿದು ಬಿದ್ದಿರುವ ಸೇತುವೆ ಪರಿಶೀಲಿಸಿದರು. ಆಗ ಸುತ್ತ ಮುತ್ತಲಿನ ಜನರು ಆ ರಸ್ತೆ ಮೇಲಿಂದಲೇ ವಾಹನಗಳ ಕೈಯಲ್ಲಿ ಹಿಡಿದು ನಡೆದುಕೊಂಡು ದಾಟುತ್ತಿರುವ ದೃಶ್ಯ ಕಂಡ ಶಾಸಕರು, ಇದು ಅಪಾಯಕಾರಿ ಸೂಚನೆ, ದಯವಿಟ್ಟು ಕೆಲ ದಿನಗಳ ಮಟ್ಟಿಗೆ ಈ ಸೇತುವೆ ರಸ್ತೆ ಉಪಯೋಗಿಸಬಾರದು, ಕಾರಣ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ತೊಂದರೆ ಇದೆ ಎಂದು ಹೇಳಿ ನಾಳೆಯಿಂದ ಈ ರಸ್ತೆ ಸಂಪರ್ಕ ಬಂದ್ ಮಾಡುವಂತೆಯೆ ಅಧಿಕಾರಿಗಳಿಗೆ ಸೂಚಿಸಿದರು. ತಕ್ಷಣವೇ ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸುವಂತೆ ಪಿಎಸ್ಐ ಬಂಕಲಗಿಗೆ ಶಾಸಕರು ಹೇಳಿದರು.

    ಈ ವೇಳೆ ಗ್ರಾಮದ ಬಸವರಾಜಪ್ಪ ಗೌಡ ದಳಪತಿ, ಇಂಜಿನಿಯರ್ ಶ್ರೀಧರ ಸಾರ್ವಜನಿಕರು ಇದ್ದರು.

    ಈ ಸೇತುವೆ ಮೂಲಕ ಚಟಗೇರಾ, ಮಷ್ಠುರ್, ಕೌಳೂರು, ಸಾವುರು, ಮಲ್ಹಾರ್, ಹೆಗ್ಗಣದೊಡ್ಡಿ, ಯಾತನಾಳ, ಸೈದಾಪುರ ಹಾಗೂ ಲಿಂಗೇರಿ, ನಾಗರಬಂಡಾ, ಗೌಡಗೇರಿ, ಕಿಲ್ಲನಕೇರಾ, ಸೇರಿದಂತೆಯೇ ವಿವಿಧ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

     

    ಮಳೆ ನಿಂತ ಕೂಡಲೇ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಅಲ್ಲಿಯವರೆಗೂ ಸಂಪರ್ಕ ಬಂದ್ ಮಾಡಲಾಗುವುದು.‌ ಇಲ್ಲಿಯೇ ಹೊಸ ಸೇತುವೆ ನಿರ್ಮಾಣಕ್ಕೆ 8 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಮೊದನೆ ಸಿಕ್ಕ ಕೂಡಲೇ ಕೆಲಸ ಆರಂಭಿಸಲಾಗುವುದು.

    ಚನ್ನಾರಡ್ಡಿ ಪಾಟೀಲ್ ತುನ್ನೂರ್, ಶಾಸಕರು, ಯಾದಗಿರಿ ಮತಕ್ಷೇತ್ರ

     

    apvc-iconPost Views: 320
  • ಕರ್ನಾಟಕದಲ್ಲಿ ಕನ್ನಡ ವ್ಯಾವಹಾರಿಕ ಭಾಷೆಯಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

    ಕರ್ನಾಟಕದಲ್ಲಿ ಕನ್ನಡ ವ್ಯಾವಹಾರಿಕ ಭಾಷೆಯಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

    ಗೋಕಾಕ್ ಚಳವಳಿಯ ಹಿನ್ನೋಟ- ಮುನ್ನೋಟ ಕಾರ್ಯಕ್ರಮಕ್ಕೆ ಚಾಲನೆ, ವಿವಿಧ ಸಚಿವರು ಭಾಗಿ

    ಸತ್ಯಕಾಮ ವಾರ್ತೆ ರಾಯಚೂರು:-

    ಕರ್ನಾಟಕ ಸಂಪೂರ್ಣ ಕನ್ನಡಮಯವಾಗಲಿ. ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ. ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ. ಕನ್ನಡ ಅಗ್ರ ಭಾಷೆಯಾಗಲಿ, ಕನ್ನಡ ಮೊದಲ ಭಾಷೆಯಾಗಲಿ ಎಂದು ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು  ಕರೆ ನೀಡಿದರು.

