Blog

  • ರೈತರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲಾ-ಸಂಗಮೇಶ ಸಗರ

    ರೈತರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲಾ-ಸಂಗಮೇಶ ಸಗರ

    • ಬೂದಿಹಾಳ ಪೀರಾಪೂರ ಏತ ನೀರಾವರಿ ಹೋರಾಟಕ್ಕೆ ರೈತ ಸಂಘಟನೆಯ ಬೆಂಬಲ

    ಸತ್ಯಕಾಮ ವಾರ್ತೆ ತಾಳಿಕೋಟೆ:

    ಬೂದಿಹಾಳ ಪೀರಾಪೂರ ಏತ ನೀರಾವರಿ ಕಾಮಗಾರಿಗೆ ಸಂಬಂದಿಸಿ ಕಳೆದ ೪ ದಿನಗಳಿಂದಲೂ ರೈತ ಸಂಘಟನೆಯ ನೇತೃತ್ವದಲ್ಲಿ ಸಾವಿರಾರು ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಾ ಸಾಗಿದರೂ ಯಾವೊಬ್ಬ ಸರ್ಕಾರದ ಜನಪ್ರತಿನಿಧಿ ಬೆಟ್ಟಿ ನೀಡದಿರುವದು ಅವರ ರೈತಪರ ಕಾಳಜಿ ಎತ್ತಿ ತೋರಿಸುತ್ತಿದೆ ರೈತರೆಲ್ಲರೂ ಒಗ್ಗಟ್ಟಾಗಿ ದ್ವನಿಗೂಡಿಸದಿದ್ದರೆ ರೈತ ಕುಲಕ್ಕೆ ಉಳಿಗಾಲವಿಲ್ಲಾವೆಂದು ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಅವರು ಹೇಳಿದರು.

    ಮಂಗಳವಾರರಂದು ತಾಲೂಕಿನ ಕೊಡಗಾನೂರ ಕ್ರಾಸ್‌ನಲ್ಲಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಕೊನೆ ಹಂತದ ಎಫ್.ಐ.ಸಿ (ಹೊಲ ಗಾಲುವೆ) ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ೩೮ ಗ್ರಾಮಗಳ ರೈತಾಪಿ ಜನರು ನಡೆಸಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬೆಟ್ಟಿ ನೀಡಿ ತಮ್ಮ ರೈತ ಸಂಘ ಹಸಿರುಸೇನೆ ಸಂಘಟನೆಯ ವತಿಯಿಂದ ಬೆಂಬಲ ಸೂಚಿಸಿ ಮಾತನಾಡುತ್ತಿದ್ದ ಅವರು ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಕಾಮಗಾರಿಗೂ ಈಗಾಗಲೇ ಅವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ ಓರಪ್ಲೋ ಡಬ್ಬಿಗಳನ್ನು ಎಲ್ಲಿ ಕೂಡಿಸಬೇಕಿತ್ತು ಅಲ್ಲಿ ಕೂಡಿಸಿಲ್ಲಾ ರಾಜಕೀಯ ಒತ್ತಡಕ್ಕೆ ಮಣಿದು ಮನಸ್ಸಿಚ್ಚೆಯಂತೆ ಕೂಡಿಸಲಾಗಿದೆ ಇದರಿಂದ ರೈತರ ಜಮೀನುಗಳಿಗೆ ನೀರು ಬರುವದು ಕಡಿಮೆ ಎಂದು ಹೇಳಲಾಗುತ್ತಿದೆ ದೇಶಕ್ಕೆ ಅನ್ನ ನೀಡುವ ರೈತರ ಭವಣೆಗೆ ಸರ್ಕಾರಗಳು ಸ್ಪಂದಿಸಬೇಕು ಆದರೆ ಈಗೀನ ಕಾಂಗ್ರೇಸ್ ಸರ್ಕಾರ ಗ್ಯಾರೆಂಟಿ ನಿದ್ರೆಯಲ್ಲಿ ಜಾರಿದೆ ಅವರಿಗೆ ಯಾರೂ ಕಾಣುತ್ತಿಲ್ಲಾವೆಂದು ಹರಿಹಾಯ್ದ ಅವರು ರೈತರಿಗೆ ಯಾವುದೇ ಜಾತಿ ಪಕ್ಷವೆಂಬುದು ಇಲ್ಲಾ ಅವರಿಗೆ ಕೇವಲ ಬೆಳೆ ಬೆಳೆಯಬೇಕು ಎಂಬ ಚಿಂತೆಯಲ್ಲಿರುತ್ತಾರೆ ಬೂದಿಹಾಳ-ಫೀರಾಪೂರ ಯೋಜನೆಗೆ ಸಂಬಂದಿಸಿ ಡಬ್ಬಿಗಳು ಇನ್ನೂ ೫೦೦ ಕ್ಕೂ ಅಧಿಕ ಕೂಡಬೇಕಾಗಿದೆ ಈಗಾಗಲೇ ಹಾಕಲಾದ ಪೈಪುಗಳು ಪಿಡಬ್ಲುಡಿ ರಸ್ತೆಯಲ್ಲಿ ಹಾಕಿದ್ದಾರೆ ರೈತರೆಲ್ಲರೂ ಒಗ್ಗೂಡಿ ದ್ವನಿಗೂಡಿಸಬೇಕೆಂದು ಅವರು ಇಂಡಿ ಪಟ್ಟಣಕ್ಕೆ ಮುಖ್ಯಮಂತ್ರಿಗಳು ಬೆಟ್ಟಿ ನೀಡಿದಾಗ ನಮ್ಮ ರೈತ ಸಂಘದ ವತಿಯಿಂದ ಬೂದಿಹಾಳ-ಫೀರಾಪೂರ ಏತನೀರವಾರಿ ಯೋಜನೆಯ ಮುಕ್ತಾಯ ಹಂತದ ಕಾಮಗಾರಿ ಕೈಗೊಳ್ಳಲು ಮನವಿ ಸಲ್ಲಿಸಿದ್ದೇವೆ ಕೂಡಲೇ ಸ್ಪಂದಿಸುವ ಬರವಸೆ ನೀಡಿದ್ದಾರೆ ಅವರು ನೀಡಿದ ಬರವಸೆ ಬರವಸೆಯಾಗಿ ಉಳಿಯದಂತೆ ನಾವೇಲ್ಲಾ ರೈತರ ಉಗ್ರ ಸ್ವರೂಪದ ಹೋರಾಟಕ್ಕೆ ಅಣಿಯಾಗಬೇಕೆಂದರು.

    ಇನ್ನೋರ್ವ ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘಟನೆ ಶ್ರೀಮತಿ ಸುಜಾತಾ ಅಸ್ಕಿ ಅವರು ಮಾತನಾಡಿ ಕಾಂಗ್ರೇಸ್ ಸರ್ಕಾರವು ತನ್ನ ಅಂಗೈ ತೋರಿಸಿದರೆ ಅವಲಕ್ಷಣ ಕಳೆದುಕೊಳ್ಳಲಿದೆ ಬ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ರೈತರ ಸಂಕಷ್ಟವೆಂಬುದು ಕಾಣುತ್ತಿಲ್ಲಾ ಕಳೆದ ೪ ದಿನಗಳಿಂದ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಮುಕ್ತಾಯ ಹಂತದ ಕಾಮಗಾರಿ ಕೈಗೊಳ್ಳಲು ಸಾವಿರಾರು ರೈತರು ಹೋರಾಟಕ್ಕೆ ಇಳಿದಿದ್ದರೂ ಕೂಡಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಿದ್ರೆಗೆ ಜಾರಿರುವದು ಅವರ ನಿಸ್ಕಾಳಜಿ ತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದ ಅವರು ಕೂಡಲೇ ಸರ್ಕಾರದ ಜನಪ್ರತಿನಿಧಿಗಳು ಸ್ಪಂದಿಸಿ ಹೋರಾಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂದರು.

    ಇನ್ನೋರ್ವ ರೈತ ಮುಖಂಡ ಪ್ರಭುಗೌಡ ಮದರಕಲ್ಲ, ಹಣಮಗೌಡ ಗೂಗಲ್ಲ, ಚಿನ್ನಪ್ಪಗೌಡ ಮಾಳಿ, ರವಿಗೌಡ ಪಾಟೀಲ ಅವರು ಮಾತನಾಡಿ ಈ ಭಾಗದ ರೈತರ ಜೀವನಾಡಿಯಾಗಲಿರುವ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕಾಗಿದೆ ರೈತರು ಕೈಗೊಂಡಿರುವ ಹೋರಾಟಕ್ಕೆ ನಮ್ಮ ಬೆಂಬಲ ಅವರಿಗೆ ಸದಾ ವಿದೆ ಎಂದರು.

    ಅಖಂಡ ಕರ್ನಾಟಕ ರೈತ ಸಂಘಟನೆಯ ರಾಜ್ಯ ಪ್ರದಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿದರು.

