Blog

  • ವಸತಿ ನಿಲಯಗಳ ವ್ಯವಸ್ಥೆ ಹಾಗೂ ಸ್ವಚ್ಚತೆ ಪರಿಶೀಲನೆ; ಸಿಇಓ

    ವಸತಿ ನಿಲಯಗಳ ವ್ಯವಸ್ಥೆ ಹಾಗೂ ಸ್ವಚ್ಚತೆ ಪರಿಶೀಲನೆ; ಸಿಇಓ

    •  ಶಾಸಕ ಕಂದಕೂರ ಆದೇಶದ ಮೆರೆಗೆ ವಸತಿ ನಿಲಯಗಳಿಗೆ ಅಧಿಕಾರಿಗಳು ಭೇಟಿ
    • ವಸತಿ ನಿಲಯಗಳ ವ್ಯವಸ್ಥೆ ಹಾಗೂ ಸ್ವಚ್ಚತೆ ಪರಿಶೀಲನೆ; ಸಿಇಓ ಲವೀಶ

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪಟ್ಟಣದ ಪದವಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವಿಶ್ ಓರ್ಡಿಯಾ ಗುರುವಾರ ಭೇಟಿ ನೀಡಿ ವಸತಿ ನಿಲಯಗಳ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು.

    ಪಟ್ಟಣದ ಪದವಿ ಕಾಲೆಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಬುಧವಾರ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರು ಅವರಿಗೆ ವಿದ್ಯಾರ್ಥಿಗಳು ವಸತಿ ನಿಲ್ಯಗಳಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತಂದಾಗ, ಜಿಲ್ಲಾ ಮುಖ್ಯಾಧಿಕಾರಿಗಳಿಗೆ ಮಾತನಾಡಿ ವೀಕ್ಷಿಸಲು ತಿಳಿಸಿದ ಪ್ರಯುಕ್ತ ಅಧಿಕಾರಿಗಳು ಇಂದು ದಿಡೀರ ಭೇಟಿ ನೀಡಿ ಪರಿಶೀಲಿಸಿದರು.

    ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಡಾ. ಬಿ. ಅರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಅಡುಗೆ ಕೋಣೆ, ಶೌಚಾಲಯಗಳು, ವಿದ್ಯಾರ್ಥಿಗಳ ಕೊಠಡಿಗಳು, ಗ್ರಂಥಾಲಯಗಳನ್ನು ಪರಿಶೀಲಿಸಿದ ನಂತರ ವಿದ್ಯಾರ್ಥಿಗಳ ಜೊತೆಗೆ ಕೂಲಂಕುಷವಾಗಿ ಸಮಾಲೊಚನೆ ನಡೆಸಿ ಸಮಸ್ಯೆ ಆಲಿಸಿದರು. ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ನೀಡಬೇಕು, ವಸತಿ ನಿಲಯದಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು, ಮಕ್ಕಳ ವಿಧ್ಯಾಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಾಣಮಾಡಿ ಎಂದು ವಸತಿ ನಿಲಯ ಮೇಲ್ವೀಚಾರಕರಿಗೆ ಸೂಚಿಸಿದರು.

    ಆಹಾರದಲ್ಲಿನ ರುಚಿಯ ಕೊರತೆ, ನೀರಿನ ಸಮಸ್ಯೆ, ಸೋಲಾರ ದೀಪದ ವ್ಯವಸ್ಥೆ, ವಿಧ್ಯಾರ್ಥಿಗಳಿಗೆ ವ್ಯಾಸಂಗ ಮಾಡುವ ಕೊಠಡಿ ಹಾಗೂ ಬಿಸಿನೀರಿನ ಸಮಸ್ಯೆ ಕುರಿತು ವಿಧ್ಯಾರ್ಥಿಗಳು ಬಗೆಹರಿಸುವಂತೆ ಹೇಳಿಕೊಂಡರು.

    ವಿಧ್ಯಾರ್ಥಿಗಳಿಗೆ ಊಟದ ಮೇಜು, ಸ್ಟಡಿ ಚೇರ್, ಸೋಲಾರ್ ಪ್ಯಾನೆಲ್, ಶೌಚಾಲಯ ದುರಸ್ಥಿಗೊಳಿಸುವಂತೆ ಮತ್ತುಹಾಸ್ಟೆಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಗಂಟಿ ಬೆಳೆದಿದ್ದು ಸ್ವಚ್ಛವಾಗಿಡಲು ಪುರಸಭೆ ಮುಖ್ಯಾಧಿಕಾರಿಗೆ ತಿಳಿಸಿದರು. ಶಾಲೆಯ ಆವರಣದಲ್ಲಿ ಮಧ್ಯಪಾನದ ಬಾಟಲ್ ಹಾಗೂ ಪ್ಯಾಕೇಟ ಕಂಡು ರಾತ್ರಿವೇಳೆ ಪೋಲಿಸ್ ಗಸ್ತು ವ್ಯವಸ್ಥೆ ಮಾಡಿಸುತ್ತೇನೆ ಹಾಗೂ ಶಾಶ್ವತ ಪರಿಹಾರವಾಗಿ ಕಾಂಪೌAಡ್ ಗೋಡೆ ನಿರ್ಮಾಣ ಮಾಡಲು ಸೂಚನೆ ನೀಡಿದರು.

    ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ಅಂಬರೀಷ ಪಾಟೀಲ, ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಪುರಸಭೆ ಮುಖ್ಯಾಧಿಕಾರಿ ಭಾರತಿ, ಹಿಂದುಳಿದ ವರ್ಗಗಳ ಉಪ ನಿರ್ದೇಶಕ ಸದಾಶಿವ ನಾರಾಯಣಕರ, ತಾಲೂಕ ಹಿಂದುಳಿದ ವರ್ಗಗಳ ಅಧಿಕಾರಿ ಸಂತೋಷ ರೆಡ್ಡಿ, ಸಮಾಜ ಕಲ್ಯಾಣ ತಾಲೂಕಾಧಿಕಾರಿ ಬೇಬಿ, ಪುರಸಭೆ ಕಿರಿಯ ಅಭಿಯಂತರ ಅಬ್ದುಲ್ ಅಲೀಂ, ಹಾಸ್ಟೆಲ್ ವಾರ್ಡನ್ ಶ್ರೀದೇವಿ ಹಾಜರಿದ್ದರು.

    apvc-iconPost Views: 50
  • ದೇಶದ ಪ್ರಗತಿಯಲ್ಲಿ ಅಂಕಿ ಅಂಶಗಳು ಬಹುಮುಖ್ಯ

    ದೇಶದ ಪ್ರಗತಿಯಲ್ಲಿ ಅಂಕಿ ಅಂಶಗಳು ಬಹುಮುಖ್ಯ

    • ಖ್ಯಾತ ಸಂಖ್ಯಾಶಾಸ್ತ್ರಜ್ಞ ಮಹಾಲ್ ನೋಬಿಸ್ ಜನ್ಮದಿನಾಚರಣೆ ಅಂಗವಾಗಿ ಸಾಂಖ್ಯಿಕ ದಿನಾಚರಣೆ
    • ದೇಶದ ಪ್ರಗತಿಯಲ್ಲಿ ಅಂಕಿ ಅಂಶಗಳು ಬಹುಮುಖ್ಯ: ನೈಜ ಅಂಕಿ ಅಂಶಗಳನ್ನು ಸಂಗ್ರಹಿಸಿ ನೆರವಾಗಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಖ್ಯಾತ ಸಂಖ್ಯಾಶಾಸ್ತ್ರಜ್ಞ ಶ್ರೀ ಪ್ರಶಾಂತ ಚಂದ್ರ ಮಹಾಲ್ ನೋಬಿಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸಾಂಖ್ಯಿಕ ದಿನಾಚರಣೆಯನ್ನು ನಗರದ ಜಿಲ್ಲಾ ಸಂಖ್ಯಾ ಸಂಗ್ರ ಹಣಾಧಿಕಾರಿಗಳ ಕಚೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

    ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಾಂತ ಚಂದ್ರ ಮಹಾಲ್ನೋಬಿಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಅರ್ಪಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ನಿವೃತ್ತ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸತ್ಕರಿಸುವ ಮೂಲಕ ಅರ್ಥಪೂರ್ಣವಾಗಿ ಈ ದಿನಾಚರಣೆ ಆಚರಿಸಲಾಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಮುಖ್ಯ ಯೋಜನಾಧಿಕಾರಿ ಕೆ .ಕುಮುಲಯ್ಯ ಅವರು,,ಆಡಳಿತ ಮತ್ತು ಅಭಿವೃದ್ಧಿಯಲ್ಲಿ ದೇಶವನ್ನು ಮುಂಚೂಣಿಗೆ ತರಲು ಅಂಕಿ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿ, ನೀರಾವರಿ,ಜನಗಣತಿ,ಕೈಗಾರಿಕಾ ಸಮೀಕ್ಷೆ ಹೀಗೆ ವಿವಿಧ ಅಂಕಿ ಅಂಶಗಳ ನೈಜ ಸಂಗ್ರಹಣೆ ಮುಖ್ಯ.ಅದರಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆಯವ್ಯಯ ಮತ್ತು ಕೇಂದ್ರದಿಂದ ಗ್ರಾಮ ಪಂಚಾಯತ್ ವರೆಗಿನ ಅನುದಾನ ಹಂಚಿಕೆಯಲ್ಲಿ ಅಂಕಿ ಅಂಶಗಳು ಪ್ರಮುಖವಾಗಿವೆ.

