Blog

  • ಯೋಗ,ಧ್ಯಾನಕ್ಕೆ ಭಾರತವೇ ಮೂಲ : ಶಾಸಕ ಚನ್ನಾರಡ್ಡಿ ಪಾಟೀಲ್

    ಯೋಗ,ಧ್ಯಾನಕ್ಕೆ ಭಾರತವೇ ಮೂಲ : ಶಾಸಕ ಚನ್ನಾರಡ್ಡಿ ಪಾಟೀಲ್

    ಯೋಗಮಯವಾದ ಯಾದಗಿರಿ ಸ್ವಪ್ನಾ ಮೈದಾನ – ಸಾವಿರಾರು ಜನರು ಭಾಗಿ

    ಸತ್ಯಕಾಮ ವಾರ್ತೆ ಯಾದಗಿರಿ:
    ಆದಿ,ಅನಾದಿ ಕಾಲದಿಂದಲೂ ಯೋಗ, ವ್ಯಾಯಾಮ,ಧ್ಯಾನ ಋಷಿ ಮುನಿಗಳು ಮಾಡಿಕೊಂಡ ಬಂದ ಪರಿಣಾಮ ಅವರಿಗೆ ಆಯುಷ್ಯ ಹೆಚ್ಚಿಗೆ ಇತ್ತು ಮತ್ತುಉತ್ತಮ ಆರೋಗ್ಯ ಹೊಂದಿದ್ದರೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

    ಜಿಲ್ಲಾ ಪಂಚಾಯತ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಪತಂಜಲಿ ಯೋಗ ಸಮಿತಿ, ಹಾಗೂ ಸರ್ಕಾರದ ಇತರೆ ಇಲಾಖೆ ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ಸ್ವಪ್ನಾ ಮೈದಾನದಲ್ಲಿ ಆಯೋಜಿಸಿದ್ದ “11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಭಾರತೀಯರು ಯೋಗದ ಮೂಲಕವೇ ಅನೇಕ ರೋಗಗಳನ್ನು ಗುಣಪಡಿಸಿಕೊಳ್ಳುವ ಕಾಲವೊಂದಿತ್ತು. ಆದರೆ, ಮುಂದೆ ಇಂಗ್ಲಿಷ್ ಔಷಧಿಗಳಿಗೆ ಮೊರೆ ಹೋಗುವ ಮೂಲಕ ಈ ದೇಸಿ ಪದ್ದತಿ ಮೇಲಿನ ಕಾಳಜಿ ಕಡಿಮೆ ಆಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಜನರು ಯೋಗ ಇತರೆ ದೈಹಿಕ‌ ಕಸರತ್ತಿನ ಮೂಲಕ ತಮ್ಮ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಮರಳಿದ್ದಾರೆಂದು ಶಾಸಕರು‌ ವಿವರಿಸಿದರು.

    ಪ್ರತಿ ನಿತ್ಯ ಬೆಳಗ್ಗೆ ಯೋಗ ಮಾಡುವುದರಿಂದ ಒತ್ತಡ ಕಡಿಮೆ ಆಗಿ ಲವ,ಲವಿಕೆಯಿಂದ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಬಹುದೆಂದು ಹೇಳಿದರು.

    ಚಟಗಳ ದಾಸರಾಗದೇ ಉತ್ತಮ ಆರೋಗ್ಯ ಹೊಂದಿ,ಮೊಬೈಲ್ ಬಳಕೆ ಆದಷ್ಟು ಕಡಿಮೆ ಮಾಡಿ, ಶುದ್ಧ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶಾಸಕರು ಸಲಹೆ ನೀಡಿದರು.

    ನಮ್ಮ ಈ ವಿದ್ಯೆ ಈಗ ಅಂತರ ರಾಷ್ಟ್ರಮಟ್ಟದಲ್ಲಿ ಭಾರಿ ಚಲಾವಣೆಗೆ ಬಂದಿದೆ. ಇದೇ ಭಾರತದ ಶಕ್ತಿ ಎಂದರು.

    ಜಿಲ್ಲಾ‌ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ್, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ನಗರಸಭೆ ಆಯುಕ್ತರಾದ ಉಮೇಶ ಚವ್ಹಾಣ, ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದನಾ ಜೆ.ಗಾಳಿ, ಯೋಗ ಗುರುಗಳಾದ ಸೋಮನಾಥರೆಡ್ಡಿ ಎಲ್ಹೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನಿರ್ದೇಶ ಪಂಡೀತರಾವ, ರೇಶ್ಮೆ ಇಲಾಖೆ ಸಹಾಯಕ ಸಂತೋಷ,
    ವೈದ್ಯಾಧಿಕಾರಿ ಪ್ರಕಾಶ ರಾಜಾಪೂರೆ, ಬ್ರಹ್ಮಾಕುಮಾರಿ ವೀಣಾ ಅಕ್ಕಾ ಇದ್ದರು,

    apvc-iconPost Views: 4
  • ದೇಹ ಮತ್ತು ಮನಸ್ಸು ಸ್ವಾಸ್ತ್ಯವಾಗಿಡಲು ಯೋಗದಿಂದ ಸಾಧ್ಯ – ನಾಯಕ್

    ದೇಹ ಮತ್ತು ಮನಸ್ಸು ಸ್ವಾಸ್ತ್ಯವಾಗಿಡಲು ಯೋಗದಿಂದ ಸಾಧ್ಯ – ನಾಯಕ್

    ಸತ್ಯಕಾಮ ವಾರ್ತೆ ಗುರುಮಠಕಲ್:

    ಯೋಗವು ಭಾರತದಲ್ಲಿ ಅಳವಡಿಸಿಕೊಂಡ ಸುಂದರವಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರಪಂಚದಾದ್ಯಂತ ಜನರು ಆರೋಗ್ಯಕರ ಜೀವನವನ್ನು ಹೊಂದಲು ಯೋಗವನ್ನು ಪ್ರಶಂಸಿಸುವತ್ತ ಸಾಗುತ್ತಿದ್ದಾರೆ ಎಂದು ಮುಖ್ಯಗುರು ವೀರೇಂದ್ರ ನಾಯಕ್ ಹೇಳಿದರು.