    ಅವರು ಅ.05ರ ಶನಿವಾರದ ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಯಚೂರು ಜಿಲ್ಲಾಡಳಿತದ ವತಿಯಿಂದ ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

    ಗೋಕಾಕ್ ಚಳವಳಿಯ ಪರಿಣಾಮ ರಾಜ್ಯದಲ್ಲಿ ಕನ್ನಡದ ವಾತಾವರಣ ವಿಸ್ತರಿಸಲು ಕನ್ನಡ ಕಾವಲು ಸಮಿತಿಯನ್ನು ರಚಿಸಲಾಯಿತು. ಬಳಿಕ ಇದೇ ಸಮಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯಿತು. ಪ್ರತಿಯೊಂದು ಭಾಷೆಯನ್ನೂ ಕಲಿಯಿರಿ, ಆದರೆ ಆಡಳಿತ ಭಾಷೆ ಕನ್ನಡ ಆಗಿರಲಿ. ಕನ್ನಡ ನೆಲದಲ್ಲಿ ನಡೆದ ಕನ್ನಡ ಭಾಷಾ ಚಳವಳಿ ಅತ್ಯಂತ ಚರಿತ್ರಿಕವಾದದ್ದು, ನಾನು ಕಾವಲು ಸಮಿತಿ ಅಧ್ಯಕ್ಷನಾಗಿದ್ದಾಗ ಇಂಗ್ಲಿಷ್ ಟೈಮ್ ರೈಟರ್ ಗಳನ್ನು ಕಿತ್ತುಕೊಂಡು ಕನ್ನಡ ಟೈಪ್ ರೈಟರ್ ಗಳನ್ನು ಕೊಡ್ತಿದ್ದೆ ಎಂದು ತಮ್ಮ ಅವಧಿಯ ಕನ್ನಡ ಕಟ್ಟುವ ಕೆಲಸವನ್ನು ಸ್ಮರಿಸಿದರು.

     

    ಎಲ್ಲಾ ಭಾಷೆಗಳ ಬಗ್ಗೆ ಗೌರವ ಇರಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಿರಿ ಆದರೆ ಈ ನೆಲದ ಭಾಷೆ ಕನ್ನಡವನ್ನು ಬಿಟ್ಟು ಕೊಡುವಷ್ಟು ದಾರಾಳತನ ಬೇಡ ಎಂದು ಸಲಹೆ ನೀಡಿದರು.

    ಗೋಕಾಕ್ ಚಳವಳಿಯು ಕರ್ನಾಟಕದಲ್ಲಿ ಭಾಷಾ ಚಳವಳಿ, ಕನ್ನಡ ಚಳವಳಿ ಆಗಿದೆ. ನಾನು ಯಾವ ಭಾಷೆಗೂ ವಿರೋಧವಿಲ್ಲ. ಮಾತೃಭಾಷೆ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೆ. ಮಾತೃಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡ ವಾತಾವರಣ ಸೃಷ್ಟಿ ಮಾಡಬೇಕಾಗಿದೆ. ರಾಯಚೂರಿನಲ್ಲಿ ಕರ್ನಾಟಕ ಸಂಭ್ರಮ- 50ರ ಅಂಗವಾಗಿ ಗೋಕಾಕ್ ಚಳವಳಿ ಹಿನ್ನೋಟ- ಮುನ್ನೋಟ ಸಮಾರಂಭ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಅತ್ಯಂತ ಸಂತೋಷದಿAದ ಭಾಗಿಯಾಗಿ ಉದ್ಘಾಟನೆ ಮಾಡಿದ್ದೇನೆಂದು ಹೇಳಿದರು.

    ಆಂಧ್ರ- ತೆಲಂಗಾಣದ  ಪಕ್ಕದ ಜಿಲ್ಲೆ ರಾಯಚೂರು ಈ ಭಾಗದಲ್ಲಿ ಸ್ವಲ್ಪ ತೆಲುಗು, ಉರ್ದು ಭಾಷೆ ಪ್ರಭಾವ ಇದೆ. ಸ್ವಾಭಾವಿಕವಾಗಿ ತೆಲುಗು ಭಾಷೆ ಇರುವುದು ಸಹಜ ಕರ್ನಾಟಕ ಏಕೀಕರಣ ಆದ ಬಳಿಕ ಬೇರೆಬೇರೆ ರಾಜ್ಯದಲ್ಲಿ ಸೇರಿದ ಕನ್ನಡ ಮಾತನಾಡುವ ಜನರು ಒಂದೇ ರಾಜ್ಯದಲ್ಲಿ ಸೇರಬೇಕೆಂದು 1956, ನವಂಬರ್ 1ರಲ್ಲಿ ಕರ್ನಾಟಕ ಏಕೀಕರಣ ಆಯ್ತು ಅಲ್ಲದೆ ಮೊದಲು ಮೈಸೂರು ರಾಜ್ಯ ಅಂತಹ ನಾಮಕರಣ ಇತ್ತು ಇದನ್ನು 1973ರಲ್ಲಿ ಮೈಸೂರು ರಾಜ್ಯವನ್ನ ಕರ್ನಾಟಕ ಅಂತ ನಾಮಕರಣ ಮಾಡಲಾಯಿತು. ಇಂದು 50 ವರ್ಷ ತುಂಬಿ, 51ನೇ ವರ್ಷದಲ್ಲಿ ನಾವು ಇದ್ದೇವೆ. 2024ರ ನವಂಬರ್ 1ರಂದು ಸಮಾರೋಪ ಸಮಾರಂಭ ಮಾಡಬೇಕು. ಅದಕ್ಕಾಗಿ ರಾಜ್ಯದ ಮೈಸೂರು,ಬೆಳಗಾವಿ, ರಾಯಚೂರು, ಮಂಗಳೂರಿನಲ್ಲಿ ಕರ್ನಾಟಕ ಹೆಸರಾಯ್ತು, ಕನ್ನಡ ನಮ್ಮೆಲ್ಲರ ಉಸಿರಾಗಲಿ ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

     

    ಕರ್ನಾಟಕದಲ್ಲಿ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗ ನಾನು ಆಯ್ಕೆಯಾಗಿದೆ. ಆಗ ರಾಜ್ಯದ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರು ಆಗಿದ್ರೂ ನಾನು ಮೊದಲ ಬಾರಿಗೆ ಶಾಸಕನಾಗಿದೆ. ನಿಮಗೆ ಕನ್ನಡ ಬಗ್ಗೆ ಅಭಿವೃದ್ಧಿ ಇದೆ ಅಂತಹ ಅದಕ್ಕಾಗಿ ನನಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷ ಮಾಡಿದ್ರು ಆ ಬಳಿಕ ನಾನು 1984ರಲ್ಲಿ ರೇಷ್ಮೆ ಸಚಿವ ಆಗಿದೆ. ಯಾವುದೇ ರಾಜ್ಯದಲ್ಲಿ ಭಾಷೆ ಕಾಯಲು ಕಾವಲು ಸಮಿತಿ ಇಲ್ಲ. ಗೋಕಾಕ್ ಚಳವಳಿಯಲ್ಲಿ ರಾಜಕುಮಾರ್ ಹೋರಾಟಕ್ಕೆ ಇಳಿದಾಗ ಗೋಕಾಕ್ ಚಳವಳಿಗೆ ವೇಗ ಸಿಕ್ಕಿತ್ತು. ಉದಾರಿತನ ಇರಬೇಕು, ಆದ್ರೆ ಮಾತೃಭಾಷೆಗೆ ದಕ್ಕೆ ಆಗಬಾರದು. ಕರ್ನಾಟಕದಲ್ಲಿ ವಾಸ ಮಾಡುವರು ಕನ್ನಡ ಮಾತನಾಡಬೇಕು. ಬೇರೆ ರಾಜ್ಯದವರೊಂದಿಗೆ ಅವರ ಭಾಷೆಯಲ್ಲಿ ಮಾತನಾಡಬಾರದು. ಕನ್ನಡದಲ್ಲಿ ಮಾತನಾಡಿ ಅವರಿಗೂ ಕನ್ನಡ ಕಲಿಸಿ. ಕನ್ನಡ ಗಟ್ಟಿಯಾಗಿ ಉಳಿಯಬೇಕು, ಬೆಳೆಯಬೇಕು. ಅದಕ್ಕಾಗಿ ಒಂದು ವರ್ಷ ಇಂತಹ ಕಾರ್ಯಕ್ರಮ ಮಾಡುತ್ತಿದ್ದೇವೆ. ನವಂಬರ್ 1ರ ಒಳಗಾಗಿ ವಿಧಾನಸೌಧ ಮುಂದೆ ಭುವನೇಶ್ವರಿ ಕಂಚಿನ ಪ್ರತಿಮೆ ಉದ್ಘಾಟನೆ ಮಾಡುತ್ತೇವೆ ಮುಖ್ಯಮಂತ್ರಿಗಳು ಹೇಳಿದರು.

     

    ಈ ವೇಳೆ ಹಿಂದುಳಿದ ವರ್ಗಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ಶಿವರಾಜ್ ತಂಗಡಗಿ ಅವರು ಮಾತನಾಡಿ, ಹೆಸರಾಯ್ತು ಕರ್ನಾಟಕ, ಉಸಿರಾಯ್ತು ಕನ್ನಡ ಎಂಬ ಕಾರ್ಯಕ್ರಮದಡಿ ಈ ವರ್ಷ ನವಂಬರ್ 1ರೊಳಗಾಗಿ ನಾಲ್ಕು ಕಾರ್ಯಕ್ರಮ ಮಾಡಲು ಚಿಂತನೆ ಮಾಡಿದ್ದೇವೆ. ಮೊದಲ ಕಾರ್ಯಕ್ರಮ ಮೈಸೂರಿನಿಂದ ಮಾಡಲಾಗಿದೆ. ಮೈಸೂರಿನಲ್ಲಿ 15 ಗೋಷ್ಠಿಗಳು ಮಾಡಿಲಾಯಿತು. ಮಹಾರಾಷ್ಟçದ ಗಡಿ ಭಾಗದಲ್ಲಿ ಯಶ್ವಸಿ ಕನ್ನಡ ಕಾರ್ಯಕ್ರಮ ಮಾಡಿಲಾಗಿದ್ದು, ರಾಯಚೂರಿನ ಕಾರ್ಯಕ್ರಮವು ಮೂರನೇ ಕಾರ್ಯಕ್ರಮವಾಗಿದೆ. ಕಲ್ಯಾಣ ಕರ್ನಾಟಕದ ಗಡಿ ಭಾಗವಾದ ರಾಯಚೂರಿನಲ್ಲಿ ಮಾಡಲು ತೀರ್ಮಾನ ಮಾಡಿ, ಮಾಡುತ್ತಿದ್ದೇವೆ ಎಂದರು.