    ಈ ಹಿನ್ನೆಲೆಯಲ್ಲಿ ಅಂಕಿ ಸಂಖ್ಯೆ ಇಲಾಖೆ ಅಧಿಕಾರಿಗಳು ನೈಜ, ವಾಸ್ತವಿಕ ಅಂಕಿ ಅಂಶಗಳನ್ನು ಸಂಗ್ರಹಿಸಿ ನೀಡಬೇಕು.ತಪ್ಪು ಮಾಹಿತಿಗಳು ಯೋಜನೆಗಳ ತಪ್ಪು ರೂಪುರೇಷೆಗೆ ಕಾರಣವಾಗುತ್ತವೆ ಎಂದು ಹೇಳಿ ಮಹಾಲ್ ನೋಬಿಸ್ ಅವರ ಕೊಡುಗೆ ಸ್ಮರಿಸಿದರು.

    ಪದವಿ ಕಾಲೇಜ್ ನ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಪ್ರಹ್ಲಾದ ಜೋಶಿ ಅವರು ಸರ್ಕಾರದ ಯೋಜನೆಗಳು, ಸಾಮಾಜಿಕ, ಆರ್ಥಿಕ ನೀತಿ, ನಿಯಮಗಳಿಗೆ ಅಂಕಿ ಅಂಶಗಳು ಬೆನ್ನಲುಬಾಗಿ ನಿಂತಿವೆ.ಸರ್ಕಾರ ಹಾಗೂ ಸಂಸ್ಥೆಗಳಿಗೆ ಹಾಗೂ ಮನೆಯಿಂದ ಅರಮನೆವರೆಗೆ ಅಂಕಿ ಅಂಶಗಳು ಮುಖ್ಯವಾಗಿವೆ ಎಂದು ಹೇಳಿದರು.

    ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಉದಯಕುಮಾರ್ , ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು (ಪ್ರ) ಶ್ರೀ ಸುಲೈಮಾನ್ ನದಾಫ,

    ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಅಂಬರಾಯ ಸಾಗರ, ಸಹಾಯಕ ನಿರ್ದೇಶಕ ಎಂ.ಪ್ರಶಾಂತಕುಮಾರ್, ಉಪಸ್ಥಿತರಿದ್ದರು.

    ಹೊನ್ನಕ್ಕ ತಾಳಿ, ಲಕ್ಷ್ಮಿ ಪ್ರಾರ್ಥಿಸಿದರು. ಪ್ರಭಾರಿ ಸಹಾಯಕ ನಿರ್ದೇಶಕಿ ಕು.ಚೇತನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ನಾಗರಾಜ್ ನಾಗೂರ್, ಪ್ರತಿಜ್ಞಾ ವಿಧಿ ಬೋಧಿಸಿ, ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಅಧಿಕಾರಿಗಳಾದ ಚಂದ್ರಶೇಖರ್ ಭಂಡಾರಿ, ವೆಂಕಟಯ್ಯ, ವರದರಾಜ ರೆಡ್ಡಿ, ಅಧೀಕ್ಷಕ ಸಾಹೇಬಣ್ಣ ಚೂರಿ, ಫಕೃದ್ದೀನ್,ಇವರನ್ನು ಸನ್ಮಾನಿಸಲಾಯಿತು. ಕೊನೆಯಲ್ಲಿ ದತ್ತಾತ್ರೇಯ ಭಟ್ ವಂದಿಸಿದರು.

    apvc-iconPost Views: 7
  • ಬಿಸಿ ಊಟಕ್ಕೆ ಕಳಪೆ ಆಹಾರ ಧಾನ್ಯ ಪೂರೈಕೆದಾರರ ವಿರುದ್ಧ ಕ್ರಮಕ್ಕೆ ಮಹೇಶರಡ್ಡಿ ಮುದ್ನಾಳ ಆಗ್ರಹ

    ಬಿಸಿ ಊಟಕ್ಕೆ ಕಳಪೆ ಆಹಾರ ಧಾನ್ಯ ಪೂರೈಕೆದಾರರ ವಿರುದ್ಧ ಕ್ರಮಕ್ಕೆ ಮಹೇಶರಡ್ಡಿ ಮುದ್ನಾಳ ಆಗ್ರಹ

    ಸತ್ಯಕಾಮ ವಾರ್ತೆ ಯಾದಗಿರಿ:

    ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲೆಗಳಿಗೆ ಜಿಲ್ಲಾಮಟ್ಟದ ಆಹಾರ ಧಾನ್ಯ ಏಜೆನ್ಸಿಗಳು ಕಳಪೆ ಮಟ್ಟದ ತೊಗರಿ ಬೇಳೆ ಮತ್ತು ಅಕ್ಕಿಯನ್ನು ಪೂರೈಕೆ ಮಾಡುತ್ತಿವೆ. ಅದರಲ್ಲಿ ತೊಗರಿ ಬೇಳೆ ತೀರ ಕಳಪೆಯಾಗಿದ್ದು ಇದರ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಬೇಕು ಎಂದು ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಆಗ್ರಹಿಸಿದರು.

    ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರ ಧಾನ್ಯ ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ತೊಗರಿಬೇಳೆ, ಸಂಸ್ಕರಿತ ತಾಳೆಎಣ್ಣೆ ಮತ್ತು ಕಡಲೆ ಬೇಳೆಗಳನ್ನೊಳಗೊಂಡ ಆಹಾರವನ್ನು ನಿರ್ಧರಿಸಿದೆ. ಸಾಮಾನ್ಯ ಅಕ್ಕಿ ಮತ್ತು ಕಡಲೇಬೇಳೆಗಳ ಗುಣಮಟ್ಟವನ್ನು ಅಳೆಯಲು ಸರ್ಕಾರಿ ಸಂಸ್ಥೆಗಳನ್ನು ಬಿಟ್ಟು ಮೂರನೇ ವ್ಯಕ್ತಿ ಆಯ್ಕೆ ಮಾಡಲಾಗಿದೆ.

    ಆದರೆ ಏಜೆನ್ಸಿ ಅವರು ಶಾಲೆಗಳಿಗೆ ಕಳಪೆ ಮಟ್ಟದ ತೊಗರಿ ಬೆಳೆ ಪೂರೈಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಮತ್ತು ಶಾಲೆಗಳಿಗೆ ಗುಣಮಟ್ಟದ ಬೇಳೆಯನ್ನು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು..

    apvc-iconPost Views: 20
  • ತಡಬಿಡಿ ಗ್ರಾಮದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಿ – ಶ್ರೀಧರ ಸಾಹುಕಾರ

    ತಡಬಿಡಿ ಗ್ರಾಮದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಿ – ಶ್ರೀಧರ ಸಾಹುಕಾರ

    ಸತ್ಯಕಾಮ ವಾರ್ತೆ ಯಾದಗಿರಿ:

    ಮತಕ್ಷೇತ್ರದ ತಡಿಬಿಡಿ ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಘಟನೆಯೊಂದು ತಡಿಬಿಡಿ ಗ್ರಾಮದ ವಾರ್ಡ್ ನಂ 4 ರಲ್ಲಿ ಸೃಷ್ಟಿಯಾಗಿದೆ.

    ವಡಿಗೇರಾ ತಾಲೂಕಿನ ತಡಿಬಿಡಿ ಗ್ರಾಮ ಪಂಚಾಯಿತಿಯಲ್ಲಿ ಬರುವ ವಾರ್ಡ್ ನಂ 4ರಲ್ಲಿ  ವಾಸವಾಗಿರುವ ಕುಟುಂಬಗಳು ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಗ್ರಾಮದಲ್ಲಿ ನೀರಿಗಾಗಿ ಆಹಾಕಾರ ಸೃಷ್ಟಿಯಾಗಿದೆ.  ಸಂಭಂದಪಟ್ಟ ಅಧಿಕಾರಿಗಳಿಗೆ ಗ್ರಾಮದ ಜನತೆ ಹಲವಾರು ಬಾರಿ ಮನವಿ ನೀಡಿದರೂ ಮನವಿಗೆ ಸ್ಪಂದಿಸದೆ ಬೇಜವಾಬ್ದಾರಿಯಾಗಿ ವರ್ತಿಸಿತ್ತಿರುವುದು ಖಂಡನೀಯ…

    ಮಾನ್ಯ ಸ್ಥಳೀಯ ಶಾಸಕರು ಇದರ ಬಗ್ಗೆ ಗಮನ ಹರಿಸಿ ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು… ಕ್ಷೇತ್ರದ ಜನರಿಗೆ ಸಮರ್ಪಕವಾದ  ಕುಡಿಯುವ ನೀರು ಒದಗಿಸದ ಅತ್ಯಂತ ಬೇಜವಾಬ್ದಾರಿತನದ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಧರ ಸಾಹುಕಾರ ಅವರು ಆರೋಪಿಸಿದ್ದಾರೆ .

