Blog

  • ನಾವೆಲ್ಲರೂ ಜನರೊಂದಿಗೆ ಬೆರೆತು ಕೆಲಸ ಮಾಡೋಣ: ನಿಖಿಲ್ ಕುಮಾರಸ್ವಾಮಿ

    ನಾವೆಲ್ಲರೂ ಜನರೊಂದಿಗೆ ಬೆರೆತು ಕೆಲಸ ಮಾಡೋಣ: ನಿಖಿಲ್ ಕುಮಾರಸ್ವಾಮಿ

    ಸತ್ಯಕಾಮ ವಾರ್ತೆ ಬೀದರ್:

    ನಾವು ಸೋಲ್ತಿವೋ, ಗೆಲ್ತಿವೋ ಏನಾದರೂ ಕೂಡ ನಾವು ಜನಗಳ ಜೊತೆಗೆ ನಿಲ್ಲಬೇಕು. ನಿರಂತರವಾಗಿ ಜನರೊಂದಿಗೆ ಬೆರತು ಕೆಲಸ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು ಹೇಳಿದರು.

    ಬೀದರ್ ನಗರದ ಲಾವಣ್ಯ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ನಡೆದ ‘ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಪಕ್ಷದ ಮುಖಂಡರು, ಕಾರ್ಯಕರ್ತರು ಜನರೊಂದಿಗೆ ಬೆರೆತು,ಜನರೊಂದಿಗೆ ಇದ್ದು ಕೆಲಸ ಮಾಡಬೇಕು ಎಂದರು.

    ಮುAದಿನ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಕೂಡ ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮ ಅಗತ್ಯವಾಗಿರುತ್ತದೆ. ಜನರೊಂದಿಗೆ ಜನತಾದಳ ಎಂಬ ಗುರಿಯೊಂದಿಗೆ ಸಾಗುತ್ತಿರುವ ನಾವು ನಿರಂತರವಾಗಿ ಜನರೊಂದಿಗೆ ಇರುವುದು ಅಗತ್ಯವಾಗಿರುತ್ತದೆ. ಸದಸ್ಯತ್ವ ನೋಂದಣಿ ಅಭಿಯಾನವನ್ನು ನಾವು ತುಮಕೂರು ಜಿಲ್ಲೆಯಿಂದ ಆರಂಭಿಸಿದ್ದೇವೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಈಗ
    ಐದನೇ ಜಿಲ್ಲೆಯಾಗಿ ಬೀದರ್ ನಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮಾಡ್ತಿದ್ದೇವೆ. ಇನ್ನೂ ಎರಡು ದಿನಗಳ ಕಾಲ ಕಲ್ಯಾಣ ಕರ್ನಾಟಕ ಭಾಗದಲ್ಲೇ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿರುತ್ತೇವೆ.  ನಾವು ಜನತಾದಳ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಬೇಕಾಗಿದೆ. ನಿಮ್ಮ ಚುನಾವಣೆಗಳಲ್ಲಿ ನೀವು ಗೆಲುವು ಸಾಧಿಸುವುದು  ಅಗತ್ಯವಾಗಿರುತ್ತದೆ. ಆಗಾಗಿ ತಾ.ಪಂ, ಜಿ.ಪಂ ಚುನಾವಣೆಗಳ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು. ಕಲ್ಯಾಣ
    ಕರ್ನಾಟಕ ಭಾಗದಲ್ಲಿ ನಾವು ಹೆಚ್ಚೆಚ್ಚು ಸ್ಥಾನ  ಪಡೆದುಕೊಳ್ಳಬೇಕು ಎಂದರೇ ನಾವೆಲ್ಲರೂ ಶ್ರಮವಹಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿರವರು ಮನವಿ ಮಾಡಿದರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ಪಕ್ಷ ಸಂಘಟನೆಯ ಕೆಲಸವನ್ನು ನಿಖಿಲ್ ಕುಮಾರಸ್ವಾಮಿರವರು ಮಾಡ್ತಿದ್ದಾರೆ. ನಮ್ಮ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಅವರು  ಮಾಡ್ತಿದ್ದಾರೆ. ನಾವು ಅವರೊಂದಿಗೆ ಕೈಜೋಡಿಸೋಣ ಎಂದರು.

    ನಾವು ರಾಜಕೀಯದಲ್ಲಿ ಜನರ ಹತ್ತಿರ ಇದ್ದು ಸೇವೆ ಮಾಡಿದಾಗ ಜನರೇ ನಮಗೆ ಅಧಿಕಾರ ಕೊಡ್ತಾರೆ. ನಾವು ಜನರೊಂದಿಗೆ ಇರೋಣ. ಗ್ಯಾರಂಟಿ ಮುಖ ತೋರಿಸಿ ಕಾಂಗ್ರೆಸ್ ಸರ್ಕಾರ ಏನ್ ಮಾಡ್ತಿದೆ ಎಂಬುದನ್ನು ಜನ ನೋಡ್ತಿದ್ದಾರೆ. ಅವರ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಸಾಗ್ತಿವೆ ಎಂಬುದನ್ನು ಕೂಡ ರಾಜ್ಯದ ಜನರು ನೋಡ್ತಿದ್ದಾರೆ. ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರ ದೋಖಾ ಮಾಡ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಿದ್ದಾರೆ. ಸರ್ಕಾರ ಬಂದು ಎರಡು ವರ್ಷವಾದ್ರು ಜಿ.ಪಂ, ತಾ.ಪಂ ಚುನಾವಣೆ ಮಾಡುವ ಧೈರ್ಯ ಅವರಿಗೆ ಇಲ್ಲದಾಗಿದೆ ಎಂದು ಬಂಡೆಪ್ಪ
    ಖಾಶೆAಪುರ್ ರವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

    ಮಾಜಿ ಶಾಸಕರಾದ ಸುರೇಶ್ ಗೌಡ, ಮಲ್ಲಿಕಾರ್ಜುನ ಖೂಬಾರವರು ಸೇರಿದಂತೆ ಅನೇಕರು ಮಾತನಾಡಿ, ಜೆಡಿಎಸ್ ಸದಸ್ಯತ್ವ ನೋಂದಣಿ ಬಗ್ಗೆ ಮಾಹಿತಿ
    ನೀಡಿದರು.

    ಈ ಸಂದರ್ಭದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕರಾದ ಸುರೇಶ್ ಗೌಡ, ಮಲ್ಲಿಕಾರ್ಜುನ ಖೂಬಾ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್, ಸೋಲ್ಪೂರ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಉಮಕಾಂತ್ ನಾಗಮಾರಪಳ್ಳಿ, ಬಸವರಾಜ ಪಾಟೀಲ್ ಹಾರೂರಗೇರಿ, ಶಾಂತಲಿAಗ ಸಾವಳಗಿ, ರಾಜಶೇಖರ ಜವಳೆ, ಅಶೋಕ್ ಕೊಡ್ಗೆ, ರಾಜು ಕಡ್ಯಾಳ, ಸುದರ್ಶನ್ ಸುಂದರರಾಜ್, ಸಿದ್ರಾಮಪ್ಪ ವಂಕ್ಕೆ, ಐಲಿಂಜಾನ್ ಮಠಪತಿ, ಬಸವರಾಜ ಪಾಟೀಲ್ ಹಾರೂರಗೇರಿ, ಮಲ್ಲಿಕಾರ್ಜುನ ನೆಳ್ಗೆ, ಅಭಿ ಕಾಳೆ, ಜಾಫೇಡ್ ಕಡ್ಯಾಳ, ಪ್ರಶಾಂತ್
    ವಿಶ್ವಕರ್ಮರವರು ಸೇರಿದಂತೆ ಅನೇಕರಿದ್ದರು.

    apvc-iconPost Views: 12
  • ಎಸ್ಪಿ ಪೃಥ್ವಿಕ್ ಶಂಕರ್ ವರ್ಗಾವಣೆ ಮಾಡದಂತೆ ಮಾಜಿ ಸಚಿವ ರಾಜುಗೌಡ ಮನವಿ

    ಎಸ್ಪಿ ಪೃಥ್ವಿಕ್ ಶಂಕರ್ ವರ್ಗಾವಣೆ ಮಾಡದಂತೆ ಮಾಜಿ ಸಚಿವ ರಾಜುಗೌಡ ಮನವಿ

    ಸತ್ಯಕಾಮ ವಾರ್ತೆ ಸುರಪುರ:

    ಯಾದಗಿರಿ ಜಿಲ್ಲಾ ಪೊಲೀಸ್ ಅಧಿಕ್ಷಕ ಪೃಥ್ವಿಕ್ ಶಂಕರ್ ಅವರನ್ನು ವರ್ಗಾವಣೆ ಮಾಡದಂತೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.

