Blog

  • ನರೇಂದ್ರ ಮೋದಿಜಿ ಪ್ರಧಾನಿಮಂತ್ರಿಯಾಗಿ ಅಪ್ರತಿಮ ಸಾಧನೆ: ಮಹೇಶರಡ್ಡಿ ಮುದ್ನಾಳ

    ನರೇಂದ್ರ ಮೋದಿಜಿ ಪ್ರಧಾನಿಮಂತ್ರಿಯಾಗಿ ಅಪ್ರತಿಮ ಸಾಧನೆ: ಮಹೇಶರಡ್ಡಿ ಮುದ್ನಾಳ

    ಸತ್ಯಕಾಮ ವಾರ್ತೆ ಯಾದಗಿರಿ:-
    ಪ್ರಧಾನಿ ನರೇಂದ್ರ ಮೋದಿಜಿ ಅವರು ದೇಶದ ಅಭಿವೃದ್ಧಿಗಾಗಿ 4,078 ದಿನಗಳ ಕಾಲ ದೇಶದ ಪ್ರಧಾನಿಯಾಗಿ ನಿರಂತರ ಸೇವೆ ಮಾಡುವುದರೊಂದಿಗೆ, ಮಾಜಿ ಪ್ರಧಾನಿ ಮಂತ್ರಿ ಇಂದಿರಾ ಗಾಂಧಿಯವರ ಸೇವಾವಧಿ (4077 ದಿನ) ಅನ್ನು ಹಿಂದಿಕ್ಕಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

    ದೇಶದ ಇತಿಹಾಸದಲ್ಲಿ ಎರಡನೇ ಅತಿ ದೀರ್ಘಾವಧಿಯ ಪ್ರಧಾನಮಂತ್ರಿ, ರಾಜಕೀಯ ಪಕ್ಷದ ನಾಯಕರಾಗಿ, ಸತತ ಆರು ಸಲ ವಿಜಯಗಳಿಸಿ ಸಾಂವಿಧಾನಿಕ ಹುದ್ದೆಯ ಜವಾವ್ದಾರಿ ನಿರ್ವಹಿಸಿರುವ ಹೆಗ್ಗಳಿಕೆ, ನೆಹರೂ ಹೊರತಾಗಿ ಸತತ ಮೂರು ಭಾರಿ ಪ್ರಧಾನಿ ಹುದ್ದೆಯ ಜವಾಬ್ದಾರಿ ಹಾಗೂ ದೀರ್ಘಾವಧಿ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಹಾಗೂ ಹಿಂದಿಯೇತರ ಪ್ರಧಾನಿ ಎಂಬ ಕೀರ್ತಿಯೂ ಸನ್ಮಾನ್ಯ ಪ್ರಧಾನಿಗಳದ್ದಾಗಿದೆ.

    ಮೋದಿಜಿಯವರು ಸಿಎಂ ಮತ್ತು ಪ್ರಧಾನಿಯಾಗಿ ಸುಮಾರು 24 ವರ್ಷಗಳ ಸುದೀರ್ಘ ಆಡಳಿತದೊಂದಿಗೆ,  ರಾಷ್ಟ್ರದ ಪ್ರಗತಿಗೆ ದೃಢಸಂಕಲ್ಪ, ತ್ಯಾಗ ಮತ್ತು ಅವಿರತ ಬದ್ಧತೆಯ ಸಂಕೇತವಾಗಿ ಉಳಿದಿದ್ದಾರೆ. ಇದು ಮೋದಿಜೀಯವರು ನಿರ್ಮಿಸಿದ ಮೈಲಿಗಲ್ಲಿನ ಸಂಭ್ರಮಾಚರಣೆ ಮಾತ್ರವಲ್ಲ, ಪರಿವರ್ತನೆಯ ಯುಗ ಮತ್ತು ನಿರ್ಣಾಯಕ, ದೂರದೃಷ್ಟಿಯ ನಾಯಕತ್ವವನ್ನು ಆಚರಿಸುವ ಸಂಭ್ರಮದ ಕ್ಷಣವಾಗಿದೆ ಎಂದು ಹೇಳಿದರು.
    apvc-iconPost Views: 49
  • ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ – ಮೊದಲ ದಿನವೇ ಭರ್ಜರಿ ಕಲೆಕ್ಷನ್!

    ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ – ಮೊದಲ ದಿನವೇ ಭರ್ಜರಿ ಕಲೆಕ್ಷನ್!

    ತೆಲುಗು ಚಿತ್ರರಂಗದ ಖ್ಯಾತ ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಪಿರಿಯಡ್ ಆಕ್ಷನ್ ಎಪಿಕ್ ಹರಿ ಹರ ವೀರ ಮಲ್ಲು ಚಿತ್ರ ಇಂದು ವಿಜೃಂಭಣೆಯಿಂದ ತೆರೆಕಂಡಿದ್ದು, ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರವು, ಬಿಡುಗಡೆ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಅನ್ನು ದಾಖಲಿಸಿದೆ.

    ಚಿತ್ರದ ಚಿತ್ರೀಕರಣ ಸುಮಾರು ಐದು ವರ್ಷಗಳಿಂದ ನಡೆಯುತ್ತಾ ಬಂದಿದ್ದು, ಅನೇಕ ಬಾರಿ ಬಿಡುಗಡೆಯು ಮುಂದೂಡಲ್ಪಟ್ಟಿತ್ತು. ಕೊನೆಗೆ ಜುಲೈ 24 ರಂದು ತೆರೆಕಂಡ ಈ ಸಿನಿಮಾ, ಬಿಡುಗಡೆಯ ದಿನವೇ ಉತ್ತಮ ಪ್ರತಿಕ್ರಿಯೆಗಳನ್ನು ಕಂಡಿದೆ.

