Blog

  • ಯುವಕರು ನಶೆ ಮುಕ್ತರಾಗಿ ದೇಶಾಭಿಮಾನ ಬೆಳೆಸಿಕೊಳ್ಳಿ- ಸಿದ್ದರಾಮ 

    ಯುವಕರು ನಶೆ ಮುಕ್ತರಾಗಿ ದೇಶಾಭಿಮಾನ ಬೆಳೆಸಿಕೊಳ್ಳಿ- ಸಿದ್ದರಾಮ 

    ಸಿರವಾರ: ಹಲವು ಯುವಕರು ನಶೆ ಅಥವಾ ಮತ್ತು ಭರಿಸುವ ಅಪಾಯಕಾರಿ ಪದಾರ್ಥಗಳನ್ನು ಸೇವಿಸುವ ವ್ಯಸನಗಳಿಗೆ ಬಲಿಯಾಗಿದ್ದಾರೆ. ಇದರಿಂದ ಅವರ ಆರೋಗ್ಯ ಹಾಳಾಗುವುದಷ್ಟೇ ಅಲ್ಲ ದೇಶದ ಅಭಿವೃದ್ಧಿಯೂ ಕುಂಠಿತವಾಗುತ್ತಿದೆ. ಆದ್ದರಿಂದ ಯುವಕರು ನಶೆ ಮುಕ್ತರಾಗಿ ದೇಶಭಕ್ತಿ ಮತ್ತು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಶಾಲಾ ಮುಖ್ಯ ಗುರು ಸಿದ್ಧರಾಮ ಹೇಳಿದರು.

    ತಾಲೂಕಿನ ತುಪ್ಪದೂರು ಕೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಮಾದಕ ವ್ಯಸನಕ್ಕೆ ಬಲಿಯಾಗುತಿದ್ದು, ಇದನ್ನು ತಡೆಗಟ್ಟಲು ಪ್ರತಿಯೊಬ್ಬ ಯುವಕರು ನಶಾಮುಕ್ತ  ಜಿಲ್ಲೆಗೆ ಕೈಜೋಡಿಸಿದಾಗ ಮಾತ್ರ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

    ಯುವಕರು ಚಿಕ್ಕ ವಯಸ್ಸಿನಲ್ಲಿ ನಶೆ ತರಿಸುವ ಚಟಗಳಿಗೆ ದಾಸರಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಪಂಜಾಬ ಮತ್ತಿತರ ರಾಜ್ಯಗಳಲ್ಲಿ ಇದು ಮಿತಿಮೀರುತ್ತಿದೆ. ಇದರಿಂದ ಸಮಾಜ ಮತ್ತು ದೇಶದ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಯುವಕರೇ ದೇಶದ ಶಕ್ತಿಯಾಗಿದ್ದಾರೆ.

    ಈ ಸಂದರ್ಭದಲ್ಲಿ ಶಾಲೆಯ ಅತಿಥಿ ಶಿಕ್ಷಕರಾದ ನಾಗೇಶ ಭೋವಿ ಕುರುಡಿ, ಶಿವಪ್ಪ ನಾಯಕ ಕಲ್ಲೂರು, ಅಂಗನವಾಡಿ ಶಿಕ್ಷಕಿ ಸುಜಾತ ಮಾಚನೂರು, ಅಡುಗೆ ಸಿಬ್ಬಂದಿ ದೇವಮ್ಮ, ಬಸ್ಸಮ್ಮ, ಹುಲಿಗೆಮ್ಮ ಗ್ರಾಮದ ಯುವಕರಾದ ಹನುಮಂತ ನಾಯಕ, ರವಿ ನಾಯಕ, ಉರುಕುಂದ ನಾಯಕ, ಚೆನ್ನಯ, ಮಾರೆಪ್ಪ ನಾಯಕ, ಯಂಕಪ್ಪ ನಾಯಕ, ಯಲ್ಲಾಲಿಂಗ ನಾಯಕ, ಹುಲಿಗೇಶ ನಾಯಕ, ನಾಗರಾಜ, ಯಂಕಪ್ಪ , ದೇವಯ್ಯ ನಾಯಕ, ಯಲ್ಲಾಲಿಂಗ, ಮಹೇಶ್ ನಾಯಕ ಸೇರಿದಂತೆ ಇತರರಿದ್ದರು.

