Blog

  • ಎರಡು ಗುಂಪುಗಳ ನಡುವೆ ಹೊಡೆದಾಟ: 25 ಮಂದಿ ವಿರುದ್ಧ ಪ್ರಕರಣ

    ಎರಡು ಗುಂಪುಗಳ ನಡುವೆ ಹೊಡೆದಾಟ: 25 ಮಂದಿ ವಿರುದ್ಧ ಪ್ರಕರಣ

    ಯಾದಗಿರಿ: ಗಾಂಧಿ ನಗರ ತಾಂಡಾದಲ್ಲಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳು ಹಿಡಿದು ಹೊಡೆದಾಟ ನಡಿಸಿದ ಸಂಬಂಧ ಇಬ್ಬರನ್ನು ಬಂಧಿಸಿ, 25 ಆರೋಪಿಗಳ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೈಯಲ್ಲಿ ತಲ್ವಾರ್, ಚಾಕು, ಕಲ್ಲು, ಇಟ್ಟಿಗೆ, ಕಟ್ಟಿಗೆಗಳನ್ನು ಹಿಡಿದು ಎರಡೂ ಗುಂಪಿನವರು ಪರಸ್ಪರ ಹೊಡೆದಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಎರಡೂ ಕಡೆಯವರು ದೂರು– ಪ್ರತಿದೂರು ದಾಖಲಿಸಿದ್ದಾರೆ. ತೇಜರಾಜ್ ರಾಠೋಡ (46) ಹಾಗೂ ರಮೇಶ ದೇವುಜಿ ರಾಠೋಡನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ರಮೇಶ ದೇವುಜಿ ನೀಡಿದ ದೂರಿನ ಅನ್ವಯ ತೇಜರಾಜ್, ಶಶಿ, ಮೋನು, ಮಿಥುನ್, ಬಾಬು ಸೇರಿ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಶಿಕುಮಾರ ತೇಜರಾಜ್ ನೀಡಿದ ಪ್ರತಿ ದೂರಿನ ಪ್ರಕಾರ ರಮೇಶ, ಕಲಾವತಿ, ಲಕ್ಷ್ಮಿಬಾಯಿ, ಅಂಬರೇಶ, ಅರ್ಜುನ್ ಸೇರಿ 14 ಮಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    apvc-iconPost Views: 151
  • ಹೈಯ್ಯಾಳಲಿಂಗೇಶ್ವರ ಜಾತ್ರೆಯಲ್ಲಿ ಪ್ರಾಣಿ ಬಲಿ, ಮದ್ಯಪಾನ, ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೆ ಸೂಚನೆ

    ಹೈಯ್ಯಾಳಲಿಂಗೇಶ್ವರ ಜಾತ್ರೆಯಲ್ಲಿ ಪ್ರಾಣಿ ಬಲಿ, ಮದ್ಯಪಾನ, ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೆ ಸೂಚನೆ

    ಯಾದಗಿರಿ : ಜಿಲ್ಲೆಯ ವಡಗೇರಾ ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ ಶ್ರೀ ಹೈಯ್ಯಾಳಲಿಂಗೇಶ್ವರ ಜಾತ್ರೆಯಲ್ಲಿ ಪ್ರಾಣಿ ಬಲಿ ಹಾಗೂ ಮದ್ಯಪಾನ ಮತ್ತು ಮದ್ಯ ಮಾರಾಟ 2025ರ ಆಗಸ್ಟ್ 9 ರಿಂದ 13ರ ಮಧ್ಯರಾತ್ರಿ ವರೆಗೆ ನಿಷೇಧ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಹೊರಡಿಸಿದ್ದಾರೆ.

    ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ವಡಗೇರಾ ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ 2025ರ ಆಗಸ್ಟ್ 9 ರಿಂದ 13ರ ವರೆಗೆ ನಡೆಯಲಿರುವ ಶ್ರೀ ಹೈಯ್ಯಾಳಲಿಂಗೇಶ್ವರ ಜಾತ್ರೆಯಲ್ಲಿ ದೇವರ ಹೆಸರಲ್ಲಿ ಪ್ರಾಣಿ ಬಲಿ ಅಂದರೆ ಕುರಿ ಮತ್ತು ಕೋಣ ಬಲಿ ಕೊಡುವುದನ್ನು 2025ರ ಆಗಸ್ಟ್ 9 ರಿಂದ 13ರ ವರೆಗೆ ಶ್ರೀ ಹೈಯ್ಯಾಳಲಿಂಗೇಶ್ವರ ದೇವಸ್ಥಾನದ 5 ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಿ ಹಾಗೂ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಈ ಕೆಳಗಿನ ಅಂಶಗಳನ್ನು ಅನುಸರಿಸಲು ಆದೇಶಿಸಿದೆ.