    ಈ ಸಮಯದಲ್ಲಿ ರೈತ ಮುಖಂಡ ಪ್ರಭುಗೌಡ ಬಿರಾದಾರ, ಶಿವಪುತ್ರಪ್ಪ ಚೌದ್ರಿ, ಗುರುರಾಜ ಪಡಶೆಟ್ಟಿ, ರಾಯಪ್ಪಗೌಡ ಪಾಟೀಲ, ಸಾಹೇಬಗೌಡ ಯಾಳಗಿ, ಬಸನಗೌಡ ಯಾಳವಾರ, ಬಸನಗೌಡ ಚೌದ್ರಿ, ನಾನಾಗೌಡ ಬಿರಾದಾರ, ಎಚ್.ಎನ್.ಬಿರಾದಾರ, ಸುರೇಶಕುಮಾರ ಇಂಗಳಗೇರಿ, ಡಾ.ಪ್ರಭುಗೌಡ ಬಿರಾದಾರ(ಅಸ್ಕಿ), ಮಹಾದೇವ ಅಸ್ಕಿ, ಪರಶುರಾಮ ತಳವಾರ, ಪರಶುರಾಮ ನಾಲತವಾಡ, ಬಾಬುಗೌಡ ಬಿರಾದಾರ, ಚಿದುಗೌಡ ಬಿರಾದಾರ, ಶಂಕ್ರಗೌಡ ದೇಸಾಯಿ, ಬಸವರಾಜ ಹೊಸಳ್ಳಿ, ಡಿಎಸ್‌ಎಸ್ ಅಂಬೇಡ್ಕರ್ ದಾರಿ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜ ಕಟ್ಟಿಮನಿ, ಮುಖಂಡರುಗಳಾದ ಶಿವಶಂಕರ ಕಟ್ಟಿಮನಿ, ಸಿದ್ದಪ್ಪ ಹೊಸಮನಿ, ಶಾಂತಪ್ಪ ಕೊಡಗಾನೂರ, ಸಿದ್ದಪ್ಪ ಬಸರಿಕಟ್ಟಿ, ಬಸವರಾಜ ತಳವಾರ, ಕಾಶೆಪ್ಪ ತೊಗರಿ, ಒಳಗೊಂಡು ನಾವದಗಿ, ನೀರಲಗಿ, ಗೊಟಗುಣಕಿ, ಗುಂಡಕನಾಳ, ಫೀರಾಪೂರ, ಕಾರನೂರ, ಕೊಡಗಾನೂರ, ಅಸ್ಕಿ, ಗ್ರಾಮ ಒಳಗೊಂಡು ೩೮ ಗ್ರಾಮಗಳ ರೈತಾಪಿ ಜನರು ಪಾಲ್ಗೊಂಡಿದ್ದರು.

    apvc-iconPost Views: 34
  • ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಎಲ್ಲಾ ಫಲಾನುಭವಿಗಳಿಗೆ ನೀಡಿ:ಬಸವರಾಜಪ್ಪ ಭಾಗ್ಲಿ

    ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಎಲ್ಲಾ ಫಲಾನುಭವಿಗಳಿಗೆ ನೀಡಿ:ಬಸವರಾಜಪ್ಪ ಭಾಗ್ಲಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ
    ಸಮರ್ಪಕವಾಗಿ ತಲುಪಿಸಬೇಕು ಹಾಗೂ ಸೌಲಭ್ಯ ವಂಚಿತ ಫಲಾನುಭವಿಗಳ ಮನೆ ಮನೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು
    ಮುಂದಿನದಿನಗಳಲ್ಲಿ ಬಡ ಜನರ ಮನೆಯ ಬಾಗಿಲಿಗೆ ಮುಟ್ಟಿಸುವ ಕೆಲಸ ತಾಲೂಕು ಮಟ್ಟದ ಅಧಿಕಾರಿಗಳು
    ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ
    ಬಸವರಾಜ ಭಾಗ್ಲಿ ಅವರು ಹೇಳಿದರು.

    ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜು.16 ರಂದು ಯಾದಗಿರಿ ತಾಲೂಕ ಪಂಚಾಯತ
    ಸಭಾಂಗಣದಲ್ಲಿ ನಡೆದ ತಾಲೂಕ ಮಟ್ಟದ ಪ್ರಗತಿ ಪರಿಶೀಲನ ಸಭೆಯ ಅಧ್ಕಕ್ಷತೆ ವಹಿಸಿ ಅವರು ಮಾತನಾಡಿದರು.
    ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಅಧಿಕಾರಿಗಳಲ್ಲಿ ಸೇವಾ
    ಮನೋಭಾವ ಇರಬೇಕು. ಸಮಾಜದಲ್ಲಿ ಇನ್ನು ಅನೇಕರು ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು
    ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳಿಗೆ
    ಸೂಚಿಸಿದರು.

    ಸರಕಾರ ಗೃಹಜ್ಯೋತಿ ಯೋಜನೆಯಡಿ ನೀಡಿದ 200 ಯುನಿಟ್ ಮಿತಿಯೋಳಗೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರ ಸಂಖ್ಯೆ
    ಹೆಚ್ಚಿರುವದರಿಂದ, ಪ್ರತಿ ಮನೆಗೂ ಮೀಟರ್ ಅಳವಡಿಕೆ ಮಾಡಿಕೊಳ್ಳುವಂತೆ ಗ್ರಾಹಕರಿಗೆ ಮನವರಿಕೆ ಮಾಡುವ ಮೂಲಕ ವಿದ್ಯುತ್
    ಸೋರಿಕೆಯನ್ನು ತಡೆಯಬಹುದು ಎಂದು ವಿದ್ಯುತ್ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

    ಪಡಿತರ ಚೀಟಿ ನೋಂದಣಿ ನಿಯಮಾನುಸಾರ ನೋಂದಣಿಯಾಗಬೇಕು ಮತ್ತು ಪಾರದರ್ಶಕವಾಗಿ ನೋಂದಣಿ ಮಾಡಿಕೋಳ್ಳಬೇಕು
    ಎಕೆಂದರೆ ಸರ್ಕಾರದ ಬೇರೆ ಯೋಜನೆಗಳ ಸೌಲಭ್ಯ ಪಡೆದುಕೋಳ್ಳಲು ಈ ಪಡಿತರ ಚೀಟಿಯನ್ನೆ ಕುಟುಂಬ ಎಂದು ಗುರುತಿಸಿ
    ಸೌಲಭ್ಯ ಪಡೆಯಲಾಗುವುದು.ಎಲ್ಲಾ ಪಡಿತರ ಚೀಟಿ ಹೊಂದಿದ ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿಯ ಪಡಿಯುತ್ತಿದಾರೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದರು.

    ಅಧ್ಯಕ್ಷರು ಕೆಲವು ನ್ಯಾಯಾಬೇಲೆ ಅಂಗಡಿಗಳಲ್ಲಿ ಆಹಾರ ಧಾನ್ಯಗಳು ಕಡಿತ ಮಾಡಿಕೊಳ್ಳುತ್ತಿದ್ದು ತಾವುಗಳು ಪ್ರತಿ ನ್ಯಾಯಾಬೆಲೆ
    ಅಂಗಡಿಗಳಿಗೆ ಬೇಟಿ ನೀಡಿ ಪರಿಶೀಲಿಸಿ ಇನ್ನುಳಿದ ಫಲಾನುಭವಿಗಳ ಮನೆಗೆ ಭೆಟಿ ನೀಡಿ ದಾಖಲಾತಿಗಳನ್ನಿ ಸರಿಪಡಿಸಿಕೋಂಡು
    ಮುಂದಿನ ತಿಂಗಳಿನಿAದ ಅವರಿಗೆ ಸೌಲಭ್ಯ ದೊರಕುವಂತೆ ಮಾಡಬೇಕೆಂದು ಹೇಳಿದರು.

    ಯುವನಿಧಿ 2022-23 ಮತ್ತು 2023-24 ನೇ ಸಾಳಿನಲ್ಲಿ ಉತ್ತಿರ್ಣರಾದ ಡಿಪ್ಲೋಮೊ ಹಾಗೂ ಪದವಿದರರಿಗೆ ಆರು ತಿಂಗಳವರೆಗೆ
    ಯಾವುದೇ ಸರ್ಕಾರಿ ಅರೇ ಅರ್ಕಾರಿ ಹಾಗೂ ಬ್ಯಾಂಕಿನಿAದ ಸಾಲ ಪಡೆದು ವ್ಯಾಪಾರ ವಹಿವಾಟು ಮಾಡದೆ ಇರುವ ಪದವಿದರರಿಗೆ ಡಿಪ್ಲೋಮೊ ೧೫೦೦ ಹಾಗೂ ಪದವಿದರರಿಗೆ ೩೦೦೦ ರೂ. ನೀಡಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ1652 ಜನರಿಗೆ ಈ ಸೌಲಭ್ಯ ಪಡೆಯುತ್ತಿದ್ದಾರೆ.

