Blog

  • ಮಹಾನ್ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134ನೇ ಸ್ಮರಣಾ ದಿನಾಚರಣೆ.

    ಮಹಾನ್ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134ನೇ ಸ್ಮರಣಾ ದಿನಾಚರಣೆ.

    ಸತ್ಯಕಾಮ ವಾರ್ತೆ ಯಾದಗಿರಿ:

    ಮಹಾನ್ ಧರ್ಮನಿರಪೇಕ್ಷ- ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134ನೇ ಸ್ಮರಣ ದಿನ ವನ್ನು ಯಾದಗಿರಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ (ಟೌನ್) ವಸತಿ ನಿಲಯದಲ್ಲಿ ಹಾಗೂ ಯರಗೋಳ ಗ್ರಾಮದ ಬಸ್ ನಿಲ್ದಾಣದ ಬಳಿ ಆಚರಿಸಲಾಯಿತು.

    ಆಧುನಿಕ ಶಿಕ್ಷಣಕ್ಕೆ ನಾಂದಿ ಹಾಡಿದ, ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ, ವಿಧವಾ ಪುನರ್ ವಿವಾಹಕ್ಕಾಗಿ ದುಡಿದ ಮಹಾನ್ ಚೇತನ ಈಶ್ವರಚಂದ್ರ ವಿದ್ಯಾಸಾಗರರು ನಮ್ಮೆಲ್ಲರಿಗೂ ಆದರ್ಶವಾಗಬೇಕು. ಸಾರ್ವಜನಿಕ ಶಿಕ್ಷಣ ಉಳಿಸುವ ಹೋರಾಟಕ್ಕೆ ವಿದ್ಯಾಸಾಗರರು ನಮಗೆ ಸ್ಫೂರ್ತಿಯಾಗಬೇಕು ಎಂದು AIDSO ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ ಕೆ ರವರು ಮಾತನಾಡಿದರು.

    ಕಾರ್ಯಕ್ರಮದಲ್ಲಿ AIDSO ಸದಸ್ಯರಾದ ದೇವೀಂದ್ರಮ್ಮ, ಲಕ್ಷ್ಮೀಕಾಂತ, ರೆಡ್ದೆಪ್ಪ, ರಂಜಿತಾ, ಶ್ರವಣಕುಮಾರ, ಮೆಹಬೂಬ್, ನಾಗಿಂದ್ರಮ್ಮ ಹಾಗೂ ಊರಿನ ನಾಗರೀಕರಾದ ಭೀಮರೆಡ್ಡಿ, ಯಂಕಾರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.

    apvc-iconPost Views: 15
  • 14ನೇ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಸಂಭ್ರಮದ ಜಾತ್ರಾ ಮಹೋತ್ಸವ 

    14ನೇ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಸಂಭ್ರಮದ ಜಾತ್ರಾ ಮಹೋತ್ಸವ 

    ಸತ್ಯಕಾಮ ವಾರ್ತೆ ಯಾದಗಿರಿ:

    ತಾಲ್ಲೂಕಿನ ಮುಂಡರಗಿ ಗ್ರಾಮ ಹೊರವಲಯದ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಿಂದ 14 ನೇ ವರ್ಷದ ಜಾತ್ರೆ ಜರುಗಿತು.

    ಮಠದ ಪೀಠಾಧಿಪತಿ ಶಿವ ಚಂದ್ರಶೇಖರ ಮುತ್ಯಾ ಮಾತನಾಡಿ ಪ್ರತಿವರ್ಷದಂತೆ ಮಠದಲ್ಲಿ ಜಾತ್ರೆ ನಡೆಯಲಿದ್ದು, ಸಾವಿರಾರು ಭಕ್ತರು ದೂರದ ಊರುಗಳಿಂದ ಆಗಮಿಸಿ ನಾಗಲಿಂಗೇಶ್ವರ ದರ್ಶನ ಮಾಡುವರು. ಜಾತ್ರೆಯ ಪೂರ್ವದಿನ ರಾತ್ರಿ ಭಜನೆ ಕಾರ್ಯಕ್ರಮ, ಬೆಳಿಗ್ಗೆ ಮುಂಡರಗಿ ಗ್ರಾಮದ ದ್ಯಾಮವ್ವ ದೇವಸ್ಥಾನಕ್ಕೆ ತೆರಳಿ ಉಡಿ ತುಂಬುವ ಕಾರ್ಯಕ್ರಮ, ಗಂಗಾ ಸ್ನಾನ, ನಾಗರ ಹುತ್ತಕ್ಕೆ ಪೂಜೆ, ಹಾಗೂ ನಿಜ ನಾಗರಕ್ಕೆ ಹಾಲುಣಿಸುವುದು ವಾಡಿಕೆ. ಜಾತ್ರೆಯಲ್ಲಿ ಹಲಗೆ ಕುಣಿತ, ಡೊಳ್ಳು ಕುಣಿತ, ಕೈ ಕುಸ್ತಿ ಪಂದ್ಯಗಳು ಜರುಗುತ್ತವೆ, ವಿಶೇಷ ಪೂಜೆಗಳು ನೆರವೇರುತ್ತವೆ ಎಂದರು.

    ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ್ ಮಾತನಾಡಿ ನಮ್ಮ ಸನಾತನ ಧರ್ಮವು ಮನುಷ್ಯನಿಗೆ ಭಯ, ಭಕ್ತಿ, ನಂಬಿಕೆ, ದಾನ, ಧರ್ಮ, ಸಂಸ್ಕೃತಿ, ಸಂಸ್ಕಾರ ಗಳು ಇದ್ದಾಗಲೇ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ, ನಾವು ಕೂಡ ಹಲವು ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತೇವೆ ವಿಶೇಷವಾಗಿ ನಾಗರ ಪಂಚಮಿ ಪ್ರಯುಕ್ತ ನಮ್ಮ ಭಾಗದ ಕಂದಕೂರು ಗ್ರಾಮದ ಬೆಟ್ಟದ ಕೊಂಡಮ್ಮಾಯಿ ಜಾತ್ರೆವೇಳೆಯಲ್ಲಿ ರಾಶಿಗಟ್ಟಲೇ ಸಾವಿರಾರು ಹಾವು, ಚೇಳುಗಳು ಹೊರಬಂದು, ಜನರೆಲ್ಲ ಅವುಗಳಿಂದ ಆಟವಾಡುವುದು ಸಾಮಾನ್ಯ ಮಾತಲ್ಲ. ಅಂತೆಯೇ ಹುತ್ತದಲ್ಲಿನ ನಿಜ ನಾಗರ ಹಾವನ್ನು ಹೊರತೆಗೆದು ಹಾಲುಣಿಸುವುದು ದೈವತ್ವದ ಮಾತು ಎಂದರು.

    ಕಾರ್ಯಕ್ರಮದಲ್ಲಿ ಹಳಿಗೇರ ಪೀಠದ ಹಣಮಂತ್ರಾಯ ಮುತ್ಯಾ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ರಮೇಶ್ ಕೋಟಿಮನಿ, ಶ್ರೀಧರ್ ಮಹಾಂತೇಶ್, ಅಶೋಕ್ ರೆಡ್ಡಿ ಎಲೇರಿ, ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ಮುದ್ನಾಳ್ ಸ್ವಾಮಿಗಳಿಂದ ಆಶೀರ್ವಾದ ಪಡೆದರು.

    apvc-iconPost Views: 15
  • ನಾಳೆ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ನಾಳೆ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ಸತ್ಯಕಾಮ ವಾರ್ತೆ ಯಾದಗಿರಿ:
    ಲಯನ್ಸ್ ಕ್ಲಬ್, ಯಾದಗಿರಿ ಇವರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 30, 2025 (ಬುಧವಾರ) ಸಂಜೆ 5 ಗಂಟೆಗೆ ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ತಿಳಿಸಿದೆ.

    ನಾಳೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲವೀಶ್ ಓರಾಡಿಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪೃಥ್ವಿಕ್ ಶಂಕರ್ ಅವರು ವಿಶೇಷ ಅತಿಥಿಯಾಗಿದ್ದಾರೆ.

    ಪದಗ್ರಹಣಾಧಿಕಾರಿಯಾಗಿ ಎಲ್.ಎನ್. ಸಿಎ ಮನೋಜ್ ಕುಮಾರ್ ಪುರೋಹಿತ್ ಹಾಗೂ ಎಲ್.ಎನ್. ಸುರೇಶ್ ಜಂಗ್ನಾನಿ ಕಾರ್ಯನಿರ್ವಹಿಸಲಿದ್ದು, ಹರಿನಾರಾಯಣ ಭಟ್ಟಾಡ್ ಮತ್ತು ಸಿಎ ರಾಮು ಪರಿತಾಲಾ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.

    ಕಾರ್ಯಕ್ರಮದ ನಿರೂಪಣೆಯನ್ನು ಎಲ್.ಎನ್. ಜಾನಾರ್ಧನ್ ಅವರು ನಿಭಾಯಿಸಲಿದ್ದಾರೆ.

    2025-26ನೇ ಸಾಲಿನ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳು

    ಅಧ್ಯಕ್ಷರಾಗಿ Ln. ಭೀಮಣ್ಣಗೌಡ ಕ್ಯಾತ್ನಳ, ಕಾರ್ಯದರ್ಶಿಯಾಗಿ Ln. ಡಾ. ಶಿವಪುತ್ರರೆಡ್ಡಿ ಪಾಟೀಲ ಚಟ್ನಳ್ಳಿ ಹಾಗೂ ಖಜಾಂಚಿಯಾಗಿ Ln. ವೆಂಕಟರೆಡ್ಡಿ ಪಾಟೀಲ ತಂಗಡಗಿ ಅವರನ್ನು ಆಯ್ಕೆ ಮಾಡಲಾಗಿದೆ.

    ಉಪಾಧ್ಯಕ್ಷರಾಗಿ ಮಲ್ಲಣ್ಣಗೌಡ ಹಳಿಮನಿ, ಸದಸ್ಯತ್ವದ ಮುಖ್ಯಸ್ಥ Ln. ಸಿದ್ದರಾಮರೆಡ್ಡಿ ತಿಪ್ಪರೆಡ್ಡಿ, ಜಂಟಿ ಕಾರ್ಯದರ್ಶಿಯಾಗಿ. ಇಂದೂಧರ್ ಶಿನ್ನೂರ, ಸೇವಾ ಕಾರ್ಯದರ್ಶಿಯನ್ನಾಗಿ ಮಲ್ಲಿಕಾರ್ಜುನ ಸಿರ್ಗೋಳ, ಟೇಮರ್ ಶರಣರೆಡ್ಡಿ ಹತ್ತಿಕುಣಿ, ಟೇಲ್ ಟ್ವಿಸ್ಟರ್ ವಿಜಯ ದಿಗ್ಗವಿ ಹಾಗೂ ಮಾರುಕಟ್ಟೆ ಸಂವಹನ ಮುಖ್ಯಸ್ಥೆಯಾಗಿ ಲೀಲಾ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ ಹಾಗೂ LCIF ಸಂಯೋಜಕರಾಗಿ ದೀಪಕ್ ಯಲಸತ್ತಿ ಮತ್ತು ಸಹ ಖಜಾಂಚಿಯಾಗಿ ವೀರೇಂದ್ರ ಪಾಟೀಲ ಮೊಸಂಬಿ ಅವರನ್ನು ನೇಮಕ ಮಾಡಲಾಗಿದೆ.

