Blog

  • ಗ್ರಾಹಕರು ನಿಗದಿತ ವೇಳೆಯಲ್ಲಿ ಬಿಲ್ ಪಾವತಿಸಿ: ಜೆಸ್ಕಾಂ

    ಗ್ರಾಹಕರು ನಿಗದಿತ ವೇಳೆಯಲ್ಲಿ ಬಿಲ್ ಪಾವತಿಸಿ: ಜೆಸ್ಕಾಂ

    ಮಸ್ಕಿ: ಮಸ್ಕಿ ತಾಲೂಕಿನ ವಿದ್ಯುತ್ ಗ್ರಾಹಕರಿಗೆ ಮಾಸಿಕ ವಿದ್ಯುತ್ ಬಿಲ್ಲನ್ನು ನಿಗದಿತ ದಿನಾಂಕದೊಳಗೆ ಪಾವತಿ ಮಾಡಬೇಕು, ಇಲ್ಲವಾದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಜೆಸ್ಕಾಂನ ಮಸ್ಕಿ ಕಾರ್ಯ ಮತ್ತು ಪಾಲನೆ, ಉಪ-ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸದ್ದಾರೆ.

     

    ಈಗಾಗಲೇ ತುಂಬಾ ದಿನಗಳಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಜೆಸ್ಕಾಂ ಸಿಬ್ಬಂದಿ ಬಿಲ್ ಪಾವತಿ ಮಾಡಲು ತಿಳಿಸಿದ್ದಾರೆ. ಗ್ರಾಹಕರು ಕೂಡಲೇ ವಿದ್ಯುತ್ ಬಿಲ್‌ನ್ನು ಪಾವತಿ ಮಾಡದೇ ಇದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಸ್ಥಾವರದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು. ಆದ್ದರಿಂದ ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್‌ನ್ನು ಜೆಸ್ಕಾಂ ಕ್ಯಾಷ್‌ ಕೌಂಟರ್/ಆನ್‌ಲೈನ್/ ಮೊಬೈಲ್ ಅಪ್ಲಿಕೇಷನ್‌ ಮೂಲಕ ಬಿಲ್‌ ಪಾವತಿ ಮಾಡಿ.

     

    ವಿದ್ಯುತ್ ಸಂಪರ್ಕದ ಅವಶ್ಯಕತೆ ಇದ್ದಲ್ಲಿ ಅಧಿಕೃತವಾಗಿ ಸಂಪರ್ಕ ಪಡೆದುಕೊಂಡು ಬಳಕೆ ಮಾಡಬೇಕು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಬಳಕೆ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ವಿದ್ಯುತ್ ಕಳ್ಳತನ ಪ್ರಕರಣವನ್ನು ದಾಖಲೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    apvc-iconPost Views: 13
  • ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಒಗ್ಗಟ್ಟಾಗಿ ಕೆಲಸ ಮಾಡಿ: ಬಿಎನ್. ವಿಶ್ವನಾಥ ನಾಯಕ

    ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಒಗ್ಗಟ್ಟಾಗಿ ಕೆಲಸ ಮಾಡಿ: ಬಿಎನ್. ವಿಶ್ವನಾಥ ನಾಯಕ

    ಯಾದಗಿರಿ: ನಾಡು ನುಡಿ ನೆಲ ಜಲ ರಕ್ಷಣೆ ಮಾಡಲು ಹೋರಾಟ ಮಾಡಿ ಜಯ ಕರ್ನಾಟಕ ಸಂಘಟನೆ ಬಲಪಡಿಸುವಂತೆ ಜಿಲ್ಲಾಧ್ಯಕ್ಷ ಬಿಎನ್. ವಿಶ್ವನಾಥ ನಾಯಕ ಕರೆ ನೀಡಿದರು.

    ವಡಗೇರಿ ಪಟ್ಟಣದಲ್ಲಿ ಜರುಗಿದ ಜಿಲ್ಲಾ ಸಮಿತಿ ಸಭೆಯಲ್ಲಿ ವಡಗೇರಿ ತಾಲ್ಲೂಕಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿದ ಮಾತನಾಡಿದರು.

    ಹೊಸದಾಗಿ ರಚನೆಯಾದ ತಾಲ್ಲೂಕಿನಲ್ಲಿ ಹತ್ತು ಹಲವು ಜ್ವಲಸಂತ ಸಮಸ್ಮೆಗಳಿದ್ದು ಅವುಗಳ ನಿವಾರಣೆಗೆ ಹೋರಾಟ ರೂಪಿಸಬೇಕು ಮತ್ತು ತಂಡವನ್ನು ರೂಪಿಸಿಕೊಂಡು ಸಂಘಟಿತ ಹೋರಾಟ ನಡೆಸುವಂತೆ ತಿಳಿಸಿದರು.

    ಅತ್ಯಂತ ಹಿಂದುಳಿದ ತಾಲ್ಲೂಕು ಆಗಿರುವ ವಡಗೇರಿಯಲ್ಲಿ ಸಂಘಟಿತ ಹೋರಾಟದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಂಘಟನೆಯ ಧ್ಯೆಯೋದ್ದೇಶಗಳನ್ನು ತಿಳಿಸಿ ಪ್ರಮಾಣಿಕ ಪ್ರಯತ್ನ ಮಾಡಿದಲ್ಲಿ ಫಲಿತಾಂಶ ಇದ್ದೇಇರುತ್ತೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.

    ಇದೆ ಸಂದರ್ಭದಲ್ಲಿ ನೂತನ ತಾಲ್ಲೂಕು ಅಧ್ಯಕ್ಷ ಭೀಮಣ್ಣ ಕರೆಪ್ಪ ಬುದಿನಾಳ, ಸಹ ಕಾರ್ಯದರ್ಶಿಯಾಗಿ ನೇಮಕವಾದ ಶರಣಪ್ಪ ಹೈಯಾಳಪ್ಪ ಕುರಿಕಳ್ಳಿ ಇವರಿಗೆ ಪ್ರಮಾಣ ಪತ್ರ ವನ್ನು ಜಿಲ್ಲಾಧ್ಯಕ್ಷ ಬಿಎನ್. ವಿಶ್ವನಾಥ ನಾಯುಕ ವಿತರಿಸಿದರು.

    ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಶಿವರಾಜ ಗುತ್ತೇದಾರ, ವಿಶ್ವಾರಾಧ್ಯ ಹುಲಕಲ್, ನವಾಜ ಖಾದ್ರಿ, ಅಮೀರ್ ಖಾನ್, ಅಬ್ದುಲ್ ಕತ್ತಾರಿ, ಬಸಣ್ಣಗೌಡ ಜಡಿ, ಬಸವರಾಜ ಡೌನ್, ಶರಣು ನಾಯಕ ಇಟಗಿ, ರಾಮಣ್ಣ ನಾಯಕ, ದೇವು ಜಡಿ, ಮರೆಪ್ಪ ಬಾಡದ, ಸಿದ್ದು ಜಡಿ, ರವಿ ನಸಲ್ವಾಯಿ, ಮಲ್ಲಪ್ಪ ಕಾಡಂನೋರ್, ನಿಂಗಣ್ಣ ಜಡಿ, ಪೋಲಪ್ಪ ಹಿರಿಮೇಟಿ, ಜಲಾಲ್ ಸಾಬ ಕೋನಳ್ಳಿ, ಮಾಳಿಂಗರಾಯ ಕೋನಳ್ಳಿ, ಮಲ್ಲಪ್ಪ, ಸಂತೋಷ ಬೊಜ್ಜಿ ವಡಗೇರಿ, ಶರಬು ಕುರಿ ಇನ್ನಿತರರು ಇದ್ದರು.

    apvc-iconPost Views: 123
  • ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ: ಶಾಸಕ ಚನ್ನಾರಡ್ಡಿ ಪಾಟೀಲ್ ಸೂಚನೆ

    ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ: ಶಾಸಕ ಚನ್ನಾರಡ್ಡಿ ಪಾಟೀಲ್ ಸೂಚನೆ

    ಸತ್ಯಕಾಮ ವಾರ್ತೆ ಯಾದಗಿರಿ: 
    ನಿಗದಿತ ಅವಧಿಯಲ್ಲಿ‌ ಕಾಮಗಾರಿ‌ಮುಗಿಸಬೇಕು ಮತ್ತು ಗುಣಮಟ್ಟದಲ್ಲಿ ಆಗಬೇಕು. ಈ ಕಟ್ಟಡ ಬಹುಕಾಲ ಬಾಳಿಕೆ ಬರುವಂತೆಯೇ ನಿರ್ಮಿಸಿ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
    ತಾಲೂಕಿನ ರಾಮಸಮುದ್ರದಲ್ಲಿಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ 2023-24 ನೇ ಸಾಲಿನ ಆರ್ ಡಿಪಿಐ ಯೋಜನೆಯಡಿ ಸುಮಾರು 47.79 ಲಕ್ಷ ರೂ.ವೆಚ್ಚದ ಪಶು ಚಿಕಿತ್ಸಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
    ಹಳ್ಳಿಗಳ ರೈತಾಪಿ ವರ್ಗದ ಜಾನುವಾರುಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗಬೇಕು. ಇಲಾಖೆ ವೈದ್ಯಕೀಯ ಸೌಲಭ್ಯವಿರುವ ವಾಹನಗಳೊಂದಿಗೆ ವೈದ್ಯರು ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು. ರಾಜ್ಯ ಸರ್ಕಾರ ಕೃಷಿ ಮತ್ತು ಪಶು ಇಲಾಖೆಗೆ ಸಾಕಷ್ಟು ಅನುದಾನ ನೀಡುತ್ತಿದೆ. ಇದರ ಉಪಯೋಗ ಮಾಡಿಕೊಳ್ಳಬೇಕು ಮತ್ತು ಅಧಿಕಾರಿಗಳು ಸಹ ಸೌಲಭ್ಯಗಳನ್ನು ಕಾಲ,ಕಾಲಕ್ಕೆ ಮುಟ್ಟಿಸಬೇಕೆಂದು ಶಾಸಕರು ಹೇಳಿದರು.
    ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಂದಮ್ಮ, ಹಿರಿಯ ಮುಖಂಡ ಡಾ.ಶರಣಭೂಪಾಲರಡ್ಡಿ ಪಾಟೀಲ್, ಇಲಾಖೆ ಅಧಿಕಾರಿ ಡಾ.ದೇಶಮುಖ್, ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ‌ ಬಿಳಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರಡ್ಡಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಈಟೆ, ದೇವೆಂದ್ರಪ್ಪ, ಹಣಮಂತ, ರಾಮು, ಸೇರಿದಂತೆಯೆ ಇತರರಿದ್ದರು.
    apvc-iconPost Views: 137
  • ಗರೂರ ಬಿ ಗ್ರಾಮದಲ್ಲಿ ದೈತ್ಯಾಕಾರದ ಮೊಸಳೆ ಪತ್ತೆ

    ಗರೂರ ಬಿ ಗ್ರಾಮದಲ್ಲಿ ದೈತ್ಯಾಕಾರದ ಮೊಸಳೆ ಪತ್ತೆ

    ವರದಿ : ಸುರೇಶ ಕೊಟಗಿ.

    ಸತ್ಯಕಾಮ ವಾರ್ತೆ ಕಲಬುರಗಿ:

    ಅಫ್ಜಲಪುರ ತಾಲೂಕಿನ ಗರೂರ್ (ಬಿ) ಗ್ರಾಮದ ಹಳ್ಳ ಒಂದರಲ್ಲಿ ದೈತ್ಯಾಕಾರದ ಮೊಸಳೆ ಗುರುವಾರ ಬೆಳಗಿನ 3:00ಗೆ ದಿಡೀರನೆ ಪ್ರತ್ಯಕ್ಷವಾಗಿದ್ದ ಹಿನ್ನೆಲೆ ಗ್ರಾಮಸ್ಥರು ಹಾ+ಗೂ ರೈತರು ತುಂಬಾ ಭಯಭೀತರಾದ ಪ್ರಕರಣ ಒಂದು ಜರುಗಿದೆ.

    ಗ್ರಾಮಸ್ಥರು ಗುಲ್ಬರ್ಗ ವಿದ್ಯುತ್ ಶಕ್ತಿ ಸರಬರಾಜು ಕಂಪನಿ 33/11 ಕೆವಿ ಉಪವಿದ್ಯುತ್ ವಿತರಣಾ ಕೇಂದ್ರ ಗೊಬ್ಬುರ್ ತಾಲೂಕ ಆಫ್ಜಲ್ಪುರ್ ಕಾರ್ಯಾಲಯ ಸಮ್ಮುಖದಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಜಮಾಯಿಸಿ ವಿದ್ಯುತ್ ಸರಬರಾಜು ಇಲಾಖೆ ವಿರುದ್ಧ ರಸ್ತೆ ತಡೆ ನಡೆಸಿದರು. ವಿದ್ಯುತ್ ನಿಯಮಿತವಾಗಿ ಸರಬರಾಜು ಆಗದೆ ಇದ್ದ ಕಾರಣ ಹೊಲಗಳಲ್ಲಿ ರಾತ್ರಿ ಕತ್ತಲಲ್ಲಿ ನೀರಿಗಾಗಿ ಕೆಲಸ ಮಾಡಬೇಕಾಗುತ್ತದೆ.ಇಲಾಖೆಯವರು ಸರಬರಾಜು ಸಮಯ ರೈತರ ಗಮನಕ್ಕೆ ತರದೆ ಬದಲಾಯಿಸುವುದರಿಂದ ರೈತರಿಗೆ ಅನಾನುಕೂಲ ಹಾಗೂ ತೊಂದರೆ ಯಾಗುವುದು ಕಟ್ಟಿಟ್ಟ ಬುತ್ತಿ.

    ಈ ಸಂಬಂಧ ಗ್ರಾಮಸ್ಥರು ಹಾಗೂ ರೈತರು ಎತ್ತಿನ ಬಂಡಿಯಲ್ಲಿ ಬಂಧಿಸಿದ ಮೊಸಳೆ ಸಮೇತ ಉಪಕೇಂದ್ರಕ್ಕೆ ಆಗಮಿಸಿ ಚಳುವಳಿಗೆ ಧುಮುಕಿದರು. ಸುದ್ದಿ ತಿಳಿದ ಗಾಣಿಗಪುರ್ ಠಾಣೆಯ ಪಿಎಸ್ಐ ರಾಹುಲ್ ಘಟನಾ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಸ್ಥಿತಿ ಬಿಗಡಾಯಿಸದಂತೆ ಬಂದೋಬಸ್ತ್ ಮಾಡಿದರು ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೋಸಳೆಯನ್ನು ಹಸ್ತಾಂತರಿಸಲಾಯಿತು.

    ಕೆಇಬಿ ಇಲಾಖೆಯವರು ವಿದ್ಯುತ್ ಸರಬರಾಜು ಸಮಯ ಶಿಫ್ಟ್ ಬದಲಾಯಿಸಬೇಕಾದರೆ ಮಾಧ್ಯಮದ ಮೂಲಕ ಅಥವಾ ಗ್ರಾಮದಲ್ಲಿ ಡೊಂಗುರ ಹೊಡೆಸಿ ರೈತರ ಗಮನಕ್ಕೆ ತಂದು ಬದಲಾವಣೆ ಮಾಡಬೇಕು ಆದರೆ ಇಲಾಖೆಯ ಜವಾಬ್ದಾರಿ ಅಧಿಕಾರಿಗಳಾದ ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಎ ಇ ಇ ಯಾವುದೇ ಮುಂಜಾಗ್ರತೆ ಕ್ರಮವಹಿಸದೆ ಶಿಫ್ಟ್ ಬದಲಾಯಿಸುವುದು ಮಾಡಿದಲ್ಲಿ ಗಮನಕ್ಕೆ ಬಾರದ ರೈತರ ಜೀವಕ್ಕೆ ಅಪಾಯ ಸಂಭವಿಸಿದರೆ ಇದಕ್ಕೆ ಯಾರು ಹೊಣೆಗಾರರು? ಇನ್ನು ಮುಂದೆಯಾದರೂ ಇಲಾಖೆಯವರು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ರೈತರು ಸತ್ಯಕಾಮ ಮೂಲಕ ಮನವಿ ಮಾಡಿದ್ದಾರೆ.

    apvc-iconPost Views: 127
  • ಶಾಲಾ ಮಕ್ಕಳ ಜೀವದ ಜೋತೆಗೆ ಚೆಲ್ಲಾಟವಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು..!

    ಶಾಲಾ ಮಕ್ಕಳ ಜೀವದ ಜೋತೆಗೆ ಚೆಲ್ಲಾಟವಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು..!

    ವರದಿ: ಕುದಾನ್‌ ಸಾಬ್‌

    ಸತ್ಯಕಾಮ ವಾರ್ತೆ ಯಾದಗಿರಿ:

    ಮಕ್ಕಳು ಯಾವುದೇ ಸಮಸ್ಯೆ ಇಲ್ಲದೆ ಶಾಲೆಯನ್ನು ತಲುಪುತ್ತಾರೆ ಎಂದು ಶಾಲಾ ಬಸ್‌ ನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ, ಆದರೆ ಪೋಷಕರಿಗೆ ವಾಹನದಲ್ಲಿ ಓಡಾಡುವ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿದ್ದೂ ಅನೇಕ ಖಾಸಗಿ ಶಾಲೆಯ ವಾಹನಗಳು ಸರಿಯಾದ ದಾಖಲೆ ಪತ್ರಗಳು ಇಲ್ಲದೇ ಇರುವುದು ಬಹಿರಂಗವಾಗಿದೆ.

    ಹೌದು ನೂರಾರು ಕನಸುಗಳನ್ನು ಹೊತ್ತು ಶಿಕ್ಷಣ ಪಡೆಯಲು ಗ್ರಾಮೀಣ ಪ್ರದೇಶದ ಅನೇಕ ಮಕ್ಕಳನ್ನು ಪಾಲಕರು ಶಾಲಾ ವಾಹನಗಳಲ್ಲಿ ಕಳುಹಿಸುತ್ತಾರೆ, ಆದರೆ ಅದೆಷ್ಟೂ ವಾಹನಗಳು ಸುರಕ್ಷಿತವಾಗಿದೆ ಎಂದು ಪ್ರಜ್ಣಾನವಂತ ಪಾಲಕರು ಮಣನೆ ಮಾಡಿಕೋಳ್ಳುವಂತಾಗಿದೆ, ಇದಕ್ಕೆ ಪುಷ್ಠಿಕರಿಸುವಂತೆ ಇತ್ತಿಚಿಗೆ ಮಾನ್ವಿಯಲ್ಲಿ ಶಾಲಾ ಬಸ್‌ ಅಪಘಾತವಾಗಿ ಹತ್ತಾರು ವಿದ್ಯಾರ್ಥಿಗಳು, ತಮ್ಮ ಚಿಕ್ಕ ವಯಸ್ಸಿನಲ್ಲೇ ವಿಕಲ ಚೇತನರಾದರೇ, ಇನ್ನೂ ಕೆಲವು ಮಕ್ಕಳು ಉಸಿರು ಚೆಲ್ಲಿದರು.