    ಮಹಿಳೆಯರು ರಾಜ್ಯದ ಮೂಲೆ-ಮೂಲೆಗಳಿಗೆ ಉಚಿತ ಪ್ರವಾಸ ಮಾಡುತಿದ್ದಾರೆ. ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವರ್ಗಗಳ
    ಮಹಿಳೆಯರಿಗೆ ಅಂತರ್ ರಾಜ್ಯ ಸಾರಿಗೆ ಬಸ್, ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲ ಬಸ್‌ಗಳಲ್ಲಿ
    ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ನೀಡಿದ್ದು, ಆದಾರ್ ಕಾರ್ಡ್ ತೋರಿಸಿ ಮಹಿಳಾ ಪ್ರಯಾಣಿಕರು ಬಸ್‌ಗಳಲ್ಲಿ
    ಉಚಿತವಾಗಿ ಪ್ರಯಾಣಿಸಲು ಕ್ರಮವಹಿಸಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗೆ ನಿರ್ದೇಶಿಸಿದರು.

    ಅಧ್ಯಕ್ಷರು ಹಾಗೂ ಸದಸ್ಯರು ನಿರ್ವಾಹಕರು ಹಾಗೂ ಚಾಲಕರು ಮಹಿಳಾ ಪ್ರಯಾಣಿಕರನ್ನು ಗೌರವದಿಂದ ನೋಡಿಕೊಳ್ಳಲು
    ಅಧಿಕಾರಿಗೆ ಸೂಚಿಸಿದರು.

    ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡುವ ನಿಟ್ಟಿನಲ್ಲಿ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ,
    ಯಾವ ಕಾರಣಕ್ಕಾಗಿ ಸೌಲಭ್ಯ ದಕ್ಕುತ್ತಿಲ್ಲದ ಫಲಾನುಭವಿಗಳ ಮನೆಗೆ ಭೇಟಿ ನೀಡಿ ದಾಖಲಾತಿಗಳನ್ನು ತೆಗೆದುಕೊಂಡು ಮುಂದಿನ
    ದಿನಗಳಲ್ಲಿ ಸೌಲಭ್ಯಗಳು ಸಿಗುವಂತೆ ಮಾಡಬೇಕು. ಎಂದು ಸಭೆಯಾಲ್ಲಿ ಪ್ರಾಸ್ತಾಪ ಆಗಿರುವ ಎಲ್ಲ ಸಮಸ್ಯೆಗಳಿಗೆ ಮುಂದಿನ ಸಭೆ
    ಹೊತ್ತಿಗೆ ಸಂಪೂರ್ಣ ಮಾಹಿತಿಯೊಂದಿಗೆ ಪ್ರತಿ ಇಲಾಖಾ ಅಧಿಕಾರಿಗಳು ಹಾಜರಾಗುವಂತೆ ಸೂಚಿಸಿದರು.

    ಈ ವೇಳೆ ಯಾದಗಿರಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾದೇವ ಬಾಬಳಗಿ, ವ್ಯವಸ್ಥಾಪಕರು ಶಿವರಾಯ ಗುಂಡಗುರ್ತಿ, ಐದು ಗ್ಯಾರಂಟಿ ಯೋಜನೆಗಳ ತಾಲೂಕ ಸಮಿತಿ ಸದಸ್ಯರುಗಳು ಹಾಗೂ ಐದು ಇಲಾಖೆಯ
    ಅಧಿಕಾರಿಗಳು ಭಾಗವಹಿಸಿದ್ದರು.

    apvc-iconPost Views: 33
  • ಜಯ ಕರ್ನಾಟಕ ಸಂಘಟನೆ ಮನವಿಗೆ ಪುರಸಭೆ ಟೆಂಡ‌ರ್ ಗಳ ಮುಂದೂಡಿಕೆ!

    ಜಯ ಕರ್ನಾಟಕ ಸಂಘಟನೆ ಮನವಿಗೆ ಪುರಸಭೆ ಟೆಂಡ‌ರ್ ಗಳ ಮುಂದೂಡಿಕೆ!

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪುರಸಭೆ ವತಿಯಿಂದ ವಿವಿಧ ಟೆಂಡರ್‌ಗಳಿಗೆ ಆಹ್ವಾನ ನೀಡಿದ್ದು ಕೆಲವು ಟೆಂಡರ್ ಗಳಿಗೆ ತಾಲೂಕ ಜಯ ಕರ್ನಾಟಕ ಸಂಘಟನೆ ಆಕ್ಷೇಪ ಸಲ್ಲಿಸಿ ಮನವಿ ನೀಡಿದ ನಂತರ ಟೆಂಡರ್ ಗಳು ಮುಂದೂಡಿಕೆ ಮಾಡಲಾಗಿರುವ ಘಟನೆ ಬುಧುವಾರ ಜರುಗಿತು.

    ಪಟ್ಟಣದ ಅಭಿವೃದ್ಧಿಗಾಗಿ ಮತ್ತು ಪುರಸಭೆ ಕರ ವಸೂಲಿ ಸಂಗ್ರಹಕ್ಕಾಗಿ, ತರಕಾರಿ ಮಾರುಕಟ್ಟೆ ಕರ, ಶುದ್ಧ ಕುಡಿಯುವ ನೀರಿನ ಘಟಕದ ಲೀಲಾವು, ಖಸಾಯಿಖಾನೆ ಕರ ಲೀಲಾವುಗಳಿಗೆ ಬುಧುವಾರದಂದು ಟೆಂಡರ್ ಪ್ರಕ್ರಿಯೆಗೆ ಪುರಸಭೆ ಚಾಲನೆ ನೀಡಲಾಗಿತ್ತು. ತಾಲೂಕ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ನಾಗೇಶ ಗದ್ದಿಗಿ ನೇತೃತ್ವದಲ್ಲಿ ಮಂಗಳವಾರದಂದು ಪುರಸಭೆ ಮುಖ್ಯಾಧಿಕಾರಿಗೆ ಖಸಾಯಿಖಾನೆ ಕರ ಲೀಲಾವು ಟೆಂಡ‌ರ್ ರದ್ದು ಪಡಿಸಲು ಆಗ್ರಹಿಸಿತ್ತು.

    ನಂತರ ಜಯ ಕರ್ನಾಟಕ ಅಧ್ಯಕ್ಷ ನಾಗೇಶ ಗದ್ದಿಗೆ ಹಾಗೂ ಸಂಘಟನೆ ಪದಾಧಿಕಾರಿಗಳೊಂದಿಗೆ ತಹಸೀಲ್ದಾರ ಶಾಂತಗೌಡ ಬೀರಾದರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿ, ಪಟ್ಟಣದ ಪ್ರವೇಶ ದ್ವಾರದಲ್ಲಿ ಮಾಂಸದ ಅಂಗಡಿಗಳು ತಲೆಎತ್ತಿವೆ, ಇದರಿಂದ ಜನರಿಗೆ ಸುಗಮ ಸಂಚಾರಕ್ಕಾಗಿ ತೊಂದರೆಯಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಮಾಂಸದ ಅಂಗಡಿಗಳ ಅಕ್ಕ ಪಕ್ಕದಲ್ಲಿ ಆಂಜನೇಯ ಹಾಗೂ ಗುಡ್ಡದ ದೇವಸ್ಥಾನವಿದೆ. ಇದರಿಂದ ಸಾಮಾಜೀಕ ಸಾಮರಸ್ಯ ಹಾಳಾಗುವ ಸಂಭವನೀಯತೆ ಇರುತ್ತದೆ. ಮಾಂಸದ ಅಂಗಡಿಯವರು ಪುರಸಭೆ ವತಿಯಿಂದ ಯಾವುದೇ ಪರವಾನಿಗೆ ಪಡೆಯದೇ ಅನಾಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಹಲವು ಸಲ ನಮ್ಮ ಸಂಘಟನೆ ಸೇರಿ ಬೇರೆ ಸಂಘಟನೆಯವರು ಕ್ರಮ ಕೈಗೊಳ್ಳಲು ಮನವಿ ನೀಡಿದರೂ ಸಹ ಪುರಸಭೆ ಇದುವರೆಗೂ ಕ್ಯಾರೇ ಎಂದಿಲ್ಲ. ಮಾಂಸದ ಅಂಗಡಿಗಳಿಗಾಗಿ ಪುರಸಭೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ತದನಂತರವೇ ಖಸಾಯಿ ಖಾನೆ ಕರ ಟೆಂಡ‌ರ್ ಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

    ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್ ಹಾಗೂ ಸದಸ್ಯರು ಸ್ಪಂದಿಸಿ ಮತ್ತು ಚರ್ಚಿಸಿ ಟೆಂಡರ್ ಒಂದು ವಾರಗಳ ಕಾಲ ಮುಂದೂಡಿಕೆ ಮಾಡಲಾಗಿದೆ’ ಎಂದು ಟೆಂಡರ್ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಜಯಶ್ರೀ ಪಟೇಲ್ ಘೋಷಿಸಿದರು. ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ನಾಗೇಶ್ ಗದ್ದಿಗಿ ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕಾಕಲವಾರ, ಉಪಾಧ್ಯಕ್ಷರಾದ ಕಾಶಪ್ಪ ದೊರೆ, ರೈತ ಮೋರ್ಚಾ ಅಧ್ಯಕ್ಷ ರಾಮುಲು ಕೊಡಿಗಂಟಿ, ರವಿ ವಾರದ, ನಿಖಿಲ್ ಡಗೆ, ಯಲ್ಲೂ ಪೂಜಾರಿ, ಹಣಮಂತ ತಾತಾಳಗೇರಿ ಭಗವಂತ ಆಯಾಝ್, ಸೇರಿದಂತೆ ಇನ್ನಿತರ ಭಾಗವಹಿಸಿದ್ದರು

    apvc-iconPost Views: 179
  • ತಾಲೂಕಿನಲ್ಲಿ ಪೌತಿಖಾತೆ ಆಂದೋಲನ : ತಹಶೀಲ್ದಾರ್ ಸತ್ಯಮ್ಮ

    ತಾಲೂಕಿನಲ್ಲಿ ಪೌತಿಖಾತೆ ಆಂದೋಲನ : ತಹಶೀಲ್ದಾರ್ ಸತ್ಯಮ್ಮ

    ಸತ್ಯಕಾಮ ವಾರ್ತೆ ಲಿಂಗಸುಗೂರ:

    ರಾಜ್ಯ ಸರಕಾರ ಎಲ್ಲಾ ರೈತ ಬಾಂಧವರಿಗೆ ಉಪಯೋಗವಾಗುವ ಸಲುವಾಗಿ ಪೌತಿ ಖಾತಿ ಆಂದೋಲನ(ಇ-ಪತಿ)ಜಾರಿಗೆ ತಂದಿದ್ದು, ಲಿಂಗಸುಗೂರ ತಾಲೂಕಿನಲ್ಲಿ 11 ಸಾವಿರ ಪೌತಿ ಖಾತೆದಾರರಿರುವ ಮಾಹಿತಿ ಇರುವದರಿಂದ ತಾಲೂಕಿನ ಎಲ್ಲಾ ಗ್ರಾಮದ ರೈತರು ತಮ್ಮ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪೌತಿ ಖಾತ ಮಾಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಸತ್ಯಮ್ಮ ತಿಳಿಸಿರುವರು.

    ಪಹಣಿ ಪತ್ರಿಕೆಯಲ್ಲಿ ಪೌತಿ ಆದಂತಹ ಖಾತೆದಾರರ ಹೆಸರನ್ನು ತೆಗೆದು ಅವರ ವಂಶಸ್ಥರ ಹೆಸರನ್ನು ವಂಶವೃಕ್ಷ ಪ್ರಮಾಣಪತ್ರದ ದಾಖಲು ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ರೈತರು ಬ್ಯಾಂಕ ಸಾಲ ಪಡೆಯಲು. ಬೆಳ ವಿಮೆ, ತಲುಪಬೇಕಾದಂತಹ ಸರಕಾರಿ ಸೌಕರ್ಯಗಳನ್ನು ಹಾಗೂ ಮುಂತಾದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಿರುತ್ತದೆ. ಕಾರಣ ಎಲ್ಲಾ ರೈತರು ಪೌತಿಖಾತೆ ಮಾಡಿಸಿಕೊಳ್ಳಲು ತಿಳಿಸಿರುವರು.

    ಪೌತಿಖಾತೆ ಮಾಡಿಸಲು ಬೇಕಾಗಿರುವ ದಾಖಲಾತಿಗಳು ಪೌತಿದಾರರ ಮರಣ ಪ್ರಮಾಣಪತ್ರ, ವಂಶವೃಕ್ಷ ಪ್ರಮಾಣ ಪತ್ರ, ಚಾಲ್ತಿ ಪಹಣಿ, ಪೌತಿ ಖಾತೆ ಅರ್ಜಿ, ವಂಶವೃಕ್ಷದಲ್ಲಿರುವ ಎಲ್ಲರ ಆಧಾರ ಕಾರ್ಡ ಸಲ್ಲಿಸಿ ಪೌತಿ ಖಾತೆ ಮಾಡಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿರುವರು.

    apvc-iconPost Views: 5
  • ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಾಳೆ ಕತ್ತೆ ಮೆರವಣಿಗೆ

    ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಾಳೆ ಕತ್ತೆ ಮೆರವಣಿಗೆ

    ಸತ್ಯಕಾಮ ವಾರ್ತೆ ತಾಳಿಕೋಟೆ:

    ಬೂದಿಹಾಳ-ಪೀರಾಪೂರ ಏತ ನೀರಾವರಿ ಕಾಮಗಾರಿಗೆ ಸಂಬಂದಿಸಿ ಮುಕ್ತಾಯ ಹಂತದ ಕಾಮಗಾರಿಗೆ ರಾಜ್ಯ ಕಾಂಗ್ರೇಸ್ ಸರ್ಕಾರ ಹಣ ಬಿಡುಗಡೆಗೊಳಿಸದಿರುವದನ್ನು ಖಂಡಿಸಿ ಬುಧವಾರರಂದು ತಾಳಿಕೋಟೆ ಪಟ್ಟಣದಲ್ಲಿ ಕತ್ತೆಗಳ ಮೇರವಣಿಗೆ ನಡೆಸಲಾಗುವದೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಹೇಳಿದರು.

    ಮಂಗಳವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಬೂದಿಹಾಳ-ಫೀರಾಪೂರ ಏತ ನೀರಾವರಿ ಎಫ್‌ಐಸಿ ಒಳಗಾಲುವೆ ಪೂರ್ಣಗೊಳಿಸುವ ಕುರಿತು ಕಳೆದ ೪ ದಿನಗಳಿಂದಲೂ ಕೊಡಗಾನೂರ ಕ್ರಾಸ್‌ನಲ್ಲಿ ಸಾವಿರಾರು ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡಾ ಸರ್ಕಾರದ ಯಾವ ಜನಪ್ರತಿನಿಧಿಗಳು ಬೆಟ್ಟಿ ನೀಡಿಲ್ಲಾ ಈ ಯೋಜನೆಗೆ ಸಂಪೂರ್ಣ ಮುಕ್ತಾಯಕ್ಕೆ ಸಂಬಂದಿಸಿ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರೂ ಕೂಡಾ ಚಕಾರ ಶಬ್ದವನ್ನು ಎತ್ತುತ್ತಿಲ್ಲಾ ಹೀಗಾಗಿ ರೈತರೆಲ್ಲರ ಒಮ್ಮತದ ನಿರ್ಣಯದೊಂದಿಗೆ ಕತ್ತೆ ಚಳುವಳಿ ಮಾಡಬೇಕೆಂದು ತಿರ್ಮಾಣ ಕೈಗೊಂಡಿದ್ದೇವೆ ಅಂದು ಬೆಳಿಗ್ಗೆ ೧೧ ಗಂಟೆಗೆ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ತಾಳಿಕೋಟೆ ಪಟ್ಟಣದ ಬಸವೇಶ್ವರ ವೃತ್ತದಿಂದ ಕತ್ತೆಗಳ ಮೇರವಣಿಗೆ ಪ್ರಾರಂಭಗೊಳ್ಳಲಿದ್ದು ಬಸ್ ನಿಲ್ದಾಣದ ರಸ್ತೆಯ ಮೂಲಕ ಪ್ರಮುಖ ರಸ್ತೆಗಳಲ್ಲಿ ಹಾಯ್ದು ಮರಳಿ ಬಸವೇಶ್ವರ ಸರ್ಕಲ್‌ಗೆ ಮುಕ್ತಾಗೊಳ್ಳಲಿದ್ದು ಈ ಪ್ರತಿಭಟನೆಯ ನಂತರ ಸರ್ಕಾರಕ್ಕೆ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಗುವದೆಂದು ಹೇಳಿದರು.

