Blog

  • ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ

    ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಾಕವೇಲ್‌ದಿಂದ ಫೀಲ್ಟರ್ ಬೆಡ್‌ಗೆ ಹೋಗುವ ಮುಖ್ಯ ರೈಸಿಂಗ್ ಪೈಪ್ ಲೈನ್ ಲಿಕೇಜ ಆಗುತ್ತಿದ್ದು, ಇದರಿಂದ ಅಪಾರ ಪ್ರಮಾಣ ನೀರು ಪೋಲಾಗುತ್ತಿದ್ದು, ಈ ಲಿಕೇಜನ್ನು ರಿಪೇರಿ ಮಾಡುವ ಅವಶ್ಯಕತೆ ಇರುವುದರಿಂದ 2025ರ ಸೆಪ್ಟೆಂಬರ್ 2 ರಿಂದ 3ರ ವರೆಗೆ ನೀರು ಸರಬರಾಜು ಮಾಡುವುದಕ್ಕೆ ಆಗುವುದಿಲ್ಲ ನಗರದ ಸಾರ್ವಜನಿಕರು ಸಹಕರಿಸಬೇಕೆಂದು ಯಾದಗಿರಿ ನಗರಸಭೆ ಪೌರಾಯುಕ್ತರು ಉಮೇಶ ಚವ್ಹಾಣ ಅವರು ತಿಳಿಸಿದ್ದಾರೆ.

    apvc-iconPost Views: 20
  • ಗಣೇಶ ಹಬ್ಬ: ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ

    ಗಣೇಶ ಹಬ್ಬ: ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪಟ್ಟಣದಲ್ಲಿ ಗಣೇಶ ಚತುರ್ಥಿ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಿ. ಐ. ವೀರಣ್ಣ ದೊಡ್ಡಮನಿ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು.

    ಪಟ್ಟಣದ ಪೊಲೀಸ್ ಠಾಣೆಯಿಂದ ಪಥ ಸಂಚಲನ ಆರಂಭವಾಗಿ ಗಂಗಾ ಪರಮೇಶ್ವರಿ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಮಲ್ಲಯ್ಯ ಕಟ್ಟ, ನಗರೇಶ್ವರ ದೇವಸ್ಥಾನ, ಚೌಡಿ ಕಟ್ಟ ಮಾರ್ಗವಾಗಿ ಬೀಡಿಕೆ ಕಟ್ಟದಿಂದ ಪೊಲೀಸ್ ಠಾಣೆಗೆ ತಲುಪಿ ಮುಕ್ತಾಯಗೊಂಡಿತು.

    ಬಳಿಕ ಮಾತನಾಡಿದ ಅವರು, ಪಟ್ಟಣದಲ್ಲಿ ಗೌರಿ ಗಣೇಶ ಹಬ್ಬವನ್ನು ಯಾವುದೇ ರೀತಿಯ ಅನಾಹುತಗಳು ಆಗದಂತೆ ಶಾಂತಿಯುತವಾಗಿ ಆಚರಿಸಬೇಕು. ಈ ಕಾರಣದಿಂದ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಥಸಂಚಲನ ನಡೆಸಲಾಯಿತು ಎಂದರು.

    ಗಣೇಶ ಮೂರ್ತಿ ಮೆರವಣಿಗೆ ಮತ್ತು ಮೂರ್ತಿ ವಿಸರ್ಜಿಸುವ ಸಮಯದಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು. ಶಾಂತಿ ಕದಡುವ ಕೆಲಸವನ್ನು ಯಾರಾದರೂ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಇದೇ ಸಂಧರ್ಭದಲ್ಲಿ ಇತ್ತೀಚೆಗೆ ತೆಲಂಗಾಣ ರಾಜ್ಯದ ಕರೀಂ ನಗರದಲ್ಲಿ ಗಣಪತಿ ತರುವ ವೇಳೆ 10ಕ್ಕೂ ಹೆಚ್ಚು ಗಣೇಶ ಮಂಡಳಿಯವರು ವಿದ್ಯುತ್ ಶಾಕ್ ನಿಂದ ಮೃತ ಪಟ್ಟ ಘಟನೆ ನೆನೆದ ಅವರು, ಸುರಕ್ಷತೆ ಕಾಪಾಡಿಕೊಂಡು ಹಬ್ಬ ಆಚರಿಸಿ ಎಂದರು.

    apvc-iconPost Views: 7
  • ಸೈಬರ್ ವಂಚನೆ ಕೇಸ್: ವಕೀಲರ ಖಾತೆಯಿಂದ 3.37 ಲಕ್ಷ ರೂ. ಗುಳುಂ

    ಸೈಬರ್ ವಂಚನೆ ಕೇಸ್: ವಕೀಲರ ಖಾತೆಯಿಂದ 3.37 ಲಕ್ಷ ರೂ. ಗುಳುಂ

    ಸತ್ಯಕಾಮ ವಾರ್ತೆ ಯಾದಗಿರಿ:

    ನಗರದ ವಕೀಲರೊಬ್ಬರ ಬ್ಯಾಂಕ್ ಖಾತೆಯಿಂದ ದುಷ್ಕರ್ಮಿಗಳು ಅಂತರಜಾಲದ ಮೂಲಕ ರೂ. 3.37 ಲಕ್ಷ ಮೊತ್ತವನ್ನು ವಂಚಿಸಿರುವ ಪ್ರಕರಣ ಯಾದಗಿರಿ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ ಅಪರಾಧ (ಸಿ.ಇ.ಎನ್) ಠಾಣೆಯಲ್ಲಿ ದಾಖಲಾಗಿದೆ.