    ಇಂಗ್ಲಿಷ್‌ ವ್ಯಾಮೋಹದಿಂದಾಗಿ ಇಂದು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆ ಬದಲಿಗೆ ಖಾಸಗಿ ಶಾಲೆಗಳು ಅದೆಷ್ಟೇ ದೂರದಲ್ಲಿದ್ದರೂ ಅದಕ್ಕೆ ದಾಖಲಿಸುತ್ತಾರೆ. ಇದಕ್ಕೆ ಮುಖ್ಯವಾಗಿ ಮಕ್ಕಳ ಸಂಚಾರಕ್ಕಾಗಿ ವಸತಿ ನಿಲಯದ ಪರ್ಯಾಯವಾಗಿ ಶಾಲಾ ಬಸ್ಗಳಿಗೆ ಪಾಲಕರು ಮೊರೆಹೋಗುತ್ತಾರೆ, ಆದರೆ ಜಿಲ್ಲೆಯಲ್ಲಿನ ಬಹುತೇಕ ಖಾಸಗಿ ಶಾಲೆಯ ವಾಹನಗಳು ಒಂದಿಲ್ಲೋಂದಾದ ಇನ್ಸೂರೆನ್ಸ್‌, ರಸ್ತೆ ತೆರಿಗೆ, ಪಿಟೆನೆಸ್‌ ಸೇರಿದಂತೆ ಹಲವು ಧಾಖಲೆಗಳನ್ನು ಖಾಸಗಿ ಶಾಲೆಯ ಆಡಳಿತ ಸಂಸ್ಥೆಗಳು ಪಾಲಿಸುತ್ತಿಲ್ಲ, ಇದ್ದರಿಂದ ಪಾಲಕರು ತಮ್ಮ ಮಕ್ಕಳ ಜೀವ ಭಯದಲ್ಲಿ ಶಾಲೆಗಳಿಗೆ ಕಳುಹಿಸುವಂತ ದಿನಗಳು ಇವೆ.

    ಅದರಲ್ಲೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಮಕ್ಕಳ ಪೋಷಕರಿಂದ ವಸೂಲಿ ಮಾಡುವ ಶುಲ್ಕದ ಕುರಿತಷ್ಟೇ ಆಸಕ್ತಿಯಿದೆ.ಆದರೆ ಅವರನ್ನೆ ನಂಬಿ ಪೋಷಕರು ಕಳಿಸುವ ಮಕ್ಕಳ ಬಗ್ಗೆ ಶಾಲೆ ಸಂಸ್ಥೆಗಳು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ, ಇದು ಬಹುತೇಕ ಖಾಸಗಿ ಶಾಲೆಗಳ ವಾಸ್ತವ ಇದೇ ರೀತಿ ಇವೆ. ಪ್ರತಿನಿತ್ಯ ಮುಂಜಾನೆ ಮಕ್ಕಳು ಶಾಲೆಯ ವಾಹನ ಹತ್ತಿದ ಬಳಿಕ ಮರಳಿ ಮನೆ ಸೇರಿಸುವವರೆಗೆ ಮಗುವಿನ ಸುರಕ್ಷತೆ ಹೊಣೆ ತಮ್ಮದು ಎಂಬ ಪ್ರಜ್ಞೆಯೇ ಶಾಲೆಗಳ ಆಡಳಿತ ಮಂಡಳಿಗಳಿಗೆ ಇಲ್ಲದಿರುವುದು ದುರಂತ.

    ವಿದ್ಯಾರ್ಥಿಗಳು ಸಂಚರಿಸುವ ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್‌, ವಿವರವಾದ ಮಾರ್ಗದರ್ಶಿ ಸೂತ್ರ ರಚಿಸಿದೆ. ಆದರೆ, ಬಹುತೇಕ ಶಾಲೆಗಳಲ್ಲಿ ಇವುಗಳಲ್ಲಿ ಯಾವುದೇ ಒಂದೂ ಪಾಲನೆಯಾಗುತ್ತಿಲ್ಲ. ಶಾಲಾ ವಾಹನಗಳಲ್ಲಿನ ಸುರಕ್ಷತಾ ನಿಯಮಗಳ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕಾದ ಸಾರಿಗೆ ಇಲಾಖೆ ಅಧಿಕಾರಿಗಳು ದಿವ್ಯ ಮೌನ ವಹಿಸಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿರುವುದಂತೂ ಸುಳ್ಳಲ್ಲ.

    ಒಟ್ಟಿನಲ್ಲಿ ಮಸ್ಕಿಯಲ್ಲಾದ ಶಾಲಾ ವಾಹನದ ದುರ್ಘಟನೆ ಯಾದಗಿರಿಯಲ್ಲಿ ಸಂಭವಿಸದಂತೆ ಇಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ಈಗಲಾದರೂ ಇಂತಹ ಸರಿಯಾದ ದಾಖಲೆಇರದ ಶಾಲಾವಾಹನಗಳನ್ನು ಯಾವುದೇ ಮುಲ್ಲಾಜಿಲ್ಲದೇ ವಶಪಡಿಸಿಕೋಂಡು ಮುಂದಾಗುವ ಅನಾಹುತವನ್ನು ತಪ್ಪಿಸಬೇಕು,ಇಲ್ಲದಿದ್ದರೇ ಆರ್‌.ಟಿ.ಒ ಅಧಿಕಾರಿಗಳ ಬೇಜವಬ್ದಾರಿತನಕ್ಕೆ  ಅಪಾಘತಗಳಿಗೆ ತಾವೇ ಹೋಣೆಯಾಗಬೇಕಾತ್ತದೆ, ಇದಕ್ಕೆ ಶಾಲಾ ಆಡಳಿತಮಂಡಳಿಯು ಜವಬ್ದಾರಿಯಾಗುತ್ತದೆ.

     

    ನಮ್ಮ ಮಕ್ಕಳನ್ನು ಖಾಸಗಿ ಶಾಲೆ ದಾಖಲಾತಿ ಮಾಡಿದ್ದೂ, ಆದರೆ ಶಾಲಾ ಸಂಸ್ಥೆಗಳು ಶಾಲಾ ವಾಹನಗಳನ್ನು ಯಾವುದೇ ದಾಖಲೆ ಪತ್ರಗಳಿಲ್ಲದೇ ಓಡಿಸುತ್ತಾರೆ, ಹೀಗಾಗಿ ನಾವು ನಮ್ಮ ಮಕ್ಕಳು ಸಂಜೆ ಮನೆ ಸೇರುವವರೆಗೆ ಜೀವ ಕೈಯಲ್ಲಿ ಹಿಡಿದುಕೊಂಡು ಕಾಯುವಂತಾಗಿದೆ. ಯಾವುದೇ ಅನಾಹುತಗಳು ಸಂಭವಿಸಿದರೆ ಇದಕ್ಕೆ ಯಾರು ಹೋಣೆಯಾಗುತ್ತಾರೆ,

    -ಹೆಸರೇಳಲಿಚ್ಚಿಸದ ಪಾಲಕರು

    apvc-iconPost Views: 72
  • ನಾಳೆ ಯಾದಗಿರಿ ಜಿಲ್ಲಾ ಕಛೇರಿಗೆ ಮುತ್ತಿಗೆ ಹಾಕುವುದರ ಮೂಲಕ ಪ್ರತಿಭಟನೆ MRPS ಅಧ್ಯಕ್ಷ ರವಿ ಬುರನ್ನೊಳ್

    ನಾಳೆ ಯಾದಗಿರಿ ಜಿಲ್ಲಾ ಕಛೇರಿಗೆ ಮುತ್ತಿಗೆ ಹಾಕುವುದರ ಮೂಲಕ ಪ್ರತಿಭಟನೆ MRPS ಅಧ್ಯಕ್ಷ ರವಿ ಬುರನ್ನೊಳ್

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪಟ್ಟಣದ ಇಂದಿರಾ ನಗರ ಬಡಾವಣೆಯ ಅಲೆಮಾರಿ ಜನಾಗಂದ ಬುಡಗ ಜಂಗಮ ಜಾತಿಯ ಸಾಯಮ್ಮ ತಂ/ ಭೀಮಪ್ಪ ಸಿರಿಗಿರಿ ವಯಸ್ಸು ೧೫ ವರ್ಷ ಮತ್ತು ಶ್ಯಾಮಮ್ಮ ತಂ/ ಯಲ್ಲಪ್ಪ ಇಬ್ಬರು ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಇಬ್ಬರ ಸಾವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಸಂತ್ರಸ್ತ ಕುಟುಂಬಕ್ಕೆ ಕಾನೂನ ಪ್ರಕಾರ ನ್ಯಾಯ ಒದಗಿಸಿ ಕೊಡಲು ಈ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

    ಗುರುಮಠಕಲ್ ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹಾಗೂ ಕರ್ನಾಟಕ ಅಲೆಮಾರಿ ಬಡ್ಗ ಜಂಗಮ ಹಕ್ಕುಗಳ ಹೋರಾಟ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸುಭಾಷ್ ವೃತದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಮತ್ತು ಅಧಿಕಾರಿಗಳ ಗಮನ ಸೆಳೆಯಲಿದ್ದೇವೆ ಎಂದರು.

    ಸಂತ್ರಸ್ತ ಕುಟುಂಬಕ್ಕೆ ಈ ಕೊಡಲೇ ಸರಕಾರದಿಂದ ಬರುವ ಎಲ್ಲಾ ಪರಿಹಾರವನ್ನು ಒದಗಿಸಿಕೊಡುವದರ ಜೊತೆಗೆ ಆರೋಪಿಗಳಿಗೆ ಗಲ್ಲುಶಿಕ್ಷೆ ಮಾಡಬೇಕು ಎಂಬ ಧ್ಯೆಯದೊಂದಿಗೆ ಒತ್ತಾಯಸಿಲಿದ್ದೇವೆ ಎಂದು ಅವರು ಹೇಳಿದರು.

     

    apvc-iconPost Views: 66
  • ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಜನ್ಮ ದಿನ : ಕಲಿಕಾ ಸಲಕರಣೆ ವಿತರಣೆ

    ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಜನ್ಮ ದಿನ : ಕಲಿಕಾ ಸಲಕರಣೆ ವಿತರಣೆ

    ಸತ್ಯಕಾಮ ವಾರ್ತೆ ಗುರುಮಠಕಲ್:

    ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ 58 ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳ ಬಳಗದ ಅಧ್ಯಕ್ಷ ನರಸಿಂಹಲು ಗಂಗನೋಳ್ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷಾ ಪ್ಯಾಡ್ ವಿತರಣೆ ಮಾಡಲಾಯಿತು.

    ಇಲ್ಲಿನ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ) ವಿಭಾಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕ ಭೀಮಶಪ್ಪ ಮನ್ನೆ ಮಾತನಾಡಿ, ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲವಾಗಲು ಪ್ಯಾಡ್ ವಿತರಣೆ ಕಾರ್ಯ ಶ್ಲಾಘಿಸಿದರು.

