ಕಾರ್ಮಿಕರ ಕೊರತೆ: ಕೃಷಿ ಕ್ಷೇತ್ರದಲ್ಲಿ ತಲೆದೋರಿದೆ ಅಸ್ಥಿರತೆ
ಕೃಷಿ ಕ್ಷೇತ್ರದಲ್ಲಿ ದಿನೇದಿನೇ ತೀವ್ರಗೊಳ್ಳುತ್ತಿರುವ ಕಾರ್ಮಿಕರ ಕೊರತೆ ಬಗ್ಗೆ ಲೋಕಸಭೆಯಲ್ಲಿ ಗಂಭೀರ ಚಿಂತನೆ ವ್ಯಕ್ತಪಡಿಸಿದ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ, ಇದು ರೈತರ ಜೀವನೋಪಾಯ ಹಾಗೂ ದೇಶದ ಆಹಾರ ಭದ್ರತೆಗೆ ದೊಡ್ಡ ಸವಾಲಾಗಿದೆ ಎಂದು ಎಚ್ಚರಿಸಿದರು.
ಯುವಕರು ನಶೆ ಮುಕ್ತರಾಗಿ ದೇಶಾಭಿಮಾನ ಬೆಳೆಸಿಕೊಳ್ಳಿ- ಸಿದ್ದರಾಮ
ಹಲವು ಯುವಕರು ನಶೆ ಅಥವಾ ಮತ್ತು ಭರಿಸುವ ಅಪಾಯಕಾರಿ ಪದಾರ್ಥಗಳನ್ನು ಸೇವಿಸುವ ವ್ಯಸನಗಳಿಗೆ ಬಲಿಯಾಗಿದ್ದಾರೆ. ಇದರಿಂದ ಅವರ ಆರೋಗ್ಯ ಹಾಳಾಗುವುದಷ್ಟೇ ಅಲ್ಲ ದೇಶದ ಅಭಿವೃದ್ಧಿಯೂ ಕುಂಠಿತವಾಗುತ್ತಿದೆ. ಆದ್ದರಿಂದ ಯುವಕರು ನಶೆ ಮುಕ್ತರಾಗಿ ದೇಶಭಕ್ತಿ ಮತ್ತು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಶಾಲಾ ಮುಖ್ಯ ಗುರು ಸಿದ್ಧರಾಮ…
ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಬೈಕ್ ರ್ಯಾಲಿ
ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತ್ಯಾಗ–ಬಲಿದಾನ ನೀಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದಿದ್ದಾರೆ. ಅವರ ಸ್ಮರಣಾರ್ಥವಾಗಿ ಸರ್ಕಾರ ಹರ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಕರೆ ನೀಡಿದರು.
ಒಳಮೀಸಲಾತಿ ವರದಿ ವಿರುದ್ಧ ಬಲಗೈ ಸಮುದಾಯದ ಬೃಹತ್ ಪ್ರತಿಭಟನೆ ನಾಳೆ
ನ್ಯಾ. ನಾಗಮೋಹನದಾಸ್ ಸಮಿತಿಯ ಒಳಮೀಸಲಾತಿ ವರದಿಯನ್ನು ಖಂಡಿಸಿ ಬಲಗೈ ಸಮುದಾಯವು ಆಗಸ್ಟ್ 14ರಂದು(ನಾಳೆ) ನಗರದ ಅಂಬೇಡ್ಕರ್ ನಗರದಿಂದ ಸುಭಾಷ್ಚಂದ್ರ ಬೋಸ್ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ವಡಗೇರಾದಲ್ಲಿ ‘ಮನೆ ಮನೆಗೆ ಪೊಲೀಸ್’ ಅಭಿಯಾನ
ಪೊಲೀಸ್ ವ್ಯವಸ್ಥೆ ಕುರಿತು ಜನರಲ್ಲಿ ಭಯ ದೂರಮಾಡಿ ಮನೆ ಬಾಗಿಲಿಗೆ ಪೊಲೀಸರು ಭೇಟಿ ನೀಡಿ ಸ್ಪಂದಿಸುವ ಸದುದ್ದೇಶದಿಂದ ಜಾರಿಗೊಳಿಸುತ್ತಿರುವ ಮನೆ ಮನಗೆ ಪೊಲೀಸ್ ಅಭಿಯಾನಕ್ಕೆ ಪಟ್ಟಣದಲ್ಲಿ ಪಿಎಸ್ಐ ಮೆಹಬೂಬ್ ಅಲಿ ಚಾಲನೆ ನೀಡಿದರು.
