Blog

  • ಲೋಕದಾಲತ್ 2478 ಪ್ರಕರಣಗಳ ಇತ್ಯರ್ಥ

    ಲೋಕದಾಲತ್ 2478 ಪ್ರಕರಣಗಳ ಇತ್ಯರ್ಥ

    ಸತ್ಯಕಾಮ ವಾರ್ತೆ ಸುರಪುರ:
    ಇಲ್ಲಿಯ ನ್ಯಾಯಾಲಯದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಲೋಕದಾಲತ್ ನಲ್ಲಿ ಬ್ಯಾಂಕ್ ವ್ಯಾಜ್ಯಗಳು ಸೇರಿ 2478 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.

    ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಅವರು ಪ್ರಕರಣ ಒಂದರ ಇತ್ಯರ್ಥದ ಸಂದರ್ಭದಲ್ಲಿ ಭಾಗವಹಿಸಿದ್ದರು.ಅಲ್ಲದೆ ಜಿಲ್ಲಾ ಎರಡನೇ ಹೆಚ್ಚವರಿ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ,ಸುರಪುರ ಸೀನಿಯರ್ ಸಿವಿಲ್ ನ್ಯಾಯಾಧೀಶರಾದ ಫಕಿರವ್ವ ಕೆಳಗೇರಿ,ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಭಾಗವಹಿಸಿದ್ದರು.

    ಲೋಕ ಅದಾಲತ್‌ನಲ್ಲಿ ಒಟ್ಟು 4229 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.ಅವುಗಳಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 7 ಪ್ರಕರಣಗಳು ತೆಗೆದುಕೊಂಡು 4 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಇವುಗಳಲ್ಲಿ 1 ಲಕ್ಷ 50 ಸಾವಿರ ಪರಿಹಾರವನ್ನು ಕೊಡಿಸಲಾಗಿದೆ.ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 1444 ಪ್ರಕರಣಗಳು ತೆಗೆದುಕೊಂಡು 675 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. 18 ಲಕ್ಷ 46 ಸಾವಿರ 725 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಸಿವಿಲ್ ನ್ಯಾಯಾಲಯದಲ್ಲಿ 1437 ಪ್ರಕರಣಗಳನ್ನು ತೆಗೆದುಕೊಂಡು 928 ಪ್ರಕರಣಗಳನ್ನು ಇತ್ಯರ್ಥಗೊಳಿಸಿ,3 ಲಕ್ಷ 11 ಸಾವಿರ 824 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಹೆಚ್ಚುವರಿ ನ್ಯಾಯಾಲಯದಲ್ಲಿ 1341 ಪ್ರಕರಣಗಳು ಕೈಗೆತ್ತಿಕೊಳ್ಳಲಾಗಿತ್ತು, ಇವುಗಳಲ್ಲಿ 865 ಪ್ರಕರಣಗಳು ಇತ್ಯರ್ಥಗೊಳಿಸಿ 7 ಲಕ್ಷ 72 ಸಾವಿರ 550 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಅಲ್ಲದೆ ಬ್ಯಾಂಕ್ ವ್ಯವಹಾರದ 6 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 19 ಲಕ್ಷ 96 ಸಾವಿರ ರೂಪಾಯಿಗಳ ತುಂಬಿಸಲಾಗಿದೆ.

    ಒಟ್ಟು 4229 ಪ್ರಕರಣಗಳಲ್ಲಿ 2472 ಪ್ರಕರಣಗಳು ಇತ್ಯರ್ಥಗೊಂಡು 2769275 ರೂಪಾಯಿಗಳ ಪರಿಹಾರವನ್ನು ಕೊಡಿಸಲಾಗಿದೆ.ಅಲ್ಲದೆ 6 ಬ್ಯಾಂಕ್ ವ್ಯವಹಾರದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

    ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಅವರು,ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿಯವರು,ಹಿರಿಯ ಸಿವಿಲ್ ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿಯವರು,ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಉಪಸ್ಥಿತರಿದ್ದರು. ವಕೀಲರಾದ ಹಿರಿಯ ನ್ಯಾಯವಾದಿ ನಿಂಗಣ್ಣ ಚಿಂಚೋಡಿ,ವಿನೋದ ಜೇವರ್ಗಿ,ಎಮ್.ಎಸ್.ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಲೋಕ ಅದಾಲತ್‌ನಲ್ಲಿ ಪತಿ ಪತ್ನಿ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪ್ರಕರಣವೊಂದರಲ್ಲಿ ಪತ್ನಿಯೇ ಪತಿಗೆ ಒಂದಾಗಿ ಜೀವನ ಸಾಗಿಸುವ ಕುರಿತು ನ್ಯಾಯಾಧೀಶರ ಮುಂದೆ ಪತಿಗೆ ಮನವೊಲಿಸಿ ವಿಚ್ಛೇದನವನ್ನು ಕೈಬಿಟ್ಟು ನ್ಯಾಯಾಲಯದಲ್ಲಿ ಒಂದಾಗಿ ಹಾರ ಬದಲಾಯಿಸಿಕೊಂಡು ಎಲ್ಲ ನ್ಯಾಯಾಧೀಶರು ಹಾಗೂ ವಕೀಲರಿಗೆ ಸಿಹಿ ಹಂಚಿ ಒಂದಾಗಿ ನಡೆದ ಘಟನೆ ನಡೆಯಿತು.

    apvc-iconPost Views: 88
  • ಗೌಡಾ ಪಡೆದ ರಮೇಶ ದೊರೆ ಅಭಿನಂದನಾ ಸಮಾರಂಭ

    ಗೌಡಾ ಪಡೆದ ರಮೇಶ ದೊರೆ ಅಭಿನಂದನಾ ಸಮಾರಂಭ

    ಸತ್ಯಕಾಮ ವಾರ್ತೆ ಸುರಪುರ:
    ಕಾಂಗ್ರೆಸ್ ಪಕ್ಷದ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಅವರಿಗೆ ತಾಲೂಕಿನ ಅವರ ಸ್ವಗ್ರಾಮ ಆಲ್ದಾಳ ಗ್ರಾಮದಲ್ಲಿ ಅಭಿನಂದನಾ ಸಮಾರಂಭ ನಡೆಸಲಾಯಿತು.ರಮೇಶ ದೊರೆಗೆ ಬೃಹತ್ ಗಾತ್ರದ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ರಮೇಶ ದೊರೆ ಅವರು ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯನ್ನು ಮಾಡುತ್ತಾ ಬರುತ್ತಿದ್ದು,ಅವರ ಸೇವೆಯನ್ನು ಗುರುತಿಸಿ ಇಂದು ತಮಿಳುನಾಡಿನ ಏಷ್ಯಾ ಅಂತರಾಷ್ಟಿçÃಯ ಸಂಸ್ಕೃತಿ ಸಂಶೋಧನಾ ವಿವಿಯೂ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದ್ದು,ಇದರಿಂದಾಗಿ ನಮ್ಮ ಆಲ್ದಾಳ ಗ್ರಾಮಕ್ಕೆ ನಾಡಿನಲ್ಲಿ ಬಹುದೊಡ್ಡ ಕೀರ್ತಿ ಬಂದAತಾಗಿದೆ.ಅದಕ್ಕೆ ಕಾರಣರಾದ ರಮೇಶ ದೊರೆ ಅವರನ್ನು ಇಂದು ನಾವೆಲ್ಲರು ಅಭಿನಂದಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು.

    ಅಲ್ಲದೆ ಇನ್ನೂ ಹೆಚ್ಚೆಚ್ಚು ಜನರ ಸೇವೆ ಮಾಡುವ ಶಕ್ತಿ ದೇವರು ಅವರಿಗೆ ಕೊಡಲಿ,ಇನ್ನೂ ರಾಜ್ಯ,ರಾಷ್ಟç ಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಲಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನಪ್ಪ ಸಾಹುಕಾರ,ನ್ಯಾಯವಾದಿ ಬಸವರಾಜ ಅನಸೂರ,ದುರಗಪ್ಪ ಮಾಸ್ತರ ಮಾತನಾಡಿದರು.