    ಸಾಕಷ್ಟು ಜನರಲ್ಲಿ ಸಾಕಷ್ಟು ಇದೆ. ಆದರೆ ಕೊಡುವ ಮನಸ್ಸು ದೊಡ್ಡದು. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.

    ಉಪನ್ಯಾಸಕ ನವಾಜರೆಡ್ಡಿ ಮಾತನಾಡಿ, ಒಳ್ಳೆ ಕೆಲಸ ಮಾಡುವ ಮನಸ್ಸು ಇರಬೇಕು. ಸಮಾಜ, ದೇಶ ಸೇವೆ ಮಾಡಿದವರ ಹೆಸರು ಇತಿಹಾಸ ಪುಟದಲ್ಲಿರುತ್ತದೆ. ಇಂತಹ ಆದರ್ಶ ಯುವ ಮುಖಂಡರಿಗೆ ನಾವೆಲ್ಲ ಪ್ರೋತ್ಸಾಹ ನೀಡಬೇಕು. ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

    ಯಾದಗಿರಿಧ್ವನಿ.ಕಾಮ್ ಸಂಪಾದಕ ಅನೀಲ ಎನ್. ಬಸೂದೆ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ ಗುರುಗಳು ಕೆಲವೊಮ್ಮೆ ಬೈದು ಹೇಳಬಹುದು ಹಾಗಾಗಿ ಅನ್ಯಥಾ ಭಾವಿಸಬಾರದು.

    ತಪ್ಪು ತಿದ್ದಿಕೊಂಡು ಉತ್ತಮ ವ್ಯಾಸಾಂಗ ಮಾಡಿ ಪಾಲಕರು, ಶಾಲೆಗೆ ಕೀರ್ತಿ ತರಬೇಕು. ತಂತ್ರಜ್ಞಾನವನ್ನು ಶೈಕ್ಷಣಿಕವಾಗಿ ಯಶಸ್ಸು ಸಾಧಿಸಲು ಬಳಕೆ ಮಾಡಿಕೊಂಡು ಸಫಲರಾಗಲು ಸಲಹೆ ನೀಡಿದರು.

    ಜನಾರ್ಧನ ರೆಡ್ಡಿ ಅಭಿಮಾನಿಗಳ ಸಂಘದ ಅಧ್ಯಕ್ಷ ನರಸಿಂಹಲು ಗಂಗನೋಳ್ ಮಾತನಾಡಿ. ಕಲಿಕ ಸಲಕರಣೆಗಳು ಉಪಯೋಗ ಪಡಿಸಿಕೊಂಡು, ಕೀರ್ತಿ ತರಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ತೇರ್ಗಡೆಯಾದವರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದರು.

    ಅಧ್ಯಕ್ಷತೆವಹಿಸಿದ್ದ ಪ್ರ.ಪ್ರಾಂಶುಪಾಲರಾದ ಈರಮ್ಮ ಮಾತನಾಡಿ, ಒಬ್ಬೊಬ್ಬರಲ್ಲಿ ಒಂದೊಂದು ಪ್ರತಿಭೆ ಅಡಗಿದೆ. ಇಂದು ಶಿಷ್ಯರ ಜೊತೆ ವೇದಿಕೆ ಹಂಚಿಕೊಂಡಿದ್ದು, ತಮ್ಮ ಕೈಯಲ್ಲಿ ಕಲಿತವರು ಸಮಾಜದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆ ಪಡುವ ಸಂಗತಿ. ಮಕ್ಕಳು ಜೀವನದಲ್ಲಿ ಗುರಿ ಸಾಧಿಸಲು ಶ್ರಮಿಸಲು ಕರೆ ನೀಡಿದರು.

    ವೇದಿಕೆ ಮೇಲೆ ಚನಬಸರೆಡ್ಡಿ, ಶಿಕ್ಷಕ ಲಿಂಗಾನಂದ ಗೋಗಿ ನಿರೂಪಿಸಿದರು. ಶರಣಪ್ಪ ಚಿಂತಕುಂಟಾ, ಆಂಜನೇಯ, ಭಾಗ್ಯಲಕ್ಷ್ಮೀ, ಹೇಮಲತಾ, ರಾಮಲಿಂಗಮ್ಮ, ಬಾಲಮಣಿ, ಅಲಿ ಮೌಲಾನಾ ಇದ್ದರು.

    apvc-iconPost Views: 39
  • ಜೆಡಿಎಸ್ ಮುಖಂಡ ವೀರೇಶ ವಿಶ್ವಕರ್ಮ ಸಂಗಡಿಗರಿಂದ ಮುಗಳಖೋಡಕ್ಕೆ ಪಾದಯಾತ್ರೆ.

    ಜೆಡಿಎಸ್ ಮುಖಂಡ ವೀರೇಶ ವಿಶ್ವಕರ್ಮ ಸಂಗಡಿಗರಿಂದ ಮುಗಳಖೋಡಕ್ಕೆ ಪಾದಯಾತ್ರೆ.

    ಸತ್ಯಕಾಮ ವಾರ್ತೆ ಗುರುಮಠಕಲ್:

    ವಿಧಾನಸಭಾ ಚುನಾವಣೆಯಲ್ಲಿ ಶರಣಗೌಡ ಕಂದಕೂರ ಅವರು ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬುದೂರು ಗ್ರಾಮದ ಶಿವಾಲಯ ದೇವಸ್ಥಾನದಿಂದ ಮುಗಳಖೋಡಕ್ಕೆ ಪಾದಯಾತ್ರೆ ಕೈಗೊಳ್ಳಲಾಗಿದೆ.

    apvc-iconPost Views: 21
  • ಕೃಷಿ ಇಲಾಖೆಯಿಂದ ಕೊಡಮಾಡುವ ರೈತರ ಸಲಕರಣೆಗಳು ಕಳಪೆ, ಕಂಪೆನಿಗಳಿದ ರೈತರಿಗೆ ಭಾರಿ ವಂಚನೆ;

    ಕೃಷಿ ಇಲಾಖೆಯಿಂದ ಕೊಡಮಾಡುವ ರೈತರ ಸಲಕರಣೆಗಳು ಕಳಪೆ, ಕಂಪೆನಿಗಳಿದ ರೈತರಿಗೆ ಭಾರಿ ವಂಚನೆ;

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲಾದ್ಯಂತ ಕಳಪೆ ಗುಣಮಟ್ಟದ ನೀರಾವರಿ ಸ್ಪಿಂಕ್ಲರ್ ಪೈಪ್ ಗಳನ್ನು ವಿವಿಧ ಕಂಪನಿಯವರು ಪೂರೈಸಿದ್ದು ಈ ಬ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘದ ವಾಸುದೇವ ಮೇಟಿ ಬಣದ ಜಿಲ್ಲಾದ್ಯಕ್ಷ ಮಲ್ಲನಗೌಡ ಹಗರಟಗಿ ಒತ್ತಾಯಿಸಿದ್ದಾರೆ.

     

    ಈ ಕುರಿತು ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೃಷಿ ಇಲಾಖೆಯವರ ಮೂಲಕ ಜಿಲ್ಲಾದ್ಯಂತ ರೈತರಿಗೆ ರಿಯಾಯತಿ ದರದಲ್ಲಿ ವಿತರಿಸುತ್ತಿರುವ ಸ್ಪಿಂಕ್ಲರ್ ಪೈಪ್ ಗಳು ಕಳಪೆ ಮಟ್ಟದಿಂದ ಕೂಡಿವೆ ಇದರಿಂದಾಗಿ ಸರ್ಕರಗಳ ಯೋಜನೆಗಳು ರೈತರಿಗೆ ತಲುಪುವ ವೇಳೆಗೆ ಅತ್ಯಂತ ಬ್ರಷ್ಟಾಚಾರ ನಡೆದು ರೈತರಿಗೆ ಕಳಪೆ ಸಾಮಗ್ರಿಗಳು ಪೂರೈಕೆ ಯಾಗುತ್ತಿವೆ.

     

    ವಿಶೇಷವಾಗಿ ವಿಶಕರ್ಮ ಡೀಲರ್ಸ್, ಪ್ರಗತಿ ಡೀಲರ್ಸ್ ಮತ್ತು ಕೆ.ಎಸ್.ಆಯ್ ಡೀಲರ್ಸ್ ರವರು ಜಿಲ್ಲೆಯ ರೈತರನ್ನು ವಂಚಿಸುತ್ತಿದ್ದಾರೆ. ಒಮ್ಮೆ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಿದರೆ ಪುನಃ 7 ವರ್ಷಗಳವರೆಗೆ ಸ್ಪಿಂಕ್ಲರ್ ಪೈಪ್ ಗಳನ್ನು ಸರ್ಕಾರ ವಿತರಿಸುವದಿಲ್ಲ. ಈಗ ರೈತರಿಗೆ ವಿತರಿಸುತ್ತಿರುವ ಸ್ಪಿಂಕ್ಲರ್ ಪೈಪ್‌ಗಳು ತಿಂಗಳು ಹೆಚ್ಚೆಂದರೆ 1 ವರ್ಷಗಳವರೆಗೆ ಮಾತ್ರ ಬಾಳಿಕೆ ಬರುತ್ತವೆ. ಮುಂದೆ ರೈತರು ಹೊರಗಡೆ ಮಾರುಕಟ್ಟೆಯಲ್ಲಿ ದುಬಾರಿ ಹಣ ಕೊಟ್ಟು ಖರೀದಿ ಮಾಡಬೇಕಾಗುತ್ತದೆ. ಮೊದಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಕಳಪೆ ಸ್ಪಿಂಕರ್ ಪಂಪ್ ಗಳನ್ನು ತಯಾರಿಸಿ ಕೊಡುತ್ತಿರುವ ಕಂಪನಿಗಳಿAದ ರೈತರಿಗೆ ಭಾರಿ ಮೋಸ ವಂಚನೆಯಾಗುತ್ತಿದೆ.