    ಜಿಲ್ಲಾ ಮಟ್ಟದ ಸೇವಾ ವಿಭಾಗಗಳಲ್ಲಿಯೂ ಯಾದಗಿರಿ ಸದಸ್ಯರು ನಾಮನಿರ್ದೇಶಿತರಾಗಿದ್ದು, ಆರೋಗ್ಯ, ಶಿಕ್ಷಣ, ಸ್ವಚ್ಛತಾ ಚಟುವಟಿಕೆ ಹಾಗೂ ಕ್ರೀಡಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

    ಕಾರ್ಯಕ್ರಮಕ್ಕೆ ಲಯನ್ಸ್ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕೆಂದು ಕೋರಲಾಗಿದೆ.

    apvc-iconPost Views: 12
  • ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ – ಕಲ್ಲಿನಾಥ ಶ್ರೀಗಳು

    ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ – ಕಲ್ಲಿನಾಥ ಶ್ರೀಗಳು

    ಸತ್ಯಕಾಮ ವಾರ್ತೆ ಶಹಾಪುರ:

    ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಭೇದ ಭಾವ ಮರೆತು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಹೊರ್ತಿ ಕೋಲಾರದ ವಿಶ್ವಗಾಣಿಗ ಸಮಾಜದ ಜಗದ್ಗುರು ಪೂಜ್ಯ ಶ್ರೀ ಕಲ್ಲಿನಾಥ ಮಹಾ ಸ್ವಾಮಿಗಳು ಹೇಳಿದರು.

    ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗಾಣದೇವತೆ ವೃತ್ತದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು,ಬಡವರ ಹಾಗೂ ಅಸಹಾಯಕರ ನೆರವಿಗೆ ನಿಂತು ನ್ಯಾಯ ದೊರಕಿಸಿ ಕೊಡುವನೆ ನಿಜವಾದ ಗಾಣಿಗ, ಈ ನಾಡಿಗೆ ನಮ್ಮ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.

    ವಕ್ಕಲಿಗೇರಿ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯರು ಮಾತನಾಡಿ,ಗಾಣಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ,ಮುಖ್ಯ ವೇದಿಕೆಗೆ ತರುವಲ್ಲಿ ಶ್ರಮಿಸಿ ಉತ್ತಮ ಸಮಾಜ ಕಟ್ಟುವ ಕೆಲಸ ಮಾಡೋಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಕಿರಿಯರನ್ನ ನಾಡಿಗೆ ಪರಿಚಯಿಸುವ ಕೆಲಸ ಹೆಚ್ಚೆಚ್ಚು ಆಗಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಭೀಮರಾಯ ಸೇರಿ,ಪಿಡ್ಡಪ್ಪ ನಂದಿಕೋಲ, ಮಲ್ಲಣ್ಣವಮ್ಮಾ,ನಿಂಗಣ್ಣ ಮುದ್ದಾ,ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಸಿದ್ರಾ,ಶಿವಣ್ಣಗೌಡ ಗೌಡರ,ಅಮರೇಶ್  ನಂದಿಕೋಲ,ಮಹಾಂತಪ್ಪ ಕೂಡ್ಲೂರು,ಮಡಿವಾಳಪ್ಪ ಪಾಟೀಲ್,ಗಣೇಶ್ ಚಡಗುಂಡ ಸೇರಿದಂತೆ ನೂರಾರು ಸಮಾಜದ ಬಂಧುಗಳು ಹಾಜರಿದ್ದರು.

    apvc-iconPost Views: 274
  • ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ಸಹಕಾರಿ : ಸಚಿವ ದರ್ಶನಾಪುರ

    ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ಸಹಕಾರಿ : ಸಚಿವ ದರ್ಶನಾಪುರ

    ಸತ್ಯಕಾಮ ವಾರ್ತೆ ಯಾದಗಿರಿ:

    ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ನೆರವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

    ನಗರದ ಎಸ್.ಡಿ.ಎನ್ ರೆಸಿಡೆನ್ಸಿ ಯಲ್ಲಿ ಇಂದು ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗ ಗೊಳಿಸುವುದು ಯೋಜನೆಯಡಿ ಲೀನ್ ಯೋಜನೆ ಮತ್ತು ಝಡ್ ಇಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ದೇಶದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದಲ್ಲಿ ಆರ್ಥಿಕ ವೃದ್ಧಿ ಜೊತೆಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಸಾಧ್ಯವಿದೆ.ಈ ದಿಸೆಯಲ್ಲಿ ರಾಜ್ಯದ ಸಣ್ಣ ಉದ್ದಿಮೆದಾರರನ್ನು ತೊಂದರೆ ಮುಕ್ತಗೊಳಿಸಲು ರಾಜ್ಯ ಸರ್ಕಾರ ವಿಶೇಷ ಗಮನ ನೀಡುತ್ತಿದೆ ಎಂದು ಹೇಳಿದರು.

    ಎಮ್ ಎಸ್ ಎಮ್ ಇ (micro and small and medium enterprises) ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಶಿಯಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ನಿರ್ಣಯ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.

