Blog

  • ಕುಸಿದು ಬಿಳುತ್ತಿರುವ ಶಾಲಾ ಮೇಲ್ಚಾವಣಿ – ಮಕ್ಕಳ ಕಲಿಕೆಗೆ ಅಪಾಯ

    ಕುಸಿದು ಬಿಳುತ್ತಿರುವ ಶಾಲಾ ಮೇಲ್ಚಾವಣಿ – ಮಕ್ಕಳ ಕಲಿಕೆಗೆ ಅಪಾಯ

    ಸತ್ಯಕಾಮ ವಾರ್ತೆ ವಡಗೇರಾ :
    ಯಾದಗಿರಿ ಜಿಲ್ಲೆಯ ತಾಲ್ಲೂಕಿನ ರೊಟ್ನಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಬಹಳ ತೀವ್ರವಾಗಿದೆ. ಶಾಲೆಯ ಹಳೆಯ ಕಟ್ಟಡದ ಗೋಡೆಗಳು ಸೀಳಿ ಹೋಗಿದ್ದು, ಮೇಲ್ಚಾವಣಿ ಯಾವಾಗ ಬೇಕಾದರೂ ಕುಸಿದು ಬೀಳುವ ಭೀತಿಯಲ್ಲಿದೆ.

    100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುವ ಈ ಶಾಲೆಯಲ್ಲಿ ಕೇವಲ ಒಬ್ಬ ಕಾಯಂ ಶಿಕ್ಷಕರಿದ್ದಾರೆ. ಉಳಿದವರು ಅತಿಥಿ ಶಿಕ್ಷಕರು. ಬೀಳುವ ಚಾವಣಿಯಿಂದ ಮಕ್ಕಳು ಅಪಾಯಕ್ಕೀಡಾಗುವ ಭೀತಿಯಿಂದ ಶಿಕ್ಷಕರು ಪಾಠವನ್ನು ಶಾಲಾ ಹೊರಾಂಗಣದಲ್ಲಿ ಮಾಡಲಾಗುತ್ತಿದೆ.

    ಇನ್ನೂ ಮಳೆ ಬಂದರೆ ಶಾಲೆ ಮಳೆ ನೀರಿನ ಸೋರಿಕೆಯಿಂದ ತುಂಬಿ ಹೋಗುತ್ತದೆ. ಅಲ್ಲದೇ ಶೌಚಾಲಯ ವ್ಯವಸ್ಥೆ, ನೀರಿನ ಕೊರತೆ ಮತ್ತು ಶಾಲೆಗೆ ತಡೆಗೋಡೆಯಿಲ್ಲದ ಪರಿಸ್ಥಿತಿ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ತಾಜಾಸುದ್ದಿಗಳಿಗಾಗಿ ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ

    ಕರ್ನಾಟಕ ರಕ್ಷಣಾ ವೇದಿಕೆ ವಡಗೇರಾ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ ಹಾಗೂ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಶಿವನಾಗಪ್ಪ ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲವೆಂದು ಗಂಭೀರ ಆರೋಪ ಮಾಡಿದ್ದಾರೆ.

    ಅಮೃತ ಯೋಜನೆಯಡಿ ಮಂಜೂರಾದ ₹5 ಲಕ್ಷ ಮೊತ್ತದ ಹೈಟೆಕ್ ಶೌಚಾಲಯವೂ ಬಾಗಿಲಿಲ್ಲದ ಕಳಪೆ ಕಾಮಗಾರಿ ಎನಿಸಿದೆ. ಇದರಿಂದ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಶಿಕ್ಷಕರು ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ತಕ್ಷಣವೇ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂಬದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೂತನ ಕಟ್ಟಡ ಮತ್ತು ಮೂಲಭೂತ ಸೌಕರ್ಯ ಒದಗಿಸದಿದ್ದರೆ, ಪಾಲಕರು ಮಕ್ಕಳೊಂದಿಗೆ ಬೀಗ ಜಡಿದು ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

    apvc-iconPost Views: 14
  • ಹಿಟ್ & ರನ್ ಪ್ರಕರಣ: ಮರಣ ಹೊಂದಿದವರಿಗೆ 2 ಲಕ್ಷ ರೂ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಸೌಲಭ್ಯ

    ಹಿಟ್ & ರನ್ ಪ್ರಕರಣ: ಮರಣ ಹೊಂದಿದವರಿಗೆ 2 ಲಕ್ಷ ರೂ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಸೌಲಭ್ಯ

     

     

     

     

     

    ಕಲಬುರಗಿ- ಕೇಂದ್ರದ ಮೋಟಾರು ವಾಹನ ಕಾಯ್ದೆ-1988 ಮತ್ತು ತಿದ್ದುಪಡಿ ಕಾಯ್ದೆ-2019ರ ಪ್ರಕಾರ ಹಿಟ್ & ರನ್ ಮೋಟಾರು ಅಪಘಾತ ಯೋಜನೆ- 2022ರಡಿ ಹಿಟ್ & ರನ್ ಪ್ರಕರಣಗಳಲ್ಲಿ ವಿಮೆ ಮಾಡಿಸಿಕೊಳ್ಳದ ಪಾದಚಾರಿಗಳಿಗೆ ಮರಣ ಪ್ರಕರಣದಲ್ಲಿ 2 ಲಕ್ಷ‌ ರೂ. ಮತ್ತು ರಸ್ತೆ ಅಫಘಾತದಲ್ಲಿ ಗಾಯಾಳು ಪ್ರಕರಣಗಳಲ್ಲಿ 50 ಸಾವಿರ ರೂ. ಪರಿಹಾರ ಒದಗಿಸುವ ಸೌಲಭ್ಯವಿದ್ದು, ಸಂತ್ರಸ್ತರ ಅವಲಂಭಿತರು ಮತ್ತು ಗಾಯಾಳುಗಳು ಇದರ ಸೌಲಭ್ಯ ಪಡೆಯಬೇಕು ಎಂದು ಕಲಬುರಗಿ ಉಪ ವಿಭಾಗದ ಹಕ್ಕು ತನಿಖಾಧಿಕಾರಿಯಾಗಿರುವ ಸಹಾಯಕ ಆಯುಕ್ತೆ ಸಾಹಿತ್ಯ ತಿಳಿಸಿದ್ದಾರೆ.