    ಪಟ್ಟಣದ ಖಾಸಮಠ ಆವರಣದಲ್ಲಿ 11ನೇ ಅಂತರ್ ರಾಷ್ಟೀಯ ಯೋಗ ದಿನಾಚರಣೆಯ ಅಂಗವಾಗಿ ಮಾತನಾಡಿದ ಅವರು, ಯೋಗವು ಮಾನವೀಯತೆಗೆ ಸಂಪೂರ್ಣ ಮಸಾಜ್ ಅನ್ನು ಹೊಂದಿದೆ. ಇದು ಮಾನವ ದೇಹ, ಮನಸ್ಸು ಮತ್ತು ಆತ್ಮಕ್ಕೂ ಮಸಾಜ್ ಅನ್ನು ಹೊಂದಿದೆ. ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ಇದನ್ನು ಮೊದಲು ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2015 ರಲ್ಲಿ ಘೋಷಿಸಿದರು. ಅದರ ನಂತರ ಯೋಗ ದಿನವನ್ನು ಪ್ರಪಂಚದಾದ್ಯಂತ ಆಚರಿಸಲು ಪ್ರಾರಂಭಿಸಲಾಯಿತು ಮತ್ತು ಅದನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಪರಿವರ್ತಿಸಲಾಯಿತು ಎಂದು ತಿಳಿಸಿದರು.‌

    ಇದೇ ಸಂಧರ್ಭದಲ್ಲಿ ಯೋಗಪಟುಗಳಾದ ಹಣಮಂತು ಹಾಗೂ ನರಸರೆಡ್ಡಿ ಶಾಲಾ ಮಕ್ಕಳಿಗೆ ಯೋಗದಿನವನ್ನು ವಿವಿಧ ಯೋಗ ಭಂಗಿಯ ಯೋಗ ಪ್ರದರ್ಶಿಸುವದರ ಮೂಲಕ ಆಚರಣೆಮಾಡಲಾಯಿತು. ಶಿಕ್ಷಕ ಲಾಲಪ್ಪ ಯಾದವ ಸ್ವಾಗತಿಸಿದರು.

    ಈ ವೇಳೆ ನಿರ್ದೇಶಕ ಅಖಂಡೇಶ್ವರ ಹಿರೇಮಠ, ಮುಖ್ಯಗುರುಗಳಾದ ಸುದರ್ಶನ್ ಗೌಡ, ದೈ. ಶಿಕ್ಷಕ ನರಸರೆಡ್ಡಿ ಗಡ್ಡೆಸೂಗೂರು, ಚಂದ್ರಶೇಖರ್, ವಿಜಯಕುಮಾರ್, ಭಾಗ್ಯಲಕ್ಷ್ಮೀ ವಾರದ, ಮೌನಿಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    apvc-iconPost Views: 12
  • ಸಾಹಿತ್ಯ ಕ್ಷೇತ್ರಕ್ಕೆ ಎಚ್ಎಸ್ವಿ ಕೊಡುಗೆ ಅಪಾರ – ಶಿವಣ್ಣ ಇಜೇರಿ

    ಸಾಹಿತ್ಯ ಕ್ಷೇತ್ರಕ್ಕೆ ಎಚ್ಎಸ್ವಿ ಕೊಡುಗೆ ಅಪಾರ – ಶಿವಣ್ಣ ಇಜೇರಿ

    ಸತ್ಯಕಾಮ ವಾರ್ತೆ ಶಹಾಪುರ:

    ಹಿರಿಯ ಸಾಹಿತಿ,ಲೇಖಕ,ಕಾದಂಬರಿಕಾರ ಡಾ.ಎಚ್.ಎಸ್ ವೆಂಕಟೇಶಮೂರ್ತಿಯವರ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾಗಿದೆ ಎಂದು ಹಿರಿಯ ಸಾಹಿತಿ ಶಿವಣ್ಣ ಇಜೆರಿ ಹೇಳಿದರು

    ನಗರದ ಮಾತೃ ಛಾಯಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ ಇತ್ತೀಚಿಗೆ ನಮ್ಮನ್ನು ಅಗಲಿದ ನಾಡಿನ ಹೆಸರಾಂತ ಹಿರಿಯ ಸಾಹಿತಿ,ಡಾ.ಎಚ್.ಎಸ್ ವೆಂಕಟೇಶಮೂರ್ತಿ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

    ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಸಿದ್ಧಲಿಂಗಣ್ಣ ಆನೆಗುಂದಿ ಮಾತನಾಡಿ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು ಗ್ರಾಮೀಣ ಪ್ರದೇಶದಿಂದ ಬಂದಂತ ಪ್ರತಿಭೆ,ಅತಿ ಹೆಚ್ಚು ಗ್ರಾಮೀಣ ಸೊಗಡಿನ ಮತ್ತು ಪರಿಸರದ ಕಾಳಜಿ ಹೊಂದಿದ್ದರು ಅಲ್ಲದೆ ಸಾಹಿತ್ಯ ರಚನೆಯ ಜೊತೆಗೆ ಸಂಗೀತ ಕ್ಷೇತ್ರಕ್ಕೂ ಸಾಕಷ್ಟು ಶ್ರಮಿಸಿದ್ದಾರೆ ಎಂದು ನುಡಿದರು.

    ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಬಸವರಾಜ ಶಿಣ್ಣೂರ ಮಾತೃ ಛಾಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ತಿಪ್ಪಣ್ಣ ಖ್ಯಾತನಾಳ,ಸಂಶೋಧಕ,ಸಾಹಿತಿ ಸಾಯಿಬಾಬಾ ಅಣಬಿ,ಪರಮಣ್ಣ ಬಡಿಗೇರ್,ಮಲ್ಲಪ್ಪ ಕಾಂಬಳೆ,ಬಾಬುರಾವ್,ಶರಣು ಕಾಡಮಗೇರ ಹಾಗೂ ಶಾಲಾ ಸಿಬ್ಬಂದಿಗಳಾದ ದಾನೇಶ್ವರಿ,ಶರಣಮ್ಮ ಜೊತೆಗೆ ಇನ್ನಿತರರು ಉಪಸ್ಥಿತರಿದ್ದರು

    apvc-iconPost Views: 35
  • ಕೋರ್ಟ್ ಹಾಲ್ ಗಳಲ್ಲಿ ಬಾಬಾಸಾಹೇಬರ ಭಾವಚಿತ್ರ ಹಾಕಲು ಹೈಕೋರ್ಟ್ ಆದೇಶ: ಜಗದೀಶ ದಾಸನಕೇರಿ ಹರ್ಷ

    ಕೋರ್ಟ್ ಹಾಲ್ ಗಳಲ್ಲಿ ಬಾಬಾಸಾಹೇಬರ ಭಾವಚಿತ್ರ ಹಾಕಲು ಹೈಕೋರ್ಟ್ ಆದೇಶ: ಜಗದೀಶ ದಾಸನಕೇರಿ ಹರ್ಷ

    ಸತ್ಯಕಾಮ ವಾರ್ತೆ ಯಾದಗಿರಿ: 
    ಕರ್ನಾಟಕ ಹೈಕೋರ್ಟ್ ಬೆಂಗಳೂರು, ಹೈಕೋರ್ಟ ಪೀಠ ಧಾರವಾಡ, ಕಲ್ಬುರ್ಗಿ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯದ ಕೋರ್ಟ್ ಹಾಲ್ ಗಳಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಕಲು ಹೈಕೋರ್ಟ್ರಿಜಿಸ್ಟಾçರ್ ಜನರಲ್ ಆದೇಶ ಹೊರಡಿಸಿದ್ದಾರೆ. ಇದು ಸ್ವಾಗತಾರ್ಹ ಎಂದು ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಜಗದೀಶ ಎನ್. ದಾಸನಕೇರಿ ಹರ್ಷ ವ್ಯಕ್ತಪಡಿಸಿದ್ದಾರೆ.
    ಈ ಕುರಿತು ಹೇಳಿಕೆ ನೀಡಿರುವ ಅವರು, ನಮ್ಮ ಸಂಘಟನೆಯಿAದ ಮೊದಲ ಬೇಡಿಕೆ ಇದಾಗಿತ್ತು, ಇದೇ ಬೇಡಿಕೆಯನ್ನು ಇಟ್ಟುಕೊಂಡು ಸತತ ೨-೩ ವರ್ಷಗಳಿಂದ ಮಾಡಿದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದ್ದಾರೆ.
    ಇದಾದ ನಂತರ ಅಹಿಂದ ಸಂಘಟನೆ ಮುಖಾಂತರವೂ ಹೋರಾಟ ಮಾಡಿದ್ದು ವಿವಿಧ ದಲಿತ ಸಂಘಟನೆಗಳು ರಾಜ್ಯದ ಹಲವು ಕಡೆ ಹೋರಾಟ ನಡೆಸಿದ್ದವು ಛಲಬಿಡದೇಹೋರಾಟ ಮುಂದುವರೆಸಿದ ಫಲವಾಗಿ ಇಂದು ಕೋರ್ಟ್ ಆದೇಶವಾಗಿರುವುದು ಸಂತಸ ತಂದಿದೆ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.
    apvc-iconPost Views: 16
  • ಜೂನ್ 23 ರಂದು ಶ್ರೀ ಈರಗಣ್ಣ ತಾತ ದರ್ಗಾ ಉದ್ಘಾಟನೆ

    ಜೂನ್ 23 ರಂದು ಶ್ರೀ ಈರಗಣ್ಣ ತಾತ ದರ್ಗಾ ಉದ್ಘಾಟನೆ

    ಸತ್ಯಕಾಮ ವಾರ್ತೆ ವಡಗೇರಾ: 
    ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಜರತ್ ಇಮಾಮ ಕಾಸಿಂ ದೇವರ ಸೇವಕರಾದ ಲಿಂಗೈಕ್ಯ ಶ್ರೀ ಈರಗಣ್ಣ ತಾತನವರ ನೂತನ ದರ್ಗಾ ಉದ್ಘಾಟನೆಯು ಸೋಮವಾರ ಜೂನ್ 23 ರಂದು ಬೆಳಿಗ್ಗೆ 9:30ಕ್ಕೆ ಸಂತ ಶರಣರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ ಎಂದು ದರ್ಗಾ ಕಮಿಟಿಯವರು ತಿಳಿಸಿದ್ದಾರೆ.
    ಅಂದು ಬೆಳಗ್ಗೆ ಗಂಧ ಮೆರವಣಿಗೆಯೊಂದಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ರಾತ್ರಿ 10:30ಕ್ಕೆ ಕವಾಲಿ ಕಾರ್ಯಕ್ರಮ ಜರುಗಲಿದೆ ಈ ದರ್ಗಾ ಉದ್ಘಾಟನ  ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಬೆಂಡೆಬೆಂಬಳಿ ಗ್ರಾಮದ ದರ್ಗಾ ಕಮಿಟಿಯವರು ಕೋರಿದ್ದಾರೆ
    apvc-iconPost Views: 6
  • ಹಿಂದುಳಿದ ವಸತಿ ನಿಲಯದಲ್ಲಿ ಕಳಪೆ ಕಾಮಗಾರಿ: ಆರೋಪ

    ಹಿಂದುಳಿದ ವಸತಿ ನಿಲಯದಲ್ಲಿ ಕಳಪೆ ಕಾಮಗಾರಿ: ಆರೋಪ

    ಸತ್ಯಕಾಮ ವಾರ್ತೆ ವಡಗೇರಾ:

    ಪಟ್ಟಣದ ಹಿಂದುಳಿದ ವರ್ಗದ ವಸತಿ ನಿಲಯದ ಸ್ನಾನಗೃಹ ಹಾಗೂ ಶೌಚಾಲಯ ಕಳಪೆ ಮಟ್ಟದ ಕಾಮಗಾರಿ ಮಾಡಿದ್ದಾರೆ ಎಂದು ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಮರೇಪ್ಪ ಊಳ್ಳೆಸೂಗುರ ಆರೋಪಿಸಿದ್ದಾರೆ. 
     