     

    ಮುಖಮಂತ್ರಿ ಸಿದ್ದರಾಮಯ್ಯ ಅವರು ಸಹಿ ಕನ್ನಡದಲ್ಲಿ ಇದೆ. ಕಡತಗಳು ಸಹ ಕನ್ನಡದಲ್ಲಿ ಮಾಡಬೇಕು. ಅಂತ ಸಿಎಂ ಅವರು ಆದೇಶ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಕನ್ನಡರಾಮಯ್ಯ ಎಂದು ಹೆಸರು ಇಡಬೇಕೆಂದರು. ನ.1ರೊಳಗಾಗಿ ವಿಧಾನಸೌಧದ ಮುಂದೆ ಭುವನೇಶ್ವರಿ ಪ್ರತಿಮೆ ಮಾಡಲು ಹೇಳಿದ್ದು, ಸಿಎಂ ಸಿದ್ದರಾಮಯ್ಯ ಅವರು ಅಲ್ಲದೆ ವಿಧಾನಸೌಧದಲ್ಲಿ ನಮಗೆ ಸಂಧಿ, ವ್ಯಾಕರಣದ ಬಗ್ಗೆ ತಿಳಿಸುತ್ತಾರೆ. ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ ಎಂದು ಹೇಳಿದರು.

     

    ಮಾನವಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ; ಜಿಲ್ಲೆಯ ಮಾನವಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಇಂದು ಮುಖಮಂತ್ರಿಗಳಾದ ಶ್ರೀಸಿದ್ದರಾಮಯ್ಯ ಅವರಿಂದ ಚಾಲನೆ ನೀಡಲಾಯಿತು.

    ಈ ವೇಳೆ ಜನ ಸಾಗರದ ಸಾಕ್ಷಿಯಾಯಿತು. ಸುಮಾರು  3ಕಿಮೀ ಉದ್ದದ ರಸ್ತೆಯುದ್ದಕ್ಕೂ ಸೇರಿರುವ ಜನ. ಮಾತ್ರವಲ್ಲದೆ ಬೃಹತ್ ವೇದಿಕೆ ಮುಂಭಾಗದಲ್ಲಿ 40ಸಾವಿರಕ್ಕೂ ಅಧಿಕ ಮಂದಿ ಜಮೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಮುಗಿಲು ಮುಟ್ಟುವ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.

     

    ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಾಹದೇವಪ್ಪ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಬಸವನಗೌಡ ತರ್ವಿಹಾಳ, ವಿಧಾನ ಪರಿಷತ್ ಸದಸ್ಯರಾದ  ಎ.ವಸಂತಕುಮಾರ, ಬಸನಗೌಡ ಬಾದರ್ಲಿ,ಶರಣಗೌಡ ಬಯ್ಯಾಪೂರು, ಚಂದ್ರಶೇಖರ ಪಾಟೀಲ್, ರಾಯಚೂರು ನಗರಸಭೆಯ ಅಧ್ಯಕ್ಷರಾದ ನರಸಮ್ಮ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ, ರಾಜಶೇಖರ ರಾಮಸ್ವಾಮಿ, ಮಲ್ಲಿಕಾರ್ಜುನ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಧರಣಿದೇವಿ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಂ.ಪುಟ್ಟಮಾದಯ್ಯ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾದ ಸಂತೋಷ ಹಾನಗಲ್, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

     

    *******
    ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಕಾರ್ಯಕ್ರಮ; ಕಲಾ ತಂಡಗಳ ಮೆರವಣಿಗೆ ಚಾಲನೆ

    ರಾಯಚೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಯಚೂರು ಜಿಲ್ಲಾಡಳಿತದ ವತಿಯಿಂದ ಗೋಕಾಕ್ ಚಳವಳಿಯ ಹಿನ್ನೋಟ- ಮುನ್ನೋಟ ಕಾರ್ಯಕ್ರಮದ ಅಂಗವಾಗಿ ಇಂದು ನಗರದ ಬಸವೇಶ್ವರ ವೃತ್ತದಲ್ಲಿ ಈ ವೇಳೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ವಿವಿಧ ಕಲಾ ತಂಡಗಳ ಮೆರೆವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


    ಇದೇ ಸಂದರ್ಭದಲ್ಲಿ  ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯರಾದ  ಎ.ವಸಂತಕುಮಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಂ.ಪುಟ್ಟಮಾದಯ್ಯ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾದ ಸಂತೋಷ ಹಾನಗಲ್, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
    *******

     

    apvc-iconPost Views: 97
  • ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧ: ವೇಣುಗೋಪಾಲ ನಾಯಕ

    ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧ: ವೇಣುಗೋಪಾಲ ನಾಯಕ

    ಸತ್ಯಕಾಮ ವಾರ್ತೆ ಹುಣಸಗಿ:

    ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಸ್ಥಳೀಯರು ಸಹಕರಿಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.

