Blog

  • ತರಗತಿ ಬಹಿಷ್ಕರಿಸಿ ರಸ್ತೆಗಿ ಬಂದ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು

    ತರಗತಿ ಬಹಿಷ್ಕರಿಸಿ ರಸ್ತೆಗಿ ಬಂದ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು

    • ಶಹಾಪುರ ತಾಲೂಕು ಆಡಳಿತ ಕಚೇರಿ ಎದುರು ಧರಣಿ
    • ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೌಡು
    • ಅಮಾನತುಗೊಂಡ ಶಿಕ್ಷಕರೇ ಬೇಕೆಂದು ಪಟ್ಟು ಹಿಡಿದ ಮಕ್ಕಳು…!

    ಸತ್ಯಕಾಮ ವಾರ್ತೆ ಶಹಾಪುರ:

    ಇಲ್ಲಿನ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಏಕಾಏಕಿ ತರಗತಿ ಬಹಿಷ್ಕರಿಸಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

     

    ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕ ಶಿವರಾಜ್ ಬೀರನೂರ ಮತ್ತು ಹಿಂದಿ ಶಿಕ್ಷಕ ಮುಬಾರಕ್ ಅವರನ್ನು ಅಮಾನತುಗೊಳಿಸಿ ಡಿ.2 ರಂದಷ್ಟೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

     

    ಅಮಾನತುಗೊಂಡ ಶಿಕ್ಷಕ ಶಿವರಾಜ್, ಪ್ರಾಂಶುಪಾಲರಿಗೆ ಶಾಲಾ ಆಡಳಿತ ಸುಗಮವಾಗಿ ನಡೆಸಲು ಬಿಡದೆ ತಡೆಯೊಡ್ಡುವುದು, ಪ್ರಾಂಶುಪಾಲ ವಿರುದ್ಧ ಮಕ್ಕಳನ್ನು ಎತ್ತಿಕಟ್ಟುವ ಕೆಲಸ, ಮಕ್ಕಳಲ್ಲಿ ಜಾತಿ ಭೇದ ಭಾವ ಮೂಡಿಸಿ ಶಾಲಾ ವಾತಾವರಣ ಹಾಳು ಮಾಡಿದ ಆರೋಪದ ಎದುರಿಸುತ್ತಿದ್ದಾರೆ. ಇನ್ನು ಮುಬಾರಕ್ ಸರಿಯಾಗಿ ಪಾಠ ಬೋಧಿಸದೇ ಮಕ್ಕಳಿಗೆ ಫೋನ್ ಕೊಡುವ ಆಮಿಷ ತೋರಿಸಿ ಸಿಬ್ಬಂದಿ ಕೋಣೆಗೆ ಕರೆಯಿಸುತ್ತಿದ್ದರು, ಈ ಬಗ್ಗೆ ಸಿಬ್ಬಂದಿಗಳು ತಿಳಿ ಹೇಳಿದ್ದರಿಂದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ಸುಳ್ಳು ಹೇಳುವ ಸಂಚು ಮಾಡಿದ್ದು ಸೇರಿ ಹಲವು ಆರೋಪಗಳಿವೆ.

     

    ಈ ಕುರಿತು ಸೂಕ್ತ ಉತ್ತರ ನೀಡಲು ನವೆಂಬರ್ ತಿಂಗಳಲ್ಲಿ ಈರ್ವರು ಶಿಕ್ಷಕರಿಗೆ ನೋಟಿಸ್ ಜಾರಿಯಾಗಿತ್ತು.

     

    ಆದರೆ ಇದೀಗ ಪ್ರಕರಣ ಈಗ ಇನ್ನೊಂದು ತಿರುವು ಪಡೆದಿದ್ದು, ಪ್ರಾಂಶುಪಾಲ ಸಿದ್ದಭೀರಪ್ಪ ಮತ್ತು ನಿಲಯ ಪಾಲಕ ರಾವುತಪ್ಪ ಇಬ್ಬರ ಒಳ ಒಪ್ಪಂದದ ಮೇರೆಗೆ ನಿಲಯಕರು ಒಂದು ತಿಂಗಳು ಶಾಲಾಗೆ ಬರದೇ ಅನಧಿಕೃತವಾಗಿ ಗೈರಾಜರಾಗಿದ್ದರು. ಒಂದು ತಿಂಗಳ ರುಜು ಒಂದೇ ಬಾರಿ ಮಾಡಿ (ಆಗಸ್ಟ್ 24) ವೇತನವನ್ನು ಪಡೆದು ಕೊಂಡಿರುತ್ತಾರೆ ಎಂದು ಆರೋಪಗಳು ಕೇಳಿ ಬಂದಿವೆ.

     

    ನಿಲಯಪಾಲಕ ರಾವುತಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿದ್ಯಾರ್ಥಿಗಳಿಗೆ ಹೊಡೆಯಲು ಮುಂದಾಗಿರುವುದು ಬಯಲಾಗಿದೆ.

     

    ಗಂಡ – ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಪ್ರಾಂಶುಪಾಲ, ನಿಲಯ ಪಾಲಕ ಹಾಗೂ ಸಿಬ್ಬಂದಿಗಳ ಒಳಸಂಚಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಎನ್ನುವುದು ಸತ್ಯ.

     

    ಸಮಾಜ ಕಲ್ಯಾಣ ಅಧಿಕಾರಿ ದೌಡು: ವಿದ್ಯಾರ್ಥಿಗಳ ಪ್ರತಿಭಟನೆ ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆರಿಸಿದ್ದಾರೆ ಎಂದು ತಿಳಿದು ಬಂದಿದೆ. ಅವರನ್ನು ಸಂಪರ್ಕಿಸಿದಾಗ ಫೋನ್ ಕರೆಯ ಪ್ರತಿಕ್ರಿಯೆಗೆ ಸಿಕ್ಕಿಲ್ಲ.