    ಸರಕಾರ ಬಡ ಮಕ್ಕಳ ಅನುಕೂಲಕ್ಕಾಗಿ ಲಕ್ಷಾನುಗಟ್ಟಲೆ ಹಣ ಖರ್ಚು ಮಾಡಿ ಸ್ನಾನ ಗ್ರಹ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ ಆದರೆ  ಗುತ್ತಿಗೆದಾರರು ಅಧಿಕಾರಿಗಳ ನಿರ್ಲಕ್ಷದಿಂದ ಸಮರ್ಪಕ ಕಾಮಗಾರಿ ನಡೆದಿಲ್ಲ ಅಲ್ಲಿ ಸರಿಯಾದ ನೀರಿನ  ವ್ಯವಸ್ಥೆ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳನ್ನು ನೀಡದೆ ಮೋಸ ಮಾಡಿ ಬೋಗಸ್ ಬಿಲ್ ಎತ್ತಿಕೊಂಡಿದ್ದಾರೆ  ಇದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ತುಂಬಾ ತೊಂದರೆ ಆಗಿದೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ಸಮರ್ಪಕ ಮೂಲಭೂತ ಸೌಕರ್ಯಗಳು ಒದಗಿಸಬೇಕು ಒಂದು ವೇಳೆ ನಿರ್ಲಕ್ಷ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಮರೇಪ್ಪ ಊಳ್ಳೆಸೂಗೂರು  ಎಚ್ಚರಿಸಿದ್ದಾರೆ.
    apvc-iconPost Views: 7
  • ಗುಣಮಟ್ಟದ ರಸ್ತೆ ನಿರ್ಮಿಸಿ : ಶಾಸಕ ಶರಣಗೌಡ ಕಂದಕೂರ

    ಗುಣಮಟ್ಟದ ರಸ್ತೆ ನಿರ್ಮಿಸಿ : ಶಾಸಕ ಶರಣಗೌಡ ಕಂದಕೂರ

    ಸತ್ಯಕಾಮ ವಾರ್ತೆ ಯಾದಗಿರಿ:

    ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಗುಣಮಟ್ಟದ ರಸ್ತೆಗಳ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕ್ಷೇತ್ರ ವ್ಯಾಪ್ತಿಯ ಕೆಟ್ಟು ಹೋದ ರಸ್ತೆಗಳನ್ನು ಮರು ನಿರ್ಮಿಸಲಾಗುತ್ತಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಆದ್ಯತೆ ನೀಡಬೇಕು, ಅಧಿಕಾರಿಗಳು ಹಾಗಾಗ ಪರಿಶೀಲಿಸಬೇಕು, ೬ ತಿಂಗಳ ಗಡುವಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

    ಗುರುಮಠಕಲ್ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಮುಧೋಳ – ಯಲಗೇರಾ ಆಂಧ್ರ ಬಾರ್ಡ್ರ್ ವರೆಗೆ೪ ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮತಕ್ಷೇತ್ರದ ಎಲ್ಲ ಸಮುದಾಯವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು, ಸಿಸಿ ರಸ್ತೆ ಸೇರಿದಂತೆ ಗುಣಮಟ್ಟದ ರಸ್ತೆಗಳ ಸುಧಾರಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
    ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ಮಾತ್ರ ಹಳ್ಳಿಗಳ ಪ್ರಗತಿ ಸಾಧ್ಯವಿದ್ದು, ತಾಲೂಕಿನ ಎಲ್ಲಾ ಗ್ರಾಮಗಳಿಗೂ ಪಕ್ಕಾ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

    ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ರಸ್ತೆ ಸುಧಾರಣೆ ಕಾರ್ಯ ನಡೆಯುವಾಗ ಯಾವುದೇ ತೊಂದರೆಯಾಗದAತೆ ಸಾರ್ವಜನಿಕರೂ ಸಹ ಸಹಕರಿಸಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಪಿಡಬ್ಲುಡಿ ಎಇಇ ಪರಶುರಾಮ ಮುಷ್ಟೂಕರ್, ತಾಪಂ ಇಒ ಅಮರೇಶ ಪಾಟೀಲ, ಅಮರನಾಥರಡ್ಡಿ ವಂಕಸAಬ್ರ, ಬನ್ನಪ್ಪಗೌಡ ವಂಕಸAಬ್ರ, ಶಂಕ್ರಪ್ಪ ಕಾಳಗಿ, ಶರಣಗೌಡ, ಸಾಯಪ್ಪ, ಗೋಪಾಲ, ಶಿವರಾಜ, ಜಾನಪ್ಪ, ಶಂಕರರಡ್ಡಿ ಯಲಸತ್ತಿ, ವೀರೇಂದ್ರರಡ್ಡಿ ಯಲಸ್ತಿ÷್ತ, ರಾಘವೇಂದ್ರ ರಡ್ಡಿ ವಡವಟ್, ಆನಂದ ವಡವಟ್, ಗುರುನಾಥರಡ್ಡಿ, ಮಲ್ಲಿಕಾರ್ಜುನ ಅರುಣಿ, ನರಸಪ್ಪ ಕವಡೆ, ಪರ್ವತರಡ್ಡಿ ಕಾಳಬೆಳಗುಂದಿ, ರಾಘವೇಂದ್ರ ಜೈಗ್ರಾಮ, ಭೀಮರಾಯ ಗುಡ್ಲಗುಂಟಾ ಸೇರಿದಂತೆ ಇತರರಿದ್ದರು.

    ಮಾಧ್ವಾರ ಗ್ರಾಮದಲ್ಲಿ ಜನರ ಸಮಸ್ಯೆ ಆಲಿಸಿದ ಶಾಸಕ ಕಂದಕೂರ

    ಸತ್ಯಕಾಮ ವಾರ್ತೆ ಯಾದಗಿರಿ:
    ಯಾದಗಿರಿ : ಮಾಧ್ವಾರ ಗ್ರಾಮದ ವಾರ್ಡ್ ನಂ ೧ರಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಳೆ ಬಂದರೆ ಸಾಕು ಇಡಿ ಅಂಗನವಾಡಿಯಲ್ಲಿ ನೀರು ನಿಲ್ಲುತ್ತವೆ. ಇದರಿಂದ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಶಾಸಕ ಶರಣಗೌಡ ಕಂದಕೂರ ಅವರಲ್ಲಿ ಮನವಿ ಮಾಡಿದರು.