    ಈ ಯೋಜನೆಯಡಿ ಕ್ಲೇಮ್ ವಿಚಾರಣಾ ಅಧಿಕಾರಿಯು ಕ್ಲೇಮ್ ಸ್ವೀಕರಿಸಿದ ಒಂದು ತಿಂಗಳೊಳಗೆ ಪೊಲೀಸ್ ಮತ್ಥ ವೈದ್ಯಕೀಯ ವರದಿಯನ್ನು ಆಧಾರವಾಗಿಟ್ಟುಕೊಂಡು ತನ್ನ ನಿರ್ಧಾರವನ್ನು ತಿಳಿಸಬೇಕಾಗುತ್ತದೆ. ನಂತರ ಕ್ಲೇಮ್ ಇತ್ಯರ್ಥ ಅಧಿಕಾರಿಗೆ ಕ್ಲೇಮ್‌ಗಳನ್ನು ಮಂಜೂರು ಮಾಡಲು ಮತ್ತು ಮಂಜೂರಾತಿ ಆದೇಶವನ್ನು ಜನರಲ್ ಇನ್ಶುರೆನ್ಸ್ ಕೌನ್ಸಿಲ್‌ಗೆ ಕಳುಹಿಸಲು 15 ದಿನಗಳ ಕಾಲಾವಕಾಶ ಇರುತ್ತದೆ. ಈ ಸಂಬಂಧ ಮೋಟಾರ್ ಅಪಘಾತ ಕ್ಲೇಮ್ ನ್ಯಾಯಮಂಡಳಿ ಮತ್ತು ಸಾರಿಗೆ ಆಯುಕ್ತರಿಗೂ ಕ್ಲೇಮ್ ಇತ್ಯರ್ಥ ಅಧಿಕಾರಿ ಮಾಹಿತಿ ನೀಡುತ್ತಾರೆ. ತರುವಾಯ, ಜನರಲ್ ಇನ್ಶುರೆನ್ಸ್ ಕೌನ್ಸಿಲ್ 15 ದಿನಗಳ ಅವಧಿಯಲ್ಲಿ ಸಂತ್ರಸ್ತರಿಗೆ ಕ್ಲೇಮ್‌ಗೆ ಪರಿಹಾರದ ಮೊತ್ತದ ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ.

    ಇನ್ನು ಪ್ರತಿ ಜಿಲ್ಲೆಯಲ್ಲಿ ಈ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿ ಪ್ರತಿ ತ್ರೈಮಾಸಿಕ ಸಭೆ ಸೇರಿ ಹಿಟ್ & ರನ್ ಪ್ರಕರಣಗಳ ಪರಿಹಾರ ಪ್ರಕ್ರಿಯೆ ಪರಾಮರ್ಶಿಸಬೇಕು. ಅಲ್ಲದೆ ಪ್ರತಿ ತ್ರೈಮಾಸಿಕ ವರದಿ ಹಾಗೂ ಮಾಸಿಕವಾರು ಸ್ವೀಕೃತ ಅರ್ಜಿ, ಪರಿಹಾರ ಮಂಜೂರಾತಿ, ಬಾಕಿ ವಿವರ ಸ್ಥಾಯಿ ಸಮಿತಿಗೆ ಸಲ್ಲಿಸಬೇಕಾಗುತ್ತದೆ ಎಂದು ಯೋಜನೆ ಕುರಿತು ಸಹಾಯಕ ಆಯುಕ್ತೆ ಸಾಹಿತ್ಯ ಮಾಹಿತಿ ನೀಡಿದ್ದಾರೆ.

    apvc-iconPost Views: 94
  • ಸುಳ್ಳು ಸುದ್ದಿ ಪ್ರತಿಕ್ರಿಯೆ ನೀಡುವಾಗ ಜಾಗೃತವಾಗಿರಿ: ಎ.ಎಸ್ ಪಾಟೀಲ್ ನಡಹಳ್ಳಿ

    ಸುಳ್ಳು ಸುದ್ದಿ ಪ್ರತಿಕ್ರಿಯೆ ನೀಡುವಾಗ ಜಾಗೃತವಾಗಿರಿ: ಎ.ಎಸ್ ಪಾಟೀಲ್ ನಡಹಳ್ಳಿ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ:

    ಸುದ್ದಿ ಮಾಧ್ಯಮ, ಸಂವಹನ ಯುಗದಲ್ಲಿ ಪ್ರತಿಯೊಬ್ಬರು ಸುದ್ದಿ ಹಂಚಿಕೊಳ್ಳುತ್ತಿದ್ದಾರೆ. ತಮ್ಮತನವನ್ನು ತೋರಲು ಬಯಸುತ್ತಾರೆ. ಕ್ಷಣಾರ್ಧದಲ್ಲಿ ಜಗತ್ತಿಗೆ ಪರಿಚಯವಾಗಿ ಹಣ, ಕೀರ್ತಿ ಹಾಗೂ ಜನಪ್ರಿಯತೆಯನ್ನು ಗಳಿಸುತ್ತಾರೆ ಇದಕ್ಕೆ ಮುಖ್ಯ ಕಾರಣ ಅಭಿವ್ಯಕ್ತಿ ಸಾಮರ್ಥ್ಯ ಎಂದು ಮಾಜಿ ಶಾಸಕ ಎ ಎಸ್ ಪಾಟೀಲ್ (ನಡಹಳ್ಳಿ) ಹೇಳಿದರು.

    ಆಲಮಟ್ಟಿ ರಸ್ತೆ ಪಕ್ಕದ ಅರಿಹಂತಗಿರಿಯಲ್ಲಿರುವ ಅರಿಹಂತ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಅವರು, ಆಧುನಿಕ ಜಗತ್ತು ಮೊಬೈಲ್ ಬಳಕೆಯಿಂದ ಡಿಜಿಟಲ್ ಗ್ರಂಥಾಲಯವಾಗಿ ಪರಿವರ್ತನೆ ಆಗಿದೆ. ವಿಜ್ಞಾನ, ತಂತ್ರಜ್ಞಾನ ಜೊತೆಗೆ ಮಾಹಿತಿ ಜ್ಞಾನ ಇಲ್ಲದಿದ್ದರೆ ಪೂರ್ಣವಾಗುವುದಿಲ್ಲ. ಹಾಗೆಯೇ ಸುಳ್ಳು ಮಾಹಿತಿ ಹಬ್ಬಿಸುವುದರಿಂದ ಒಂದು ದೇಶ, ಒಬ್ಬ ವ್ಯಕ್ತಿಯನ್ನು ಹಾಳು ಮಾಡಬಹುದು. ಹಾಗಾಗಿ ಸುಳ್ಳು ಸುದ್ದಿಗಳನ್ನು ಹರಡಬಾರದು ಮತ್ತು ನಂಬಬಾರದು ಎಂದು ಮಾತನಾಡಿದರು.