    ಈ ಕುರಿತು ಮನವಿ ಮಾಡಿ,ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ,ಮಟಕಾ,ಜೂಜು ದಂತಹ ಅನೇಕ ಅಕ್ರಮ ಚಟುವಟಿಕೆಗಳಿಗೆ ಎಸ್ಪಿ ಪೃಥ್ವಿಕ್ ಶಂಕರ್ ಅವರು ಬಂದಮೇಲೆ ಕಡಿವಾಣ ಹಾಕಿದ್ದಾರೆ.ಅಲ್ಲದೆ ಜಿಲ್ಲೆಗೆ ಇವರು ಆಗಮಿಸಿ 7 ತಿಂಗಳಾಗಿದೆ.ಆಗಲೇ ವರ್ಗಾವಣೆಗೆ ಮುಂದಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.ಆದ್ದರಿಂದ ಮುಖ್ಯಮಂತ್ರಿಗಳಾದ ತಮ್ಮ ಬಗ್ಗೆ ಅಪಾರವಾದ ಗೌರವವಿದೆ.ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಡೆಸುವವರ ಒತ್ತಾಯ ದಿಂದ ತಾವು ಒಬ್ಬ ನಿಷ್ಠಾವಂತ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕ್ಷಕ ಪೃಥ್ವಿಕ್ ಶಂಕರ್ ಅವರನ್ನು ವರ್ಗಾವಣೆ ಮಾಡಿದರೆ ಜಿಲ್ಲೆಯ ಅಭಿವೃಧ್ಧಿಗೆ ವಂಚನೆ ಮಾಡಿದಂತಾಗಲಿದೆ.ಅಲ್ಲದೆ ನಿಮ್ಮ ಸರಕಾರ ಜನರ ಕೆಂಗಣ್ಣಿಗೂ ಗುರಿಯಾಗಲಿದೆ.ಆದ್ದರಿಂದ ಯಾವುದೇ ಕಾರಣಕ್ಕೂ ಎಸ್ಪಿಯನ್ನು ವರ್ಗಾವಣೆ ಮಾಡದಂತೆ ಮನವಿ ಮಾಡುವುದಾಗಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

    apvc-iconPost Views: 7
  • ಶಾರ್ಟ್ ಫಿಲ್ಮ್ ನೆಪದಲ್ಲಿ ಯುವತಿಯ ಶೋಷಣೆ..?: ಪುನೀತ್ ವಿರುದ್ಧ ಗಂಭೀರ ಆರೋಪ

    ಶಾರ್ಟ್ ಫಿಲ್ಮ್ ನೆಪದಲ್ಲಿ ಯುವತಿಯ ಶೋಷಣೆ..?: ಪುನೀತ್ ವಿರುದ್ಧ ಗಂಭೀರ ಆರೋಪ

     

    ಯಾದಗಿರಿ, ಜುಲೈ 3 (ಸತ್ಯಕಾಮ ವಾರ್ತೆ):

    ರಾಕ್ ಸ್ಟಾರ್ ಹಾಗೂ ನಿಮ್ಮ ಲೀಗಲ್ ಅಡ್ವೈಸರ್ ಎಂದು ಇನ್ಸ್ಟಾಗ್ರಾಂನಲ್ಲಿ ಪ್ರಸಿದ್ಧಿಯಾಗಿರುವ ಪುನೀತ್ ರಾಜ್ ವಿರುದ್ಧ ಯುವತಿಯೊಬ್ಬರು ಭಾರೀ ಆರೋಪ ಹೇರಿದ್ದು, ಯೂಟ್ಯೂಬ್ ಶಾರ್ಟ್ ಫಿಲ್ಮ್‌ ನೆಪದಲ್ಲಿ ಬಾದಾಮಿಗೆ ಕರೆದುಕೊಂಡು ಹೋಗಿ, ಮದುವೆ ಹೆಸರಿನಲ್ಲಿ ಲೈಂಗಿಕ ಶೋಷಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ದೂರುದಾರೆಯು ನೀಡಿರುವ ದೂರಿನಂತೆ, ಇನ್‌ಸ್ಟಾಗ್ರಾಂ ಮೂಲಕ ಪುನೀತ್ ರಾಜ್ ಪರಿಚಿತನಾಗಿದ್ದ. ಇಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದರಿಂದ ಸ್ನೇಹ ಬೆಳೆದಿತ್ತು, ಪುನೀತ್ ರಾಜ್ ತನ್ನನ್ನು ನಿರ್ದೇಶಕ ಎಂದು ಪರಿಚಯಿಸಿಕೊಂಡು ಯುವತಿಗೆ ತನ್ನ ಶಾರ್ಟ್ ಫಿಲ್ಮ್‌ನಲ್ಲಿ ನಾಯಕಿಯಾಗಿ ನಟಿಸುವಂತೆ ಹೇಳಿದ್ದ ಇದಕ್ಕೆ ಮನೆಯವರು ಒಪ್ಪಿಕೊಳ್ಳುವುದಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ. ಆದರೂ ಪುನೀತ್, “ಇದು ಕೇವಲ ಒಂದು ದಿನದ ಚಿತ್ರೀಕರಣ,” “ನನ್ನ ಕುಟುಂಬಸ್ಥರು ಇರುತ್ತಾರೆ,” ಎಂದು ಭರವಸೆ ನೀಡಿ ಫೆಬ್ರವರಿ 16 ರಂದು ಪುನೀತ್ ರಾಜ್ ಹಾಗೂ ಆತನ ಕುಟುಂಬದವರು ಮತ್ತು ಯುವತಿ ಬಾದಾಮಿ ಮಹಾಕೂಟಕ್ಕೆ ತೆರಳಿದ್ದು, ಬಾಡಿಗೆ ರೂಮ್‌ನಲ್ಲಿ ಉಳಿದಿದ್ದರು. ಅಲ್ಲಿಯೇ ಫೆಬ್ರವರಿ 17 ಹಾಗೂ 18 ರಂದು ಮದುವೆ ನಾಟಕವಾಡಿ, ಹಿಂದೂ ಸಂಪ್ರದಾಯದಂತೆ ಪುನೀತ್ ಯುವತಿಗೆ ಮದುವೆ ಮಾಡಿಕೊಂಡಂತೆ ಕಾರ್ಯಕ್ರಮಗಳ ಎಲ್ಲಾ ದೃಶ್ಯಗಳನ್ನು ಚಿತ್ರಿಕರಿಸಿದ್ದಾನಂತೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿಲಾಗಿದೆ.

    ದಿನಾಂಕ 18 ರಂದು ರಾತ್ರಿ ಯುವತಿಯ ವಿರೋಧದ ನಡುವೆಯೂ ಪುನೀತ್ ಬಲವಂತವಾಗಿ ಲೈಂಗಿಕ ಶೋಷಣೆ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪುನೀತ್‌ ಪೋಷಕರಿಗೂ ತಿಳಿಸಿದಾಗ ಅವರು ಸಹ “ನಿನ್ನನ್ನು ನನ್ನ ಮಗನೊಂದಿಗೆ ಮದುವೆ ಮಾಡಲೆಂದು ಇದೆಲ್ಲಾ ಮಾಡಿದ್ದೇವೆ” ಎಂದು ಅವರ ಪೋಷಕರು ಉತ್ತರಿಸಿದ್ದಾರೆಂದು ಯುವತಿಯ ಆರೋಪವಾಗಿದೆ.

    ಬಳಿಕ ಯಾದಗಿರಿಗೆ ಬಂದ ಇವರು ಯುವತಿ ತನ್ನ ಮನೆಗೆ ಹೋಗುವುದಾಗಿ ತಿಳಿಸಿದಾಗ ನಿನಗೆ ಮದುವೆಯಾಗಿದೆ ನೀನು ಇಲ್ಲೇ ಇರಬೇಕು, ನಮ್ಮ ಮನೆ ಬಿಟ್ಟು ಹೋದರೆ ಪ್ರಾಣ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರಿಂದ ಆತಂಕಗೊಂಡ ಯುವತಿ ಎರಡು ದಿನ ಅಲ್ಲೇ ಉಳಿದುಕೊಂಡು, ದಿನಾಂಕ 22.02.2025 ರಂದು ತನ್ನ ಮನೆಗೆ ಮರಳಿದ್ದಾಳೆ. ಬಳಿಕ ಏಪ್ರಿಲ್ 12 ರಂದು ಪುನೀತ್ ರಾಜ್ ಯುವತಿಯ ಮನೆಯ ಬಳಿ ಬಂದು ಅವರ ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಲ್ಲದೇ ನಮ್ಮ ಮದುವೆಯ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆ ಎಂದು ಹೇಳಿರುತ್ತಾನೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿಲಾಗಿದೆ.

    ಈ ಸಂಬಂಧ ಯುವತಿ ಹೇಳಿಕೆಯಂತೆ ಪುನೀತ್ ಹಾಗೂ ಆತನ ತಂದೆ – ತಾಯಿ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.

     

    apvc-iconPost Views: 69
  • ಜು.5ರಂದು ಗಿರಿನಾಡಿಗೆ ನಿಖಿಲ್ ಕುಮಾರಸ್ವಾಮಿ

    ಜು.5ರಂದು ಗಿರಿನಾಡಿಗೆ ನಿಖಿಲ್ ಕುಮಾರಸ್ವಾಮಿ

    ಸತ್ಯಕಾಮ ವಾರ್ತೆ ಯಾದಗಿರಿ :

    ನಗರದ ಹೊರ ವಲಯದ ಯರಗೋಳ ರಸ್ತೆ ಬಳಿಯ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಜು.5ರಂದು ನಡೆಯಲಿರುವ ಜನರೊಂದಿಗೆ ಜನತಾದಳ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸುಭಾಷ್ ಚಂದ್ರ ಕಟಕಟಿ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದ 110 ವಿಧಾನ ಸಭಾ ಕ್ಷೇತ್ರಗಳಲ್ಲಿ 58 ದಿನಗಳವರೆಗೆ ನಡೆಯಲಿದ್ದು, ಕಾರ್ಯಕ್ರಮ ನಂತರ ಶಹಾಪೂರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದರು.

    ಈ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ, ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರಡ್ಡಿ, ಮಾಜಿ ಶಾಸಕರಾದ ಗುರು ಪಾಟೀಲ ಶಿರವಾಳ, ಜೆಡಿಎಸ್ ಜಿಲ್ಲಾ ಮುಖಂಡರು, ಪದಾಧಿಕಾರಿಗಳು ಭಾಗವಹಿಸಲಿದ್ದು ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.

    apvc-iconPost Views: 220
  • ಗುಣಮಟ್ಟದ ಕಾಮಗಾರಿಗೆ ಆಧ್ಯತೆ ನೀಡಿ – ನಾಗೇಶ್ ಗದ್ದಿಗಿ

    ಗುಣಮಟ್ಟದ ಕಾಮಗಾರಿಗೆ ಆಧ್ಯತೆ ನೀಡಿ – ನಾಗೇಶ್ ಗದ್ದಿಗಿ

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪಟ್ಟಣದ ಮೂಲಕ ಹಾದು ಹೋಗುವ ಸಿಂದಗಿ – ಕೊಡಂಗಲ್ ರಾಜ್ಯ ಹೆದ್ದಾರಿ -15 ರಲ್ಲಿ ನಡೆಯುತ್ತಿರುವ ವಿಭಜಕ ಕಾಮಗಾರಿಯಲ್ಲಿ ಮೇಲ್ನೋಟಕ್ಕೆ ಗುಣಮಟ್ಟತೆ ಕಾಣದಾಗಿದ್ದು, ಕ್ರಿಯಾ ಯೋಜನಾ ಪಟ್ಟಿ ನೀಡುವಂತೆ ಕೋರಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ನಾಗೇಶ್ ಗದ್ದಿಗಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು, ಜಿಲ್ಲಾ ನಾಗರಾಭಿವೃದ್ಧಿ ಕೋಶ ನಗರೋತ್ಥಾನ ಯೋಜನಾ ಭಾಗವಾಗಿರುವ ವಿಭಜಕ (ಡಿವೈಡರ್) ಕಾಮಗಾರಿಯು ಕಳೆದ ಹಲವಾರು ದಿನಗಳಿಂದ ನಡೆಯುತ್ತಿದ್ದು ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ ಎಂದು ಅವರು ಹೇಳಿದರು.

    ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು, ಕಾಮಗಾರಿಗಳಲ್ಲಿ ಅನೇಕ ಲೋಪಗಳು ಕಂಡರೂ ಸಂಬಂಧ ಪಟ್ಟ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

    ಏನಿದು ಯೋಜನೆ: ನಗರೋತ್ಥಾನ ಯೋಜನೆ ಅಡಿಯಲ್ಲಿ ಜರುಗುತ್ತಿರುವ ವಿಭಜಕ ಕಾಮಗಾರಿಯಲ್ಲಿ ಸ್ಟೀಲ್ ಕಡಿಮೆ ಪ್ರಮಾಣದಲ್ಲಿ ಬಳಸಿದ್ದನ್ನು ಖುದ್ದಾಗಿ ಕಂಡು ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಪ್ರಶ್ನಿಸಲಾಗಿ ನಮಗೆ ಇಷ್ಟೇ ಪ್ರಮಾಣದಲ್ಲಿ ಬಳಸುವಂತೆ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಕಡಿಮೆ ಪ್ರಮಾಣದ ಸ್ಟೀಲ್ ಬಳಸುತ್ತಿದ್ದು ಉಪಯುಕ್ತತೆಗಿಂತ 20-30% ಸ್ಟೀಲ್ ಕಡಿಮೆ ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗುತ್ತಿದ್ದೂ ಕ್ರಿಯಾ ಯೋಜನೆಯ ಪಟ್ಟಿ ನೀಡಲು ಹಲವಾರು ಬಾರಿ ಕೇಳಿದರು ಕೊಡದೆ ಇರವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ ಎಂದರು.