    ಯಾವುದೇ ಕಾರಣಕ್ಕೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ, 2020ರ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ 2025ರ ಆಗಸ್ಟ್ 9 ರಿಂದ 13ರ ವರೆಗೆ ಶ್ರೀ ಹ್ಯೆಯ್ಯಾಳಲಿಂಗೇಶ್ವರ ದೇವಸ್ಥಾನದ 5 ಕಿ.ಮೀ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಶ್ರೀ ಹೈಯ್ಯಾಳಲಿಂಗೇಶ್ವರರ ಜಾತ್ರೆಯಲ್ಲಿ ದೇವರ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದನ್ನು ನಿಷೇಧಿಸುವ ಸಂಬAಧವಾಗಿ ಈ ಗ್ರಾಮದ ಸುತ್ತಲೂ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ಯಾರೂ ಪ್ರಾಣಿಗಳನ್ನು ಗ್ರಾಮದ ಒಳಗಡೆ ತೆಗೆದುಕೊಂಡು ಬರದಂತೆ ತಡೆಹಿಡಿಯಲು ಹಾಗೂ ಬಲಿ ಕೊಡುವುದನ್ನು ಕಡ್ಡಾಯವಾಗಿ ತಡೆಹಿಡಿಯುವಂತೆ ಕ್ರಮ ವಹಿಸಬೇಕು. ಈ ಗ್ರಾಮದಲ್ಲಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಸಂಬAಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಹೈಯ್ಯಾಳ (ಬಿ) ಇವರಿಗೆ ವಹಿಸಿಕೊಡಲಾಗಿದೆ. ಗ್ರಾಮದಲ್ಲಿ ಸೂಕ್ತ ಪೊಲೀಸ್ ಬಂದೊಬಸ್ತ್ ಒದಗಿಸಲು ಹಾಗೂ ಮುಂಜಾಗೃತ ಕ್ರಮಕೈಗೊಳ್ಳಬೇಕು, ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಯಾದಗಿರಿ ಸಹಾಯಕ ಆಯಕ್ತರು, ಯಾದಗಿರಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಉಪ ನಿರ್ದೇಶಕರು, ವಡಗೇರಾ ತಹಸೀಲ್ದಾರರು, ವಡಗೇರಾ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಇವರಿಗೆ ನಿರ್ದೇಶಿಸಿ ಆದೇಶಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    apvc-iconPost Views: 57
  • ಮಾಧ್ವಾರದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟಿಸಿದ ಶಾಸಕ ಕಂದಕೂರ

    ಮಾಧ್ವಾರದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟಿಸಿದ ಶಾಸಕ ಕಂದಕೂರ

    ಗುರುಮಠಕಲ್ : ಮತಕ್ಷೇತ್ರದ ಮಾಧ್ವಾರದಂತಹ ಗ್ರಾಮೀಣ ಭಾಗದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಶಾಖೆಯನ್ನು ಆರಂಭಿಸಿದ್ದು, ಸ್ವಾಗತಾರ್ಹ ಈ ಭಾಗದ ಜನರು ಬ್ಯಾಂಕ್ ನ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ತಿಳಿಸಿದರು.

    ಸಮೀಪದ ಮಾಧ್ವಾರ ಗ್ರಾಮದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನವಾಗಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

    ಗುರುಮಠಕಲ್ ತಾಲೂಕು ಕೇಂದ್ರದಲ್ಲೇ ಹೆಚ್ ಡಿಎಫ್ ಸಿ ಬ್ಯಾಂಕ್ ಬ್ಯಾಂಕ್ ಶಾಖೆ ಇಲ್ಲ ಅದರಲ್ಲಿ ಮಾಧವಾರ ಗ್ರಾಮದಲ್ಲಿ ಸ್ಥಾಪನೆ ಮಾಡಿದ್ದು ಸಂತಸದ ಸುದ್ದಿ. ಬ್ಯಾಂಕ್ ನ ಸ್ಥಾಪನೆಗೆ ಕಾರಣೀಭೂತರಾದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ನಮ್ಮ ಭಾಗದ ಜನರು ಮುಗ್ಧರು, ಅದರಲ್ಲಿ ಅನಕ್ಷರಸ್ಥರು ಇದ್ದಾರೆ ಅವರಿಗೆ ಬ್ಯಾಂಕ್ ನ ವ್ಯವಹಾರಗಳ ಬಗ್ಗೆ ಮಾಹಿತಿ ಕಡಿಮೆ. ಬ್ಯಾಂಕ್ ಸಿಬ್ಬಂದಿಯವರು ತಮ್ಮ ಯೋಜನೆಗಳ ಬಗ್ಗೆ ಜನರಿಗೆ ವಿವರವಾಗಿ ಮಾಹಿತಿ ನೀಡುವ ಮೂಲಕ ಅವರನ್ನು ತಮ್ಮ ಗ್ರಾಹಕರನ್ನಾಗಿ ಮಾಡಿಕೊಳ್ಳಬೇಕು ಇದರಿಂದ ಇಬ್ಬರಿಗೂ ಲಾಭವಾಗುತ್ತದೆ. ಬ್ಯಾಂಕ್ ನ ಸಿಬ್ಬಂದಿ ಗ್ರಾಮೀಣ ಜನರೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡು ಜನರಿಗೆ ಸಹಕಾರ ಕೊಡಿ ಎಂದು ಸೂಚಿಸಿದರು. ಎಚ್ ಡಿ ಎಫ್ ಸಿ ಬ್ಯಾಂಕ್ ನ ಅಧಿಕಾರಿಗಳು ಪ್ರತಿ ತಾಲೂಕು ಕೇಂದ್ರಗಳಲ್ಲಿ ತಮ್ಮ ಬ್ಯಾಂಕ್ ಶಾಖೆ ಪ್ರಾರಂಭಿಸುವಂತೆ ಕ್ಲಸ್ಟರ್ ಮುಖ್ಯಸ್ಥರಾದ ರವಿ ಸುರಪುರ ಅವರಿಗೆ ಹೇಳಿದರು.

    ಇದಕ್ಕೂ ಮುನ್ನ ಯಾದಗಿರಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಂಚಾಳ ಅವರು ಮಾತನಾಡಿ ಮಾಧವಾರ ಗ್ರಾಮದಲ್ಲಿ ಶಾಖೆ ಸ್ಥಾಪನೆ ಮಾಡುವ ಬಗ್ಗೆ ಆರ್ಥಿಕ ವಿಭಾಗದಿಂದಲೇ ಸೂಚನೆ ಬಂದಿತ್ತು. ಹೀಗಾಗಿ ಹೆಚ್ ಡಿಎಫ್ ಸಿ ಅವರು ಕೇವಲ ಒಂದು ತಿಂಗಳ ಕಾಲಾವಧಿಯಲ್ಲೇ ಶಾಖೆ ಸ್ಥಾಪನೆ ಮಾಡಿದ್ದಾರೆ. ಈ ಭಾಗದ ಪ್ರತಿಯೊಬ್ಬರೂ ಖಾತೆ ತೆಗೆದು ಬ್ಯಾಂಕ್ ನ ಲಾಭ ಪಡೆಕೊಳ್ಳುವಂತೆ ಸಲಹೆ ನೀಡಿದರು.