    ಈ ಭಾಗದಲ್ಲಿ ಕೃಷಿಗೆ ಒತ್ತು ನೀಡಲಾಗುತ್ತಿದೆ.ಅದರಂತೆ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಗಮನ ನೀಡಿದಲ್ಲಿ ಕಾರ್ಮಿಕರ ಒಲಸೆ ಸಮಸ್ಯೆ ನಿವಾರಣೆಯಾಗಲಿದೆ.ಈ ದಿಸೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಈ ಭಾಗದ ಮುಂಡರಗಿಯಲ್ಲಿ ಕನಿಷ್ಠ ಐವತ್ತುರಿಂದ ನೂರು ಎಕರೆ ಜಮೀನಿನಲ್ಲಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ,ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ.ಅದರಂತೆ ಕಲ್ಯಾಣ ಕರ್ನಾಟಕ ಭಾಗದ ಕಲ್ಬುರ್ಗಿ, ಜೇವರ್ಗಿ,ಯಾದಗಿರಿ ಭಾಗಗಳಲ್ಲಿ ಕಡಿಮೆ ವೆಚ್ಚದ ಭೂ ನೀಡುವ ಉದ್ದೇಶ ಹೊಂದಲಾಗಿದ್ದು, ಶಹಾಪುರದಲ್ಲಿ 50 ಎಕರೆ ಜಮೀನು ಸಹ ಗುರುತಿಸಲಾಗಿದೆ ಎಂದು ಹೇಳಿದರು.

    ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಪ್ರೋತ್ಸಾಹಿಸುತ್ತಿದ್ದು,ಕಾಸಿಯಾ ಸೇರಿದಂತೆ ವಿವಿಧ ಕೈಗಾರಿಕಾ ಸಂಸ್ಥೆಗಳ ಸಮಸ್ಯೆಗಳನ್ನು ಸರ್ಕಾರದ ಇತಿಮಿತಿಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.ಉದ್ದಿಮೆದಾರರಿಗೆ ರಫ್ತು ಕುರಿತು ತರಬೇತಿ ಸಹ ನೀಡಿ ಪ್ರೋತ್ಸಾಹಿಸಲಾಗುತ್ತಿದೆ
    ಎಂದು ಹೇಳಿದರು.

    ಜಿಲ್ಲಾಧಿಕಾರಿ  ಹರ್ಷಲ್ ಭೋಯರ್ ಅವರು, ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗಾವಕಾಶಗಳ ಹೆಚ್ಚಿನ ಸೃಷ್ಟಿಗೆ ಸಣ್ಣ ಕೈಗಾರಿಕೆಗಳು ಬಹುಮುಖ್ಯ.ಉದ್ದಿಮೆದಾರರು ಆಧಾರ್ ಸ್ತಂಭವಾಗಿದ್ದು, ಜಿಲ್ಲಾಡಳಿತ ವತಿಯಿಂದ ಅವಶ್ಯಕ ನೆರವು ಒದಗಿಸಲಾಗುವುದು ಎಂದು ಹೇಳಿದರು.

    ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕೆ ಸಂಸ್ಥೆ ಅಧ್ಯಕ್ಷ ದಿನೇಶ್ ಕುಮಾರ್ ಜೈನ್ ಮಾತನಾಡಿದರು.

    ರೈಸ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಹನುಮದಾಸ್ ಮುಂದಡಾ, ಸುರಪುರ ಕೈಗಾರಿಕೆ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಜೆಟ್ಟಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶ್ ಕುಮಾರ್, ಕಾರ್ಯದರ್ಶಿ ಗುರು ಮಣಿಕಂಠ,ವಿಟಿಪಿಸಿ ಸಹಾಯಕ ನಿರ್ದೇಶಕ ಜಾಫರ್ ಅನ್ಸಾರಿ, ಡೆಪ್ಯುಟಿ ಜನರಲ್ ಮ್ಯಾನೇಜರ್ ಕುಲಶೇಖರನ್ ಉಪಸ್ಥಿತರಿದ್ದರು .ರಿಪೋರ್ಟ ಆನ್ ಕರ್ನಾಟಕ ಎಕ್ಸ್ ಪೋರ್ಟ್ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು.ಉಪಾಧ್ಯಕ್ಷ ನಿಂಗಣ್ಣ ಎಸ್.ಬಿರಾದರ್ ಸ್ವಾಗತಿಸಿದರು.

    apvc-iconPost Views: 36
  • ಬಡವರ ಸೇವೆಯಲ್ಲಿ ವೈದ್ಯರು ದೇವರನ್ನು ಕಾಣಬೇಕು: ತಿಪ್ಪಣ್ಣಪ್ಪ ಕಮಕನೂರ

    ಬಡವರ ಸೇವೆಯಲ್ಲಿ ವೈದ್ಯರು ದೇವರನ್ನು ಕಾಣಬೇಕು: ತಿಪ್ಪಣ್ಣಪ್ಪ ಕಮಕನೂರ

    ಸತ್ಯಕಾಮ ವಾರ್ತೆ ಕಲಬುರಗಿ:

    ವೈದ್ಯರುಗಳು ಬಡವರ ಆರೋಗ್ಯ ಸೇವೆಯನ್ನು ಮಾಡಿ ದೇವರನ್ನು ಕಾಣಬೇಕು ರೋಗಿಗಳಿಗೆ ವೈದ್ಯರೆ ನಡೆದಾಡುವ ದೇವರು ಎಂದು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು ಹೇಳಿದರು.

    ನಗರದ ಜವಳಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಗೊAಡ ಹರಿದಾಸ ಹಾರ್ಟ್ ಹಾಸ್ಪಿಟಲ್ ಜುಲೈ 28ರಂದು ಉದ್ಘಾಟನೆ ಮಾಡಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ತಜ್ಞ ವೈದ್ಯರ ಕೊರತೆಯಿಂದ ಸೋಲಾಪುರ ಬೆಂಗಳೂರಿಗೆ ರೋಗಿಗಳು ತೆರಳುತ್ತಿದ್ದ ಯುಗಕ್ಕೆ ಅಂತ್ಯ ಹಾಡಲು ತಜ್ಞ ವೈದ್ಯರು ಕಲಬುರಗಿಯಲ್ಲಿ ಆಸ್ಪತ್ರೆ ಪ್ರಾರಂಭಿಸುವುದರ ಮೂಲಕ ಈ ಭಾಗದ ಜನರ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ವಿಷಯ ಎಂದು ಹೇಳಿದರು.