    ಇದೇ ವೇಳೆ ತಾಪಂ ಇಒ ಅವರಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಪೋನ್ ಮಾಡಿ ಅಂಗನವಾಡಿ ಸಮಸ್ಯೆಯನ್ನು ಪರಿಶೀಲಿಸಿ, ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು. ಅಧಿಕಾರಿಗಳು ಬಂದು ಪರಿಶೀಲಿಸಿದ ನಂತರ ಹೊಸ ಅಂಗನವಾಡಿ ಕಟ್ಟಡ ಕಟ್ಟಬೇಕಾದ್ರು ಕಟ್ತಿವಿ ಅಥವಾ ಅದನ್ನೇ ಮೇಲ್ದಜೇಗೇರಿಸಬೇಕಾದರು ಅದನ್ನು ಮಾಡ್ತಿವಿ ಒಟ್ಟಿನಲ್ಲಿ ನಿಮ್ಮೂರಿನ ಅಂಗನವಾಡಿ ಸಮಸ್ಯೆ ಬಗೆಹರಿಸ್ತೇನೆ ಎಂದು ಹೇಳಿದರು.

    ಗ್ರಾಮೀಣ ಭಾಗದ ಪ್ರತಿಯೊಂದು ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳಬೇಕಿದೆ, ಪಿಡಿಒಗಳು ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು, ಪ್ರತಿಯೊಂದು ಹಳ್ಳಿಯಲ್ಲಿನ ಆರ್‌ಒ ಪ್ಲಾಂಟ್ ಪರಿಶೀಲಿಸಬೇಕು, ಆರ್‌ಡಬ್ಲುಎಸ್‌ಗೆ ಹೇಳಿದೆ, ತಾಪಂ ಗೆ ಹೇಳಿದೆ ಅಂತ ಸಬೂಬು ಹೇಳಬೇಡಿ ಪೈಲ್ ಕಳಿಸಿ ಕೂಡಬೇಡಿ ಎಲ್ಲಾ ವಾಟರ್ ಪ್ಲಾಂಟ್‌ಗಳನ್ನು ಪರಿಶೀಲಿಸಿ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು, ತಾಪಂ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ತಾಕಿತು ಮಾಡಿದರು.

    ಕಳೆದ ೨ ವರ್ಷಗಳಿಂದ ಹಲವು ಗ್ರಾಮ ಮತ್ತು ತಾಂಡಾಗಳಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ ನಿರ್ಮಾಣ ಮಾಡಿದ್ದೇವೆ, ಆದರೂ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸುತ್ತೇವೆ, ಮುಂದಿನ ದಿನಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಹಲವು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ನೀಡುತ್ತೇನೆ ಎಂದು ಹೇಳಿದರು.

    ವಂಕ್ರಸAಬ್ರ ಗ್ರಾಮದ ಜನರ ಮನವಿ ಆಲಿಸಿದ ಶಾಸಕರು, ಕೂಡಲೇ ವಿದ್ಯುತ್ ಸಮಸ್ಯೆ ನಿವಾರಿಸಬೇಕು ಎಂದು ಜೆಸ್ಕಾಂ ಅಧಿಕಾರಿ ರಾಠೋಡ ಅವರಿಗೆ ಸೂಚಿಸಿದರು.
    ——————

    (more…)