    ಪತ್ರಿಕೋದ್ಯಮ ಮತ್ತು ಪತ್ರಕರ್ತರ ಕಾರ್ಯಶೈಲಿ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ. ರಾಜನಾರಾಯಣ ನಲವಡೆ ಅವರು, ಪತ್ರಿಕೋದ್ಯಮ ಸದಾ ಕಾಲ ಸಮಾಜಮುಖಿ ಕಾರ್ಯ ನಿರ್ವಹಿಸಿದೆ. ಸ್ವತಂತ್ರ ಹೋರಾಟಗಾರರು, ಸಾಹಿತಿಗಳು ಕರಪತ್ರ ರೂಪದಲ್ಲಿ ಪ್ರಕಟಣೆ ಮಾಡಿದ ಸಾಹಿತ್ಯ ಇಂದು ಸಮೂಹ ಮಾಧ್ಯಮ, ತಂತ್ರಜ್ಞಾನ ಬಳಕೆಯಿಂದ ಸಮಾಜವನ್ನು ಬದಲಿಸಿದೆ. ಪತ್ರಕರ್ತರಾದವರು ಸದಾ ಸಮಾಜದ ಓರೆಕೋರೆಗಳನ್ನು ತಿದ್ದುತ್ತಾ, ಸತ್ಯದ ಪರವಾಗಿ ಬರೆಯಬೇಕು ಎಂದು ಮಾತನಾಡಿದರು.

    ಅರಿಹಂತ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ ಸಗರಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ. ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ವಿದ್ಯಾರ್ಥಿನಿ ಭಾಗ್ಯಶ್ರೀ ಬಸವರಾಜ್ ಕುಂಬಾರ ವಿದ್ಯಾರ್ಥಿನಿಗೆ ಪ್ರತಿಭಾ ಪುರಸ್ಕಾರ. ತಾಲೂಕು ಮಟ್ಟದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಪತ್ರಕರ್ತರಾದ ರಿಯಾಜ್‌ಅಹ್ಮದ್ ಮುಲ್ಲಾ, ಹಣಮಂತ ಬೀರಗೊಂಡ, ಈಶ್ವರ ಈಳಗೇರ, ಹಣಮಂತ ಟಕ್ಕಳಕಿ(ಮುತ್ತು), ಕೃಷ್ಣಾ ಕುಂಬಾರ ಅವರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

    ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಬೆಣ್ಣೂರು. ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಪುಲ್ ಸಗರಿ ವೇದಿಕೆ ಮೇಲೆ ಇದ್ದರು. ಸಂಘದ ತಾಲೂಕು ಅಧ್ಯಕ್ಷ ಆರ್.ಬಿ.ವಡವಡಗಿ (ಮುತ್ತು) ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಸಿದ್ದು ಚಲವಾದಿ, ಖಜಾಂಚಿ ಲಾಡ್ಲೇಮಶ್ಯಾಕ ನದಾಫ, ಅಮೀನ ಸಾಬ್ ಮುಲ್ಲಾ. ಪುಂಡಲಿಕ ಮುರಾಳ. ಬಸವರಾಜ ಹುಲಗಣ್ಣಿ. ಮಹಿಬೂಬ ಹಳ್ಳೂರು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    apvc-iconPost Views: 9
  • ತಹಸಿಲ್ದಾರ್ ಕಚೇರಿ ಮುಂದೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹೋರಾಟ

    ತಹಸಿಲ್ದಾರ್ ಕಚೇರಿ ಮುಂದೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹೋರಾಟ

    ಸತ್ಯಕಾಮ ವಾರ್ತೆ ಸುರಪುರ:
    ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಸರ್ವೇ ನಂಬರ್ 7/1 ರಲ್ಲಿನ ಖಾರೀಜ್ ಖಾತಾ ಜಾಗದಲ್ಲಿ 4 ಎಕರೆ ಜಾಗವನ್ನು ವಾಲ್ಮೀಕಿ ಸಮುದಾಯಕ್ಕೆ ಮೀಸಲಿಡುವಂತೆ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ತಹಸಿಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ವಾಲ್ಮೀಕಿ ಸಮುದಾಯ ತಾಲೂಕಿನಲ್ಲಿ ದೊಡ್ಡ ಸಮುದಾಯವಾಗಿದ್ದು,ಈ ಸಮುದಾಯ ಆರ್ಥಿಕವಾಗಿ,ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಅಭಿವೃಧ್ಧಿ ಹೊಂದಲು ಗ್ರಂಥಾಲಯ ಸೇರಿದಂತೆ ಸಮುದಾಯ ಭವನ ಯಾವುದೂ ನಿರ್ಮಾಣಗೊಂಡಿಲ್ಲ.ಆದ್ದರಿAದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಖಾರೀಜ್ ಖಾತಾ ಸರ್ವೇ ನಂಬರ್ 7/1 ರಲ್ಲಿ ಇರುವ 6 ಎಕರೆ 15 ಗುಂಟೆ ಜಮೀನಿನ ಪೈಕಿ ನಾಲ್ಕು ಎಕರೆ ಜಮೀನು ಮೀಸಲಿಟ್ಟು ನಮ್ಮ ಸಮಾಜಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

    ನಂತರ ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಸಂಘದ ತಾಲೂಕ ಗೌರವಾಧ್ಯಕ್ಷ ಸಿದ್ದನಗೌಡ ಕರಿಬಾವಿ,ತಾಲೂಕ ಅಧ್ಯಕ್ಷ ಭೀಮನಗೌಡ ಲಕ್ಷಿö್ಮÃ,ತಾ.ಪ್ರ ಕಾರ್ಯದರ್ಶಿ ನಾಗರಾಜ ನಾಯಕ ಪ್ಯಾಪ್ಲಿ,ಶ್ರೀ ವಾಲ್ಮೀಕಿ ಇಂಟರ್ನ್ಯಾಷನಲ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ,ಮುಖಂಡರಾದ ಭೀಮು ಹೆಚ್.ನಾಯಕ, ವಿಜಯಕುಮಾರ ಚಿಟ್ಟಿ,ಬಲಭೀಮ ನಾಯಕ ಬೈರಿಮಡ್ಡಿ,ವಿನೋದ ಕುಮಾರ ನಾಯಕ,ವೆಂಕಟೇಶ ಬೇಟೆಗಾರ, ವಾಸುದೇವ ನಾಯಕ, ಶ್ರೀನಿವಾಸ ನಾಯಕ ಲಕ್ಷಿö್ಮÃಪುರ,ಮೌನೇಶ ನಾಯಕ ಚಿಕ್ಕನಹಳ್ಳಿ, ದೇವು ನಾಯಕ ಜಾಲಿಬೆಂಚಿ,ನಾಗರಾಜ ದೇವತ್ಕಲ್,ರಂಗನಾಥ ನಾಯಕ ಲಕ್ಷಿö್ಮÃಪುರ,ಶಿವರಾಜ ಪಾಟೀಲ,ವಿಜಯಗೌಡ ಬೇವಿನಾಳ, ಶರಣು ಮಕಾಶಿ,ದೇವರಾಜ ದಳವಾಯಿ,ಕನಕಾಚಲ ನಾಯಕ ಜಾಗೀರದಾರ,ಸಂಜೀವಪ್ಪ ನಾಯಕ,ಗೋಪಾಲ ನಾಯಕ ಸತ್ಯಂಪೇಟೆ, ಮಲ್ಲಣಗೌಡ ಮಾಲಿ ಪಾಟೀಲ್,ಪರಮಣ್ಣ ಕಕ್ಕೇರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ವಾಲ್ಮೀಕಿ ಸಮುದಾಯಕ್ಕೆ ಸುರಪುರ ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಸರ್ವೇ ನಂಬರ್ 7/1 ರಲ್ಲಿ 4 ಎಕರೆ ಜಮೀನು ಮೀಸಲಿಡುವಂತೆ ಆಗ್ರಹಿಸಿ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರ.ಕಾರ್ಯದರ್ಶಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

