ಸತ್ಯಕಾಮ ವಾರ್ತೆ ವಡಗೇರಾ:
Blog
-

ಕಾಡಮಗೇರಾ ಗ್ರಾಮದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬ ಆಚರಣೆ
ಡಾ. ಮಲ್ಲಿಕಾರ್ಜುನ್ ಖರ್ಗೆ ಜಿ ರವರು ದೇಶ ಕಂಡ ಧೀಮಂತ ನಾಯಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಜೆ 371 ಕಲಾಂ ಜಾರಿಗೆ ತರುವ ಮೂಲಕ ಈ ಭಾಗದ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಸಾಬಣ್ಣ ಹಂಚಿನಾಳ ಹೇಳಿದರು.ತಾಲೂಕಿನ ಕಾಡಮಗೇರಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ. ಮಲ್ಲಿಕಾರ್ಜುನ್ ಖರ್ಗೆ ರವರ 83 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಾಖಲೆಯ ಹತ್ತು ಬಾರಿ ಶಾಸಕರಾಗಿ, ಮೂರು ಬಾರಿ ಸಂಸದರಾಗಿ, ಕೇಂದ್ರ, ರಾಜ್ಯ ಸಚಿವರಾಗಿ, ರಾಜ್ಯಸಭೆ, ಲೋಕಸಭೆ, ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕರಾಗಿ ಹಲವು ಉನ್ನತ ಹುದ್ದೆಗಳನ್ನು ನಿಭಾಯಿಸಿದ ಏಕೈಕ ವ್ಯಕ್ತಿ ಅಂದರೆ ತಪ್ಪಾಗಲಾಗದು ದೇವರು ಅವರಿಗೆ ಇನ್ನಷ್ಟು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಈ ಸಮಯದಲ್ಲಿ ಹಾರೈಸಿದರು.ಅವರ ಅಭಿಮಾನಿಗಳು ಕೇಕ್ ಕತ್ತರಿಸಿ. ಮಲ್ಲಿಕಾರ್ಜುನ್ ಖರ್ಗೆ ಜಿ ರವರ ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರುಗಳಾದ ಚಂದ್ರಶೇಖರ್ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ, ದೊಡ್ಡಪ್ಪ ಕಾಡಮಗೇರಾ, ನಾಗಪ್ಪ ಉಲ್ಟಿ ,ಮಲ್ಲು ಯಾದವ್, ರೆಡ್ಡಿ ಆನೂರ, ಹಣಮಂತ ನಾಟೇಕಾರ, ದೇವೇಂದ್ರಪ್ಪ ದೊರೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Post Views: 57 -

ರಕ್ತದಾನ ಮಾಡಿ ಜೀವ ಉಳಿಸಿ : ಪಂಪನಗೌಡ ಕರೆ
ಸತ್ಯಕಾಮ ವಾರ್ತೆ ಯಾದಗಿರಿ:
ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪಂಪನಗೌಡ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನುಮ ದಿನವನ್ನು ಆಚರಿಸಿ, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ರಕ್ತಹಿನತೆಯಿಂದ ಬಳಲುವವರ ಸಂಖ್ಯೆ ಅಧಿಕವಾಗಿದೆ. ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೂ ರಕ್ತದ ಕೊರತೆ ಇದ್ದು, ಈ ಮೂಲಕ ರಕ್ತದಾನ ಶಿಬಿರ ಆಯೋಜಿಸಿ ಅನುಕೂಲ ಮಾಡಿಕೊಡಲಾಗುವುದೆಂದರು.
ರಕ್ತ ನೀಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗಿ ಮನುಷ್ಯನಿಗೆ ಹೊಸ ಚೈತನ್ಯ ಬರುತ್ತದೆ. ಹೀಗಾಗಿ ರಕ್ತ ನೀಡಲು ಹಿಂಜರಿಕೆ ಮಾಡಬಾರದೆಂದು ಪಂಪನಗೌಡ ಹೇಳಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಸ್ಸುಗೌಡ ಬಿಳ್ಹಾರ್, ಮಲ್ಲಣ್ಣ ದಾಸನಕೇರಿ, ಅನೀಲ್ ಹೆಡಗಿಮದ್ರಿ, ಮರೆಪ್ಪ ಬಿಳ್ಹಾರ್, ಮಲ್ಲಿಕಾರ್ಜುನ ಈಟೆ,ಸುರೇಶ ಮಡ್ಡಿ, ತಿಮ್ಮಣ್ಣ ನಾಯಕ, ಸಾಬಣ್ಣ ಬಾಡಿಯಾಳ್,ಮಲ್ಲಯ್ಯ ಕಸಬಿ, ಬಸವರಾಜ ಬುಡಯಿ,ಗುರುನಾಥ ರೆಡ್ಡಿ,ಬಾಪು ಗೌಡ ಮಾಚನೂರ್, ಮೈನುದ್ದೀನ್ ಮಿರ್ಚಿ, ಸೋಮಶೇಖರ ಮಸಕನಳ್ಳಿ ಶರಣಗೌಡ ಮಾಲಿಪಾಟೀಲ್. ಅಮರೇಶ ಜಾಕಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಹಣಮಂತರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.
ಸುಮಾರು 25 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
Post Views: 168 -

ಸಂಭ್ರಮದಿಂದ ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬ ಆಚರಣೆ
ಸತ್ಯಕಾಮ ವಾರ್ತೆ ವಡಗೇರಾ:
ತಾಲೂಕಿನ ಹೈಯ್ಯಾಳ .ಬಿ ಗ್ರಾಮದ ಸಗರನಾಡಿನ ಆರಾಧ್ಯ ದೈವ ಶ್ರೀ ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬದ ಕಾರ್ಯಕ್ರಮ ರವಿವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು.