    ಅಧಿಕಾರಿಗಳ ಜಾಣ ಕುರುಡು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಡೆಯುತ್ತಿರುವ ಕಾಮಗಾರಿಗಳನ್ನು ಸಂಬಂಧಿಸಿದ ಗುತ್ತಿಗೆದಾರರು ಗುಣಮಟ್ಟದಿಂದ ಮಾಡದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ, ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಬೇಜವಾಬ್ದಾರಿ ತೋರಿಸಿ ಸ್ಥಳಕ್ಕೆ ಆಗಮಿಸದೆ ಅಸಡ್ಡೆ ಉತ್ತರಗಳನ್ನು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಕುಲಂಕುಷವಾಗಿ ಯೋಜನಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ಕಳಪೆ ಕಂಡು ಬಂದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

    ರಾಜ್ಯ ಹೆದ್ದಾರಿಯಲ್ಲಿ ಭಾರಿ ವಾಹನಗಳು ಸಂಚಾರಿಸಲಿದ್ದು ಕಡಿಮೆ ಗುಣಮಟ್ಟದ ಕಾಮಗಾರಿ ಮುಂದಿನ ದಿನಗಳಲ್ಲಿ ಅನಾಹುತಗಳಿಗೆ ಎಡೆಮಾಡಲಿದೆ ಎಂದರು.

    ಈ ಸಂಧರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ನಾರಾಯಣ ಮಜ್ಜಿಗೆ, ರಾಮುಲು ಕೊಡಗಂಟಿ, ಆಯಾಜ್, ಭೀಮು, ಸುನಿಲ್ ಮೇಧಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    ——

    ತಾಲೂಕಿನದ್ಯಾಂತ ಕಾಮಗಾರಿಗಳು ನಡೆದಿದ್ದು ಗುತ್ತಿಗೆದಾರರು ಕಳಪೆ ಗುಣಮಟ್ಟದ ಪರಿಕರಗಳನ್ನು ಬಳಸದೆ ದೀರ್ಘಕಾಲಕ್ಕೆ ಬಾಳಿಕೆ ಬರುವ ರೀತಿಯಲ್ಲಿ ಕಾಮಗಾರಿ ಜರುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸಂಬಂಧ ಪಟ್ಟ ಇಲಾಖೆಯವರು ಕಾಮಗಾರಿಗಳನ್ನು ಕುಲಂಕುಷವಾಗಿ ಪರಿಶೀಲಿಸಿ ಗುಣಮಟ್ಟ ಕಾಯ್ದುಕೊಳ್ಳದ ಗುತ್ತಿಗೆದಾರ ಮೇಲೆ ಕ್ರಮಕೈಗೊಳ್ಳಬೇಕು.

    ನಾಗೇಶ ಗದ್ದಿಗಿ, ಜಯ ಕರ್ನಾಟಕ ಸಂಘಟನೆ ತಾ. ಅಧ್ಯಕ್ಷ

     

    ಕಾಮಗಾರಿಯು ರಾಜ್ಯ ಹೆದ್ದಾರಿಯಲ್ಲಿ ನಡೆಯಿತ್ತಿದ್ದು ವಿಭಜಕ ನಿರ್ಮಿಸುತ್ತಿರುವ ಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮ ವಹಿಸದೆ ಕಾರ್ಯನಿರ್ವಹಿಸುತ್ತಿದ್ದಾರೆ, ಲಘು ಸೇರಿದಂತೆ ಭಾರಿ ವಾಹನ ಪಕ್ಕದಲ್ಲಿಯೇ ಸಂಚರಿಸುತ್ತಿದ್ದು ಕಾಮಗಾರಿ ನಡೆಯುತ್ತಿರುವ ಕುರಿತಾಗಿ ಬೋರ್ಡ್ ಹಾಕದಿರುವುದು ವಿಪರ್ಯಾಸ, ಗುತ್ತಿಗೆದಾರರೇ ಕೂಲಿ ಕಾರ್ಮಿಕರ ಜೀವನಕ್ಕೆ ಬೆಲೆಯಿಲ್ಲವೇ?

    ಮಲ್ಲಿಕಾರ್ಜುನ ಅದ್ಗಲ್, ಜಯ ಕರ್ನಾಟಕ ಸಂಘಟನೆ ಪದಾಧಿಕಾರಿ.

    apvc-iconPost Views: 111
  • ಪತ್ರಿಕೆಗಳಲ್ಲಿ ಆರೋಗ್ಯ-ಕೃಷಿ ಲೇಖನಗಳು ಬರಲಿ: ಡಾ. ಅಪ್ಪ

    ಪತ್ರಿಕೆಗಳಲ್ಲಿ ಆರೋಗ್ಯ-ಕೃಷಿ ಲೇಖನಗಳು ಬರಲಿ: ಡಾ. ಅಪ್ಪ

    ಸತ್ಯಕಾಮ ವಾರ್ತೆ ಕಲಬುರಗಿ:

    ಇಂದಿನ ದಿನಮಾನಗಳಲ್ಲಿ ಆರೋಗ್ಯವೇ ಮಹತ್ವವಾಗಿದ್ದರಿಂದ ಜತೆಗೆ ಕೃಷಿ ಮತ್ತೆ ಪ್ರಾಮುಖ್ಯತೆ ಹೊಂದುವ ನಿಟ್ಟಿನಲ್ಲಿ ಮಾಧ್ಯಮಗಳಲ್ಲಿ ಅದರಲ್ಲೂ ಪತ್ರಿಕೆಗಳಲ್ಲಿ ಹೆಚ್ಚು ಲೇಖನಗಳು ಹೊರ ಬರುತ್ತಿರಲಿ ಎಂದು ಶರಣಬಸವೇಶ್ವರ ಸಂಸ್ಥಾನದ ಡಾ. ಲಿಂಗರಾಜಪ್ಪ ಅಪ್ಪ ಆಶಯ ವ್ಯಕ್ತಪಡಿಸಿದರು.

    ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಸತ್ಯಕಾಮ ಪತ್ರಿಕೆಯ ಸಂಸ್ಥಾಪಕ ಸಂಪಾದಕ ದಿ. ಪಿ.ಎಂ. ಮಣ್ಣೂರ ಅವರ ೭೭ನೇ ಜನ್ಮ ದಿನದಂಗವಾಗಿ ಆಯೋಜಿಸಲಾದ ಹಿರಿಯ ಪತ್ರಕರ್ತರಿಗೆ ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜನರಿಗಿಂದು ಆಹಾರದ ಮಹತ್ವ ಅದರಲ್ಲೂ ಬಳಕೆ ಕುರಿತಾಗಿ ಪರಿಣಾಮಕಾರಿ ತಿಳಿ ಹೇಳಬೇಕಿದೆ. ಹೀಗಾಗಿ ಆರೋಗ್ಯದ ಮಾಹಿತಿ ನೀಡುವ ಲೇಖನಗಳು ಹೊರ ಬರಲಿ, ಅದೇ ತೆರನಾಗಿ ಕೃಷಿಯೇ ನಮ್ಮ ದೇಶದ ಪ್ರಮುಖ ಕಾಯಕ. ಈ ಕಾಯಕದಿಂದ ಸಮಾಜದ ಆರ್ಥಿಕ ಸ್ಥಿರತೆ ಸಾಧ್ಯ. ಹೀಗಾಗಿ ಕೃಷಿ ಮಹತ್ವ ಮತ್ತು ಕೃಷಿಯಲ್ಲಿನ ಸುಧಾರಣೆ ಕುರಿತಾಗಿ ಲೇಖನಗಳು ಪ್ರಕಟವಾಗುತ್ತಿರಲಿ ಎಂದು ಹೇಳಿದರು.