    apvc-iconPost Views: 18
  • ಲಕ್ಷಾಂತರ ಭಕ್ತಸಮೂಹದ ಮದ್ಯ ರಥೋತ್ಸವ

    ಲಕ್ಷಾಂತರ ಭಕ್ತಸಮೂಹದ ಮದ್ಯ ರಥೋತ್ಸವ

    ವರದಿ: ಭೀಮನಗೌಡ ಬಿರಾದಾರ

    ಸತ್ಯಕಾಮ ವಾರ್ತೆ ತಾಳಿಕೋಟೆ:

    ಈ ಭಾಗದ ನಡೆದಾಡುವ ದೇವರು ಶ್ರೀ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಉತ್ಸವ ಅಂಗವಾಗಿ ಲಕ್ಷಾಂತರ ಭಕ್ತಸಮೂಹದ ಮದ್ಯ ಮಂಗಳವಾರರಂದು ರಥೋತ್ಸವವು ವಿಜೃಂಬಣೆಯಿಂದ ಜರುಗಿತು.

    ಜಾತ್ರೋತ್ಸವ ಅಂಗವಾಗಿ ದಿನನಿತ್ಯ ಶ್ರೀ ಖಾಸ್ಗತೇಶ್ವರ ಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮವನ್ನು ಶ್ರೀಮಠದ ವೇ|| ವಿಶ್ವನಾಥ ವಿರಕ್ತಮಠ ಅವರು ನಡೆಸಿಕೊಟ್ಟರು.

    ಮಂಗಳವಾರರಂದು ಜಾತ್ರೋತ್ಸವ ಅಂಗವಾಗಿ ಸಾಯಂಕಾಲ ಜರುಗಿದ ಶ್ರೀ ಖಾಸ್ಗತೇಶ್ವರ ರಥೋತ್ಸವವು ಶ್ರೀ ಮಠದಿಂದ ಪ್ರಾರಂಬಗೊಂಡು ಶ್ರೀ ಬಸವೇಶ್ವರ ದೇವಸ್ಥಾನದ ವರೆಗೆ ಜರುಗಿ ಮರಳಿ ಶ್ರೀ ಮಠಕ್ಕೆ ತಲುಪಿತು.

    ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಜಾತ್ರಾ ಉತ್ಸವದಲ್ಲಿ ಶ್ರೀಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ, ವೇ|| ವಿಶ್ವನಾಥ ವಿರಕ್ತಮಠ, ಅವರು ನೆತೃತ್ವ ವಹಿಸಿದ್ದರು.

    ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಹಾಗೂ ಮುಂಬೈ, ಪುಣೈ, ಸಾಂಗ್ಲಿ, ಮಿರೇಜ್, ಸೋಲ್ಲಾಪೂರ, ಕೊಲ್ಲಾಪುರ, ರಾಜಸ್ಥಾನ, ಬೆಂಗಳೂರ, ಗೋವಾ ಹಾಗೂ ಹೈದ್ರಾಬಾದದಿಂದ ಲಕ್ಷಾಂತರ ಭಕ್ತರು ಆಗಮಿಸಿ ಈ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಭಕ್ತಿಬಾವ ಮೆರೆದರು.

    apvc-iconPost Views: 17
  • ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮಸ್ಥರ ಮನವಿ 

    ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮಸ್ಥರ ಮನವಿ 

    ಸತ್ಯಕಾಮ ವಾರ್ತೆ ಯಾದಗಿರಿ: 

    ವರ್ಕನಳ್ಳಿ ಗ್ರಾಮದ ಸೀಮೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಬ್ಲಾಸ್ಟಿಂಗ್‌ನಿಂದ ರಸ್ತೆ ಹದೆಗೆಟ್ಟಿದ್ದು, ಧೂಳಿನಿಂದ ಜನರಿಗೆ ಬಹಳ ತೊಂದರೆ ಆಗಿದ್ದು ಇದನ್ನು ತಡೆಗಟ್ಟುವಂತೆ ವರ್ಕನಳ್ಳಿ ಗ್ರಾಮದ ಯುವಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಯಾದಗಿರಿ ತಾಲೂಕು ವರ್ಕನಳ್ಳಿ ಗ್ರಾಮದ ಸೀಮೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ದಿನನಿತ್ಯ ಓಡಾಡುವ ಕಲಬುರಗಿ & ಸ್ಥಳೀಯ ಟಿಪ್ಪರ್‌ಗಳ ಹಾವಳಿ ಜಾಸ್ತಿಯಾಗಿ ಈ ಭಾಗದ ರಸ್ತೆಗಳು ಹದೆಗೆಟ್ಟಿದ್ದು, ಓವರ್ ಲೋಡ್ ಹಾಕಿ ನಡೆಸುತ್ತಿದ್ದಾರೆ. ವಾಹನದಲ್ಲಿ ದೊಡ್ಡ ದೊಡ್ಡ ಸೋಲಿಂಗ್ ಕಲ್ಲುಗಳು ತರುತ್ತಿದ್ದು, ಕೆಳಗಡೆ ಬಿದ್ದರೆ ಜನರ ಪ್ರಾಣಕ್ಕೆ ಹಾನಿ ಉಂಟಾಗುತ್ತದೆ. ಹಾಗೂ ಧೂಳಿನಿಂದ ಜನರಿಗೆ ಬಹಳ ತೊಂದರೆ ಆಗಿದ್ದು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ, ಜನರ ಆರೋಗ್ಯ ಹದಗೆಟ್ಟಿದೆ. ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.