    ಗ್ರಾಮಸ್ಥರ ಸನ್ಮಾನ ಸ್ವೀಕರಿಸಿದ ರಮೇಶ ದೊರೆ ಮಾತನಾಡಿ, ನಾನು ಯಾವುದೇ ಪದವಿ,ಪ್ರಶಸ್ತಿಗಾಗಿ ಸಮಾಜ ಸೇವೆ ಮಾಡುತ್ತಿಲ್ಲ.ಆದರೆ ನಮ್ಮಿಂದಾದ ಸಹಾಯವನ್ನು ಜನರಿಗೆ ಮಾಡಬೇಕು,ಸಮಾಜದ ಅಭಿವೃಧ್ಧಿಗೆ ನಮ್ಮಿಂದಾದ ಕೆಲಸ ಮಾಡೋಣ ಎಂದು ಮಾಡುತ್ತಿರುವೆನು.ಮುಂದೆಯೂ ನನ್ನ ಸೇವೆ ಹೀಗೆಯೇ ಮುಂದುವರೆಯಲಿದೆ.ನನ್ನ ಸೇವೆಯನ್ನು ಗುರುತಿಸಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ನನ್ನ ಜವಬ್ದಾರಿಯನ್ನು ಹೆಚ್ಚಿಸಿದೆ.ಅಲ್ಲದೆ ನನಗೆ ಇನ್ನಷ್ಟು ಕೆಲಸ ಮಾಡಲು ಇಂದು ಅಭಿನಂದನೆ ಸಮಾರಂಭದ ಮೂಲಕ ಶಕ್ತಿ ತುಂಬಿರುವ ಇಡೀ ಗ್ರಾಮದ ಎಲ್ಲ ಮುಖಂಡರು ಮತ್ತು ಜನತೆಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿ,ಇನ್ನಷ್ಟು ಹೆಚ್ಚಿನ ಸೇವೆ ಮಾಡಲು ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

    ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್, ಕರವೇ ತಾ.ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ,ರಾಮಸ್ವಾಮಿ ಕಿಲ್ಲೇದಾರ,ನಿಂಗಯ್ಯ ಕಿಲ್ಲೇದಾರ,ಪ್ರಧಾನೆಪ್ಪ ಸಕ್ರಾಪೂರ,ವೈಜನಾಥ ಹುದ್ದಾರ, ಸಂಜೀವಪ್ಪ ಕಟ್ಟಿಮನಿ,ಬಸವರಾಜ ಜಂಬಲದಿನ್ನಿ,ನರಸಿAಗ ಜಮಾದಾರ,ಬಾಬು ಪಟೇಲ್,ಮಲ್ಲಣ್ಣ ರಾಜಾಪುರ,ಮಾನಪ್ಪ ಕಟ್ಟಿಮನಿ, ಲಕ್ಷಿö್ಮÃಪತಿ ದೊರೆ ಹಾಗೂ ನಾಗರಾಳ ಗ್ರಾಮದ ಭೀಮರಾಯ ಠಾಣಾಗುಂದಿ,ತಿಪ್ಪಣ್ಣ ಚೆನ್ನೂರ,ಮಾನಪ್ಪಗೌಡ,ತಿರುಪತಿ ಹುದ್ದಾರ,ಅಯ್ಯಣ್ಣ ಕಟ್ಟಿಮನಿ,ಯಂಕಪ್ಪ ಹುದ್ದಾರ,ಸೋಮು ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ನಿವೃತ್ತ ಶಿಕ್ಷಕ ಭೀಮಣ್ಣ ಹುದ್ದಾರ ನಿರೂಪಿಸಿದರು,ನಿಂಗಯ್ಯ ಕಿಲ್ಲೆದಾರ ವಂದಿಸಿದರು.

    apvc-iconPost Views: 64
  • ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು; ಗಬಸಾವಳಗಿ

    ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು; ಗಬಸಾವಳಗಿ

    ಸತ್ಯಕಾಮ ವಾರ್ತೆ ತಾಳಿಕೋಟೆ :

    ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು. ಹೊರಗಿನ ಆಕರ್ಷಣೆಗೆ ಮತ್ತು ಒತ್ತಡಗಳಿಗೆ ಒಳಗಾಗುತ್ತಿರುವ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಶಿಸ್ತಿನಡಿ ತರಬೇಕಾದರೆ ಶಾಲೆ ಮತ್ತು ಮನೆ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಸಾಹೇಬಗೌಡ ಗಬಸಾವಳಗಿ ಹೇಳಿದರು.

    ತಾಲೂಕಿನ ಕೊಡಗಾನೂರ ಗ್ರಾಮದ ಬೇಲೂರು ಕ್ರಾಸ್ ಹತ್ತಿರ ಇರುವ ಜೆ ಎಸ್ ಎಸ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿರುವ “ಪಾಲಕರ ನಮನ” ಎಂಬ ಪಾಲಕರ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಪೂರ್ವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಈ ಎರಡು ಹಂತಗಳು ವಿದ್ಯಾರ್ಥಿಯ ಕಲಿಕಾ ಜೀವನದಲ್ಲಿ ಪ್ರಮುಖವಾದ ಘಟ್ಟ. ಈ ಹೊತ್ತಿನಲ್ಲಿ ಪಾಲಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಒಟ್ಟಿಗೆ ಕೆಲಸ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಜತೆಗೆ ಒಳ್ಳೆಯ ಸಂಸ್ಕಾರ ನೀಡುವದು ಅನಿವಾರ್ಯತೆ ಇದೆ. ತಂದೆ ತಾಯಿ ಮಕ್ಕಳಿಗೆ ಜನ್ಮ ಕೊಟ್ಟರೆ,ಶಿಕ್ಷಕರು ಮಕ್ಕಳ ಜೀವನದಲ್ಲಿ ದಿಕ್ಕು ತೋರಿಸುವ ದೀಪದಂತೆ. ಅವರು ಮಕ್ಕಳಿಗೆ ಕೇವಲ ಪಾಠಗಳನ್ನು ಮಾತ್ರ ಕಲಿಸುವುದಿಲ್ಲ, ಬದಲಾಗಿ ಅವರ ಭವಿಷ್ಯವನ್ನು ರೂಪಿಸು ಕಾರ್ಯ ಮಾಡುತ್ತಾರೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಸಿದ್ದನಗೌಡ ಗಬಸಾವಳಗಿ, ವಿಜಯಲಕ್ಷ್ಮಿ ಸಾಗಬಸಾವಳಗಿ, ಮಹದೇವ ತಳವಾರ,ವಿನಾಯಕ ಪಟಗಾರ,ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಅನೇಕ ಪಾಲಕರು ಉಪಸ್ಥಿತರಿದ್ದರು.

    apvc-iconPost Views: 43
  • ಕೇಂದ್ರದ ನಿಲುವಿಗೆ ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ ವಿರೋಧ

    ಕೇಂದ್ರದ ನಿಲುವಿಗೆ ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ ವಿರೋಧ

    ಸತ್ಯಕಾಮ ವಾರ್ತೆ ಹುಣಸಗಿ:
    ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರದಾರರ ಸಂಘದಿಂದ ಕೇಂದ್ರ ಸರಕಾರವು ನಿವೃತ್ತ ನೌಕರದಾರರ ಪಿಂಚಣಿಯ ಕುರಿತ ನಿಲುವನ್ನು ವಿರೋಧಿಸಿ, ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

    ಸಂಘದ ತಾಲೂಕು ಅಧ್ಯಕ್ಷ ನಾಗಪ್ಪ ಹಡಿಕ್ಯಾಳ ಹಾಗೂ ಪದಾಧಿಕಾರಿ ಆರ್.ಎಲ್ ಸುಣಗಾರ ಮಾತನಾಡಿ, ಕೇಂದ್ರ ಸರಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಆರ್ಥಿಕ ಬಿಲ್‌ನ್ನು ಮಂಡಿಸುವ ವೇಳೆ ೮ನೇ ವೇತನ ಆಯೋಗದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಮೇಲೆ ದಿ.೧-೪-೨೦೨೬ ರ ನಂತರ ನಿವೃತ್ತಿಯಾಗುವವರಿಗೆ ಮಾತ್ರ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲಾಗುವುದು.