    ಇನ್ನೋರ್ವ ಅಖಂಡ ಕರ್ನಾಟಕ ರೈತ ಸಂಘದ ತಾಲೂಕಾ ಅಧ್ಯಕ್ಷ ಬಾಲಪ್ಪಗೌಡ ಪಾಟೀಲ ಅವರು ಮಾತನಾಡಿ ಬೂದಿಹಾಳ-ಫೀರಾಪೂರ ಏತ ನೀರಾವರಿಗೆ ಸಂಬಂದಿಸಿ ಈಗಾಗಲೇ ೧೫೦೦ ಕೋಟಿಗೂ ಅಧಿಕ ಹಣ ವೆಚ್ಚ ಮಾಡಲಾಗಿದೆ ಕಾಮಗಾರಿ ಮುಕ್ತಾಯಗೊಂಡು ೨ ವರ್ಷಗಳೇ ಘತಿಸಿ ಹೋಗಿದೆ ಆದರೆ ಸದ್ಯ ಕೊನೆಯ ಹಂತರ ಕಾಮಗಾರಿಗೆ ಕೇವಲ ೧೭೦ ಕೋಟಿ ರೂ. ಅವಶ್ಯವಿದೆ ಈ ಹಣ ಸರ್ಕಾರ ಬಿಡುಗಡೆ ಮಾಡುವಲ್ಲಿ ವಿಳಂಬತೆ ಅನುಸರಿಸುತ್ತಾ ಸಾಗಿದೆ ಕೂಡಲೇ ಕೊನೆಯ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡದೇ ಹೋದಲ್ಲಿ ಈ ಹಿಂದೆ ಕೈಗೊಂಡ ೧೫೦೦ ಕೋಟಿ ರೂ. ವೆಚ್ಚದ ಕಾಮಗಾರಿಯೂ ಹಳ್ಳದಲ್ಲಿ ಹುಣಸೇಹಣ್ಣು ತೊಳೆದಂತಾಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಜಲಸಂಪನ್ಮೂಲ ಸಚೀವ ಡಿಕೆ ಶಿವಕುಮಾರ ಅವರು ರೈತರ ಸಂಕಷ್ಟದ ಪರಸ್ಥಿತಿಯನ್ನು ಅರೀತು ಮುಂದುವರೆದ ಕಾಮಗಾರಿಗೆ ಡಿಪಿಆರ್ ತಯಾರಿಸಿ ಕೂಡಲೇ ಹಣ ಬಿಡುಗಡೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ ಈ ವಿಷಯಕ್ಕೆ ಸಂಬಂದಿಸಿ ರೈತರೆಲ್ಲರೂ ಅಹೋರಾತ್ರಿ ಧರಣಿ ನಡೆಸುತ್ತಿರುವ ವಿಷಯ ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರಿಗೆ ಗೊತ್ತಿದ್ದರೂ ಕೂಡಾ ರಾಜ್ಯಪ್ರವಾಸದಲ್ಲಿ ಮುಂದಾಗಿರುವದು ಇವರ ರೈತಪರ ನಿಲುವು ಎಷ್ಟೆಂಬುದು ಗೊತ್ತಾಗುತ್ತಾ ಸಾಗಿದೆ ಎಂದರು.

    ಇನ್ನೋರ್ವ ರೈತ ಮುಖಂಡ ಪ್ರಭುಗೌಡ ಬಿರಾದಾರ(ಅಸ್ಕಿ) ಅವರು ಮಾತನಾಡಿ ಈ ಕತ್ತೆ ಚಳುವಳಿಕೆ ಸರ್ಕಾರವು ಬಗ್ಗದೇ ಇದ್ದಲ್ಲಿ ನೂರಾರು ಎತ್ತಿನ ಬಂಡೆಗಳೊಂದಿಗೆ ಬಾರಕೋಲ ಚಳುವಳಿ ನಡೆಯಲಿದೆ ಇದಕ್ಕೂ ಸ್ಪಂದಿಸದಿದ್ದರೆ ಈ ಯೋಜನೆ ಅನುಷ್ಠಾನಕ್ಕೆ ಸಂಬಂದಿಸಿ ಸರ್ಕಾರದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚೀವರು ಹಾಗೂ ಜಿಲ್ಲಾ ಉಸ್ತುವಾರಿ ಸಚೀವರನ್ನೋಳಗೊಂಡು ಕಾಂಗ್ರೇಸ್ ಸರ್ಕಾರವು ರೈತರ ಪಾಲಿಗೆ ಸತ್ತಿದೆ ಎಂದು ತಿಳಿದು ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳದಲ್ಲಿ ಎಲ್ಲರ ಭಾವಚಿತ್ರಗಳನ್ನಿಟ್ಟು ಪಿಂಡ ಪ್ರಧಾನ ಕಾರ್ಯಕ್ರಮ ನಡೆಸಲು ತಿರ್ಮಾನಿಸಿದ್ದೇವೆಂದು ಹೇಳಿದರು.

    ಇನ್ನೋರ್ವ ರೈತ ಮುಖಂಡ ಶಿವಪುತ್ರಪ್ಪ ಚೌದ್ರಿ ಅವರು ಮಾತನಾಡಿ ಸಾವಿರಾರು ಕೋಟಿ ರೂ. ಖರ್ಚು ಮಾಡಿ ರೈತರ ಹಿತಕ್ಕಾಗಿ ಬೂದಿಹಾಳ-ಫೀರಾಪೂರ ಯೋಜನೆಯನ್ನು ಕೈಗೊಳ್ಳಲಾಗಿದೆ ಕಾಂಗ್ರೇಸ್‌ನವರು ಚುನಾವಣೆ ಸಮಯದಲ್ಲಿ ಕಾಂಗ್ರೇಸ್‌ವರು ಈಗೀನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡಿಗೆ ಕೃಷ್ಣೆಯ ಕಡೆಗೆ ಎಂಬ ಪಾದಯಾತ್ರೆಯನ್ನು ಮಾಡಿದರು ಆದರೆ ಸದ್ಯ ಅಧಿಕಾರದ ಖುರ್ಚಿಯ ಮೇಲೆ ಕುಳಿತ ನಂತರ ಕೃಷ್ಣೆಯನ್ನು ರೈತರನ್ನು ಮರೆತ್ತಿದ್ದಾರೆ ಜಿಲ್ಲೆಯ ಇಂಡಿ ಮತಕ್ಷೇತ್ರಕ್ಕೆ ೫ ಸಾವಿರ ಕೋಟಿಯಷ್ಟು ಹಣವನ್ನು ನೀಡಿರುವ ಮುಖ್ಯಮಂತ್ರಿಗಳು ರೈತರಿಗಾಗಿ ಕೇವಲ ೨೦೦ ಕೋಟಿ ಕೊಡಲು ಮೀನ ಮೇಷ ಏಣಿಸುತ್ತಿರುವದು ಇವರ ರೈತರ ಮೇಲಿನ ಪ್ರೀತಿ ಏಷ್ಟಿದೆ ಎಂಬುದು ತೋರಿಸುತ್ತಿದೆ ಎಂದರು.

    ಈ ಸಮಯದಲ್ಲಿ ರೈತ ಸಂಘದ ತಾಲೂಕಾ ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ರೈತ ಮುಖಂಡರುಗಳಾದ ಗುರುರಾಜ ಪಡಶೆಟ್ಟಿ, ಸುರೇಶಕುಮಾರ ಇಂಗಳಗೇರಿ, ನಿಂಗು ಚೌದ್ರಿ, ಚಂದ್ರಶೇಖರ ಸಜ್ಜನ, ಅಶೋಕ ಉಪ್ಪಲದಿನ್ನಿ, ಬಸನಗೌಡ ಹಳ್ಳಿಪಾಟೀಲ, ಶಂಕರಗೌಡ ದೇಸಾಯಿ, ಮಹಾದೇವಪ್ಪ ಅಸ್ಕಿ, ಬಸನಗೌಡ ಪಾಟೀಲ, ಮಂಜು ಬಡಿಗೇರ, ಶಿವನಗೌಡ ಜಾಲಿಕಟ್ಟಿ, ರಮೇಶ ಮದ್ದರಕಿ, ಅಶೋಕ ಕಾಮರಡ್ಡಿ, ಚನ್ನಬಸುಗೌಡ ಹೊಸಳ್ಳಿ, ಮೊದಲಾದವರು ಇದ್ದರು.

    apvc-iconPost Views: 247
  • ಮಿನಿ ವಿಧಾನಸೌಧ ಸ್ಥಳಾಂತರಕ್ಕೆ ನಮ್ಮ ಕರ್ನಾಟಕ ಸೇನೆ ಒತ್ತಾಯ

    ಮಿನಿ ವಿಧಾನಸೌಧ ಸ್ಥಳಾಂತರಕ್ಕೆ ನಮ್ಮ ಕರ್ನಾಟಕ ಸೇನೆ ಒತ್ತಾಯ

    ಸತ್ಯಕಾಮ ವಾರ್ತೆ ಲಿಂಗಸುಗೂರು:
    ಲಿಂಗಸುಗೂರು ತಾಲ್ಲೂಕಿನ ನಮ್ಮಕರ್ನಾಟಕ ಸೇನೆಯ ವತಿಯಿಂದ ತಾಲ್ಲೂಕು ಸಹಾಯಕ ಆಯುಕ್ತರಿಗೆ ಮಿನಿ ವಿಧಾನಸೌಧ ಸ್ಥಳಾಂತರ ಮಾಡುವ ಕುರಿತು ಮನವಿ ಸಲ್ಲಿಸಲಾಯಿತು.