    ಚಿತ್ರ ಮೊದಲ ದಿನದ ಕಲೆಕ್ಷನ್ ₹ (ರೂ)
    ಹರಿ ಹರ ವೀರ ಮಲ್ಲು ₹43.8 ಕೋಟಿ
    ವಕೀಲ್ ಸಾಬ್ ₹40.10 ಕೋಟಿ
    ಭೀಮ್ ನಾಯಕ್ ₹37.15 ಕೋಟಿ
    ಬ್ರೋ ₹30.5 ಕೋಟಿ

    ಈ ಮೂಲಕ, ಹರಿ ಹರ ವೀರ ಮಲ್ಲು ಸಿನಿಮಾ ಪವನ್ ಕಲ್ಯಾಣ್ ಅವರ ಚಲನಚಿತ್ರ ವೃತ್ತಿ ಜೀವನದಲ್ಲಿ ಅತ್ಯುತ್ತಮ ಆರಂಭಿಕ ದಿನದ ಕಲೆಕ್ಷನ್ ದಾಖಲಿಸಿದ ಸಿನಿಮಾ ಎನಿಸಿಕೊಂಡಿದೆ.

    ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚಿತ್ರವು ಭರ್ಜರಿಯಾಗಿ ಓಡುತ್ತಿದ್ದು, ಈ ಎರಡು ರಾಜ್ಯಗಳಿಂದ ಮಾತ್ರವೇ ₹7 ಕೋಟಿ ರೂ. ಕಲೆಕ್ಷನ್‌ ಆಗಿದೆ. ಚಿತ್ರದ ಒಟ್ಟು ಭಾರತ ಕಲೆಕ್ಷನ್ ₹11.12 ಕೋಟಿ ರೂ. ಎಂದು ಪ್ರತ್ಯೇಕ ವರದಿಯೊಂದರಲ್ಲಿ ಹೇಳಲಾಗಿದೆ.

    ಪವನ್ ಕಲ್ಯಾಣ್ ಅವರ ಶಕ್ತಿ, ಪರದೆಯ ಮೇಲೆ ಅವರ ಬಲಿಷ್ಠ ಹಾಜರಾತಿ ಮತ್ತು ಆಕ್ಷನ್ ದೃಶ್ಯಗಳ ನಿರ್ವಹಣೆ ಚಿತ್ರದ ಹೈಲೈಟ್ ಆಗಿವೆ. ಚಿತ್ರದಲ್ಲಿನ ವಿ.ಎಫ್‌.ಎಕ್ಸ್, ಕಲಾತ್ಮಕ ದೃಶ್ಯಗಳು ಪ್ರೇಕ್ಷಕರನ್ನು ಸೆಳೆದಿವೆ. ಆದರೆ ಇಂಟರ್ವೆಲ್ ನಂತರ ಕಥೆಯ ನಿಧಾನಗತಿ ಮತ್ತು ನಿರೀಕ್ಷೆಗಿಂತ ಕಡಿಮೆ ತಾಂತ್ರಿಕ ತೃಪ್ತಿ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

    ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆಗಾರರಾಗಿ ನಿಧಿ ಅಗರ್ವಾಲ್, ಬಾಬಿ ಡಿಯೋಲ್, ನರ್ಗೀಸ್ ಫಕ್ರಿ, ನೋರಾ ಫತೇಹಿ, ಸುನಿಲ್ ವರ್ಮಾ, ಜಿಶು ಸೇನ್‌ಗುಪ್ತಾ ಮತ್ತು ಸತ್ಯರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಹರಿ ಹರ ವೀರ ಮಲ್ಲು ಸಿನಿಮಾ ಪವನ್ ಕಲ್ಯಾಣ್ ಅಭಿಮಾನಿಗಳ ನಿರೀಕ್ಷೆಗಳಿಗೆ ತಕ್ಕಂತೆ ಆರಂಭವಾಗಿದ್ದು, ಉತ್ತಮ ಓಪನಿಂಗ್‌ನೊಂದಿಗೆ ಬಾಕ್ಸ್‌ ಆಫೀಸ್‌ನಲ್ಲಿ ಶಕ್ತಿಶಾಲಿಯಾದ ಹಾಜರಾತಿ ನೀಡಿದೆ. ಮೊದಲ ದಿನವೇ ಚಿತ್ರವು ₹43.8 ಕೋಟಿ ಗಳಿಸಿದ್ದರಿಂದ, ಮುಂದಿನ ದಿನಗಳಲ್ಲಿ ಇನ್ನಷ್ಟು ಭರ್ಜರಿ ಗಳಿಕೆಯ ನಿರೀಕ್ಷೆಯಿದೆ.

    apvc-iconPost Views: 17
  • ಕಾಣೆಯಾದ ಯುವಕನ ಪತ್ತೆಗೆ ಮನವಿ

    ಕಾಣೆಯಾದ ಯುವಕನ ಪತ್ತೆಗೆ ಮನವಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಯಾದಗಿರಿ ನಗರದ ಮದನಪೂರಗಲ್ಲಿ 19 ವರ್ಷದ ಮಹ್ಮದ ಫರೀದ 2025ರ ಜುಲೈ 20 ರಂದು ಕಾಣೆಯಾದ ಹಿನ್ನೆಲೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ ಎಂದು ಯಾದಗಿರಿ ನಗರ ಠಾಣೆ ಆರಕ್ಷಕ ಉಪ ನಿರೀಕ್ಷಕರು (ಕಾ.ಸು) ಮಂಜನಗೌಡ ಅವರು ತಿಳಿಸಿದ್ದಾರೆ.