     

    ಇತ್ತೀಚೆಗೆ ಸಿಂಕರ್ ಪೈಪ್‌ಗಳು ಕಂಪನಿಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ಹೊಸದಾಗಿ ಹೆಚ್ಚು ಕಂಪನಿಗಳು ಹುಟ್ಟಿಕೊಳ್ಳುತ್ತಿರುವದರಿಂದ ಕಳಪೆ ಮಟ್ಟದ ಸ್ಪಿಂಕರ್ ಪೈಪ್‌ಗನ್ನು ಸಬ್ಸಿಡಿ ರೂಪದಲ್ಲಿ ಅನ್ನದಾತರಿಗೆ ಒದಗಿಸಲು ಕಂಪನಿಗಳು ವ್ಯವಸ್ಥಿತ ರೀತಿಯಲ್ಲಿ ಲೂಟಿ ಮಾಡಲು ಮುಂದಾಗಿವೆ. ಇದು ಕೆಲವಲ ಯಾದಗಿರಿ ಜಿಲ್ಲೆಗೆ ಸೀಮಿತವಲ್ಲ ಇದು ರಾಜ್ಯಾದ್ಯಂತ ನಡೆಯುತ್ತಿರುವ ಬ್ರಹ್ಮಾಂಡ ಬ್ರಷ್ಟಾಚಾರದ ಕೂಪವಾಗಿದೆ ಎಂದು ಅವರು ದೂರಿದ್ದಾರೆ.

     

    ರೈತ ಸಂಪರ್ಕ ಕೇಂದ್ರದಿAದ ಕೃಷಿ ಇಲಾಖೆಯವರು ನೇರವಾಗಿ ರೈತರಿಗೆ ರೈತರು ತಂದ ವಾಹನಗಳಲ್ಲಿ_ ಸರಬರಾಜು ಮಾಡುವುದು ಕಾನೂನು ಬಾಹೀರವಾಗಿದೆ. ಕೃಷಿ ಇಲಾಖೆಯ ನಿಯಮದ ಪ್ರಕಾರ ರೈತರ ಜಮೀನಿಗೆ ತೆರಳಿ ಪೂರ್ವ ಸಮೀಕ್ಷೆ ಮಾಡಿ ನಂತರ ನಿಯಮಾನುಸಾರ ಸ್ಪಿಂಕ್ಲರ್ ಪೈಪ್ ಗಳ ರೈತರ ಹೊಲದಲ್ಲಿ ಅಳವಡಿಸಿ ಜಿ.ಪಿ.ಎಸ್ ಮಾಡಬೇಕು ಮತ್ತೆ ಮುಂದೆ ಮುಂದಿನ ಸಮೀಕ ಮಾಡಿ ಸ್ಪಿಂಕ್ಲರ್ ಪೈಪ್ ಗಳು ಕಾರ್ಯ ನಿರ್ವಹಣೆ ಸಂತೃಪ್ತಿ ಇರುವದನ್ನು ರೈತರಿಂದ ಖಾತಿ ಪಡೆಸಿಕೊಂಡು ಸ್ಪಿಂಕ್ಲರ್ ಪೈಪ್‌ಗಳು ತಯಾರಿಸಿ ಸರಬರಾಜು ಮಾಡಿದ ಕಂಪನಿಗಳಿಗೆ ನಂತ ಬಿಲ್ಲನ್ನು ಪಾವತಿಸಬೇಕೆಂಬ ನಿಯಮವಿದೆ. ಆದರೆ ಇಲ್ಲಿ ರಾಜಾರೋಷವಾಗಿ ನಿಯಮ ಉಲ್ಲಂಘಿಸುತ್ತಿರುವ ಅಧಿಕಾರಿಗಳಿಂದಾಗಿ ರೈತರಿಗೆ ಘೋರ ಅನ್ಯಾಯ ಆಗುತ್ತಿದೆ.

     

    ಆದರೆ ಇಲ್ಲಯವರೆಗೂ ಜಿಲ್ಲೆಯ ಎಲ್ಲ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕಂಪನಿಗೆ ಬೇಟಿ ನೀಡಿ ವೈಪ್‌ಗಳು ಕಚ್ಚಾ ವಸ್ತುಗಳ ಬಿ.ಎಸ್.ಬಿ. ಬಿಲೆಗಳನ್ನು ಮತ್ತು ಕಂಪನಿಯವರು ಉಪಯೋಗಿಸುತ್ತಿರುವ ಕಚ್ಚಾವಸ್ತುಗಳ ಮಾದರಿ ಕಲೆ ಹಾಕಿ ಸಿವೆಟ್ ಸಂಸ್ಥೆಗೆ ಕಳುಹಿಸಿರುವ ಉದಾಹರಣೆಯೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    ಆಗ್ರಹ:

    • 1 ಸ್ಪಿಂಕ್ಲರ್ ಪೈಪ್‌ಗಳು ಕಂಪನಿಗಳು ಮತ್ತು ಕೃಷಿ ಇಲಾಖೆಯವರು ಜಂಟಿಯಾಗಿ ರೈತರ ಸಮ್ಮುಖದಲ್ಲಿ & ಕನ್ಸೆಕ್ಷನ್ ಮತ್ತು ಜೊತೆಯಾಗಿ ರೈತನ ಜೊತೆ ಜಿ.ಪಿ.ಎಸ್ ಸಹಿತ ಭಾವಚಿತ್ರ ತೆಗೆದುಕೊಳ್ಳಬೇಕು.
    • 2) ಪೈಪ್‌ಗಳು ಕಂಪನಿಯವರು ಸ್ಪಿಂಕರ್ ಪೈಪ್ ಗಳು ಮತ್ತು ಇತರೆ ಎಲ್ಲ ಸಲಕರಣೆಗಳನ್ನು ಖುದ್ದು ರೈತರ ಹೊಲಕ್ಕೆ ಹೋಗಿ ಅಳವಡಿಸಿ, ವೈಪ್‌ಗಳ ನಿರ್ವಹಣಿ ತೃಪ್ತಿಕರವಾಗಿರುವುದನ್ನು ರೈತರ ಸಮ್ಮುಖದಲ್ಲಿ ಖಾತ್ರಿ ಮಾಡಿಕೊಂಡು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಅರ್ಹ ರೈತನ ಜೊತೆ ಜಿ.ಪಿ.ಎಸ್ ಸಹಿತ ಭಾವಚಿತ್ರವನ್ನು ತೆಗೆದುಕೊಳ್ಳಬೇಕು.
    • 3. ಕಂಪನಿಯವರು ಸ್ಪಿಂಕರ್ ಪೈವ್ ಗಳನ್ನು ಅಳವಡಿಸಿ ಸಿಂಕರ್ ಪೈಪ್ ಗಳು ಮತ್ತು ಸಲಕರಣೆಗಳು ತೃಪ್ತಿಕರವಾಗಿ ಕೆಲಸ ನಿರ್ವಹಿಸಿದ ನಂತರ ಪ್ರತಿ ರೈತರ ಹೆಸರಿನಲ್ಲಿ ಪ್ರತ್ಯೇಕವಾಗಿ ಇವೇ ಬಿಲನ್ನು ನಿಯಮಾನುಸಾರ ಕೃಷಿ ಇಲಾಖೆಗೆ ಬದಲಿಸಬೇಕು.
    • 4) ಯಾವುದೇ ಕಾರಣಕ್ಕೂ ಕಂಪನಿಯವರು ರೈತ ಸಂಪರ್ಕ ಕೇಂದ್ರಕ್ಕೆ ತಮ್ಮ ತಮ್ಮ ಸ್ವಿಂಕಲ್ ಪೈಪ್ ಗಳ ದಾಸ್ತಾನು ಮಾಡಬಾರದು. ನಿಯಮಾನುಸಾರ ಪ್ರಕಾರ ಅರ್ಹ ರೈತರ ಹೊಲಕೆ, ನೇರವಾಗಿ ಸದರಿ ಕಂಪನಿಯವರು ಸ್ಪಿಂಕ್ಲರ್ ಪೈಪ್ ಗಳನ್ನು ಒದಗಿಸಿ ನಿಯಮಾನುಸಾರ ರೈತರ ಹೊಲದಲ್ಲಿಯೇ ಅಳವಡಿಸಬೇಕು. ಮತ್ತು ಅದರ ನಿರ್ವಹಣೆ ತೃಪ್ತಿಕರವಾಗಿರುವುದನ್ನು ಸದರಿ ರೈತರ ಸಮ್ಮುಖದಲ್ಲಿ ಖಾತ್ರಿ ಪಡಿಸಿಕೊಳ್ಳಬೇಕು. ರೈತ ಸಂಪರ್ಕದವರು ಯಾವುದೇ ಕಾರಣಕ್ಕೂ ಸ್ಪಿಂಕ್ಲರ್ ಪೈನ್‌ಗಳ ದಾಸ್ತಾನು ಮಾಡಬಾರದು ಮತ್ತು ಕಂಪನಿಗಳು ಕೃಷಿ ಇಲಾಖೆ ಅಧಿಕಾರಿ ಎ.ಡಿ.ಎ ಹೆಸರಿನಲಿ ಬಿಲನ್ನು ಪಡೆಯುತ್ತಿರುವುದು ಕಾನೂನು ಬಾಹಿರವಾಗಿದೆ. ಕರ್ನಾಟಕ ಫ್ರಾನ ಪರೆನ್ಸಿ ತನ್ ಪಬ್ಲಿಕ್ ಪ್ರಾಕ್ಯೂರಮೆಂಟ್ ಆಕ್ಸ್ 1000 ಮತ್ತು ಬಿ.ಎಸ್. ಕಾನೂನ ವಿರುದ್ಧವಾಗಿದೆ
    • 5) ಕೇಂದ್ರ ಮತ್ತು ರಾಜ್ಯ ಕೃಷಿ ಇಲಾಖೆ ನಿಯಮಾನುಸಾರ ಸ್ಪಿಂಕ್ಲರ್ ಸೈಸ್ ಗಳ ಗುಣಮಟ್ಟ ಪರ್ಲಕ್ಷೆಯಲ್ಲಿ ವಿಫಲವಾದಲ್ಲಿ 1) ಒಂದು ಸಲ ಗುಣಮಟ್ಟ ಪಲಂಕ್ಷೆಯಲ್ಲಿ ವಿಫಲವಾದರೆ (ಎಚ್ಚರಿಕೆ ಪತ್ರ ಮತ್ತು ಸದಲ ಗುಣಮಟ್ಟ ಸಲಪಡಿಸರ್ಬೇಕು), 2) ಎರಡನೇಯ ಪಾಲ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ ( ಪ್ರತಿಶತ 10% ದಂಡ ಮತ್ತು ಎಚ್ಚರಿಕೆ ಪತ್ರ) 3) ಮೂದನೆ ಬಾಲ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ (ಪ್ರತಿಶತ 25% ದಂಡ ಮತ್ತು ಎಚ್ಚರಿಕೆ ಪತ್ರ) 4) ನಾಲ್ಕನೇಯ ಬಾರಿ ಗುಣಮಟ್ಟ ವಲಂಣೆಯಲ್ಲಿ ವಿಫಲವಾದರೆ ಸದರಿ ಕಂಪನಿಯನ್ನು ಕಪ್ಪು ಪಟ್ಟಿಗೆ ಎಸ್.ಎಲ್.ಎಲ್.ಸಿ ಯಲ್ಲಿ ನಿರ್ಣಯ ಮಾಡುವುದರ ಜೊತೆಗೆ ದಂಡವನ್ನು ಸಹ ಹಾಕಲೇಬೇಕು. ಸ್ಪಿಂಕ್ಲರ್ ಪೈಪ್ ಗಳ ಒಂದೇ ಪ್ಯಾಚ್ ನಲ್ಲಿ ಸಾವಿರಾರು ಸ್ಪಿಂಕ್ಲರ್ ಪೈಪ್ ಗಳ ಸೆಟ್ ಅನ್ನು ಉತ್ಪಾದನೆ ಮಾತ್ತು ಸರಬರಾಗಿರುತ್ತದೆ. ಇದರಲ್ಲಿ ಒಂದು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ, ಉಳಿದೆಲ್ಲವೂ ವಿಫಲವಾಗಿವೆ ಎಂದರ್ಥ ಅಥವಾ ಎಲ್ಲವನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿಲ್ಲ ಎಂದರ್ಥ
    • 6) ಕೃಷಿ ಇಲಾಖೆ ಎ.ಡಿ.ಎ ಹೆಸರಿನಲ್ಲಿ ಕಂಪನಿಗಳು ನಕಲಿ ಜಿಲ್ಲುಗಳನ್ನು ಒದಗಿಸುತ್ತಿರುವುದ. ಕಾನೂನಿನ ವಿರುದ್ಧವಾಗಿದೆ. ಒಂದು ವೇಳೆ ಕೃಷಿ ಇಲಾಖೆಯ ಎ.ಡಿ.ಎ ಅಧಿಕಾರಿ ಹೆಸರಿನಲ್ಲಿ ಕಂಪುರಿಗಳು ಬಿಲ್ಲನ್ನು ಮಾಡಿದ್ದೆ ಆದರೆ, ಸದಲ ಕೃಷಿ ಇಲಾಖೆಯು ಜಿ.ಎಸ್.ಟಿ ಯನ್ನು ಕಟ್ಟಬೇಕ ಮತ್ತು ಜಿ.ಎಸ್.ಬಿ ಫೈಲಿಂಗ್ ಸಹ ಮಾಡಬೇಕು. ಆದರೆ ಕೇಂದ್ರ ಮತ್ತು ರಾಜು ಸರಕಾರದ ನಿಯಮಾವಣ ಪ್ರಕಾರ ಯಾವುದೇ ಕಾರಣಕ್ಕೂ ಕೃಷಿ ಇಲಾಖೆ ಅಧಿಕಾರಿ ಎ.ಡಿ.ಎ ಹೆಸರಿನಲ್ಲಿ ಬಿಲ್ಲನ್ನು ತೆಗೆದುಕೊಳ್ಳಲು ಅವಕಾಶವೇ ಇದುವುದಿಲ್ಲ
    • 7) ರೂ.5000/- ಕ್ಕಿಂತ ಹೆಚ್ಚು ಬೆಲೆ ಬಾಳುವ ಕೃಷಿಗೆ ಸಂಬAಧಪಟ್ಟ ಸಲಕರಣೆಗಳನ್ನು ರೈತ್ಯ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲೇಬಾರದು ಎಂಬ ನಿಯಮವಿದೆ. ಒಂದು ವೇಣಿ ದಾಸ್ತಾನು ಮಾಡಿದ್ರೆ ಆದಲ್ಲಿ ಕೇಂದ್ರ ರಾಜ್ಯ ಸರಕಾರದ ಮತ್ತು ಕರ್ನಾಟಕ ಟಾನ ಪರೆನ್ಸಿ ಇನ್ ಪಬ್ಲಿಕ್ ಪ್ರಾಕ್ಯೂರಮೆಂಟ್ ಆಕ್ಟ್ 1990 ಕಾನೂನುಗಳ ವಿರುದ್ಧವಾಗಿರುತ್ತದೆ.
    • 8) ಗುಣಮಟ್ಟ ನಿಯಂತ್ರಣ ಮತ್ತು ಪರೀಕ್ಷೆ
    • 9. ಕಳಪೆ ಗುಣಮಟ್ಟದ ಸ್ಪಿಂಕರ್ ಪೈಪ್ ಗಳನ್ನು ವಾಸನೆ ಗ್ರಹಿಸಿದರೆ ಅಥವಾ ಸುಟ್ಟರೆ ಅದರ ಗುಣಮಟ್ಟ ಗೊತ್ತಾಗುತ್ತದೆ. ಅದೇ ಒಳ್ಳೆಯ ಕಚ್ಚಾ ವಸ್ತುಗಳಿಂದ ಉತ್ಪಾದರೆ ಮಾಡಿದ್ರೆ ಆದರೆ ಯಾವುದೇ ಉತಿಯ ವಾಸನೆ ಬರುವುದಿಲ್ಲ ಇದು ಸಾಮಾನ್ಯರಿಗೂ ಸಹ ಗೊತ್ತಾಗುವಂತಹ ವಿಷಯ

    ಈ ಮೇಲ್ಕಾಣಿಸಿದ ಅಂಶಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ತನಿಖೆ ಮಾಡಿ ತಪ್ಪಿತಸ್ಸ ಸಿಂಕರ್, ಪೈಪ್ ತಯಾರಿಸುವ ನೋಂದಾಯಿತ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದು, ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಿಒಓ ಕಚೇರಿ ಮುಂದೆ ಪ್ರತಿಭಟನೆ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    apvc-iconPost Views: 9
  • ಪಿಡಿಓ’ಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಳ್ಳಿಗಳಲ್ಲಿ ವಾಸಿಸಬೇಕು; ಲೋಕಾಯುಕ್ತ ಬಿ.ಎಸ್ ಪಾಟೀಲ್

    ಪಿಡಿಓ’ಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಳ್ಳಿಗಳಲ್ಲಿ ವಾಸಿಸಬೇಕು; ಲೋಕಾಯುಕ್ತ ಬಿ.ಎಸ್ ಪಾಟೀಲ್

    ಅಂಬೇಡ್ಕರ್ ವೃತ್ತ ಅರ್ಧ ಕಾಮಗಾರಿ, ಪುರಸಭೆ ಮುಖ್ಯಾಧಿಕಾರಿ ವಿರುದ್ಧ ದೂರು

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ: 

    ಇಲ್ಲಿನ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಸಭಾ ಭವನದಲ್ಲಿ ಸಾರ್ವಜನಿಕರಿಂದ ಕೆಲ ಇಲಾಖೆಗಳ ವಿರುದ್ಧ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಸೋಮವಾರ ಕರ್ನಾಟಕ ಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರು ಅಹವಾಲು ಸ್ವೀಕರಿಸಿದರು.

    ಜಿಲ್ಲೆಯಲ್ಲಿಯೇ ಮುದ್ದೇಬಿಹಾಳ ಹಿಂದೂಳಿದ ತಾಲೂಕು ಆಗಿದೆ. ಕೆಲ ಹಳ್ಳಿಗಳಿಗೆ ಸರಿಯಾದ ಬಸ್, ವಿದ್ಯುತ್ ಸೌಕರ್ಯ ಇರಲಿಲ್ಲ. ಆಗ ನಾಲ್ಕೈದು ಕಿಲೋ ಮೀಟರ್ ನಡೆದು ಕೊಂಡು ಶಾಲೆಗೆ ಹೋಗುತ್ತಿದ್ದೇವು. ಈಗ ಎಲ್ಲವೂ ಸೌಕರ್ಯವನ್ನು ಸರ್ಕಾರ ಕೋಟ್ಯಾಂತರ ಹಣವನ್ನು ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ಬಿಡುಗಡೆ ಮಾಡುತ್ತಿದೆ. ಅಧಿಕಾರಿಗಳು ಸರಿಯಾಗಿ ಅನುದಾನವನ್ನು ಯಾವುದರಲ್ಲಿ ಬಳಸಬೇಕು ಎಂಬುವ ಪರಿಕಲ್ಪನೆ ಇರಬೇಕು ಎಂದರು.

    ಸ್ವಚ್ಚತೆ, ಆರೋಗ್ಯ, ಶೈಕ್ಷಣಿಕವಾಗಿ ಈ ಭಾಗ ಹಿಂದುಳಿದಿದೆ. ಮನುಷ್ಯ ಅತೀ ಆಸೆಗೆ ಬಿದ್ದು ಚಪಲಕ್ಕೆ ಬಿದ್ದಿದ್ದಾನೆ ಬಡವರಿಗೆ ಬೇಕಾದಂತಹ ಸೌಕರ್ಯ ಆರ್ಥಿಕವಾಗಿ ಮುಂದಿರುವವರಿಗೆ ಸಿಗುತ್ತಿದೆ. ಇದರಿಂದ ಭ್ರಷ್ಟಾಚಾರ ವ್ಯಾಪಕವಾಗಿ ಜಾಸ್ತಿಯಾಗುತ್ತಿದೆ.

    ಈ ಭಾಗದ ಹಳ್ಳಿಗಳನ್ನು ಬೇರೆ ಬೇರೆ ಕೂಡ ಹೋಲಿಸಿ ನೋಡಬೇಕು. ಹಳ್ಳಿಗಳಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಲಾಗಿದೆ‌. ಇದನ್ನು ಸಾರ್ವಜನಿಕರು ಬಳಕೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗಳು, ಸಿಇಓ ಹಾಗೂ ಅಧಿಕಾರಿಗಳು ಪಟ್ಟಣ ಸರಿ ಮಾಡಿದ್ರೆ ಸಾಲದು ಹಳ್ಳಿಗಳಲ್ಲಿ ಚರಂಡಿ, ರಸ್ತೆ, ಆರೋಗ್ಯಕ್ಕೆ ಬೇಕಾದ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದಂತಹ ಯೋಜನೆ ಸಿದ್ಧಪಡಿಸಬೇಕು ಎಂದು ರಾಜ್ಯ ಲೋಕಾಯುಕ್ತರು ಹೇಳಿದರು. ಈ ವೇಳೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸಿಇಓ ಉತ್ತರಿಸಿದರು.

    ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಧಿಕ ಹಣ ತೆಗೆದುಕೊಳ್ಳಲಾಗುತ್ತಿದೆ‌‌. ಹೀಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತ ಮಟ್ಟಕ್ಕೆ ಕೊಂಡ್ಯೊಯ್ದರೆ ಬಡ ಜನರಿಗೆ ಅನುಕೂಲ ವಾಗುತ್ತದೆ. ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಯಾವುದೇ ಅರ್ಜಿಯ ಮಾಹಿತಿ ಕೇಳಿದರೂ ಕೊಡಲು ಸಿದ್ಧ ಇರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಪಿಡಿಓಗಳು ಜಿಲ್ಲಾ ಮಟ್ಟದಲ್ಲಿ ವಾಸಿಸುತ್ತಾರೆ ಎಂದು ದೂರುಗಳು ಬಂದಿವೆ. ಈ ಭಾಗದ ಗ್ರಾ.ಪಂ ಸಮೀಪದಲ್ಲಿಯೇ ಖಾಯಂ ಆಗಿ ಪಿಡಿಓಗಳು ವಾಸಿಸಬೇಕು. ರಸ್ತೆಗಳಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡವನ್ನು ತೆರವುಗೊಳಿಸಬೇಕು. ಕಾನೂನು ಉಲ್ಲಂಘಿಸಿದವರಿಗೆ ಪಿಡಿಓಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ನೀವು ಸಹ ಅಕ್ರಮ ಕಟ್ಟದಲ್ಲಿ ಭಾಗಿದಾರರು ಆದಂತೆ. ಎಲ್ಲರೂ ಕಾನೂನು ಪಾಲಿಸಬೇಕು ಹೊರತು ಉಲ್ಲಂಘಿಸಬಾರದು. ಹಳ್ಳಿಗಳಲ್ಲಿ ಪಿಡಿಓಗಳು ಚರಂಡಿ ನಿರ್ಮಾಣ ಮಾಡಿಕೊಡಲ್ಲ. ಇದರಿಂದ ರೋಗಗಳು ಬರದೇ ಇರುತ್ತಾವಾ? ಎಲ್ಲಾ ಗ್ರಾಮಗಳಲ್ಲಿ ಸುಸಜ್ಜಿತ ಅಭಿವೃದ್ಧಿಯನ್ನು ಮಾಡಲು ಗ್ರಾ.ಪಂ ಮಾಡಲಾಗಿದೆ. ಇದನ್ನು ಈಗ ಪಿಡಿಓಗಳು ಅಧೋಗತಿ ತಂದಿದ್ದಾರೆ.

    ಮನೆ, ನೀರು, ಆಸ್ತಿ ತೆರಿಗೆ ಹೀಗೆ ಯಾವ ಅನುದಾನಲ್ಲಿ ತೆರಿಗೆ ಎಷ್ಟು ಬಂದಿದೆ ಎಂಬುದನ್ನು ಸರಿಯಾಗಿ ನಿರ್ವಹಣೆಯ ಹಾಜರಾತಿ ಪುಸ್ತಕ ಮಾಡಬೇಕು. ಇದ್ಯಾವುದನ್ನು ಅಧಿಕಾರಿಗಳು ಪಾಲಿಸದಿದ್ದರೆ ನಿಮ್ಮ ವಿರುದ್ಧ ಕೇಸ್ ದಾಖಲಿಸವುದಲ್ಲದೇ, ನಿಮ್ಮ ವಿರುದ್ದ ಲೋಕಾಯುಕ್ತ ಅಧಿಕಾರಿಗಳು ಹಿಂಬಾಲು ಬೀಳುತ್ತಾರೆ.

    ಗ್ರಾಮಗಳಲ್ಲಿ ಕೆಲವು ಪ್ರಾಣಿಗಳು ಸಾವಿಗೀಡಾದರೆ ಮೂರು ನಾಲ್ಕು ದಿನ ಕಳೆದರೂ ಅವುಗಳನ್ನು ಸರಿಯಾಗಿ ವಿನಿಯೋಗಿಸುವುದಿಲ್ಲ. ದೇಶದಲ್ಲಿ ಬಹುತೇಕವಾಗಿ ಹೆಚ್ಚಿನ ಜನಸಂಖ್ಯೆ ಹಳ್ಳಿಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಹಳ್ಳಿಗಳು ಅಭಿವೃದ್ಧಿಗೊಂಡಾಗ ಮಾತ್ರ ದೇಶ ಅಭಿವೃದ್ಧಿ ಯಾದಂತೆ. ಹಳ್ಳಿಗರು ಮುಗ್ದರು, ಸರಿಯಾಗಿ ಅವರಿಗೆ ತಿಳುವಳಿಕೆ ಇರುವುದಿಲ್ಲ. ಸರಿಯಾಗಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಖೀತು ಮಾಡಲಾಯಿತು.

    ಹಳ್ಳಿ ಜನರಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ಡಿಡಿಪಿಓ, ಬಿಇಓ ಪಾತ್ರ ಬಹಳವಿದೆ. ಶಾಲೆಗಳಲ್ಲಿ ಸ್ವಚ್ಛತೆಗೆ ಬಹಳ ಮಹತ್ವ ಕೊಡಿ, ತಾಲೂಕಿನಲ್ಲಿ 66 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆ ಇವೆ. ಕಳಪೆ ಗುಣಮಟ್ಟದ ಶಾಲೆಗಳು ನಿರ್ಮಾಣವಾದ ದೂರುಗಳು ಬಂದಿವೆ ಎಂದರು. ಈ ವೇಳೆ ಬಿಇಓ ಬಸವರಾಜ ಸಾವಳಗಿ ಉತ್ತರಿಸಿ 97 ಶಾಲೆಗಳಲ್ಲಿ 225 ಶಾಲೆಗಳು ಕೊಠಡಿಗಳು ಶೀಥಲಗೊಂಡಿವೆ. ಇದಕ್ಕೆ ಈಗಾಗಲೇ ವರದಿ ನೀಡಲಾಗಿದೆ ಎಂದರು. ಆಗ ಲೋಕಾಯುಕ್ತರು ಮಾತನಾಡಿ ಹಾಗಾಗ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ಪ್ರಸ್ತಾಪಿಸಬೇಕು‌. ಆಗಲೂ ಹಾಗದಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಬಿಡುವುದಿಲ್ಲ ಎಂದರು.

    ಪ್ರತಿಯೊಬ್ಬ ಪಿಡಿಓಗಳು ಸಮಯ ಹಾಕಿಕೊಂಡು ಪ್ರತಿದಿನ ಒಂದೊಂದು ಬಡವಾಣೆ ಆಯ್ದುಕೊಂಡು ಸ್ವಚ್ಛತೆ ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ ಎಸ್.ಪಿ ಇದ್ದಾರೆ ಎರಡು ವಾರಕ್ಕೊಮ್ಮೆ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ಉನ್ನತವಾದ ಅಭಿವೃದ್ಧಿ ಮಾಡಿದ ಪಿಡಿಓಗಳನ್ನು ಗುರುತಿಸಿ ಪ್ರಶಂಸಾನ ಪತ್ರ ನೀಡಲಾಗುತ್ತದೆ‌. ಪಂಚಾಯತಿ ಅಧಿಕಾರಿಗಳು ಟ್ಯಾಕ್ಸ್ ಮೆಂಟೆನೆನ್ಸ್ ಪುಸ್ತಕ ಮಾಡದಿದ್ದರೆ ನೀವು ಈ ಹುದ್ದೆಗೆ ಯೋಗ್ಯರಲ್ಲವೆಂದು ಅತಿ ಶೀಘ್ರದಲ್ಲಿ ನಮ್ಮ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದರು.

    ಗ್ರಾ.ಪಂ ಸದಸ್ಯರಿಗೆ, ಅಧ್ಯಕ್ಷರಿಗೆ ಪಿಡಿಓಗಳು ಹೆದರುವ ಅವಶ್ಯಕತೆ ಇಲ್ಲ. ನೀವು ಯಾವುದೇ ಬಿಲ್ ನ್ನು ತಪ್ಪು ಬರಿಯದೇ ಖಂಡಿಸುವ ಗುಣ ಹೊಂದಿರಬೇಕು ಎಂದರು.

    ಈ ವೇಳೆ ಇಓ ಎನ್.ಎಸ್ ಮಸಳಿ ಮಾತನಾಡಿ, ಪ್ರತಿಶತ 5೦% ಕ್ಕಿಂತ ಹೆಚ್ಚಿಗೆ ಸಂಗ್ರಹಿಸಲಾಗಿದೆ. ಆರ್ ಓ(ಕುಡಿಯುವ ನೀರಿನ) ಘಟನೆಗಳು ಹಾಳು ಆಗಿದ್ದರಿಂದ ಅದಕ್ಕೆ ಬಳಸಬೇಕು ಯೋಜನೆ ಇದೆ ಎಂದು ಸಿಇಓ ಹೇಳಿದರು.

    ಜಲಜೀವನ ಮಿಶನ್ ಅಡಿಯಲ್ಲಿ ಮನೆಗಳಿಗೆ ಕುಡಿಯುವ ನೀರಿನ್ನು ಒದಗಿಸಬೇಕು. ತಾಲೂಕು ಎಇಇ ಹಿರೇಗೌಡ ಅಷ್ಟೇನೂ ನೀವು ಕ್ರೀಯಶೀಲರಿಲ್ಲ‌. ನೀವು ಆದಷ್ಟು ಬೇಗನೆ ನೀವು ಹಳ್ಳಿಗಳಿಗೆ ಹೋಗಿ ಜಲಮಿಶನ್ ಅಡಿ ನೀರು ಸರಿಯಾಗಿ ಗ್ರಾಮಸ್ಥರಿಗೆ ಹೋಗುತ್ತಿದೆ ಎಂಬುದನ್ನು ಪರೀಶಿಲಿಸಬೇಕು ಎಂದರು.

    ಸಾರ್ವಜನಿಕರ ಅಧಿಕಾರಿಗಳ ಹತ್ತಿರ ಸಮಸ್ಯೆ ಹೇಳಿಕೊಂಡು ಬಂದರೆ ಸರಿಯಾದ ಒಂದೆರೆಡು ಮಾತುಗಳನ್ನು ಆಡಬೇಕು. ಅದರಿಂದಲೇ ಕೆಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು. ಸರಿಯಾಗಿ ಅಧಿಕಾರಿಗಳು ಹಣದ ರಜಿಸ್ಟರ್ ಮಾಡಬೇಕು. ಆಗ ನಮ್ಮ ಅಧಿಕಾರಿಗಳು ಬಂದು ದಾಳಿಮಾಡಿದರೆ ನಿಮ್ಮ ಹತ್ತಿರ ಹಣ ಸಿಕ್ಕರೆ ಕೇಸ್ ದಾಖಲಾಗುತ್ತದೆ. ಈ ವೇಳೆ ನನ್ನ ಮಗನಿಗೆ ಫೀಸ್ ನೀಡಬೇಕಿತ್ತು, ಮನೆಯ ದುಡ್ಡು ಅಂದರೆ ಯಾವುದನ್ನು ನಾವು ಕೇಳುವುದಿಲ್ಲ‌. ಶಾಲೆಗಳಲ್ಲಿ 5 ರಿಂದ 10 ಸಾವಿರ ರೂಗೆ ಶಿಕ್ಷಕರ ನ್ನು ತಂದು ಶಿಕ್ಷಣವನ್ನು ನೀಡಲಾಗುತ್ತಿದೆ. ಅವರಿಗೆ ಸರಿಯಾದ ಶಿಕ್ಷಣ ಹಾಗೂ ತರಬೇತಿ ಇರುವುದಿಲ್ಲ ಅವರು ಏನು ಶಿಕ್ಷಣ ನೀಡುತ್ತಾರೆ. ಇದು ನಿಲ್ಲಬೇಕು ಎಂದು ಲೋಕಾಯುಕ್ತರು ಹೇಳಿದರು.

    ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಎಸ್ ವಸತಿ ನಿಲಯದ ಕೋಣೆಗಳಲ್ಲಿ 20 ಜನ ವಿದ್ಯಾರ್ಥಿಗಳನ್ನು ಹಾಕಲಾಗುತ್ತದೆ. ಇದು ದೌರ್ಬಾಗ್ಯ ಇದರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ.

    ಕೃಷಿ ತೊಗರಿ ಬೆಳೆ ನಕಲಿ ಬಂದಿರುವುದಕ್ಕೆ ಏನು ಕ್ರಮ ಕೈಗೊಂಡಿದ್ದಿರಿ ಎಂಬುದಕ್ಕೆ ಹವಾಮಾನ ವೈಪರಿತ್ಯ ಮಂಜು ಬಿದ್ದಿರುವುದರಿಂದ ಇದಕ್ಕೆ ಇಳುವರಿ ಕಡಿಮೆಯಾಗಿದೆ. ಬಿಜೋಪಚಾರ ಮಾಡುವಾಗ ಅಂತರ ಕಾಯ್ದುಕೊಳ್ಳದೇ ಇರುವುದಕ್ಕೆ ಇಳುವರಿ ಕಡಿಮೆಯಾಗಿದೆ ಎಂದು ಧಾರವಾಡ ಹಾಗೂ ರಾಯಚೂರದಿಂದ ಕೃಷಿ ವಿಜ್ಞಾನಿಗಳು ವರದಿ ನೀಡಿದ್ದಾರೆ. ಬಗ್ಗೆ ವರದಿ ಕೂಡ ನೀಡಲಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿ ಸುರೇಶ್ ಭಾವಿಕಟ್ಟಿ ಹೇಳಿದರು. ಹಳ್ಳಿಗಳಲ್ಲಿ ಅಲ್ಲಲ್ಲಿ ರೈತರ ಬೆಳೆಗಳನ್ನು ಪರಿಶೀಲನೆ ಮಾಡಲಾಗಿದೆ. ಬೆಳೆಗಳಿಗೆ ವಿಮಾ ಕಟ್ಟಿದ್ದರೆ ಅವರಿಗೆ ಕಂಡಿತವಾಗಿ ಬೆಳೆ ವಿಮಾವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

    ತಾಳಿಕೋಟಿ, ಮುದ್ದೇಬಿಹಾಳದಲ್ಲಿ 33 ಹಾಗೂ 12 ಕೆರೆಗಳು ಇವೆ. ಇದರಲ್ಲಿ 13 ಮುದ್ದೇಬಿಹಾಳದಲ್ಲಿ, 3 ತಾಳಿಕೋಟಿ ವ್ಯಾಪ್ತಿಯ ಕೆರೆಗಳು ಒತ್ತುವರೆಯಾಗಿವೆ.ಈ ಕೂಡಲೇ ತೆರವು ಗೊಳಿಸಲು ಕ್ರಮ ಕೈಗಳ್ಳಬೇಕು. ಈಗ ರೈತರು ಭಿತ್ತನೆ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಬೆರಳೆಣಿಕೆಯಷ್ಟು ಇರುವ ಕೆರೆಗಳನ್ನು ಉಳಿಸಬೇಕು. ರೈತರು ಮನೆ ಇನ್ನೀತರ ಅಕ್ರಮಿಸಿರುವುದನ್ನು ಮೊದಲು ಒತ್ತುವರಿ ತೆರವುಗೊಳಿಸಬೇಕು ಎಂದರು.

    ಮುದ್ದೇಬಿಹಾಳ 42 ಸಾವಿರ ಜನಸಂಖ್ಯೆ ಇದ್ದು, ರಸ್ತೆಗಳಲ್ಲಿ ಶುಭಾಶಯ ಕೋರುವ ಪ್ಲೇಕ್ಸ್ ಹಾಕಲಾಗಿದೆ ಇವುಗಳನ್ನು ತೆರವುಗೊಳಿಸಬೇಕು. ಇದು ಸುಪ್ರೀಂ ಆದೇಶವಿದೆ. ಮುಂದೆ ಪ್ಲೆಕ್ಸ್ ಗಳು ಕಂಡರೆ ನಿಮ್ಮ ಮೇಲೆ ಕೇಸ್ ದಾಖಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರಗೆ ಸೂಚಿಸಲಾಯಿತು.

    ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಒಟ್ಟು 18 ಕಸದ ವಾಹನಗಳು ಇವೆ. ಪ್ರತಿ ದಿನ 12 ಟನ್ ಕಸ ಸಂಗ್ರಹಿಸಲಾಗುತ್ತಿದೆ. ಪ್ರತಿ ದಿನ ಒಂದೊಂದು ವಾಹನಗಳು ನಾಲ್ಕು ಟ್ರಿಪ್ ಆಗುತ್ತಿದ್ದು, ಇದರಿಂದ ಹಣ ಪೋಲಾಗುತ್ತಿದೆ. ಇದನ್ನು ಅರಿತು ಬರುವ ದಿನಗಳಲ್ಲಿ ಟಾಟಾ ಎಸ್ ನಿಂದ ಪಟ್ಟಣದಲ್ಲಿತೇ ಟಿಪ್ಪರ್ ಹಾಕಿ ಈ ಮೂಲಕ ಕಸವನ್ನು ತೆಗೆದುಕೊಂಡು ಹೋಗುವ ಚಿಂತನೆ ಇದೆ ಎಂದರು.

    ದೂರುಗಳು

    ಪಟ್ಟಣದಲ್ಲಿ ಮನೆಕಟ್ಟಲು ಮುಖ್ಯಾಧಿಕಾರಿ ಲಂಚ ತೆಗೆದುಕೊಂಡಿದ್ದಾರೆ ಎಂದು ಪರಶುರಾಮ ಲೋಕಾ ಯುಕ್ತರಿಗೆ ದೂರು ಬಂದರೆ, ಅದೇ ರೀತಿ ಎಸ್.ಸಿ ಎಸ್.ಪಿ, ಟಿಎಸ್.ಪಿ ಹಣ ದುರುಪಯೋಗ, ಜಲ ಜೀವನ ಮಿಶಿನ್, ಹೊಲದ ದಾರಿಗಳ ಸಮಸ್ಯೆ, ಆಸ್ತಿ ಬೇರೆವರಿಗೆ ವರ್ಗಾವಣೆ ಬಗ್ಗೆ, ಮುದ್ದೇಬಿಹಾಳದ ಅಂಬೇಡ್ಕರ್ ವೃತ್ತ ಅರ್ಧ ಕಾಮಗಾರಿ ಕುರಿತು, ಅನಧಿಕೃತ ಕಟ್ಟಡಕ್ಕೆ ಅನುಮತಿ ನೀಡಿದ ಪುರಸಭೆ ಹಾಗೂ ತಾ.ಪಂ ವಿರುದ್ಧ ದೂರುಗಳು ಕೇಳಿಬಂದವು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಿಷಿ ಆನಂದ, ಲೋಕಾಯುಕ್ತ ಎಸ್.ಪಿ ಟಿ ಮಲ್ಲೇಶ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

     

    apvc-iconPost Views: 110