    ಆದರೆ ೧-೪-೨೦೨೬ರ ಪೂರ್ವದಲ್ಲಿ ನಿವೃತ್ತಿಯಾದವರಿಗೆ ಪರಿಷ್ಕರಿಸುವುದು ಕಷ್ಟಕರ ಎಂದು ಹೇಳಿರುವ ಮಾತಿನ ವಿಚಾರವು ದೇಶದ ಎಲ್ಲ ರಾಜ್ಯಗಳ ನಿವೃತ್ತ ನೌಕರರಿಗೆ ಸಂಕಷ್ಟ ತಂದೊಡ್ಡಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.

    ಒಂದು ವೇಳೆ ಈ ಮಾತಿನಂತೆ ಕೇಂದ್ರ ಸರಕಾರವು ನಿರ್ಣಯ ಅಂಗೀಕರಿಸಿದಲ್ಲಿ ನಿವೃತ್ತ ನೌಕರದಾರರಿಗೆ ತುಂಬ ತೊಂದರೆಯಾಗಲಿದೆ. ವೃದ್ದಾಪ್ಯದಲ್ಲಿರುವ ಇವರಿಗೆ ಈ ಸರಕಾರದ ನಿಲುವು ವಿವಿಧ ರೀತಿಯ ಸಂಕಷ್ಟ ತರಲಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಅವರು ಸರಕಾರವು ಕೂಡಲೆ ಈ ವಿಚಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

    ನಂತರ ದೇಶದ ಪ್ರಧಾನಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಹುಣಸಗಿಯ ತಹಶೀಲ್ದಾರರ ಮುಖಾಂತರ ಸಲ್ಲಿಸಲಾಯಿತು.

    ಇದಕ್ಕೂ ಮುಂಚೆ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರರ ಕಚೇರಿಯವರೆಗೂ ನಿವೃತ್ತನೌಕರರು ಮೌನವಾಗಿ ಮೆರವಣಿಗೆ ನಡೆಸಿದರು.

    ಈ ಸಂದರ್ಭ ನಿವೃತ್ತ ನೌಕರದಾರರ ಸಂಘದ ಧನೇಶನಾಯಕ ರಾಠೋಡ್, ಬಸಣ್ಣ ಗೊಡ್ರಿ, ಶಿವಪ್ಪ ಅಂಗಡಿ, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಶಾಂತಗೌಡ ಪಾಟೀಲ್, ಜಗದೀಶ ಶಹಪುರ, ಪ್ರಾಣೇಶ ಕುಲಕರ್ಣಿ, ಹುಸೇನಸಾಬ್, ಬಸಣ್ಣ ಚಿಂಚೋಳಿ, ಈಶ್ವರ ಬಡಿಗೇರ, ಬಿ.ಎಸ್. ಗೂಡಲಮನಿ ಸೇರಿದಂತೆ ಇತರರಿದ್ದರು.

    apvc-iconPost Views: 53
  • ಶಸ್ತ್ರ ಚಿಕಿತ್ಸೆ ಇಲ್ಲದೆ ಐದು ವರ್ಷದ ಮಗುವಿನ ಗಂಟಲಿನಲ್ಲಿದ್ದ ಪ್ಲಾಸ್ಟಿಕ್ ಕ್ಲಿಪ್ ಹೊರ ತೆಗೆದ ವೈದ್ಯರು

    ಶಸ್ತ್ರ ಚಿಕಿತ್ಸೆ ಇಲ್ಲದೆ ಐದು ವರ್ಷದ ಮಗುವಿನ ಗಂಟಲಿನಲ್ಲಿದ್ದ ಪ್ಲಾಸ್ಟಿಕ್ ಕ್ಲಿಪ್ ಹೊರ ತೆಗೆದ ವೈದ್ಯರು

    ಸತ್ಯಕಾಮ ವಾರ್ತೆ ಯಾದಗಿರಿ:

    5 ವರ್ಷದ ಪುಟ್ಟ ಬಾಲಕನ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಸೀರೆಗೆ ಹಚ್ಚುವ ಪಿನ್ನಿನ ಪ್ಲಾಸ್ಟಿಕ್ ಕ್ಲಿಪ್ ವಸ್ತುವೊಂದನ್ನು ನಗರದ ನಾಯ್ಕೋಡಿ ಆಸ್ಪತ್ರೆಯ ಕಿವಿ ಮೂಗು ಗಂಟಲು ರೊಗ ತಜ್ಞ ಡಾ. ರಾಹುಲ್. ಎಸ್ ನಾಯ್ಕೋಡಿ ನೇತೃತ್ವದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಇಲ್ಲದೆ ಸ್ಕೋಪಿ ಮೂಲಕ ಪಿನ್ನಿನ ಪ್ಲಾಸ್ಟಿಕ್ ಕ್ಲಿಪ್ ಅನ್ನು ಯಶಸ್ವಿಯಾಗಿ ಹೊರ ತೆಗೆದು ಮಗುವಿನ ಪ್ರಾಣ ರಕ್ಷಿಸಿದ್ದಾರೆ.

    ಈ ಕುರಿತ ಡಾ. ರಾಹುಲ್ .ಎಸ್ ನಾಯ್ಕೋಡಿ ಮಾತನಾಡಿ ನಮ್ಮ ಆಸ್ಪತ್ರೆಗೆ ‌ತಾಲೂಕಿನ ಗಡ್ಡೆಸೂಗುರ ಗ್ರಾಮದ ಸಾಹೇಬರೆಡ್ಡಿ ಎಂಬುವರ ಐದು ವರ್ಷದ ಪುಟ್ಟ ಬಾಲಕ ಆಕಾಶ್ ಮನೆಯಲ್ಲಿ ಆಟವಾಡುವ ಸಮಯದಲ್ಲಿ ಪಿನ್ನಿನ ಪ್ಲಾಸ್ಟಿಕ್ ಕ್ಲಿಪ್ ನುಂಗಿದ್ದಾನೆ ಎಂದು ದಾಖಲಿಸಿದ್ದರು.

    ಡಾ. ರಾಹುಲ್ .ಎಸ್ ನಾಯ್ಕೋಡಿ
    ಡಾ. ರಾಹುಲ್ .ಎಸ್ ನಾಯ್ಕೋಡಿ

    ನಾವು ಕೆಲವು ಪರೀಕ್ಷೆಗಳನ್ನು ಮಾಡುವ ಮೂಲಕ ಅದನ್ನು ಪತ್ತೆ ಹಚ್ಚಿದೆವು ಅದು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡ ಕಾರಣ ಮಗುವಿನ ಉಸಿರಾಟದ ತೊಂದರೆ ಉಂಟಾಗಿ ಆರೋಗ್ಯದಲ್ಲಿ ಏರುಪೇರಾಗಿತ್ತು ತಕ್ಷಣ ನಮ್ಮ ವೈದ್ಯರ ತಂಡ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಮಗುವನ್ನು ಪ್ರಾಣಪಾಯದಿಂದ ಪಾರು ಮಾಡಿದ್ದೇವೆ, ಪಾಲಕರು ಚಿಕ್ಕ ಮಕ್ಕಳ ಕೈಗೆ ಮತ್ತು ಅವರ ಮುಂದೆ ಸಣ್ಣಪುಟ್ಟ ವಸ್ತುಗಳು ನಾಣ್ಯಗಳನ್ನು ಕೊಡಬಾರದು ಮಕ್ಕಳ ಗಂಟಲಿನಲ್ಲಿ ಪ್ಲಾಸ್ಟಿಕ್ ಅಥವಾ ನಾಣ್ಯದಂತ ವಸ್ತುಗಳು ಸಿಕ್ಕಿಹಾಕಿಕೊಂಡಾಗ ಮಗುವಿನ ಪ್ರಾಣ ಹಾನಿ ಸಂಭವ ಹೆಚ್ಚು ಇರುತ್ತದೆ ಆದ್ದರಿಂದ ಪಾಲಕರು ಜಾಗೃತಿ ವಯಸುವಂತೆ ಹೇಳಿದರು.