    apvc-iconPost Views: 5
  • ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಬೈಕ್ ರ್ಯಾಲಿ

    ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಬೈಕ್ ರ್ಯಾಲಿ

    ಅನೇಕ ಮಹನೀಯರ ತ್ಯಾಗದಿಂದ ನಮಗೆ ಸ್ವಾತಂತ್ರ್ಯ – ವಿಭೂತಿಹಳ್ಳಿ

    ಯಾದಗಿರಿ:- ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತ್ಯಾಗ–ಬಲಿದಾನ ನೀಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದಿದ್ದಾರೆ. ಅವರ ಸ್ಮರಣಾರ್ಥವಾಗಿ ಸರ್ಕಾರ ಹರ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಕರೆ ನೀಡಿದರು.

    ಬಿಜೆಪಿ ನಗರ ಮಂಡಲ ಯುವ ಮೋರ್ಚಾ ವತಿಯಿಂದ ವತಿಯಿಂದ ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ನಗರದ ಬಸವೇಶ್ವರ ಗಂಜ್ ಸರ್ಕಲ್  ಹತ್ತಿರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು,  ಸ್ವಾತಂತ್ರ್ಯೋತ್ಸವದ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿಯಬೇಕು. ಹೋರಾಟಗಾರರ ತ್ಯಾಗ ಮುಂದಿನ ಪೀಳಿಗೆಗೆ ತಲುಪುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

    ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ  ಮಾತನಾಡಿ ಅವರು ಸಮಾಜ ಅಭಿವೃದ್ಧಿಯಾಗಬೇಕು ಎಲ್ಲರೂ ಉತ್ತಮ ದಾರಿಯಲ್ಲಿ ಸಾಗಬೇಕು. ತಮ್ಮ ಮನೆಗಳ ಮೇಲೆ ಪಕ್ಷ ಭೇದ ಮರೆತು ರಾಷ್ಟ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
    ಈ ಸಂದರ್ಭದಲ್ಲಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ   ಪ್ರಧಾನಿ ನರೇಂದ್ರ ಮೋದಿಯವರು ಮನೆ–ಮನೆಗೆ ತಿರಂಗಾ ಹಾರಿಸುವಂತೆ ನೀಡಿರುವ ಕರೆ ಕುರಿತು ವಿವರಿಸಿದರು.

    ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ ಮಾತನಾಡಿದ ಅವರು ಜಿಲ್ಲಾ ತುಂಬಾ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ ಮೂಲಕ ಪ್ರತಿ ಜನರಲ್ಲೂ ರಾಷ್ಟ್ರಧ್ವಜದ ಜೊತೆಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೋನ್ನದ ಮತ್ತು ದೆವಿಂದ್ರಪ್ಪ ಕೊನೇರ, ಮಾರುತಿ ಕಲಾಲ್, ನಗರಸಭೆ ಉಪಾಧ್ಯಕ್ಷೆ ರುಕೀಯ್ ಬೇಗಂ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ಅಜೇಯ್ ಮಡ್ಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್, ಶ್ರೀದೇವಿ ಶೆಟ್ಟಹಳ್ಳಿ,ಕೃಷ್ಣಮೂರ್ತಿ ಕುಲಕರ್ಣಿ,ಭೀಮಣ್ಣಗೌಡ ಖ್ಯಾತನಾಳ,ನಗರಸಭೆ ಸದಸ್ಯ ವಿಲಾಸ ಪಾಟೀಲ್ ಮತ್ತು ಸುರೇಶ್ ಅಂಬಿಗೇರ,ಸ್ವಾಮಿದೇವ ದಾಸನಕೆರಿ,ವಿಜಯಲಕ್ಷ್ಮಿ ನಾಯಕ,ಮೋನೇಶ ಬೆಳಿಗೇರಿ, ರಮೇಶ್ ದೊಡಮನಿ,ಲಕ್ಷ್ಮಿಪುತ್ರ ಮಾಲಿಪಾಟೀಲ,ಅಪ್ಪಣ್ಣ ಜೈನ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಗುತ್ತೆದಾರ ಮತ್ತು ಮಲ್ಲು ಕೊಲಿವಾಡ,ರಾಜು ಸ್ವಾಮಿ,ಮರಿಲಿಂಗ  ಕರಾಟೆ,ಪವನ್ ಲಿಂಗೇರಿ, ಭೀಮ ಬಾಯಿ ಶೆಂಡಿಗಿ,ಶಕುಂತಲಾ ಜಿ,ರಾಜು ಉಪ್ಪಿನ್, ಕಾರ್ಯಾಲಯ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ ಸೇರಿದಂತೆ ಯುವ ಮೋರ್ಚಾ ಪದಾಧಿಕಾರಿಗಳ ಕಾರ್ಯಕರ್ತರು ಭಾಗಿಯಾಗಿದರು…
    apvc-iconPost Views: 22
  • ಒಳಮೀಸಲಾತಿ ವರದಿ ವಿರುದ್ಧ ಬಲಗೈ ಸಮುದಾಯದ ಬೃಹತ್ ಪ್ರತಿಭಟನೆ ನಾಳೆ