    ಕಲಬುರಗಿ: ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಸತ್ಯಕಾಮ ಪತ್ರಿಕೆಯ ಸಂಸ್ಥಾಪಕ ಸಂಪಾದಕ ದಿ. ಪಿ.ಎಂ. ಮಣ್ಣೂರ ಅವರ ೭೭ನೇ ಜನ್ಮ ದಿನದಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಿಗೆ ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
    ಕಲಬುರಗಿ: ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಸತ್ಯಕಾಮ ಪತ್ರಿಕೆಯ ಸಂಸ್ಥಾಪಕ ಸಂಪಾದಕ ದಿ. ಪಿ.ಎಂ. ಮಣ್ಣೂರ ಅವರ ೭೭ನೇ ಜನ್ಮ ದಿನದಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಿಗೆ ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

    ಪಿ.ಎಂ. ಮಣ್ಣೂರ ಅವರು ಸ್ಥಾಪಿಸಿದ ಪತ್ರಿಕೆಯನ್ನು ಆನಂದ ಮಣ್ಣೂರ ಮುಂದುವರೆಸಿಕೊAಡು ಹೋಗುತ್ತಿರುವುದು ಶ್ಲಾಘನೀಯ. ಸದಾ ಅವರ ಮಾಧ್ಯಮ ಚಟುವಟಿಕೆಗಳಿಗೆ ಬೆಂಬಲ ಇದ್ದೇ ಇರುತ್ತದೆ ಎಂದು ಡಾ. ಲಿಂಗರಾಜಪ್ಪ ಅಪ್ಪ ಅಭಯ ನೀಡಿದರು.

    ಹಿರಿಯ ವೈದ್ಯರು ಹಾಗೂ ಸಾಹಿತಿಗಳಾಗಿರುವ ಡಾ. ಎಸ್.ಎಸ್. ಗುಬ್ಬಿ ಮಾತನಾಡಿ, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಸಾಯುವ ಕೊನೆ ಘಳಿಗೆವರೆಗೂ ಕಲಿಕೆ ಇದ್ದೇ ಇರುತ್ತದೆ. ಮಣ್ಣೂರ ಅವರು ದಿನ ನಿತ್ಯ ಹೊಸದಾದ ಕಲಿಕೆಯನ್ನೇ ಮೈಗೂಢಿಸಿಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಪತ್ರಿಕೋದ್ಯಮವಲ್ಲದೇ ರಾಜಕೀಯ, ಸಾಹಿತ್ಯ, ರಂಗಭೂಮಿ ಸೇರಿ ಇತರ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಲು ಸಾಧ್ಯವಾಯಿತು ಎಂದು ಹೇಳಿದರಲ್ಲದೇ ತಂದೆ-ತಾಯಿ ಹಾಗೂ ಹಿರಿಯರಿಗೆ ಗೌರವ ಕೊಡುವುದು ಇಂದು ದೊಡ್ಡ ಮಾತು ಎನ್ನುವಂತಾಗಿದೆ. ಆದ್ದರಿಂದ ಎಲ್ಲರಲ್ಲಿ ಜನ್ಮ ನೀಡಿದವರಿಗೆ ಹಾಗೂ ಹಿರಿಯರಿಗೆ ಗೌರವ ಕೊಡುವುದನ್ನು ಎಲ್ಲರೂ ಪಾಲಿಸಿದ್ದಲ್ಲಿ ಸಮೃದ್ಧ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.

    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕಿದವರಲ್ಲಿ ಪಿ.ಎಂ. ಮಣ್ಣೂರ ಒಬ್ಬರು. ಒಟ್ಟಾರೆ ಆಡು ಮುಟ್ಟದ ಸೊಪ್ಪಿಲ್ಲ. ಮಣ್ಣೂರು ಕಾರ್ಯ ಮಾಡದ ಕ್ಷೇತ್ರವಿಲ್ಲ ಎನ್ನುವಂತಿದೆ ಎಂದರು.

    ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ಸಮಾಜದ ಎಲ್ಲ ವರ್ಗದವರನ್ನು ಪ್ರಶ್ನಿಸುವ ಹಾಗೂ ತಿದ್ದುವ ಅಧಿಕಾರ ಪತ್ರಕರ್ತರು ಹೊಂದಿದ್ದಾರೆ ಎಂದು ಹೇಳಿದರು.

    ಸತ್ಯಾಕಾಮ ಸಮ್ಮಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಶಂಕರ ಕೊಡ್ಲಾ, ಮಣ್ಣೂರ ಅವರು ಸಾಮಾಜಿಕವಾಗಿ ಹತ್ತಾರು ಕಾರ್ಯಗಳನ್ನು ಮಾಡಿದ್ದಾರೆ. ಕಲಬುರಗಿ ವೀರಶೈವ ಲಿಂಗಾಯತ ವಸತಿ ನಿಲಯ ಪ್ರಾರಂಭವಾಗುವಲ್ಲಿ ಡಾ. ಶರಣಪ್ಪ ಗಿರಿ ಅವರ ಜತೆ ಕೈ ಜೋಡಿಸಿದವರಲ್ಲಿ ಇವರೇ ಪ್ರಮುಖರು. ಅದೇ ತೆರನಾಗಿ ಮೂರು ದಶಕಗಳ ಹಿಂದೆ ಬಸವ ಜಯಂತಿ ಆಚರಣೆಗೆ ನಾಂದಿ ಹಾಡಿದವರಲ್ಲೂ ಮಣ್ಣೂರ ಅವರೇ ಪ್ರಮುಖರು. ಪ್ರಮುಖವಾಗಿ ಸದಾ ಹಸನ್ಮುಖಿಯಾಗಿದ್ದರಲ್ಲದೇ ಹಾಸ್ಯ ಚಟಾಕಿ ಹಾರಿಸುವಲ್ಲಿ ಎತ್ತಿದ ಕೈಯಾಗಿದ್ದರು ಎಂದು ಒಡನಾಟದ ಘಟನೆಗಳ ವಿವರಣೆ ನೀಡಿದರು.

    ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ ಸಹ ಸತ್ಯಕಾಮ ಸಮ್ಮಾನ ಪ್ರಶಸ್ತಿ ಸ್ವೀಕರಿಸಿ, ಮಣ್ಣೂರ ಅವರು ಸತ್ಯಕ್ಕೆ ಹೇಳಲು ಹಿಂಜರಿಕೆ ಬೇಡ ಎಂದು ಹೇಳುತ್ತಿದ್ದರು. ಪಾಲಿಕೆ ಸದಸ್ಯರಾಗಿಯೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ನಗರದ ಒಂದು ರಸ್ತೆಗೆ ಹೆಸರಿಡಲಿ ಎಂದರು.

    ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ವಿಜ್ಞಾನಿ ಡಾ. ಡಿ.ಎಂ.ಮಣ್ಣೂರ ಅಧ್ಯಕ್ಷತೆ ವಹಿಸಿ, ತಂದೆಯವರು ಸಾಹಿತಿ ಮತ್ತು ಸ್ವಾತಂತ್ರö್ಯ ಹೋರಾಟಗಾರರಾಗಿದ್ದರು. ಅದನ್ನು ಪಿ.ಎಂ. ಮಣ್ಣೂರ ಮೈಗೂಢಿಸಿಕೊಂಡಿದ್ದರು. ಅದ್ನನೀಗ ಆನಂದ ಮಣ್ಣೂರು ಮುಂದುವರೆಸಿಕೊAಡು ಹೋಗುತ್ತಿದ್ದಾರೆ ಎಂದರು.

    ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ನಿವೃತ್ತ ವಾರ್ತಾಧಿಕಾರಿ ಅಪ್ಪಾರಾವ ಅಕ್ಕೋಣಿ, ಹಿರಿಯ ಪತ್ರಕರ್ತ ದೇವಿಂದ್ರಪ್ಪ ಕಪನೂರ, ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಗುರುರಾಜ ಕುಲಕರ್ಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಮುಖರಾದ ಝರಣಪ್ಪ ಚಿಂಚೋಳಿ, ರೇವಣಸಿದ್ದಪ್ಪ ಮಾಸ್ತರ್, ಚಾಮರಾಜ ದೊಡ್ಡಮನಿ, ಸುರೇಶ ಕೊಟಗಿ, ಬಸವರಾಜ ಶಿವಗೋಳ ಸೇರಿದಂತೆ ಮುಂತಾದವರಿದ್ದರು. ಸಂಪಾದಕ ಆನಂದ ಪಿ. ಮಣ್ಣೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಾಗಲಿಂಗಯ್ಯ ಶಾಸ್ತಿçÃಗಳು, ಪತ್ರಕರ್ತ ಸಂಗಮನಾಥ ರೇವತಗಾಂವ ನಿರೂಪಿಸಿದರು. ಬಾಬುರಾವ ಕೋಬಾಳ ಪ್ರಾರ್ಥನೆಗೀತೆ ಹಾಡಿದರು. ಕಿರಣ ಪಾಟೀಲ್ ನೇತೃತ್ವದ ಸುಕಿ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಿತು.