    ಈ ಒಂದು ಯಶಸ್ವಿ ಸ್ಕೋಪಿ ಚಿಕಿತ್ಸೆ ಕಾರ್ಯದಲ್ಲಿ ಡಾ. ರಾಹುಲ್ ಎಸ್.ನಾಯ್ಕೋಡಿ, ಅರವಳಿಕೆ ತಜ್ಞ ಡಾ. ಚೇತನ್ ಜೆವುರ, ಡಾ.ರಾಜೇಶ್ವರಿ ಆರ್. ನಾಯ್ಕೋಡಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇದ್ದರು​

    apvc-iconPost Views: 17
  • ರಾಜಾ ವೇಣುಗೋಪಾಲ್ ನಾಯಕರಿಗೆ ನಿಗಮ ಮಂಡಳಿ ಸ್ಥಾನ ನೀಡಿ: ರಂಗನಗೌಡ ಪಾಟೀಲ್ ಮನವಿ

    ರಾಜಾ ವೇಣುಗೋಪಾಲ್ ನಾಯಕರಿಗೆ ನಿಗಮ ಮಂಡಳಿ ಸ್ಥಾನ ನೀಡಿ: ರಂಗನಗೌಡ ಪಾಟೀಲ್ ಮನವಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಸುರಪುರ ವಿಧಾನಸಭಾ ಮತ ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ದಿ: ರಾಜಾ ವೆಂಕಟಪ್ಪನಾಯಕರ ಪುತ್ರರಾದ ಜನಪ್ರಿಯ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯ ಕಾರ್ಯದರ್ಶಿ ರಂಗನಗೌಡ ಪಾಟೀಲ್ ದೇವಕೇರಿ ಒತ್ತಾಯಿಸಿದ್ದಾರೆ. ‌

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಲ್ಯಾಣ ಕರ್ನಾಟಕ ಇತಿಹಾಸದಲ್ಲಿ ಪಕ್ಷ ನಿಷ್ಠೆಗೆ ಹೆಸರು ವಾಸಿಯಾದ ಕುಟುಂಬ ಅಂದರೆ ಅದು ರಾಜಾ ವೆಂಕಟಪ್ಪ ನಾಯಕರ ಕುಟುಂಬ ವೆಂಕಟಪ್ಪ ನಾಯಕರು 4 ಸಲ ಶಾಸಕರಾಗಿ ಸುರಪುರ ಮತ ಕ್ಷೇತ್ರದ ಅಭಿವೃದ್ಧಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತೆ ಕಳೆದ 2023ರ ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆಯಾದರು ಆದರೆ ಅಧಿಕಾರ ವಹಿಸಿಕೊಂಡ ಸ್ವಲ್ಪ ದಿನದಲ್ಲೇ ನಿಧನವಾದರೂ 2024 ರ ಉಪ ಚುನಾವಣೆಯಲ್ಲಿ ಅವರ ಪುತ್ರರಾದ ರಾಜಾ ವೇಣುಗೋಪಾಲ್ ನಾಯಕ ಸ್ಪರ್ಧೆ ಮಾಡಿ ಅತಿ ಹೆಚ್ಚು ಅಂತರದಿಂದ ಶಾಸಕರಾದರು ಆದ್ದರಿಂದ ಹಿಂದುಳಿದ ಭಾಗದ ಅಭಿರುದ್ದಿ ವಿಚಾರವಾಗಿ ಸುರಪುರ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿಗಳಾದ ರಂಗನಗೌಡ ಪಾಟೀಲ್ ದೇವಿಕೇರಿ ಮನವಿ ಮಾಡಿಕೊಂಡಿದ್ದಾರೆ

    apvc-iconPost Views: 17
  • ಮಾಜಿ ಶಾಸಕ ತೆಲ್ಕೂರ್ ಆರೋಪದಲ್ಲಿ ಹುರುಳಿಲ್ಲ : ಶಾಸಕ ಚನ್ನಾರಡ್ಡಿ ಪಾಟೀಲ್ ಸ್ಪಷ್ಟನೆ

    ಮಾಜಿ ಶಾಸಕ ತೆಲ್ಕೂರ್ ಆರೋಪದಲ್ಲಿ ಹುರುಳಿಲ್ಲ : ಶಾಸಕ ಚನ್ನಾರಡ್ಡಿ ಪಾಟೀಲ್ ಸ್ಪಷ್ಟನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ನಗರದ ಡಿವೈಎಸ್ ಪಿ ಅಧಿಕಾರ ಸ್ಚೀಕಾರ ವಿಚಾರಕ್ಕೆ ಸಂಬಂಧಪಟ್ಟಂತೆಯೇ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಾಂಗ್ರೆಸ್ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಸ್ಪಷ್ಟಪಡಿಸಿದ್ದಾರೆ.

    ಇಲ್ಲಿನ ತಮ್ಮ ಕಚೇರಿಯಲ್ಲಿ ಶನಿವಾರ ವಡಗೇರಾ ತಾಲೂಕಿನ 12 ಗ್ರಾಮಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ನಂತರ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಖಾಲಿ ಇರುವ ಹುದ್ದೆಗೆ ರಾಜ್ಯ ಸರ್ಕಾರ, ಗೃಹ ಇಲಾಖೆ ಅಧಿಕಾರಿಗಳನ್ನು ವರ್ಗ ಮಾಡುವುದು ಸಹಜ ಕ್ರೀಯೆ. ಇಲ್ಲಿಗೆ ಪೊಸ್ಟಿಂಗ್ ಪಡೆದವರು ಯಾಕೆ ಇನ್ನೂ ಅಧಿಕಾರ ಸ್ಚೀಕರಿಸಿಲ್ಲ ಎಂಬ ಬಗ್ಗೆ ಇಲಾಖೆ ಮೇಲಾಧಿಕಾರಿಗಳು ಇಲ್ಲವೇ ಡಿವೈಎಸ್ ಪಿಯಾಗಿ ಬರಲಿರುವವರು ಹೇಳಬೇಕೆಂದರು. ಆದರೇ ಇದರಲ್ಲಿ ತಮ್ಮದು ಯಾವುದೇ ಪಾತ್ರವಿಲ್ಲ ಎಂದ ಶಾಸಕರು, ಈ ಹಿಂದೇ ತೆಲ್ಕೂರ್ ಅವರು ಶಾಸಕರಾಗಿ ಕೆಲಸ ಮಾಡಿದ್ದಾರೆ. ಶಾಸಕಾಂಗ, ಕಾರ್ಯಾಂಗ ವ್ಯವಸ್ಥೆ ಅವರಿಗೂ ಗೊತ್ತಿದೆ ಅಂತ ಭಾವಿಸುತ್ತೆನೆ. ಒಬ್ಬ ಶಾಸಕ ತನ್ನ ಮತಕ್ಷೇತ್ರದಲ್ಲಿ ಬೇಕು – ಬೇಡಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಒಂದು ದಿನ ಇಂತಹ ಯಾವುದೇ ವಿಷಯವನ್ನು ತಡೆಯಬಹುದು. ಅವರೇ ಹೇಳುವ ಹಾಗೇ 10-12 ದಿನಗಳಾದವು ಎಂದರೇ, ಇಷ್ಟು ಒತ್ತಡ ಸರ್ಕಾರದ ಮೇಲೆ ಹಾಕಿ ತಡೆಯುವ ಯಾವುದೇ ಬಯಕೆ ಮತ್ತು ಇಚ್ಛೆ ನನಗಿಲ್ಲ. ನಾವು ಆಡಳಿತದಲ್ಲಿವೆ, ಆರೋಪಿಸುವವರು ಪ್ರತಿಪಕ್ಷದಲ್ಲಿ ಇದ್ದಾರೆ. ಸಹಜವಾಗಿ ಇಂತಹ ಸುಳ್ಳು ಆರೋಪ ಮಾಡುತ್ತಾರೆ. ಇದೆಲ್ಲ ಸರ್ಕಾರದ ಮಟ್ಟದಲ್ಲಿ ನಡೆಯುವ ಕೆಲಸವೆಂದು ಶಾಸಕರು ಹೇಳಿದರು. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ನೀಲಕಂಠ ಬಡಿಗೇರ್ ಇದ್ದರು.