    ವ್ಯವಸ್ಥೆ ಸರಿಯಿಲ್ಲ: ವಸತಿ ಶಾಲೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅಂಶ ಈ ಹೋರಾಟದಿಂದ ಬೆಳಕಿಗೆ ಬಂದಿದೆ. ಸ್ಥಳೀಯ ಸಂಘಟನೆ ಪ್ರಮುಖರೊಬ್ಬರು ಮಾತನಾಡಿ ಇಲ್ಲಿನ ವ್ಯವಸ್ಥೆ ಬಗ್ಗೆ ಹಲವು ಬಾರಿ ದೂರು ನೀಡಿದ್ದೇವೆ. ತಂದೆ ತಾಯಿ ಬಿಟ್ಟು ಅಕ್ಷರ ಕಲಿಯಲು ಬಂದ ಮಕ್ಕಳಿಗೆ ಉತ್ತಮ ಭೋಧನೆ ಮಾಡಬೇಕು. ಈ ರೀತಿ ಮಕ್ಕಳನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

    apvc-iconPost Views: 138
  • ಡಿ.5ರಂದು ವಕ್ಫಾಸುರನ ವಿರುದ್ಧ ಶಹಾಪೂರದಲ್ಲಿ ಬೃಹತ್ ಪ್ರತಿಭಟನೆ: ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ

    ಡಿ.5ರಂದು ವಕ್ಫಾಸುರನ ವಿರುದ್ಧ ಶಹಾಪೂರದಲ್ಲಿ ಬೃಹತ್ ಪ್ರತಿಭಟನೆ: ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ

    ಸತ್ಯಕಾಮ ವಾರ್ತೆ ಯಾದಗಿರಿ:

    ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ರೈತರು, ಮಠಾಧೀಶರ ಜೊತೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಶಹಾಪೂರ ನಗರದಲ್ಲಿ ಡಿ. 5 ರಂದು ಬೆಳಗ್ಗೆ 11 ಕ್ಕೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ಪ್ರಕಟಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯಲ್ಲಿ ವಕ್ಫ್ ಹೆಸರಿನಲ್ಲಿ ರೈತರ, ಮಠ ಮಾನ್ಯಗಳ ಸೇರಿದಂತೆ ಎಲ್ಲರ ಜಮೀನು ನುಂಗುವ ನಿಟ್ಟಿನಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹಾಗೂ ಮುಡಾ ಹಗರಣ, ನಿಗಮಗಳ ಹಗರಣಗಳು ಸೇರಿದಂತೆ ಸರ್ಕಾರದ ವೈಫಲ್ಯದ ವಿರುದ್ಧವೂ ಪ್ರತಿಭಟನೆ ನಡೆಯಲಿದೆ.

    ಅಂದು ಬೆಳಗ್ಗೆ 11 ಕ್ಕೆ ಸಿಬಿ ಕಮಾನ್ ನಿಂದ ಹೊರಟು ಶ್ರೀ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆದು ಅಲ್ಲಿ ಬಹಿರಂಗ ಪ್ರತಿಭಟನಾ ಸಮಾವೇಶ ನಡೆಲಿದೆ. ಇದರಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ, ಮಾಜಿ ಸಚಿವರಾದ ಬೈರತಿ ಬಸವರಾಜ, ಪಿ. ರಾಜೀವ್ ಸೇರಿದಂತೆ ಜಿಲ್ಲೆಯ ರಾಜ್ಯಮಟ್ಟದ ನಾಯಕರು ಭಾಗಿಯಾಗಲಿದ್ದಾರೆ.

    4ನೇ ತಾರೀಖಿನಂದು ಬೀದರ ಕಲ್ಬುರ್ಗಿ ಪೂರ್ಣಗೊಳಿಸಿ 5 ರಂದು ಯಾದಗಿರಿ ರಾಯಚೂರಿನಲ್ಲಿ ವಿಜಯೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನಂತರ ಮುಂದೆ ಸಾಗಿ ಬೆಳಗಾವಿಗೆ ಈ ನಿಯೋಗ ತೆರಳಲಿದೆ ಎಂದು ಅವರು ತಿಳಿಸಿದರು.

    ಮನವಿ: ಇದು ರೈತರ ಹಾಗೂ ಮಠ ಮಾನ್ಯಗಳ ಆಸ್ತಿಯನ್ನು ಅಕ್ರಮವಾಗಿ ನುಂಗುತ್ತಿರುವ ವಕ್ಫಾಸುರ ಕೃತ್ಯದ ವಿರುದ್ಧ ಇರುವುದರಿಂದ ರೈತರು, ಮಠಾಧೀಶರು, ಪ್ರಗತಿಪರರು,ರೈತ ಪರ ಸಂಘಟನೆಗಳು ಸೇರಿದಂತೆ ಎಲ್ಲರಿಗೂ ಮನವಿ ಮಾಡಿಕೊಂಡಿದ್ದು ಪ್ರತಿಯೊಬ್ಬರೂ ಭಾಗವಹಿಸಿ ಈ ಅಕ್ರಮದ ವಿರುದ್ಧ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

    ಸುದ್ದಿಗೋಷ್ಟಿಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್,ಯುವ ಮುಖಂಡ ಮಹೇಶರಡ್ಡಿಗೌಡ ಮುದ್ನಾಳ,ಅಲೆಮಾರಿ ನಿಗಮದ ಮಾಜಿ ಅದ್ಯಕ್ಷ ದೇವೇಂದ್ರನಾಥ ನಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಜಿಲ್ಲಾ ಖಜಾಂಚಿ ತಿರುಪತಿ ರಡ್ಡಿ,ನಗರ ಮಂಡಲ ಲಿಂಗಪ್ಪ ಹತ್ತಿಮನಿ ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ ಕಡೆಸೂರ ಇದ್ದರು.

    apvc-iconPost Views: 40
  • ಹೆಚ್.ಐ.ವಿ ಕುರಿತು ಯುವ ಜನಾಂಗ ಎಚ್ಚರವಾಗಿರಿ: ನ್ಯಾ.ಮರಿಯಪ್ಪ

    ಹೆಚ್.ಐ.ವಿ ಕುರಿತು ಯುವ ಜನಾಂಗ ಎಚ್ಚರವಾಗಿರಿ: ನ್ಯಾ.ಮರಿಯಪ್ಪ

    ಅಪಾಯಕಾರಿ ಹೆಚ್.ಐ.ವಿ ಕುರಿತು ಯುವ ಜನಾಂಗ ಎಚ್ಚರವಾಗಿರಿ-ಏಡ್ಸದಿಂದಆಗುವ ಅಪಾಯದ ಬಗ್ಗೆ ಅರಿವು ಹೊಂದಿ ಹಿರಿಯ ಸಿವಿಲ್ ನ್ಯಾಯಾಧೀಶರು  ಮರಿಯಪ್ಪ
    ಸತ್ಯಕಾಮ ವಾರ್ತೆ ಯಾದಗಿರಿ :
    ಏಡ್ಸದಂತಹ ಮಾಹಾಮಾರಿಯಿಂದ ದೂರವಿರಲು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ  ಹಿರಿಯ ಸಿವಿಲ್  ನ್ಯಾಯಾಧೀಶರಾದ ಮರಿಯಪ್ಪ ಹೇಳಿದರು.

    ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಙIಒS) ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ "ವಿಶ್ವ ಏಡ್ಸ್ ದಿನ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಙIಒS) ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ವಿಶ್ವ ಏಡ್ಸ್ ದಿನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಹೆಚ್.ಐ.ವಿಯಂತಹ ರೋಗಗಳಿಂದ ಯುವಕರು ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಮೊಬೈಲ್ ಹಾವಳಿ ಯುವಕರಲ್ಲಿ ಅತಿಯಾಗಿದ್ದು, ಇದು ಅವರು ದಾರಿ ತಪ್ಪಲು ಕಾರಣವಾಗುತ್ತಿದೆ. ಅದಕ್ಕೆ ಹೆಚ್ಚು,ಹೆಚ್ಚು ಜಾಗೃತಿ ಮುಖ್ಯವೆಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ್ ಬಿರಾದಾರ ಮಾತನಾಡಿ, ಏಡ್ಸ್ಗೆ ಚಿಕಿತ್ಸೆ ಸಾಧ್ಯ. ಆದರೆ ಸಂಪೂರ್ಣ ಗುಣಮುಖರಾಗಲು ಅಸಾಧ್ಯ. ಈ ಕಾರಣದಿಂದ ರೋಗಕ್ಕೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಏಡ್ಸ್ ಕುರಿತು ಅರಿವು ಹೊಂದಬೇಕು. ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

    ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಸಂಜೀವಕುಮಾರ ಸಿಂಗ್ ರಾಯಚೂರಕರ್ ಮಾತನಾಡಿ, ಯುವಕ ಯುವಕರಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದೆ. ಹಾನಿಕಾರಕ ಈ ರೋಗ ಸಂಪೂರ್ಣ ಗುಣಮುಖಕ್ಕೆ   ಲಸಿಕೆ ಲಭ್ಯವಾಗಿಲ್ಲ. ಆದರೆ ಇದನ್ನು ತಡೆಗಟ್ಟಲು ವಿಧಾನ ಸುಲಭ. ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಿಂದ ಈ ರೋಗ ಬರುತ್ತದೆ. ನಿರ್ಲಕ್ಷದ ಸೂಜಿಗಳಿಂದ ರೋಗ ಬರುತ್ತದೆ. ತಾಯಿಯಿಂದ ಮಗುವಿಗೆ ಬರುತ್ತದೆ. ಇದನ್ನು ತಡೆಗಟ್ಟ ಬಹುದು.ಅಸುರಕ್ಷಿತ ಲೈಂಗಿಕ ಸಂಬAಧದಿAದ ಗ್ರಾಮೀಣ ಭಾಗದಲ್ಲಿಯೂ ಏಡ್ಸ್  ಹೆಚ್ಚಾಗುತ್ತಿದೆ. ಲೈಂಗಿಕ ಕ್ರಿಯೆಗಳು ಮದುವೆ ಮುಂಚೆ ನಡೆಯುತ್ತಿರುವುದು ಕಳವಳ ಸಂಗತಿ ಎಂದರು.

    ಲೈಂಗಿಕ ಸುರಕ್ಷಾ ಕ್ರಮಗಳು ಹಾಗೂ ಕಾಂಡಮ್ ಬಳಸುವುದರಿಂದ ಏಡ್ಸ್ ತಡೆಗಟ್ಟ ಬಹುದು. ಇಂದಿನ ಯುವ ಜನಾಂಗ ಏಡ್ಸ್ನಂತಹ ಭೀಕರ ಕಾಯಿಲೆಗೆ ತುತ್ತಾಗುತ್ತಿರುವುದು ಕಳವಳಕಾರಿ ಸಂಗತಿ. ಯುವಕರು ತಮ್ಮ ಜೀವನ ಹಾಳು ಮಾಡಿಕೊಳ್ಳದೆ ದೇಹ ಮತ್ತು ಮನಸ್ಸು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

    ಆರಂಭದಲ್ಲಿ ಗಾಂಧಿ ವೃತ್ತದಲ್ಲಿ ಏಡ್ಸ್ ಜಾಗೃತಿ ಜಾಥಾಕ್ಕೆ ಕಾನೂನು ಸೇವಾ ಪ್ರಾಧಿಕಾರದ  ಸದಸ್ಯ ಕಾರ್ಯದರ್ಶಿಗಳು  ಮರೆಪ್ಪ ಜಾಥಾಕ್ಕೆ ಚಾಲನೆ ನೀಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸಾಜೀದ್, ತಾಲೂಕು ಆರೋಗ್ಯಧಿಕಾರಿ ಡಾ. ಹನುಮಂತ ರೆಡ್ಡಿ, ಐಎಮ್ ಎ ಜಿಲ್ಲಾಧ್ಯಕ್ಷ ಡಾ.ಚಂದ್ರಕಾAತ ಪೂಜಾರಿ, ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲಾ ಸಿನ್ನೂರ್, ಡಾ.ಶರಣಬಸಪ್ಪ ಎಲ್ಹೇರಿ, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ , ತುಳಸಿರಾಮ, ಅಮರೇಶ ಬೋತಿ ಇದ್ದರು. ಇದೆ ಸಂದರ್ಭದಲ್ಲಿ ಹೆಚ್.ಐ.ವಿ ಸಮುದಾಯಕ್ಕೆ ಸಹಾಯ, ಸಹಕಾರ ಮತ್ತು ಹೆಚ್ ಐ.ವಿ ಪರೀಕ್ಷೆ ಮಾಡುವಲ್ಲಿ ಗುರಿ ಸಾಧನೆ ಮಾಡಿದ್ದಕ್ಕಾಗಿ  ಸಂಬAಧಿಸಿದ  ಸಿಬ್ಬಂದಿಗಳನ್ನು ಸನ್ಮಾನ ಮಾಡಲಾಯಿತು.