    ಒಳಮೀಸಲಾತಿ ವರದಿ ವಿರುದ್ಧ ಬಲಗೈ ಸಮುದಾಯದ ಬೃಹತ್ ಪ್ರತಿಭಟನೆ ನಾಳೆ

    ಯಾದಗಿರಿ: ನ್ಯಾ. ನಾಗಮೋಹನದಾಸ್ ಸಮಿತಿಯ ಒಳಮೀಸಲಾತಿ ವರದಿಯನ್ನು ಖಂಡಿಸಿ ಬಲಗೈ ಸಮುದಾಯವು ಆಗಸ್ಟ್‌ 14ರಂದು(ನಾಳೆ) ನಗರದ ಅಂಬೇಡ್ಕರ್‌ ನಗರದಿಂದ ಸುಭಾಷ್‌ಚಂದ್ರ ಬೋಸ್‌ ವೃತ್ತದವರೆಗೆ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

    ನಗರದ ಹಳೆ ಪ್ರವಾಸ ಮಂದಿರದಲ್ಲಿ ನಡೆದ ಸಭೆಯಲ್ಲಿ ಬಲಗೈ ಸಮುದಾಯದ 100ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ, ವರದಿಯಲ್ಲಿ ತಮ್ಮ ಸಮುದಾಯಕ್ಕೆ ಜನಸಂಖ್ಯೆಗೆ ತಕ್ಕ ಮೀಸಲಾತಿ ನೀಡದ ಮೂಲಕ ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಈ ನಿರ್ಧಾರ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಹಾನಿಕಾರಕವಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

    “ವರದಿ ಜಾರಿಯಾಗಲು ಬಿಡುವುದಿಲ್ಲ” ಎಂದು ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದು, ನಾಳೆಯ ಪ್ರತಿಭಟನೆಯಲ್ಲಿ ಜಿಲ್ಲೆಯ ಸಾವಿರಾರು ಜನರು ಆಗಮಿಸಿ  ಭಾಗವಹಿಸುವಂತೆ ಕರೆ ನೀಡಿದರು.

    ಸಭೆಯಲ್ಲಿ ಹಿರಿಯ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.

    apvc-iconPost Views: 38
  • ವಡಗೇರಾದಲ್ಲಿ ‘ಮನೆ ಮನೆಗೆ ಪೊಲೀಸ್’ ಅಭಿಯಾನ

    ವಡಗೇರಾದಲ್ಲಿ ‘ಮನೆ ಮನೆಗೆ ಪೊಲೀಸ್’ ಅಭಿಯಾನ

    ವಡಗೇರಾ: ಪೊಲೀಸ್‌ ವ್ಯವಸ್ಥೆ ಕುರಿತು ಜನರಲ್ಲಿ ಭಯ ದೂರಮಾಡಿ ಮನೆ ಬಾಗಿಲಿಗೆ ಪೊಲೀಸರು ಭೇಟಿ ನೀಡಿ ಸ್ಪಂದಿಸುವ ಸದುದ್ದೇಶದಿಂದ ಜಾರಿಗೊಳಿಸುತ್ತಿರುವ ಮನೆ ಮನಗೆ ಪೊಲೀಸ್ ಅಭಿಯಾನಕ್ಕೆ ಪಟ್ಟಣದಲ್ಲಿ ಪಿಎಸ್ಐ ಮೆಹಬೂಬ್‌ ಅಲಿ ಚಾಲನೆ ನೀಡಿದರು.
     