ನೂಲ ಹುಣ್ಣಿಮೆಯ ಮುಂಚಿತವಾಗಿ ಹಾಲಂಬಲಿ ಹಬ್ಬ ಆಚರಿಸಿದ ದಿನದಿಂದಲೇ ಭಕ್ತರು 21 ದಿನಗಳ ಕಾಲ ವ್ರತ ಆರಂಭಿಸುವುದು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ ವೃತ ಹಿಡಿಯುವ ಭಕ್ತರು ದಿನನಿತ್ಯ ಸಾಯಂಕಾಲ ಹೈಯ್ಯಾಳ ಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿಸುವ ಸಂಪ್ರದಾಯವನ್ನು ಮಹಿಳೆಯರು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಊರಿನ ಮತ್ತು ಸುತ್ತಮುತ್ತಲು ಗ್ರಾಮದ ಕುರಿಗಾಯಿಗಳು ತಮ್ಮ ಕುರಿಗಳನ್ನು ದೇವಸ್ಥಾನದ ಮುಂದೆ ಕರೆತರುವುದರ ಜೊತೆಗೆ ಕುರಿ ಕಾಯುವವರು ಪ್ರತಿ ವರ್ಷ ಹೊಸದಾದ ಕೋಲುಗಳನ್ನು ತಂದು ಹೊಸ ಮಣ್ಣಿನ ಗಡಿಗೆಯಲ್ಲಿ ಕುರಿ ಹಾಗೂ ಆಕಳು ಹಾಲು ತುಂಬಿಸಿ ಗರ್ಭಗುಡಿಯ ಮುಂದೆ ಕೋಲುಗಳನ್ನು ಇಟ್ಟು ಪೂಜೆ ಸಲ್ಲಿಸಿ ಕುರಿಗಳಿಗೆ ಯಾವುದೇ ರೀತಿಯ ರೋಗ ರುಜಿನೆ ಬಾರದಿರಲಿ ಕುರಿಗಳ ಸಂತತಿಯು ಸಮೃದದ್ಧಿಯಾಗಿರಲಿ ನಾಡಿನಾದ್ಯಂತ ಉತ್ತಮ ಮಳೆ ಬೆಳೆಯಾಗಲಿ ಎಂದು ಹೈಯಾಳಲಿಂಗೇಶ್ವರರಲ್ಲಿ ಬೇಡಿಕೊಂಡು ಏಳು ಕೋಟಿಗೆ ಏಳು ಕೋಟಿಗೆ ಅಂತಾ ಘೋಷಣೆ ಕೂಗಿ ಹಾಲು ಭಂಡಾರವನ್ನು ಮಿಶ್ರಣ ಮಾಡಿ ಗುಡಿಯ ಸುತ್ತಲೂ ಕುರಿಗಳ ಮೇಲೆ ಚರಗ ಚೆಲ್ಲಿ ಚಿಕ್ಕ ಮಕ್ಕಳನ್ನು ಬೆಕ್ಕುಗಳಾಗಿ ಮಾಡಿ ಅವರಿಗೆ ಹಾಲು ಕುಡಿಸುವುದು ತುಂಬಾ ವಿಶೇಷವಾಗಿದೆ ಮೂಲಕ ಈ ಹಾಲು ಹಬ್ಬವನ್ನು ಭಕ್ತರೆಲ್ಲರೂ ಸೇರಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ .ಭಂಡಾರ ಹಾಲು, ಪ್ರಕೃತಿ ಸಮೃದ್ಧಿಯ ಸಂಕೇತವಾಗಿವೆ ನಾಡಿನ ತುಂಬಾ ಉತ್ತಮ ಮಳೆ ಬೆಳೆ ಆರೋಗ್ಯ ಸಮೃದ್ಧಿಗಾಗಿ ಪ್ರತಿವರ್ಷ ಆಚರಿಸುವ ಹಬ್ಬವೇ ಹಾಲಹಬ್ಬ ಎಂದು ಹಿರಿಯರು ಹೇಳುತ್ತಾರೆ.
ಹೈಯ್ಯಾಳ ಲಿಂಗೇಶ್ವರ ಜಾತ್ರೆಯು ನೂಲು ಹುಣ್ಣಿಮೆಯ ದಿನ ಜರಗುವ ಜಾತ್ರೆಯೆಂದು 21 ದಿನಗಳ ವ್ರತ ಮುಕ್ತಾಯಗೊಳಿಸಿ ಅಂದು ಮಹಿಳೆಯರು ಮನೆಯಲ್ಲಿ ನೈವೇದ್ಯ ರೂಪದಲ್ಲಿ ಹೋಳಿಗೆ ಕರ್ಜಿಕಾಯಿ ಕಡಬು ಇನ್ನಿತರ ಖ್ಯಾಧ್ಯಗಳನ್ನು ಮಾಡಿ ಬುಟ್ಟಿಯಲ್ಲಿ ತುಂಬಿಕೊಂಡು ದೇವರಿಗೆ ಅರ್ಪಿಸುವ ಪದ್ಧತಿ ಮೊದಲಿನಿಂದಲೂ ಇದೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಪೂಜಾರಿಗಳು ಸುತ್ತಮುತ್ತಲು ಗ್ರಾಮದ ಭಕ್ತರು ಗ್ರಾಮಸ್ಥರು ಹಾಗೂ ಇನ್ನಿತರರು ಭಾಗವಹಿಸಿದ್ದರು
Post Views: 17 -

ಜುಲೈ 30 ರಂದು ಕುಂಟೋಜಿಗೆ ಬಸವಣ್ಣ ಹಾಗೂ ಸಂಗಮೇಶ್ವರನ ತೇರು ಆಗಮನ
ಸತ್ಯಕಾಮ ವಾರ್ತೆ ಮುದ್ದೇಬಿಹಾಳ:
ಅಮರ ಶಿಲ್ಪಿ ಜಕಣಾಚಾರಿಯವರಿಂದ ನಿರ್ಮಿಸಲಾಗಿದೆ ಎಂದು ಪ್ರತೀತಿ ಹೊಂದಿರುವ ತಾಲೂಕಿನ ಕುಂಟೋಜಿ (ನಂದಿ) ಬಸವೇಶ್ವರ ಸಂಗಮೇಶ್ವರ ದೇವಸ್ಥಾನದ ಜಾತೆಯು ಪ್ರತಿ ಶ್ರಾವಣ ಮಾಸದ ಕೊನೆಯ ಸೋಮವಾರದಿಂದ 5 ದಿನಗಳವರೆಗೆ ನಡೆಯುತ್ತಾ ಬಂದಿದೆ.