    apvc-iconPost Views: 70
  • ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಲು ಶಾಸಕ ಕಂದಕೂರ ಸಲಹೆ

    ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಲು ಶಾಸಕ ಕಂದಕೂರ ಸಲಹೆ


    ಸತ್ಯಕಾಮ ವಾರ್ತೆ ಯಾದಗಿರಿ:

    ಅಂಗವಿಕಲರು, ವಿಶೇಷ ಚೇತನರು ಮುಖ್ಯವಾಹಿನಿಗೆ ಬರಲು ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿ ಸೌಲಭ್ಯ ಒದಗಿಸುತ್ತಿದ್ದು, ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

    ಇಲ್ಲಿನ ಗುರುಮಠಕಲ್ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ವತಿಯಿಂದ ಶಾಸಕರ ಅನುದಾನದಲ್ಲಿ ನೀಡಲಾಗುವ ೧೯ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು. ಪ್ರತಿಯೊಬ್ಬರೂ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಬೇಕು, ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳುವುದರ ಜೊತೆಗೆ ಗಾಡಿ ನಡೆಸುವಾಗ ನಮ್ಮ ಕುಟುಂಬದ ನೆನಪಿಟ್ಟುಕೊಂಡು ವಾಹನ ಚಲಾಯಿಸಬೇಕು ಎಂದು ಹೇಳಿದರು.

    ಅಂಗವಿಕಲರ ಬದುಕು ಸುಧಾರಣೆಗಾಗಿ ಶಾಸಕರ ಅನುದಾನದಲ್ಲಿ ತ್ರಿಚಕ್ರ ವಾಹನಗಳನ್ನು ನೀಡಲಾಗುತ್ತಿದ್ದು, ಈ ತ್ರಿಚಕ್ರ ವಾಹನಗಳು ಅಂಗವಿಕಲರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಲಿವೆ ಎಂದರು.

    ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಉಪ ನಿರ್ದೇಶಕ ಶರಣಪ್ಪ ಪಾಟೀಲ, ಕೃಷ್ಣಾಜೀ ಕುಲಕರ್ಣಿ, ಭೋಜನಗೌಡ ಯಡ್ಡಳ್ಳಿ, ಸೋಮನಗೌಡ ಬೆಳಗೇರಾ, ಅಜಯರಡ್ಡಿ ಎಲ್ಹೇರಿ, ರಾಮಣ್ಣ ಕೋಟಗೇರಾ, ಸಣ್ಣೆಪ್ಪ ಕೊಟಗೇರಾ, ಈಶ್ವರನಾಯಕ ಚಿಂತನಹಳ್ಳಿ, ಜಯಣ್ಣ ಎಂಪಾಡ, ಬಾಲು ದಾಸರಿ, ಬಾನು ಮೇಧಾ, ಬಂದಪ್ಪಗೌಡ ಲಿಂಗೇರಿ, ಬಸನಗೌಡ ಚಾಮನಳ್ಳಿ, ಶರಣಪ್ಪ ಮೋಟ್ನಳ್ಳಿ ಸೇರಿದಂತೆ ಇತರರಿದ್ದರು.

    ಸುರಕ್ಷತೆಗಾಗಿ ಹೆಲ್ಮೆಟ್ ವಿತರಣೆ

    ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆವತಿಯಿಂದ ನೀಡಲಾಗುವ ತ್ರಿಚಕ್ರ ವಾಹನಗಳ ಫಲಾನುಭವಿಗಳಿಗೆ ಹೆಲ್ಮೆಟ್ ನೀಡದಿರುವುದನ್ನು ಕಂಡು ಶಾಸಕ ಶರಣಗೌಡ ಕಂದಕೂರ ವೈಯಕ್ತಿಕವಾಗಿ ಎಲ್ಲಾ ಫಲಾನುಭವಿಗಳಿಗೆ ಹೆಲ್ಮೆಟ್ ನೀಡಿ ಕಡ್ಡಾಯವಾಗಿ ಧರಿಸಿ ವಾಹನ ಚಲಾಯಿಸುವಂತೆ ಸೂಚಿಸಿದರು.

    ಹೆಲ್ಮೆಟ್ ಧರಿಸುವುದರಿಂದ ನಮ್ಮ ಜೀವ ಉಳಿಯುವುದರ ಜೊತೆಗೆ ನಮ್ಮ ಕುಟುಂಬವನ್ನು ನಾವು ಉಳಿಸಿದಂತಾಗುತ್ತದೆ. ಆದ್ದರಿಂದ ಕಡ್ಡಾಯವಾಗಿ ಎಲ್ಲರೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಫಲಾನುಭವಿಗಳಿಗೆ ಸೂಚಿಸಿದರು.

    apvc-iconPost Views: 70
  • ಸಿನಿಮಯ ರೀತಿಯಲ್ಲಿ ಕೊಲೆ ಆರೋಪಿಯ ಬಂಧನ

    ಸಿನಿಮಯ ರೀತಿಯಲ್ಲಿ ಕೊಲೆ ಆರೋಪಿಯ ಬಂಧನ

    ಬೀದರ :—– ನಗರದ ನೂತನ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ ಗಣೇಶ್ ಮೈದಾನದ ಫೂಟ್ ಪಾತ್ ಮೇಲೆ ಗಟ್ಟಿಯಾದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಪ್ರಕರಣವೊಂದು ದಾಖಲಾದ 24 ಗಂಟೆ ಒಳಗಾಗಿ ಬೀದರ್ ಪೊಲೀಸರು ಸಿನಿಮಯ ರೀತಿಯಲ್ಲಿ ಪ್ರಕರಣದ ಬೆನ್ನುಹತ್ತಿ ಆರೋಪಿಯನ್ನು ಬಂಧಿಸಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

    ಪ್ರದೀಪ್ ಗುಂಟಿಯವರ ಮಾರ್ಗದರ್ಶನದಲ್ಲಿ ಮಹೇಶ್ ಮೇಘಣ್ಣನವರ್ ಹೆಚ್ಚುವರಿ ಎಸ್ಪಿ, ಚಂದ್ರ್ಕಾಂತ್ ಪೂಜಾರಿ ಹೆಚ್ಚುವರಿ ಅಧೀಕ್ಷಕರು, ಶಿವಾನಂದ ಗೌಡ ಪಾಟೀಲ್ ಉಪಾಧೀಕ್ಷಕರು, ಇವರ ಮುಂದಾಳತ್ವದಲ್ಲಿ ನೂತನ ನಗರ ಪೊಲೀಸ್ ಠಾಣೆಯ ಪಿಎಸ್ಐ ವಿಜಯ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಕಾಶ್, ನಿಂಗಪ್ಪ, ಭರತ್, ಗಾಂಧಿ ಗಂಜ್ ಠಾಣೆ ಸಿಬ್ಬಂದಿ ನವೀನ್, ಗಂಗಾಧರ್, ಸುಧಾಕರ್ ರವರನ್ನೊಳಗೊಂಡ ತಂಡವೊಂದನ್ನು ರಚಿಸಿ ಕಾರ್ಯ ಪ್ರವೃತ್ತರಾಗಿ ಅತ್ಯಂತ ಚಾಣಾಕ್ಷತನದಿಂದ ವೈಜ್ಞಾನಿಕ ಸಾಕ್ಷಿಗಳ ನೆರವು ಮತ್ತು ಪೊಲೀಸ್ ಬಾತ್ಮಿದ್ದಾರರಿಂದ ಮಾಹಿತಿ ಸಂಗ್ರಹಿಸಿ ಕೇವಲ 24 ಗಂಟೆ ಒಳಗಾಗಿ ಇಬ್ಬರು ಆರೋಪಿತರನ್ನು ಬೀದರ್ ವಿದ್ಯಾನಗರ ಕಾಲೋನಿ ಯಿಂದ ದಸ್ತಗಿರ್ ಮಾಡಿ ನ್ಯಾಯಾಂಗ ಬಂಧನ ಕೊಪ್ಪಿಸಲಾಗಿದೆ. ಪೊಲೀಸರ ಈ ಕಾರ್ಯಕ್ಷಮತೆಗೆ ಸಾರ್ವಜನಿಕರ ಪ್ರಶಂಸನೆಗಳು ಹರಿದು ಬಂದಿದ್ದು, ಈ ಪ್ರಯುಕ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಹುಮಾನ ನೀಡಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ವರದಿಯಾಗಿದೆ.

    apvc-iconPost Views: 115
  • ಉತ್ತಮ ಆರೋಗ್ಯಕ್ಕೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ: ಸಚಿವ ದರ್ಶನಾಪುರ

    ಉತ್ತಮ ಆರೋಗ್ಯಕ್ಕೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ: ಸಚಿವ ದರ್ಶನಾಪುರ

    ಸತ್ಯಕಾಮ ವಾರ್ತೆ ಯಾದಗಿರಿ:

    ಪರಿಪೂರ್ಣ ವಿದ್ಯಾರ್ಥಿಯಾಗಲು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ದೈಹಿಕ-ಮಾನಸಿಕ ಉತ್ತಮ ಆರೋಗ್ಯಕ್ಕೆ ಕಡ್ಡಾಯ ರೂಡಿ‌ ಮಾಡಿಕೊಳ್ಳಬೇಕೇಂದು ಜಿಲ್ಲಾ ಉಸ್ತುವಾರಿ‌ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕ್ರೀಡಾಪಟುಗಳಿಗೆ ಕರೆ ನೀಡಿದರು.

    ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ‌ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸೋಮವಾರ ಆಯೋಜಿಸಿದ್ದ “ಕಲಬುರಗಿ ವಿಭಾಗ ಮಟ್ಟದ 14/17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ” ಉದ್ಘಾಟಿಸಿ ಅವರು ಮಾತನಾಡಿದರು.

    ಕ್ರೀಡೆಗಳಲ್ಲಿ ಸೋಲು,ಗೆಲುವು ಮುಖ್ಯವಲ್ಲ, ಭಾಗವಹಿಸಿ ಗುರಿ ಮುಟ್ಟುವ ಉದ್ದೇಶವಿರಬೇಕೆಂದರು. ಹಿಂದುಳಿದ‌ ಜಿಲ್ಲೆಯೆಂಬ ಹಣೆಪಟ್ಟಿ ಅಳಿಸಲು ವಿದ್ಯಾರ್ಥಿಗಳು ಓದು ಮತ್ತು ಕ್ರೀಡೆಗಳನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಸಾಧ್ಯವಾಗುತ್ತದೆ.‌ ಇಂದು ಕ್ರೀಡಾಕ್ಷೇತ್ರ ವ್ಯಾಪಕವಾಗಿ ಬೆಳೆದಿದೆ. ಇಲ್ಲಿಯೂ ಸಾಧನೆ ಮಾಡುವ ಮೂಲಕ ತಮ್ಮ ಜೀವನ ರೂಪಿಸಿಕೊಂಡು ಜಿಲ್ಲೆಯ ಮತ್ತು ದೇಶದ ಕೀರ್ತಿ ವಿಶ್ವವ್ಯಾಪಿ ಪಸರಿಸಬಹುದೆಂದು ಸಚಿವರು ಬಹು ಮಾರ್ಮಿಕವಾಗಿ ಹೇಳಿದರು.

    ದೇಶಿ ಕ್ರೀಡೆಗಳಿಗೆ ಸರ್ಕಾರಗಳು ಈಗ ಹೆಚ್ಚು ಉತ್ತೇಜನ ನೀಡುತ್ತಿವೆ. ನಮ್ಮ ಭಾಗದ ಕ್ರೀಡೆಗಳಾದ ಕೋಕೋ, ಕಬ್ಬಡಿ, ಕುಸ್ತಿ, ಕೇರಂ, ಬಿಲ್ಲುಗಾರಿಗೆ, ವೇಗದ ಓಟ ಹೀಗೆ ಅನೇಕ ಕ್ರೀಡೆಗಳಲ್ಲಿ ಮಕ್ಕಳು ತಮ್ಮ ಸಾಧನೆ ಮೆರೆಯಬೇಕು.ಕ್ರೀಡಾ ಕ್ಷೇತ್ರದಲ್ಲಿ ಪರಿಪೂರ್ಣ ಪರಿಣತಿ ಹೊಂದಿದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಸಚಿವರು ಹೇಳಿದರು.

    ಜಿಲ್ಲಾ ಕ್ರೀಡಾಂಗಣದಲ್ಲಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಇಲ್ಲಿನ‌ ಅಧಿಕಾರಿ ಕ್ರಮ‌ ತೆಗೆದುಕೊಳ್ಳಬೇಕು, ಕ್ರೀಡಾಗಳುಗಳಿಗೆ ಯಾವುದೇ ತೊಂದರೆಯಾಗದಂತೆಯೇ ಅಚ್ಚು ಕಟ್ಟಾದ ವ್ಯವಸ್ಥೆ ಮಾಡಬೇಕೆಂದು ಸಚಿವರು ಸೂಚಿಸಿದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಸಾಧನೆ ಮೆರೆದಿದ್ದು ನಮಗೆಲ್ಲ ಹೆಮ್ಮೆ ಎಂದರು. ಆಟ ಆಡುವಾಗ ಸ್ಪರ್ಧಾ ಮನೋಭಾವನೆ ಇರಲಿ, ನಂತರ ಎಲ್ಲರೂ ಅಣ್ಣ,ತಮ್ಮ,ಅಕ್ಕ, ತಂಗಿಯರಂತೇ ಇರಬೇಕು, ಆಸಕ್ತಿ ಇರುವ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಅನಾವರಣ ಮಾಡಬೇಕು.ಸೋಲು ಗೆಲುವಿಗೆ ಮಹತ್ವ ನೀಡದೇ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಬೇಕು.ಸೋತಾಗ ಮನನೊಂದದೇ ಧೈರ್ಯದಿಂದ ಮುಂದಿನ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಶಾಸಕರು ಹೇಳಿದರು.

    ಆರಂಭದಲ್ಲಿ ಕ್ರೀಡಾಮಕ್ಕಳಿಂದ ಕವಾಯಿತು ನಡೆಯಿತು, ಕ್ರೀಡಾಜ್ಯೋತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಸ್ವಾಗತಿಸಿಕೊಂಡರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ, ಡಿಡಿಪಿಐ ಸಿ.ಎಸ್.ಮುದೋಳ್, ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿಗಳಾದ ರಾಜು ಬಾವಿಹಳ್ಳಿ, ಡಯಟ್ ಪ್ರಾಂಶುಪಾಲ ವೃಷಬೇಂದ್ರ, ಅನೀಲಕುಮಾರ ನಾಯಕ್, ಚಂದ್ರಶೇಖರಗೌಡ ಪಾಟೀಲ್, ಅಶೋಕ ಕೆಂಭಾವಿ, ಮುಖಂಡರಾದ ಬಸರೆಡ್ಡಿ ಅನಪೂರ, ಸಿದ್ದಲಿಂಗರಡ್ಡಿ, ಬಸವರಾಜ ಪಾಟೀಲ್ ಬಿಳ್ಹಾರ್ ಸೇರಿದಂತೆಯೆ ಇತರರಿದ್ದರು.

    ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು. ಕಲ್ಬುರ್ಗಿ ವಿಭಾಗದ
    ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಜಿಲ್ಲೆಗಳು ಸೇರಿದಂತೆಯೇ ಏಳು ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಥ್ರೋಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟದ ತಂಡಕ್ಕೆ ಆಯ್ಕೆಯಾದ ಕೆ.ಹೊಸಳ್ಳಿ ಗ್ರಾಮ ದ ವಿದ್ಯಾರ್ಥಿ ಕೆ.ಸಿದ್ಧಾರ್ಥ ಅವರನ್ನು ಸಚಿವರು ಸನ್ಮಾನಿಸಿದರು.

    apvc-iconPost Views: 23
  • ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಪಿ.ರಾಜೀವ್

    ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಪಿ.ರಾಜೀವ್

    ಸತ್ಯಕಾಮ ವಾರ್ತೆ ಯಾದಗಿರಿ:

    ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಗ್ಯಾರಂಟಿ ಯೋಜನೆಗಳಿಂದ ಬೀದಿಗೆ ಬಂದಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.

    ಸರ್ಕಾರ ನಡೆಸುತ್ಯಿರುವ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆ ನೀಡುತ್ತಿದ್ದಾರೆ. ಆದರೆ, ಅದದರ ಸಾಲವನ್ನು ರಾಜ್ಯದ ಶ್ರೀಸಾಮಾನ್ಯ ತೆರಿಗೆ ಹಣದಿಂದಲೇ ಭರಿಸಬೇಕಿದೆ. ಪಡಿತರ ಅಕ್ಕಿಯನ್ನು ನೀಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಈ ಸರ್ಕಾರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ಮುಡಾದಲ್ಲಿ ಏನು ಅಕ್ರಮ ನಡೆದೇ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ, ವಕ್ಫ್ ಮಂಡಳಿಗೆ ಬಿಜೆಪಿ ಅವಧಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಹೊಸ ಕಥೆ ಕಟ್ಟಲಾಗುತ್ತಿದೆ. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಇಂಥ ಕೆಲಸ ನಾವು ಮಾಡಿಲ್ಲ. ಸಚಿವ ಜಮೀರ್ ಅಹ್ಮದ್ ಅವರು ವಕ್ಫ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸೂಚನೆ ಮೇರೆಗೆ ಈ ಸಭೆ ನಡೆಸಲಾಗಿದೆ ಎಂದು ನಡುವಳಿಯಲ್ಲಿ ಬರೆಸಿದ್ದಾರೆ. ಹೀಗಾಗಿ ಜಮೀರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.

    ವಕ್ಫ್ ಹಗರಣವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದ್ದು, ನಮ್ಮ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೀದರ್ ನಿಂದ ಡಿ.04ರಂದು ಬೀದರ್ ಮತ್ತು ಕಲಬುರಗಿಯಲ್ಲಿ ಹೋರಾಟ ಮಾಡಲಿದ್ದಾರೆ. 5 ರಂದು ಬೆಳಗ್ಗೆ ಯಾದಗಿರಿಗೆ ಆಗಮಿಸಲಿದ್ದಾರೆ. ಸರ್ಕಾದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ನಾವು ಸದನದ ಹೊರಗೆ ಮತ್ತು ಒಳಗೆ ಹೋರಾಟ ನಡೆಸಲಿದ್ದೇವೆ ಎಂದರು.