    ಕಾಣೆಯಾದ ಪುರುಷ ನಾವು ಎಲ್ಲರು ಮನೆಯಲ್ಲಿದ್ದಾಗ ಮಧ್ಯಾಹ್ನ 12 ಗಂಟೆಗೆ ಮನೆಯಿಂದ ಹೇಳದೆ ಕೇಳದೇ ಮನೆಯಿಂದ ಹೊರಟು ಹೋದವ ಸಂಜೆ ಮನೆಗೆ ಬರದ ಹಿನ್ನೆಲೆ ಅಂದು ಯಾದಗಿರಿ ನಗರದಲ್ಲಿ ಎಲ್ಲಾ ಕಡೆ ಹುಡಿಕಾಡಲಾಯಿತು ಯಾವುದೇ ಇರುವಿಕೆ ಮಾಹಿತಿ ಸಿಕ್ಕಿರುವುದಿಲ್ಲ, ನಂತರ ನಮ್ಮ ಸಂಬಂಧಿಕರ ಮನೆ ಮೊಬೈಲ್ ಕರೆ ಮಾಡಿ ವಿಚಾರಿಸಲಾಯಿತ್ತು, ಯಾವುದೇ ಇರುವಿಕೆ ಮಾಹಿತಿ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ ಪುರುಷ ಪತ್ತೆಯಾದಲ್ಲಿ ದೂ.ಸಂ.8147067300ಗೆ ಯಾದಗಿರಿ ಕಂಟ್ರೋಲ್ ರೂಂ.ದೂ.ಸಂ. 98480803600, ಯಾದಗಿರಿ ದೂ.ಸಂ.08473 253738 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    apvc-iconPost Views: 9
  • ಕ್ವಿಂಟಲ್ ಬಾರದ ಜೋಳದ ಚೀಲ ಹೊತ್ತು ತನ್ನೂರಿನಿಂದ ಶಹಾಪುರ ತಲುಪಿದ ಯುವಕ ನಾಗರಾಜ

    ಕ್ವಿಂಟಲ್ ಬಾರದ ಜೋಳದ ಚೀಲ ಹೊತ್ತು ತನ್ನೂರಿನಿಂದ ಶಹಾಪುರ ತಲುಪಿದ ಯುವಕ ನಾಗರಾಜ

    ಸತ್ಯಕಾಮ ವಾರ್ತೆ ಶಹಾಪುರ :

    ನಾಗರ ಪಂಚಮಿ ಹಬ್ಬದ ಅಂಗವಾಗಿ ಶಹಾಪುರ ತಾಲ್ಲೂಕಿನ ಇಟಗಾ (ಎಸ್) ಗ್ರಾಮದ ಯುವಕ ನಾಗರಾಜ ಈರಪ್ಪ ದೊಡ್ಡಮನಿ ಎಂಬವರು ತಮ್ಮ ವಿಶಿಷ್ಟ ಶಕ್ತಿ ಪ್ರದರ್ಶನದಿಂದ ಕೆಸರು ಗದ್ದೆಯಲ್ಲಿಯೇ ಕ್ವಿಂಟಲ್ ಬಾರದ ಜೋಳದ ಚೀಲವೊಂದು ಹೊತ್ತುಕೊಂಡು ಎಲ್ಲರ ಮನ ಗೆದ್ದಿದ್ದಾರೆ.

    ಹಬ್ಬದ ಸಂಭ್ರಮದಲ್ಲಿ ಕೇವಲ ಸಂಪ್ರದಾಯ ಪಾಲನೆ ಮಾತ್ರವಲ್ಲ, ಶಕ್ತಿಯ ನಿದರ್ಶನವನ್ನೂ ನೀಡಿದ ಇವರು ಕ್ವಿಂಟಲ್ ಬಾರದ ಜೋಳದ ಚೀಲವೊಂದು ಹೊತ್ತುಕೊಂಡು, ಕಾಲ್ನಡಿಗೆ ಮೂಲಕ ಇಟಗಾ (ಎಸ್) ಗ್ರಾಮದಿಂದ ಶಹಾಪುರದ ಹನುಮಾನ ದೇವಾಲಯಕ್ಕೆ ತಲುಪಿಸುವುದು ಇತಿಹಾಸ ಕಾರ್ಯವಾಗಿದೆ ಎನ್ನಬಹುದು.

    ಈ ಅಪರೂಪದ ಶಕ್ತಿ ಪ್ರದರ್ಶನ ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ತವರು ಗ್ರಾಮದಿಂದ ಶಹಾಪುರ ನಗರದ ದೇವಾಲಯದವರೆಗೆ ಅವರ ಮನೋಬಲ, ಶಕ್ತಿಶಾಲಿತ್ವ ಹಾಗೂ ಧೈರ್ಯ ಎಲ್ಲರಿಗೂ ಪ್ರೇರಣೆಯಾಗುತ್ತಿದೆ. ಈತನೊಂದಿಗೆ ಗ್ರಾಮದಿಂದ ಬಂದ ಹಲವಾರು ಯುವಕರು ಸಂತೋಷ ವ್ಯಕ್ತಪಡಿಸಿ ನಾಗರಾಜನನ್ನು ಸನ್ಮಾನಿಸಿ ಉತ್ಸಾಹದಿಂದ ಕುಣಿದು ಕುಪ್ಪಳಿಸಿ ಅಭಿನಂದಿಸಿದರು.

    ಗ್ರಾಮದ ಹಿರಿಯರು ಈ ಘಟನೆಯನ್ನು ಕೇವಲ ಶಕ್ತಿ ಪ್ರದರ್ಶನವೆಂದು ನೋಡದೆ, ಅದು ಯುವ ಪೀಳಿಗೆಗೆ ಪ್ರೇರಣೆಯ ಮಾದರಿಯೆಂದು ಅಭಿಪ್ರಾಯಪಟ್ಟರು. “ಇಂತಹ ಕಾರ್ಯಗಳು ಗ್ರಾಮೀಣ ಭಾವೈಕ್ಯತೆ ಹಾಗೂ ಭ್ರಾತೃತ್ವ ಬಲಪಡಿಸುತ್ತವೆ,” ಎಂದು  ಹೇಳಿದರು.