ಈ ವರ್ಷ ಇಲ್ಲಿನ ಜಾತ್ರೆಯು ಬಹಳ ವಿಶೇಷವಾಗಿ ನಡೆಯಲಿದೆ. ಈ ದೇವಸ್ಥಾನಕ್ಕೆ ಈ ವರ್ಷದಿಂದ ಅಂದರೆ ಮೊಟ್ಟ ಮೊದಲಬಾರಿಗೆ ಕುಂಟೋಜಿ ಬಸವೇಶ್ವರ (ನಂದಿ) ಹಾಗೂ ಸಂಗಮೇಶ್ವರ ರಥೋತ್ಸವ ಜರುಗಲಿದೆ. ಕುಂಟೋಜಿ ಗ್ರಾಮದ ಮತ್ತು ಸುತ್ತಮುತ್ತಲಿನ ಊರುಗಳು, ನಗರ ಮತ್ತು ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಬಸವಣ್ಣನ ಭಕ್ತರು ಬಹಳ ಭಕ್ತಿಪೂರ್ವಕವಾಗಿ ದೇಣಿಗೆ ನೀಡಿ, ಕೊಪ್ಪಳದ ಜಕಣಾಚರ‍್ಯ ಮತ್ತು ಅಮೋಘವರ್ಷ ನೃಪತುಂಗ ಪ್ರಶಸ್ತಿ ವಿಜೇತರಾದ ರಥಶಿಲ್ಪಿ ಮಲ್ಲಪ್ಪ ಬಡಿಗೇರ ಇವರು ತಮ್ಮ ಎಂ.ಜಿ.ರಥಶಿಲ್ಪಿ ಕಲಾ ಕೇಂದ್ರದಲ್ಲಿ ಸಂಪೂರ್ಣ ಉಚಿತವಾಗಿ ನಿರ್ಮಿಸಿರುವ, ಸಾಗುವಾಣಿ ಮರದ ರಥವನ್ನು ಇದೇ ಜುಲೈ 30 ರಂದು ತಾಲೂಕಾ ಕೇಂದ್ರವಾದ ಮುದ್ದೇಬಿಹಾಳ ನಗರದ ಶ್ರೀದೇವಿ ಪಿಲೇಕೆಮ್ಮ ದೇವಿ ದೇವಸ್ಥಾನದಿಂದ ಕುಂಟೋಜಿ ಗ್ರಾಮದವರೆಗೆ ಭವ್ಯ ಮೆರವಣಿಗೆಯ ಮುಖಾಂತರ ಸ್ವಾಗತಿಸಲಿದ್ದಾರೆ.
ಜುಲೈ 27 ರಂದು ರಥವನ್ನು ತರಲು ಕುಂಟೋಜಿಯಿAದ ಭಕ್ತರು ಮತ್ತು ದೇವಸ್ಥಾನ ಕಮೀಟಿಯವರು ಟ್ರಾö್ಯಕ್ಟರ್ ಮುಖಾಂತರ ಕೊಪ್ಪಳಕ್ಕೆ ತೆರಳಿಲಿದ್ದಾರೆ. ಜುಲೈ 29 ರಂದು ಬೆಳಿಗ್ಗೆ ಕೊಪ್ಪಳದಿಂದ ರಥವನ್ನು ತೆಗೆದುಕೊಂಡು ಹೊರಟು ಅಂದೇ ಸಂಜೆ ಮುದ್ದೇಬಿಹಾಳ ನಗರದ ಶ್ರೀ ದೇವಿ ಪಿಲೇಕೆಮ್ಮ ದೇವಾಸ್ಥಾನಕ್ಕೆ ಬಂದು ತಲುಪಲಿದೆ. ಮರುದಿನ 30 ರಂದು ಬೆಳಿಗ್ಗೆ ಪ್ರಥಮ ರಥವನ್ನು ಮತ್ತು ಅದರ ಜೊತೆಗೆ 21 ಕಿಲೋ ತೂಕದ ಬಸವಣ್ಣ ಮತ್ತು ಸಂಗಮೇಶ್ವರನ ಬೆಳ್ಳಿಯ ಮುಖವಾಡಗಳನ್ನು, ನಾಗರ ಹೆಡೆಯನ್ನು, ತೇರು ಎಳೆಯುವ ಹಗ್ಗ, ತೇರಿಗೆ ರುದ್ರಾಕ್ಷಿ ಮಾಲೆ, ಕಳಸ, ಇವುಗಳನ್ನು ಕುಂಟೋಜಿ ಮತ್ತು ಸುತ್ತಮುತ್ತಲ ಗ್ರಾಮಗಳ ಮಹಿಳಾ ಸಂಘಗಳ ನೇತೃತ್ವದಲ್ಲಿ ಸುಮಂಗಲೆಯರಿAದ ಭವ್ಯ ಕುಂಭ ಮೆರವಣಿಗೆ, ಮತ್ತು ಡೊಳ್ಳು, ಕರಡಿಮಜಲು, ಬೆಂಡುಬಾಜಿ, ಕೋಲಾಟ ನೃತ್ಯ ಸಂಗೀತಗಳ ಸಹಿತ ಸಾಂಪ್ರದಾಯಿಕ ವಾದನಗಳ ಭವ್ಯ ಮೆರವಣಿಗೆಯ ಜೊತೆಗೆ ಕುಂಟೋಜಿ ಗ್ರಾಮಕ್ಕೆ ಕರೆತರಲಾಗುತ್ತದೆ. ಮರುದಿನ ಜುಲೈ 31 ರಂದು ಬೆಳಿಗ್ಗೆ ಗೋಧೂಳಿ ಸಮಯದಲ್ಲಿ ಮುತೈದೆಯರಿಗೆ ಉಡಿ ತುಂಬುವ ಮೂಲಕ ರಥ ಜೋಡಿಸುವ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಎಂದು ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಹೇಳಿದರು.