    ಹೆಚ್ ಡಿಎಫ್ ಸಿ ಬ್ಯಾಂಕ್ ನ ಕ್ಲಸ್ಟರ್ ಹೆಡ್ ರವಿ ಸುರಪುರ ಅವರು ಮಾತನಾಡಿ ನಮ್ಮ ಬ್ಯಾಂಕ್ ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಅಂತರ ರಾಷ್ಟ್ರೀಯ ಬ್ಯಾಂಕ್ ಆಗಿದೆ. ಇತರ ಸೇವೆಗಳಿಗಿಂತ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದೇವೆ. ರಾಷ್ಟ್ರ, ರಾಜಧಾನಿ, ಜಿಲ್ಲಾ, ತಾಲೂಕು ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಶಾಖೆಯನ್ನು ಪ್ರಾರಂಭಿಸಿ ಜನರಿಗೆ ಸೇವೆ ನೀಡುತ್ತಿದ್ದೇವೆ. ಇಲ್ಲಿ ಮನೆ, ಆಸ್ತಿ, ಬೆಳೆ, ವ್ಯಾಪಾರ, ಸೇರಿದಂತೆ ಇತ್ಯಾದಿ ಸೇವೆಗಳನ್ನು ಗ್ರಾಹಕರು ಪಡೆಕೊಳ್ಳಬಹುದು. ಯಾದಗಿರಿ ಜಿಲ್ಲೆಯಲ್ಲಿ ನಮ್ಮ ಬ್ಯಾಂಕ್ ವ್ಯವಹಾರ ಉತ್ತಮವಾಗಿದೆ ಎಂದು ಹೇಳಿದರು.

    ಈ ವೇಳೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಷ್ ಕಟಕಟಿ, ಗ್ರಾಪಂ ಅಧ್ಯಕ್ಷ ಶಂಕ್ರಪ್ಪ, ಪಿಡಿಓ ಗಿರಿಮಲ್ಲಣ್ಣ, ವಲಯ ಮುಖ್ಯಸ್ಥರಾದ ರಾಮನಾರಾಯಣ, ಪ್ರಾದೇಶಿಕ ಮುಖ್ಯಸ್ಥರದ ಜಾರ್ಜ ಡಾ.ಕೋಸ್ಟಾ, ಶಾಖಾ ಮುಖ್ಯಸ್ಥರಾದ ಸಂತೋಷ ಕುಮಾರ ಸೇರಿದಂತೆ ಮುಂತಾದವರಿದ್ದರು.

    • ಶಾಸಕ ಕಂದಕೂರ ಜನಪರ ಕಾಳಜಿ ಶ್ಲಾಘನೀಯ

    ಸರಕಾರದ ವಿವಿಧ ಯೋಜನಗಳ ಅಡಿಯಲ್ಲಿ ಜನರಿಗೆ ಮಂಜೂರಾದ ಸಾಲ, ಮತ್ತಿತರ ಸೌಲಭ್ಯಗಳನ್ನು ನೀಡುವಲ್ಲಿ ವಿಳಂಬವಾದರೆ ಕೂಡಲೇ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ಕರೆ ಬರುತ್ತೆ, ಕೆಲಸ ಆಗುವವರೆಗೂ ಅವರು ನಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ, ಇಡೀ ಜಿಲ್ಲೆಯ ಎಲ್ಲಾ ಶಾಸಕರಿಗಿಂತಲೂ ಗುರುಮಠಕಲ್ ಶಾಸಕರ ಕರೆಗಳು ಹೆಚ್ಚಿರುತ್ತವೆ. ಇಲ್ಲಿನ ಜನರ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಂಚಾಳ ಅವರು ತಿಳಿಸಿದರು.

    apvc-iconPost Views: 94
  • ದೂರುದಾರರಿಂದ ಪೊನ್ ಪೇ ಮೂಲಕ ಹಣ ಸ್ವೀಕರಿಸಿದ್ದ ಇಬ್ಬರು ಪೊಲೀಸರು ಅಮಾನತು.

    ದೂರುದಾರರಿಂದ ಪೊನ್ ಪೇ ಮೂಲಕ ಹಣ ಸ್ವೀಕರಿಸಿದ್ದ ಇಬ್ಬರು ಪೊಲೀಸರು ಅಮಾನತು.

    ಯಾದಗಿರಿ : ದೂರುದಾರರಿಂದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆಯೇ ಇಬ್ಬರು ಪೊಲೀಸ್ ರನ್ನು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಸೇವೆಯಿಂದ ಅಮಾನತುಗೊಳಿಸಿದ ಪ್ರಕರಣ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ‌ ನಡೆದಿದೆ.

    ಪೊಲೀಸ್ ಪೇದೆಗಳಾದ ವಿಶ್ವನಾಥರಡ್ಡಿ ಮತ್ತು ಗೋಪಾಲರೆಡ್ಡಿ (ಯಾದಗಿರಿ ವಲಯ) ಎಂಬುವವರೇ ಅಮಾನತುಗೊಂಡಿದ್ದಾರೆ ಎಂದು ಡಿವೈಎಸ್ಪಿ ಸುರೇಶ್ ಎಂ ಅವರು ಸತ್ಯಕಾಮಗೆ ತಿಳಿಸಿದ್ದಾರೆ.