    12 ಗ್ರಾಮಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ : ಶಾಸಕ ತುನ್ನೂರು

    ಯಾದಗಿರಿ: ಇಂದು ವಡಗೇರಾ ತಾಲೂಕಿನ ಸುಮಾರು 12 ಗ್ರಾಮ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗಿದೆ. ಈ ಮೂಲಕ ಸಾರ್ವಜನಿಕರ ಕೆಲಸಗಳಿಗೆ ವೇಗ ಸಿಗಲಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ಹೇಳಿದರು. ತಮ್ಮ ಮತಕ್ಷೇತ್ರದಲ್ಲಿ ಈ ಮುಂಚೆ 17 ಲ್ಯಾಪ್ ಟಾಪ್ ವಿತರಿಸಲಾಗಿದೆ.

    ಇ – ಖಾತೆ ಕೆಲಸ ಸೇರಿದಂತೆಯೇ ವಿವಿಧ ಸಾರ್ವಜನಿಕರ ಕೆಲಸಗಳಿಗೆ ಅಧಿಕಾರಿಗಳು ಸ್ಪಂಧಿಸಬೇಕೆಂದರು.

    ವಡಗೇರಾ ತಹಸಿಲ್ದಾರ್, ಸೇರಿದಂತೆಯೇ ಇತರರಿದ್ದರು.

    —-

    apvc-iconPost Views: 61
  • ತಾಯ್ನಾಡಿಗೆ ಮರಳಿದ ಹೊಟ್ಟಿಗೆ ಸನ್ಮಾನ

    ತಾಯ್ನಾಡಿಗೆ ಮರಳಿದ ಹೊಟ್ಟಿಗೆ ಸನ್ಮಾನ

    ಸತ್ಯಕಾಮ ವಾರ್ತೆ ಯಾದಗಿರಿ:
    ಇಂಗ್ಲೆಂಡನಲ್ಲಿ ಒಂದು ವಾರ ಕಾಲ ಆಯೋಜಿಸಿದ ಅಂತರಾಷ್ಟ್ರೀಯ ಸಹಕಾರ ಸಮಾವೇಶದಲ್ಲಿ ಭಾಗವಹಿಸಿ ವಿದೇಶಿ ಪ್ರವಾಸದಿಂದ ತಾಯ್ನಾಡಿಗೆ ಮರಳಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ನವ ದೆಹಲಿಯ ನೆಪೇಡ್ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಸಿದ್ದಪ್ಪ ಎಸ್ ಹೊಟ್ಟಿ ಅವರನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಯಾದಗಿರಿ ವತಿಯಿಂದ ಸನ್ಮಾನಿಸಲಾಯಿತು.

    ತಾಲೂಕು ಅಧ್ಯಕ್ಷರಾದ ವೆಂಕಟೇಶ ಕಲಕಂಭ ಮಾತನಾಡಿ ಕನ್ನಡದ ಏಳಿಗೆಗೆ ಸದಾ ಸಂಘಟನಾತ್ಮಕವಾಗಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಪ್ಪ ಹೊಟ್ಟಿ ಅವರ ಸಮಾಜ ಸೇವೆ ದೊಡ್ಡದು ಅವರು ಇನ್ನು ಹೆಚ್ಚಿನ ಸ್ಥಾನಮಾನಗಳನ್ನ ಪಡೆದುಕೊಂಡು ಕನ್ನಡದ ನಾಡು ನುಡಿ ಹಾಗೂ ಕೃಷಿ ಮತ್ತು ಸಹಕಾರ ಕ್ಷೇತ್ರದಲ್ಲಿ ಜನರ ಸೇವೆಯನ್ನು ಮಾಡಲೆಂದು ಆಶಿಸುತ್ತೇವೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕರ. ಸೋಮಶೇಖರ್ ಮಣ್ಣೂರು. ಬಸವಂತ್ರಾಯಗೌಡ ಮಾಲಿಪಾಟೀಲ. ನೂರಂದಪ್ಪ ಲೇವಡಿ. ನಾಗೇಂದ್ರಪ್ಪ ಜಾಜಿ. ಚೆನ್ನಪ್ಪ ಠಾಣಗುಂದಿ. ದೇವಿಂದ್ರರಡ್ಡಿ ಯಡ್ಡಳ್ಳಿ. ಮಲ್ಲಿಕಾರ್ಜುನ ಹಳ್ಳಿಕಟ್ಟಿ. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಪಾಟೀಲ ಕಿಲ್ಲನಕೇರ ಸಂಘಟನಾ ಕಾರ್ಯದರ್ಶಿ, ಬಸನಗೌಡ ಪಾಟೀಲ ಕೋಶ್ಯಾಧ್ಯಕ್ಷರಾದ ವೀರಭದ್ರಯ್ಯ ಸ್ವಾಮಿ ಜಾಕಮಠ ಪ್ರತಿನಿಧಿ ರಮೇಶ್ ಈಟ್ಟೆ ಉಪಸ್ಥಿತರಿದ್ದರು.

    apvc-iconPost Views: 12
  • ಗರ್ಭೀಣಿಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕುಸಿತ ಶಾಸಕ ಕಂದಕೂರ ಕಳವಳ

    ಗರ್ಭೀಣಿಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕುಸಿತ ಶಾಸಕ ಕಂದಕೂರ ಕಳವಳ

    ಸತ್ಯಕಾಮ ವಾರ್ತೆ ಯಾದಗಿರಿ :

    ಗುರುಮಠಕಲ್ ಮತಕ್ಷೇತ್ರದ ಹಲವು ಆಸ್ಪತ್ರೆಗಳಲ್ಲಿ ದಾಖಲಾದ ಗರ್ಭೀಣಿಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಶೇಕಡವಾರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ೮,೯ ಹೀಗೆ ೧೦ರೊಳಗೆ ಇರುವುದನ್ನು ಕಂಡು ಶಾಸಕ ಶರಣಗೌಡ ಕಂದಕೂರ ಕಳವಳ ವ್ಯಕ್ತಪಡಿಸಿದರು.

    ಗುರುಮಠಕಲ್ ಮತಕ್ಷೇತ್ರದ ಪಿಹೆಚ್‌ಸಿ, ಸಿಹೆಚ್‌ಸಿ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿದ ವಿಷಯ ಕಂಡು ಶಾಸಕರು ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಶೀಘ್ರ ಕಾರಣ ಹುಡುಕು ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ತಾಲೂಕು ಆರೋಗ್ಯ ಅಧಿಕಾರಿ ಹಣಮಂತರೆಡ್ಡಿಯವರಿಗೆ ಸೂಚಿಸಿದರು.