ಅವರು ಶನಿವಾರ ಬೆಳಿಗ್ಗೆ ಕುಂಟೋಜಿ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜಾತ್ರಾ ಮಹೋತ್ಸವ ಹಾಗೂ ರಥವನ್ನು ತರುವ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ನಾಗಲಿಂಗಯ್ಯ ಮಠ, ರಥದ ಸ್ವಾಗತದ ಸಂದರ್ಭದಲ್ಲಿ ನಡೆಯವಬೇಕಾದ ಸಿದ್ಧತೆಗಳ ಕುರಿತು ಮಾರ್ಗದರ್ಶನ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ದೇವಸ್ಥನ ಕಮೀಟಿಯ ಉಪಾಧ್ಯಕ್ಷ ಆನಂದ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೀಕಾರ, ರಾಮಣ್ಣ ಹುಲಗಣ್ಣಿ, ಮಲ್ಲಿಕಾರ್ಜುನ ಹುಲಬೆಂಚಿ, ಗುರುಪಾದಪ್ಪ ಹೆಬ್ಬಾಳ, ಅಶೋಕ ಕಾಟಿ, ಈರನಗೌಡ ಬಿರಾದಾರ, ಬಸಲಿಂಗಪ್ಪಗೌಡ ಬಿರಾದಾರ, ಶರಣಬಸಪ್ಪ ಪಲ್ಲೇದ, ಸಂಗಮೇಶ ಕುಂಬಾರ, ಸಂಗನಗೌಡ ಪಾಟೀಲ, ಗುರುಪಾದಪ್ಪ ಹೆಬ್ಬಾಳ, ಶಿವಲಿಂಗಪ್ಪ ಗಸ್ತಿಗಾರ, ಬಸಪ್ಪ ಹೂಗಾರ, ಪ್ರಕಾಶ ಹೂಗಾರ, ಸಂಗಯ್ಯ ಮಠ, ಮಮಾತೆಪ್ಪ ಯರಝರಿ, ಮಲ್ಲನಗೌಡ ಬಿರಾದಾರ, ರಾಚಯ್ಯ ಮಠ, ಸಂಗಯ್ಯ ಮಠ, ಪವಾಡೆಪ್ಪ ತಾಂಬ್ರಳ್ಳಿ, ಸಂತೋಷ ಬಿರಾದಾರ, ಶಿವಪ್ಪ ಕೋಲಕಾರ, ಅಂಬ್ರೇಶ ಕಾಟಿ, ಶರಣಬಸ್ಸು ಫಣೇದಕಟ್ಟಿ, ಶರಣಗೌಡ ಬಿರಾದಾರ, ಮಂಜೂ ಅಬ್ಬಿಹಾಳಮಠ, ಶಿವು ಅಂದೇಲಿ, ಸಂಗಮೇಶ ಯರಝರಿ ಮತ್ತೀತರರು ಇದ್ದರು.
Post Views: 40 -

ನಲ್ ಜಲ್ ಮಿತ್ರ ಯೋಜನೆ ಸದುಪಯೋಗ ಪಡಿಸಿಕೊಳ್ಳಿ – ಸಿಇಒ ಲವೀಶ್ ಒರಾಡಿಯ
ಸತ್ಯಕಾಮ ವಾರ್ತೆ ಯಾದಗಿರಿ/ಕಡೆಚೂರು:
ಗ್ರಾಮೀಣ ಭಾಗದ ಮಹಿಳೆಯರು ನಲ್ ಜಲ್ ಮಿತ್ರ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಾಡಿಯ ಹೇಳಿದರು.
ಕಡೆಚೂರು ಹೊರವಲಯದ ಕೈಗಾರಿಕ ಪ್ರದೇಶದಲ್ಲಿರುವ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಡೆದ ನಲ್ ಜಲ್ ಮಿತ್ರ ಯೋಜನೆಯ ನೀರು ವಿತರಣಾ ನಿರ್ವಾಹಕ ಬಹು ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತರಬೇತಿಯಲ್ಲಿ ವಿತರಿಸಲಾಗುವ ಕಿಟ್ ಕುರಿತು ಸಂಪೂರ್ಣ ಮಾಹಿತಿ ಪಡೆಯಬೇಕು. ಇದರಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವಾಗ ಸಹಕಾರಿಯಾಗುತ್ತದೆ. ಮಹಿಳರಿಗೆ ನಲ್ಲಿ ನೀರಿನ ವಿತರಣಾ ವ್ಯವಸ್ಥೆ ಮತ್ತು ನೀರಿನ ಪ್ರಾಥಕ್ಷಿಕೆ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಮುಖ್ಯೋಪಾಧ್ಯಾಯರು ಹಾಗೂ ಅಡುಗೆ ಸಹಾಯಕರ ಬದಲಾವಣೆಗೆ ಸೂಚನೆ
ಈಗಾಗಲೇ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಿಗೆ ತರಬೇತಿ ನೀಡಿ ಸ್ವ ಉದ್ಯೋಗಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ನೀರು ವಿತರಣಾ ನಿರ್ವಾಹಕರಿಗೆ ಬಹು ಕೌಶಲ್ಯ ತರಬೇತಿ ನೀಡಲಾಗುತ್ತದೆ.ಮಹಿಳೆಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲ ರವಿಚಂದ್ರ ಮಾತನಾಡಿ, ಈ ಸಂಸ್ಥೆಯಲ್ಲಿ ತಮಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತವೆ. ಗ್ರಾಮೀಣ ಭಾಗದ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಯೋಜನಾ ನಿರ್ದೇಶಕ ಸಿಬಿ ದೇವರ ಮನೆ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಆನಂದ್ ನಲ್ ಜಲ್ ಮಿತ್ರ ಯೋಜನೆಯ ಅಧಿಕಾರಿಗಳಾದ ಗಿರೀಶ್, ಸುಮಂಗಲ,ರಮೇಶ್, ಕೇಂದ್ರದ ಸಿಬ್ಬಂದಿ ಮತ್ತು ಮಹಿಳೆಯರು ಉಪಸ್ಥಿತರಿದ್ದರು.
Post Views: 100 -

ಅರಕೇರಾ(ಕೆ) ವಸತಿ ಶಾಲೆಗೆ ನ್ಯಾ. ಮರಿಯಪ್ಪ ಭೇಟಿ.
- ಮುಖ್ಯೋಪಾಧ್ಯಾಯರು ಹಾಗೂ ಅಡುಗೆ ಸಹಾಯಕರ ಬದಲಾವಣೆಗೆ ಸೂಚನೆ
- ಮಕ್ಕಳಿಂದ ಸಮಸ್ಯೆ ಆಲಿಕೆ – ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ.
ಸತ್ಯಕಾಮ ವಾರ್ತೆ ಯಾದಗಿರಿ:
ಮಕ್ಕಳಿಂದಲೇ ಶೌಚಾಲಯ ಸ್ವಚ್ಛಗೊಳಿಸಲಾಗಿದೆ ಎಂದು ಇದೇ ಬುಧವಾರ 16 ರಂದು ಪತ್ರಿಕೆಯಲ್ಲಿ ಸುದ್ದಿಯಾಗಿದ್ದ ತಾಲೂಕಿನ ಅರಕೇರಾ(ಕೆ) ಗ್ರಾಮದ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಗೆ ಶನಿವಾರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮರಿಯಪ್ಪ ಭೇಟಿ ನೀಡಿ ಅಲ್ಲಿನ ಎಲ್ಲವೂ ಸಮಗ್ರ ಪರಿಶೀಲನೆ ನಡೆಸಿದರು.