    apvc-iconPost Views: 63
  • ರಕ್ತದಾನ ಮಾಡಲು ಯುವಕರು ಮುಂದಾಗಬೇಕು

    ರಕ್ತದಾನ ಮಾಡಲು ಯುವಕರು ಮುಂದಾಗಬೇಕು

    ಯಾದಗಿರಿ : ಜೂನ್ 17,  (ಕ.ವಾ) : ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಪ್ರೇರೆಪಿಸಿದರು, ಇದರಲ್ಲಿ ವೈದ್ಯ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿರುತ್ತದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ಹೇಳಿದರು.
         ಯಾದಗಿರಿ ನಗರದಲ್ಲಿ ಜೂ.17ರ ಮಂಗಳವಾರ ರಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
         ಯಾದಗಿರಿ ಜಿಲ್ಲೆಯಲ್ಲಿ ರಕ್ತ ಕೇಂದ್ರ ಆರಂಭವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಪ್ರೇರೆಪಿಸಿದರು, 2025ರ ಜೂನ್ 14 ರಂದು ವಿಶ್ವದ್ಯಾಂತ ರಕ್ತದಾನಿಗಳ ದಿವಸ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ 2025ರ ಜೂನ್ 17 ರಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆಯ ವೈದ್ಯ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿರುತ್ತದೆ ಎಂದು ಹೇಳಿದರು.
    ಯಾದಗಿರಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್ ಅವರು ಮಾತನಾಡಿ, 17 ರಿಂದ 65 ವರ್ಷ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ 2 ಬಾರಿ ರಕ್ತದಾನ ಮಾಡಬಹುದು, ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿದರೆ ಅವರ ದೇಹದಲ್ಲಿ ಹೊಸ ರಕ್ತ ಉಂಟಾಗಲು ಪ್ರಚೋದನೆಯಾಗುತ್ತದೆ ಯಾವುದೇ ತರಹದ ಆಪತ್ತು ಬರುವುದಿಲ್ಲ ಬದಲಾಗಿ ಹೊಸ ಚೈತನ್ಯ ಮೂಡುತ್ತದೆ. ರಕ್ತದಾನ ಮಾಡುವವರಿಗೆ ಬಿ.ಪಿ ಹಿಮೊಗ್ಲೋಬಿನ್, ಹೆಚ್.ಐ.ವಿ ಹೆಚ್.ಬಿ.ಐ.ಜಿ, ಸಿಫಲೀಸ್ ಇನ್ನೀತರ ಪರೀಕ್ಷೆ ಮಾಡಿದ ನಂತರವೇ 350 ರಿಂದ 450 ಎಂ.ಎಲ್ ರಕ್ತ ಪಡೆಯಲಾಗುತ್ತದೆ, ಅಪಘಾತ ಹೊಂದಿ ರಕ್ತಸ್ರಾವ ಆದವರಿಗೆ ಅನಿಮೀಯಾದಿಂದ ಬಳಲುತ್ತಿರುವ ಬಾಣಂತಿಯರಿಗೆ ದೊಟ್ಟ ಪ್ರಮಾಣದ ಶಾಸ್ತ್ರ ಚಿಕಿತ್ಸೆಗಳಿಗಾಗಿ, ಥಲಸಿಮೀಯಾ ಮತ್ತು ಹೀಮಿಫೆಮಿಯಾ ರೋಗಿಗಳಿಗೆ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದರು.
         ಯಿಮ್ಸ್ ವೈದ್ಯಕೀಯ ನಿರ್ದೇಶಕರು ಡಾ.ಸಂದೀಪ.ಹೆಚ್ ಅವರು ಮಾತನಾಡಿ ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿ ರಕ್ತದಾನ ಮಾಡಲು ಮುಂದೆ ಬಂದು ಸಮಾಜದಲ್ಲಿ ಒಂದು ಪ್ರೇರಣೆ ಆಗಬೇಕು ಎಂದು ಹೇಳಿದರು. ಯಾದಗಿರಿಯಲ್ಲಿ ರಕ್ತಕೇಂದ್ರ ಆರಂಭವಾಗಿದ್ದು ತುಂಬಾ ಜನರ ರಕ್ತದಾನದ ಅವಶ್ಯಕತೆ ಇದೆ ಎಂದು ಹೇಳಿದರು.
    ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಪಾಟೀಲ್, ಅವರು ಮಾತನಾಡಿದರು, ಕರ್ನಾಟಕದಲ್ಲಿ ಶೇ.1 ರಷ್ಟು ಜನರಿಗೆ ಪ್ರತಿ ವರ್ಷ ರಕ್ತದಾನದ ಅವಶ್ಯಕತೆ ಇದೆ ಆದರೆ 0.5 ಶೇಕಡಾ ಕೂಡ ರಕ್ತದಾನಿಗಳು ತುರ್ತು ಸಂದರ್ಭದಲ್ಲಿ ಲಭ್ಯವಿರುವುದಿಲ್ಲ ಕಾರಣ ರಕ್ತದಾನ ಒಂದು ಮಹಾ ಪುಣ್ಯದ ಕೆಲಸ ಜೀವ ಉಳಿಸುವ ಕಾರ್ಯ. ರಕ್ತವನ್ನು ಕೃತ್ರಿಮವಾಗಿ ತಯಾರಿಸಲು ಸಾದ್ಯವಿಲ್ಲ ಅದು ಕೇವಲ ಮಾನವನ ದೇಹದಲ್ಲಿ ಮಾತ್ರ ಉತ್ಪತ್ತಿಯಾಗುತ್ತದೆ. ಆದ ಕಾರಣ ಇನ್ನೀತರರ ಜೀವದ ಬಗ್ಗೆ ಕಾಳಜಿ ಇರುವವರು ರಕ್ತದಾನ ಮಾಡಬೇಕೆಂದು ಹೇಳಿದರು.
    ಯಾದಗಿರಿ ಯಿಮ್ಸ್ ರಕ್ತ ಕೇಂದ್ರ ವೈದ್ಯಕೀಯ ಅಧಿಕಾರಿ ಡಾ.ಸಿದ್ದಲಿಂಗರೆಡ್ಡಿ ಅವರು ಮಾತನಾಡಿ, ರಕ್ತ ಕೇಂದ್ರ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.
         ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಾದ ಯಿಮ್ಸ್ ನಿರ್ದೇಶಕರು ಡಾ.ಸಂದೀಪ.ಹೆಚ್ ಅವರು ಶ್ರೀ ನಿಂಗಪ್ಪ ಜಡಿ, ಅಭಿಲಾಷ ಮತ್ತು ಸುಪ್ರೀತ ಇವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವತಿಯಿಂದ ರಕ್ತದಾನ ಶಿಬಿರದಲ್ಲಿ 34 ಜನ ರಕ್ತದಾನ ಮಾಡಲಾಯಿತು.
         ಈ ಸಂದರ್ಭದಲ್ಲಿ ಯಾದಗಿರಿ ಯಿಮ್ಸ್ ಪ್ರಾಂಶುಪಾಲರು ಡಾ.ನವಾಜ್ ಉಮರ್, ಯಾದಗಿರಿ ಯಿಮ್ಸ್ ಹಣಕಾಸು ಸಲಹೆಗಾರರು ಶ್ರೀ ಕಾಶಿನಾಥ ಜಿಲ್ಲಾ  ಶಾಸ್ತ್ರ ಚಿಕಿತ್ಸಕರು ಡಾ.ರಿಜ್ವಾನಾ ಆಫ್ರೀನ್, ಡಾ.ಮಾನಸಾ ದಾಸ, ಡಾ.ಶಿವಕುಮಾರ, ಡಾ.ಮಲ್ಲಪ್ಪ, ಡಾ.ಪದ್ಮಾನಂದ ಗಾಯಕವಾಡ್, ಡಾ.ಹಣಮಂತರೆಡ್ಡಿ, ಯಿಮ್ಸ್ ಭೋದಕ ಸಿಬ್ಬಂದಿ ಜಿಲ್ಲಾ ಡ್ಕಾಪ್ಕೋಯೋ ಮತ್ತು ಕ್ಷಯರೋಗ ಘಟಕದ ಸಿಬ್ಬಂದಿಗಳು, ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    apvc-iconPost Views: 10
  • ಚಾಡಿ ಹೇಳುವ ಸಂಸ್ಕೃತಿ ನಮ್ಮದಲ್ಲ, ನಿಮ್ಮದು

    ಚಾಡಿ ಹೇಳುವ ಸಂಸ್ಕೃತಿ ನಮ್ಮದಲ್ಲ, ನಿಮ್ಮದು

    ಸತ್ಯಕಾಮ ವಾರ್ತೆ ಯಾದಗಿರಿ:
    ಈ ಹಿಂದೆ ಜನತಾ ಪರಿವಾರದಲ್ಲಿದ್ದಾಗ ನಮ್ಮ ನಾಯಕರಾದ ಸದಾಶಿವರಡ್ಡಿ ಕಂದಕೂರ ರವರ ಬಗ್ಗೆ ಚಾಡಿ ಹೇಳಿ ಅವರಿಗೆ ಅಧಿಕಾರಿ ತಪ್ಪಿಸಿದವರು ಯಾರು?, ಕಾಂಗ್ರೆಸ್‌ನಲ್ಲಿದ್ದಾಗ ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿಯವರ ಬಗ್ಗೆ ಹಿರಿಯ ನಾಯಕರಿಗೆ ಕಿವಿ ಊದಿ ಟಿಕೆಟ್ ತಪ್ಪಿಸಿದ್ದು ಯಾರೆಂಬದು ಯಾದಗಿರಿ ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ ರವರು ಹೇಳಿದ್ದಾರೆ.