     

    ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಹಿಂಬದಿಯ ಮೈದಾನದಲ್ಲಿ ಹಾಕಲಾಗಿರುವ ನೀಲಿ ಧ್ವಜದ ಸ್ಥಳದಲ್ಲಿ ಅಂಬೇಡ್ಕರ್ ಗ್ರಂಥಾಲಯ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಎರಡು ಎಕರೆ ಜಾಗ ನೀಡುವಂತೆ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
    ಮತ್ತೊಂದೆಡೆ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ಸಮುದಾಯದ ಅಭಿವೃಧ್ಧಿಗಾಗಿ ಗ್ರಂಥಾಲಯ,ಸಮಯದಾಯ ಭವನ ನಿರ್ಮಾಣಕ್ಕಾಗಿ ಸರ್ವೇ ನಂಬರ್ 7/1ರ ಖಾರೀಜ್ ಖಾತಾ ಜಮೀನಿನಲ್ಲಿ 4 ಎಕರೆ ಜಮೀನು ನೀಡುವಂತೆ ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ಧ್ವಜವನ್ನು ಹಾಕಲಾಗಿದೆ.

     

    • ಪಿ.ಐ ಉಮೇಶ ನಾಯಕ ದಕ್ಷ ಅಧಿಕಾರಿ-ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ

    ಸುರಪುರ: ನಗರದ ಪೊಲೀಸ್ ಠಾಣೆಯ ಪಿ.ಐ ಉಮೇಶ ನಾಯಕ ಅವರು ಒಬ್ಬ ದಕ್ಷ ಅಧಿಕಾರಿಯಾಗಿದ್ದಾರೆ.ಕೆಲವು ಸಂಘಟನೆಗಳು ಅವರ ವಿರುದ್ಧ ಮಾಡುತ್ತಿರುವ ಆರೋಪ ಸುಳ್ಳಾಗಿದ್ದು,ಯಾವುದೇ ಕಾರಣಕ್ಕೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು, ವರ್ಗಾವಣೆ ಮಾಡಬಾರದು.ಹಾಗೇನಾದರು ಮಾಡಿದಲ್ಲಿ ನಮ್ಮ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ಸುರಪುರ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಹಸಿಲ್ದಾರ್ ಮೂಲಕ ಪೊಲೀಸ್ ಮಹಾನಿರೀಕ್ಷಕರು ಈಶಾನ್ಯ ವಲಯ ಕಲಬುರ್ಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

     

    apvc-iconPost Views: 21
  • ಕಾರ್ಗಿಲ್ ವಿಜಯೋತ್ಸವ ಯಾತ್ರೆಗೆ ಶಾಸಕ ಆರ್.ವಿ.ನಾಯಕ ಚಾಲನೆ

    ಕಾರ್ಗಿಲ್ ವಿಜಯೋತ್ಸವ ಯಾತ್ರೆಗೆ ಶಾಸಕ ಆರ್.ವಿ.ನಾಯಕ ಚಾಲನೆ

    ಸತ್ಯಕಾಮ ವಾರ್ತೆ ಸುರಪುರ: 

    ಸೇನೆ, ಅರೆ ಸೇನಾಪಡೆ ಮತ್ತು ಮಾಜಿ ಸೈನಿಕರ ಸಂಘ ಸುರಪುರ ವತಿಯಿಂದ ಏರ್ಪಡಿಸಿದ್ದ 26ನೇ ಕಾರ್ಗಿಲ್ ವಿಜಯೋತ್ಸವ ಮತ್ತು ಆಪರೇಷನ್ ಸಿಂಧೂರ ಯಶಸ್ವಿ ಸಮಾರಂಭದಲ್ಲಿ ಸುರಪುರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಹಾಗೂ ಸುರಪುರ ಅರಸು ಮನೆತನದ ರಾಜಾ ಲಕ್ಷ್ಮಿನಾರಾಯಣ ನಾಯಕ ಅವರು ಭಾಗಿಯಾಗಿ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಗರುಡಾದ್ರಿ ಕಲಾ ಮಂದಿರದ ವರೆಗೆ ನಡೆದ ವಿಜಯೋತ್ಸವ ಯಾತ್ರೆಗೆ ಚಾಲನೆ ನೀಡಿದರು.

    ನಂತರ ಗರುಡಾದ್ರಿ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಿ ವಿಜಯೋತ್ಸವ ಉದ್ದೇಶಿಸಿ ಮಾತನಾಡಿದರು.

    ಈ ಸಂದರ್ಭದಲ್ಲಿ ಮಾಜಿ ಸೈನಿಕರುಗಳು ಹಾಗೂ ತಾಲೂಕು ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಗ್ಯಾರಂಟಿ ಯೋಜನೆ ಅಧ್ಯಕ್ಷರು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯಮಾನ್ಯರು ಉಪಸ್ಥಿತರಿದ್ದರು

    apvc-iconPost Views: 24
  • ಅಗ್ನಿವೀರ್ 2025: ಫಲಿತಾಂಶ ಪ್ರಕಟ

    ಅಗ್ನಿವೀರ್ 2025: ಫಲಿತಾಂಶ ಪ್ರಕಟ

    ನವದೆಹಲಿ: ಭಾರತೀಯ ಸೇನೆಯು ಅಗ್ನಿವೀರ್ ನೇಮಕಾತಿ 2025ರ ಭಾಗವಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಯ ಫಲಿತಾಂಶಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಜೂನ್ 30 ರಿಂದ ಜುಲೈ 10, 2025 ರವರೆಗೆ ನಡೆದ ಈ ಪರೀಕ್ಷೆಯಲ್ಲಿ ಪಾಲ್ಗೊಂಡಿರುವ ಅಭ್ಯರ್ಥಿಗಳು ಈಗ ತಮ್ಮ ಫಲಿತಾಂಶಗಳನ್ನು joinindianarmy.nic.in ನಲ್ಲಿ ಪರಿಶೀಲಿಸಬಹುದು ಹಾಗೂ ಡೌನ್‌ಲೋಡ್ ಮಾಡಬಹುದು.