    ಪಟ್ಟಣದ ವಿವಿಧ ವಾರ್ಡ್ಗಳಿಗೆ ಶನಿವಾರ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸಿದ ನಂತರ ಮಾತನಾಡಿ, ಪಟ್ಟಣದ ಪ್ರತಿಯೊಂದು ವಾರ್ಡ್ಗಳಲ್ಲಿ ಮೂಲಭೂತ ಸೌಕರ್ಯಗಳಾದ ಸಿಸಿ‌ ರಸ್ತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು.

    ಪಟ್ಟಣದ ಜನರ ಸಮಸ್ಯೆಗಳನ್ನು ಹಂತ ಹಂತವಾಗಿ  ಪರಿಹರಿಸಲಾಗುವುದು. ವಾರ್ಡ್ಗಳ ಸ್ವಚ್ಛತೆ, ಕುಡಿಯುವ ನೀರು ವಿಷಯದಲ್ಲಿ ಜನರಿಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ಹಳ್ಳದ ಆಂಜನೇಯ ದೇವಸ್ಥಾನ ಕಿರು ಸೇತುವೆ ಈಗಾಗಲೇ ಬಿರುಕು ಬಿಟ್ಟಿದು ಅಪಾಯದಲ್ಲಿದೆ. ಭಕ್ತರ ಅನುಕೂಲಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಪ.ಪಂ.ಅನುದಾನದಲ್ಲಿ ಶಾಶ್ವತ ಸೇತುವೆಗೆ ಕ್ರಮಕೈಗೊಳ್ಳಿ ಎಂದು ಪ.ಪಂ.ಮುಖ್ಯಾಧಿಕಾರಿಗೆ ಸೂಚಿಸಿದ ಅವರು ಹೆಚ್ಚಿನ ಅನುದಾನ ಬೇಕಿದ್ದರೆ ಒದಗಿಸುವುದಾಗಿ ತಿಳಿಸಿದರು.

    ಚರಂಡಿ ನೀರು ಗದ್ದೆಯಲ್ಲಿ ಹರಿದು ಜನತಾ ಕಾಲೋನಿಯಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಶಾಸಕರ ಗಮನಕ್ಕೆ ನಿವಾಸಿಗರು ತಂದಾಗ ವರದಿ ಆಧಾರಿಸಿ ಸಮಸ್ಯೆ ಪರಿಹರಿಸಲು ಅಧಿಕಾರಿಗೆ ಸೂಚಿಸಲಾಯಿತು.

    ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಪ.ಪಂ.ಅಧ್ಯಕ್ಷ ತಿಪ್ಪಣ್ಣ ನಾಯಕ, ಪ.ಪಂ.ಉಪಾಧ್ಯಕ್ಷ ಶಾಂತಣ್ಣ ಮಲಗಲದಿನ್ನಿ, ಸದಸ್ಯರಾದ ಶರಣು ದಂಡಿನ್, ಸಿದ್ದು ಮುದಗಲ್, ಕಾಶೀಮ್‌ಸಾಬ ಟೊಣ್ಣೂರು ಹಾಗೂ ಆರ್.ಎಂ.ರೇವಡಿ, ಚನ್ನಯ್ಯಸ್ವಾಮಿ ಹಿರೇಮಠ, ಬಸವರಾಜ ಸಜ್ಜನ್, ಮಹಾದೇವಿ ಬೇನಾಳಮಠ, ಅರುಣ ಮಲಗಲದಿನ್ನಿ ಸೇರಿದಂತೆ ಇತರರಿದ್ದರು.

    apvc-iconPost Views: 51
  • ಅಪಘಾತ ಪ್ರಕರಣ ಆರೋಪಿಗೆ ಜೈಲು ಶಿಕ್ಷೆ

    ಅಪಘಾತ ಪ್ರಕರಣ ಆರೋಪಿಗೆ ಜೈಲು ಶಿಕ್ಷೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಸೈದಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಗೂಡೂರು ಗ್ರಾಮದ ಮದ್ಯದ ಹೊರಹೊಲಯದ ಹೊಲದ ಹತ್ತಿರ ಫೆಬ್ರವರಿ, 13, 2024 ರಲ್ಲಿ ಆಟೋರಿಕ್ಷಾದಲ್ಲಿ ನಡೆದ ಅಪಘಾತದಲ್ಲಿ ಮಹಿಳೆ ಕಮಲಮ್ಮ ಗಂಡ ನಾರಾಯಣ ಮಲಗಣಿ ಸಾ.ಮಡ್ಡಿಪೇಟ ಸಾವಿಗೆ ಕಾರಣವಾದ ಆರೋಪಿ ಮಹಾದೇವ ತಂದೆ ಬೀಗಯ್ಯ ಗುಲ್ಲೆ ಎಂಬಾತನಿಗೆ ಯಾದಗಿರಿಯ ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳು ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ರಾಹುಲ್ ಚಾಂಬಾರ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