    ಪಟ್ಟಣದಲ್ಲಿನ  ಮನೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಪೊಲೀಸ್‌ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಆತಂಕ ದೂರ ಮಾಡಲು ಸ್ಥಳೀಯ ಪೊಲೀಸ್‌ ಸಿಬ್ಬಂದಿ ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.
     
    ಇದೇ ವೇಳೆ ಕರಪತ್ರ, ಭಿತ್ತಿಪತ್ರ ಹಂಚಿ, ಕಾನೂನು ಬಾಹಿರ ಚಟುವಟಿಕೆಗಳು, ಮಕ್ಕಳಿಗೆ ತೊಂದರೆ, ಅಥವಾ ಶಂಕಾಸ್ಪದ ಘಟನೆಗಳ ಬಗ್ಗೆ ಮುಕ್ತವಾಗಿ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳುವಂತೆ ಮನವಿ ಮಾಡಲಾಯಿತು.
     

    ಸಾರ್ವಜನಿಕರಿಗೆ ಸೈಬರ್ ಅಪರಾಧ, ಮಾದಕ ವಸ್ತು ಡ್ರಗ್ಸ್, ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಸೇರಿದಂತೆ ಸಾಮಾನ್ಯರು ಕಷ್ಟದ ಸಮಯದಲ್ಲಿ ಬಳಸಬಹುದಾದ ತುರ್ತು ಕರೆಗಳ ಬಗ್ಗೆ ನಿವಾಸಿಗಳಿಗೆ ಮಾಹಿತಿ ನೀಡಿದರು.

    ಈ ಸಂಧರ್ಭದಲ್ಲಿ ವಡಗೇರಾ ಪೊಲೀಸ್ ಠಾಣೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

    apvc-iconPost Views: 102
  • ಗೌರವಧನ ಹೆಚ್ಚಳಕ್ಕಾಗಿ ಆಶಾ ಕಾರ್ಯಕರ್ತೆಯರ  ಧರಣಿ

    ಗೌರವಧನ ಹೆಚ್ಚಳಕ್ಕಾಗಿ ಆಶಾ ಕಾರ್ಯಕರ್ತೆಯರ  ಧರಣಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಪ್ರತಿ ತಿಂಗಳು ಕನಿಷ್ಠ ₹10,000 ಗೌರವಧನ ನೀಡಬೇಕು ಮತ್ತು ಪ್ರೋತ್ಸಾಹಧನ ಸೇರಿಸಿ ಏಪ್ರಿಲ್ 2025ರಿಂದ ಜಾರಿಗೆ ತರಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ) ಯಾದಗಿರಿ ಜಿಲ್ಲಾ ಸಮಿತಿಯ ಆಶಾ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.

    ಜಿಲ್ಲಾಧ್ಯಕ್ಷೆ ಡಿ. ಉಮಾದೇವಿ ಮಾತನಾಡಿ, ಜನವರಿಯಲ್ಲಿ ಬೆಂಗಳೂರು ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹10,000 ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರೂ, ಅದು ಈವರೆಗೂ ಜಾರಿಯಾಗಿಲ್ಲವೆಂದು ಆರೋಪಿಸಿದರು. ಬಜೆಟ್ ನಲ್ಲೂ ಸಹ ಘೋಷಣೆ ಮಾಡದೆ ನಮಗೆ ಮೋಸ ಮಾಡಿದ್ದಾರೆ. ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಅದಕ್ಕಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ. ಘೋಷಣೆ ಮಾಡಿದ ೧೦ ಸಾವಿರ ಗೌರವಧನವನ್ನು ಕೂಡಲೇ ಜಾರಿಗೆ ತರಬೇಕು, ಇಲ್ಲದಿದ್ದರೆ ತೀವ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಕಾರ್ಯದರ್ಶಿ ದೇವಕ್ಕಿ ವನದುರ್ಗ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್, ಪುಷ್ಪಲತಾ, ನೀಲಮ್ಮ, ತಾಯಮ್ಮ, ಶಾಂತವ್ವ, ನಿಂಗಮ್ಮ, ಅಮೃತ, ದಾನಮ್ಮ, ಗೀತಾ, ಮೀನಾಕ್ಷಿ, ಗೌರಮ್ಮ, ಶಾರದಾದೇವಿ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಧರಣಿಯಲ್ಲಿ ಭಾಗವಹಿಸಿದರು.

    apvc-iconPost Views: 39
  • ವಡಗೇರಾ: ಗಣೇಶ ಹಬ್ಬ,ಈದ್ ಮಿಲಾದ್ ಶಾಂತಿ ಸಭೆ

    ವಡಗೇರಾ: ಗಣೇಶ ಹಬ್ಬ,ಈದ್ ಮಿಲಾದ್ ಶಾಂತಿ ಸಭೆ

    ವಡಗೇರಾ: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಶಾಂತಿ ಸಭೆಯನ್ನು ವಡಗೇರಾ ಪೊಲೀಸ್ ಠಾಣಾ ಅವರಣದಲ್ಲಿ ಆಯೋಜಿಸಲಾಗಿತ್ತು.