     

     ಫಲಿತಾಂಶ ಪರಿಶೀಲನೆಗಾಗಿ ಹಂತಗಳು: 
    • ಮುಖಪುಟದಲ್ಲಿ “Agneepath CEE Result 2025” ಎಂಬ ಲಿಂಕ್ ಕ್ಲಿಕ್ ಮಾಡಿ
    • ನಿಮ್ಮ ಲಾಗಿನ್ ವಿವರಗಳು (ರಿಜಿಸ್ಟರ್ಡ್ ಇಮೇಲ್ ಐಡಿ/ಫೋನ್ ನಂಬರ್ ಮತ್ತು ಪಾಸ್ವರ್ಡ್) ನಮೂದಿಸಿ
    • ಫಲಿತಾಂಶ ಪರದೆಯ ಮೇಲೆ ತೋರಿಸಲಿದೆ
    • ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ ಔಟ್ ತೆಗೆದುಕೊಳ್ಳಿ

    ಪರೀಕ್ಷೆಯ ಕುರಿತು ಸಂಕ್ಷಿಪ್ತ ವಿವರ:

    • ಪರೀಕ್ಷೆಯ ದಿನಾಂಕಗಳು: ಜೂನ್ 30 – ಜುಲೈ 10, 2025

    • ಪರೀಕ್ಷಾ ಮಾದರಿ: ಬಹು ಆಯ್ಕೆ ಪ್ರಶ್ನೆಗಳು (MCQ), ವಸ್ತುನಿಷ್ಠ ಮಾದರಿ

    • ಅರ್ಜಿ ಪ್ರಕಾರ:

      • ಕೆಲವೊಂದು ವರ್ಗದ ಅಭ್ಯರ್ಥಿಗಳಿಗೆ 1 ಗಂಟೆಯಲ್ಲಿ 50 ಪ್ರಶ್ನೆಗಳು

      • ಇತರರಿಗೆ 2 ಗಂಟೆಯಲ್ಲಿ 100 ಪ್ರಶ್ನೆಗಳು

    • ಪರೀಕ್ಷಾ ಭಾಷೆಗಳು (13): ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು, ಪಂಜಾಬಿ, ಒಡಿಯಾ, ಬೆಂಗಾಲಿ, ಉರ್ದು, ಗುಜರಾತಿ, ಮರಾಠಿ, ಅಸ್ಸಾಮಿ

    ಅಗ್ನಿವೀರ್‌ ಆಗಿ ಸೇನೆಯ ಸೇರುವ ಕನಸು ಹೊಂದಿರುವ ಅಭ್ಯರ್ಥರಿಗೆ ಇದು ಮಹತ್ವದ ಹಂತ,

    ಸೂಚನೆ: ಹೆಚ್ಚಿನ ಮಾಹಿತಿಗಾಗಿ ಅಥವಾ ಯಾವುದೇ ಸ್ಪಷ್ಟತೆಗಾಗಿ, ಅಭ್ಯರ್ಥಿಗಳು joinindianarmy.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

    ನೇಮಕಾತಿ ಸುದ್ದಿಗಳು ಹಾಗೂ ಶಿಕ್ಷಣ ಮಾಹಿತಿ ಪಡೆಯಲು, ತಕ್ಷಣವೇ ಸತ್ಯಕಾಮ ಗ್ರೂಪ್‌ ಸೇರಿಕೊಳ್ಳಿ! 

    apvc-iconPost Views: 14
  • ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಜೋ ರೂಟ್

    ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಜೋ ರೂಟ್

    ಇಂಗ್ಲೆಂಡ್‌ನ ಭರವಸೆಯ ಬ್ಯಾಟ್ಸ್‌ಮನ್ ಜೋ ರೂಟ್ ಅವರು ಮತ್ತೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಇತಿಹಾಸ ರಚಿಸಿದ್ದಾರೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ, ರೂಟ್ ಅವರು ತಮ್ಮ 38ನೇ ಟೆಸ್ಟ್ ಶತಕವನ್ನು ಸಿಡಿಸಿ ವಿಶ್ವದ ಗಮನ ಸೆಳೆದಿದ್ದಾರೆ.

    ಇದರಿಂದ, ಅವರು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತ್ಯಧಿಕ ಟೆಸ್ಟ್ ರನ್ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈಗ ರೂಟ್ ಅವರ ಖಾತೆಯಲ್ಲಿ 13,380ಕ್ಕಿಂತ ಹೆಚ್ಚು ರನ್‌ಗಳು ದಾಖಲಾಗಿದ್ದು, ಅವರ ಮುಂದೆ ಕೇವಲ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (15,921 ರನ್) ಮಾತ್ರ ಉಳಿದಿದ್ದಾರೆ.

    ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 433/7 ರನ್‌ಗಳನ್ನು ಗಳಿಸಿ ಭಾರತದ ಮೇಲೆ 75 ರನ್ ಮುನ್ನಡೆ ಸಾಧಿಸಿದೆ. ರೂಟ್ ಅವರ ಈ ಶತಕದ ಜೊತೆಗೆ ಬೆನ್ ಸ್ಟೋಕ್ಸ್ (69) ಮತ್ತು ಒಲಿ ಪೋಪ್ (71) ಅವರ ಮಹತ್ವದ ಆಟ ಸಹ ತಂಡದ ಗೆಲುವಿಗೆ ಬಲ ನೀಡಿದೆ.

    ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರು ಈ ಸಾಧನೆಗೆ ಪ್ರತಿಕ್ರಿಯೆ ನೀಡುತ್ತಾ – “ಜೋ ರೂಟ್ ನಮ್ಮ ತಂಡದ ನಿಜವಾದ ತಾರೆ. ಅವರ ಶಾಂತ ಮನಸ್ಸು, ತಂತ್ರಜ್ಞತೆ ಮತ್ತು ನಿಸ್ವಾರ್ಥ ಆಟದಿಂದ ಇಂಗ್ಲೆಂಡ್ ಗೆ ಗೆಲುವು ಸಾಧ್ಯವಾಗಿದೆ,” ಎಂದು ಕೊಂಡಾಡಿದ್ದಾರೆ.