    ಈ ಸಂದರ್ಭದಲ್ಲಿ ಶಹಾಪುರದ ಯುವ ನಾಯಕ ಅವಿನಾಶ್ ಗುತ್ತೇದಾರ್ ಅವರು ನಾಗರಾಜನನ್ನು ಸನ್ಮಾನಿಸಿ ಗೌರವಿಸಿದರು. ಈ ಉತ್ಸವದಲ್ಲಿ ಇಟಗಾ ಹಾಗೂ ಶಹಾಪುರದ ಹಲವಾರು ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮದ ವಿಜೃಂಭಣೆಗೆ ಕಾರಣರಾದರು.

    apvc-iconPost Views: 38
  • ಮೈದುಂಬಿ ಹರಿಯುತ್ತಿರುವ ಸಗರಾದ್ರಿ ಜಲಪಾತಗಳು

    ಮೈದುಂಬಿ ಹರಿಯುತ್ತಿರುವ ಸಗರಾದ್ರಿ ಜಲಪಾತಗಳು

    ಸತ್ಯಕಾಮ ವಿಶೇಷ

    ವರದಿ: ಪ್ರಕಾಶ ಗುದ್ನೇಪ್ಪನವರ.
    ಶಹಾಪುರ : ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ನಾಗರ ಕೆರೆ, ಮಾವಿನ ಕೆರೆಗಳು ತುಂಬಿ ತುಳುಕುತ್ತಿವೆ ಅಲ್ಲದೇ ದಕ್ಷಿಣ ಬಾಗದಲ್ಲಿ ಸಗರಾದ್ರಿ ಬೆಟ್ಟಗಳಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತಿರುವ ವಿಹಂಗಮ ದೃಶ್ಯ ಪ್ರವಾಸಿಗರ ಚಿತ್ತ ಇತ್ತ ಕಡೆ ಹರಿಸುವದರಲ್ಲಿ ಯಾವುದೇ ಸಂದೇಹ ವಿಲ್ಲ ಎನ್ನಬಹುದು.

    ನಗರದ ದಕ್ಷಿಣ ಭಾಗದಲ್ಲಿ ಸಾಲು ಸಾಲಾಗಿ ಕಂಡು ಬರುವ ಬೆಟ್ಟಗುಡ್ಡುಗಳಿಗೆ ಸಗರಾದ್ರಿ ಬೆಟ್ಟವೆಂದು ಕರೆಯಲಾಗುತ್ತದೆ ಹಾಗೂ ಸಗರನಾಡಿನ ಬೆಟ್ಟಗಳನ್ನೆ ಸಗರಾದ್ರಿ ಬೆಟ್ಟ ಎನ್ನಲಾಗುತ್ತಿದೆ.


    ಇಲ್ಲಿನ ವಿಶ್ವ ಪ್ರಸಿದ್ಧ ಬುದ್ಧ ಮಲಗಿದ ದೃಶ್ಯದ ಪ್ರವಾಸಿಗರ ಕಣ್ಮಣ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ನಾಳ್ಕೈದು ಗುಡ್ಡ ಹೊಂದಿಕೊಂಡು ದೂರದಿಂದ ಬುದ್ಧ ಮಲಗಿರುವಂತೆ ಸ್ಪಷ್ಟವಾಗಿ ಚಿತ್ರ ಪ್ರತಿಯುಬ್ಬರಿಗೂ ಆಶ್ಚರ್ಯವನ್ನುಂಟು ಮಾಡಿರುವುದಂತೂ ಸತ್ಯ.

    ಈ ಭಾಗದಲ್ಲಿಯೇ ಗವಿ ಬಸಪ್ಪ ನಾಗ ಬಸಪ್ಪ ಬೆಟ್ಟದ ಪಕ್ಕದಿಂದ ಹರಿದು ಬರುವ ನೀರು ಜಲಪಾತ ಮಳೆಗಾಲದಲ್ಲಿ ನೋಡಲು ಎರಡು ಕಣ್ಣು ಸಾಲದು. ಇಂತಹ ಬಿಸಿಲನಾಡಿನಲ್ಲಿ ಇಂತಹದೊಂದು ಅದ್ಭುತ ಜಲಪಾತ ಮಳೆಗಾದಲ್ಲಿ ಮೈದುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ಹತ್ತಾರು ದಿನಗಳಿಂದ ಸತತ ಮಳೆ ಸುರಿಯುತ್ತಿರುವದರಿಂದ ಇದೀಗ ಸಗರಾದ್ರಿ ಜಲಪಾತ ಮೈದುಂಬಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿರವುದು ವಿಶೇಷವಾಗಿದೆ.
    ಮಳೆ ಬಂದಿತೆಂದರೆ ದಾಸನಕೊಳ್ಳ, ಸಗರಾದ್ರಿ ಜಲಪಾತ, ಈ ಭಾಗವೆಲ್ಲ ಹಸಿರಿನಿಂದ ದುಂಬಿಕೊಂಡು ಜನರನ್ನು ಆಕರ್ಷಿಸುತ್ತದೆ. ಪ್ರತಿ ಮಳೆಗಾಲದಲ್ಲಿ ಈ ಪ್ರದೇಶ ಮಲೆನಾಡನ್ನು ನೆನಪಿಸುತ್ತದೆ.


    ಸರ್ಕಾರವಾಗಲಿ ಜನಪ್ರತಿನಿದಿನಗಳು ಇತ್ತ ಕಡೆ ಗಮನ ಹರಿಸಿದರೆ ಇದೊಂದು ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಯಾವದೇ ಸಂದೇಹವಿಲ್ಲ ಎನ್ನುವರು ಇಲ್ಲಿನ ಸೌಂದರ್ಯ ಸವಿಯಲು ಬರುವ ಜನರು.