    ಮಾತಾ ಮಾಣಿಕೇಶ್ವರಿ ನಗರದ ನಿವಾಸಿ, ವೃತ್ತಿಯಲ್ಲಿ ವಕೀಲರಾದ ಬಸವರಾಜ ಆರ್. ಹಾಲಗೇರ್ (48) ಅವರು ಸಲ್ಲಿಸಿದ ದೂರಿನ ಪ್ರಕಾರ ಆಗಸ್ಟ್‌ 04 ರಂದು ಅವರ ಮೊಬೈಲ್ ನಂಬರ ಇದ್ದಕ್ಕಿದ್ದಂತೆ ನಿಷ್ಕ್ರಿಯಗೊಂಡಿತು. ನಂತರ ಆಧಾರ್ OTP ಬರದೆ ಸಮಸ್ಯೆ ಎದುರಾದ್ದರಿಂದ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ, ಆ. 06 ಮತ್ತು 07 ರಂದು ಅನಾಮಿಕರು ಅವರ ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2 ಲಕ್ಷ ರೂ., 1.17 ಲಕ್ಷ ರೂ., 19,500 ರೂ. ಹಾಗೂ 700 ರೂ. ಮೊತ್ತವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಘಟನೆಯ ನಂತರ ಬಸವರಾಜ ಅವರು ತಕ್ಷಣವೇ ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ದಾಖಲಿಸಿದ್ದು, ನಂತರ ಬ್ಯಾಂಕ್‌ಗೆ ಲಿಖಿತ ಅರ್ಜಿ ಸಲ್ಲಿಸಿ ತಮ್ಮ ಖಾತೆ ಬಂದ್ ಮಾಡಿಕೊಂಡಿದ್ದಾರೆ.

    ಆ. 27 ರಂದು ವಕೀಲ ಬಸವರಾಜ ಅವರು ಸ್ವತಃ ಸಿ.ಇ.ಎನ್ ಠಾಣೆಗೆ ತೆರಳಿ ಗಣಕೀಕೃತ ದೂರು ಸಲ್ಲಿಸಿದ್ದು, ಪೊಲೀಸರು ಗುನ್ನೆ ನಂ. 21/2025ರಲ್ಲಿ ಐಟಿ ಕಾಯ್ದೆ ಸೆಕ್ಷನ್ 66(D) ಹಾಗೂ ಬಿಎನ್‌ಎಸ್ ಕಾಯ್ದೆ ಸೆಕ್ಷನ್ 318(4), 319 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    apvc-iconPost Views: 69
  • ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

    ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

    ಯಾದಗಿರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕರ್ನಾಟಕ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸರ್ಕಾರದ ಆದೇಶಾನುಸಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳು ಮತ್ತು ಇತರೆ ಜಾತಿ/ಉಪಜಾತಿಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ದಿನಾಂಕ: 22.08.2025 ರಂದು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಯಾವುದೇ ಜಾತಿ/ಉಪಜಾತಿಗಳು ಬಿಟ್ಟು ಹೋಗಿದ್ದಲ್ಲಿ, ಅಂತಹ ಅಂಶಗಳ ಬಗ್ಗೆ ಸಲಹೆ, ಸೂಚನೆಗಳು ಇದ್ದಲ್ಲಿ, 07 ದಿನಗಳ ಒಳಗೆ ನೀಡಲು ಕೋರಲಾಗಿತ್ತು.

    ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಈ ಅವಧಿಯನ್ನು ವಿಸ್ತರಿಸಲು ಕೋರಿರುವ ಕಾರಣ, ಈ ಬಗ್ಗೆ ಸಲಹೆ/ಸೂಚನೆ ಮನವಿಗಳನ್ನು ನೀಡುವ ಅವಧಿಯನ್ನು ದಿನಾಂಕ: 01.09.2025 ರ ಸಂಜೆ 5.00 ಘಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಈ ಮೂಲಕ ಪ್ರಕಟಿಸಲಾಗಿದೆ. ಸಂಗ್ರಹಿಸಲಾದ ಜಾತಿ/ಉಪಜಾತಿಗಳ ಪಟ್ಟಿಯನ್ನು ಸೆಪ್ಟೆಂಬ‌ರ್ ತಿಂಗಳಲ್ಲಿ ಪ್ರಾರಂಭವಾಗಲಿರುವ ಸಮೀಕ್ಷೆಗಾಗಿ ಮಾತ್ರ ಉಪಯೋಗಿಸಲಾಗುವುದು.