    ಪಕ್ಷದಲ್ಲಿ ಯಾವುದೇ ಬಣ ರಾಜಕೀಯ ನಡೆದಿಲ್ಲ. ವಕ್ಫ್ ಹೋರಾಟಕ್ಕೆ ಬಿಜೆಪಿ ವರೀಷ್ಠರು ರಾಜ್ಯಾದ್ಯಂತ ಮೂರು ತಂಡ ರಚಿಸಿದ್ದಾರೆ. ಅದರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ತಂಡವಿದೆ ಎಂದ ರಾಜೀವ್, ಬಿಜೆಪಿಯಲ್ಲಿ ಕೆಲ ಭಿನ್ನಮತ ನಡೆಯುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸಿದೆ ಎಂದು ಒಪ್ಪಿಕೊಂಡರು.

    ಬೀದರ್ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಪಕ್ಷದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ),ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ,ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ ಮತ್ತು ಶರಣು ತಳ್ಳಿಕೇರಿ,ಪ್ರಮುಖರಾದ ನಾಗರತ್ನ ಕುಪ್ಪಿ, ರಾಚನಗೌಡ ಮುದ್ನಾಳ,ಮಹೇಶರಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಮೇಲಪ್ಪ ಗುಳಗಿ,ಜಿಲ್ಲಾ ವಕ್ತಾರ ಹಣಮಂತ ಇಟಗಿ,ಎಚ್.ಸಿ.ಪಾಟೀಲ್, ನಗರಸಭೆ ಉಪಾಧ್ಯಕ್ಷೆ ರುಕೀಯ ಬೇಗಂ ಇದ್ದರು…

    apvc-iconPost Views: 92
  • ವಿದ್ಯಾಥಿಗಳಲ್ಲಿ ಏಕಾಗ್ರತೆ ಬಹುಮುಖ್ಯ ಪಾತ್ರ ವಹಿಸುತ್ತದೆ : ಶಾಸಕ ತುನ್ನೂರ್

    ವಿದ್ಯಾಥಿಗಳಲ್ಲಿ ಏಕಾಗ್ರತೆ ಬಹುಮುಖ್ಯ ಪಾತ್ರ ವಹಿಸುತ್ತದೆ : ಶಾಸಕ ತುನ್ನೂರ್

    ಸತ್ಯಕಾಮ ವಾರ್ತೆ ಯಾದಗಿರಿ:
    ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ತಮ್ಮ ನಿತ್ಯ ದಿನಚರಿಗಳಲ್ಲಿ ತೊಡಗಿಸಿಕೊಂಡು, ಧ್ಯಾನ ಹಾಗೂ ವ್ಯಾಯಾಮಗಳಂತಹ ಕ್ರಿಯೆಗಳ ಮೂಲಕ ಏಕಾಗ್ರತೆಯಿಂದ ವೃದ್ಧಿಯಾಗಬೇಕು. ಸರ್ಕಾರದ ವತಿಯಿಂದ ಆಯುಷ್ ಇಲಾಖೆಯ ವಿದ್ಯಾರ್ಥಿ ಚೇತನ ವಿಶೇಷ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಜಿಲ್ಲೆಯ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಬೇಕೆಂದು ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ್ ಸಲಹೆ ನೀಡಿದರು.


    ತಾಲೂಕಿನ ಮುಂಡರಗಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸಮಾಜದ ಕಲ್ಯಾಣ ಇಲಾಖೆ, ಎಸ್.ಸಿ.ಎಸ್.ಪಿ ಮತ್ತು ಟಿಎಸ್.ಪಿ ಯೋಜನೆಯಡಿಯಲ್ಲಿ ಆಯೋಜಿಸಿದ ವಿದ್ಯಾರ್ಥಿ ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಪರಿಶ್ರಮದ ದಾರಿಯೇ ಹೊರತು ಅಡ್ಡ ದಾರಿಯ ಮಾರ್ಗ ಎಂದಿಗೂ ಸಫಲವಾಗುವುದಿಲ್ಲ. ಸರ್ಕಾರದಿಂದ ಸಿಗುವ ಅನೇಕ ಯೋಜನೆಗಳನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಳಸಿಕೊಂಡು ವಿದ್ಯಾಭ್ಯಾಸವನ್ನು ಉತ್ತಮ ರೀತಿಯಿಂದ ನಡೆಸಿಕೊಂಡ ಸಾಗಬೇಕು ಎಂದು ಹೇಳಿದರು.

    ವಿದ್ಯಾರ್ಥಿಗಳು ಬೆಳಿಗ್ಗೆ ಬ್ರಾಹ್ಮಿ ಮೂಹುರ್ಥದಲ್ಲಿ ಎದ್ದು ಸೂರ್ಯ ನಮಸ್ಕಾರದ ಮೂಲಕ ದೇಹ ದಂಡಿಸಿ, ಓದಲು ಕೂರಬೇಕು. ಏಕಾಗ್ರತೆಗಾಗಿ ಧ್ಯಾನವನ್ನು ರೂಢಿಸಿಕೊಂಡು ತಮ್ಮ ದಿನಚರಿಗಳನ್ನು ಆರಂಭಿಸುವುದು ಉತ್ತಮ ವಿದ್ಯಾರ್ಥಿಯ ಲಕ್ಷಣವೆಂದರು.

    ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಾದ ಚನ್ನಬಸವ ಅವರು ಮಾತನಾಡಿ, ಇಂತಹ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಏರ್ಪಡಿಸುತ್ತಿದ್ದು, ಆಯುಷ್ ಇಲಾಖೆಯ ವಿದ್ಯಾರ್ಥಿ ಚೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಇದರ ಮಹತ್ವ ಅರಿಯಬೇಕೆಂದು ತಿಳಿಸಿದರು.

    ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ವಂದನಾ.ಜೆ ಅವರು ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ, ವಸತಿ ಶಾಲಾ ಮಕ್ಕಳನ್ನು ಗಮನದಲಿಟ್ಟುಕೊಂಡ ವಿದ್ಯಾರ್ಥಿ ಚೇತನ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ವಿದ್ಯಾರ್ಥಿ ಚೇತನ ಕಾರ್ಯಕ್ರಮ ಮಹತ್ವ ಪೂರ್ಣವಾದದ್ದು, ಯೋಗ ತರಬೇತಿ ಸೇರಿದಂತೆ ದೈಹಿಕ ಚಟುವಟಿಕೆ, ವ್ಯಾಯಮಗಳನ್ನು ಸಹ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ವೈದ್ಯರಾದ ಡಾ.ಪ್ರಕಾಶ ಎಚ್.ರಾಜಾಪುರ ಅವರು ಪ್ರಾಸ್ತಾವಿಕ ಮಾತುಗಳಾಡಿದರು. ವಸತಿ ಶಾಲಾ ಮಕ್ಕಳಿಗೆ ದಿನಚರಿಯನ್ನು ವೈದ್ಯೆಧಿಕಾರಿಯಾದ ಡಾ.ಎಂ.ಬಿ.ಪಾಟೀಲ ನೀಡಿದರು. ಸಂಗಮೇಶ ಕೆಂಭಾವಿ ಅವರು ನಿರೂಪಿಸಿದರು.
     
    ವೇದಿಕೆ ಮೇಲೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಮಲ್ಲಣ್ಣ ಮಾಲೀಪಾಟೀಲ, ಡಾ.ರಮೇಶ ಸಜ್ಜನ್, ರವಿಕುಮಾರ ಪಾಟೀಲ, ಡಾ.ದೀಪಾ ರಾಠೋಡ, ಯೋಗ ತರಬೇತುದಾರ ಶಿವರೆಡ್ಡಿ, ಮಂಜುನಾಥ ಉಪಸ್ಥಿತರಿದ್ದರು.
    apvc-iconPost Views: 134
  • ಬಿರನಕಲ್ ತಾಂಡಾ ಶಾಲೆಗೆ ನ್ಯಾಯಾಧೀಶ ಕೆ .ಮರಿಯಪ್ಪ ಭೇಟಿ

    ಬಿರನಕಲ್ ತಾಂಡಾ ಶಾಲೆಗೆ ನ್ಯಾಯಾಧೀಶ ಕೆ .ಮರಿಯಪ್ಪ ಭೇಟಿ

    ಸತ್ಯಕಾಮ ವಾರ್ತೆ ವಡಗೇರಾ:

    ತಾಲೂಕಿನ ಬೀರನಕಲ್ ತಾಂಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರಾದ ಗೌರವಾನ್ವಿತ ಕೆ. ಮರಿಯಪ್ಪ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಾಮಾಜಿಕ ಹೋರಾಟಗಾರ್ತಿ ರುದ್ರಾಂಬಿಕ ಆರ್ .ಪಾಟೀಲ್ .ಚಟ್ನಳ್ಳಿ ರವರು ಮೇಲ್ಚಾವಣಿ ದುರಸ್ತಿ ಹಾಗೂ ಮೂಲಭೂತ ಸೌಕರ್ಯಗಳು ಒದಗಿಸುವಂತೆ ಪತ್ರಿಕೆ ಹೇಳಿಕೆ ಮೂಲಕ ಮನವಿ ಮಾಡಿಕೊಂಡಿದ್ದರು. ಶುಕ್ರವಾರ ಭೇಟಿ ನೀಡಿದ ನ್ಯಾಯಾಧೀಶರು ಬಿಸಿ ಊಟದ ವ್ಯವಸ್ಥೆ ಶಾಲಾ ಕೊಣೆ ಶೌಚಾಲಯ ಹಾಗೂ ಕುಡಿಯುವ ನೀರಿನ ಪೂರೈಕೆ ಕುರಿತು ಮಾಹಿತಿ ಪಡೆದರು ಬಿಸಿ ಊಟಕ್ಕೆ ಸಂಬಂಧಿಸಿದಂತೆ ಸ್ವಚ್ಛತೆ ಕಾಪಾಡಿಕೊಳ್ಳಲು ಸಿಬ್ಬಂದಿಗಳಿಗೆ ಹೇಳಿದರು.

    ವಿದ್ಯಾರ್ಥಿಗಳೊಂದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡುವ ಭರವಸೆ ನೀಡಿದರು ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

    apvc-iconPost Views: 8
  • ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ ಕಾರ್ಯಕ್ರಮ

    ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ ಕಾರ್ಯಕ್ರಮ


    ಸತ್ಯಕಾಮ ವಾರ್ತೆ ಯಾದಗಿರಿ:
    2024-25ನೇ ಸಾಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯಾದಗಿರಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕಲಬುರಗಿ ವಿಭಾಗ ಮಟ್ಟದ 14/17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟವನ್ನು ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 2024ರ ಡಿಸೆಂಬರ್ 2ರ ಸೋಮವಾರ ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ  ಶರಣಬಸಪ್ಪ ದರ್ಶನಾಪೂರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ  ಎಸ್.ಮಧು ಬಂಗಾರಪ್ಪ, ಹಾಗೂ ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕಛಲವಾದಿ ಟಿ.ನಾರಾಯಣಸ್ವಾಮಿ ಅವರ ಘನ ಉಪಸ್ಥಿತಿಯಲ್ಲಿ ನೆರವೇರಿಸುವರು.
    ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ  ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅಧ್ಯಕ್ಷತೆ ವಹಿಸುವರು. ರಾಯಚೂರು ಲೋಕಸಭಾ ಸದಸ್ಯರು  ಜಿ.ಕುಮಾರ ನಾಯಕ, ಕಲಬುರಗಿ ಲೋಕಸಭಾ ಸದಸ್ಯರು  ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ತು ಸದಸ್ಯರು ಬಿ.ಜಿ.ಪಾಟೀಲ್, ಡಾ.ಚಂದ್ರಶೇಖರ ಬಿ.ಪಾಟೀಲ್,  ಶಶೀಲ್ ಜಿ.ನಮೋಶಿ, ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ  ಶರಣಗೌಡ ಕಂದಕೂರ, ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ  ರಾಜಾ ವೇಣುಗೋಪಾಲ ನಾಯಕ, ಯಾದಗಿರಿ ನಗರಸಭೆ ಅಧ್ಯಕ್ಷರು ಕುಮಾರಿ ಲಲಿತಾ ಅನಪೂರ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು  ವಿನಾಯಕ ಮಾಲಿ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
    ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ, ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಡಾ.ಆಕಾಶ ಎಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಗೌರವಾನ್ವಿತರಾಗಿ ಪಾಲ್ಗೊಳ್ಳುವರು.
    apvc-iconPost Views: 33