    ಒಟ್ಟಾರೆ ಬಿಸಿಲನಾಡಿನಲ್ಲಿ ಮಳೆಗಾಲದಲ್ಲಿ ಸಗಾರದ್ರಿ ಬೆಟ್ಟ ಗುಡ್ಡಗಳಲ್ಲಿನ ಜಲಪಾತಗಳು ಧೂಮ್ಮಿಕ್ಕಿ ಹರಿದು ಸುತ್ತಮುತ್ತಲಿನ ಜನತೆಗೆ ಖುಷಿ ನೀಡುತ್ತಿರುವುದು ತುಂಬಾ ಸಂತಸ ಎನ್ನಬಹುದು.

    ಪ್ರಕೃತಿಯ ಮಡಿಲಿನಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುತ್ತಿರುವ ಬೆಟ್ಟ ಗುಡ್ಡಗಳೊಂದಡೆಯಾದರೆ ಧೂಮುಕ್ಕಿ ಹರಿಯುತ್ತಿರುವ ಜಲಾಪಾತಗಳು ಹಾಗೂ ಮೈದುಂಬಿಕೊಂಡಿರುವ ಕೆರೆಗಳು ನಿಸರ್ಗದ ಸವಿ ಸವಿಯಲು ಪ್ರವಾಸಿಗರು ದಿನ ನಿತ್ಯ ನೂರಾರು ಜನ ಆಗಮಿಸುತ್ತಿರುವುದು ಸರ್ವೇ ಸಮಾನ್ಯವಾಗಿದೆ.

    “ಸಗಾರದ್ರಿ ಬೆಟ್ಟ ಗುಡ್ಡಗಳಲ್ಲಿ ಅನೇಕ ಜಾಲಧಾರೆ ಜಲಪಾತಗಳಿಂದ ನಿಸರ್ಗದ ಸೌಂದರ್ಯ ಇಮ್ಮಡಿಯಾಗಿದೆ ಇಂತಹ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆ ಆಸಕ್ತಿವಹಿಸಿ ಅಭಿವೃದ್ಧಿಗೆ ಮುಂದಾದರೆ ಇನ್ನೂ ಹೆಚ್ಚಿನ ಜನಾಕರ್ಶನಗೊಳ್ಳವುದು ಶತಸಿದ್ಧ ಎನ್ನುವರು” ̲ನಿವೃತ್ತ ರಾಷ್ಟ್ರ ಪಶಸ್ತಿ ವಿಜೇತ ಶಿಕ್ಷಕರಾದ ಸೋಮಶೇಖರಯ್ಯ ಹಿರೇಮಠ.

    apvc-iconPost Views: 26
  • ರಫ್ತು ಉತ್ತೇಜನೆಗೆ MSME ಕಾರ್ಯಾಗಾರ ಜು.29 ರಂದು

    ರಫ್ತು ಉತ್ತೇಜನೆಗೆ MSME ಕಾರ್ಯಾಗಾರ ಜು.29 ರಂದು

    • ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ : ಕಾಸಿಯಾ

    ಸತ್ಯಕಾಮ ವಾರ್ತೆ ಯಾದಗಿರಿ:

    ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರದ ಸಹಯೋಗದಲ್ಲಿ, “ರಫ್ತು, ಲೀನ್ ಯೋಜನೆ ಮತ್ತು ಝಡ್ ಪ್ರಮಾಣೀಕರಣ” ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇದೇ 29 ರಂದು ನಗರದ ಎಸ್.ಡಿ.ಎನ್. ರೆಸಿಡೆನ್ಸಿ (ಸರ್ಕಾರಿ ಪದವಿ ಕಾಲೇಜು ಹತ್ತಿರ)ನಲ್ಲಿ ಬೆಳಿಗ್ಗೆ 10.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾಸಿಯಾ ಅಧ್ಯಕ್ಷ ಬಿ.ಆರ್. ಗಣೇಶ್ ರಾವ್ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಕಾರ್ಯಕ್ರಮವು ಎಂ.ಎಸ್.ಎಂ.ಇ.ಗಳ ಸ್ಪರ್ಧಾತ್ಮಕತೆ, ಉತ್ಪಾದನಾ ದಕ್ಷತೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಭಾರತ ಸರ್ಕಾರದ ವಾಣಿಜ್ಯ ಇಲಾಖೆ ಪ್ರೇರಿತ ಡಿಸ್ಟ್ರಿಕ್ಟ್ಸ್ ಅಸ್ ಎಕ್ಸ್ಪೋರ್ಟ್ ಹಬ್ಸ್ (DEH) ಉಪಕ್ರಮವು ಜಿಲ್ಲೆಯ ಮಟ್ಟದಲ್ಲಿ ರಫ್ತು ಉತ್ತೇಜನ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚಟುವಟಿಕೆ ಬೆಳೆಸುವ ಗುರಿ ಹೊಂದಿದ್ದು, ಈ ಕಾರ್ಯಗಾರವೂ ಅದಕ್ಕೆ ಅನುಗುಣವಾಗಿದೆ ಎಂದರು.