    ಗುರುಮಠಕಲ್ ಮತಕ್ಷೇತ್ರದ ಪಿಹೆಚ್‌ಸಿ, ಸಿಹೆಚ್‌ಸಿ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಭೇಟಿ, ಮೂಲಸೌಕರ್ಯ ಕಲ್ಪಿಸಲು ಸೂಚನೆ
    ಗುರುಮಠಕಲ್ ಮತಕ್ಷೇತ್ರದ ಪಿಹೆಚ್‌ಸಿ, ಸಿಹೆಚ್‌ಸಿ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಭೇಟಿ, ಮೂಲಸೌಕರ್ಯ ಕಲ್ಪಿಸಲು ಸೂಚನೆ

    ಔಷಧಿನೇ ಇಲ್ಲಂದ್ರ ಆಸ್ಪತ್ರೆ ಹ್ಯಾಂಗ್ ನಡೆಸ್ತಿರಿ : 

    ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಕೆಲವು ಕಡೆ ತಜ್ಞ ವೈದ್ಯರಿಲ್ಲ, ವೈದ್ಯರಿದ್ದರೂ ಒಬ್ಬೊರಿಗೆ ಹಲವು ಆಸ್ಪತ್ರೆಗಳು ಪ್ರಭಾರ ಇರುವುದರಿಂದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಯಾವುದೇ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯವಿಲ್ಲವೆಂದು ಜನರು ದೂರಿದರೆ, ನಾಯಿ ಕಡಿತಕ್ಕೆ ಕಳೆದ ೬ ತಿಂಗಳಿAದ ಲಸಿಕೆ ಲಭ್ಯವಿಲ್ಲ, ೪ ತಿಂಗಳಿAದ ಐವಿ ಪ್ಲೂಡ್ಸ್ ಸರಬರಾಜಿಲ್ಲ, ಕೆಲವೊಂದು ಔಷಧಿಗಳು ಆಸ್ಪತ್ರೆಯ ನಿರ್ವಹಣಾ ವೆಚ್ಚದಲ್ಲಿ ಖರೀದಿ ಮಾಡುತ್ತೇವೆ ಹೀಗೆ ಸಾಲು ಸಾಲು ಸಮಸ್ಯೆಗಳು ಗುರುಮಠಕಲ್ ಮತಕ್ಷೇತ್ರದ ಹಲವು ಆಸ್ಪತ್ರೆಗಳಲ್ಲಿ ಕಂಡು ಬಂದವು.

    ಕAಡು ಬಂದ ಹಲವು ದೃಶ್ಯಗಳನ್ನು ಕಂಡು ದಂಗಾದ ಶಾಸಕ ಇದೇ ರೀತಿ ಆಸ್ಪತ್ರೆಗಳಲ್ಲಿ ಔಷಧಿನೇ ಇಲ್ಲಂದ್ರ ಆಸ್ಪತ್ರೆ ಹ್ಯಾಂಗ್ ರೀ ನಡೆಸ್ತೀರಿ ಎಂದು ಡಿಹೆಚ್‌ಒ ಅವರನ್ನು ತರಾಟೆಗೆ ತೆಗೆದುಕೊಂಡರು.

    ಸಮಜಾಯಿಸಿ ನೀಡಲು ಬಂದ ತಾಲೂಕು ಆರೋಗ್ಯ ಅಧಿಕಾರಿ ಹಣಮಂತರಡ್ಡಿಯವರಿಗೆ ಸುಮ್ನೆ ಇರಪ್ಪ ನಾ ಬಂದಾಗ ಈ ಸಮಸ್ಯೆ ಗೊತ್ತಾಯಿತು. ಇಷ್ಟು ದಿನ ನಿವೆಲ್ಲ ಏನ್ರಿ ಮಾಡಿದ್ದೀರಿ, ಯಾವಗಾದರೂ ಬಂದು ಆಸ್ಪತ್ರೆಗೆ ವಿಸಿಟ್ ಮಾಡಿದ್ದೀರಾ, ಮಾಡಿದ್ದರೆ ಎಂದೋ ಈ ಸಮಸ್ಯೆ ಬಗೆ ಹರಿತಿತ್ತು. ಆಸ್ಪತ್ರೆಗಳಲ್ಲಿ ಇಷ್ಟೊಂದು ಸಮಸ್ಯೆ ಇದೆ ನೀವೇನ್ರಿ ಮಾಡ್ತಿರಿ ಎಂದು ಗದರಿದರು.

    ತದ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಸೇರಿದಂತೆ ಹಲವು ಮೇಲಾಧಿಕಾರಿಗಳಿಗೆ ಸ್ಥಳದಿಂದಲೇ ಪೋನ್ ಸಂಪರ್ಕ ಮಾಡಿ ವಿಷಯದ ತೀವ್ರತೆ ಮತ್ತು ಸಮಸ್ಯೆಗಳ ಪರಿಹರಿಸುವಂತೆ ಕೋರಿದರು.

    ಕೋಟಗೇರಾ ಆಸ್ಪತ್ರೆಗೆ ಭೇಟಿ :

    ಮತಕ್ಷೇತ್ರದ ಕೋಟಗೇರಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಟಾಫ್ ನರ್ಸ್ಗಳ ವರ್ತನೆ, ಫಾರ್ಮಾಸಿಸ್ಟ್ ನಿರ್ಲಕ್ಷö್ಯ ಕಂಡು ಕೆರಳಿದ ಶಾಸಕರು ಕೂಡಲೇ ಇಬ್ಬರಿಗೆ ನೊಟಿಸ್ ನೀಡುವಂತೆ ಸೂಚಿಸಿದರು.

    ಇದೇ ವೇಳೆ ಆಸ್ಪತ್ರೆಯಲ್ಲಿನ ರಜಿಸ್ಟರ್‌ನಲ್ಲಿ ಗರ್ಭೀಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು. ನಂತರ ಆಸ್ಪತ್ರೆ ಸ್ವಚ್ಚತೆ ಕಾಪಾಡಬೇಕು, ಕಾಂಪೌಡ್ ಒಳಗೆ ಸಿಸಿ ರಸ್ತೆ, ಗಾರ್ಡ್ನ್ ನಿರ್ಮಿಸಲು ಕ್ರಮಕೈಗೋಳ್ಳಬೇಕು, ಜನರು ಆಸ್ಪತ್ರೆಗೆ ರೋಗ ವಾಸಿ ಮಾಡಿಕೊಳ್ಳಲು ಬರಬೇಕು ರೋಗ ಹಚ್ಚಿಕೊಂಡು ಹೋಗುವಂತಾಗಬಾರದು ಮತ್ತೊಮ್ಮೆ ಬರುವ ವೇಳೆಗೆ ಎಲ್ಲಾ ಸರಿಯಾಗಬೇಕು ಇಲ್ಲಂದ್ರ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

     

    ಗಾಜರಕೋಟ್ ಆಸ್ಪತ್ರೆಗೆ ಭೇಟಿ :

    ಮತಕ್ಷೇತ್ರದ ಗಾಜರಕೋಟ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಯಿ ಕಡಿತ ಲಸಿಕೆ, ಐವಿ ಪ್ಲೂಡ್ಸ್ ಕೊರತೆ ಗಮನಕ್ಕೆ ಬಂದಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಡಿಹೆಚ್‌ಒಗೆ ಸೂಚನೆ ನೀಡಿದರು. . ಇದೇ ವೇಳೆ ಆಸ್ಪತ್ರೆಯಲ್ಲಿನ ರಜಿಸ್ಟರ್‌ನಲ್ಲಿ ಗರ್ಭೀಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು. ಆಸ್ಪತ್ರೆ ಸಿಬ್ಬಂದಿಗಳು ಜನರು ಆಸ್ಪತ್ರೆ ಕಾಂಪೌAಡ್ ಒಳಗೆ ಟ್ರಾಕ್ಟರ್ ನಿಲ್ಲಿಸುವುದು, ಮೂತ್ರ ವಿಸರ್ಜನೆ ಮಾಡುವುದು ಮಾಡುತ್ತಿದ್ದು ಕ್ರಮಕೈಗೊಳ್ಳಬೇಕೆಂದು ತಿಳಿಸಿದಾಗ ಸ್ಥಳದಲ್ಲಿದ್ದ ಪಿಡಿಒಗೆ ಕೂಡಲೇ ಪೊಲೀಸ್ ಸ್ಟೇಶನ್‌ಗೆ ಕಂಪ್ಲೆಟ್ ಕೊಟ್ಟು ಬಿಡಿ ಎಂದು ಸೂಚಿಸಿದರು.

     

    ಗುರುಮಠಕಲ್ ಆಸ್ಪತ್ರೆಗೆ ಭೇಟಿ :

    ಗುರುಮಠಕಲ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ . ಆಸ್ಪತ್ರೆಯಲ್ಲಿನ ರಜಿಸ್ಟರ್‌ನಲ್ಲಿ ಗರ್ಭೀಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು. ಜನರು ಆಸ್ಪತ್ರೆ ಅವ್ಯವಸ್ಥೆ ಕುರಿತು ಹಲವು ದೂರುಗಳು ಬರುತ್ತಿದ್ದು, ಎಚ್ಚರದಿಂದ ಇರಿ, ಆಸ್ಪತ್ರೆಗೆ ಬಡವರು ರ‍್ತಾರೆ ಅವರನ್ನು ಮಾನವೀಯತೆ ಇಂದ ಕಾಣಿ, ನರ್ಸ್ಗಳು ಜನರೊಡನೆ ಸೌಜನ್ಯದಿಂದ ವರ್ತಿಸದಿದ್ದಲ್ಲಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು. ಆಸ್ಪತ್ರೆ ಸ್ವಚ್ಚತೆಗೆ ಹೆಚ್ಚಿನ ಗಮನ ನೀಡಬೇಕು, ಈ ಆಸ್ಪತ್ರೆಯನ್ನು ೧೦೦ ಬೆಡ್ ಆಸ್ಪತ್ರೆಗೆ ಏರಿಸಲು ಕ್ರಮವಹಿಸಲಾಗಿದ್ದು, ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ನಿವಾರಣೆಯಾಗಲಿದೆ ಎಂದರು.

    ಸೈದಾಪುರ ಆಸ್ಪತ್ರೆಗೆ ಭೇಟಿ : ಸೈದಾಪೂರ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಆಸ್ಪತ್ರೆ ಸ್ವಚ್ಚತೆ ಪರಿಶೀಲಿಸಿದರು. ಇದೇ ವೇಳೆ ಆಸ್ಪತ್ರೆಯಲ್ಲಿನ ರಜಿಸ್ಟರ್‌ನಲ್ಲಿ ಗರ್ಭೀಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು.

    ತದನಂತರ ಆಸ್ಪತ್ರೆ ಸಿಬ್ಬಂದಿಗಳ ಕ್ವಾಟರಸ್ ವೀಕ್ಷಿಸಿ ಈ ಭಾಗದಲ್ಲಿಯೇ ಇಷ್ಟೊಂದು ಅತ್ಯುತ್ತಮ ಕ್ವಾಟರಸ್ ನಮ್ಮ ಕೈಯಿಂದಲೇ ಮಾಡಿಸಿದ್ದೇನೆ, ನೀವು ಕೇವಲ ಜನರ ಸೇವೆ ಮಾಡಿ ಸಾಕು ನಿಮಗೇ ಯಾವ ರೀತಿಯ ಸೌಲಭ್ಯ ಬೇಕು ನಾವ್ ಕೊಡ್ತಿವಿ, ಜನರ ದೂರು ಬರದಂತೆ ಗಮನವಹಿಸಬೇಕು ಎಂದು ಸೂಚಿಸಿದರು.

    ಮಲ್ಹಾರ ಆಸ್ಪತ್ರೆಗೆ ಭೇಟಿ : ಮತಕ್ಷೇತ್ರದ ಮಲ್ಹಾರ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಅಲ್ಲಿನ ಸ್ವಚ್ಚತೆಗೆ ಶಬ್ಬಾಸ್ ನೀಡಿದರು. ಇದೇ ವೇಳೆ ಆಸ್ಪತ್ರೆಯಲ್ಲಿನ ರಜಿಸ್ಟರ್‌ನಲ್ಲಿ ಗರ್ಭೀಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು.

    ಜನರ ಸಮಸ್ಯೆ ಆಲಿಸಿ ಜನರು ಆಸ್ಪತ್ರೆ ಸಿಬ್ಬಂದಿ ವರ್ತನೆ ಸರಿ ಇಲ್ಲವೆಂದು ದೂರಿದಾಗ ಕೆರಳಿದ ಶಾಸಕರು ನೀವು ಎಷ್ಟೇ ಒಳ್ಳಯವರಾಗಿ ಕೆಲಸ ಮಾಡಿದರೂ ಜನರೊಗೆ ಉತ್ತಮ ನಡವಳಿಕೆ ಇಲ್ಲಂದ್ರ ನೀವು ಮಾಡಿದ ಕೆಲಸ ವ್ಯರ್ಥ, ಆಸ್ಪತ್ರೆಗೆ ಬರುವವರೊಮದಿಗೆ ಸೌಜನ್ಯದಿಂದ ವರ್ತನೆ ಮಾಡಬೇಕು ಎಂದರು. ನಂತರ ಆಸ್ಪತ್ರೆ ಹಳೆಯದಾಗಿರುವುದರಿಂದ ಹೊಸ ಆಸ್ಪತ್ರೆ ನಿರ್ಮಿಸಬೇಕಾ ಅಥವಾ ಹೆಚ್ಚುವರಿ ಕೋಣೆ ನಿರ್ಮಿಸಿಬೇಕಾ ವರದಿ ಕೊಡಿ ಎಂದು ಡಿಹೆಚ್‌ಒ ರವರಿಗೆ ಸೂಚಿಸಿದರು.

     

    ೯ ಆರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ

    ಗುರುಮಠಕಲ್ ಮತಕ್ಷೇತ್ರದ ಬಂದಳ್ಳಿ, ಬೆಳಗುಂದಿ, ಅಚ್ಚೋಲಾ, ಸೈದಾಪುರ, ಮಾಧ್ವಾರ, ಅಜಲಾಪೂರ, ವಂಕಸAಬ್ರ, ಮೊಗದಂಪೂರ, ಕಂದಕೂರ ಹೀಗೆ ೯ ಗ್ರಾಮಗಳಲ್ಲಿ ತಲಾ ೬೫ ಲಕ್ಷ ವೆಚ್ಚದಲ್ಲಿ ಆರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ. ಈ ಎಲ್ಲಾ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.

    -ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್

     

    ೬ ತಿಂಗಳಿAದ ನಾಯಿ ಕಡಿತ ಲಸಿಕೆ ಸರಬರಾಜಿಲ್ಲ

    ನಾಯಿ ಕಡಿತವೆಂದು ಬರುವ ರೋಗಿಗಳಿಗೆ ಚಿಕಿತ್ಸೆಗಾಗಿ ಸರ್ಕಾರ ಕಳೆದ ೬ ತಿಂಗಳಿAದ ಲಸಿಕೆ ಸರಬರಾಜು ಮಾಡಿಲ್ಲವೆಂದರೆ ಏನ್ರಿ ಅರ್ಥ ನಾಯಿ ಕಡಿದು ಜನರು ಸತ್ತರೆ ಏನ್ರಿ ಮಾಡ್ತಿರಾ, ಅವರ ಜೀವಕ್ಕೆ ಯಾವ ಬೆಲೆ ಇಲ್ಲವಾ ಎಂದು ಶಾಸಕ ಶರಣಗೌಡ ಕಂದಕೂರ ಆಕ್ರೋಶ ವ್ಯಕ್ತಪಡಿಸಿದರು.

    ಗಾಜರಕೋಟ್ ಗ್ರಾಮದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಳಿ ಬಂದ ಸಮಸ್ಯೆಗೆ ಕೆರಳಿ ಕೆಂಡವಾದ ಶಾಸಕ ಕಂದಕೂರ ಆಸ್ಪತ್ರೆಯಿಂದಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ರವರಿಗೆ ಪೋನ್ ಮಾಡಿ ನಾಯಿ ಕಡಿತಕ್ಕೆ ಚಿಕಿತ್ಸೆ ಲಭ್ಯವಿಲ್ಲ, ಕಳೆದ ೬ ತಿಂಗಳಿAದ ಲಸಿಕೆ ಸರಬರಾಜಿಲ್ಲವೆಂದು ಗಮನಕ್ಕೆ ತಂದು ಕೂಡಲೇ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

    ಇದಕ್ಕೆ ಸ್ಪಂದಿಸಿದ ಹರ್ಷಗುಪ್ತ ಕೂಡಲೇ ಕ್ರಮಕೈಗೊಳ್ಳುವುದಾಗಿ ಶಾಸಕರಿಗೆ ಭರವಸೆ ನೀಡಿದರು.

     

     

    ಎಲ್ಲಾ ಆಸ್ಪತ್ರೆಗಳಿಗೆ ಆರ್‌ಒ ಪ್ಲಾಂಟ್

    ಗುರುಮಠಕಲ್ ಮತಕ್ಷೇತ್ರದ ಎಲ್ಲಾ ಆಸ್ಪತ್ರೆಗಳಿಗೆ ಸಿಸಿ ರಸ್ತೆ, ಕಾಂಪೌAಡ್, ಮೂಲಸೌಕರ್ಯ ಜೊತೆಗೆ ಆರ್‌ಒ ಪ್ಲಾಂಟ್‌ಗಳನ್ನು ನಿರ್ಮಿಸಿಕೊಡಲಾಗುವುದು, ಅವಶ್ಯಕತೆ ಇರುವ ಆಸ್ಪತ್ರೆಗಳ ಪಟ್ಟಿ ಮಾಡಿ ಕೊಡಬೇಕು, ಎಲ್ಲಾ ಆಸ್ಪತ್ರೆಗಳ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ಸಾಕಷ್ಟು ಅನುದಾನ ನೀಡುವುದಾಗಿ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.

     

    ಆಸ್ಪತ್ರೆಗಳಲ್ಲಿ ಐವಿ ಪ್ಲೂಡ್ಸ್ ಲಭ್ಯವಿಲ್ಲ

    ಕಳೆದ ೪ ತಿಂಗಳಿAದ ಆಸ್ಪತ್ರೆಗಳಲ್ಲಿ ಐವಿ ಪ್ಲೂಡ್ಸ್ ಲಭ್ಯವಿಲ್ಲ ಹಿಂಗಾದರೆ ಹೇಗೆ ಆಸ್ಪತ್ರೆ ನಡೆಸ್ತಿರಿ, ಇದರಿಂದ ಜನರಿಗೆ ಹೇಗೆ ನೀವು ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವೆಂದು ಡಿಹೆಚ್‌ಒ ವಿರುದ್ದ ಶಾಸಕರು ಗರಂ ಆದರು. ಇದಕ್ಕೆ ಸಮಜಾಯಿಸಿ ನೀಡಿದ ಡಿಹೆಚ್‌ಒ ತಕ್ಷಣದಿಂದಲೇ ಮೇಲಾಧಿಕಾರಿಗಳ ಜೊತೆ ಮಾತನಾಡಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

     

    ಗುರುಮಠಕಲ್ ಕ್ಷೇತ್ರದ ನಸಲವಾಯಿ, ಬಾಡಿಯಾಳಕ್ಕೆ ಹೊಸ ಆಸ್ಪತ್ರೆ

    ಗುರುಮಠಕಲ್ ಮತಕ್ಷೇತ್ರದ ನಸಲವಾಯಿ ಮತ್ತು ಬಾಡಿಯಾಳ ಗ್ರಾಮದಲ್ಲಿ ಹೊಸ ಆಸ್ಪತ್ರೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆಗೆ ಕ್ರಮಕೈಗೊಳ್ಳಲಾಗುವುದು, ಇದರ ಜೊತೆಗೆ ಗುರುಮಠಕಲ್ ಮತಕ್ಷೇತ್ರದ ಎಲ್ಲಾ ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಲು ಪಣತೊಟ್ಟಿದ್ದು, ತಾಲೂಕಿನ ಎಲ್ಲಾ ಆಸ್ಪತ್ರೆಗಳ ಮೂಲಸೌಕರ್ಯಗಳ ಪಟ್ಟಿ ಮಾಡಿ ವರದಿ ನೀಡುವಂತೆ ತಾಲೂಕು ಆರೋಗ್ಯ ಅಧಿಕಾರಿ ಹಣಮಂತರೆಡ್ಡಿಯವರಿಗೆ ಸೂಚನೆ ನೀಡಿದರು.

     

    ಕೋಟಗೇರಾ ಫಾರ್ಮಾಸಿಸ್ಟ್ಗೆ ನೊಟೀಸ್

    ಮಕ್ಕಳ ನಿಯಂತ್ರಣ ಯೋಜನೆ ಬಗ್ಗೆ ಮಾಹಿತಿ ನೀಡುವಂತೆ ಶಾಸಕರು ಕೇಳಿದಾಗ ಪ್ಯಾರಾಸೆಟಾಮಾಲ್ ಔಷಧಿ, ಕೊಡುವುದು, ಅವಧಿ ಮುಗಿಯುವ ಹಂತದಲ್ಲಿರುವ ಮಾತ್ರೆಗಳು ಆಸ್ಪತ್ರೆಗಳಲ್ಲಿಟ್ಟು ದಿನಾಂಕ ಗಮನಿಸದೇ ಮೇಲಾಧಿಕಾರಿಗಳಿಗೆ ವರ್ತಮಾನದ ಕುರಿತು ಮಾಹಿತಿ ನೀಡದೇ ನಿರ್ಲಕ್ಷö್ಯ ವಹಿಸಿದ ಕೋಟಗೇರಾ ಫಾರ್ಮಾಸಿಸ್ಟ್ಗೆ ನೊಟೀಸ್ ನೀಡುವಂತೆ ಶಾಸಕ ಕಂದಕೂರ ಸೂಚನೆ.

    apvc-iconPost Views: 202
  • ಸಮಾಜದ ಏಳಿಗೆಗೆ ಶ್ರಮಿಸಿದ ಮಹಾಶರಣ ಅಪ್ಪಣ್ಣ : ದುರುಗಣ್ಣ ನಾಯಕ

    ಸಮಾಜದ ಏಳಿಗೆಗೆ ಶ್ರಮಿಸಿದ ಮಹಾಶರಣ ಅಪ್ಪಣ್ಣ : ದುರುಗಣ್ಣ ನಾಯಕ

    ಸತ್ಯಕಾಮ ವಾರ್ತೆ ಸಿರವಾರ : 

    ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದರು ಎಂದು ಪಟ್ಟಣ ಪಂಚಾಯತಿ ಸದಸ್ಯ ಸೂರಿ ದುರುಗಣ್ಣ ನಾಯಕ ಹೇಳಿದರು.

    ಪಟ್ಟಣ ಪಂಚಾಯತಿ ಕಾರ್ಯಲಯದಲ್ಲಿ ಗುರುವಾರ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗರವಾಗದಂತೆ ಕಾರ್ಯನಿರ್ವಹಿಸುತ್ತಿದ್ದರು. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ ಎಂದರು.

    ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ವೈ ಭೂಪನಗೌಡ, ಪ.ಪಂ ಸದಸ್ಯರದ ಸೇನಅಲಿ, ಕೃಷ್ಣ ನಾಯಕ, ಮುಖಂಡರಾದ ಈಶಪ್ಪ ಹೂಗಾರ, ಚಂದ್ರಶೇಖರ ಹಡಪದÀ, ಬಸವರಾಜ ಹರವಿ, ಶರಣಪ್ಪ ನಾಗನೂರ, ಬಸವರಾಜ ಹೀರಾ, ಬಸವರಾಜ ಬೂದೂರು, ಭೀಮಣ್ಣ, ಮಲ್ಲಿಕಾರ್ಜುನ, ಅಮರೇಶ, ಮೌನೇಶ, ಆನಂದ ನವಲಕಲ್, ವೀರೇಶ, ಯಮುನಪ್ಪ, ಸಿಬ್ಬಂದಿಗಳಾದ ಹಂಪಯ್ಯ, ಚಾಂದ್‌ಸಾಬ್ ಇತರರು ಇದ್ದರು.

    apvc-iconPost Views: 31