    ತಾಲೂಕಿನ ಕಾಡಮಗೇರಾ (ಬಿ), ತುಮಕೂರು, ಐಕೂರು ಗ್ರಾಮಗಳ ಸಮುದಾಯ ಮುಖಂಡರು ಸಭೆಯಲ್ಲಿ ಭಾಗವಹಿಸಿದರು.

    ಪಿಎಸ್ಐ ಮಹಿಬೂಬ್ ಅಲಿ ಮಾತನಾಡಿ – ಗಣೇಶ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆ ಕಡ್ಡಾಯ, ಮೂರ್ತಿ ಪ್ರತಿಷ್ಠಾಪನೆ ಬಳಿಕ ಪ್ರತಿದಿನ ಮೂರ್ತಿಯನ್ನು ಕಾಯಲು 1–2 ಮಂದಿ ಕಡ್ಡಾಯವಾಗಿ ಇರತಕ್ಕದ್ದು, ವಿಸರ್ಜನೆ ವೇಳೆ ಕರ್ಕಶ ಡಿಜೆ ನಿಷೇಧ ಎಂದು ಸ್ಪಷ್ಟ ಸೂಚನೆ ನೀಡಿದರು.

    ಈದ್ ಮಿಲಾದ್ ಮೆರವಣಿಗೆಯೂ ಶಾಂತಿಯುತವಾಗಿರಬೇಕು, ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಶಾಂತ ರೀತಿಯಿಂದ ಯಾವುದೇ ಧರ್ಮಕ್ಕೆ ತೊಂದರೆಯಾಗದಂತೆ, ಹಿಂದೂ–ಮುಸ್ಲಿಂ ಸಹೋದರತ್ವ ಕಾಪಾಡಬೇಕು ಎಂದು ತಿಳಿಸಿದರು.

    apvc-iconPost Views: 105
  • ಸೂಗಯ್ಯ ಸ್ವಾಮಿ ನಾಪತ್ತೆ ಪ್ರಕರಣ: ಚನ್ನಪಟ್ಟಣ ಶಾಂತಗೌಡ ಆರೋಪ ಗಂಭೀರ ಆರೋಪ

    ಸೂಗಯ್ಯ ಸ್ವಾಮಿ ನಾಪತ್ತೆ ಪ್ರಕರಣ: ಚನ್ನಪಟ್ಟಣ ಶಾಂತಗೌಡ ಆರೋಪ ಗಂಭೀರ ಆರೋಪ

    ಯಾದಗಿರಿ: 2022ರ ಜನವರಿಯಿಂದ ನಾಪತ್ತೆಯಾಗಿರುವ ಸುರಪುರ ತಾಲೂಕಿನ ರೈತ ಕುಟುಂಬದ ಸೂಗಯ್ಯ ಸ್ವಾಮಿ ಪ್ರಕರಣ (ಕೈಂ. ನಂ. 30/2022) ತನಿಖೆಯಲ್ಲಿ ಪೊಲೀಸ್ ಇಲಾಖೆ ಗಂಭೀರ ನಿರ್ಲಕ್ಷ್ಯ ವಹಿಸಿದ್ದು, ಅಧಿಕಾರಿಗಳು ರಾಜಕೀಯ ಮತ್ತು ಹಣಬಲಕ್ಕೆ ಮಣಿದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯಾಧ್ಯಕ್ಷ ಚನ್ನಪಟ್ಟಣ ಶಾಂತಗೌಡ ಗಂಭೀರ ಆರೋಪ ಮಾಡಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೂಗಯ್ಯ ಸ್ವಾಮಿ ಅವರು ಯಾದಗಿರಿ ಜಿಲ್ಲೆಯ ಪ್ರಭಾವಿಶಾಲಿ ಜೈನ್ ಸಹೋದರರಿಗೆ 25 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಗ್ಯಾನಚಂದ್ ಜೈನ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ, ಜೈನ್ ಸಹೋದರರು ಸುಪಾರಿ ಕೊಟ್ಟು ಸೂಗಯ್ಯನನ್ನು ಕೊಲ್ಲಿಸಿದ ಶಂಕೆ ವ್ಯಕ್ತವಾಗಿದೆ.