    ಕಾರ್ಯಕ್ರಮವನ್ನು ಸಣ್ಣ ಕೈಗಾರಿಕೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಉದ್ಘಾಟನೆ ನೆರವೇರಿಸಲಿದ್ದು, ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

    ಅತಿಥಿಗಳಾಗಿ ವಿ.ಟಿ.ಪಿ.ಸಿ. ಕಲಬುರಗಿ ಶಾಖಾ ಕಛೇರಿ ಸಹಾಯಕ ನಿರ್ದೇಶಕ ಜಾಫರ್ ಖಾಸಿಂ ಅನ್ಸಾರಿ, ಯಾದಗಿರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೆಶಕ ಬಿ. ಸತೀಶ್‌ಕುಮಾ‌ರ್, ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ದಿನೇಶ್ ಕುಮಾರ್ ಜೈನ್, ರೈಸ್ ಮಿಲ್ ಅಸೋಸಿಯೇಶನ್ ಯಾದಗಿರಿ ಅಧ್ಯಕ್ಷ ಹನುಮದಾಸ್ ಮುಂದಡಾ, ಸುರಪುರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಚೆಟ್ಟಿ, ಯಾದಗಿರಿ ಜಿಲ್ಲಾ ಹತ್ತಿ ಜಿನ್ನಿಂಗ್ ಮಿಲ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಗುರು ಮಣಿಕಂಟ ಭಾಗವಹಿಸಲಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಎಂ.ಎಸ್.ಎಂ.ಇ.ಗಳಿಗೆ ಉತ್ಪಾದನಾ ವೆಚ್ಚ ಕಡಿತ, ಗುಣಮಟ್ಟ ಸುಧಾರಣೆ ಮತ್ತು ಸಾಮರ್ಥ್ಯ ವೃದ್ಧಿಗೆ ನೆರವಾಗುವಂತೆ ರೂಪಿಸಲಾದ ಲೀನ್ ತಂತ್ರಗಳ ಕುರಿತು. ಹಾಗೂ ಶೂನ್ಯ ದೋಷ, ಶೂನ್ಯ ಪರಿಸರ ಹಾನಿಯತ್ತ ಎಂ.ಎಸ್.ಎಂ.ಇ.ಗಳನ್ನು ಒತ್ತಾಯಿಸುವ ಚಟುವಟಿಕೆ. ಮೌಲ್ಯಮಾಪನ, ತಾಂತ್ರಿಕ ಸಹಾಯ ಹಾಗೂ ಉತ್ತಮ ತಂತ್ರಗಳನ್ನು ಅಳವಡಿಸಲು ಝಡ್ ಪ್ರಮಾಣೀಕರಣ ಬಗ್ಗೆ ಮಾಹಿತಿ ಹಾಗೂ ಸ್ಥಳದಲ್ಲೇ ನೋಂದಣಿ ಸೌಲಭ್ಯವೂ ಲಭ್ಯವಿರುತ್ತದೆ. ಹೀಗಾಗಿ ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.

    apvc-iconPost Views: 31
  • ಕಾರ್ಯನಿರತ ಪತ್ರಕರ್ತ ಸಂಘದಿಂದ ಜಿಲ್ಲಾಧಿಕಾರಿಗೆ ಸನ್ಮಾನ.

    ಕಾರ್ಯನಿರತ ಪತ್ರಕರ್ತ ಸಂಘದಿಂದ ಜಿಲ್ಲಾಧಿಕಾರಿಗೆ ಸನ್ಮಾನ.

    ಸತ್ಯಕಾಮ ವಾರ್ತೆ ಯಾದಗಿರಿ : 

    ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹರ್ಷಲ್ ಬೋಯರ್ ಅವರನ್ನು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಇಂಧುದರ ಸಿನ್ನೂರ್ ಅವರ ನೇತೃತ್ವದಲ್ಲಿ ಕಚೇರಿಗೆ ಭೇಟಿ ನೀಡಿ ಸನ್ಮಾನಿಸಲಾಯಿತು.

    ಜಿಲ್ಲೆಯ ಹಲವು ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಇನ್ನಿತರ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸಿ ಸಾರ್ವಜನಿಕರ ಅನುಕೂಲತೆಗೆ ಪರಿಹಾರ ನೀಡುವ ಭರವಸೆ ಜಿಲ್ಲಾಧಿಕಾರಿ ನೀಡಿದರು. ಈ ಸಂಧರ್ಭದಲ್ಲಿ ವಾರ್ತಾಧಿಕಾರಿ ಸುಲೇಮಾನ್ ನಾಧಾಫ್ ಹಿರಿಯ ಪತ್ರಕರ್ತರಾದ ಸಂಜೀವ್ ರಾವ್ ಕುಲಕರ್ಣಿ,ಶರಣು ಗೊಬ್ಬುರ್,ಎಸ್.ಎಸ್ ಮಠ್, ಆನಂದ್ ಎಮ್ ಸೌದಿ, ಹಣಮಂತು ಪಿ,ಅಂಬರೀಷ್ ಬಿಳಾರ್, ಆನಂದ ಗೊರ್ಕಲ್, ಎಸ್ ಎಸ್ ನಾಯಕ್, ಡಾ, ಭೀಮರಾಯ ಲಿಂಗೇರಿ, ನಾಗಪ್ಪ ಮಾಲಿ ಪಾಟೀಲ್, ರಫೀಕ್ ಸಾಬ್, ಅಮೀನ್ ಹೊಸೂರ್, ವಿಜಯಭಾಸ್ಕರ್ ರಡ್ಡಿ, ಸಾಗರ ದೇಸಾಯಿ, ರವಿರಾಜ್ ಕಂದಳ್ಳಿ, ರಾಜು ನಳ್ಳಿಕರ್, ಕುದಾನ್ ಸಾಬ್, ಶಿವಕುಮಾರ್, ಪರಶುರಾಮ್, ರೂಪೇಶ್ ಹುಲಿಕರ್, ಲಕ್ಷ್ಮಿ ಕಾಂತ್ ಲಿಂಗೇರಿ, ಎಮ್ ಡಿ ರಫೀಕ್, ಮಹೇಶ್ ಗಣೇರ್, ಶರಬು ನಾಟೆಕರ್, ಆಂಜನೇಯ ದೇವರಮನಿ, ಮಲ್ಲು ಕಾಮರಡ್ಡಿ,ಅರುಣ್ ಮಾಸ್ತರ್, ನಾಗರಾಜ, ಸುಧೀರ್ ಕೋಟೆ, ಸೇರಿದಂತೆ ಇನ್ನಿತರ ಪತ್ರಕರ್ತರು ಭಾಗವಹಿಸಿದ್ದರು.