    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಯಾದಗಿರಿ ಶಾಸಕ ಚನ್ನಾರಡ್ಡಿ ತುನ್ನೂರ ರವರು ಕುಮಾರಸ್ವಾಮಿಯವರ ಹೇಳಿಕೆಗೆ ಸಂಬAಧಿಸಿದAತೆ ನೀಡಿದ ಪ್ರತಿಕ್ರಿಯೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇನ್ನೊಬ್ಬರ ಬಗ್ಗೆ ಚಾಡಿ ಹೇಳುವ ಸಂಸ್ಕೃತಿ ನಮ್ಮ ನಾಯಕರದ್ದಲ್ಲ ಎನ್ನುವುದು ಜನರಿಗೆ ಗೊತ್ತಿದೆ, ತಾವುಗಳು ಇನ್ನೊಬ್ಬರ ಬಗ್ಗೆ ಚಾಡಿ ಹೇಳಿ ಪಕ್ಷಗಳಲ್ಲಿ ಗುರುತಿಸಿಕೊಂಡು ಅಧಿಕಾರ ಪಡೆಯುವ ಹಂತಕ್ಕೆ ಬಂದಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ.

    ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರು ಯಾರೋ ಚಾಡಿ ಹೇಳಿದ್ದನ್ನು ಕೇಳಿ ಪ್ರತಿಕ್ರೀಯಿಸಿದ್ದಲ್ಲ, ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ್ದನ್ನು ಗಮನಿಸಿ, ಅಷ್ಟು ವರ್ಷಗಳಿಂದ ಇರದ ಅಭಿವೃದ್ಧಿ ಕಾಳಜಿ ಈಗ ಬಂದಿತೆ ಎಂದು ಹೇಳಿಕೆ ನೀಡಿದ್ದಾರೆ, ಅಷ್ಟೇ ಅಲ್ಲದೇ ಕುಮಾರಸ್ವಾಮಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಚಂಡ್ರಿಕಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾಗ ಇಲ್ಲಿನ ಅಭಿವೃದ್ಧಿಯನ್ನು ಕಣ್ಣಾರೆ ಕಂಡಿದ್ದಾರೆ ಹಾಗಾಗಿ ಖರ್ಗೆಯವರ ಬೆಂಗಳೂರು ಮೈಸೂರು ಹೇಳಿಕೆಗೆ ಪ್ರತಿಕ್ರೀಯಿಸಿದ್ದಾರೆ ಎಂದಿದ್ದಾರೆ.

    ನಿಮ್ಮ ನಾಯಕರು ಕಳೆದ ೫೦ ವರ್ಷಗಳಲ್ಲಿ ಗುರುಮಠಕಲ್ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಗೊತ್ತಿದೆ, ಅವರು ಮಾಡಿದ ಅಭಿವೃದ್ಧಿಯಿಂದಲೇ ಇನ್ನೂ ನಮ್ಮ ಭಾಗದ ಜನತೆ ಗುಳೆ ಹೋಗುವುದು ತಪ್ಪುತ್ತಿಲ್ಲ, ನಮ್ಮ ಜನರು ಬದುಕಲು ಗುಳೆ ಹೋಗುವಂತಹ ವಾತಾವರಣ ಮಾಡಿದ್ದು ನಿಮ್ಮ ನಾಯಕರ ಅಭಿವೃದ್ಧಿಯೇ ಎಂದು ವ್ಯಂಗವಾಡಿದ್ದಾರೆ.
    ಚಾಡಿ ಹೇಳುವ ಸಂಸ್ಕೃತಿ ಮತ್ತು ಇನ್ನೊಬ್ಬರನ್ನು ಓಲೈಕೆ ಮಾಡುವ ಸಂಸ್ಕೃತಿ ಬಿಟ್ಟು ಜನರ ಅಭಿವೃದ್ಧಿಗೆ ಶ್ರಮಿಸಿ, ತಾವು ಬಾಯಿ ಚಪಲಕ್ಕೆ ಯಾರದ್ದೋ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದನ್ನು ಬಿಡಿ, ೫೦ ವರ್ಷಗಳಲ್ಲಿ ಅಭಿವೃದ್ಧಿ ಎಷ್ಟಾಗಿದೆ ಎನ್ನುವುದು ಜನರಿಗೆ ಗೊತ್ತಿದೆ, ತಾವು ಭ್ರಷ್ಟಾಚಾರದ ಜನಕರಾಗಿದ್ದೀರಿ ನಿಮ್ಮ ಅವಧಿಯಲ್ಲಿ ಒಂದೊAದು ಇಲಾಖೆಯಲ್ಲಿ ನಿಮ್ಮ ಭ್ರಷ್ಟಾಚಾರದ ಮೇನು ಕಾರ್ಡ್ ಅತ್ಯಂತ ಜನಪ್ರೀಯವಾಗಿದ್ದು, ಅದನ್ನು ಮುಚ್ಚಿಕೊಳ್ಳಲು ತಾವು ಆಗಾಗ ಇನ್ನೊಬ್ಬರ ಬಗ್ಗೆ ಹೇಳಿಕೆ ಕೊಟ್ಟು ಜನರಲ್ಲಿ ಪರಿಚಿತರಾಗಲು ಪ್ರಯತ್ನಿಸುವುದನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ.