    ಇತ್ತೀಚಿನ ದಿನಗಳಲ್ಲಿ ಹೃದ್ರೋಗವು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಡಾ. ಅರುಣ್ ಕುಮಾರ್ ಹರಿದಾಸ್ ಜಗದ್ವಿಖ್ಯಾತ ವೈದ್ಯರು ಕಲಬುರಗಿಯಲ್ಲಿ ಸೇವೆಗೆ ಸಿಗುತ್ತಿರುವುದು ಈ ಭಾಗದ ದೊಡ್ಡ ಭಾಗ್ಯ. ಇಂತಹ ವೈದ್ಯರುಗಳಿಗೆ ಸರಕಾರ ಹಾಗೂ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಶುಭ ಹಾರೈಸಿದರು.

    ಈ ಭಾಗದ ಬಡ ರೋಗಿಗಳ ಸೇವೆಗಾಗಿ ಅತ್ಯಾಧುನಿಕ ಆಸ್ಪತ್ರೆ ತೆರೆಯಲಾಗಿದ್ದು ಕೈಗೆಟಕುವ ದರದಲ್ಲಿ ಸೇವೆ ಒದಗಿಸಲಾಗುವುದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಅರುಣ್ ಕುಮಾರ್ ಹರಿದಾಸ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿಗಳಾದ ರಾಘವೇಂದ್ರ ಮೈಲಾಪುರ ಮಾತನಾಡಿ ಕಲಬುರಗಿಯಲ್ಲಿ ಹೃದ್ರೋಗ ಆಸ್ಪತ್ರೆ ಪ್ರಾರಂಭವಾಗಿರುವುದು ಹೆಮ್ಮೆಯ ಸಂಗತಿ ಹಾಗೂ ಡಾ. ಅರುಣ್ ಕುಮಾರ್ ಹರಿದಾಸ್ ಶ್ರೇಷ್ಠ ವೈದ್ಯರಾಗಿದ್ದು ಅವರ ಸೇವೆ ಈ ಭಾಗಕ್ಕೆ ದೊಡ್ಡ ಕೊಡುಗೆ ಎಂದು ಹೇಳಿದರು.

    ಹರಿದಾಸ್ ಹಾರ್ಟ್ ಆಸ್ಪತ್ರೆ ಸುಸಜ್ಜಿತವಾಗಿ ಎಲ್ಲ ಸೌಲಭ್ಯಗಳೊಂದಿಗೆ ಪ್ರಾರಂಭವಾಗಿರುವುದರಿAದ ಹೃದ್ರೋಗ ರಂಗದಲ್ಲಿ ದೊಡ್ಡ ಹೆಜ್ಜೆ ಇದಕ್ಕೆ ಎಲ್ಲ ರೀತಿಯ ನೆರವು ನೀಡಲು ಸಿದ್ದ ಎಂದು ಎಚ್ ಕೆ ಇ ಕೌನ್ಸಿಲ್ ನ ಮಾಜಿ ಸದಸ್ಯ ನಿತಿನ್ ಬಿ. ಜವಳಿ ಶುಭ ಹಾರೈಸಿದರು. ಉದ್ಯಮಿಗಳಾದ ವೆಂಕಟೇಶ ಕಡೇ ಚೂರ್ , ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್, ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ನಾಗವೇಣಿ ತಿಪ್ಪಣ್ಣಪ್ಪ ಕಮಕನೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಪ್ರಮೀಳಾ ಎಂ.ಕೆ, ಡಾ. ರಾಜೇಶ್ ಕಡೇಚೂರ್, ಶ್ರೀಮತಿ ಕೋಮಲೇಶ್ವರಿ ಅರುಣ್ ಕುಮಾರ್, ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಕುದ್ರೋಳಿ ಗಣೇಶ್ ಇದ್ದರು. ಆಕಾಶವಾಣಿಯ ನಿವೃತ್ತ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಣೆ ಮಾಡಿದರು.

    apvc-iconPost Views: 7
  • ಉತ್ತಮ ಶಿಕ್ಷಣದ ಜೊತೆಗೆ ಮೌಢ್ಯತೆಯ ಜಾಗೃತಿ ಅತ್ಯಗತ್ಯ – ಸಿಕಿಂದ ದೊಡ್ಮನಿ

    ಉತ್ತಮ ಶಿಕ್ಷಣದ ಜೊತೆಗೆ ಮೌಢ್ಯತೆಯ ಜಾಗೃತಿ ಅತ್ಯಗತ್ಯ – ಸಿಕಿಂದ ದೊಡ್ಮನಿ

    ಸತ್ಯಕಾಮ ವಾರ್ತೆ ಸಿರವಾರ:

    ತಳ ಸಮುದಾಯದ ಯುವಜನರಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಮೌಢ್ಯ ಹೋಗಲಾಡಿಸಲು ಜಾಗೃತಿ ಅತ್ಯಗತ್ಯ ಎಂದು ಮಾನವ ಬಂಧುತ್ವ ವೇದಿಕೆಯ ಗ್ರಾಮ ಸಂಚಾಲಕ ಸಿಕಿಂದ ದೊಡ್ಡಮನಿ ಹೇಳಿದರು.