    ಮನವಿ ವೇಳೆ ತಾಲೂಕು ಅಧ್ಯಕ್ಷ ಶಿವರಾಜ ನಾಯಕ ಮಾತನಾಡಿ
    ಪ್ರಸ್ತುತ ಮಿನಿ ವಿಧಾನಸೌಧ ಪಟ್ಟಣದ ಹೊರವಲಯದಲ್ಲಿದ್ದು, ಗ್ರಾಮೀಣ ಭಾಗದ ಬಡ ಜನತೆ ಜಾತಿ, ಆದಾಯ ಹಾಗೂ ಇತರೆ ದಾಖಲೆಗಳಿಗಾಗಿ ತಹಶೀಲ್ದಾರ ಕಚೇರಿಗೆ ಹೋಗುವಾಗ ಬಹುಮಾನವೊಂದು ಕಷ್ಟವನ್ನು ಎದುರಿಸುತ್ತಿದ್ದಾರೆ.

    ಒಂದು ದಾಖಲೆಯ ಕೇವಲ ಪ್ರತಿ ಪಡೆಯಲು ಸಹ ನಾಗರಿಕರು ಪಟ್ಟಣಕ್ಕೆ ಬಂದು ಮತ್ತೆ ವಾಪಸು ಹೋಗಬೇಕಾಗಿ ಬರುವುದರಿಂದ ಸುಮಾರು ರೂ.100 ರಿಂದ ರೂ 200 ವರೆಗೆ ಖರ್ಚಾಗುತ್ತಿದೆ. ಅಲ್ಲದೇ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲಭೂತ ಸೌಲಭ್ಯಗಳ ಕೊರತೆಯೂ ಉಂಟಾಗಿದೆ ಎಂದರು.

    ಮಹಿಳೆಯರಿಗೆ ಈ ಸ್ಥಳದ ಅಗ್ರಸ್ಥಾನ ಹಾಗೂ ಎರಡು ವಿಭಿನ್ನ ಪ್ರದೇಶಗಳಲ್ಲಿ ವಿಭಾಗವಾಗಿ ಇರುವ ವ್ಯವಸ್ಥೆ ಭದ್ರತೆಯ ಅಭಾವದ ಭಯವನ್ನು ಉಂಟುಮಾಡಿದೆ. ಇದಲ್ಲದೆ, ಹಲವು ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಬಾಡಿಗೆಯಾದರೂ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಹಣ ವ್ಯರ್ಥವಾಗುತ್ತಿದೆ ಸಹಾಯಕ ಆಯುಕ್ತರ ಕಚೇರಿ ಪಕ್ಕದಲ್ಲಿ ಹಾಗೂ ತಾಲೂಕ ಪಂಚಾಯತಿ ಕಟ್ಟಡದಲ್ಲಿ ಸಾಕಷ್ಟು ಕೊಠಡಿಗಳು ಖಾಲಿ ಇದ್ದು, ಈ ಕಟ್ಟಡಗಳಲ್ಲಿ ಮಿನಿ ವಿಧಾನಸೌಧವನ್ನು ಸ್ಥಳಾಂತರ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವನ್ನು ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ರಾಜು ಪತ್ತಾರ, ಯಲ್ಲಪ್ಪ ಬೋವಿ, ಬಸವಲಿಂಗ ಯಲಗಲದಿನ್ನಿ, ಗುರುನಾಥ ದ್ಯಾಪೂರ, ಶಿವಲಿಂಗ, ಕೃಷ್ಣ ಬೋವಿ, ಕಂಠೆಪ್ಪ, ಮೌನೇಶ ನಾಯಕ ದವಲಗೌಡ, ನಾಗರಾಜ ಕರಡಕಲ್, ಮಾರುತಿ, ಮಹೇಂದ್ರ ಕುಮಾರ, ವೀರೇಶ ಐದನಾಳ, ಶರಣಬಸವನಗೌಡ, ಶಂಭುಗೌಡ, ವೀವೇಕಾನಂದ ನಾಯಕ, ವೆಂಕಟೇಶ ಗುತ್ತೇದಾರ ಸೇರಿದಂತೆ ಇನ್ನಿತರರು ಇದ್ದರು.

    apvc-iconPost Views: 17
  • ಹದಗೆಟ್ಟ ರಸ್ತೆ: ಮೂರು ತಿಂಗಳಿಂದ ಕಾಮಗಾರಿ ನೆನೆಗುದಿಗೆ, ಸಾರ್ವಜನಿಕರ ಆಕ್ರೋಶ

    ಹದಗೆಟ್ಟ ರಸ್ತೆ: ಮೂರು ತಿಂಗಳಿಂದ ಕಾಮಗಾರಿ ನೆನೆಗುದಿಗೆ, ಸಾರ್ವಜನಿಕರ ಆಕ್ರೋಶ

    ವರದಿ: ರಮೇಶ ನಾಯಕ್ 

    ಸತ್ಯಕಾಮ ವಾರ್ತೆ ಲಿಂಗಸುಗೂರು: 

    ತಾಲ್ಲೂಕಿನ ಗ್ರಾಮ ಪಂಚಾಯತಿ ರೋಡಲಬಂಡ ಯುಕೆಪಿ ಗ್ರಾಮ್ ಪಂಚಾಯತ್ ವ್ಯಾಪ್ತಿ ಬರುವ ಜಂಗಿರಾಂಪೂರ ತಾಂಡಾ.ಅಂಜನೇಯ ದೇವಸ್ಥಾನದ ನಾರಾಯಣಪುರ ಮುಖ್ಯ ಕಾಲುವೆಗೆ ರಸ್ತೆ ಹದಗೆಟ್ಟಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.

    ಕಳೆದ ನಾಲ್ಕು ತಿಂಗಳ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಲಾಗಿತ್ತು. ರಸ್ತೆ ಸಂಪೂರ್ಣ ಅಗೆದು ಮೇಲೆ ಜಲ್ಲಿ ಕಂಕರ್ ಹರವಿದ್ದಾರೆ. ನಾಲ್ಕು ತಿಂಗಳಾದರೂ ಮೇಲೆ ಸಿಮೆಂಟ್ ಕಾಂಕ್ರೀಟ್ ಹಾಕಿ ಪಕ್ಕಾ ರಸ್ತೆ ಮಾಡುತ್ತಿಲ್ಲ. ಹಾಕಿರುವ ಜಲ್ಲಿ ಕಂಕರನಲ್ಲಿ ಬೈಕ್ ಉರುಳಿ ಸವಾರರು ಗಾಯಗೊಂಡಿದ್ದಾರೆ. ಸಾರ್ವಜನಿಕರ ಓಡಾಡಲು ಆಗುತ್ತಿಲ್ಲ. ಈ ಕುರಿತು ಲಿಂಗಸುಗೂರು ಕೆ ಆರ್ ಐ ಡಿ ಎಲ್ ಅಧಿಕಾರಿಗಳಿಗೆ ನಾಲ್ಕು ಬಾರಿ ತಿಳಿಸಿದರು ದುರಸ್ಥಿಗೊಳಿಸುವಂತೆ ಒತ್ತಾಯಿಸಿದ್ದೇವೆ. ಅವರು ಕ್ಯಾರೆ ಅನ್ನುತ್ತಿಲ್ಲ. ಕಾಮಗಾರಿಗೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇವರ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಬೇಕು ಇಲ್ಲದಿದ್ದರೆ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶಂಕರ ಪವಾರ, ಅಮರೇಶ ಕರಡಕಲ್ ತಾಂಡ, ಭೀಮಣ್ಣ ಮತ್ತಿತರರು ಎಚ್ಚರಿಕೆ ನೀಡಿದರು.

    apvc-iconPost Views: 65
  • ಶಾಲಾ ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛತೆ – ಸಾರ್ವಜನಿಕರ ಆಕ್ರೋಶ!

    ಶಾಲಾ ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛತೆ – ಸಾರ್ವಜನಿಕರ ಆಕ್ರೋಶ!

    ಸತ್ಯಕಾಮ ವಾರ್ತೆ ಯಾದಗಿರಿ:

    ಅರಕೇರಾ ಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಸ್ತೂರಿ ಭಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಶಾಲಾ ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛತೆ ಮಾಡಿಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.

    ಸ್ಥಳೀಯರೊಬ್ಬರು ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಶಾಲಾ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಇಂಥ ಕಾರ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಶೌಚಾಲಯ ತೊಳೆಸುವ ಕೆಲಸ ಮುಖ್ಯೋಪಾಧ್ಯಾಯ/ಶಿಕ್ಷಕರ ಜವಾಬ್ದಾರಿ, ಮಕ್ಕಳಿಂದ ತೊಳೆಯಿಸುವುದು ಮಾನವೀಯತೆಗೂ ವ್ಯತಿರಿಕ್ತ, ಮಕ್ಕಳಿಗೆ ಶಿಕ್ಷಣ ನೀಡಬೇಕೋ ಹೊರತು ಶೌಚಾಲಯ ತೊಳೆಯಲು ಒತ್ತಾಯಿಸಬಾರದು. ಇದು ನಮ್ಮ ಶಿಕ್ಷಣ ವ್ಯವಸ್ಥೆಗೆ ಕಳಂಕ. ಇಂತಹ ದೃಶ್ಯಗಳು ಸಾರ್ವಜನಿಕವಾಗಿ ಹರಡಿರುವುದು ಕೇವಲ ಸತ್ಯವನ್ನು ಬಿಚ್ಚಿಟ್ಟಿಲ್ಲ, ಶಿಕ್ಷಣ ವ್ಯವಸ್ಥೆಯ ನಿಷ್ಕ್ರಿಯತೆಯನ್ನು ಬೆಳಗಿಸಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ, ತಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    apvc-iconPost Views: 90
  • ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಸುವ್ಯವಸ್ಥಿತ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

    ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಸುವ್ಯವಸ್ಥಿತ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

    • ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆದ ಸಚಿವರು

    ಸತ್ಯಕಾಮ ವಾರ್ತೆ ರಾಯಚೂರು: 

    ಕರ್ನಾಟಕ ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.

    ಜುಲೈ 15ರಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿ ಅವರ ದರ್ಶನದ ಪಡೆದು, ಮಂತ್ರಾಲಯದ ಕರ್ನಾಟಕ ಛತ್ರದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ನಿರ್ಮಾಣ ಮಾಡಿರುವ ನೂತನ ಹಾಗೂ ಹಳೆ ಕಟ್ಟಡಗಳ ಪರಿಶೀಲನೆ ನಡೆಸಿ ಕರ್ನಾಟಕ ರಾಜ್ಯ ವಸತಿ ಗೃಹ ಕಟ್ಟಡದ ಸಭಾಂಗಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಮಂತ್ರಾಲಯಕ್ಕೆ ಪ್ರತಿ ದಿನ ಅಂದಾಜು 200 ಬಸ್ಸಗಳು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬರುತ್ತವೆ. ರೈಲಿನ ಮೂಲಕವು ಜನರು ಮಂತ್ರಾಲಯಕ್ಕೆ ಬರುತ್ತಾರೆ. ಆಂಧ್ರಕ್ಕೆ ಹೋಲಿಸಿದರೆ ಶೇ.60ರಷ್ಟು ಜನರು ಕರ್ನಾಟಕ ರಾಜ್ಯದಿಂದಲೇ ಮಂತ್ರಾಲಯಕ್ಕೆ ಆಗಮಿಸುತ್ತಾರೆ. ಈ ಬಗ್ಗೆ ಮಂತ್ರಾಲಯದ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದಾಗ, ಕರ್ನಾಟಕದಿಂದ ಬರುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ವಸತಿ ಗೃಹಗಳ ನಿರ್ಮಾಣಕ್ಕೆ ಸೂಕ್ತವಾದ ಜಾಗದ ವ್ಯವಸ್ಥೆ ಮಾಡಿಕೊಡುವುದಾಗಿ ಸ್ವಾಮೀಜಿ ಅವರು ಮಾತುಕೊಟ್ಟಿದ್ದಾರೆ ಎಂದು ಸಚಿವರು ತಿಳಿಸಿದರು.

    ಮಂತ್ರಾಲಯದಲ್ಲಿ ಈಗಿರುವ ಕರ್ನಾಟಕ ರಾಜ್ಯ ವಸತಿ ಗೃಹ ಕಟ್ಟಡದ ಕಳಪೆ ಕಾಮಗಾರಿಯ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಕಳಪೆ ಕಾಮಗಾರಿ ನಡೆದಿದೆ ಎಂದು ಲೋಕಾಯುಕ್ತರಿಂದ ಸಾಬೀತಾದಲ್ಲಿ ಸಂಬAಧಿಸಿದ ಗುತ್ತಿಗೆದಾರರಿಂದಲೇ ಕಟ್ಟಡದ ದುರಸ್ತಿ ಮಾಡಿಸಲಾಗುವುದು. ಇಲ್ಲವಾದಲ್ಲಿ ಕಟ್ಟಡದಲ್ಲಿನ ನೂನ್ಯತೆಗಳ ಬಗ್ಗೆ ಪರಿಶೀಲಿಸಿ ಮಾಸ್ಟರ್ ಪ್ಲಾನ್ ರೂಪಿಸಿ ಕಟ್ಟಡವನ್ನು ಸರಿಪಡಿಸಲಾಗುವುದು ಎಂದು ಸಚಿವರು ಹೇಳಿದರು.

    ಆನಲೈನ್ ವ್ಯವಸ್ಥೆಗೆ ಕ್ರಮ: ಧಾರ್ಮಿಕ ದತ್ತಿ ಇಲಾಖೆಯಿಂದ ಮಂತ್ರಾಲಯದಲ್ಲಿ ನಿರ್ಮಾಣ ಮಾಡಿರುವ ಕರ್ನಾಟಕ ರಾಜ್ಯದ ವಸತಿ ಗೃಹದಲ್ಲಿ ಒಟ್ಟು 50 ಕೋಣೆಗಳಿವೆ. ಇವುಗಳನ್ನು ಕರ್ನಾಟಕದಿಂದ ಬರುವ ಭಕ್ತರಿಗೆ ಮೀಸಲಿರಿಸಿದೆ. ತಲಾ ನಾಲ್ಕು ಜನರು 12 ಗಂಟೆ ಸಮಯ ವಾಸ್ತವ್ಯ ಮಾಡಲು 500 ರೂಪಾಯಿ ದರ ನಿಗದಿಪಡಿಸಲಾಗಿದೆ. 12 ಗಂಟೆ ಮೀರಿದಾಗ 1000 ರೂ. ದರ ನಿಗದಿಪಡಿಸಲಾಗುತ್ತದೆ. ಒಟ್ಟು 50 ರೂಮುಗಳ ಪೈಕಿ 30 ರೂಮುಗಳನ್ನು ಆನಲೈನ್ ಮೂಲಕ ಹಾಗೂ ಇನ್ನುಳಿದ 20 ರೂಮುಗಳನ್ನು ನೇರವಾಗಿ ಹಣ ಪಾವತಿಸಿ ಬುಕ್ಕಿಂಗ್ ಮಾಡುವ ವ್ಯವಸ್ಥೆಗೆ ಕ್ರಮ ವಹಿಸುವುದಾಗಿ ಸಚಿವರು ತಿಳಿಸಿದರು.

    ಟೂರಿಸಂ ಇಲಾಖೆಗೆ ಉಸ್ತುವಾರಿ: ಕಲ್ಯಾಣ ಮಂಟಪ, ಛತ್ರ, ವಸತಿ ಗೃಹಗಳ ನಿರ್ಮಾಣ ಪ್ರಕರಣವು ನ್ಯಾಯಾಲಯದ ಅಂಗಳದಲ್ಲಿರುವುದರಿAದ ಕಟ್ಟಡದ ದುರಸ್ತಿಗೆ ತೊಡಕಾಗಿ ಪರಿಣಮಿಸಿದೆ. ಮಂತ್ರಾಲಯ, ಶ್ರೀಶೈಲಂ, ತಿರುಪತಿ ಸೇರಿದಂತೆ ನಾನಾ ಕಡೆಗಳಲ್ಲಿ ವಿವಾದದಿಂದ ಕೂಡಿರುವ ಜಾಗದ ಸಮಸ್ಯೆಯನ್ನು ಬೇಗನೆ ಇತ್ಯರ್ಥಪಡಿಸಬೇಕು ಎಂದು ಖುದ್ದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಆಯಾ ದತ್ತಿ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದ ಸಚಿವರು, ಉತ್ತಮ ದರ್ಜೆಯ ನಿರ್ವಹಣೆಗಾಗಿ ಮಂತ್ರಾಲಯದಲ್ಲಿರುವ ಕರ್ನಾಟಕ ವಸತಿ ಗೃಹಗಳ ಕಟ್ಟಡದ ನಿರ್ಹಹಣೆಯ ಉಸ್ತುವಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವ ಬಗ್ಗೆ ಪ್ರವಾಸೋದ್ಯಮ ಸಚಿವರಾದ ಹೆಚ್ ಕೆ ಪಾಟೀಲ ಅವರೊಂದಿಗೆ ಮಾತನಾಡುವುದಾಗಿ ಸಚಿವರು ತಿಳಿಸಿದರು.

    ಈ ವೇಳೆ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾದ ವೆಂಕಟೇಶ್, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಕಿಶೋರ್ ಕುಮಾರ ಪಾಟೀಲ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಶಾವಂತಗೇರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚAದ್ರಶೇಖರ, ಕರ್ನಾಟಕ ವಸತಿ ಗೃಹ ಕಟ್ಟಡದ ಅಧಿಕಾರಿ ಆಂಜನೇಯ ಸೇರಿದಂತೆ ಇನ್ನೀತರರು ಇದ್ದರು.

    apvc-iconPost Views: 14
  • ಜಿಲ್ಲೆಯ ಜನರ ಗಂಭೀರ ರೀತಿಯ ಸಮಸ್ಯೆಳಿಗೆ ಅಧಿಕಾರಿಗಳು ಸ್ಪಂದಿಸಲಿ: ಸಂಸದ ಜಿ.ಕುಮಾರ್ ನಾಯಕ್

    ಜಿಲ್ಲೆಯ ಜನರ ಗಂಭೀರ ರೀತಿಯ ಸಮಸ್ಯೆಳಿಗೆ ಅಧಿಕಾರಿಗಳು ಸ್ಪಂದಿಸಲಿ: ಸಂಸದ ಜಿ.ಕುಮಾರ್ ನಾಯಕ್

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯಲ್ಲಿನ ಜನರ ಗಂಭೀರ ಸ್ವರೂಪದ ಸಮಸ್ಯೆಗಳಾದ ಕುಡಿಯುವ ನೀರು,ಅನಕ್ಷರತೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮರು ಸೇರ್ಪಡೆ ,ಜನರ ವಲಸೆ,ತಾಯಿ- ಶಿಶುಮರಣ ಪ್ರಮಾಣ ತಡೆ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಪ್ರಥಮ ಆದ್ಯತೆ ನೀಡುವಂತೆ ರಾಯಚೂರು ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾದ ಜಿ.ಕುಮಾರ್ ನಾಯಕ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿನ ಗಂಭೀರ ಸ್ವರೂಪದ ಸಮಸ್ಯೆಗಳಿಗೆ ಆದ್ಯತೆ ಮೇಲೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು.ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸಿ ,ಸಮಾಲೋಚಿಸಿ ಪರಿಹಾರ ಕಂಡುಕೊಳ್ಳುವಂತೆ ಅವರು ಸೂಚನೆ ನೀಡಿದರು.

    ಜಿಲ್ಲೆಯ ರೈತರಲ್ಲಿ ಯೂರಿಯಾ ಹಾಗೂ ಡಿಎಪಿ ಗೆ ಪರ್ಯಾಯವಾಗಿ ನೀಡಲಾಗುವ ನ್ಯಾನೋ ರಸಗೊಬ್ಬರ ಬಳಕೆ ಬಗ್ಗೆ ಸೂಕ್ತ ಜಾಗೃತಿ ಮೂಡಿಸಬೇಕು.ಸ್ಪ್ರೀಂಕ್ಲರ್, ಮಣ್ಣು ಪರೀಕ್ಷೆ,ಮಣ್ಣು ಪರೀಕ್ಷೆ ಕಾರ್ಡ್ ವಿತರಣೆ ಕುರಿತಂತೆ ಅವಶ್ಯಕ ಅರಿವು ಮೂಡಿಸಲು ಅವರು ಸೂಚಿಸಿದರು.

    ಜಿಲ್ಲೆಯಲ್ಲಿ ಸುಮಾರು 662 ಮಕ್ಕಳು ಶಾಲೆಯಿಂದ ಹೊರಗುಳಿದ ಬಗ್ಗೆ ಆರ್ಡಿಪಿಆರ್ ಇಲಾಖೆಯಿಂದ ಸಮೀಕ್ಷೆ ಅನ್ವಯ ಗುರಿ ನೀಡಿದ್ದು,ಆಯಾ ಗ್ರಾಮ ಪಂಚಾಯತ್ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಎಸ್ ಡಿ ಎಮ್ ಸಿ ಹಾಗೂ ಗ್ರಾಮಸ್ಥರೊಂದಿಗೆ ಸಮನ್ವಯ ಸಾಧಿಸಿ ಸ್ಯಾಟ್ಸ ಆಧಾರಿತದಲ್ಲಿ ಪತ್ತೆ ಹಚ್ಚಿ ಶಾಲೆಗೆ ಸೇರಿಸಬೇಕು ಎಂದು ಸೂಚಿಸಿದರು.

    ಜಿಲ್ಲೆಯಲ್ಲಿ ಗರ್ಭಿಣಿ ತಾಯಿ -ಶಿಶುಮರಣ ಪ್ರಮಾಣ ತಡೆಯಲು ಪರಿಣಾಮಕಾರಿ ಆರೋಗ್ಯ ತಪಾಸಣೆ, ನಿವಾರಣಾ ಕ್ರಮ ಕೈಗೊಳ್ಳಬೇಕು. ಬಾಲ್ಯ ವಿವಾಹ ತಡೆ ಸವಾಲಾಗಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಸಾಮಾಜಿಕ ಕಳಕಳಿ, ಮಾನವೀಯ ನೆಲೆಯಲ್ಲಿ ಕ್ರಮಗಳನ್ನು ಕೈಗೊಂಡಾಗ ಮಾತ್ರ ಈ ಸಮಸ್ಯೆ ಮತ್ತು ತಾಯಿ-ಶಿಶು ಮರಣ ಪ್ರಮಾಣ ತಡೆಯಲು ಸಾಧ್ಯ ಎಂದು ಹೇಳಿದರು.

    ಜಿಲ್ಲೆಯ ಯಾದಗಿರಿ ಬೈಪಾಸ್ ರಸ್ತೆ, ಶಹಾಪುರ ಬೈಪಾಸ್ ರಸ್ತೆ, ರಾಮಸಮುದ್ರ ಹತ್ತಿರದಿಂದ ಗುರುಮಠಕಲ್ – ಹೈದರಾಬಾದ್ ರಸ್ತೆ, ಸೂರತ್- ಚೆನೈ ರಸ್ತೆಗಳ ವ್ಯಾಪ್ತಿಯ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸಮಸ್ಯೆ ಪರಿಹರಿಸಬೇಕು. ಕೈಗೊಂಡ ಕ್ರಮದ ಬಗ್ಗೆ ವರದಿ ಸಹ ಸಲ್ಲಿಸುವಂತೆ ಅವರು ಸೂಚಿಸಿದರು.

    ಕಡೆಚೂರ-ಬಾಡಿಯಾಳ ಸಮೀಪದ ರೈಲ್ವೆ ಬೋಗಿ ಕಾರ್ಖಾನೆಗೆ ನೀರು ಪೂರೈಕೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿನಡಿ ನೀರಿನ ಪೈಪ್ಲೈನ್ ಅಳವಡಿಕೆ ಸಮಸ್ಯೆಯನ್ನು ಕೆಐಎಡಿಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಮನ್ವಯತೆಯಿಂದ ಪರಿಹರಿಸಬೇಕು. ಯಾದಗಿರಿ ರೈಲ್ವೆ ನಿಲ್ದಾಣ ಕಾಮಗಾರಿಗಳು ಚುರುಕುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಅದರಂತೆ ಜಲಜೀವನ್ ಮಿಷನ್,ಜಲಧಾರೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಗಮನ ನೀಡಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಗುರಿಗೆ ತಕ್ಕಂತೆ ಕ್ರಮ ಕೈಗೊಳ್ಳಲು ತಿಳಿಸಿದರು.

    ಪಶುಪಾಲನೆ ಇಲಾಖೆಯಿಂದ ಸರ್ಕಾರದ ನಿಯಮಾವಳಿಗಳ ಅನ್ವಯ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಂವಿಧಾನಬದ್ಧವಾಗಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ವಿಪುಲ ಅವಕಾಶಗಳಿರುವದರಿಂದ ಅವಶ್ಯಕ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು, ಜಿಲ್ಲೆಯಲ್ಲಿ ತಾಯಿ-ಶಿಶುಮರಣ ಪ್ರಮಾಣ ಹೆಚ್ಚಲು ಕಾರಣ, ರೈಲ್ವೆ ಬೋಗಿ ಕಾರ್ಖಾನೆಗೆ ನೀರು, ವಿದ್ಯುತ್ ಪೂರೈಕೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ, ಅಕ್ಕ ಕೆಫೆ ಹಾಗೂ ಇಂದಿರಾ ಕಾಂಟಿನೆಗಳಿಗೆ ಸ್ಥಳ ಗುರುತಿಸುವ ಮುನ್ನ ಆಯಾ ಶಾಸಕರ ಗಮನಕ್ಕೆ ತರಲು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸಂಸದರ ಗಮನಕ್ಕೆ ತಂದರು.

    ಸುರಪುರ ಶಾಸಕ ರಾಜಾ ವೇಣುಗೋಪಾಲ್ ನಾಯಕ ಅವರು ಜಲಜೀವನ್ ಮಿಷನ್, ಜಲಧಾರೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕೋರಿದರು. ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಬೋಗಿ ಕಾರ್ಖಾನೆಗೆ ನೀರು , ವಿದ್ಯುತ್ ಸಮಸ್ಯೆ,ಜಲಜೀವನ್ ಮಿಷನ್ ಯೋಜನೆಯಡಿಯ ಸಮಸ್ಯೆ ಪರಿಹರಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ,ಎಸ್,ಪಿ ಪೃಥ್ವಿಕ್ ಶಂಕರ್, ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

    apvc-iconPost Views: 67