    ಮುಂದಿನ ಗುರಿ: ಇದು ಜೋ ರೂಟ್ ಅವರ ಸಾಧನೆಯ ಕನಿಷ್ಠ ಹಂತ ಮಾತ್ರ. cricket ತಜ್ಞರ ಅಂದಾಜು ಪ್ರಕಾರ ಅವರು ಮುಂದಿನ 2–3 ವರ್ಷಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಬಹುದಾದ ಸಾಧ್ಯತೆ ಇದೆ.

    apvc-iconPost Views: 18
  • ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಮೇಲೆ ಹಲ್ಲೆ- ಎಚ್. ಆಂಜಿನೇಯ ವಿರುದ್ಧ ಕ್ರಮಕ್ಕೆ ಕುಳುವ ಮಹಾಸಂಘ ಆಗ್ರಹ

    ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಮೇಲೆ ಹಲ್ಲೆ- ಎಚ್. ಆಂಜಿನೇಯ ವಿರುದ್ಧ ಕ್ರಮಕ್ಕೆ ಕುಳುವ ಮಹಾಸಂಘ ಆಗ್ರಹ

     ಸತ್ಯಕಾಮ ವಾರ್ತೆ ಯಾದಗಿರಿ:

    ಅಲೆಮಾರಿ ಸಮುದಾಯಗಳ ಉನ್ನತಿಗಾಗಿ ಶ್ರಮಿಸುತ್ತಿರುವ ಕರ್ನಾಟಕ ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅವರಿಗೆ ರಾಜ್ಯಮಟ್ಟದ ಸಭೆಯಲ್ಲಿ ಉಂಟಾದ ಅವಮಾನ ಹಾಗೂ ಹಲ್ಲೆ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ. ಮಾಜಿ ಸಚಿವ ಹೆಚ್. ಆಂಜಿನೇಯ ಸೇರಿದಂತೆ ಕೆಲ ರಾಜಕೀಯ ನಾಯಕರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಿಲ್ಲಾಧ್ಯಕ್ಷ ಬಸವರಾಜ ಭಜಂತ್ರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾದ್ಯಕ್ಷ  ಜುಲೈ 5ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ೪೯ ಅಲೆಮಾರಿ ಜಾತಿಗಳ ಸಭೆಯಲ್ಲಿ, ಸಮಾವೇಶಕ್ಕೆ ಆಹ್ವಾನವಿಲ್ಲದೆ ಬಂದಿದ್ದೀರಿ ಎಂದು ಪಲ್ಲವಿ ಅವರನ್ನು ವಾಗ್ದಾಳಿ ನಡೆಸಿ, ಬಳಿಕ ಶಾರೀರಿಕವಾಗಿ ದೌರ್ಜನ್ಯ ನಡೆಸಲಾಗಿದೆ. ಇದೇ ವೇಳೆ ಹೆಣ್ಣು ನಾಯಕರಾಗಿ ಉಪಸ್ಥಿತರಿದ್ದ ಜಿಲ್ಲಾಧ್ಯಕ್ಷೆ ಪ್ರಭಾವತಿ ಕೂಡ ಹಲ್ಲೆಗೆ ಒಳಗಾಗಿದ್ದು, ಅವರ ಮೇಲೆ ದಲ್ಲಾಳಿಗಳು ಮಾಡಿದ ಗುಂಡಾ ಕೃತ್ಯ ಸಮುದಾಯದ ಗೌರವಕ್ಕೆ ಪೆಟ್ಟು ತಂದುಕೊಟ್ಟಿದೆ ಎಂದರು.

    ಅಲೆಮಾರಿ ನಿಗಮದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಾದ್ಯಂತ ಶ್ರಮಿಸಿ, ಎಲ್ಲಾ ೫೧ ಅಲೆಮಾರಿ/ಅರೆ ಅಲೆಮಾರಿ ಜಾತಿಗಳನ್ನು ಸಮಾನವಾಗಿ ಒಗ್ಗಟ್ಟಿಗೆ ತರಲು ಪ್ರಯತ್ನಿಸುತ್ತಿರುವ ಪಲ್ಲವಿ ಅವರ ಬೆಳವಣಿಗೆ ಸಹಿಸದವರ ತಂಡವೇ ಈ ದೌರ್ಜನ್ಯಕ್ಕೆ ಕಾರಣ ಎಂದು ಸಂಘದ ಮುಖಂಡರು ಆರೋಪಿಸಿದ್ದಾರೆ.

    ಈ ಘಟನೆ ಪೂರ್ವನಿಯೋಜಿತ ಪಿತೂರಿಯಾಗಿದ್ದು, ಬೆಂಬಲಿಗರು, ಬಿಜೆಪಿ ಪಕ್ಷದ ಕೆಲವು ಮುಖಂಡರು, ದಲ್ಲಾಳಿಗಳಿಂದ ಇದು ನಡೆದಿರುವುದಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೈಗ್ರೌಂಡ್ ಠಾಣೆಯಲ್ಲಿ ಏಳ ಮಂದಿ ವಿರುದ್ಧ ಪ್ರಕರಣ ದಾಖಲಾಗಿರುವ ಸಂದರ್ಭದಲ್ಲೂ, ಪ್ರಮುಖ ಆರೋಪಿಗಳನ್ನು ಬಂಧಿಸಲು ಹಿಂಜರಿಯುತ್ತಿರುವ ಸರಕಾರದ ನಿರ್ಲಕ್ಷ್ಯತೆಯನ್ನು ಸಂಘದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

    ಇನ್ನೂ ಸಂಘದ ಮನವಿಯಲ್ಲಿ, ಹೆಚ್. ಆಂಜಿನೇಯ ಅವರನ್ನು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಿ, ಪಕ್ಷದಿಂದಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹಿಸಲಾಗಿದೆ. ಇಲ್ಲವಾದರೆ ರಾಜ್ಯದಾದ್ಯಂತ ಆಕ್ರೋಶಾತ್ಮಕ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

    ಈ ಘಟನೆ, ಅಲೆಮಾರಿ ಸಮುದಾಯದ ಹೆಮ್ಮೆಯ ಮೇಲಿನ ದಾಳಿಯಾಗಿ ಪರಿಗಣಿಸಲ್ಪಡುತ್ತಿದ್ದು, ಅಧಿಕಾರ, ರಾಜಕೀಯ ಮತ್ತು ಸಮುದಾಯ ಆಳವಾದ ಸಂಘರ್ಷದ ಚಿಹ್ನೆಯಾಗಿ ಪರಿಣಮಿಸಿದೆ. ಪಲ್ಲವಿ ವಿರುದ್ಧ ನಡೆದ ಕೃತ್ಯ ಕೇವಲ ರಾಜಕೀಯ ಆರೋಪವಲ್ಲ, ಇದು ಸಮುದಾಯದ ಅವಮಾನವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತಕ್ಷಣ ಸ್ಪಷ್ಟ ಮತ್ತು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ಕುಳುವ ಮಹಾಸಂಘ ಆಗ್ರಹಿಸಿದೆ.