    apvc-iconPost Views: 69
  • ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಲಿ

    ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಲಿ

    ಸತ್ಯಕಾಮ ವಾರ್ತೆ ಯಾದಗಿರಿ : 

    ವಿಶೇಷ ಚೇತನರಲ್ಲಿರುವ ಆತ್ಮಶಕ್ತಿ ಅತ್ಯಂತ ಮಹತ್ವದ್ದಾಗಿದ್ದು, ಅದರಿಂದಲೇ ಅವರು ಸಮಾಜದಲ್ಲಿ ಅತ್ಯಂತ ಗೌರವದಿಂದ ಬದುಕುವಂತಾಗಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

    ಗುರುಮಠಕಲ್ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆರ್‌ಪಿಡಿ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಗ್ರಾಮೀಣ ಹಾಗೂ ನಗರ ಅಂಗವಿಕಲರ ಪುನರ್ವಸ್ಥಿತಿ ಕಾರ್ಯಕ್ರಮದ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ ಅರಿವು ವಿಕಲಚೇತನ ಹಾಕುತ್ತಾಯಿ ಸಮಾವೇಶ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ಅವರಲ್ಲಿ ಆತ್ಮಸ್ಥೆರ್ಯ ತುಂಬುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.

    ಅಂಗವೈಕಲ್ಯ ಶಾಪವಲ್ಲ. ಅದು ಆಕಸ್ಮಿಕವಾಗಿ ಹುಟ್ಟಿನಿಂದ ಬರುತ್ತದೆ. ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ವಿಶ್ವಾಸ ಹಾಗೂ ಅತ್ಮಸ್ಥೆöÊರ್ಯ ತುಂಬಿ ಇತರರಂತೆ ಬದುಕಲು ಅವಕಾಶ ನೀಡಬೇಕು ಎಂದರು.

    ಗುರುಮಠಕಲ್ ಖಾಸಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಜಿಗಳು, ಸಾನ್ನಿಧ್ಯವಹಿಸಿದ್ದರು. ಆರ್.ಪಿ.ಡಿ ಕಾಯ್ದೆ ಕುರಿತು ನಾಗಪ್ಪಜಿ ಅವಟಿ ಉಪನ್ಯಾಸ ನೀಡಿದರು.

    ಎಲೇರಿಯ ವಿಕಲಚೇತನ ಸಂಘಕ್ಕೆ ೧೫೦೦೦೦ ಸಾವಿರ ಚೆಕ್ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಗುರುಮಠಕಲ್ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ್ ನಜರಾಪುರ್ ಉಪಾಧ್ಯಕ್ಷರಾದ ರೇಣುಕಾ ಪಡಿಗೆ, ಭಾರತಿ ದಂಡೋತಿ ತಹಸೀಲ್ದಾರ ಶಾಂತಗೌಡ ಬಿರಾದಾರ್, ಇಒ ಅಮರೇಶ್ ಪಾಟೀಲ್, ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಹನುಮಂತರೆಡ್ಡಿ ಎಪಿಡಿ ಸಂಸ್ಥೆ ಯಾದಗಿರಿ ವ್ಯವಸ್ಥಾಪಕರಾದ ಸಂಪ್ರಿತ ದೇವಪುತ್ರ ಸಂತೋಷ್ ನಿರೇಟಿ ತಾಲೂಕ ನೌಕರ ಸಂಘದ ಅಧ್ಯಕ್ಷರು ಗುರುಮಟ್ಕಲ್, ಉಮಾ ನಾಯಕ್ ಅಧ್ಯಕ್ಷರು ಆರ್ ಪಿ ಡಿ ಟಾಸ್ಕ್ ಪೋರ್ಸ್ ಯಾದಗಿರಿ ಸೇರಿದಂತೆ ಇತರರಿದ್ದರು.

    apvc-iconPost Views: 85
  • ಸ್ವಚ್ಛತಾ ಅಭಿಯಾನಕ್ಕೇ ಸಾರ್ವಜನಿಕರು ಕೈಜೋಡಿಸಬೇಕು: ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ

    ಸ್ವಚ್ಛತಾ ಅಭಿಯಾನಕ್ಕೇ ಸಾರ್ವಜನಿಕರು ಕೈಜೋಡಿಸಬೇಕು: ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ

    ಸತ್ಯಕಾಮ ವಾರ್ತೆ ಯಾದಗಿರಿ:
    ನಗರ ಸ್ವಚ್ಛ ಇದ್ದರೇ ಪರಿಸರ ಚೆನ್ನಾಗಿ ಇರುತ್ತದೆ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ವಚ್ಛತೆ ಮೊದಲ ಆದ್ಯತೆ ನೀಡಿ, ಪ್ಲಾಸ್ಟಿಕ್ ಬಳಕೆ ನಿಷೇದಿಸಿ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಹೇಳಿದರು.

    ನಗರಸಭೆ ವತಿಯಿಂದ ಮಂಗಳವಾರ ನಗರದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನ ಹಾಗೂ ಪ್ಲಾಸ್ಟಿಕ್ ನಿಷೇಧದ  ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ‌ ಮಾತನಾಡಿದರು. 
    ಸಾರ್ವಜನಿಕರು ಈ ಕೆಲಸಕ್ಕೆ ಕೈಜೋಡಿಸಿದಾಗ ಇದು ಯಶಸ್ಸಿಯಾಗುತ್ತದೆ. ಕೇವಲ ನಗರಸಭೆಯಿಂದ ಮಾತ್ರ ಸಾಧ್ಯವಿಲ್ಲ. ಸ್ವಯಃ ಪ್ರೇರಿತರಾಗಿ ಜನರು ಇದಕ್ಕೆ ಮುಂದಾಗಬೇಕೆಂದರು.