     

    ದಿ.ವಿ.ಎನ್ ಕಾಗಲಕರ್ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ಸ್ಥಾಪಿಸಲೆಂದು ಈಗಾಗಲೇ ಒತ್ತಾಯಿಸಲಾಗಿದೆ. ಅದೇ ತೆರನಾಗಿ ಪಿ.ಎಂ. ಮಣ್ಣೂರ ಹೆಸರಿನಲ್ಲೂ ಪ್ರಶಸ್ತಿ ಸ್ಥಾಪಿಸುವಂತೆ ಒತ್ತಾಯಿಸಲಾಗುವುದು. ಪ್ರಮುಖವಾಗಿ ಪತ್ರಕರ್ತರ ಕಲಬುರಗಿ ಜಿಲ್ಲಾ ಸಂಘದಿAದ ಪಿ.ಎಂ.ಮಣ್ಣೂರ ಹೆಸರಿನಲ್ಲಿ ಇದೇ ವರ್ಷದಿಂದ ಪ್ರಶಸ್ತಿ ಪ್ರಾರಂಭಿಸಲಾಗುವುದು.

    ಬಾಬುರಾವ ಯಡ್ರಾಮಿ, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ

     

    ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ

    ಹಿರಿಯ ಪತ್ರಕರ್ತರಾದ ಶಂಕರ ಕೊಡ್ಲಾ, ಅಜೀಜುಲ್ಲಾ ಸರ್ಮಸ್ತ್, ರಾಮಕೃಷ್ಣ ಬಡಶೇಷಿ, ಹಣಮಂತರಾವ ಭೈರಾಮಡಗಿ, ಚಂದ್ರಕಾAತ ಹುಣಸಗಿ, ಪ್ರಕಾಶ ಕುಲಕರ್ಣಿ ಅವರಿಗೆ ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

    apvc-iconPost Views: 98
  • ಜುಲೈ 01 ರಂದು ಸತ್ಯಕಾಮ ಸಮ್ಮಾನ್” ಪ್ರಶಸ್ತಿ ಪ್ರದಾನ ಕಾರ್ಯಕ್ರಮ

    ಜುಲೈ 01 ರಂದು ಸತ್ಯಕಾಮ ಸಮ್ಮಾನ್” ಪ್ರಶಸ್ತಿ ಪ್ರದಾನ ಕಾರ್ಯಕ್ರಮ

    ಕಲುಬುರಗಿ: ಜುಲೈ 01 ರಂದು ದಿ. ಪಿ.ಎಂ. ಮಣ್ಣೂರ ಅವರ 77ನೇ ಹುಟ್ಟುಹಬ್ಬ ಹಾಗೂ ಸತ್ಯಕಾಮ ಸಮ್ಮಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಆಡಿಟೊರಿಯಂನಲ್ಲಿ ಬೆಳ್ಳಗೆ 11:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸತ್ಯಕಾಮ” ಪತ್ರಿಕೆಯ ಸಂಪಾದಕರಾದ ಆನಂದ್ ಪಿ. ಮಣ್ಣೂರ ಹೇಳಿದರು.

     

    ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಜುಲೈ 01ರಂದು ದಿ. ಪಿ.ಎಂ. ಮಣ್ಣೂರ ಅವರ ಹುಟ್ಟುಹಬ್ಬದ ಅಂಗವಾಗಿ “ಸತ್ಯಕಾಮ ಸಮ್ಮಾನ್” ಪ್ರಶಸ್ತಿಯನ್ನು ಐವರು ಗಣ್ಯರಿಗೆ ಹಾಗೂ ಸತ್ಯಕಾಮ ಪತ್ರಿಕೆಯಲ್ಲಿ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ವಿಜಯಪುರ ಆವೃತ್ತಿಯಲ್ಲಿ ಸ್ಥಾನಿಕ ಸಂಪಾದಕರಿಗೆ ಸತ್ಯಕಾಮ ಸಮ್ಮಾನ್ ವಿತರಿಸಲಾಗುವುದು ಎಂದರು. ಅಂದು ಬೆಳ್ಳಗೆ 11:30 ಗಂಟೆಗೆ ಜರಗುವ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಡಾ. ಲಿಂಗರಾಜಪ್ಪ ಅಪ್ಪ ನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಗದ್ದುಗೆ ಮಠದ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ನಿವೃತ್ತ. ಯೋಜನಾ ನಿರ್ದೇಶಕರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ಡಿ. ಎಂ ಮಣ್ಣೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಬುರ್ಗಿ ಮಹಾಪೌರರಾದ ಯಲ್ಲಪ್ಪ ಎಸ್ ನಾಯ್ಕೋಡಿ, ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಜಡಿಯಪ್ಪ ಗೆದ್ದಗಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರ್ಗಿ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಬುದ್ಧ ಲೋಕ ಪತ್ರಿಕೆಯ ಹಿರಿಯ ಸಂಪಾದಕರು ದೇವೇಂದ್ರಪ್ಪ ಕಪನೂರ್, ಮಾಧ್ಯಮ ಮಾನ್ಯತೆ ಸಮಿತಿ ಸದಸ್ಯರು ಮತ್ತು ಕ.ಕ.ಸಂ.ಸಂಘದ ಕಲಬುರ್ಗಿ ಅಧ್ಯಕ್ಷ ಗುರುರಾಜ್ ಕುಲಕರ್ಣಿ, ಅರ್ಥೋಪೆಡಿಕ್ ಸರ್ಜನ್ ಮತ್ತು ಸಾಹಿತಿಗಳಾದ ಡಾ. ಎಸ್.ಎಸ್‌ ಗುಬ್ಬಿ, ಕೆ.ಕೆ.ಸಿ.ಸಿ.ಐ ಅದ್ಯಕ್ಷರಾದ ಶರಣಬಸಪ್ಪ ಪಪ್ಪಾರವರು ಅತಿಥಿಗಳಾಗಿ ಬಾಗವಹಿಸಲಿದ್ದಾರೆ ಎಂದರು.

    ಸುಕಿ ಮೆಲೋಡಿಸ್‌(ಕಿರಣ್‌ ಪಾಟೀಲ್‌) ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು. ಶ್ರೀ ನಾಗಲಿಂಗಯ್ಯ ಶಾಸ್ತ್ರೀಗಳು ಸ್ಥಾವರಮಠ ಅವರು ನಿರೂಪಿಸಿಲಿದ್ದಾರೆ ಎಂದರು.

    ಸತ್ಯಕಾಮ ಸಮ್ಮಾನ್ ಪುರಸ್ಕೃತರು

    1. ಶ್ರೀ ಶಂಕರ್ ಕೊಡ್ಲಾ, ಸಂಪಾದಕರು, ಜೈ ಭೀಮ್ ಗದೆ ಪತ್ರಿಕೆ ಮತ್ತು  ವ್ಯವಸ್ಥಾಪಕರು, ಎಸ್.ಎಸ್.ವಿ.ಟಿವಿ

    2. ಶ್ರೀ ಅಜೀಜುಲ್ಲಾ ಸರ್ಮಸ್ತ್, ಸಂಸ್ಥಾಪಕ ಸಂಪಾದಕರು, ಬ್ಹಾಮನಿ ಉರ್ದು ದಿನಪತ್ರಿಕೆ

    3. ಶ್ರೀ ರಾಮಕೃಷ್ಣ ಬಡಶೇಷಿ, ವಿಶೇಷ ವರದಿಗಾರರು, ಕಲಬುರಗಿ, ದಿ ನ್ಯೂ ಇಂಡಿಯಾ ಎಕ್ಸಪ್ರೆಸ್

    4. ಶ್ರೀ ಹಣಮಂತರಾವ್ ಭೈರಾಮಡಗಿ, ಡೆಪ್ಯೂಟಿ ಚೀಫ್ ರಿಪೋರ್ಟರ್, ಉದಯವಾಣಿ, ಕಲಬುರಗಿ ಆವೃತ್ತಿ

    5. ಶ್ರೀ ಚಂದ್ರಕಾAತ್ ಹುಣಸಗಿ, ಪ್ರಧಾನ ವರದಿಗಾರರು,ಗುಲ್ಬರ್ಗಾ ಸಂಜೆವಾಣಿ

    6. ಶ್ರೀ ಪ್ರದೀಪ್ ಕುಲಕರ್ಣಿ, ಸ್ಥಾನಿಕ ಸಂಪಾದಕರು, ಸತ್ಯಕಾಮ, ವಿಜಯಪುರ,ಮೂರು ದಶಕಗಳ ಸೇವೆಗೆ ಸನ್ಮಾನ

     
    apvc-iconPost Views: 18
  • ಡಿ.ಡಿ.ಯು ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

    ಡಿ.ಡಿ.ಯು ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

    ಸತ್ಯಕಾಮ ವಾರ್ತೆ  ದೋರನಹಳ್ಳಿ:
    ವಿದ್ಯಾರ್ಥಿ ಜೀವನಕ್ಕೆ ಆಟ,ಪಾಠ, ಮನರಂಜನೆ ಅವಶ್ಯವಾಗಿರಬೇಕು. ವಿದ್ಯಾರ್ಥಿಗಳು ಕೇವಲ ಓದುತ್ತ ಇದ್ದರೆ ಸಾಲದು, ದೈಹಿಕವಾಗಿ ದಂಡನೆ ಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲು ಏಕಾಗ್ರತೆ ಬರುವುದಿಲ್ಲ ಎನ್ನುವುದು ತಪ್ಪು ಕಲ್ಪನೆ,ಪಾಠದೊಂದಿಗೆ ಆಟವಿದ್ದರೆ ಮಾನಸಿಕ ಮತ್ತು ದೈಹಿಕವಾಗಿ ಶಸಕ್ತರಾಗುತ್ತಾರೆ ಎಂದು ಶಾಲೆಯ ಮುಖ್ಯಗುರು ಪ್ರಕಾಶ ಬಳ್ಳಾರಿ ಹೇಳಿದರು.

    ದೋರನಹಳ್ಳಿ ಗ್ರಾಮದ ಡಿ.ಡಿ.ಯು ಸಿಬಿಎಸ್‌ಇ ಪ್ರೌಢ ಶಾಲೆ ಮತ್ತು ಡಿಡಿಯು ಪಿಯು ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಶಾಲೆಯ ದೈಹಿಕ ಶಿಕ್ಷಕ ಬಸವರಾಜ ಗೋಗಿ ಮಾತನಾಡಿ  ಇಂದು ಮಕ್ಕಳು, ಚಿಕ್ಕ ವಿದ್ಯಾರ್ಥಿಗಳು ಒತ್ತಡದಲ್ಲಿ ಕಲಿಯುವ ಪರಿಸ್ಥಿತಿಯಿದೆ. ಒತ್ತಡದಲ್ಲಿ ಓದಿ ಚೆನ್ನಾಗಿ ಕಲಿತು ವಿದ್ಯೆ ಕಲಿಯುವುದರಲ್ಲಿ ಯಶಸ್ಸು ಗಳಿಸುತ್ತಿದ್ದಾರೆ, ಮುಂದೆ ನೌಕರಿಯೂ ಸಿಗುತ್ತದೆ. ಆದರೆ, ಆ ಹೊತ್ತಿಗೆ ಒತ್ತಡದ
    ಕಾರಣಕ್ಕೆ ದೇಹಾರೋಗ್ಯವೂ ಕೆಟ್ಟು ಹೋಗಿರುತ್ತದೆ. ಆರೋಗ್ಯ ಕಾಪಾಡಿಕೊಳ್ಳುತ್ತಲೇ ಬದುಕಿನಲ್ಲೂ ಯಶಸ್ಸು ಗಳಿಸಲು ಯೋಗ, ಧ್ಯಾನ ಅನಿವಾರ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

    ವಿದ್ಯಾರ್ಥಿಗಳು ಇಂದು ಒತ್ತಡದಲ್ಲಿಯೇ ಓದು, ಕಲಿಕೆ ಮಾಡುತ್ತಿದ್ದು ಇವರಿಗೆ ಯೋಗ, ಧ್ಯಾನ ಕಲಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು,ಕಾಲೇಜಿನ ಉಪನ್ಯಾಸಕರು,ವಸತಿ ನಿಲಯ ಪಾಲಕರಿದ್ದರು.

    apvc-iconPost Views: 19
  • ‘ಖಟಾಖಟ್’ ಮಾದರಿಯಲ್ಲಿಯೇ ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ; ಇಟಗಿ ಆರೋಪ

    ‘ಖಟಾಖಟ್’ ಮಾದರಿಯಲ್ಲಿಯೇ ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ; ಇಟಗಿ ಆರೋಪ

    • ಬಿಜೆಪಿ ವಕ್ತಾರ ಹಣಮಂತ ಇಟಗಿ ಆರೋಪ
    • ಖಟಾಖಟ್ ಹಣ ನೀಡುವುದಾಗಿ ಆಮಿಷವೊಡ್ಡಿದ ರಾಹುಲ್ ಗಾಂಧಿ, ಸರ್ಕಾರದ ಮೂಲಕ ಜನರಿಂದ ಖಟಾಖಟ್ ಹಣ ವಸೂಲಿಗೆ ಸಾಕ್ಷಿ ಕೊಟ್ಟ ಹಿರಿಯ ಶಾಸಕ

    ಸತ್ಯಕಾಮ ವಾರ್ತೆ ಯಾದಗಿರಿ:

    ಕರ್ನಾಟಕದ ಕಾಂಗ್ರೆಸ್ ಪಕ್ಷದ ಬ್ರಹ್ಮಾಂಡ ಬ್ರಷ್ಟಾಚಾರದ ಮುಖವಾಡ ಮತ್ತೆ ಕಳಚಿಬಿದ್ದಿದೆ. ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂದಿ ಹೇಳುವ ‘ಖಟಾಖಟ್’ ಮಾದರಿಯಲ್ಲಿಯೇ ರಾಜ್ಯದಲ್ಲಿ ಭ್ರಷ್ಟಾಚಾರ ಖಟಾಕಟ್ ನಡೆದಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಗರಸಭೆ ಸದಸ್ಯ ಹಣಮಂತ ಇಟಗಿ ಆರೋಪಿಸಿದ್ದಾರೆ.

    ಈ ಕುರಿತು ಹೇಳಿಕೆನೀಡಿರುವ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಓಲೈಕೆಗಳು ಜೊತೆಯಾಗಿ ಮುಂದಡಿ ಇಡುತ್ತಿವೆ ಎನ್ನಲು ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿನ ಬೇರು ಬಿಟ್ಟ ಭ್ರಷ್ಟಾಚಾರವನ್ನು ಸ್ವತಃ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ರು ಅಧಿಕಾರಿಗಳ ಜೊತೆ ನಡೆಸಿದ ಸಂಭಾಷಣೆಯ ಆಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಬಡವರಿಗೆ ನೀಡುವ ಆಶ್ರಯ ಮನೆಗಳ ಹಂಚಿಕೆಗೂ ಬಿಡದೇ ಲಂಚವನ್ನು ಬಹಿರಂಗವಾಗಿ ಕೇಳಲಾಗುತ್ತದೆ ಎಂಬುದನ್ನು ಬಿ.ಆರ್. ಪಾಟೀಲ್ ರು ಸ್ವತಃ ಸಚಿವ ಜಮೀರ್ ಖಾನ್ ಅವರ ಪಿಎ ಜೊತೆ ಸಂಭಾಷಣೆಯಲ್ಲಿಯೇ ಸ್ಪಷ್ಟಪಡಿಸಿಕೊಂಡಿದ್ದು ಅದನ್ನು ಸಾರ್ವಜನಿಕವಾಗಿ ವೈರಲ್ ಮಾಡಿರುವುದು ಬ್ರಷ್ಟ ಕಾಂಗ್ರೆಸ್ ನ ಕರಾಳ ಮುಖ ಮತ್ತೆ ಮತ್ತೆ ಬಯಲಾಗಿದೆ ಎಂದು ಇಟಗಿ ಆರೋಪಿಸಿದ್ದಾರೆ.

    ಲಂಚ ನೀಡದ ಕಾರಣಕ್ಕಾಗಿ, ಅವರು ಅಧಿಕೃತವಾಗಿ ಶಿಫಾರಸು ಮಾಡಿದ ಪತ್ರಗಳನ್ನು ಸಹ ಕಸದ ಬುಟ್ಟಿಗೆ ಹಾಕಲಾಗಿದೆ ಎಂಬುದು ಸ್ವತಃ ಬಿ.ಆರ್. ಪಾಟೀಲ್ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ಪಿಎ ಅವರೊಂದಿಗೆ ನಡೆಸಿದ ಸಂಭಾಷಣೆಯೇ ರಾಜಾರೋಷವಾಗಿ ವಾಸ್ತವದಲ್ಲಿ ಈ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಮುಖವನ್ನು ಅನಾವರಣ ಮಾಡಿದೆ.

    ಯಾವದೇ ಕೆಲಸಕ್ಕೂ ಹಣ ಕೊಡಬೇಕು ಹಣ ಕೊಡದೇ ಇದ್ದರೆ ಶಾಸಕರು ಸಚಿವರ ಪತ್ರಗಳಿಗೂ ಕವಡೆ ಕಿಮ್ಮತ್ತಿಲ್ಲದಂತೆ ಮಾಡಿದ ಇಂತಹ ಭ್ರಷ್ಟ ಸರ್ಕಾರ ಈ ಹಿಂದೆ ಎಂದೆAದೂ ಎಲ್ಲೂ ಕಂಡಿಲ್ಲ ಎಂದು ಇಟಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಹುಲ್ ಗಾಂದಿಯವರ ‘ಖಟಾಖಟ್’ ಎಂದು ಜನರಿಗೆ ಹಣ ಎಣಿಸುವುದಾಗಿ ಹೇಳಿ ಈದೀಗ ಜನರಿಂದ ಖಟಾಕಟ್ ಹಣವನ್ನು ಈ ಬ್ರಷ್ಟ ಸರ್ಕಾರದಿಂದ ವಸೂಲಿ ಮಾಡುತ್ತಿದ್ದಾರೆ ಎಂಬುದನ್ನು ಜನತೆ ಅರಿಯಬೇಕಾಗಿದೆ.

    ಇಂತಹ ಭ್ರಷ್ಟ ನೀಚ ಸರ್ಕಾರದ ಕೃತ್ಯಗಳನ್ನು ಜನತೆ ಇನ್ನು ಮೂರು ವರ್ಷ ಸಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಜನತೆಗೆ ಖಟಾಖಟ್ ಆಮಿಷ ವೊಡ್ಡಿದ ರಾಹುಲಗಾಂದಿ ‘ಖಟಾಕಟ್’ ಬ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿರುವುದು ಈ ಘಟನೆಯಿಂದ ಸ್ಪಷ್ಟವಾಗಿ ಸಾಬೀತಾಗಿದೆ ಎಂದು ಅವರು ಟೀಕಿಸಿದ್ದಾರೆ.

    apvc-iconPost Views: 11
  • ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ೧೧ನೇ ಅಂ.ರಾ. ಯೋಗ ದಿನಾಚರಣೆ

    ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ೧೧ನೇ ಅಂ.ರಾ. ಯೋಗ ದಿನಾಚರಣೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ೧೧ನೇ ವರ್ಷದ ಅಂತಾರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

    ಯೋಗ ಶಿಕ್ಷಕರಾದ ಶರಣಪ್ಪ ಬೆನಕನಹಳ್ಳಿ, ಚಂದ್ರರೆಡ್ಡಿ ಠಾಣಗುಂದಿ ಆಗಮಿಸಿ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.

    ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಬಸವರಾಜಪ್ಪ ವಿಭೂತಿಹಳ್ಳಿ, ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ, ಯುವ ಮುಖಂಡರಾದ ಮಹೇಶರೆಡ್ಡಿ ಗೌಡ ಮುದ್ನಾಳ ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಮಾಜಿ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆ ತುಮಕೂರು, ಭೀಮನಗೌಡ ಕ್ಯಾತನಾಳ, ಜಿಲ್ಲಾ ಬಿಜೆಪಿ ವಕ್ತಾರರಾದ ಹನುಮಂತ ಇಟಗಿ, ಯುವ ಮೋರ್ಚಾ ಅಧ್ಯಕ್ಷ ಶ್ರೀಧರ ಸಾಹುಕಾರ, ಉಪಾಧ್ಯಕ್ಷ ಮಲ್ಲು ಕೋಲಿವಾಡ, ಮಾಜಿ ಜಿಲ್ಲಾದ್ಯಕ್ಷ ಮೌನೇಶ ಬೆಳಗೇರಾ, ನಗರಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ಶರಣಗೌಡ ಅಲ್ಲಿಪುರ, ಮಂಡಲ ಮಾಜಿ ಅದ್ಯಕ್ಷ ಮಲ್ಲಿಕಾರ್ಜುನ ಹೊನಗೇರಾ, ರವಿ ಮುದ್ನಾಳ, ಲಕ್ಷಿö್ಮÃಪುತ್ರ ಮಾಲಿ ಪಾಟೀಲ್, ಮಹಾದೇವಪ್ಪ ಗಣಪೂರ, ಮಹಿಳಾ ಮೋರ್ಚಾ ಜಿಲ್ಲಾದ್ಯಕ್ಷೆ ಸುನಿತಾ ಚವ್ಹಾಣ, ಕಾರ್ಯದರ್ಶಿ ಶಕುಂತಲಾ ಗುಂಜನೂರ, ನಗರಸಭೆ ಸದಸ್ಯೆ ವಿಜಯಲಕ್ಷಿö್ಮÃ ನಾಯಕ, ಕಾರ್ಯಾಲಯ ಕಾರ್ಯದರ್ಶಿ ಚೆನ್ನವೀರಯ್ಯ ಸ್ವಾಮಿ ಹಿರೇಮಠ, ಮರಲಿಂಗ ಜಿನಿಕೇರ, ಸೊಲಮನ್ ಯಡ್ಡಳ್ಳಿ, ನಾಗಪ್ಪ ಗಚ್ಚಿನಮನಿ, ಮಲ್ಲಿಕಾರ್ಜುನ ತಳಕ, ಮಲ್ಲಿಕಾರ್ಜುನ ಮುದ್ನಾಳ, ಶಿವಣ್ಣ ವಿಶ್ವಕರ್ಮ ಸೇರಿದಂತೆ ಬಿಜೆಪಿ ನಗರ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ನಗರಸಭೆ ಸದಸ್ಯರು ಎಲ್ಲಾ ಮೋರ್ಚದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

    apvc-iconPost Views: 7