    ಆರೋಪಿ ರಾಯಚೂರು ತಾಲೂಕಿನ ಚಂದ್ರಬAಡಾ ಗ್ರಾಮದವರಾಗಿದ್ದು, ಆರೋಪಿತನ ಟಂಟA ಆಟೋವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿ, ಆಟೋ ಮೇಲೆ ನಿಯಂತ್ರಣ ತಪ್ಪಿ ತಿರುವು ಮತ್ತು ಇಳಿಜಾರು ರಸ್ತೆಯ ಮೇಲೆ ಪಲ್ಟಿ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಕಮಲಮ್ಮ ಈಕೆಗೆ ಎಡ ಕಿವಿಗೆ ಹರಿದ ರಕ್ತ ಗಾಯ, ಎಡಗಡೆ ತಲೆಗೆ ಭಾರಿ ಒಳಪೆಟ್ಟಾಗಿ ಬಾವು ಬಂದು, ಎಡಗೈ ರಟ್ಟೆಗೆ ಭಾರೀ ತರಚಿದ ರಕ್ತಗಾಯ ಮತ್ತು ಹೊಟ್ಟೆಯಿಂದ ಟೊಂಕದವರೆಗೆ ಗಾಯಗಳಾದಾಗ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ.

    ಸದರಿ ಅಪಘಾತ ನಡೆಸಿ ಆರೋಪಿತನು ಆಟೋವನ್ನು ಬಿಟ್ಟು ಸ್ಥಳದಿಂದ ಓಡಿ ಹೋಗಿರುತ್ತಾನೆ. ಆಟೋ ಓಡಿಸಲು ಅನುಮತಿ ಪತ್ರವು ಇರುವುದಿಲ್ಲ, ನೋಂದಣಿ ಮಾಡಿಸಿರುವುದಿಲ್ಲ. ಆಟೋದಲ್ಲಿ ಆಸನದ ಅರ್ಹತೆ ಮೀರಿ ಹೆಚ್ಚಿನ ಜನರನ್ನು ಸಾಗಿಸಿದ್ದರಿಂದ ಆರೋಪಿತನು ಅಪರಾಧ ಎಸಗಿರುತ್ತಾನೆ ಎಂದು ಪ್ರಕರಣದ ತನಿಖೆ ಹಾಗೂ ಸಾಕ್ಷಾಧಾರಗಳಿಂದ ಅಪರಾಧ ದೃಢಪಟ್ಟಿರುತ್ತದೆ.
    ಆದ್ದರಿಂದ ಆರೋಪಿತನ ವಿರುದ್ಧ 279, 337, 304 (ಎ) ಐಪಿಸಿ ಮತ್ತು 187, 192 (ಎ), 177 ಐ.ಎಮ್.ವಿ ಆ್ಯಕ್ಟ್ ದೋಷಾರೋಪಣೆ ಪತ್ರವನ್ನು ಸೈದಾಪುರ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಎಎಸ್‌ಐ  ಬಾಲಚಂದ್ರ ಮತ್ತು ಗುರುಮಿಠಕಲ್ ತನಿಖಾಧಿಕಾರಿ ಸಿಪಿಐ ಪಿ.ಕೆ ಚೌಧರಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
    ಸದರಿ ಪ್ರಕರಣವು ಅಧಿವಿಚಾರಣೆ ಮಾಡಿ ಆರೋಪಿ ಮಾಡಿರುವ ಆರೋಪ ಸಾಬೀತಾಗಿದ್ದರಿಂದ  ಈತನ ವಿರುದ್ದ ಕಲಂ 279 ರ ಅಡಿಪಾಯ ಅಪರಾಧಕ್ಕಾಗಿ 1 ತಿಂಗಳ ಸಾಧಾರಣ ಶಿಕ್ಷೆ ಮತ್ತು 1 ಸಾವಿರ ದಂಡ. 337 ರ ಅಡಿಯಲ್ಲಿ ಅಪರಾಧಕ್ಕಾಗಿ 1 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಮತ್ತು 500 ರೂ ದಂಡ, 304(ಎ) ಐಪಿಸಿ ಅಪರಾಧಕ್ಕಾಗಿ 1 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ದಂಡ ಸದರಿಜುಲ್ಮಾನೆ ಪಾವತಿಸಲು ತಪ್ಪಿದ್ದಲ್ಲಿ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸತಕ್ಕದ್ದು, 187 ಐ ಎಮ್ ವಿ ಆ್ಯಕ್ಟ್ ಅಪರಾಧಕ್ಕಾಗಿ 5 ನೂರು ರೂಪಾಯಿ ದಂಡ ವಿಧಿಸಿದ್ದು, ಜುಲ್ಮಾನೆ ತಪ್ಪಿದಲ್ಲಿ 1 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸತಕ್ಕದ್ದು ಎಂದು ತಿಳಿಸಿದ್ದಾರೆ.

    ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಸುನಂದ ಆರ್ ಅವರು ವಾದವನ್ನು ಮಂಡಿಸಿರುತ್ತಾರೆ.
    apvc-iconPost Views: 25
  • ಪಡಿತರ ಆಹಾರ ಬಿಡುಗಡೆ

    ಪಡಿತರ ಆಹಾರ ಬಿಡುಗಡೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಅಕ್ಟೋಬರ್ 05, (ಕ.ವಾ) :ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಪಡಿತರ ಆಹಾರ ವಿತರಿಸಿದೆ ಎಂದು ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ಅನೀಲ ಕುಮಾರ ಡವಳಗಿ ಅವರು ತಿಳಿಸಿದ್ದಾರೆ.

    ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ 2024ರ ಅಕ್ಟೋಬರ್ ಮಾಹೆಯಲ್ಲಿ ಯಾದಗಿರಿ ಜಿಲ್ಲೆಯ ಎಎವೈ  (AAY)28,550 ಪಡಿತರ ಚೀಟಿಗಳಿದ್ದು, ಪ್ರತಿ ಪಡಿತರ ಚೀಟಿಗಳಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಜೋಳ ಹಾಗೂ ಬಿಪಿಎಲ್  (BPL) 8,82,101 ಪಡಿತರ ಸದಸ್ಯರಿದ್ದು, ಪ್ರತಿ ಪಡಿತರ ಸದಸ್ಯರಿಗೆ 3 ಕೆಜಿ ಎನ್‌ಎಫ್‌ಎಸ್‌ಎ ಅಕ್ಕಿ ಮತ್ತು 2 ಕೆಜಿ ಜೋಳ ಉಚಿತವಾಗಿ ವಿತರಿಸಲಾಗುವುದು.

    2024ರ ಅಕ್ಟೋಬರ್ ಮಾಹೆಯ ಆಹಾರಧಾನ್ಯ ಪಡೆಯಲು ಇಚ್ಚೆಯನ್ನು ವ್ಯಕ್ತಪಡಿಸಲು ಆಧ್ಯತೇತರ (ಂPಐ) 4,832 ಪಡಿತರ ಚೀಟಿಗಳಿದ್ದು, ಸದರಿ APLಪಡಿತರ ಚೀಟಿಯ ಫಲಾನುಭವಿಗಳ ಪೈಕಿ ಏಕ ಸದಸ್ಯರ ಪಡಿತರ ಚೀಟಿಗಳಿಗೆ 5 ಕೆಜಿ ಅಕ್ಕಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರ ಪಡಿತರ ಚೀಟಿಗಳಿಗೆ 10 ಕೆಜಿ ಅಕ್ಕಿ ಯನ್ನು ಪ್ರತಿ ಕೆಜಿಗೆ 15ರೂ. ರಂತೆ ನೀಡಿ ಆಹಾರಧಾನ್ಯವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಜಿಲ್ಲೆಯ ಎಲ್ಲಾ 403 ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯರ ಒ.ಟಿ.ಪಿ ಮುಖಾಂತರ ಅಥವಾ ಬೆರಳಚ್ಚನ್ನು, ಬಯೋಮೆಟ್ರಿಕ್ ಪಡೆದು ಪಡಿತರ ವಿತರಿಸಲು  (Point of Sale POS Shop Module)   ವ್ಯವಸ್ಥೆ ಮಾಡಲಾಗಿದೆ ಕುಟುಂಬದ ಸದಸ್ಯರಿಗೆ ಲಭ್ಯವಾಗಿರುವ ಅರ್ಹತಾ ಪಡಿತರ ಚೀಟಿ ಪ್ರಕಾರ ತಿಳಿದುಕೊಂಡು ಆಹಾರ ಧಾನ್ಯ ಪಡೆದುಕೊಳ್ಳಬಹುದಾಗಿರುತ್ತದೆ. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಪಡಿತರ ಪಡೆದುಕೊಳ್ಳಲು ಯಾವುದೇ ದೂರು ಇದ್ದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯಾ ತಾಲ್ಲೂಕಿನ ತಹಸೀಲ್ದಾರರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಉಪ ನಿರ್ದೇಶಕರ ಕಛೇರಿಗೆ ದೂ.ಸಂ 08473 253707, ಸಹಾಯವಾಣಿ 1967 ಸಂಖ್ಯೆಗೆ ದೂರನ್ನು ದಾಖಲಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    apvc-iconPost Views: 28
  • ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕ ಮುದ್ನಾಳ : ಹೆಡಗಿಮದ್ರಾ ಶ್ರೀ

    ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕ ಮುದ್ನಾಳ : ಹೆಡಗಿಮದ್ರಾ ಶ್ರೀ

    ಸತ್ಯಕಾಮ ವಾರ್ತೆ ಯಾದಗಿರಿ :

    ಹಿರಿಯ ರಾಜಕಾರಣಿಯಾಗಿದ್ದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಬದುಕಿನ ಹೆಚ್ಚುಕಾಲ ಜನ ಸೇವೆಯಲ್ಲಿಯೇ ಕಳೆದರು, ಅವರು ಜೀವನದ ಅತಿಹೆಚ್ಚು ದಿನಗಳ ನ್ಯಾಯ, ನೀತಿ, ಧರ್ಮ ಪರಿಪಾಲನೆ ಹೀಗೆ ಸಾಮಾಜಿಕ ಜೀವನದಲ್ಲಿಯೇ ಕಳೆದರು ಎಂದು ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿಶ್ವರ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.

    ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ, ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನಾಟಕ ಮಾಡಿ ಬದುಕುವುದಕ್ಕಿಂತ ನೇರ ದಿಟ್ಟ ನಡೆ ನುಡಿಯಿಂದ ಬದುಕುಬೇಕು ಎಂಬುದು ಅವರ ತತ್ವವಾಗಿತ್ತು, ಜೀವನದುದ್ದಕ್ಕೂ ಕೂಡ ಅವರು ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕರಾಗಿಯೇ ಜೀವನ ನಡೆಸಿದರು ಎಂದು ಹೇಳಿದರು.

    ಯಾದಗಿರಿ ಜಿಲ್ಲೆಯಲ್ಲಿ ರಾಜಕೀಯ ಜೀವನದಲ್ಲಿ ಹೆಚ್ಚಿನ ಅಭಿವೃದ್ದಿಗಳನ್ನು ಮಾಡಿದ್ದಾರೆ ಅವರ ಆತ್ಮಕ್ಕೆ ದೇವರು ಶಾತಿ ನೀಡಲಿ ಎಂದು ತಿಳಿಸಿದರು.

    ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಅವರು ರಾಜಕೀಯ ಜೀವನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಸದಾ ಜನರ ಕಾಳಜಿವಹಿಸುವ ಓರ್ವ ನಾಯಕರಾಗಿದ್ದರು ನ್ಯಾಯ, ನೀತಿಯಂತೆ ಬದುಕು ನಡೆಸಿದ ಒಬ್ಬ ಜನ ನಾಯಕರು ವೆಂಕಟರೆಡ್ಡಿಗೌಡ ಮುದ್ನಾಳ ಆಗಿದ್ದರು ಎಂದು ಹೇಳಿದರು.

    ದಾಸಬಾಳ ಶ್ರೀ ಮಠದ ಸದ್ಗುರು ವೀರೇಶ್ವರ ಮಹಾಸ್ವಾಮಿಗಳು ಮಾತನಾಡಿ, ವೆಂಕಟರೆಡ್ಡಿಗೌಡ ಮುದ್ನಾಳ ಅವರು ಕೇವಲ ಜನ ನಾಯಕರಾಗಿರದೇ ಜನ ಪ್ರೀತಿಯ ನಾಯಕರಾಗಿದ್ದರು, ಜೀವನವಿಡಿ ಮತಕ್ಷೇತ್ರದ ಜನರ ಒಳಿತಿಗಾಗಿ ಹಗಲಿರುಳು ಶ್ರಮಿಸಿದ ಧೀಮಂತ ನಾಯಕರಾಗಿದ್ದರು ಎಂದು ಹೇಳಿದರು.

    ಸೊಪ್ಪಿಮಠಡ ಶ್ರಿಗಳಾದ ಚನ್ನಕೇಶವ ಮಹಾಸ್ವಾಮಿಗಳು. ವಿಶ್ವಕರ್ಮ ಏಕದಂಡಗಿ ಮಠದ ಕುಮಾರ ಮಹಾಸ್ವಾಮಿಗಳು ಮಾತನಾಡಿದರು.

    ಈ ಸಂದರ್ಭದಲ್ಲಿ ವೀರಶೈವ ಸಮಾಜದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ. ರಾಚಣ್ಣಗೌಡ ಮುದ್ನಾಳ. ಮಹೇಶರೆಡ್ಡಿ ಗೌಡ ಮುದ್ನಾಳ. ಹಣಮಂತರೆಡ್ಡಿ ಗೌಡ ಮುದ್ನಾಳ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ. ಶರಣಪ್ಪಗೌಡ ಮಲ್ಹಾರ. ವೀರಶೈವ ಸಮಾಜದ ಗೌರವ ಅಧ್ಯಕ್ಷ ಎಸ್ ಬಿ ಪಾಟೀಲ. ಸಿ ಎಸ್ ಮಾಲಿಪಾಟೀಲ. ಚನ್ನಬಸರೆಡ್ಡಿ ಗೌಡ ಮುದ್ನಾಳ. ಸೋಮಶೇಖರ್ ಮಣ್ಣೂರ. ಬಸವಂತ್ರಾಯ ಗೌಡ ಮಾಲಿ ಪಾಟೀಲ. ಗೂಂಡುರಾವ ಪಂಚೇತ್ರಿ. ಬಸವರಾಜ ಮೋಟ್ನಳ್ಳಿ. ಆರ್ ಮಹಾದೇವಪ್ಪ ಗೌಡ ಅಬ್ಬೆತುಮಕೂರ. ನಾಗರತ್ನ ಕುಪ್ಪಿ. ನಾಗರತ್ನ ಅನಪೂರ. ಅನ್ನಪೂರ್ಣ ಜವಳಿ ವೀಣಾ ಮೋದಿ. ಸುನೀತಾ ಚವ್ಹಾಣ. ನಾಗೇಂದ್ರ ಜಾಜಿ. ಸಿದ್ದರಾಜ ರೆಡ್ಡಿ ರಾಜಶೇಖರ ಕಿಲ್ಲನಕೇರಿ. ಆರ್ ಮಹಾದೇವಪ್ಪ ಗೌಡ ಅಬ್ಬೆತುಮಕೂರ. ಚೆನ್ನಪ್ಪ ಸಾಹುಕಾರ. ಇತರರು ಇದ್ದರು

    apvc-iconPost Views: 132