    ಅಕ್ರಮ ಬ್ಲಾಸ್ಟಿಂಗ್‌ನಿಂದ ಸುತ್ತ-ಮುತ್ತಲಿನ ಗ್ರಾಮಗಳ ಮನೆಗಳು ಬಿರುಕು ಬಿಟ್ಟಿವೆ. ಹೊಲಕ್ಕೆ ಹೋಗುವ ರೈತರು ಭಯ ಭೀತರಾಗಿದ್ದು, ಕಲ್ಲುಗಳು ಮೈ ಮೇಲೆ ಬಿದ್ದು, ಜನ ಜಾನುವಾರುಗಳಿಗೆ ಜೀವಕ್ಕೆ ಹಾನಿ ಉಂಟಾಗುತ್ತಿದೆ. ರಾತ್ರಿ ವೇಳೆ ಕ್ವಾರಿಯಲ್ಲಿ ಮಷಿನ್‌ಗಳು ಬ್ರೇಕರ್ ಚಾಲು ಇರುವುದರಿಂದ ಜನರಿಗೆ ನಿದ್ರೆ ಬಾರದೇ ತೊಂದರೆ ಉಂಟಾಗುತ್ತಿದೆ. ರೈತರ ಜಮೀನಿನಲ್ಲಿನ ಬೆಳೆಗಳು ಕೂಡಾ ಬೆಳೆಯದಂತಾಗಿದೆ.

    ಈ ಭಾಗದಲ್ಲಿ ಗಣಿಗಾರಿಕೆ ಹಾವಳಿ ಜಾಸ್ತಿಯಾಗಿದ್ದು, ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿದ್ದು, ಬ್ಲಾಸ್ಟಿಂಗ್‌ನಿಂದ ಗ್ರಾಮಗಳ ಜನರು ಭಯ ಭೀತರಾಗಿದ್ದು, ಮತ್ತು ಅಕ್ರಮವಾಗಿ ಅವ್ಯವಹತವಾಗಿ ಗಣಿಗಾರಿಕೆ ನಡೆಯುತ್ತಿದೆ. ಈ ಅಕ್ರಮದ ಬಗ್ಗೆ ಗಣಿಗಾರಿಕೆ ಇಲಾಖೆಯ ಗಮನಕ್ಕೆ ತಂದರೂ ಕೂಡಾ ಕ್ರಮ ಕೈಗೊಂಡಿಲ್ಲ.

    ಆದ ಕಾರಣ ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು / ಬ್ಲಾಸ್ಟಿಂಗ್ ನಿಂದ ಈ ಕೂಡಲೇ ತಡೆಹಿಡಿದು, ಜನರ ಆರೋಗ್ಯ ಕಾಪಾಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿದರು.

    ಈ ಸಂದರ್ಭದಲ್ಲಿ ಶಫಿ ವರ್ಕನಳ್ಳಿ ಮಲ್ಲುನಾಯಕ ವರ್ಕನಳ್ಳಿ ರವಿನಾಯಕ ಭೀಮುನಾಯಕ. ಕಾಶಿನಾಯಕ, ಭೀಮು ಮಡಿವಾಳ. ತಾಯಪ್ಪ ನಾಯಕ ಮೋದಿನ. ದೇವು ನಾಯಕ ರಾಜಪ್ಪ ನಾಯಕ ಇತರರು ಇದ್ದರು.

    apvc-iconPost Views: 7
  • ಯಾದಗಿರಿ ನೂತನ ಜಿಲ್ಲಾಧಿಕಾರಿಗಳಾಗಿ ಹರ್ಷಲ್ ಭೋಯಾರ್ ಅಧಿಕಾರ ಸ್ವೀಕಾರ

    ಯಾದಗಿರಿ ನೂತನ ಜಿಲ್ಲಾಧಿಕಾರಿಗಳಾಗಿ ಹರ್ಷಲ್ ಭೋಯಾರ್ ಅಧಿಕಾರ ಸ್ವೀಕಾರ

    ಸತ್ಯಕಾಮ ವಾರ್ತೆ ಯಾದಗಿರಿ:

    ಯಾದಗಿರಿ ನೂತನ ಜಿಲ್ಲಾಧಿಕಾರಿಗಳಾಗಿ ಹರ್ಷಲ್ ಭೋಯಾರ್ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಅಧಿಕಾರ ಹಸ್ತಾಂತರಿಸಿದರು.