    ತಾಲೂಕಿನ ಅತ್ತನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನವ ಬಂದತ್ವ ವೇದಿಕೆಯಿಂದ ಬಸವ ಪಂಚಮಿ ಆಚರಣೆ ಮಾಡಲಾಯಿತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೌಢ್ಯದಿಂದ ಜ್ಞಾನದತ್ತ, ಕತ್ತಲಿಂದ ಬೆಳಕಿನೆಡೆಗೆ ಎನ್ನುವ ಮಹತ್ತರ ಯೋಜನೆಗಳು ವೇದಿಕೆಯ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಯುವ ಪೀಳಿಗೆ ಶಿಕ್ಷಣ ಪಡೆದು ಮೌಢ್ಯ ಧಿಕ್ಕರಿಸಿ ಪ್ರಜ್ಞಾವಂತ ಸಮಾಜ ಕಟ್ಟಲು ಮುಂದಾಗಬೇಕು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಣ್ಣ ಈರಣ್ಣ, ಕೆ ದುರ್ಗಣ್ಣ, ಅಯ್ಯಪ್ಪ ಮ್ಯಾದರ್, ಗ್ರಾಮ ಪಂಚಾಯತ ಸದಸ್ಯ ಅಂಬರೀಶ ಜಗ್ಲಿ, ಬೆಟ್ಟಪ್ಪ, ಕಸ್ತೂರಿ, ಮಂಜುನಾಥ ನಾಯಕ, ಪಂಪಾಪತಿ ನಾಯಕ ಶಿಕ್ಷಕರಾದ ಮಂಜುನಾಥ, ಗುಂಡೇಶ ಹಾಗೂ ವಿದ್ಯಾರ್ಥಿಗಳಿದ್ದರು.

    apvc-iconPost Views: 25
  • ರಸ್ತೆ ಮೇಲೆ ಕಸ ಹಾಕಿದ ಅಧಿಕಾರಿಗೆ ನಗರಸಭೆಯಿಂದ ದಂಡ

    ರಸ್ತೆ ಮೇಲೆ ಕಸ ಹಾಕಿದ ಅಧಿಕಾರಿಗೆ ನಗರಸಭೆಯಿಂದ ದಂಡ

    ಸತ್ಯಕಾಮ ವಾರ್ತೆ ಯಾದಗಿರಿ:

    ರಸ್ತೆ ಮೇಲೆ ಕಸ ಹಾಕಿದ್ದ ಖಜಾನೆ ಇಲಾಖೆ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಅಧಿಕಾರಿಗೆ ದಂಡ ಹಾಕಿ ಮತ್ತೊಮ್ಮೆ ಕಸ ರಸ್ತೆ ಮೇಲೆ ಹಾಕದಂತೆ ಎಚ್ಚರಿಕೆ ನೀಡಿದರು.

    ಅರಣ್ಯ ಇಲಾಖೆ ವನಮಹೋತ್ಸವ ಕಾರ್ಯಕ್ರಮಕ್ಕೆ ತೆರಳುವ ಮಾರ್ಗಮಧ್ಯೆ ನಗರದ ಸುಭಾಶ್ಚಂದ್ರ ಬೋಸ್ ವೃತ್ತದ ಬಳಿ ಇರುವ ಪಿಡಬ್ಲುಡಿ ಇಲಾಖೆ ಕಚೇರಿಯ ಬಳಿ ಇಲಾಖೆಯ ಸಿಬ್ಬಂದಿಗಳು ಮುಖ್ಯರಸ್ತೆ ಮೇಲೆ ಕಸದ ಗುಡ್ಡೆಯನ್ನು ಹಾಕಿದ್ದನ್ನು ಗಮನಿಸಿದ ಅಧ್ಯಕ್ಷರು, ಕಚೇರಿ ಸಿಬ್ಬಂದಿಗೆ ಕಸ ರಸ್ತೆ ಮೇಲೆ ಹಾಕದಂತೆ ಎಚ್ಚರಿಕೆ ನೀಡಿ ತೆರಳಿದ್ದರು.

    ಕಾರ್ಯಕ್ರಮ ಮುಗಿದ ಮೇಲೆ ಮತ್ತೇ ಅದೇ ಮುಖ್ಯರಸ್ತೇ ಮೇಲೆ ಬರುವಾಗಲೂ ಕೂಡ ಕಸ ಹಾಗೇಯೇ ಇರುವುದರಿಂದ ಕಾರಿನಿಂದ ಕೆಳಗಿಳಿದ ನಗರಸಭೆ ಅಧ್ಯಕ್ಷರು ಅಧಿಕಾರಿಗಳನ್ನು ಕರೆಯಿಸಿ, ನಗರಸಭೆ ಸಿಬ್ಬಂದಿಗಳಿಗೆ ಕರೆಯಿಸಿ ಪಿಡಬ್ಲುಡಿ ಅಧಿಕಾರಿಗೆ ದಂಡ ಹಾಕುವಂತೆ ಸೂಚಿಸಿದರು.

    ಸ್ಥಳಕ್ಕಾಗಮಿಸಿದ ನಗರಸಭೆ ಅಧಿಕಾರಿಗಳು ಪಿಡಬ್ಲುಡಿ ಅಧಿಕಾರಿಗೆ ೨೦೦ ರೂಪಾಯಿ ದಂಡ ರಸೀದಿ ನೀಡಿ ಮತ್ತೊಮ್ಮೆ ರಸ್ತೆ ಮೇಲೆ ಕಸ ಸುರಿಯದಂತೆ ಸೂಚನೆ ನೀಡಿದರು.

    ಸ್ಥಳದಲ್ಲಿಯೇ ದಂಡ ಪಾವತಿಸಿದ ಅಧಿಕಾರಿ ನಗರಸಭೆ ಅಧ್ಯಕ್ಷರಿಗೆ ಕ್ಷಮೆ ಕೋರಿ ಮತ್ತೊಮ್ಮ ಈ ರೀತಿ ತಪ್ಪು ಮಾಡುವುದಿಲ್ಲವೆಂದರು.

    ಈ ಸಂದರ್ಭದಲ್ಲಿ ನಗರಸಭೆ ಕಾನೂನು ಸಲಹೆಗಾರರಾದ ಶರಣಗೌಡ ಬಲಕಲ್, ಅಧಿಕಾರಿಗಳಾದ ಶಿವಪುತ್ರ ಸೇರಿದಂತೆ ಸಿಬ್ಬಂದಿಗಳು ಇದ್ದರು.
    ರಸ್ತೆ ಮೇಲೆ ಕಸ ಹಾಕಿದರೆ ದಂಡ ಗ್ಯಾರಂಟಿ

    ನಾವು ಸ್ವಚ್ಚ ಯಾದಗಿರಿ ನಗರಕ್ಕಾಗಿ ಪಣತೊಟ್ಟಿದ್ದೇವೆ ಅದಕ್ಕಾಗಿ ಕಸ ಕಂಡಲ್ಲಿ ಪೋಟೋ ಕಳಿಸಿ ಎಂಬ ಅಭಿಯಾನವನ್ನು ಕೂಡ ಮಾಡುತ್ತಿದ್ದೇವೆ, ಪೋಟೋ ಬಂದ ತಕ್ಷಣ ಅಲ್ಲಿ ನಮ್ಮ ನಗರಸಭೆ ಸಿಬ್ಬಂದಿ ಹಾಜರಾಗಿ ಅಲ್ಲಿನ ಕಸವನ್ನು ವಿಲೇವಾರಿ ಮಾಡಿ ಸ್ವಚ್ಚ ನಗರ ನಿರ್ಮಾಣ ಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದೇವೆ ಇದನ್ನು ಮರೆತು ಯಾರಾದರೂ ರಸ್ತೆ ಮೇಲೆ ಕಸ ಹಾಕಿದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ, ದಂಡ ಹಾಕುವುದರ ಜೊತೆಗೆ ಯಾವುದಾದರೂ ಇಲಾಖೆ ಅಥವಾ ಸಂಸ್ಥೆಯವರು ರಸ್ತೆ ಮೇಲೆ ಕಸ ಹಾಕಿದಲ್ಲಿ ಶಿಸ್ತುಕ್ರಮಕ್ಕಾಗಿ ಅವರ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇವೆ.
    -ಕು.ಲಲಿತಾ ಮೌಲಾಲಿ ಅನಪೂರ ನಗರಸಭೆ ಅಧ್ಯಕ್ಷರು, ಯಾದಗಿರಿ
    apvc-iconPost Views: 61
  • ಒಳ ಮೀಸಲಾತಿಗಾಗಿ ಆಗ್ರಹಿಸಿ ಆಗಸ್ಟ್ 01 ರಂದು ಯಾದಗಿರಿಯಲ್ಲಿ ಬೃಹತ್ ಪ್ರತಿಭಟನೆ: ದೇವಿಂದ್ರ ನಾಥ್ ನಾದ

    ಒಳ ಮೀಸಲಾತಿಗಾಗಿ ಆಗ್ರಹಿಸಿ ಆಗಸ್ಟ್ 01 ರಂದು ಯಾದಗಿರಿಯಲ್ಲಿ ಬೃಹತ್ ಪ್ರತಿಭಟನೆ: ದೇವಿಂದ್ರ ನಾಥ್ ನಾದ

    ಸತ್ಯಕಾಮ ವಾರ್ತೆ ಯಾದಗಿರಿ:
    ಮೂರುವರೆ ದಶಕಗದಿಂದ ಹೋರಾಟ ನಡೆಸಿದರು ರಾಜ್ಯದಲ್ಲಿ ಮಾದಿಗರಿಗೆ ಒಳ ಮೀಸಲಾತಿ ರಾಜ್ಯ ಸರ್ಕಾರ ನೀಡುತ್ತಿಲ್ಲ ಪ್ರಸ್ತುತ ಸಿಎಂ ಸಿದ್ದರಾಮಯ್ಯ ಮಾದಿಗರಲ್ಲಿ ಗೊಂದಲ ಸೃಷ್ಟಿಸುತ್ತ ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತ ಇರುವುದನ್ನು ಖಂಡಿಸಿ ಯಾದಗಿರಿ ಜಿಲ್ಲೆ ವತಿಯಿಂದ ಆಗಸ್ಟ್ 1 ನಗರದಲ್ಲಿ ಜಿಲ್ಲಾ ಮಾದಿಗ ಸಮಾಜದ ವತಿಯಿಂದ ಸಮಾಜದ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷರಾದ ರಾಜ್ಯಮಾದಿಗ ಸಮಾಜದ ಮುಖಂಡರಾದ ದೇವಿಂದ್ರನಾಥ್ ನಾದ್ ತಿಳಿಸಿದರು.

    ಸೈದಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜದ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಮೊದಲ ಅಧಿವೇಶನದಲ್ಲಿಯೇ ಜಾರಿಗೆ ತರುತ್ತೇನೆ ಎಂದು ಸುಳ್ಳು ಹೇಳುತ್ತಾ ದಲಿತರಲ್ಲಿ ಜಗಳ ಹಚ್ಚುವ ಕೆಲಸ ಮೋಸ ಮಾಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಬಂದಿವೆ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಆದೇಶ ನೀಡಿ ಆಗಸ್ಟ್ 1 ಆದೇಶ ನೀಡಿ ಒಂದು ವರ್ಷ ಗತಿಸಿದರು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ಮಾಡದೆ ಮಾದಿಗರಲ್ಲಿ ತಾಳ್ಮೆ ಕಟ್ಟೆ ಒಡೆದಿದೆ ಮುಂದೆ ಆಗುವ ಅನಾಹುತಗಳಿಗೆ ಸರಕಾರವೇ ಜವಾಬ್ದಾರಿ ಎಂದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಹಣಮಂತ ಇಟಗಿ, ನ್ಯಾಯವಾದಿಗಳಾದ ಚೆನ್ನಯ್ಯ ಮ್ಯಾಳಿಕೇರಿ, ನಿಂಗಪ್ಪ ವಡ್ನಳ್ಳಿ, ಆಂಜನೇಯ ಬಬಲಾದಿ, ಚಂದ್ರಶೇಖರ್ ಕಡೆಸೂರ್, ಸಂಜೀವಪ್ಪ, ರಾಜು ಕೂಡ್ಲೂರ್, ಭಿಮಾಸೆಪ್ಪ್, ನರಸಪ್ಪ ನೀಲಳ್ಳಿ, ಮಲ್ಲಿಕಾರ್ಜುನ್ ಕೊಡ್ಲೂರ್, ಸಾಗರ್, ಮೌನೇಶ್, ಸಹದೇವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    apvc-iconPost Views: 42
  • ಆಡಂಬರದ ಹುಟ್ಟುಹಬ್ಬದ ಬದಲು ಸಮಾಜದ ಉಪಯೋಗಿ ಕಾರ್ಯಕ್ರಮ ಮಾಡುವುದು ಉತ್ತಮ

    ಆಡಂಬರದ ಹುಟ್ಟುಹಬ್ಬದ ಬದಲು ಸಮಾಜದ ಉಪಯೋಗಿ ಕಾರ್ಯಕ್ರಮ ಮಾಡುವುದು ಉತ್ತಮ

    ಸತ್ಯಕಾಮ ವಾರ್ತೆ ಯಾದಗಿರಿ:

    ಹುಟ್ಟುಹಬ್ಬದ ಅಂಗವಾಗಿ ಆಡಂಬರದ ಆಚರಣೆ ಮಾಡಿಕೊಳ್ಳುವವರ ಮದ್ಯೆ ಅನಾಥ ಮಕ್ಕಳಿಗೆ ನೆರವಾಗುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಮಾದರಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಬಿಜೆಪಿ ಯುವ ಮುಖಂಡ ಮಹೇಶರಡ್ಡಿಗೌಡ ಮುದ್ನಾಳ ಹೇಳಿದರು.

    ನಗರದ ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ವೇದಿಕೆ ಜಿಲ್ಲಾದ್ಯಕ್ಷ ರವಿ ಕೆ. ಮುದ್ನಾಳ 34 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಗುಳೆ ಹೋಗುವ ಕೂಲಿಕಾರರ ಮಕ್ಕಳ ಆಶ್ರಮದ ಮಕ್ಕಳಿಗೆ ನೊಟ್ ಬುಕ್ ಪೆನ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದರು.

    ಹುಟ್ಟುಹಬ್ಬ ಆಚರಣೆ ನಮ್ಮ ಸಂಸ್ಕೃತಿ ಅಲ್ಲವಾದರೂ ಇದನ್ನು ಒಂದು ನೆಪವಾಗಿಸಿಕೊಂಡು ಸಮಾಜಕ್ಕೆ ಸಹಾಯವಾಗುವಂತಹ ಕಾರ್ಯ ಮಾಡಬೇಕು ಆ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಇತರರಿಗೆ ಮಾದರಿಯಗುತ್ತದೆ ಎಂದು ಅವರು ಅಬಿಪ್ರಾಯಪಟ್ಟರು.

    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವರಾಜ ನಾಯಕ ಉಳ್ಳೆಸುಗೂರು ಮಾತನಾಡಿ ಹುಟ್ಟುಹಬ್ಬದ ನೆಪದಲ್ಲಿ ಜನತೆಗೆ ಉಪಯೋಗವಾಗುವ ಮಾದರಿ ಕಾರ್ಯ ಮಾಡುವುದೇ ನಿಜವಾದ ಹುಟ್ಟುಹಬ್ಬದ ಆಚರಣೆಯಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಉಮಾರಡ್ಡಿಗೌಡ ನಾಯ್ಕಲ್, ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿಲಾಸ ಪಾಟೀಲ್, ಬಿಜೆಪಿ ನಗರಾಧ್ಯಕ್ಷ ನಿಂಗಪ್ಪ ಹತ್ತಿಮನಿ, ತಾಪಂ ಮಾಜಿ ಸದಸ್ಯ ಯಂಕಪ್ಪ ರಾಠೋಡ, ಟೆಂಟ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಖಾಸಿಮ್ ಸಾಬ್ ಗಡ್ಡೆಸುಗೂರು, ವೀರಶೈವ ಮಹಾಸಭೆ ಕೋಶಾಧ್ಯಕ್ಷ ಬಂದನಗೌಡ ಕನ್ಯಾಕೌಳೂರು ಸೇರಿದಂತೆ ವೇದಿಕೆ ಪದಾಧಿಕಾರಿಗಳಾದ ಶಂಕರಗೌಡ ಯಲ್ಸತ್ತಿ, ವಿಶ್ವನಾಥ ತಂಗಡಗಿ, ಅಶೋಕರಡ್ಡಿ ವಂಕಸAಭ್ರ, ಸಿದ್ದು ಸಾಹುಕಾರ ಮಾಧ್ವಾರ, ತಿಪ್ಪಯ್ಯ, ವಸಂತಕುಮಾರ ಯಲ್ಸತ್ತಿ, ವೆಂಕಟೇಶ ಚವ್ಹಾಣ, ಭೀಮುರಾಠೋಡ, ವೆಂಕಟೇಶ ಸೇರಿದಂತೆ ಅನೇಕರು ಪಾಲ್ಗೊಂಡರು.

    apvc-iconPost Views: 23