ವಸತಿ ನಿಲಯ, ಅಡುಗೆ ಕೋಣೆ, ಶೌಚಾಲಯ ಸ್ಥಳ, ಶಾಲಾ ಕೋಣೆ ಹೀಗೆ ಎಲ್ಲ ಕಡೆ ಸಂಚರಿಸಿ ಅಲ್ಲಿನ ಪೂರಕ ವಾತವರಣ ವಿಕ್ಷೀಕಿಸಿದರು.
ಇದೇ ವೇಳೆ ವಸತಿ ನಿಲಯದ ಮಕ್ಕಳನ್ನು ಮಾತನಾಡಿಸಿದ ನ್ಯಾಯಾಧೀಶರಾದ ಮರಿಯಪ್ಪ ಅವರಿಗೆ ಮಕ್ಕಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಕಣ್ಣಿಗೆ ಕಟ್ಟಿದಂತಾದವು. ಶೌಚಾಲಯ ಶುಚಿಗೊಳಿಸಲು ಯಾರು ಇಲ್ಲ. ಕಳೆದ ಫೆಬ್ರವರಿ ತಿಂಗಳಿಂದ ಮಾಸಿಕವಾಗಿ ನೀಡುವ ಉಪಯುಕ್ತ ವಸ್ತುಗಳ ಕಿಟ್ ವಿತರಿಸಿಲ್ಲ, ತರಕಾರಿ ಎಲ್ಲೆಂದರಲ್ಲಿ ಚೆಲ್ಲುವ ವಿಷಯ, ಕೆಟ್ಟಿರುವ ಇನ್ನವೇಟರ್, ಗುಡ್ಡಕ್ಕೆ ಹೊಂದಿಕೊಂಡಿರುವ ಈ ಸ್ಥಳಕ್ಕೆ ಆಗಾಗ ಕಾಣಿಸಿಕೊಳ್ಳುವ ಹಾವು, ಚೇಳುಗಳು, ಕಸದ ರಾಶಿ ಹಾಕಿರುವ ಬಗ್ಗೆ ಹೀಗೆ ಹಲವು ಸಮಸ್ಯೆಗಳು ಮಕ್ಕಳಿಂದ ಕೇಳಿದ ಅವರು ಕೆಲ ಕಾಲ ದಂಗಾದರು.
ಈ ಎಲ್ಲವೂ ಕೇಳಿಸಿಕೊಂಡ ಅವರು, ಈ ಸಮಸ್ಯೆಗಳ ನಡುವೆ ಮಕ್ಕಳು ಹೇಗೆ ಇರಬೇಕು, ಹೇಗೆ ಅಭ್ಯಾಸ ಮಾಡಬೇಕೆಂದು ಪ್ರಶ್ನಿಸಿ, ಇದೆಲ್ಲವೂ ಒಂದು ವಾರದಲ್ಲಿ ಬಗೆಹರಿಸಬೇಕೆಂದು ಡಿಡಿಪಿಐ ಸಿ.ಎಸ್.ಮುದೋಳ್ ಅವರಿಗೆ ಸೂಚಿಸಿದರು.
ಈ ವಸತಿ ಸಹಿತ ಶಾಲಾ ಕಟ್ಟಡ ಮತ್ತು ವಾತವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾಯಧಿಶರು, ಇದರ ಉಸ್ತುವಾರಿ ಸರಿಯಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ಒಗ್ಗಟನಿಂದ ಇದ್ದು ಎಲ್ಲವೂ ಕೆಲಸ ಮಾಡಿ, ಆದರೆ ಆ ವಾತವರಣ ಇಲ್ಲಿ ಕಾಣಿಸುತ್ತಿಲ್ಲ ಎಂದರು. ಇಲ್ಲಿನ ಉಸ್ತುವಾರಿಗಳಾದವರೂ ಎಲ್ಲವೂ ಗಮನಿಸಿ ಮಕ್ಕಳ ಹಿತ ಕಾಪಾಡಬೇಕೆಂದರು.
ಒಂದು ವಾರದ ನಂತರ ಮತ್ತೇ ಭೇಟಿ ನೀಡುತ್ತೆನೆ. ಅಷ್ಟರಲ್ಲಿಯೇ ಎಲ್ಲವೂ ಸರಿ ಆಗಬೇಕೆಂದು ಮರಿಯಪ್ಪ ಹೇಳಿದರು.
ಇದೇ ವೇಳೆ ಮುಖ್ಯೋಪಾಧ್ಯಾಯರು ಹಾಗೂ ಅಡುಗೆ ಸಹಾಯಕರ ಕಾರ್ಯವೈಖರಿ ತೀರಾ ಅಸಮರ್ಪಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ಇಬ್ಬರ ಬದಲಾವಣೆಗೆ DDPI ಯವರಿಗೆ ಸೂಚನೆ ನೀಡಿಲಾಗಿದೆ ಎಂದು ತಿಳಿದು ಬಂದಿದೆ.
ಡಿಡಿಪಿಐ ಸಿ.ಎಸ್.ಮುದೋಳ್, ಬಿಇಒ ಜಾನೆ, ಬಿಆರ್ ಸಿ, ಮುಖ್ಯಗುರು ನಿವೇದಿತಾ ಪಟ್ಟೇದಾರ, ಎಸ್ ಡಿಎಸ್ ಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆಯೇ ಇತರರಿದ್ದರು.
—
ಕಿಟ್ ಗಳ ವಿತರಣೆ.
ಸ್ಥಳದಲ್ಲಿಯೆ ಕಿಟ್ ಗಳ ವ್ಯವಸ್ಥೆ ಮಾಡಿದ ಡಿಡಿಪಿಐ ಮುದೋಳ್ ಅವರು, ಶೌಚಾಲಯ ಸ್ವಚ್ಚತೆಗೆ ನೇಮಕ ಮಾಡಿಕೊಳ್ಳಲಾಗುವುದೆಂದರು.