    ಘಟನೆ ವಿವರ : ಕಳೆದ ಜೂ.24 ರಂದು ಠಾಣಾ ವ್ಯಾಪ್ತಿಯ ಮಿನಾಸಪುರ ಗ್ರಾಮದ ವೆಂಕಟರಡ್ಡಿ ಮತ್ತು ಅವರ ಮಗ ಹಣಮಂತರಡ್ಡಿ ಎಂಬುವವರ ಮೇಲೆ ಯಾದಯ್ಯ, ಮಲ್ಲಯ್ಯ ಮತ್ತು ಗೋಪಿ ಎಂಬುವವರು ಸೇರಿದಂತೆಯೇ ಐವರು ಮಾರಣಾಂತಿಕ ಹೊಡೆದು ಕೈ,ಕಾಲು ಮುರಿದಿದ್ದಾರೆ ಮತ್ತು ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆಂದು ಅನುಸೂಯಾ ವೆಂಟಕರಡ್ಡಿ ಎಂಬುವವರು ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸುವ ಕುರಿತು ವಿಚಾರಿಸಿದಾಗ ಅವರನ್ನು ಬಂಧಿಸಬೇಕಾದರೇ ಒಂದು ಲಕ್ಷ ರೂ. ನೀಡಬೇಕೆಂಬ ಬೇಡಿಕೆ ಈ ಇಬ್ಬರು ಪೊಲೀಸರು ಇಟ್ಟಿದ್ದರು . ಆಗ ವಿಶ್ವನಾಥರಡ್ಡಿ ಎಂಬುವವರ ಮೊಬೈಲ್ ಗೆ 10 ಸಾವಿರ ರೂ. ಹಾಗೂ ರಾಜೇಂದ್ರಬಾಬು ಎಂಬುವವರ ನಂ.ಗೆ ಹತ್ತು ಸಾವಿರ ರೂ. ಪೊನ್ ಮಾಡಿದ್ದರ ಬಗ್ಗೆ ಎಸ್ ಪಿ ಅವರಿಗೆ ಸಲ್ಲಿಸಿದ್ದ ದೂರಿನಲ್ಲಿ ಅನುಸೂಯ ಎಂಬುವವರು ವಿವರಿಸಿದ್ದರು
    ಈ ದೂರಿನ್ವಯ ತನಿಖೆಗೆ ಆದೇಶಿಸಿದಾಗ ಇದನ್ನು ತನಿಖೆ‌ ಮಾಡಿದ ಡಿವೈಎಸ್ ಪಿ ಅವರು ನೀಡಿದ ವರದಿ ಆಧಾರದ‌ ಮೇಲೆ ಈ ಇಬ್ಬರನ್ನು ಎಸ್ ಪಿ ಅವರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

    apvc-iconPost Views: 300
  • ಗೃಹ ಸಚಿವರಾಗಿ ಅಮಿತ್ ಶಾ ಹೊಸ ದಾಖಲೆ ಸೃಷ್ಟಿ: ಕು.ಲಲಿತಾ ಅನಪುರ.

    ಗೃಹ ಸಚಿವರಾಗಿ ಅಮಿತ್ ಶಾ ಹೊಸ ದಾಖಲೆ ಸೃಷ್ಟಿ: ಕು.ಲಲಿತಾ ಅನಪುರ.

    ಯಾದಗಿರಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ ಹೇಳಿದರು.

    ಅಮಿತ್ ಶಾ ಅವರು ಮೇ 30, 2019 ರಿಂದ ಭಾರತದ ಗೃಹ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗೋವಿಂದ ವಲ್ಲಭ ಪಂತ್ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ದಾಖಲೆಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಅವರ 6 ವರ್ಷ 64 ದಿನಗಳ ಹಾಗೂ ಗೋವಿಂದ ವಲ್ಲಭ ಪಂತ್ ಅವರ 6 ವರ್ಷ 56 ದಿನಗಳ ದಾಖಲೆಯನ್ನು ಮುರಿದಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನ ಅವರ ಕೆಲವು ಗಮನಾರ್ಹ ಉಪಕ್ರಮಗಳಾಗಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ಶಾ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅಮಿತ್ ಶಾ ಅವರ ನಾಯಕತ್ವದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಮನಾರ್ಹ ಇಳಿಕೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಹೆಚ್ಚಳ ಕಂಡುಬಂದಿದೆ.

    apvc-iconPost Views: 55
  • ಸರ್ಕಾರದ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಟಾನಗೊಳಿಸಿ : ಶಾಸಕ ಚೆನ್ನಾರಡ್ಡಿ ಪಾಟೀಲ್

    ಸರ್ಕಾರದ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಟಾನಗೊಳಿಸಿ : ಶಾಸಕ ಚೆನ್ನಾರಡ್ಡಿ ಪಾಟೀಲ್

    ಯಾದಗಿರಿ: ಸರ್ಕಾರದ ಯೋಜನೆಗಳು ವಿವಿಧ ಇಲಾಖೆಗಳಿಂದ ಅನುಷ್ಟಾನಗೊಳ್ಳುತ್ತಿದ್ದು, ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಯಾದಗಿರಿ ಮತಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಅವರು, ಅಂಗನವಾಡಿ ಕೇಂದ್ರಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು, ಶೌಚಾಲಯಗಳು, ಅಡಿಗೆ ಕೋಣೆಗಳು, ಆಟದ ಮೈದಾನ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡ ನೀಡಬೇಕಾಗುತ್ತದೆ  ಎಂದು ಹೇಳಿದರು.

    ಅದಷ್ಟೇ ಅಲ್ಲದೆ, ದುರಸ್ತಿ ಅಥವಾ ಇನ್ನಿತರ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದ ಶಾಲೆಗಳ ಪಟ್ಟಿ ತಯಾರಿಸಿ, ಶೀಘ್ರದಲ್ಲಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂಬ ಸೂಚನೆಯನ್ನು ಕೂಡ ನೀಡಿದರು.