    ಈ ಸಂದರ್ಭದಲ್ಲಿ ರಾಜ್ಯ  ಮುಖಂಡ ಭೀಮರಾಯ ರಂಗAಪೇಠ, ಶಿವಪ್ಪ ಭಜಂತ್ರಿ, ಯಲಸತ್ತಿ, ಆಂಜನೇಯ ಭಜಂತ್ರಿ ಮಸ್ಕನಳ್ಳಿ, ಖಂಡಪ್ಪ ಭಜಂತ್ರಿ ಸುರಪುರ, ಹಣಮಂತ ಭಜಂತ್ರಿ ಗೋಗಿ, ಬಸವರಾಜ ಭಜಂತ್ರಿ ಶಿವಪುರ,   ಆನಂದ ಭಜಂತ್ರಿ ಗೋಪಳಾಪುರ,  ಸಾಬಣ್ಣ ಭಜಂತ್ರಿ ಗಣಪುರ, ಸಂತೋಷ ಭಜಂತ್ರಿ ಮದ್ರಿಕಿ, ರಮೇಶ ಭಜಂತ್ರಿ ಗೋಗಿ, ಗಂಗಪ್ಪ ಭಜಂತ್ರಿ ಅರಕೇರಾ, ಬಸವರಾಜ ಚಟ್ನಳ್ಳಿ,   ಶಂಕರ್ ಭಜಂತ್ರಿ ಹೊಸಕೇರಾ, ಆಶಪ್ಪ ಭಜಂತ್ರಿ ಅರಕೇರಾ ಸೇರಿ ಅನೇಕರಿದ್ದರು.

    apvc-iconPost Views: 17
  • ಮಾಜಿ ಪ್ರಧಾನಿ ಇಂದಿರಾ ಗಾಂಧಿ ರೆಕಾರ್ಡ್​​ ಬ್ರೇಕ್​ ಮಾಡಿದ ಮೋದಿ ಹೊಸ ದಾಖಲೆ ನಿರ್ಮಾಣ

    ಮಾಜಿ ಪ್ರಧಾನಿ ಇಂದಿರಾ ಗಾಂಧಿ ರೆಕಾರ್ಡ್​​ ಬ್ರೇಕ್​ ಮಾಡಿದ ಮೋದಿ ಹೊಸ ದಾಖಲೆ ನಿರ್ಮಾಣ

    • ‘ದಕ್ಷ ಆಡಳಿತ ನೀಡುತ್ತಿರುವ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಕೈ ಯತ್ನ’

    ಸತ್ಯಕಾಮ ವಾರ್ತೆ ಯಾದಗಿರಿ:

    ದೇಶಧ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತ ಅವಧಿಯನ್ನು ಹಿಂದಿಕ್ಕಿ ಅತಿ ಹೆಚ್ಚು ಅವಧಿಯ ಎರಡನೇ ಪ್ರಧಾನ ಮಂತ್ರಿಗಳಾಗಿದ್ದುದು ದೇಶದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾ ವಕ್ತಾರ ಹಣಮಂತ ಇಟಗಿ ಹೇಳಿದ್ದಾರೆ.

    ಈ ಕುರಿತು ಹೇಳಿಕೆ ನೀಡಿರುವ ಅವರು, ಇಂದಿರಾಗಾAದಿಯವರ ಅಧಿಕಾರ ಅವಧಿಯ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಇಂದು ನಿರ್ಮಿಸಿದ್ದು, ನಾಗಾಲೋಟದಲ್ಲಿ ಮುಂದೆ ಸಾಗುತ್ತಿದ್ದಾರೆ. ಮೋದಿಜಿ ಅವರ ಆಡಳಿತಕ್ಕೆ ದೇಶದ ಜನತೆ ಹೆಮ್ಮೆ ಪಡುತ್ತಿದ್ದು, ಇನ್ನು ಹಲವು ದಾಖಲೆ ನಿರ್ಮಿಸಲಿ ಎಂದು ವಿಶ್ವದಾದ್ಯಂತ ಇರುವ ಭಾರತೀಯರು ಹಾರೈಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ದೇಶವನ್ನು ಅಭೂತಪೂರ್ವವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಅವರ ಆಡಳಿತವನ್ನು ನೋಡಿ ವಿರೋಧ ಪಕ್ಷವಾದ ಕಾಂಗ್ರೆಸ್ ಹತಾಶಗೊಂಡು ನಿರಾಧಾರವಾದ ಆರೋಪಗಳನ್ನು ದಿನನಿತ್ಯ ಮಾಡುವುದನ್ನೇ ಒಂದು ಚಟವಾಗಿಸಿಕೊಂಡಿದೆ. ದೇಶದ ಅಭಿವೃದ್ಧಿಗಾಗಿ ಹಗಲು ರಾತ್ರಿ ಶ್ರಮಿಸುತ್ತ ಭಾರತ ದೇಶವನ್ನು ಪ್ರಪಂಚದ 4ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಕ್ಕೆ ಹೆಚ್ಚಿಸಿ ಎಲ್ಲರಂಗಗಳಲ್ಲಿಯೂ ಅಭಿವೃದ್ಧಿ ಪಥದಲ್ಲಿ ದೇಶ ಕೊಂಡೊಯ್ಯುತ್ತಿದ್ದಾರೆ.

    ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ಸ್ವಚ್ಛ ಭಾರತ ಅಭಿಯಾನದಂತಹ ದೂರದೃಷ್ಟಿಯ ಕಾರ್ಯಕ್ರಮಗಳು ನೀಡಿದ್ದಾರೆ.
    ರೈತರಿಗೆ ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡಿದೆ. ರಾಜತಾಂತ್ರಿಕ ಪ್ರಯತ್ನಗಳು ಭಾರತಕ್ಕೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಇತರ ದೇಶಗಳೊಂದಿಗೆ ಬಲವಾದ ಸಂಬAಧಗಳAತಹ ಉಪಕ್ರಮಗಳೊಂದಿಗೆ ಜಾಗತಿಕ ವೇದಿಕೆಯಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿಕೊಟ್ಟಿವೆ. ಇಂದಿರಾಗಾAದಿಗಿAತಲೂ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿರುವ ಮೋದಿಜಿ ಅವರ ನೇತೃತ್ವದ ಕೇಂದ್ರದ ಸುಸ್ಥಿರ ಸರ್ಕಾರದ ಕೂದಲು ಕೊಂಕಿಸಲು ಆಗದೆ ಇರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಹತಾಶರಾಗಿದ್ದು, ಕ್ಷÄಲ್ಲಕ ಕಾರಣ ಮುಂದೆ ಮಾಡಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿಯ ವಿರುದ್ಧ ಇಲ್ಲಸಲ್ಲದ ಸುಳ್ಳುಗಳನ್ನು ಮುಂದೆ ಮಾಡಿ ತಾವು ಜೀವಂತ ಇದ್ದೇವೆ ಎಂದು ತೋರಿಸಿಕೊಳ್ಳಲು ಹೆಣಗುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ಕರ್ನಾಟಕದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಸೇರಿದಂತೆ ಹತ್ತಾರು ಹಗರಣಗಳು ಮಾಡಿ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದು, ಒಟ್ಟಾರೆ ದೇಶದಾದ್ಯಂತ ಸುಳ್ಳಿನ ಆಸರೆಯೊಂದಿಗೆ ಪ್ರಜಾಪ್ರಭುತ್ವ ಮತ್ತು ಕೇಂದ್ರದ ಉತ್ತಮ ಆಡಳಿತವನ್ನು ದುರ್ಬಲಗೊಳಿಸಲು ಇನ್ನಿಲ್ಲದಂತೆ ಹೆಣಗುತ್ತಿದೆ. ಆದರೆ ದೇಶದ ಹಾಗೂ ರಾಜ್ಯದ ಜನತೆ ಕಾಂಗ್ರೆಸ್ ನ ಸುಳ್ಳಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    apvc-iconPost Views: 65
  • ಹೃದಯಾಘಾತದಿಂದ ಹಲ್ಕ್ ಹೊಗನ್ ವಿಧಿವಶ

    ಹೃದಯಾಘಾತದಿಂದ ಹಲ್ಕ್ ಹೊಗನ್ ವಿಧಿವಶ

    ಅಮೆರಿಕಾ: ವಿಶ್ವ ಪ್ರಸಿದ್ಧ ರೆಸಲಿಂಗ್, ನಟ ಹಾಗೂ ಪಾಪ್ ಕಲ್ಚರ್ ಐಕಾನ್‌ ಆಗಿದ್ದ ಹಲ್ಕ್ ಹೊಗನ್ (ಮೂಲ ಹೆಸರು ಟೆರಿ ಜೀನ್ ಬೋಲಿಯಾ) ಅವರು 71ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಫ್ಲೋರಿಡಾದ ಕ್ಲಿಯರ್‌ವಾಟರ್‌ನಲ್ಲಿ ತಮ್ಮ ನಿವಾಸದಲ್ಲಿದ್ದಾಗ ಇಂದು ಬೆಳಿಗ್ಗೆ ಅಸಹಜ ಆರೋಗ್ಯ ಸಮಸ್ಯೆ ಉಂಟಾಗಿ ತುರ್ತು ವೈದ್ಯಕೀಯ ಸಿಬ್ಬಂದಿಯನ್ನು ಕರೆಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಸುಮಾರು 30 ನಿಮಿಷಗಳ ಕಾಲ CPR ನೀಡಿದ ಬಳಿಕ ಆಸ್ಪತ್ರೆಗೂ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರನ್ನು ಮೃತ ಘೋಷಿಸಿದರು.

    ಹಲ್ಕ್ ಹೊಗನ್ ಅವರು 1980ರ ದಶಕದಲ್ಲಿ “Hulkamania” ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾಗಿದ್ದು, WWE (ಹಿಂದಿನ WWF) ಯ ಚಾಂಪಿಯನ್‌ಶಿಪ್‌ ಗೆದ್ದಂತೆ ಹಲವು ಪಟಕಥೆಗಳಿಗೆ ಜೀವ ತುಂಬಿದ್ದರು. ಅವರು ಆರು ಬಾರಿ WWE ಚಾಂಪಿಯನ್ ಆಗಿದ್ದು, ಹಲವು ಪೀಳಿಗೆಗಳ ಅಭಿಮಾನಿಗಳಿಗೆ ಪ್ರೇರಣೆಯಾದರು.

    ಅವರನ್ನು 2005ರಲ್ಲಿ WWE Hall of Fameಗೆ ಸೇರಿಸಲಾಗಿದೆ. ಅವರು ನಟರಾಗಿ, ಟಿವಿ ಶೋಗಳಲ್ಲಿ ಭಾಗವಹಿಸಿ ಹಲವಾರು ವರ್ಷಗಳು ಪ್ರಭಾವ ಬೀರಿದ್ದರು.

    ಅಂತಿಮ ಕ್ಷಣಗಳು:
    ಕ್ಲಿಯರ್‌ವಾಟರ್‌ನಲ್ಲಿ ಬೆಳಿಗ್ಗೆ 9:51 ಕ್ಕೆ ತುರ್ತು ಸೇವೆಗಳಿಗೆ ಕರೆ ಬಂದಿತ್ತು. ಪೊಲೀಸರು ಹಾಗೂ ವೈದ್ಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ 30 ನಿಮಿಷ CPR ನೀಡಿದರೂ ಅವರು ಜೀವಿತರಾದಿಲ್ಲ. ಯಾವುದೇ ಅಪರಾಧ ಅಥವಾ ಅನುಮಾನಾಸ್ಪದ ಘಟನೆ ಇಲ್ಲ ಎಂಬುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಕುಟುಂಬಸ್ಥರು: ಅವರು ತಮ್ಮ ಪತ್ನಿ ಸ್ಕೈ ಡೇಲಿ ಮತ್ತು ಮಕ್ಕಳು ಬ್ರುಕ್ ಹಾಗೂ ನಿಕ್ ಅವರನ್ನು ಅಗಲಿದ್ದಾರೆ.

    ಹಲ್ಕ್ ಹೊಗನ್ ಅವರ ನಿಧನದಿಂದ ರೆಸಲಿಂಗ್ ಪ್ರಪಂಚ ದುಃಖದಲ್ಲಿದ್ದು, ಹಲವು ತಾರೆಗಳು, ಅಭಿಮಾನಿಗಳು ತಮ್ಮ ಸಂತಾಪವನ್ನು ಸಾಮಾಜಿಕ ಮಾಧ್ಯಮದ ಮೂಲಕ ವ್ಯಕ್ತಪಡಿಸಿದ್ದಾರೆ.

    “ಆಹ್ ಬ್ರದರ್!” ಎಂದು ಆಳವಾದ ಧ್ವನಿಯಲ್ಲಿ ಹೇಳುತ್ತಿದ್ದ ಅವರ ನೆನಪಿನಲ್ಲಿ, ರೆಸಲಿಂಗ್ ಜಗತ್ತು ಶೋಕ ಸ್ಮರಣೆಯಲ್ಲಿದೆ.

    apvc-iconPost Views: 5