ಆಯುಕ್ತರಿಗೆ ವರದಿ ಸಲ್ಲಿಕೆ.
ಮಕ್ಕಳಿಂದ ಶೌಚಾಲಯ ಸ್ವಚ್ಚತೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆಯೇ ವರದಿ ತರಿಸಿ ಸೂಕ್ತ ಕ್ರಮಕ್ಕಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಕಳುಹಿಸಲಾಗಿದೆ.
ಸಿ.ಎಸ್.ಮುದೋಳ್
ಡಿಡಿಪಿಐ ಯಾದಗಿರಿ.
Post Views: 237 -

ಐತಿಹಾಸಿಕ ಕೆರೆಯ ಸಂರಕ್ಷಣೆ ಮತ್ತು ಉದ್ಯಾನವನದ ರಕ್ಷಣೆಗಾಗಿ ಕರವೇ ಒತ್ತಾಯ
ಸತ್ಯಕಾಮ ವಾರ್ತೆ ಲಿಂಗಸುಗೂರು:
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಲಿಂಗಸುಗೂರಿನ ಐತಿಹಾಸಿಕ ಕೆರೆ ಸಂಪೂರ್ಣ ನಿರ್ಲಕ್ಷೆಯಿಂದ ದುರಾವಸ್ಥೆಗೆ ತುತ್ತಾಗಿದ್ದು, ಸುತ್ತಮುತ್ತ ಬೆಳೆದಿರುವ ಮುಳ್ಳು ಗಿಡಗಳು ಹಾಗೂ ಹೂಳು ನಾಶ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕವು ಪುರಸಭೆ ಅಧ್ಯಕ್ಷರಿಗೆ ಮನವಿಯನ್ನು ನೀಡಿದರು.
ಕರವೇ ತಾಲೂಕು ಘಟಕದ ಅಧ್ಯಕ್ಷರಾದ ಆಂಜನೇಯ.ಹೆಚ್.ಭಂಡಾರಿ “ಈ ಐತಿಹಾಸಿಕ ಕೆರೆಯ ನೀರನ್ನು ಬ್ರಿಟಿಷರ ಕಾಲದಲ್ಲಿ ಕೂಡ ಕುಡಿಯಲು
ಬಳಸಲಾಗುತ್ತಿತ್ತು. ಆದರೆ ಇಂದು ಜಾನುವಾರುಗಳು ಕೂಡ ನೀರು ಕುಡಿಯಲು ಹಿಂದೇಟು ಹಾಕುವಂತಾಗಿದೆ. ಸುತ್ತಲಿನ ಭೂಮಿ ಕೂಡ ಒತ್ತುವರಿಯಿಂದ ಕೆರೆಯ ಗಾತ್ರ ಹದಗೆಟ್ಟಿದೆ.ಅಲ್ಲದೆ, ಕೆರೆಯ ದಡದಲ್ಲಿರುವ ಲಕ್ಷಾಂತರ ವೆಚ್ಚದ ಪಟ್ಟಣದ ಏಕೈಕ ಉದ್ಯಾನವನ ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿದೆ. ಕಲ್ಲಿನ ಬೆಂಚುಗಳು ಮುರಿದಿರುವುದು, ಕಸದ ಗುಂಡಿಯಾಗಿ ಉದ್ಯಾನವು ಮಾರ್ಪಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಪುರಸಭೆಗೆ ಮನವಿ ಸಲ್ಲಿಸಿ, ಕೆರೆ ಸುತ್ತಲಿನ ಗಿಡಗಂಟಿ ತೆರವುಗೊಳಿಸಿ, ಹೂಳು ಸ್ವಚ್ಛಗೊಳಿಸಿ, ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಮತ್ತು ಉದ್ಯಾನವನದ ನಿರ್ವಹಣೆಗಾಗಿ ಪ್ರತ್ಯೇಕ ಅನುದಾನ ನೀಡಬೇಕು ಎಂದು ಒತ್ತಾಯಿಸಿದೆ.ಈ ಸಂದರ್ಭದಲ್ಲಿ ಕರವೇ ಕಾರ್ಯ ಕರ್ತರು ಇದ್ದರು.
Post Views: 18 -

ನಾರಾಯಣಪೂರ ಕೆಬಿಜೆಎನ್ಎಲ್ ಅಧಿಕಾರಿಗಳ ಮೊಂಡಾಟ : ರೈತರ ನಿತ್ಯ ಅಲೆದಾಟ
ನೀರು ಬಳಕೆ ಪ್ರಮಾಣ ಪತ್ರ ಪಡೆಯಲು ರೈತರು ನಿತ್ಯ ಅಲೆದಾಟ
ವರದಿ: ಕುದಾನ್ ಸಾಬ್
ಸತ್ಯಕಾಮ ವಾರ್ತೆ ಯಾದಗಿರಿ:ನಾರಾಯಣಪುರ ಆಣೆಕಟ್ಟು ಹಿನ್ನೀರಿನ ನೀರು ಬಳಕೆ ಪ್ರಮಾಣ ಪತ್ರ ಪಡೆಯಲು ಇನ್ನೀತರ ದಾಖಲಾತಿಗಳನ್ನು ಪಡೆಯಲು ತಿಂಗಳುಗಟ್ಟಲೇ ರೈತರನ್ನು ಅಧಿಕಾರಿಗಳು ಅಲೆದಾಡಿಸುವ ಪರಿಸ್ಥಿತಿ ನಿರ್ಮಾಣ ವಾಗಿರುವುದರಿಂದ ರೈತರಿಗೆ ನೀರಿನ ಪತ್ರದ ಸವಾಸನೆ ಬೇಡ ಎನ್ನುವಂತಾಗಿದೆ.ಹೌದು.. ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರದಲ್ಲಿರುವ ಕೆಬಿಜೆಎನ್ಎಲ್ ಪರಿಸ್ಥಿತಿವಿದು. ನಾರಾಯಣಪುರ ಆಣೆಕಟ್ಟು ಹಿನ್ನೀರು ಬಳಕೆ ಮಾಡಲು ಈ ಕಚೇರಿಯು 5 ತಾಲೂಕಿನ ರೈತರಿಗೆ ಪ್ರಮಾಣ ಪತ್ರವನ್ನು ನೀಡುತ್ತದೆ. ಪ್ರಮಾಣ ಪತ್ರಕ್ಕೆ ರೈತರಿಂದ ಕೆಲವು ಅಧಿಕಾರಿಗಳು ಹಣ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಹಣ ನೀಡದೇ ಇರುವ ರೈತರನ್ನು ಕುಂಟುನೆಪ ಹೇಳಿ ಅಲೆದಾಡಿಸಲಾಗುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿವೆ.
ನಾರಾಯಣಪೂರ ಕೆಬಿಜೆಎನ್ಎಲ್ ನಂ.3 ಕಚೇರಿ ಕಾರ್ಯನಿರ್ವಾಹಕ ಅಭಿಯಂತರರು ಹೆಚ್.ಬಿ ಕೊಣ್ಣೂರ ಅವರಿಗೆ ಈ ಬಗ್ಗೆ ರೈತರು ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಬಳಕೆ ಪ್ರಮಾಣ ಪತ್ರ ನೀಡಲು ನಮಗೆ ಬರುವುದಿಲ್ಲ ಮುಖ್ಯ ಇಂಜಿನಿಯರ್ ಮಂಜುನಾಥ್ ಆರ್ ಅವರಿಗೆ ಬರುತ್ತದೆ ಎಂದು ತಾಳ್ಮೆಯಿಂದ ಜಾರಿಕೊಳ್ಳುವ ಕಾರ್ಯವನ್ನು ಈ ಅಧಿಕಾರಿ ರೂಢಿಸಿಕೊಂಡಿದ್ದಾರೆ.
ಪ್ರಮಾಣ ಪತ್ರ ಕುರಿತು ನಾರಾಯಣಪುರ ಕೆಬಿಜೆಎನ್ಎಲ್ ಮುಖ್ಯ ಇಂಜಿನಿಯರ್ ಮಂಜುನಾಥ್ ಆರ್ ಅವರಿಗೆ ಈ ಕುರಿತು ಗಮನಕ್ಕೆ ತಂದ ವೇಳೆಯಲ್ಲಿ, ಕೆಳ ದರ್ಜೆಯ ಅಧಿಕಾರಿಗಳು ರೈತರಿಗೆ ಸರಿಯಾದ ಸಮಯದಲ್ಲಿ ನೀರು ಬಳಕೆ ಪ್ರಮಾಣ ಪತ್ರ ನೀಡದೇ ರೈತರನ್ನು ಪರದಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದು ರೈತರಿಗೆ ಮನದಟ್ಟಾಯಿತು.
ಇನ್ನು ರೈತರಿಗೆ ಅಲೆದಾಡಿಸುವ ಕೆಲಸವನ್ನು ಇಲ್ಲಿನ ಅಧಿಕಾರಿಗಳು ಮಾಡುತ್ತಿದ್ದು, ರೈತರ ಕೆಲಸ ಮಾಡಿಕೊಡುವಂತೆ ಮುಖ್ಯ ಇಂಜಿನಿಯರ್ ಹೇಳಿದರು ಕೂಡ ಸಿಬ್ಬಂದಿ ಶಿವನಗೌಡ ಅವರು ಪತ್ರ ನೀಡದೆ ರೈತರನ್ನು ಅಲೆದಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೇಲಾಧಿಕಾರಿಗಳು ಶಿವನಗೌಡ ಅವರಿಗೆ ರೈತರಿಗೆ ಪ್ರಮಾಣ ನೀಡಲು ತಾಕೀತು ಮಾಡಿದರು ಪ್ರಮಾಣ ಪತ್ರ ನೀಡದ ತಮ್ಮ ಮೊಂಡತನವನ್ನು ಮತ್ತೆ ಮುಂದುವರೆಸಿದ್ದಾರೆ.
ಒಟ್ಟಾರೆಯಾಗಿ ನಾರಾಯಣಪುರ ಆಣೆಕಟ್ಟು ಕೆಬಿಜೆಎನ್ಎಲ್ ಕಚೇರಿಯಲ್ಲಿ ನೀರು ಬಳಕೆ ಪ್ರಮಾಣ ಪತ್ರ ಪಡೆಯಬೇಕೆಂದರೆ ಕನಿಷ್ಠ ಐದಕ್ಕಿಂತ ಹೆಚ್ಚು ಬಾರಿ ಕಚೇರಿಗೆ ಅಲೆದಾಡಬೇಕು. ಇಲ್ಲದಿದ್ದರೆ ರೈತರಿಗೆ ಪ್ರಮಾಣ ಪತ್ರ ಸಿಗುವುದೇ ಅಪರೂಪ ಎನ್ನುವಂತೆ ರೈತರ ಆಶಾಭಾವವಾಗಿದೆ. ಈ ಕೂಡಲೇ ಇಂತಹ ಅಧಿಕಾರಿಗಳ ಬಗ್ಗೆ ಮುಖ್ಯ ಇಂಜಿನಿಯರ್ ಮಂಜುನಾಥ್ ಆರ್ ಅವರು ಸೂಕ್ತ ಕ್ರಮಕೈಗೊಂಡು ರೈತರಿಗೆ ಸುಲಭ ಹಾಗೂ ವಿಳಂಬ ನೀತಿ ಅನುಸರಿಸದೇ ಸರಿಯಾದ ವೇಳೆಯಲ್ಲಿ ಪ್ರಮಾಣ ಪತ್ರ ರೈತರಿಗೆ ಸಿಗುವಂತಾಗಲಿ ಎನ್ನುವುದೇ ಸತ್ಯಕಾಮ ದಿನಪತ್ರಿಕೆ ಆಶಯ.
Post Views: 62 -

ದೊಡ್ಡ ಕೆರೆಯಿಂದ ಅಪಾಯ ತಪ್ಪಿಸಲು ತಡೆಗೊಡೆ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷರ ಸೂಚನೆ
ವಾರ್ಡ ನಂ 5 ರಲ್ಲಿ ಲಲಿತಾ ಅನಪುರ ಮಿಂಚಿನ ಸಂಚಾರ.
ಸತ್ಯಕಾಮ ವಾರ್ತೆ ಯಾದಗಿರಿ:
ತಾವು ಪ್ರತಿನಿಧಿಸುವ ವಾರ್ಡ ನಂ 5 ರ ದೊಡ್ಡ ಕೆರೆ ಏರಿಯಾ ಮತ್ತು ದುರ್ಗಾ ನಗರದ ವಿವಿಧಡೆ ಬುಧವಾರ ಮಿಂಚಿನ ಸಂಚಾರ ನಡೆಸಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು, ಅಲ್ಲಿನ ದೊಡ್ಡಕರೆ ಮಳೆ ಬಂದರೆ ನೀರು ಶಾಲೆಗೆ ಹಾಗೂ ಅಕ್ಕ,ಪಕ್ಕದ ಮನೆಗಳಿಗೆ ನುಗ್ಗುತ್ತಿದ್ದು, ಕೂಡಲೇ ತಡೆಗೊಡೆ ನಿರ್ಮಿಸಲು ಅಂದಾಜು ವೆಚ್ಚ ತಯಾರಿಸುವಂತೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅದೇ ವಾರ್ಡನ ದುರ್ಗಾ ನಗರದ ಸ್ಲಂ ಏರಿಯಾಕ್ಕೂ ಭೇಟಿ ನೀಡಿದ ಅವರು,ಅಕ್ಕ,ಪಕ್ಕ ಮನೆಗಳಿಗೆ ನೀರು ನುಗ್ಗಬಾರದು ಮತ್ತು ತಾಂಬರ್ ಕೆರೆ ಪಕ್ಕದಲ್ಲಿ ರಸ್ತೆ ಹಾಳಾಗಬಾರದೆಂದು ಸ್ಟೋನ್ ಪೆಚಿಂಗ್ ಮಾಡಲು ಸಹ ಹೇಳಿದರು.
ಪ್ರಕೃತಿ ವಿಕೋಪ ನಿಧಿಯಡಿ ಮಂಜೂರು ಆಗಿರುವ 25 ಲಕ್ಷ ರೂ.ದಲ್ಲಿ ಈ ಎರಡು ಕೆಲಸ ಜೊತೆಗೆ ಸಣ್ಣ,ಪುಟ್ಟ ಕೆಲಸಗಳನ್ನು ಮಾಡಲು ಅಧ್ಯಕ್ಷರು ಸೂಚಿಸದರು. ಸುಮಾರು ಒಂದು ತಾಸು ತಮ್ಮ ವಾರ್ಡಿನ ವಿವಿಧಡೆ ಸಂಚರಿಸಿದ ಅವರು ಅಲ್ಲಿನ ಕೆಲ ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಚರಂಡಿ ಒಳಗಡೆ ಹೂತಿದ್ದ ಗಮನಿಸಿದ ಅವರು ಅವುಗಳನ್ನು ಸ್ಥಳಾಂತರಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಯ ಮುಂಭಾಗದಲ್ಲಿರುವ ಕಂಬಕ್ಕೆ ದೀಪ ಹಾಕಲು ಸೂಚನೆ ನೀಡಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿಶ್ವನಾಥ ಪಾಟೀಲ್, ನಗರಸಭೆ ನಾಮ ನಿರ್ದೇಶಕ ಸದಸ್ಯರಾದ ವೆಂಕಟೇಶ ನಾಗುಂಡಿ, ನಿಂಗಪ್ಪ ಜಾಲಗಾರ್, ದುರ್ಗಪ್ಪ, ಸುಗಪ್ಪ ಸೇರಿದಂತೆಯೇ ಇತರರಿದ್ದರು.
Post Views: 29 -

ಹದಗೆಟ್ಟ ರಸ್ತೆಗೆ ಕಾಂಕ್ರಿಟ್ ಹಾಕಿಸಿ, ಚರಂಡಿ ನಿರ್ಮಿಸಿ ಅನುಕೂಲ ಮಾಡಿಕೊಟ್ಟ ನಗರಸಭೆ ಅಧ್ಯಕ್ಷೆ
ಸತ್ಯಕಾಮ ವಾರ್ತೆ ಯಾದಗಿರಿ:
ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಹೋಗುವ ಶಾಸ್ತ್ರಿ ಸರ್ಕಲ್ ಪಕ್ಕದ ರಸ್ತೆ ಹಾಗೂ ಬಾಲಾಜಿ ದೇವಸ್ಥಾನ ಹಿಂಭಾಗದಲ್ಲಿರುವ ರಸ್ತೆಯ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ರಸ್ತೆ ಮೇಲಿನ ನೀರು ಹಾಗೂ ಚರಂಡಿ ನೀರನ್ನು ಸರಾಗವಾಗಿ ಹರಿಯುವ ಹಾಗೂ ನಿಲ್ಲದಂತೆಯೇ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಕಾಮಗಾರಿ ಮಾಡಿಸಿದ್ದಾರೆ.
ಚರಂಡಿ ಸ್ವಚ್ಚಗೊಳಿಸಿ ಅಗತ್ಯ ಕಾಮಗಾರಿ ಕೈಗೊಂಡು ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಮುಂದೇ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ, ರೈಲ್ವೆ ಸ್ಟೇಷನ್ ಹೋಗುವ ರಸ್ತೆಯಲ್ಲಿ ಸ್ವಲ್ಪ ಮಳೆ ಬಂದರೂ ನೀರು ನಿಂತು ಸಂಚಾರಕ್ಕೆ ಅನಾನೂಕುಲವಾಗುತ್ತಿತ್ತು.ಇದನ್ನು ಮನಗಂಡ ಅಧ್ಯಕ್ಷೆ ಅನಪೂರ ಅವರು, ಕಾಂಕ್ರೀಟ್ ಹಾಕುವ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ.
ಸುಮಾರು ದಿನಗಳಿಂದ ಮಳೆ ಬರುತ್ತಲೇ ರಸ್ತೆಯ ಮೇಲೆ ನೀರು ನಿಂತು ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುವುದನ್ನು ಖುದ್ದಾಗಿ ಗಮನಿಸಿದ ಅಧ್ಯಕ್ಷರು, ರಸ್ತೆ ದುರಸ್ತಿ ಹಾಗೂ ಚರಂಡಿ ನಿರ್ಮಾಣ ಮಾಡುವ ಮೂಲಕ ಸುಲಭ ಸಂಚಾರಕ್ಕೆ ಅನುಕೂಲಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಭಾರಿ ಕಿರಿಯ ಅಭಿಯಂತರರಾದ ಅಂಬಿಕೇಶ್ವರ ಹೊನಕೇರಿ ಸೇರಿದಂತೆಯೇ ಇತರರಿದ್ದರು.
Post Views: 82