    ಈ ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿಗಳು  ಮಹಾದೇವ ಬಾಬಳಗಿ,  ಬಸವರಾಜ್ ಶರಬೈ, ಮಲ್ಲಿಕಾರ್ಜುನ ಸಂಗವಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ್ ಐರಡ್ಡಿ ಹಾಗೂ ತಾಲ್ಲೂಕು ಮಟ್ಟದ ಇತರ ಅಧಿಕಾರಿಗಳು ಭಾಗವಹಿಸಿದ್ದರು.

    apvc-iconPost Views: 199
  • ಸಿಎಂ ಅನ್ನಭಾಗ್ಯ’ಗೆ ಪರೋಕ್ಷವಾಗಿ ಆಹಾರ ಇಲಾಖೆ ಅಧಿಕಾರಿಗಳು ಕನ್ನ.?

    ಸಿಎಂ ಅನ್ನಭಾಗ್ಯ’ಗೆ ಪರೋಕ್ಷವಾಗಿ ಆಹಾರ ಇಲಾಖೆ ಅಧಿಕಾರಿಗಳು ಕನ್ನ.?

    ವರದಿ; ಶ್ರೀಶೈಲ್ ಪೂಜಾರಿ
    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಪಡಿತರ ಅಕ್ಕಿ ಅಕ್ರಮ ಮಾರಾಟ ವ್ಯವಹಾರ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಮುಂದುವರೆದಿದೆ. ಈ ಮಧ್ಯೆ ಗ್ರಾಮಗಳಿಗೆ ತೆರಳಿ ಫಲಾನುಭವಿಗಳಿಂದ ಅನ್ನಭಾಗ್ಯದ ಅಕ್ಕಿಯನ್ನು ಕಡಿಮೆ ದರಕ್ಕೆ ಕೊಂಡುಕೊಂಡು ಹೆಚ್ಚಿನ ದರಕ್ಕೆ ಬೇರೆ ಪ್ರದೇಶಗಳಿಗೆ ಕಳುಹಿಸುವ ಅಕ್ರಮ ದಂಧೆ ತಂಡ ವ್ಯಾಪಕವಾಗಿ ಬೇರೂರಿವೆ. ಆಹಾರ ಇಲಾಖೆ ಈ ಅಕ್ರಮವನ್ನು ತಡೆಗಟ್ಟಲು ಸಂಪೂರ್ಣ ವಿಫಲವಾಗಿದ್ದು ಪ್ರಜ್ಞಾವಂತ ನಾಗರೀಕರು ಆಹಾರ ಇಲಾಖೆ ಅಧಿಕಾರಿಗಳು ಇದ್ದಾರೋ ಇಲ್ಲವೋ ಎಂದು ಕೇಳುವ ಪ್ರಶ್ನೆ ಉದ್ಭವವಾಗಿದೆ.

    ಹೌದು.. ತಾಲೂಕಿನ ಮೈಬೂಬನಗರದ ಶಿರೋಳ ರಸ್ತೆಯಲ್ಲಿ ಅಕ್ರಮವಾಗಿ ಸಾಗಾಣೆ ಪಡಿತರ ಅಕ್ಕಿ ವಾಹನವನ್ನು ಸಾರ್ವಜನಿಕರು ಹಿಡಿದು ಮಾಹಿತಿ ನೀಡಿದರು ಕೂಡ ಆಹಾರ ಇಲಾಖೆ ಅಧಿಕಾರಿಗಳು ಬರದೇ ಇರುವುದರಿಂದ ಸೋಮವಾರ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗುವುದಲ್ಲದೇ ತಹಶಿಲ್ದಾರರಿಗೆ ಆಹಾರ ಇಲಾಖೆ ಅಧಿಕಾರಿ ಶಂಕರ ಗುಮತಿಮಠ ಅವರ ವಿರುದ್ಧ ದೂರು ನೀಡಲಾಗಿದೆ.

    ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುತ್ತಿರುವುದು ಮುದ್ದೇಬಿಹಾಳ ಹಾಗೂ ಸುತ್ತಲಿನ ಗ್ರಾಮದಲ್ಲಿ ನಡೆದಿದೆ. ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳು ಕಾಳಸಂತೆಯಲ್ಲಿ ಅಕ್ರಮ ಪಡಿತರ ಮಾರಾಟಕ್ಕೆ ಬ್ರೇಕ್‌ ಹಾಕಲು ಶ್ರಮ ವಹಿಸುತ್ತಿದ್ದರೆ, ಆದರೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ವ್ಯವಹಾರ ಎಗ್ಗಿಲ್ಲದೆ ಸಾಗಿರುವುದು ಜನ ಹುಬ್ಬೆರಿಸುವಂತೆ ಮಾಡುವುದಲ್ಲದೇ ಆಹಾರ ಇಲಾಖೆ ವಿರುದ್ಧ ಸಂಶಯ ವ್ಯಕ್ತವಾಗಿದೆ.

    ಅನ್ನಭಾಗ್ಯ ದಲ್ಲಾಳಿಗಳಿಗೆ ಮಾರಾಟ

    ತಾಲೂಕಿನ ವಿವಿಧ ಗ್ರಾಮಗಳ ಮನೆಗೆ ತೆರಳುವ ಈ ಗುಂಪು, ರೇಷನ್‌ ಅಕ್ಕಿ ಖರೀದಿಸಲಾಗುವುದು ಎಂದು ಹೇಳುತ್ತಾರೆ. ಮನೆ ಬಾಗಿಲಿನಲ್ಲಿಯೇ ಅಕ್ಕಿಯ ತೂಕ ನೋಡಿ, ಹಣ ನೀಡಿ ವಾಹನದಲ್ಲಿ ಹಾಕಿಕೊಂಡು ಸಾಗುತ್ತಾರೆ. ಹೀಗೆ ಸಂಗ್ರಹಿಸಿದ ಅಪಾರ ಪ್ರಮಾಣದ ಅಕ್ಕಿಯನ್ನು ಕೆಲ ದಲ್ಲಾಳಿಗಳಿಗೆ ಅಧಿಕ ಹಣಕ್ಕೆ ಮರು ಮಾರಾಟ ಮಾಡುತ್ತಾರೆ. ಅವರು ಅದನ್ನು ಡೀಲರ್ಸ್‌ ಗಳ ಮೂಲಕ ಲಾರಿಗಳಲ್ಲಿ ಬೇರೆ ರಾಜ್ಯಕ್ಕೆ ಸಾಗಿಸುತ್ತಾರೆ ಎಂಬ ಗುಮಾನಿ ಇದೆ.

    ಅಕ್ರಮ ಸಾಗಣೆ ವಾಹನ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರು ಕೂಡ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ಶಂಕರ ಗುಮತಿಮಠ ಸ್ಥಳಕ್ಕೆ ಬರದೇ ಸಮಯ ಕಳೆಯುತ್ತಾ ಕುಂಟುನೆಪ ಹೇಳಿ ಜಾರಿಕೊಂಡ ಸನ್ನೀವೇಶ ನಡೆದರೆ, ಅಕ್ರಮ ಸಾಗಣೆ ವಾಹನ ಪರ ಕೆಲವರು ಪರೋಕ್ಷವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವೆ ಎಂದು ಬಿಂಬಿಸಿ ಪರೋಕ್ಷವಾಗಿ ಅಕ್ರಮ ಅಕ್ಕಿ ವಾಹನವನ್ನು ಎಸ್ಕೇಪ್ ಮಾಡಿದ ಸನ್ನಿವೇಶ ಜರುಗಿತು.

    ಇನ್ನು ಯಾವುದೇ ಭಯವಿಲ್ಲದೇ ಅಕ್ರಮವಾಗಿ ಅಕ್ಕಿ ಖರೀದಿ ಹಾಗೂ ಸಾಗಣೆ ಮಾಡುತ್ತಿದ್ದರೂ ತಾಲೂಕಿನಲ್ಲಿ ಯಾವುದೇ ಕ್ರಮ ಇಲ್ಲದಂತಾಗಿದೆ. ಬಡವರ ಹೊಟ್ಟೆ ತುಂಬಿಸಲು ಸರ್ಕಾರ ಉಚಿತವಾಗಿ ಅಕ್ಕಿ ನೀಡಿದರೆ ಅದು ಅಕ್ರಮ ದಂಧೆಗೆ ಬಳಕೆಯಾಗುತ್ತಿದೆ. ಕೂಡಲೇ ಸರ್ಕಾರ ಮತ್ತು ಆಹಾರ ಇಲಾಖೆ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅನ್ನಭಾಗ್ಯ ಯೋಜನೆಯನ್ನು ಕಾಪಾಡಬೇಕಿದೆ.

    ಏನೇ ಆಗಲಿ ಅನ್ನಭಾಗ್ಯ ಯೊಜನೆ ಪಡಿತರ ಅಕ್ಕಿ ಅಕ್ರಮ ಮಾರಾಟ ವ್ಯವಹಾರ ಅವ್ಯಾಹತವಾಗಿ ನಡೆದಿರುವುದಕ್ಕೆ ಕಡಿವಾಣ ಹಾಕಲು ಒಂದು ಕಡೆ ಅಧಿಕಾರಿಗಳು ಹೆಣಗಾಡುತ್ತಿದ್ದರೆ, ಮತ್ತೊಂದು ಕಡೆ ಅನ್ನಭಾಗ್ಯ ಅಕ್ರಮ ಸಾಗಾಟಕ್ಕೆ ತಂಡಪೋ ತಂಡಗಳು ತಾಲೂಕಿನಲ್ಲಿ ಅಕ್ರಮ ಅಕ್ಕಿ ಸಾಗಾಟ ನಡೆಸುತ್ತಿವೆ. ಇದಕ್ಕೆ ಪುಷ್ಟಿಕರಿಸುವಂತೆ ಮಾಹಿತಿ ನೀಡಿದರೂ ಕೂಡ ಭಾನುವಾರ ಅಕ್ರಮ ಸಾಗಣೆ ವಾಹನ ವಶಪಡಿಸಿಕೊಳ್ಳದೇ ಬಿಟ್ಟಿದ್ದು ಸಾರ್ವಜನಿಕರಲ್ಲಿ ಅಧಿಕಾರಿಗಳು ಕೂಡ ಅಕ್ಕಿ ಅಕ್ರಮ ಸಾಗಾಟಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ರಾ ಎಂಬ ಮಾತುಗಳು ಕೇಳಿಬಂದವು.

    apvc-iconPost Views: 149
  • ಬೆರಳಚ್ಚಿನ ಗುರುತಿನ ಮೂಲಕ ಕುಖ್ಯಾತ ಖಧೀಮನ ಸೆರೆ ಹಿಡಿದ ಪೊಲೀಸ್ ಪಡೆ

    ಬೆರಳಚ್ಚಿನ ಗುರುತಿನ ಮೂಲಕ ಕುಖ್ಯಾತ ಖಧೀಮನ ಸೆರೆ ಹಿಡಿದ ಪೊಲೀಸ್ ಪಡೆ

    • ಹನ್ನೊಂದು ತೊಲಿ ಬಂಗಾರ ಸೇರಿ ರೂ 4,15,500 ನಗದು ವಶ

    ಸತ್ಯಕಾಮ ವಾರ್ತೆ ಶಹಾಪುರ : 

    ತಾಲೂಕಿನ ಗೋಗಿ ಹಾಗೂ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನದ ವರದಿಗಳನ್ನು ಬೆನ್ನಟ್ಟಿ ಬೆರಳಚ್ಚು ಸೇರಿದಂತೆ ವಿವಿಧ ಆಯಾಮಗಳ ಮೂಲಕ ತನಿಖೆ ಕೈಗೊಂಡು ಪ್ರಕರಣ ಭೇದಿಸಿ ನಾಲ್ಕು ಲಕ್ಷ ಹದಿನೈದು ಸಾವಿರದ ಐದುನೂರು ರೂಪಾಯಿ ನಗದು ಸೇರಿ ಹನ್ನೊಂದು ತೊಲಿ ಬಂಗಾರದ ಆಭರಣ ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಜಾವೇದ್ ಇನಾಮದಾರ ಹೇಳಿದರು.

    ನಗರದ ಆರಕ್ಷಕ ವೃತ್ತ ನೀರಿಕ್ಷಕ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಇತ್ತೀಚಿಗೆ  ಗೋಗಿ ಹಾಗೂ ಭೀ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನ ನಡೆದ ಕುರಿತು ವರದಿಯಾಗಿದ್ದು. ಈ ಪ್ರಕರಣಗಳನ್ನು ಬೇಧಿಸಲು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಾದ ಪೃತ್ವಿಕ್ ಶಂಕರ ಹಾಗೂ ಕೆ ಎಸ್ ಪಿ ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಣೆಶ ಹಾಗೂ ಉಪ ಅಧೀಕ್ಷಕ ಸುರಪುರ ವಿಭಾಗದ  ಜಾವೇದ್ ಇನಾಮದಾರ ಅವರ ಮಾರ್ಗದರ್ಶನದಲ್ಲಿ  ನಗರದ ಸಿಪಿಐ ಶರಣಗೌಡ ನ್ಯಾಮನ್ನವರ ಗೋಗಿ ಹಾಗೂ ಭೀ ಗುಡಿ ಪಿ ಎಸ್ ಐಗಳಾದ ದೇವಿಂದ್ರರೆಡ್ಡಿ ಹಾಗೂ ಚಂದ್ರನಾಥ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳ ಮೂಲಕ ತನಿಖೆ ಕೈಗೊಂಡು ಗೋಗಿ ಠಾಣೆಯ ಗುನ್ನ ಸಂಖ್ಯೆ 52/2024, 48/2025, 61/2025,ಭೀ ಗುಡಿ ಠಾಣೆಯ ಗುನ್ನ ಸಂಖ್ಯೆ 02/2025 ರಲ್ಲಿ ಒಟ್ಟು ನಾಲ್ಕು ಹಗಲು ಹಾಗೂ ರಾತ್ರಿ ವೇಳೆ ಮನೆ ಗಳ್ಳತನ ಪ್ರಕರಣಗಳನ್ನು  ಭೇದಿಸಿ  ವಿಜಾಪುರ ಜಿಲ್ಲೆಯ ಅದೇ ತಾಲೂಕಿನ ಹೊನ್ನಾಳಿ ಗ್ರಾಮದ ಸಂತೋಷ ತಂದೆ ಶಿವಣ್ಣ ನಂದ್ಯಾಳನನ್ನು ದಸ್ತಗಿರಿ ಮಾಡಿ ಹನ್ನೊಂದು ತೊಲಿ ಬಂಗಾರದ ಆಭರಣಗಳೊಂದಿಗೆ 4,15,500 ರೂ ನಗದು ವಶಪಡಿಸಿಕೊಂಡು ಕ್ರಮ ಜರುಗಿಸಲಾಗಿದೆ ಎಂದರು.

    ಆರೋಪಿಯ ಬೆರಳಚ್ಚು ಗುರುತಿನ ಸಹಾಯದಿಂದ ಬೆನ್ನಟ್ಟಿ ಆತನ ಚಲನವಲನಗಳನ್ನು ಹಿಂಬಾಲಿಸಿ ರಭಕವಿ ಬನಹಟ್ಟಿ, ಲಿಂಗಸೂರು,  ಸುರಪುರು ಸೇರಿದಂತೆ ಬಸ್ ನಿಲ್ದಾಣಗಳಲ್ಲಿ ಯಾರದೋ ಬಳಸಿಕೊಂಡು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿದ ವಿವರ ಸಂಗ್ರಹಿಸಿ ಲಿಂಗಸೂರಿನಲ್ಲಿ ತನ್ನ ಪತ್ನಿಯ ಫೋನ್ ಕರೆಯಿಂದ ಬಾಡಿಗೆ ವಾಹನದಲ್ಲಿ ಶಾಪಿಂಗ್ ಮಹಲಿನಲ್ಲಿ ಸಂಚರಿಸಿದ್ದ ಸಿ ಸಿ ಟಿ ವಿಗಳಲ್ಲಿ ಸೆರೆ ಸಿಕ್ಕಿದ ಚಿತ್ರಣಗಳ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದರು.

    ಸದರಿ ಕಳ್ಳತನ ಅಪಾರಧ ಪ್ರಕರಣಗಳನ್ನು ಪತ್ತೆ  ಮಾಡಿದ ತಂಡದ ಸಿ ಪಿ ಐ, ಪಿ ಎಸ್ ಐ, ಹಾಗೂ ಸಿಬ್ಬಂದಿಗಳಾದ ಗೋಗಿ  ಶ್ರೀಶೈಲ್ ಸಜ್ಜನ, ದೇವಿಂದ್ರಪ್ಪ, ಭೀಮನಗೌಡ, ಬಸನಗೌಡ, ನಾಗಪ್ಪ, ಹಾಗೂ ಸೋಮಯ್ಯ ರವರನ್ನು ಜಿಲ್ಲಾ ಪೊಲೀಸ್ ಅಧಿಕ್ಷಕರು ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು.
    apvc-iconPost Views: 187
  • ಸಮಾಜದ ಶಾಂತಿಗೆ ಪೊಲೀಸರೊಂದಿಗೆ ಸಹಕಾರ ಅಗತ್ಯ : ಎಸ್.ಪಿ ಪೃಥ್ವಿಕ್ ಶಂಕರ್

    ಸಮಾಜದ ಶಾಂತಿಗೆ ಪೊಲೀಸರೊಂದಿಗೆ ಸಹಕಾರ ಅಗತ್ಯ : ಎಸ್.ಪಿ ಪೃಥ್ವಿಕ್ ಶಂಕರ್

    ಸತ್ಯಕಾಮ ವಾರ್ತೆ ಗುರುಮಠಕಲ್:
    ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪೃಥ್ವಿ‌ಕ್‌  ಶಂಕರ್ ಹೇಳಿದರು.