    ಪ್ರಕರಣ ದಾಖಲಾಗಿ ಮೂರು ವರ್ಷವಾದರೂ, ತನಿಖೆಯಲ್ಲಿ ಯಾವುದೇ ಪ್ರಗತಿ ಇಲ್ಲ. ಶಾಂತಗೌಡ ಅವರ ದೂರಿನ ಪ್ರಕಾರ, ಇದೇ ಜೈನ್ ಸಹೋದರರ ವಿರುದ್ಧ 2019ರಲ್ಲಿ ಕಲಬುರ್ಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ (ಕ್ರೈಂ. ನಂ. 83/2019) ದಾಖಲಾದರೂ, ಕೇವಲ ಒಂದು ತಿಂಗಳಲ್ಲಿ ‘ಬಿ ಅಂತಿಮ ತರದಿ’ ಸಲ್ಲಿಸಿ ಮುಚ್ಚಲಾಗಿದೆ ಎಂದರು.

    ಇದಲ್ಲದೆ, ಸೂಗಯ್ಯ ಸ್ವಾಮಿಯ ಪತ್ನಿ ಅವರ ಹೆಸರಿನ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಮಾರಾಟಕ್ಕೆ ಮುಂದಾಗಿರುವುದು, ಕುಟುಂಬದವರು ನಾಪತ್ತೆ ಪ್ರಕರಣದ ವಿಚಾರದಲ್ಲಿ ಆಸಕ್ತಿ ತೋರದಿರುವುದು — ಇವೆಲ್ಲವೂ ಹಣಬಲ ಮತ್ತು ರಾಜಕೀಯ ಬಲದ ಪ್ರಭಾವದ ಸೂಚನೆ ಎಂದು ಶಾಂತಗೌಡ ಆರೋಪಿಸಿದ್ದಾರೆ.

    ಸತ್ಯವನ್ನು ಬೆಳಕಿಗೆ ತರುವುದೇ ನನ್ನ ನೈತಿಕ ಕರ್ತವ್ಯ ಎಂದು ಶಾಂತಗೌಡ ಹೇಳಿದ್ದು, ಪ್ರಕರಣವನ್ನು ಗಂಭೀರವಾಗಿ ಪುನರ್‌ ತನಿಖೆ ಮಾಡಲು ಪೊಲೀಸರು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

    ಈ ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷೀಕಾಂತ ಪಾಟೀಲ್, ಯಾದಗಿರಿ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ಜಿಲ್ಲಾ ಉಪಾಧ್ಯಕ್ಷ ಸುಭಾಷ್ ನಡುವಿನಕೇರಿ, ತಾಲೂಕು ಅಧ್ಯಕ್ಷ ಮಹಿಪಾಲ ರೆಡ್ಡಿ ಕಟಗಿ ಶಹಾಪುರ, ಅಶೋಕ್ ನಾಯಕ, ಭಾಷಾ ಕುರಕುಂಧಿ, ಮಲ್ಲಿಕಾರ್ಜುನ, ರೆಡ್ಡಿ ಖಾನಾಪುರ ಸೇರಿದಂತೆ ಇನ್ನಿತರರು ಇದ್ದರು.

    apvc-iconPost Views: 56
  • ಹರ್ ಘರ್ ತಿರಂಗಾ ಬೈಕ್ ರ್ಯಾಲಿಗೆ ಚಾಲನೆ

    ಹರ್ ಘರ್ ತಿರಂಗಾ ಬೈಕ್ ರ್ಯಾಲಿಗೆ ಚಾಲನೆ

    ಗುರುಮಠಕಲ್ : ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೋಮವಾರ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬೈಕ್ ರ್ಯಾಲಿ ಜರುಗಿತು.

    ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಸುದ್ದಿಗರರೊಂದಿಗೆ ಮಾತನಾಡಿದ ಯಾದಗಿರಿ ನಗರಸಭೆಯ ಅಧ್ಯಕ್ಷೆಯೂ ಆಗಿರುವ ಪಕ್ಷ ಮುಖಂಡೆ ಲಲಿತಾ ಅನಪುರ ಅವರು, ಆಗಸ್ಟ್ 15ರಂದು ಸ್ವಾತಂತ್ರ್ಯ ದಿನೋತ್ಸವದ ಹಿನ್ನಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ ಆಯೋಜಿಸಿರುವುದಾಗಿ ಅವರು ತಿಳಿಸಿದರು.

    ಅಭಿಯಾನದಲ್ಲಿ ಪ್ರತಿ ಮನೆಯಲ್ಲೂ ಆಗಸ್ಟ್ 15ರಂದು ಬೆಳಿಗ್ಗೆ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜಾರೋಹಣ ಮಾಡುವುದು ಮತ್ತು ಗೌರವ ಪೂರ್ವಕವಾಗಿ ಸಂಜೆ ವೇಳೆ ಅವರೋಹಣವನ್ನೂ ಮಾಡಬೇಕು. ಜತೆಗೆ ಧ್ವಜವನ್ನು ಅತ್ಯಂತ ಗೌರವದಿಂದ ಮನೆಯಲ್ಲಿ ಸಂರಕ್ಷಿಸಿಡಬೇಕು. ರಾಷ್ಟ್ರ ಧ್ವಜಕ್ಕೆ ಅವಮಾನವಾಗುವಂತೆ ಎಲ್ಲೆಂದರಲ್ಲಿ ಬಿಸುಡದಿರಿ ಎಂದು ಕೋರಿದರು.

    ಬಸವೇಶ್ವರ ವೃತ್ತದಲ್ಲಿ (ಹಳೇ ತಹಶೀಲ್ದಾರ್ ಕಚೇರಿ) ನಿಜಶರಣ ಅಂಬಿಗರ ಚೌಡಯ್ಯ ವೃತ್ತ, ಗಂಗಾಪರಮೇಶ್ವರ ವೃತ್ತ, ನಗರೇಶ್ವರ ದೇವಸ್ಥಾನ, ನಾರಾಯಣಪುರ ಬಡಾವಣೆ, ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಡಾ.ಬಾಬೂಜೀ ಮೂರ್ತಿಗಳಿಗೆ ಹೂಮಾಲೆ ಹಾಕುವ ಮೂಲಕ ಬೈಕ್ ರ್ಯಾಲಿ ಪೂರ್ಣಗೊಂಡಿತು.

    ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗುರು ಕಾಮಾ, ನೀಲಪ್ಪ ಗುಳಿಗಿ, ಯುವ ಮೋರ್ಚಾ ಅಧ್ಯಕ್ಷ ಶ್ರೀಧರ, ಮಂಡಲ ಘಟಕದ ಅಧ್ಯಕ್ಷ ನರಸಿಂಹುಲು ನಿರೇಟಿ, ಕೆ.ದೇವದಾಸ, ವೆಂಕಟಪ್ಪ ಅವಾಂಗಪುರ, ಮಲ್ಲಿಕಾರ್ಜುನ ಹೊನಗೇರಾ, ಚಂದುಲಾಲ್ ಚೌದರಿ, ಜಗದೀಶ ಮೇಂಗಜಿ, ಮೌನೇಶ ಬೆಳಗೇರಾ, ವಿನಾಯಕರಾವ ಜನಾರ್ಧನ, ರಾಜೇಂದ್ರ ಕಲಾಲ್, ಮಲ್ಲೇಶಪ್ಪ ಬೇಲಿ, ರವೀಂದ್ರರೆಡ್ಡಿ ಪೋತುಲ್, ರಾಮುಲು, ಮರಿಲಿಂಗ, ಲಕ್ಷ್ಮಣ ಆಶನಾಳ, ಬಾಲಪ್ಪ, ಸುನೀಲ್ ಕಡೇಚೂರ ಚನ್ನಪ್ಪ ಕಾಕಲವಾರ. ರಮೇಶ್ ಕಾಕಲವಾರ ಉಪಸ್ಥಿತರಿದ್ದರು.

    apvc-iconPost Views: 41
  • ವಾಲ್ಮೀಕಿ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ – ಮಗ್ದಂಪುರ