ಗೌರವಧನ ಹೆಚ್ಚಳಕ್ಕಾಗಿ ಆಶಾ ಕಾರ್ಯಕರ್ತೆಯರ ಧರಣಿ
ಸತ್ಯಕಾಮ ವಾರ್ತೆ ಯಾದಗಿರಿ: ಪ್ರತಿ ತಿಂಗಳು ಕನಿಷ್ಠ ₹10,000 ಗೌರವಧನ ನೀಡಬೇಕು ಮತ್ತು ಪ್ರೋತ್ಸಾಹಧನ ಸೇರಿಸಿ ಏಪ್ರಿಲ್ 2025ರಿಂದ ಜಾರಿಗೆ ತರಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ…
ವಡಗೇರಾ: ಗಣೇಶ ಹಬ್ಬ,ಈದ್ ಮಿಲಾದ್ ಶಾಂತಿ ಸಭೆ
ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಶಾಂತಿ ಸಭೆಯನ್ನು ವಡಗೇರಾ ಪೊಲೀಸ್ ಠಾಣಾ ಅವರಣದಲ್ಲಿ ಆಯೋಜಿಸಲಾಗಿತ್ತು.
ಸೂಗಯ್ಯ ಸ್ವಾಮಿ ನಾಪತ್ತೆ ಪ್ರಕರಣ: ಚನ್ನಪಟ್ಟಣ ಶಾಂತಗೌಡ ಆರೋಪ ಗಂಭೀರ ಆರೋಪ
2022ರ ಜನವರಿಯಿಂದ ನಾಪತ್ತೆಯಾಗಿರುವ ಸುರಪುರ ತಾಲೂಕಿನ ರೈತ ಕುಟುಂಬದ ಸೂಗಯ್ಯ ಸ್ವಾಮಿ ಪ್ರಕರಣ (ಕೈಂ. ನಂ. 30/2022) ತನಿಖೆಯಲ್ಲಿ ಪೊಲೀಸ್ ಇಲಾಖೆ ಗಂಭೀರ ನಿರ್ಲಕ್ಷ್ಯ ವಹಿಸಿದ್ದು, ಅಧಿಕಾರಿಗಳು ರಾಜಕೀಯ ಮತ್ತು ಹಣಬಲಕ್ಕೆ ಮಣಿದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ…
ಹರ್ ಘರ್ ತಿರಂಗಾ ಬೈಕ್ ರ್ಯಾಲಿಗೆ ಚಾಲನೆ
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹರ್ ಘರ್ ತಿರಂಗಾ ಬೈಕ್ ರ್ಯಾಲಿಗೆ ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಚಾಲನೆ ನೀಡಿದರು.
ವಾಲ್ಮೀಕಿ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ – ಮಗ್ದಂಪುರ
ವಾಲ್ಮೀಕಿ ಸಮಾಜದ ಪ್ರಮುಖ ಬೇಡಿಕೆಗಳು ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಯಲು ನಗರದ ತಹಶಿಲ್ದಾರರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಬೃಹತ್ ಪ್ರಮಾಣ ರ್ಯಾಲಿ ಮುಖಾಂತರ ಹೋರಾಟ ಮಾಡಲಾಗುತ್ತದೆ ಎಂದು ಉತ್ತರ ಕರ್ನಾಟಕ ವಾಲ್ಮೀಕಿ ಸಮಾಜದ ಅಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪುರ…