Blog

  • ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಯಲು ಸರ್ಕಾರದ ವಿರುದ್ದ ಹೋರಾಟ- ಮಗ್ದಂಪುರ

    ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಯಲು ಸರ್ಕಾರದ ವಿರುದ್ದ ಹೋರಾಟ- ಮಗ್ದಂಪುರ

    ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚೆ

    ಯಾದಗಿರಿ: ಮುಂಬರುವ ವಿಧಾನ ಸಭೆ ಅಧಿವೇಶನ ಪ್ರಾರಂಭವಾಗುತ್ತಿದ್ದು ಆ ಅಧಿವೇಶನದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳು ತೆಗೆದುಕೊಂಡವರ ವಿರುದ್ದ ಕಾನೂನು ಕ್ರಮ ಆಗಬೇಕು ಪರಿಶಿಷ್ಟ ಪಂಗಡ ಮೀಸಲಾತಿಯಿಂದ ಆಯ್ಕೆ ಆದ ಶಾಸಕರು ಅಧಿವೇಶನದಲ್ಲಿ ದ್ವನಿ ಎತ್ತಬೇಕು ಎಂದು ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಮಾರೆಪ್ಪ ನಾಯಕ ಮಗ್ದಂಪುರ ಹೇಳಿದರು.

    ನಗರದ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪರಿಶಿಷ್ಟ ಪಂಗಡ ಮೀಸಲಾತಿಯಿಂದ ಆಯ್ಕೆಯಾದ ಶಾಸಕರು ವಾಲ್ಮೀಕಿ ಸಮಾಜದ ಬೇಡಿಕೆಗಳಿಗೆ ಸ್ಪಂದನೆ ನೀಡದೆ ತಮ್ಮ ಮುಂದಿನ ರಾಜಕೀಯ ಬಹುಶಃ ಸಲುವಾಗಿ ನಮ್ಮ ಸಮಾಜಕ್ಕೆ ಅನ್ಯಾಯ ಎಸುಗುತ್ತಿದ್ದಾರೆ ಎಂದು ಸಚಿವರು ಹಾಗೂ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ವಾಲ್ಮೀಕಿ ಸಮಾಜದ ವಿವಿಧ ಬೇಡಿಕೆಗಳಾದ ಯಾದಗಿರಿ ನಗರದ ಸರಕಾರಿ ಪದವಿ ಮಹಾವಿದ್ಯಾಲಯ ಹತ್ತಿರ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಸ್ಥಳಕ್ಕೆ ಸಂಬಂಧಿಸಿದ ದಾಖಲಾತಿ ಇದ್ದರೂ ಕೂಡ ಎ ಖಾತಾ ಕೊಡಲು ಸಂಬಂಧಿಸಿದ‌ ನಗರ ಸಭೆ ಅಧಿಕಾರಿಗಳು ನೀಡದೆ ಇರುವುದು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಚಿವರನ್ನು ನೇಮಿಸದೆ ನಮ್ಮ ಸಮಾಜಕ್ಕೆ ಬರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಆಕಿ ತುಳಿತಕ್ಕೆ ಓಳಗಾದ ಸಮಾಜವನ್ನು ಮೂಲೆ ಗುಂಪು ಮಾಡುತ್ತಿದೆ ಎಂದು ಆರೋಪಿಸಿದರು.

    ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ ಮಾತನಾಡಿ ಯಾದಗಿರಿ ನಗರದಲ್ಲಿ ರಾಜ್ಯಾದ್ಯಂತ ನಕಲಿ ಪ್ರಮಾಣ ಪತ್ರಗಳು ವಿತರಣೆ ಆಗುತ್ತಿದ್ದು ಅದನ್ನು ಕೂಡಲೇ ತಡೆಯುವಂತೆ ಅಗಸ್ಟ್ ೧೩ ರಂದು ಯಾದಗಿರಿ ನಗರದಲ್ಲಿ ಬೃಹತ್ ಪ್ರಮಾಣದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

    ಮುಂಬರುವ ವಿಧಾನ ಸಭೆ ಅಧಿವೇಶನದಲ್ಲಿ ವಾಲ್ಮೀಕಿ ಸಮಾಜದ ಬೇಡಿಕೆಗಳ ಬಗ್ಗೆ ಚರ್ಚೆ ಆಗಬೇಕು ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಗಟ್ಟಲು ಸೂಕ್ತವಾದ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಮುಖಂಡರಾದ ಸಿದ್ದಲಿಂಗಪ್ಪ ನಾಯಕ. ಚಂದ್ರಕಾಂತ ಹತ್ತಿಕುಣಿ. ಶರಣಪ್ಪ ಜಾಕನಹಳ್ಳಿ. ಗಂಗಾಧರ ನಾಯಕ. ದೊಡ್ಡಯ್ಯ ನಾಯಕ. ಅಂಬು ನಾಯಕ. ವಾಲ್ಮೀಕಿ ನಾಯಕ ಸಮಾಜದ ತಾಲೂಕ ಅಧ್ಯಕ್ಷರಾದ ಸಾಹೇಬ ಗೌಡ ನಾಯಕ ಗೌಡಗೇರ. ಶಹಪೂರ ತಾಲೂಕ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಮರೆಪ್ಪ ಪ್ಯಾಟಿ. ಸುರಪುರ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಭೀಮನಗೌಡ. ಗುರಮಿಠಕಲ್ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕಾಶಪ್ಪ ನಾಯಕ. ಶೇಖರ ದೊರೆ. ಮಲ್ಲಿಕಾರ್ಜುನ ಕಟಕಟಿ. ಮಲ್ಲಿಕಾರ್ಜುನ ನಿಲಹಳ್ಳಿ. ಮೋನಪ್ಪ ಹಳಿಗೇರ. ಬಸವರಾಜ ಗೊಂದೆನೂರ. ನಾಗರಾಜ ಪ್ಯಾಪ್ಲಿ. ಚಂದಪ್ಪ ರಾಮಸಮುದ್ರ. ಬಸವರಾಜ ಹತ್ತಿಕುಣಿ. ಭೀಮರಾಯ ರಾಮಸಮುದ್ರ. ಸಿದ್ದಪ್ಪ ಕ್ಯಾಸಪನಳ್ಳಿ. ಲಕ್ಷ್ಮಣ ಜೀನಕೇರಿ. ಸಾಬು ನಿಲಹಳ್ಳಿ. ಪೋಲಪ್ಪ ನಿಲಹಳ್ಳಿ. ಈಶಪ್ಪ ಹೆಡಗಿಮದ್ರಿ. ರವಿ ಜಮಾದಾರ. ಕಾಶಿನಾಥ ನಾನೆಕ್. ಮಲ್ಲೇಶ ನಾಯಕ. ಮೋನಪ್ಪ ಯಾದಗಿರಿ. ಶಿವರಾಜ ಹವಲ್ದಾರ. ಬಂದಪ್ಪ ನಾಯಕ. ರವಿ ಹೊಸ್ಸಳ್ಳಿ. ರಮೇಶ ಯಾದಗಿರಿ‌. ಶ್ರೀನಿವಾಸ ಯಕ್ಷಂತಿ. ದೊಡ್ಡಪ್ಪ ನಾಯಕ. ರವಿಕುಮಾರ. ಅಂಬಣ್ಣ ಗೌಡಗೇರ. ಮಂಜುನಾಥ ಬಳಿಚಕ್ರ. ವಾಲ್ಮೀಕಿ ನಾಯಕ ಸಮಾಜದ ಪದಾಧಿಕಾರಿಗಳು ಇದ್ದರೂ.

    apvc-iconPost Views: 780
  • ಸಮರ್ಪಕ ರಸಗೊಬ್ಬರ ಪೂರೈಕೆ ಮಾಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

    ಸಮರ್ಪಕ ರಸಗೊಬ್ಬರ ಪೂರೈಕೆ ಮಾಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಸಮರ್ಪಕ ರಸಗೊಬ್ಬರ ಪೂರೈಕೆ ಮಾಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಯಾದಗಿರಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ಇದೇ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ರಾಜ್ಯದಲ್ಲಿ ಕಳೆದ ೨ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ರಾಜ್ಯದ ರೈತರ ಸಮಸ್ಯೆಗೆ ಮತ್ತು ಮಳೆ ಹಾನಿ ಹಾಗೂ ನೆರೆ ಹಾವಳಿಯಿಂದ ಹಾಗೂ ಮಳೆ ಕೊರತೆಯಿಂದ ಭಾಧೀತವಾದ ರೈತರ ಮತ್ತು ನೊಂದ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಳೆದ ೨ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಲಂಚಗುಳಿತನ, ದುರಾಡಳಿತ ಮತ್ತು ವೈಫಲ್ಯತೆಯಿಂದ ರಾಜ್ಯದ ಜನತೆ ಆಕ್ರೋಶದಿಂದ ಬೇಸತ್ತು ಬಸವಳಿದಿದ್ದಾರೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರುನಲ್ಲಿ ಉತ್ತಮ ಮಳೆಯಾಗಿದ್ದು, ರಾಜ್ಯದ ರೈತರು ತಮ್ಮ ಬಹುತೇಕ ಕೃಷಿ ವಿಸ್ತೀರ್ಣದಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಿ ಬಿತ್ತನೆಯಲ್ಲಿ ತೊಡಗಿದ್ದಾರೆ ಹಾಗೂ ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಹಾಗೂ ಕೆರೆ ಕಟ್ಟೆಗಳು ಭರ್ತಿಗೊಂಡಿದ್ದು, ನೀರಾವರಿ ಅಚ್ಚುಕಟ್ಟಿನಲ್ಲಿ ರೈತರು ಸಾಗುವಳಿ ಪ್ರಾರಂಭಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ರೈತರಿಗೆ ಅಗತ್ಯವಿರುವ ರಸ ಗೊಬ್ಬರವನ್ನು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸದರು.

    ಮಳೆ ಮತ್ತು ನೆರೆ ಹಾವಳಿಯಿಂದ ಫಸಲು ನಷ್ಟಕ್ಕೆ ಮತ್ತು ಮಳೆ ಅಭಾವದಿಂದ ಹಾಳಾದ ಬೆಳೆ ನಷ್ಟಕ್ಕೆ ಸಂಬAಧಿಸಿದ ಫಸಲು ವಿಮಾ ಕಂಪನಿಗಳಿAದ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ಎಲ್ಲಾ ವೈಫಲ್ಯಗಳಿಂದ ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರ ಆಡಳಿತ ನಡೆಸಲು ನೈತಿಕವಾಗಿ ಅಧಿಕಾರ ಕಳೆದುಕೊಂಡಿದೆ. ಗೌರವಾನ್ವಿತ ರಾಜ್ಯಪಾಲರು, ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನವಿತ್ತು ಎಚ್ಚರಿಕೆ ನೀಡಿ, ರೈತರ ಸಮಸ್ಯೆ ಹಾಗೂ ನೆರೆ ಹಾವಳಿಯಿಂದ ನೊಂದ ಸಂತ್ರಸ್ತರಿಗೆ ಹಾಗೂ ಮಳೆ ಅಭಾವದಿಂದ ಫಸಲನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

    ಒಂದು ವೇಳೆ ರಾಜ್ಯ ಸರ್ಕಾರ ಸಂವಿಧಾನ ರೀತಿ ಕಾರ್ಯನಿರ್ವಹಿಸದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

    ಈ ಸಂದರ್ಭದಲ್ಲಿ ಮುಖಂಡರಾದ ಚನ್ನಪ್ಪಗೌಡ ಮೊಸಂಬಿ, ನವಾಜರೆಡ್ಡಿ ಚಪೇಟ್ಲಾ, ರಾಮಣ್ಣ ಕೋಟಗೇರಾ, ಬಸವರಾಜಪ್ಪಗೌಡ ಗೊಂದಡಗಿ, ಬಸವರಾಜ ಕಣೇಕಲ್, ಈಶಪ್ಪ ರಾಖಾ, ರಾಜೇಶ ಉಡುಪಿ ಸೈದಾಪೂರ, ದೇವಿಂದ್ರಪ್ಪ ಸುರಪೂರ, ಶಿವು ಮೊಟಗಿ ಶಹಾಪೂರ, ಶಿವಣ್ಣ ಸುರಪೂರ, ವಿಶ್ವನಾಥ ಶಿರವಾಳ, ಬಂದಪ್ಪ ಅರಳಿ, ನರಸಪ್ಪ ಕವಡೆ, ಶರಣು ಆವಂಟಿ, ಪ್ರಕಾಶ ನೀರಟ್ಟಿ, ಬಸ್ಸಣ್ಣ ದೇವರಹಳ್ಳಿ, ರವಿ ಪಾಟೀಲ್ ಗುರುಮಿಠಕಲ್, ಮಲ್ಲಣ್ಣಗೌಡ ಕೌಳೂರು, ಬಸ್ಸುಗೌಡ ಚಾಮನಹಳ್ಳಿ, ಬಸರಡ್ಡಿ ಹೆಗ್ಗಣಗೇರಾ ಚಂದ್ರಾಯಗೌಡ ಹತ್ತಿಕುಣಿ, ಶರಣಗೌಡ ಚಾಮನಹಳ್ಳಿ, ರವಿ ಪಾಟೀಲ್ ಹತ್ತಿಕುಣಿ, ಮಲ್ಲಿಕಾರ್ಜುನ ಅರುಣಿ, ಈಶ್ವರ ನಾಯಕ,ಜಯೇಂದ್ರ ಚವ್ಹಾಣ, ಪರಮರೆಡ್ಡಿ ಕಂದಕೂರ, ದೊಡ್ಡಣ್ಣಗೌಡ ಅರಕೇರಾ (ಬಿ), ಮಾರ್ಥಂಡ ಮಾನೇಗಾರ, ನಿಂಗಾರೆಡ್ಡಿ ಯಡ್ಡಳ್ಳಿ, ತಾಯಪ್ಪ ಬದ್ದೇಪಲ್ಲಿ, ಅನಂತಪ್ಪ ಮುಕಡಿ, ಶರಣು ಗಾಡಿ ಮೋಟ್ನಳ್ಳಿ, ಲಕ್ಷ್ಮಣನಾಯಕ ಕುಡ್ಲೂರ, ಅಲ್ಲಾವುದ್ದೀನ್ ನೀಲಹಳ್ಳಿ ಸೇರಿದಂತೆ ಇತರರಿದ್ದರು.
    ರಾಜ್ಯ ಸರ್ಕಾರ ಕೇಳಿದ್ದಕ್ಕಿಂತ ಹೆಚ್ಚಿಗೆ ಕೊಟ್ಟಾರಲ್ರಿ

    ಕಾಳಸಂತೆಕೋರರು ಸಾಕಷ್ಟು ಪ್ರಮಾಣದಲ್ಲಿ ಶೇಖರಣೆ ಮಾಡಿ ವಿತರಿಸದೇ ಇರುವುದರಿಂದ ರೈತರು ಪರದಾಡುತ್ತಿದ್ದಾರೆ. ಈ ರಸ ಗೊಬ್ಬರಗಳು ಕಾಳಸಂತೆಯಲ್ಲಿ ವರ್ತಕರು ಮನಸೋ ಇಚ್ಚಾ ಬಂದ ಧರದಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ರಾಜ್ಯಕ್ಕೆ ಕೊರತೆ ಇರುವ ರಸ ಗೊಬ್ಬರಗಳನ್ನು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಸಂಪರ್ಕಿಸಿ ಪಡೆಯಲು ವಿಫಲವಾಗಿದೆ. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ೬.೩೧೦೦೦ ಮೆಟ್ರಿಕ ಟನ್ ರಸ ಗೊಬ್ಬರ ಬೇಡಿಕೆ ಇಟ್ಟಿರುತ್ತಾರೆ. ಆದರೂ ಕೇಂದ್ರ ಸರ್ಕಾರ ನಿರೀಕ್ಷೆಗೆ ಮೀರಿ ೮.೭೩೦೦೦ ಮೆಟ್ರಿಕ ಟನ್ ರಸಗೊಬ್ಬರ ಪೂರೈಸಿದ್ದಾರೆ. ಈ ಪೈಕಿ ಕೇವಲ ೫.೨೭ ಲಕ್ಷ ಟನ್ ರಸ ಗೊಬ್ಬರ ನೀಡಿರುವುದಾಗಿ ರಾಜ್ಯ ಸರ್ಕಾರ ಆಪಾದನೆ ಮಾಡುತ್ತಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದತ್ತ ಕೈಮಾಡಿ ತೋರಿಸಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.


    ಸುಭಾಶ್ಚಂದ್ರ ಕಟಕಟಿ ಜೆಡಿಎಸ್ ಜಿಲ್ಲಾಧ್ಯಕ್ಷರು, ಯಾದಗಿರಿ
    apvc-iconPost Views: 178
  • ರಸಗೊಬ್ಬರ ಇದ್ದರು ಅಂಗಡಿ ಮಾಲೀಕರು ನೀಡುತ್ತಿಲ್ಲ-ರವಿ ನಾಯಕ

    ರಸಗೊಬ್ಬರ ಇದ್ದರು ಅಂಗಡಿ ಮಾಲೀಕರು ನೀಡುತ್ತಿಲ್ಲ-ರವಿ ನಾಯಕ

    ಸುರಪುರ:ರಸಗೊಬ್ಬರ ಅಂಗಡಿಗಳಲ್ಲಿ ಗೊಬ್ಬರವಿದ್ದರು ರೈತರಿಗೆ ನೀಡುತ್ತಿಲ್ಲ.ರಸಗೊಬ್ಬರ ಅಂಗಡಿಗಳ ಮಾಲೀಕರು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.ಆದ್ದರಿಂದ ಇಲಾಖೆಯಿಂದ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಆಗ್ರಹಿಸಿದರು.

    ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ವತಿಯಿಂದ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಈಗಾಗಲೇ ರೈತರು ರಸಗೊಬ್ಬರ ಸಿಗದೆ ತುಂಬಾ ತೊಂದರೆ ಪಡುತ್ತಿದ್ದು ಕೃಷಿ ಇಲಾಖೆ ರೈತರ ಸಮಸ್ಯೆಗೆ ಸ್ಪಂದಿಸುವAತೆ ಆಗ್ರಹಿಸಿದರು.

    ಮನವಿ ಸ್ವೀಕರಿಸಿದ ಸಹಾಯಕ ಕೃಷಿ ನಿರ್ದೇಶಕ ಮಾತನಾಡಿ,ರೈತರು ರಸಗೊಬ್ಬರದ ಬದಲಾಗಿ ನ್ಯಾನೋ ರಸಗೊಬ್ಬರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.ಅಲ್ಲದೆ,ತಾವು ಸಲ್ಲಿಸಿರುವ ಬೇಡಿಕೆಯಂತೆ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ಏನಾದರು ಅಕ್ರಮ ನಡೆದಿದ್ದರೆ ಅಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಸಂಘದ ತಾಲ್ಲೂಕ ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟೆ, ಶಿವರಾಜ ಮೊಕಾಸಿ ಸತ್ಯಂಪೇಟೆ,ವಾಸುದೇವ ನಾಯಕ,ಮೌನೇಶ ದಳಪತಿ,ರಾಘವೇಂದ್ರ ಸಗರ,ಬಸವರಾಜ ಪಾಟೀಲ್,ರವಿ ಹುಲಕಲ್,ಮಲ್ಲು ನಾಯಕ,ರವಿಕಿರಣ್ ಹೊಸ ಸಿದ್ದಾಪುರ,ದ್ಯಾವಪ್ಪ ದೇವಿಕೇರಾ,ನಿಂಗಣ್ಣ ದುಸ್ತಾರಿ,ಭೀಮಣ್ಣ ಗಡ್ಡಿಮನಿ, ದೇವು ನಾಯಕ,ಕೃಷ್ಣಾ ನಾಯಕ,ಶಿವಮೂರ್ತಿ ದೀವಳಗುಡ್ಡ,ಬಸಪ್ಪ ಹೆಳವರ,ಮರೆಪ್ಪ ಕೋಮಾರಿ,ಹುಲಿರಾಜ್ ಹುಲಕಲ್,ರಾಘವೇಂದ್ರ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.

    apvc-iconPost Views: 29
  • ಕಲೆ ಸಂಸ್ಕೃತಿ ಬೆಳೆಸೋಣ: ಮಹಾವೀರ ಲಿಂಗೇರಿ

    ಕಲೆ ಸಂಸ್ಕೃತಿ ಬೆಳೆಸೋಣ: ಮಹಾವೀರ ಲಿಂಗೇರಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಸಂಸ್ಕೃತಿಯ ನಾಡೆಂದು ಹೆಸರು ವಾಸಿಯಾಗಿರುವ ಭಾರತ ಸಂಸ್ಕೃತಿ ನೆಲದಲ್ಲಿ ಜನಿಸಿದ ನಾವೆಲ್ಲರೂ ನಾಡಿನ ಕಲೆ ಸಂಸ್ಕೃತಿ ಸಾಹಿತ್ಯವನ್ನು ಬೆಳೆಸೋಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ ಹೇಳಿದರು.

     ತಾಲೂಕಿನ ಯರಗೋಳ ಗ್ರಾಮದಲ್ಲಿ ನಡೆದ ಸಮನ್ವಯ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿರುವ ಜಾನಪದ ಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ರೈತರ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಪ್ರದರ್ಶಿಸಿ ಪ್ರದರ್ಶಿಸುವ ಒಂದು ಸುವರ್ಣ ವೇದಿಕೆ ಸಂಘ-ಸಂಸ್ಥೆಗಳು ಮಾಡಲ್ಪಟ್ಟಿವೆ ಹಾಗಾಗಿ ಪ್ರತಿಯೊಬ್ಬರೂ ನಾಡಿನ ಕಲೆ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು.
    ಸಮನ್ವಯ ಸೇವಾ ಸಂಸ್ಥೆ ಹಲವು ವರ್ಷದಿಂದ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದೆ, ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯವಾಗಿದೆ, ಶಿಕ್ಷಣದ ಜೊತೆಗೆ ಕಲೆ ಸಂಸ್ಕೃತಿ ಬೆಳೆಸಲು ಇಂತಹ ಸಂಘ ಸಂಸ್ಥೆಗಳು ಜೀವಂತವಾಗಿವೆ, ಇಂತಹ ಸಂಸ್ಥೆಗಳಿಗೆ ಸರಕಾರದಿಂದ ಸಹಾಯ ಧನ ಪಡೆದುಕೊಂಡು ದೊಡ್ಡ ಮಟ್ಟದ ಸೇವೆಯನ್ನು ಮಾಡಲಿ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಬಾಬು ಚೌಹಾನ್ ಪ್ರಾಸ್ತವಿಕ ನುಡಿಗಳು.

    ಈ ಸಂದರ್ಭದಲ್ಲಿ ರೈತ ಸೇನೆಯ ತಾಲೂಕು ಉಪಾಧ್ಯಕ್ಷ ತಾಯಪ್ಪ ನಾಯಕ, ಸಂಸ್ಥೆಯ ಅಧ್ಯಕ್ಷ ದೇವಿಂದ್ರ ಧೋತ್ರ, ಭೀಮಾ ಜ್ಯೋತಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಭೀಮಶಂಕರ ಎಂ.ಯರಗೋಳ, ಮುಖ್ಯ ಗುರು ಲಕ್ಷ್ಮಿಕಾಂತ್, ಚನಬಸಪ್ಪ, ನಿವೃತ್ತ ಮುಖ್ಯಗುರು ಚಂದ್ರಪ್ಪ ಗುಂಜಾನೂರ್, ಮುಖ್ಯ ಗುರು ಶ್ರೀಮತಿ ಕಲ್ಪನಾ, ಎಸ್‌.ಡಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದುರ್ಗಪ್ಪ ಪೂಜಾರಿ, ಸಾಬಣ್ಣ ಜೋಗಿ ಗ್ರಾ.ಪಂ.ಕಾರ್ಯದರ್ಶಿ ರವಿ ಮುಂತಾದವರಿದ್ದರು.

    ಈ ವೇಳೆ ವೇಳೆಯಲ್ಲಿ ಗೌತಮ್ ಬುದ್ಧ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಭರತನಾಟ್ಯ, ಜಾನಪದ ಗೀತೆ, ಜಾನಪದ ಸಾಮೂಹಿಕ ನೃತ್ಯ, ಗೀತ ಗಾಯನ ಮುಂತಾದವು ಕಲೆಗಳನ್ನು ಪ್ರದರ್ಶಿಸಿದರು ನೋಡುಗರ ಗಮನ ಸೆಳೆದವು.
    apvc-iconPost Views: 18
  • ಮೂಟ್ ಕೋರ್ಟ್ ಹಾಲ್ ಉದ್ಘಾಟನೆ

    ಮೂಟ್ ಕೋರ್ಟ್ ಹಾಲ್ ಉದ್ಘಾಟನೆ

    ಸತ್ಯಕಾಮ ವಾರ್ತೆ ಬೆಂಗಳೂರು:
    ಬೆಂಗಳೂರು ನಗರದ ಮೈಸೂರು ರಸ್ತೆಯ ಕೆಂಗೇರಿ ಚೆಕ್ ಪೋಸ್ಟ್ ಬಳಿಯಲ್ಲಿರುವ ಐಸಿಎಫ್ಎಐ ಲಾ ಸ್ಕೂಲ್ ನ ಕೆಂಗೇರಿ ಕ್ಯಾಂಪಸ್‌ನಲ್ಲಿರುವ ನವೀಕೃತ ಮೂಟ್ ಕೋರ್ಟ್ ಹಾಲ್‌ನ್ನು ನಿವೃತ್ತ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಅಶೋಕ್ ಜಿ. ನಿಜಣ್ಣರವರು ಹಾಗೂ ಮತ್ತಿತರ ಗಣ್ಯರು ಉದ್ಘಾಟಿಸಿದರು.[web_stories title=”true” excerpt=”false” author=”false” date=”false” archive_link=”true” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”2″ order=”ASC” orderby=”post_title” view=”circles” /]

    ನಂತರ ಮಾತನಾಡಿದ ಇವರು ಮೂಟ್ ಕೋರ್ಟ್ ಹಾಲ್ ಇದೊಂದು ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಅಧ್ಯಯನ ಹಾಗೂ ಪ್ರಾಯೋಗಿಕವಾಗಿ ಕಾನೂನು ತರಬೇತಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ ಎಂದರು.

    ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಿರ್ದೇಶಕರಾದ ಶ್ರೀ ಸಿ.ಎಸ್. ಪಾಟೀಲ, ಕರ್ನಾಟಕ ಕಾನೂನು ಮತ್ತು ಸಂಸತ್ತೀಯ ಸುಧಾರಣಾ ಸಂಸ್ಥೆ ಹಾಗೂ ಮಾಜಿ ಕುಲಪತಿಗಳು, ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ, ಗೌರವಾನ್ವಿತ ಕುಲಾಧಿಪತಿ, ಐಸಿಎಫ್ಎಐ ಕಾನೂನು ವಿಶ್ವವಿದ್ಯಾಲಯ, ಮಿಜೋರಂ ಮತ್ತು ಮಾಜಿ ಕುಲಪತಿ, ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಶ್ರೀ ವೈ.ಆರ್. ಹರಗೋಪಾಲ್ ರೆಡ್ಡಿಯವರು, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರ್ ಮತ್ತು ಸುಪ್ರೀಂ ಕೋರ್ಟ್ ನ ದಾಖಲಾತಿ ನ್ಯಾಯವಾದಿಯಾದ ಶ್ರೀ ಗೌತಮ್ ದಾಸ್ ಮತ್ತಿತರು ಉಪಸ್ಥಿತರಿದ್ದರು.

    ಇನ್ನು ವಿಶೇಷ ಆಹ್ವಾನಿತರಾಗಿ ಪ್ರೊ. ಡಾ. ಸಂದೀಪ್ ದೇಸಾಯಿ ರವರು ಡೀನ್ ಹಾಗೂ ಅಮಿಟಿ ಕಾನೂನು ಕಾಲೇಜು, ಹಾಗೂ ಶ್ರೀ ಇ. ಸುಹೈಲ್ ಅಹ್ಮದ್, ಹಿರಿಯ ಸಹಭಾಗಿ ಮತ್ತು ಟ್ರೈಲ್ ಬೇಸ್, ಬೆಂಗಳೂರು ಇದ್ದರು. ಅತಿಥಿಗಳನ್ನು ಕುಲಪತಿಗಳಾದ ಪ್ರೊ. ಡಾ. ಮುದ್ದು ವಿನಯ್ ರವರು ಮತ್ತು ವಿಭಾಗದ ಮುಖ್ಯಸ್ಥೆ ಡಾ. ರಾಜಶ್ರೀ ಪಾಟೀಲ, ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು.

    ಈ ಕಾರ್ಯಕ್ರಮದಲ್ಲಿ ಗಣ್ಯರಿಂದ ಹಲವು ಬಗೆಯ ಪ್ರೇರಣಾದಾಯಕ ಭಾಷಣಗಳಲ್ಲಿ ಕಾನೂನು ಶಿಕ್ಷಣದಲ್ಲಿ ಮೂಟ್ ಕೋರ್ಟ್‌ಗಳ ಪಾತ್ರ ಮತ್ತು ಸಿದ್ಧಾಂತದ ಅನುಭವವನ್ನು ಏಕೀಕರಿಸುವ ಅವಶ್ಯಕತೆಯನ್ನು ಹೈಲೈಟ್ ಮಾಡಲಾಯಿತು. ಹಾಗೇಯೆ ಈ ಕಾರ್ಯಕ್ರಮವು ಉತ್ಸಾಹ ಭರಿತ ವಿದ್ಯಾರ್ಥಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಸಕ್ರಿಯ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನಡೆಯಿತು.
    apvc-iconPost Views: 94
  • ಯಾರೋದೋ ಮಾತು ಕೇಳಿ ಕಾಲಹರಣ ಮಾಡಿದರೇ ತಕ್ಕ ಪಾಠ: ನಾದ್ ಇಟಗಿ ಎಚ್ಚರಿಕೆ.

    ಯಾರೋದೋ ಮಾತು ಕೇಳಿ ಕಾಲಹರಣ ಮಾಡಿದರೇ ತಕ್ಕ ಪಾಠ: ನಾದ್ ಇಟಗಿ ಎಚ್ಚರಿಕೆ.

    ಸತ್ಯಕಾಮ ವಾರ್ತೆ ಯಾದಗಿರಿ: 

    ಒಳಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಮತ್ತು ಕೂಡಲೇ ಜಾರಿಗೊಳಿಸುವಂತೆಯೇ ಆಗ್ರಹಿಸಿ ಮಾದಿಗ ಸಮಾಜದ ಜಿಲ್ಲೆಯ ಸಾವಿರಾರು ಜನರು ಶುಕ್ರವಾರ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಅಲೆಮಾರಿ,ಅರೆಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ದೇವೇಂದ್ರನಾಥ ನಾದ್ ಮತ್ತು ನಗರಸಭೆ ಸದಸ್ಯ ಹಣಮಂತ ಇಟಗಿ ನೇತೃತ್ವದಲ್ಲಿ ಬೆಳಗ್ಗೆ ತಹಸಿಲ್ ಕಚೇರಿ ಬಳಿ ಜಮಾಯಿಸಿದ ಮಾದಿಗ ಸಮಾಜದ ಸಾವಿರಾರು ಜನರು ಜೈ ಮಾದಿಗ, ಜೈ ಜೈ ಮಾದಿಗ ಎಂಬ ಘೋಷಣೆಗಳನ್ನು ಕೂಗಿ ಒಳಮೀಸಲಾತಿಗಾಗಿ ಆಗ್ರಹಿಸಿದರು. ಅಲ್ಲಿಂದ ಹೊರಟ ಪ್ರತಿಭಟನಾ ಪಾದಯಾತ್ರೆ ಶಾಸ್ತ್ರಿ ಚೌಕ ಮೂಲಕ ನೇತಾಜಿ ಸರ್ಕಲ್ ಬಳಿ ಬಂದು ಜಮಾಗೊಂಡಿತು.

    ಅಲ್ಲಿ‌ ಸೇರಿದ್ದ ಅಪಾರ ಜನಸ್ತೊಮವನ್ನು ಉದ್ದೇಶಿಸಿ ಮಾತನಾಡಿದ ನಾದ್, ಇಟಗಿ ಅವರು, ಕಳೆದ ಮೂವತ್ತು ವರ್ಷಗಳಿಂದ ನಡೆಸಿದ ವಿವಿಧ ಹಂತದ ಹೋರಾಟಗಳ ಫಲವಾಗಿ ಸುಪ್ರೀಂಕೋರ್ಟ್ ಕಳೆದ ಹಲವಾರು ತಿಂಗಳ ಹಿಂದೆಯೇ ಒಳಮೀಸಲಾತಿ ಜಾರಿ ಮಾಡುವಂತೆಯೇ ಆದೇಶ ನೀಡಿದೆ. ಆದರೇ ಸಿಎಂ ಸಿದ್ದರಾಮಯ್ಯ ಅವರು ಕೆಲವರ ಒತ್ತಡಕ್ಕೆ ಮಣಿದು ಇಲ್ಲದೊಂದು ನೆಪ ಹೇಳಿ ಮುಂದಕ್ಕೆ ಹಾಕುವ ಮೂಲಕ ಮಾದಿಗ ಸಮಾಜಕ್ಕೆ ಘೋರ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿದರು.

    ದೇಶದ ಬೇರೆ,ಬೇರೆ ರಾಜ್ಯಗಳಲ್ಲಿ ಈಗಾಗಲೇ ಒಳಮೀಸಲಾತಿ ಜಾರಿ ಮಾಡಲಾಗಿದೆ. ಅಲ್ಲಿ ಇರದ ತೊಂದರೆ ನಮ್ಮ ರಾಜ್ಯದಲ್ಲಿ ಅಂತಾದ್ದೇನು ತೊಂದರೆ ಇದೆ ಎಂದು ಅವರು ಪ್ರಶ್ನಿಸಿದರು.

    ಸಂವಿಧಾನಬದ್ದ ಹಕ್ಕು ಪಡೆಯಲು ಮೂರು ದಶಕಗಳ ಕಾಲ ಹೋರಾಟವೇ ಆಗಿದೆ. ಎಷ್ಟೋ ಜನರು ಇದಕ್ಕಾಗಿಯೇ ಜೀವನ‌ ಮುಡುಪಿಟ್ಟು ಇಹಲೋಕ ತ್ಯಜಿಸಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಅರ್ಥ ಆಗಬೇಕು. ದೂರದಲ್ಲಿ ಕುಳಿತಿರುವ ಯಾರೋದೋ ಮಾತು ಕೇಳಿ ಕಾಲಹರಣ ಮಾಡುವ ಮೂಲಕ ಈ ದೊಡ್ಡ ಸಮಾಜಕ್ಕೆ ಮಾಡುತ್ತಿರುವ ಅನ್ಯಾಯಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ದೇವೇಂದ್ರನಾಥ ಮತ್ತು ಹಣಮಂತ ಅವರು ಎಚ್ಚರಿಸಿದರು.

    ಕಾರಣ, ಇನ್ನೂ ನಮ್ಮ ಸಹನೆಕಟ್ಟೆ ಒಡೆಯುವ ಮುಂಚೆಯೇ ಕೂಡಲೇ ಒಳಮೀಸಲಾತಿ ಜಾರಿ ಮಾಡಿ ನಮ್ಮ ಹಕ್ಕು ನಮಗೆ ಕೊಡಬೇಕೆಂದು ಒತ್ತಾಯಿಸಿದರು.

    ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ, ವಡಗೇರಾ, ಕೊಡೆಕಲ್, ಕೆಂಭಾವಿ, ಗುರುಮಠಕಲ್, ಹುಣಸಗಿ ತಾಲೂಕುಗಳಿಂದ ಅಪಾರ ಸಂಖ್ಯೆಯಲ್ಲಿ ಸಮಾಜದ ಜ‌ನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸ್ಥಳಕ್ಕೆ ಆಗಮಿಸಿದ ಡಿಸಿ ಹರ್ಷಲ್ ಭೋಯರ್ ಅವರಿಗೆ ಮುಖಂಡರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಡಿಸಿ ಕೂಡಲೇ ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದರು.

    ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖರು

    ದೇವಿಂದ್ರನಾಥ ನಾದ, ಚೆನ್ನಯ್ಯ ಮಾಳಿಕೇರಿ ಹಣಮಂತ ಇಟಗಿ, ಮಲ್ಲಣ್ಣ ದಾಸನ್ನಕೇರಿ, ಭೀಮಾಶಂಕರ್ ಬಿಲ್ಲವ. ವಾಸುದೇವ ಕಟ್ಟಿಮನಿ, ಚಂದ್ರಶೇಖರ ಕಡೆಸೂರು, ಬಸವರಾಜ್ ಹಗರಟಗಿ, ದಾನಪ್ಪ ಕಟ್ಟಿಮನಿ, ತಾಯಪ್ಪ ಬಡ್ಡೇಪಲ್ಲಿ, ಸಿದ್ದಣ್ಣ ಮೇಲಿನಮನಿ, ಮಲ್ಲಿಕಾರ್ಜುನ ಜಲ್ಲಪ್ಪನೋರ್, ನಿಂಗಪ್ಪ ವಡ್ಡನಲ್ಲಿ, ಆಂಜೆನೇಯ ಬಬಲಾದ, ಭೀಮಾಶಂಪ್ಪ ಗುಡಸೇ,, ಬಸವರಾಜ್ ಮೇತ್ರಿ, ಭೀಮರಾಯ ಬಂದಲ್ಲಿ, ಯಲ್ಲಪ್ಪ ಮಾಳಕೇರಿ, ಮಂಜುನಾಥ್ ದಾಸನ ಕೇರಿ ಸೇರಿದಂತೆಯೇ ಇತರರು ಭಾಗವಹಿಸಿದ್ದರು.

     

    apvc-iconPost Views: 27
  • ಇದು ಕಾಲೇಜಾ? ಅಥವಾ ಕಾಡುಗಳ ತಾಣಾನಾ?

    ಇದು ಕಾಲೇಜಾ? ಅಥವಾ ಕಾಡುಗಳ ತಾಣಾನಾ?

    ವರದಿ; ಕುದಾನ್ ಸಾಬ್

    ಸತ್ಯಕಾಮ ವಾರ್ತೆ ಯಾದಗಿರಿ

    ನಗರದ ಹೊಸ ಪದವಿ ಕಾಲೇಜಿನ ವಾಸ್ತವ ಪರಿಸ್ಥಿತಿಯನ್ನು ನೋಡಿದರೆ, ಶಿಕ್ಷಣ ಸಂಸ್ಥೆ ಎಂದು ಕರೆಯುವುದು ಲಜ್ಜೆಯ ವಿಷಯವಾಯ್ತು. ಈ ಕಾಲೇಜು ನಿಜಕ್ಕೂ ಓದುವ ಸ್ಥಳವೇ? ಅಥವಾ ಕಾಡುಮೂಲಗಳ ತಾಣವೋ? ಅನ್ನಿಸುತ್ತದೆ.

    ಹೌದು ಏಕೆಂದರೆ ಹೊಸ ಪದವಿ ಕಾಲೇಜಿನ  ಕೌಂಪೌAಡ್ ಸುತ್ತ ಬೆಳೆದಿರುವ ಜಾಲಿಗಿಡ, ತರಗತಿಯೊಳಗೆ ನುಗ್ಗುವ ಹಾವು-ಚೇಳುಗಳು, ಓಡುವ ಬದಲು ಓಡಾಟ ನಡೆಯುವ ತರಗತಿಗಳು — ಇದು ಪ್ರತಿದಿನದ ದೃಶ್ಯ. ವಿದ್ಯಾರ್ಥಿಗಳು ಪುಸ್ತಕದ ಕಡೆಗಿಂತ ಜಿಗಿತದ ಕಡೆ ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

    ಅದರಲ್ಲೂ ಕಾಲೇಜಿನ ಕಟ್ಟಡದ ಗೋಡೆಗಳ ಮೇಲೆ ಬೆಳೆದಿರುವ ಬಳ್ಳಿಗಳು ಆವರಿಸಿರುವುದರಿಂದ ಕೆಲವು ಕಿಟಕಿಗಳು ಮುಚ್ಚಲಾಗದ ಸ್ಥಿತಿಯಲ್ಲಿವೆ, ಇಂತಹ ಸ್ಥಿತಿ ಒಂದೆರಡು ದಿನಗಳಲ್ಲಿ ಉಂಟಾಗಿಲ್ಲ. ವರ್ಷಗಳಿಂದ ನಿರ್ವಹಣೆಗೆ ಸಂಬAಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಈ ಪರಿಸ್ಥಿತಿಗೆ ಕಾರಣವಾಗಿದೆ.

    ಅಲ್ಲದೇ ವಿದ್ಯಾರ್ಥಿಗಳು ಈ ಬಗ್ಗೆ ಪ್ರಾಂಶುಪಾಲರ ಗಮನಕ್ಕೆ ತಂದರೇ ನೀವೇ ಜಾಲಿಗಿಡ ತೆಗೆದುಹಾಕಿ! ಸ್ವಚತೆ ಮಾಡಿ ಎಂದು ಹೇಳುತ್ತಾರಂತೆ, ಇದು ಪ್ರಾಶುಂಪಾಲರಿAದ ಬರಬಹುದಾದ ಮಾತುಗಳಾ? ಇದರಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣದಿಂದ ನಂಬಿಕೆ ಹೋಗುವುದಕ್ಕಿಂತ ದುರಂತ ಇನ್ನೊಂದು ಇಲ್ಲ.

    ವಿದ್ಯಾರ್ಥಿಗಳ ಓದು ಕೇವಲ ಪಾಠಪುಸ್ತಕಗಳ ಸಾಲುಗಳಲ್ಲಿ ಸೀಮಿತವಲ್ಲ. ಅವರಿಗೆ ಬೇಕಾಗಿರುವ ಭದ್ರತೆ, ಸ್ವಚ್ಛತೆ ಮತ್ತು ಮಾನವೀಯ ಮೌಲ್ಯಗಳಿಂದ ತುಂಬಿದ  ವಾತಾವರಣ. ಆದರೆ ಇದನ್ನೆಲ್ಲಾ ಮರೆತು ಬಿಟ್ಟು ಶಿಕ್ಷಣ ಸಂಸ್ಥೆಗಳ ನಿರ್ವಹಣೆಯನ್ನು ನಿರ್ಲಕ್ಷಿಸಿದಾಗ, ವಿದ್ಯಾರ್ಥಿಯ ಭವಿಷ್ಯವೇ ಹದಗೆಡುವ ಸ್ಥಿತಿಗೆ ತಲುಪುತ್ತದೆ. ಶಾಲೆ ಅಥವಾ ಕಾಲೇಜು ಕೇವಲ ಕಟ್ಟಡವಲ್ಲ – ಅದು ನೂರು ಕನಸುಗಳ ನೆಲೆ. ಈ ನೆಲೆ ಶುದ್ಧವಾಗಿರಬೇಕು, ಸುರಕ್ಷಿತವಾಗಿರಬೇಕು. ಏಕೆಂದರೆ ನಿರ್ವಹಣೆ ನಿಲ್ಲಿಸಿದಾಗ, ಶಿಕ್ಷಣದ ಭವಿಷ್ಯವೂ ನಿಲ್ಲುತ್ತದೆ! ಎಂಬುದನ್ನು ಅರಿತು ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ವಾತಾವಾರಣ ಕಲ್ಪಿಸಲು ಆಡಳಿತ ವರ್ಗ ಅಥವಾ ಪ್ರಾಂಶುಪಾಲರು ಮುಂದಾಗತ್ತಾರೋ ಎಂಬುದನ್ನು ಕಾದು ನೋಡೋಣ.

     

    ಕಾಲೇಜಿನ  ಸುತ್ತಮುತ್ತ  ಜಂಗಲದAತಾಗಿ ಬೆಳೆದಿರುವ  ಜಾಲಿಗಿಡಗಳು ವಿದ್ಯಾರ್ಥಿಗಳ ಸುರಕ್ಷತೆಗೆ ಮಾತ್ರವಲ್ಲದೆ  ವಿದ್ಯಾಭ್ಯಾಸಕ್ಕೂ  ತೀವ್ರ  ಅಡ್ಡಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಲೇಜು ಆವರಣದ ಸುತ್ತಮುತ್ತಲನ್ನು ತಕ್ಷಣ ಸ್ವಚ್ಛಗೊಳಿಸಿ, ವಿದ್ಯಾಭ್ಯಾಸಕ್ಕೆ ಯೋಗ್ಯವಾದ ಶಾಂತ, ಸ್ವಚ್ಛ ಮತ್ತು ಭದ್ರ ವಾತಾವರಣವನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ.

    – ಹೆಸರೇಳಲಿಚ್ಛಿಸದ ವಿದ್ಯಾರ್ಥಿ

    apvc-iconPost Views: 42
  • ಕುರಕುಂದಾ ಗ್ರಾಮಕ್ಕೆ ಶಾಸಕರ ಭೇಟಿ: ಮೃತ ಮಕ್ಕಳಿಗೆ ಅಂತಿಮ ನಮನ, ಕುಟುಂಬಕ್ಕೆ ಸಾಂತ್ವನ

    ಕುರಕುಂದಾ ಗ್ರಾಮಕ್ಕೆ ಶಾಸಕರ ಭೇಟಿ: ಮೃತ ಮಕ್ಕಳಿಗೆ ಅಂತಿಮ ನಮನ, ಕುಟುಂಬಕ್ಕೆ ಸಾಂತ್ವನ

    [web_stories title=”true” excerpt=”false” author=”false” date=”false” archive_link=”true” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”5″ order=”DESC” orderby=”post_title” view=”circles” /] ಸತ್ಯಕಾಮ ವಾರ್ತೆ ಯಾದಗಿರಿ:

    ಬೆಂಗಳೂರಿನಲ್ಲಿ ಮೃತ ಪಟ್ಟ ಯಾದಗಿರಿ ಮತಕ್ಷೇತ್ರ ಕುರಕುಂದಾ ಗ್ರಾಮದ ಚಾಂದಪಾಶಾ ಎಂಬುವವರ ಮಕ್ಕಳ ಕಳಬರಹಕ್ಕೇ ಅಂತಿಮ‌ ನಮನ ಸಲ್ಲಿಸಿದ ಶಾಸಕ ಚನ್ನಾರಡ್ಡಿ ಪಾಟೀಲ್ ಅವರು, ಚಿಕ್ಕ ಮಕ್ಕಳ ಸಾವು ದುಖಃ ತಂದಿದೆ. ಹೆತ್ತವರ ಮುಂದೆ ಮಕ್ಕಳು ಸಾಯಿಬಾರದು, ಆ ದುಖಃಕ್ಕೆ ಕೊನೆಯೇ ಇಲ್ಲ, ಆದರೂ ಧೈರ್ಯದಿಂದ ಇದ್ದು ಜೀವನ ನಡೆಸಿರಿ ಎಂದು ಸಾಂತ್ವನ ಹೇಳಿದರು.

    ಗ್ರಾಮದ ಅವರ ಮನೆಗೆ ತೆರಳಿದ್ದ ಶಾಸಕರು ಮಕ್ಕಳನ್ನು ಕಳೆದಕೊಂಡ ಹೆತ್ತವರ ದುಖಃ ಕಂಡು ಮರುಗಿದರು. ನಾನು ಮಾಡುವ ಈ ವೈಯಕ್ತಿಕ ಸಹಾಯ ದೊಡ್ಡದಲ್ಲ, ಈ ಬಗ್ಗೆ ಸಿಎಂ ಗಮನಕ್ಕೆ ತಂದು ಹೆಚ್ಚಿನ‌ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದರು. 
     
    ಈ ವೇಳೆ ಕಾಸೀಮ ಮುತ್ತ್ಯಾ, ಡಾ. ರಾಜು ಬೆಳಗೇರಿ,ಕಾಶೀಮ್ ಗುಲಾಮಿ, ಮಕಧುಮ್, ಶರಣಬಸವ ಕುರಕುಂದಿ, ಮೆಹಬೂಬ್, ಶರಣ ಗೌಡ, ಬಸನಗೌಡ, ಅಂಬ್ರೆಷ್, ರಫಿ ಬೆಳಗೇರ, ಮೋಸಪ್ಪಾ, ಹಾಗೂ ಕುರಕುಂದಿ ಗ್ರಾಮಸ್ಥರು ಇದ್ದರು.
    apvc-iconPost Views: 220
  • ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

    ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

    ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

    ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಸುಕ್ಷೇತ್ರ ಗಬ್ಬೂರಿನ ಮಹಾಶೈವ ಧರ್ಮಪೀಠದ 2025ನೇ ಸಾಲಿನಲ್ಲಿ ಕೊಡ ಮಾಡುವ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆಯಾದ,ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಹಾಸನದ ಅವರ ನಿವಾಸದಲ್ಲಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

    ಅಹ್ವಾನ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾನು ಮುಸ್ತಾಕ್ ಅವರು ಗಬ್ಬೂರಿನ ಮಹಾಶೈವ ಧರ್ಮಪೀಠದ ಅಧ್ಯಕ್ಷರಿಗೂ ಸಮಿತಿಯ ಸರ್ವ ಸದಸ್ಯರಿಗೂ ಅಭಿಮಾನಿಗಳ ವಿಶ್ವಾಸಕ್ಕೆ ಕೃತಜ್ಞತೆ ತಿಳಿಸಿ,ಕಲ್ಯಾಣ ಕರ್ನಾಟಕದ ಅನೇಕ ಶರಣರ ವಿಚಾರಧಾರೆಗಳನ್ನು ಅರಿತು,ನಿಮ್ಮೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ಅಭಿನಂದನೆಗಳು ಸಲ್ಲಿಸಿ ಮಾತನಾಡಿದರು.

    ಬಾನು ಮುಸ್ತಾಕ್ ಅವರು ಹೋರಾಟ,ಸಾಹಿತ್ಯ,ಸಾಂಸ್ಕೃತಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ, ಅವರು ರಚಿಸಿರುವ *ಎದೆಯ ಹಣತೆ ಕೃತಿಗೆ 2025ನೇ ಸಾಲಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದ್ದು ಇಡೀ ಕನ್ನಡಿಗರು ಹೆಮ್ಮೆಪಡುವಂಥ ವಿಷಯ ಎಂದು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಡಾ: ಎನ್.ಹೆಚ್. ಪೂಜಾರ ಸಂತೋಷ ವ್ಯಕ್ತಪಡಿಸಿ ಮಾತನಾಡಿದರು.

    ಗಬ್ಬೂರಿನ ಮಹಾಶೈವ ಧರ್ಮ ಪೀಠದಲ್ಲಿ ಆಗಸ್ಟ್ 9ರಂದು ನೂಲು ಹುಣ್ಣಿಮೆಯ ದಿವಸ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿರುವ ಕುಮಾರಸ್ವಾಮಿಗಳ ಹುಟ್ಟು ಹಬ್ಬದ ಪ್ರಯುಕ್ತ ಭಾನು ಮುಸ್ತಾಕ್ ಅವರಿಗೆ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮಿತಿಯ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ ಹೇಳಿದರು.

    apvc-iconPost Views: 15
  • ಎಎಪಿಎಫ್ ಸಂಯೋಜಕ ಅನ್ವರ್ ಜಮಾದಾರ್ ಬೀಳ್ಕೊಡುಗೆ 

    ಎಎಪಿಎಫ್ ಸಂಯೋಜಕ ಅನ್ವರ್ ಜಮಾದಾರ್ ಬೀಳ್ಕೊಡುಗೆ 

    ಸುರಪುರ:ಕಳೆದ ಅನೇಕ ವರ್ಷಗಳಿಂದ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ತಾಲ್ಲೂಕ ಸಂಯೋಜಕರಾಗಿ ಶಿಕ್ಷಣ ರಂಗದ ಬೆಳವಣಿಗೆಗೆ ಸೇವೆ ಸಲ್ಲಿಸಿ ಕಲಬುರ್ಗಿಗೆ ವರ್ಗಾವಣೆಗೊಂಡ ಅನ್ವರ್ ಜಮಾದಾರ್ ಅವರಿಗೆ ನಗರದ ಎಪಿಡಿ ಸಂಸ್ಥೆ ವತಿಯಿಂದ ವರ್ಗಾವಣೆಗೊಂಡ ಪ್ರಯುಕ್ತ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅನ್ವರ್ ಜಮಾದಾರ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸುರಪುರ ಮತ್ತು ಹುಣಸಿಗಿ ತಾಲೂಕಿನಲ್ಲಿ ಎಪಿಡಿ ಸಂಸ್ಥೆ ವತಿಯಿಂದ ವಿಶೇಷ ಚೇತನರ ಮಕ್ಕಳ ಬಗ್ಗೆ ಇರುವ ಕಾಳಜಿ ಅವರಿಗೆ ಅವಶ್ಯಕತೆ ಸಾಮಗ್ರಿಗಳನ್ನು ತುಂಬಾ ಕಾಳಜಿಯಿಂದ ಕೊಡುತ್ತಿರುವುದು ಅತ್ಯಂತ ಶ್ಲಾಘನೀಯವಾದದ್ದು. ಅವರ ತಂಡದೊಂದಿಗಿನ ನನ್ನ ಪಯಣ ಸದಾ ನೆನಪಿನ ಬುತ್ತಿಯಲ್ಲಿರುತ್ತದೆ ಎಂದು ಅಭಿಪ್ರಾಯಪಟ್ಟರು.
    ಸಮಾರಂಭದಲ್ಲಿ ಎಪಿಡಿ ಸಂಸ್ಥೆಯ ಜಿಲ್ಲಾ ಸಂಯೋಜಕ ಸಂಪ್ರೀತಾ ಮಾತನಾಡುತ್ತಾ, ಎಪಿಡಿ ಸಂಸ್ಥೆಯ ಸುರಪುರದಲ್ಲಿ ಆರಂಭದಿಂದಲೂ ಇಲ್ಲಿವರೆಗೆ ನಮಗೆ ಅನ್ವರ್ ಜಮಾದಾರ್ ಅವರು ಪ್ರತಿಯೊಂದು ಕಾರ್ಯಗಳಿಗೆ ಬೆನ್ನೆಲುಬಾಗಿದ್ದರು, ನಮ್ಮ ಸಂಸ್ಥೆ ವತಿಯಿಂದ ಯಾವುದೇ ಜವಾಬ್ದಾರಿ ನೀಡಿದರು ಪ್ರೀತಿಯಿಂದ ಅದನ್ನು ತುಂಬಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು, ಅದರಲ್ಲೂ ವಿಶೇಷ ಚೇತನ ಮಕ್ಕಳಿಗೆ ಅವರಿಲ್ಲಿರುವ ಕಾಳಜಿ ಅಪಾರವಾದದ್ದು ಎಂದರು.
    ತಾಲೂಕ್ ಸಂಯೋಜಕ ಗಿರೀಶ್ ಕುಲಕರ್ಣಿ ಮಾತನಾಡಿ, ಅನ್ವರ್ ಜಮಾದಾರ ಅವರೊಂದಿಗೆ ಕಾರ್ಯ ಮಾಡುವಾಗ ನಾನು ಗಮನಿಸಿದ ಪ್ರಮುಖ ಅಂಶಗಳೆಂದರೆ ಅತ್ಯಂತ ಸರಳ ವ್ಯಕ್ತಿ ,ಸ್ನೇಹಪರತೆ,ಸಾಮಾಜಿಕ ಕಾಳಜಿ ನಮ್ಮೆಲ್ಲರಿಗೂ ದಾರಿ ದೀಪವಾಗಲಿ ಎಂದರು.
    ಕಾರ್ಯಕ್ರಮದಲ್ಲಿ ಮಹಾಂತೇಶ್ ಲಕ್ಷ್ಮಿ ಹಾಗೂ ಎಪಿಡಿ ಸಂಸ್ಥೆಯ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
    apvc-iconPost Views: 9