    ವಾಲ್ಮೀಕಿ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ – ಮಗ್ದಂಪುರ

    ಸತ್ಯಕಾಮ ವಾರ್ತೆ ಯಾದಗಿರಿ: 

    ವಾಲ್ಮೀಕಿ ಸಮಾಜದ ಪ್ರಮುಖ ಬೇಡಿಕೆಗಳು ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಯಲು ನಗರದ ತಹಶಿಲ್ದಾರರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಬೃಹತ್ ಪ್ರಮಾಣ ರ್ಯಾಲಿ ಮುಖಾಂತರ ಹೋರಾಟ ಮಾಡಲಾಗುತ್ತದೆ ಎಂದು ಉತ್ತರ ಕರ್ನಾಟಕ ವಾಲ್ಮೀಕಿ ಸಮಾಜದ ಅಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪುರ ಹೇಳಿದರು.

    ಪತ್ರಿಕೆ ಹೇಳಿಕೆ ನೀಡಿ ಮಾತನಾಡಿದ ಅವರು ಈ ಬೃಹತ್ ಪ್ರಮಾಣದ ಹೋರಾಟವನ್ನು ದಾವಣಗೇರ ವಾಲ್ಮೀಕಿ ಗುರು ಪೀಠದ ಜಗದ್ಗುರು ಪ್ರಸನ್ನನಂದ ಸ್ವಾಮಿಜಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ಈ ಹೋರಾಟದಲ್ಲಿ ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಹಾಗೂ ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ವಾಲ್ಮೀಕಿ ಸಮಾಜದ ಭಾಂದವರು ಸುಮಾರು ಐದು ಸಾವಿರ ಜನರು ಈ ಹೋರಾಟದಲ್ಲಿ ಭಾಗವಸಲಿದ್ದಾರೆ ಎಂದರು.

    ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಚಿವರನ್ನು ನೇಮಿಸದೆ ನಮ್ಮ ಸಮಾಜಕ್ಕೆ ಬರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಆಕಿ ತುಳಿತಕ್ಕೆ ಓಳಗಾದ ಸಮಾಜವನ್ನು ಮೂಲೆ ಗುಂಪು ಮಾಡುತ್ತಿರು ಸರ್ಕಾರದ ವಿರುದ್ಧ ಬೃಹತ್ ಹೋರಾಟವನ್ನು ಆಯೋಜಿಸಿದ್ದೇವೆ

    ಪರಿಶಿಷ್ಟ ಪಂಗಡದ ಸಮಾಜದ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕರ್ನಾಟಕ ರಾಜ್ಯದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

    apvc-iconPost Views: 41
  • ನೂತನ ಎಸ್.ಡಿ.ಎಮ್.ಸಿ ಅಸ್ತಿತ್ವಕ್ಕೆ

    ನೂತನ ಎಸ್.ಡಿ.ಎಮ್.ಸಿ ಅಸ್ತಿತ್ವಕ್ಕೆ

    ಗುರುಮಠಕಲ್: ಸರಕಾರಿ ಭಾಷಾ ಅಲ್ಪಸಂಖ್ಯಾತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿ-ಎಂಸಿ) ಅಸ್ತಿತ್ವಕ್ಕೆ ತರಲಾಯಿತು. ಆಯಾಸ್ ಅಲಿ ತಂ ತಾಹೆರ್ ಅಲಿ -ಅಧ್ಯಕ್ಷರು, ವೆಂಕಟಮ್ಮ ತಂದೆ ನಾರಾಯಣ – ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

    ಸಮಿತಿಯು 18 ಸದಸ್ಯರನ್ನು ಒಳಗೊಂಡಿರುತ್ತದೆ. 8 ಪುರುಷ ಸದಸ್ಯರು ಮತ್ತು 8 ಜನ ಮಹಿಳಾ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಮುಖ್ಯ ಗುರುಗಳಾದ ಅನುರಾಧ ತಿಳಿಸಿದ್ದಾರೆ.

    ಸಮೂಹ ಸಂಪನ್ಮೂಲ ವ್ಯಕ್ತಿ ಬಾಲಪ್ಪ ಸೇರಿದಂತೆ ಶಾಲೆಯ ಸಿಬ್ಬಂದಿ, ಎಲ್ಲ ಪಾಲಕ ಬಳಗ ಉಪಸ್ಥಿತರಿದ್ದರು.

    apvc-iconPost Views: 211