    ನೂತನ ಜಿಲ್ಲಾಧಿಕಾರಿಗಳಾದ ಶ್ರೀ ಹರ್ಷಲ್ ಭೋಯಾರ್ ರವರು ಮೂಲತಃ ಮಹಾರಾಷ್ಟ್ರ ರಾಜ್ಯದವರಾಗಿದ್ದು, ವರದಾ ಇವರ ಜನ್ಮಸ್ಥಳವಾಗಿದೆ.

    ಇವರು 2016ರ ಐ.ಎ.ಎಸ್ ಬ್ಯಾಚ್ ನವರಾಗಿದ್ದಾರೆ. ಸವನೂರ್, ಚಾಮರಾಜನಗರ,ವಿಜಯನಗರ, ಸಹಾಯಕ ಆಯುಕ್ತರಾಗಿ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ, ಅಟಲ್ ಜಿ ಜನಸ್ನೇಹಿ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

    ನಿರ್ಗಮಿತ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಕಲ್ಬುರ್ಗಿ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.

    apvc-iconPost Views: 15
  • ಮೊಹರಂ ಹಿನ್ನೆಲೆ: ಸಾರ್ವಜನಿಕವಾಗಿ ಮೆರವಣಿಗೆ ನಿಷೇಧ ಜಿಲ್ಲಾಧಿಕಾರಿ ಡಾ.ಸುಶೀಲ ಬಿ.

    ಮೊಹರಂ ಹಿನ್ನೆಲೆ: ಸಾರ್ವಜನಿಕವಾಗಿ ಮೆರವಣಿಗೆ ನಿಷೇಧ ಜಿಲ್ಲಾಧಿಕಾರಿ ಡಾ.ಸುಶೀಲ ಬಿ.

    ಸತ್ಯಕಾಮ ವಾರ್ತೆ ಯಾದಗಿರಿ:

    ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ತಾತಳಗೇರಾ ಗ್ರಾಮದಲ್ಲಿ ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೊಹರಂ ಹಬ್ಬವನ್ನು ಸಾರ್ವಜನಿಕವಾಗಿ ಗುಂಪುಗುಂಪಾಗಿ ಆಚರಿಸುವುದನ್ನು ಮತ್ತು ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ನಿಷೇಧಿಸಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಸುಶೀಲ ಬಿ ಅವರು ಆದೇಶ ಹೊರಡಿಸಿದ್ದಾರೆ.

    ಗುರಮಠಕಲ್ ತಾಲೂಕಿನ ತಾತಳಗೇರಾ. ಗ್ರಾಮದಲ್ಲಿ ಜುಲೈ 4 ರಿಂದ ಜುಲೈ 7 ರವರೆಗೆ ನಡೆಯಲಿರುವ ಮೊಹರಂ ಹಬ್ಬದ ಆಚರಣೆಯ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರನ್ವಯ ಅಡಿ ಗ್ರಾಮದಲ್ಲಿ ಮೊಹರಂ ಹಬ್ಬ ಗುಂಪು ಗುಂಪಾಗಿ ಆಚರಿಸುವುದನ್ನು ಹಾಗೂ ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ, ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

    apvc-iconPost Views: 14
  • 17 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಚನ್ನಾರಡ್ಡಿ ಪಾಟೀಲ್

    17 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಚನ್ನಾರಡ್ಡಿ ಪಾಟೀಲ್

    ಸತ್ಯಕಾಮ ವಾರ್ತೆ ಯಾದಗಿರಿ:
    ಲ್ಯಾಪ್ ಟಾಪ್ ಮೂಲಕ ಆನ್ ಲೈನ್ ಕಡತಗಳನ್ನು ಬೇಗನೇ ಮುಗಿಸಿಕೊಡುವ ನಿಟ್ಟಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಜನರ ಕೆಲಸ ತ್ವರಿತ ಗತಿಯಲ್ಲಿ ಮಾಡಬೇಕೆಂದು  ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

    ನಗರದ ಶಾಸಕ‌ ಕಭೇರಿಯಲ್ಲಿ ಶುಕ್ರವಾರ ತಾಲೂಕಿನ 17 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ ಟಾಪ್ ವಿತರಣೆ ಮಾಡಿ ಮಾತನಾಡಿದರು.
    ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ಈ ತಂತ್ರಜ್ಞಾನ ವಸ್ತು ನಿಮಗೆ ನೀಡಿದ್ದು, ಇದರಿಂದ ಬೇಗನೆ ಕೆಲಸವಾಗಬೇ ವಿನಾಃ ನಿರ್ಲಕ್ಷ್ಯ ಸಲ್ಲ ಎಂದು ಶಾಸಕರು ತಾಕಿತು ಮಾಡಿದರು.