    ಪಟ್ಟಣದ ಹರಿಜನವಾಡದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುಮಠಕಲ್ ಪೊಲೀಸ್ ಠಾಣೆಯಿಂದ ಆಯೋಜಿಸಲಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಭೆಯಲ್ಲಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು.‌  “ರಸ್ತೆ ಸುರಕ್ಷತೆಗಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮನೆ ಕಳ್ಳತನ ತಪ್ಪಿಸಲು ಸಿಸಿ ಟಿವಿ ಅಳವಡಿಸುವುದು ಉತ್ತಮ. ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಇರಬೇಕಾಗಿದೆ,” ಎಂದು ಅವರು ತಿಳಿಸಿದರು.

    ಅಪರಾಧಗಳನ್ನು ತಡೆಯಲು ಜನರ ಸಹಕಾರ ಅತ್ಯಗತ್ಯವಾಗಿದ್ದು, ದಲಿತ ಸಮುದಾಯದ ಯಾರಿಗಾದರೂ ತೊಂದರೆ ಆಗಿದ್ದರೆ, ಪೊಲೀಸ್ ಇಲಾಖೆ ಅವರ ಪಕ್ಕದಲ್ಲೇ ಇರುತ್ತದೆ. ಕಾನೂನು ಅವರನ್ನು ರಕ್ಷಿಸುವ ಶಕ್ತಿ ಹೊಂದಿದೆ ಎಂದರು.

    ಈ ಸಂಧರ್ಭದಲ್ಲಿ ಪಿ. ಐ. ಈರಣ್ಣ ದೊಡ್ಡಮನಿ, ತಾಲೂಕ ಪಂಚಾಯತ್ ಇ. ಓ. ಅಂಬರೀಷ್ ಪಾಟೀಲ್, ಗ್ರೇಡ್ 2 ತಹಸೀಲ್ದಾರ್ ನರಸಿಂಹಸ್ವಾಮಿ, ಎ.ಎಸ್. ಐ ಭೀಮಶಪ್ಪ ಖಾನಾಗಡ್ಡ, ಶರಣಪ್ಪ ಪಸರ್, ಶಿವರಾಮರೆಡ್ಡಿ, ಶ್ರೀಶೈಲ, ರಾಜುಗೌಡ, ಸೇರಿದಂತೆ ಯುವಕರು ಮುಖಂಡರುಗಳು ಉಪಸ್ಥಿತರಿದ್ದರು.

    apvc-iconPost Views: 65
  • ರಸ್ತೆ ದುರಸ್ಥಿಗೆ ಅಧಿಕಾರಿಗಳ ಮೀನಾಮೇಷ!

    ರಸ್ತೆ ದುರಸ್ಥಿಗೆ ಅಧಿಕಾರಿಗಳ ಮೀನಾಮೇಷ!

    ಲಿಂಗಸುಗೂರು: ಕಳೆದ ಮೂರು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಜಮೀನಿಗೆ ಹೋಗುವ ದಾರಿಗಳು ಸಂಪೂರ್ಣ ಹದಗೆಟ್ಟಿವೆ. ಈ ಹಿನ್ನೆಲೆ ‘ನಮ್ಮ ಹೊಲ, ನಮ್ಮ ದಾರಿ’ ಎಂಬ ರಾಜ್ಯ ಸರ್ಕಾರದ ಯೋಜನೆ ಹೆಸರಿಗಷ್ಟೇ ಉಳಿದಿದೆಯೆಂಬ ಆರೋಪ ರೈತ ಸಮುದಾಯದಿಂದ ಕೇಳಿಬರುತ್ತಿದೆ.

    ನಾಗರಹಾಳ ಗ್ರಾಮದ ಲ್ಯಾಟ್ರಲ್ 8ರ ಸಬ್ ಲ್ಯಾಟ್ರಲ್ 1 ಕಾಲುವೆ ಪಕ್ಕದ ದಾರಿಯಲ್ಲಿ ಸ್ಥಳೀಯ ರೈತರು ಹಾಗೂ ಕೂಲಿಕಾರ್ಮಿಕರು ಪ್ರತಿದಿನವೂ ಪರದಾಡುವಂತಾಗಿದೆ. ಈ ರಸ್ತೆಗೆ ಮರಂ ಹಾಕಿ ದುರಸ್ತಿಗೆ 10 ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ಮನವಿ ನೀಡಲಾಗಿದ್ದರೂ ಕಾರ್ಯವಿಲ್ಲ.

    ಗ್ರಾ.ಪಂ ಪಿಡಿಒ ಪ್ರವೀಣ್ ಪಾಟೀಲ ಅವರ ಮಾತಿನಂತೆ, ಈ ರಸ್ತೆಗಾಗಿ ₹5 ಲಕ್ಷ ರೂ. ಯೋಜನೆ ರೂಪಿಸಲಾಗಿತ್ತು, ಆದರೆ ಕಾಮಗಾರಿ ಕೋಲಾಪ್ಸ್ ಆಗಿದೆ ಎಂಬ ಉತ್ತರ ಕೇಳಿಬಂದಿದೆ.

    ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಲಿಂಗಸುಗೂರು ತಾಲೂಕ ಉಪಾಧ್ಯಕ್ಷ ಭೀಮಪ್ಪ ಎನ್. ಪವಾರ್, ಅಧಿಕಾರಿಗಳು ರಸ್ತೆ ದುರಸ್ಥಿಗೆ ಮುಂದಾಗದಿದ್ದರೆ ನಾವು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    apvc-iconPost Views: 38