    ಪ್ರತಿಯೊಬ್ಬರು ತಮ್ಮ ಮನೆ ಮತ್ತು ಮನೆ ಮುಂದಿನ ಸ್ಥಳ ಶುಚಿ ಇಟ್ಟುಕೊಳ್ಳಬೇಕೆಂದರು. 
    ಕಸ ವಿಲೇವಾರಿಗೆ ಮನೆ ಬಾಗಿಲಿಗೆ ವಾಹನ ಬರುತ್ತವೆ. ಆಗ ಮಾತ್ರ ಕಸ ಅದರಲ್ಲಿ ಹಾಕಿ. ಎಲ್ಲೆಂದರಲ್ಲಿ ಕಸ ಹಾಕುವುದರಿಂದಲೇ ಪರಿಸರ ಹಾಳಾಗುತ್ತಿದೆ ಎಂದು ಅನಪುರ ವಿಷಾದ ವ್ಯಕ್ಯಪಡಿಸಿದರು. ಜನರೊಂದಿಗೆ ನಗರಸಭೆ ಇದೆ. ನೀವು ಅಷ್ಠೆ, ನಮ್ಮೊಂದಿಗೆ ಈ ಕೆಲಸಕ್ಕೇ ಕೈ ಜೋಡಿಸಿರಿ ಎಂದರು.
    ನಗರಸಭೆ ಸದಸ್ಯರಾದ ಮಂಜುನಾಥ್ ದಾಸನಕೇರಿ, ಹನುಮಂತ ನಾಯಕ್, ಪೌರಾಯುಕ್ತಾರು ಉಮೇಶ್ ಚವ್ಹಾಣ್, ಪರಿಸರ ಅಭಿಯಂತರ ಪ್ರಶಾಂತ, ಕಂದಾಯ ಅಧಿಕಾರಿ ಮಲ್ಲಿಕಾರ್ಜುನ, ಆರೋಗ್ಯ ನಿರಿಕ್ಷಕ ಪ್ರಶಾಂತ, ಸಿದ್ದಾರ್ಥ, ರಮೇಶ, ಶಂಭುಲಿಂಗ ಸೇರಿದಂತೆ ಮತ್ತಿತರರು ಇದ್ದರು
    —-
    apvc-iconPost Views: 56
  • ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ

    ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ ಜನತೆಗೆ ಉತ್ತಮ ಸೇವೆ ಒದಗಿಸಬೇಕಿದೆ. ಆಸ್ಪತ್ರೆಯ ಸುತ್ತಲಿನ ಪರಿಸರದ ಸ್ವಚ್ಛತೆಯ ಕಡೆಗೆ ಪ್ರತಿಯೊಬ್ಬರೂ ಗಮನಹರಿಸಬೇಕು, ಆಸ್ಪತ್ರೆಯ ಬಳಿ ನಾಗರೀಕರು ಕೂಡ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಹೇಳಿದರು.

    ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸ್ವಚ್ಚತೆ ಕುರಿತು ಆಸ್ಪತ್ರೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಎಲ್ಲೆಂದರಲ್ಲಿ ಮನೆಯಿಂದ ತಂದ ಊಟ ಮಾಡಿ ಅಲ್ಲೇ ಉಳಿದ ಅನ್ನವನ್ನು ಬಿಸಾಡುವುದು, ಬಿಡಿ, ಸಿಗರೇಟ್ ಸೇದುವುದು, ತಂಬಾಕು ಗುಟಕಾ ತಿಂದು ಉಗುಳುವುದು ಯಾರೂ ಮಾಡಬಾರದು ನಮ್ಮ ಆಸ್ಪತ್ರೆ ಸ್ವಚ್ಚತೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲದೆ ಎಂದು ಹೇಳಿದರು.
    ಆಸ್ಪತ್ರೆ ಆವರಣದಲ್ಲಿ ಕಸ ಇದ್ದರೆ ಪ್ರತಿಯೊಬ್ಬರೂ ಮೂಗು ಮುಚ್ಚಿಕೊಂಡೇ ತಿರುಗುವಂತಹ ಪರಿಸ್ಥಿತಿ ಬರುತ್ತದೆ. ನಾಗರೀಕರ ನಿಷ್ಕಾಳಜಿಯೂ ಕೂಡ ಪರಿಸರ ಸ್ವಚ್ಚತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಪರಿಸರ ಅಭಿಯಂತ ಪ್ರಶಾಂತ, ಡಾ.ಅಂಗಡಿ, ಡಾ.ರಿಜ್ವಾನಾ, ಎಸ್.ಎ.ಶಿವಪುತ್ರ, ಮಾಜಿ ಸದಸ್ಯ ಅಬ್ದುಲ್ ಖರೀಂ ಸೇರಿದಂತೆ ಇತರರಿದ್ದರು.

    ಸರಕಾರಿ ಆಸ್ಪತ್ರೆಯ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಕಸದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ವಿ ಆಗ್ತೇವೆ. ಸಿಬ್ಬಂದಿಗೆ ಕಸವನ್ನು ಸರಿಯಾಗಿ ವಿಂಗಡಿಸುವ ಮಹತ್ವ ಹಾಗೂ ಪರಿಸರದ ಮೇಲೆ ಅದರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

    ಕು.ಲಲಿತಾ ಮೌಲಾಲಿ ಅನಪೂರ, ನಗರಸಭೆ ಅಧ್ಯಕ್ಷರು, ಯಾದಗಿರಿ

    apvc-iconPost Views: 20