    ಇ-ಆಪೀಸ್ ಕಛೇರಿ ಟಪಾಲುಗಳನ್ನು ಆನ್ ಲೈನ್ ಮೂಲಕ ಕಡತಗಳನ್ನು ರವಾನಿಸಲು ಅನುಕುಲವಾಗಲು ಸಹಕಾರವಾಗಲಿದೆ ಎಂದು ಹೇಳಿದರು.

    ತಹಸೀಲ್ದಾರ ಸುರೇಶ ಅಂಕಲಗಿ, ಕಂದಾಯ ನಿರಿಕ್ಣಕರು, ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.
    apvc-iconPost Views: 17
  • ಶಾಲಿನಿ ರಜನೀಶ್ ವಿರುದ್ಧ ಹೇಳಿಕೆ ಖಂಡನಿಯ: ರುದ್ರಾಂಬಿಕ ಪಾಟೀಲ್

    ಶಾಲಿನಿ ರಜನೀಶ್ ವಿರುದ್ಧ ಹೇಳಿಕೆ ಖಂಡನಿಯ: ರುದ್ರಾಂಬಿಕ ಪಾಟೀಲ್

    ಸತ್ಯಕಾಮ ವಾರ್ತೆ ಯಾದಗಿರಿ:

    ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್ ರವಿ ಕುಮಾರ್ ಕಿಳು ಮಟ್ಟದ ಹೇಳಿಕೆ ನೀಡಿರುವುದು ಇಡೀ ಮಹಿಳಾ ಕುಲವನ್ನೇ ಅವಮಾನಿಸಿದಂತಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುದ್ರಾಂಬಿಕ. ಆರ್. ಪಾಟೀಲ್ ಚಟ್ನಳ್ಳಿ ತೀವ್ರವಾಗಿ ಖಂಡಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಖ್ಯ ಕಾರ್ಯದರ್ಶಿಗಳು ರಾತ್ರಿಯಲ್ಲಿ ಸರಕಾರಕ್ಕೆ ಹಾಗೂ ಇಡೀ ದಿನ ಮುಖ್ಯಮಂತ್ರಿಗಳಿಗಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ ಇಂತಹ ಹೇಳಿಕೆಗಳಿಂದ ಸಮಾಜದಲ್ಲಿ ಮಹಿಳೆಯರ ಬಗ್ಗೆ ತಪ್ಪು ಕಲ್ಪನೆ ಮೂಡುತ್ತದೆ ರವಿಕುಮಾರ್ ರವರು ಇದೆ ಮೊದಲ ಬಾರಿಗೆ ಈ ರೀತಿಯಾಗಿ ಮಾತನಾಡಿಲ್ಲ ಈ ಮುಂಚೆಯೂ ಕೂಡಾ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಇಂಥವರಿಗೆ ಮೊದಲು ಮೂಗುದಾರ ಹಾಕಬೇಕು ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಇಂಥ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ ಮಹಿಳೆ ಪುರುಷನಷ್ಟೇ ಸರಿ ಸಮಾನವಾಗಿ ಎಲ್ಲಾ ಕಾರ್ಯಗಳಲ್ಲಿಯೂ ವಿವಿಧ ಕ್ಷೇತ್ರದಲ್ಲಿ ಕೂಡ ಅತ್ಯುತ್ತಮ ಸಾಧನೆ ಮಾಡಿದ ಕೀರ್ತಿ ಮಹಿಳೆಯರಿಗೆ ಇದೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಮೊದಲು ಹಲವಾರು ಹುದ್ದೆಗಳನ್ನು ನಿಭಾಯಿಸಿ ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಬಿಜೆಪಿ ಹೈಕಮಾಂಡ್ ರವಿಕುಮಾರ್ ರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮಹಿಳೆಯರು ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುದ್ರಾಂಬಿಕ. ಆರ್. ಪಾಟೀಲ್ ಚಟ್ನಳ್ಳಿ ಎಚ್ಚರಿಸಿದ್ದಾರೆ

    apvc-iconPost Views: 12