    ಬೇರೆಯವರ ಅಕ್ಕಪಕ್ಕ ಕುಳಿತು ಯಾರನ್ನೋ ಖುಷಿ ಪಡಿಸಲು ಚಾಡಿ ಹೇಳುವುದು ನಿಮ್ಮ ಸಂಸ್ಕೃತಿ ನಮ್ಮ ನಾಯಕರ ಸಂಸ್ಕೃತಿಯಲ್ಲ ಅದನ್ನು ಬಿಟ್ಟು ಯಾದಗಿರಿ ಜನರ ಒಳಿತಿಗಾಗಿ ಕೆಲಸ ಮಾಡಿ ಎಂದು ತಿವಿದಿದ್ದಾರೆ.
    apvc-iconPost Views: 223
  • ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ

    ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ

    ಸತ್ಯಕಾಮ ವಾರ್ತೆ ಯಾದಗಿರಿ:
    ನಾಳೆ ಜನಾಕ್ರೋಶ ಯಾತ್ರೆ ಯಾದಗಿರಿ ನಗರಕ್ಕೆ ಆಗಮಿಸಲಿದ್ದು ಯಾದಗಿರಿ ಮತಕ್ಷೇತ್ರದಿಂದ ಅತೀ ಹೆಚ್ಚು ಕಾರ್ಯಕರ್ತರು ಈ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ದ್ವನಿಮೊಳಗಿಸಬೇಕೆಂದು ಬಿಜೆಪಿ ಮುಖಂಡ ಚೆನ್ನಾರೆಡ್ದಿಗೌಡ ಬಿಳ್ಹಾರ್‌ ಮನವಿ ಮಾಡಿದ್ದಾರೆ.
    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪೇಟ್ರೋಲ್, ಡಿಸೇಲ್ ಹಿಡಿದು ಹಾಲು ಮೊಸರು, ಟೋಲ್ ಶುಲ್ಕ, ವಿದ್ಯುತ್ ದರ, ಕಾರು ವಾಣಿಜ್ಯ, ಒಳಗೊಂಡು ಎಲ್ಲದರ ಬೆಲೆಯನ್ನು ಏರಿಸುವಂತಹ ಕಾರ್ಯ ಕಾಂಗ್ರೇಸ್ ಸರ್ಕಾರ ಮಾಡಿದೆ ದಿನನಿತ್ಯ ಬಡವರಿಂದ ಹಿಡಿದು ಎಲ್ಲರಿಗೂ ಅವಶ್ಯವಾಗಿರುವ ಹಾಲಿನ ದರ ಪ್ರತಿ ಲೀಟರ್‌ಗೆ ೪ ರೂ. ಹೆಚ್ಚಳ ಮಾಡಿದ್ದಾರೆ ಇದರಿಂದ ಪ್ರತಿ ತಿಂಗಳಿಗೆ ೧೨೦ ರೂ.ಗೂ ಅಧಿಕ ಹೊರೆ ಬಡವರಿಗೆ ಬಿಳ್ಳಲಿದೆ ಗ್ಯಾರೆಂಟಿ ಯೋಜನೆಗಳಿಂದ ಯಾರಿಗೂ ಉಪಯೋಗವಾಗುತ್ತಿಲ್ಲಾ ಹೆಂಡತಿಗೆ ಕೊಟ್ಟು ಗಂಡನಿAದ ಕಸಿದುಕೊಳ್ಳುವಂತಹ ಕೆಲಸ ಕಾಂಗ್ರೇಸ್ ಸರ್ಕಾರದಿಂದ ನಡೆದಿದೆ ಒಂದೆಡೆ ಮಹಿಳೆಯರಿಗೆ ಬಸ್ ಪ್ರೀ ಎಂದು ಇನ್ನೊಂದೆಡೆ ಬಸ್ ದರ ಏರಿಕೆ ಮಾಡಲಾಗಿದೆ ವಿದ್ಯುತ್ ಪ್ರೀ ಎಂದು ಕೊಟ್ಟು ವಿದ್ಯುತ್ ದರ ಏರಿಸಲಾಗಿದೆ ೧೦೦ ಬಾಂಡ್ ಇಂದು ೫೦೦ ರೂ. ಏರಿಸಲಾಗಿದೆ ಬಡವರು ಮಧ್ಯಮವರ್ಗದವರು ಜೀವನ ನಡೆಸುವದೇ ದುಸ್ಥರವಾಗಿದೆ ಎಂದಿದ್ದಾರೆ.
    ರಾಜ್ಯ ಸರ್ಕಾರವು ತನ್ನ ಗ್ಯಾರೆಂಟಿ ಯೋಜನೆಗಳ ಉಳಿಸಿಕೊಳ್ಳುವ ನೆಪದಲ್ಲಿ ದಿನಬಳಕೆ ವಸ್ತುಗಳಿಂದ ಹಿಡಿದು ಎಲ್ಲದರ ಮೇಲೆ ತೇರಿಗೆ ಹೆಚ್ಚಿಸಿ ಬಡವರ ಗಾಯದ ಮೇಲೆ ಬರೆ ಎಳೆಯುವಂತಹ ಕಾರ್ಯ ಮಾಡುತ್ತಿದೆ, ಅದರಲ್ಲೂ ರಾಜ್ಯದಲ್ಲಿ ಅಭಿವೃದ್ದಿ ಎಂಬುದು ನಿಂತ ನೀರಾಗಿದೆ ಅಭಿವೃದ್ದಿ ಎಂಬುದು ಶೂನ್ಯವಾಗಿ ಬಿಟ್ಟಿದೆ ೨ ವರ್ಷಗಳಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲಾ ರಾಜ್ಯ ಸರ್ಕಾರವು ಇಂದು ೬೦% ಸರ್ಕಾರವೆಂಬುದು ಸಾಬೀತು ಪಡಿಸಿದೆ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮೊಳಗಿರುವ ರಾಜ್ಯ ಸರ್ಕಾರವು ಎಂದು ತೊಲಗಿ ಹೋಗುತ್ತದೆ ಎಂದು ಜನರು ಹಿಡಿ ಶಾಪ ಹಾಕಲಿಕ್ಕೆ ಹತ್ತಿದ್ದಾರೆ ಇಂತಹ ದುರಾಡಳಿತ ಸರ್ಕಾರದ ವಿರೂದ್ದ ಪ್ರತಿಯೊಬ್ಬರೂ ಪ್ರತಿಭಟಿಸುವದು ಅಗತ್ಯವಾಗಿದೆ ಎಂದರು.
    ಹೀಗಾಗಿ ಇದೇ ದಿ.23 ರಂದು ನಗರಕ್ಕೆ ಜನಾಕ್ರೋಶ ಯಾತ್ರೆ ಆಗಮಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
    apvc-iconPost Views: 140