    ಸಾರ್ವಜನಿಕರು ತಮ್ಮ ಸಲಹೆ/ಸೂಚನೆ/ ಮನವಿಗಳನ್ನು ಸದಸ್ಯ ಕಾರ್ಯದರ್ಶಿಗಳು,ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂ.16, ಡಿ.ದೇವರಾಜ ಅರಸು ಭವನ,ಮಿಲ್ಲರ್ಸ್ ಟ್ಯಾಂಕ್ ಬಂಡ್ ಪ್ರದೇಶ, ವಸಂತ ನಗರ,ಬೆಂಗಳೂರು ಅಥವಾ kscbcb@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ.ಹೆಚ್ಚಿನ‌ವಿವರಗಳಿಗೆ ದೂ.ಸಂಖ್ಯೆ 080-29506668 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

    apvc-iconPost Views: 18
  • ಕಾನೂನಿನ ಚೌಕಟ್ಟಿನಲ್ಲಿ ಹಬ್ಬಗಳು ಆಚರಿಸಿ – ವೀರಣ್ಣ ದೊಡ್ಡಮನಿ

    ಕಾನೂನಿನ ಚೌಕಟ್ಟಿನಲ್ಲಿ ಹಬ್ಬಗಳು ಆಚರಿಸಿ – ವೀರಣ್ಣ ದೊಡ್ಡಮನಿ

    ಗುರುಮಠಕಲ್: ಮಾದಕ ದ್ರವ್ಯ ಬಳಕೆಯನ್ನು ತಡೆಗಟ್ಟಲು ಒಟ್ಟಾಗಿ ಹೋರಾಡಬೇಕಾದ ಅಗತ್ಯವಿದೆ ಹಾಗೂ ಹಬ್ಬಗಳನ್ನು ಶಾಂತಿಯುತವಾಗಿ ಸಂಭ್ರಮಿಸಿ ಆಚರಿಸಿ ಎಂದು ಗುರುಮಠಕಲ್ ಪಿ. ಐ. ವೀರಣ್ಣ ದೊಡ್ಡಮನಿ ಹೇಳಿದರು.

    ತಾಲೂಕಿನ ಪಸ್ಪುಲ್ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಊರಿನ ಮುಖಂಡರೊಂದಿಗೆ ಜಾಗೃತಿ ಕಾರ್ಯಕ್ರಮ ನಡೆಸಿ ಅರಿವು ಮೂಡಿಸಿ ಕಾನೂನಿನ ಸೂಚನೆಗಳನ್ನು ಅವರಿಗೆ ತಿಳಿಸಿದರು.

    ನಶೆ ಮುಕ್ತ ಭರತದಂತಹ ಅಭಿಯಾನಗಳಿಂದ ಮಾದಕ ದ್ರವ್ಯ ವಿರುದ್ಧದ ಹೋರಾಟಗಳನ್ನು ಮತ್ತಷ್ಟು ಶಕ್ತಿಯುತಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ಅದರಲ್ಲೂ ಯುವಪೀಳಿಗೆ ಹೆಚ್ಚು ಗಮನ ಹರಿಸಬೇಕಿದೆ. ಇಂತಹ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕಿದೆ ಎಂದರು.

    ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಊರಿನ ಮುಖಂಡರುಗಳು ಹೆಚ್ಚಿನ ಜಾಗೃತೆ ವಹಿಸಿ ಕಾನೂನಿನ ಚೌಕಟ್ಟಿನಲ್ಲಿ ಹಬ್ಬ ಆಚರಿಸಲು ಸೂಚಿಸಿದರು.

    ಹಬ್ಬಗಳು ನಮ್ಮಲ್ಲಿ ಸಡಗರ ಸಂಭ್ರಮ ಹೆಚ್ಚಿಸಿ ಸೌಹಾರ್ದ ಬೆಳೆಸುತ್ತವೆ. ಆದರೆ ಕೆಲವರ ಅತಿರೇಕತನದಿಂದ ಸೌಹಾರ್ದಕ್ಕೆ ಪೆಟ್ಟು ಬೀಳುತ್ತದೆ. ಅಂತಹ ಅವಕಾಶಕ್ಕೆ ಯಾವುದೇ ಸಂಘಟನೆಯವರು ಅವಕಾಶ ನೀಡದೇ ಕಾನೂನು ರೀತಿ ಆಚರಿಸಬೇಕು. ಗಣೇಶ ಪ್ರತಿಷ್ಠಾಪನೆಗಾಗಿ ಸ್ಥಳೀಯ ಆಡಳಿತ, ಜೆಸ್ಕಾಂ, ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಅನುಮತಿ ಪಡೆಯುವುದು ಕಡ್ಡಾಯವೆಂದರು.

    apvc-iconPost Views: 33
  • RSS ಗೀತೆ ಹಾಡಿದ್ರೆ CM ಸೀಟ್ ಸಿಗೋದಾದರೆ? ನಾವು ಇಬ್ಬರೂ ಹಾಡ್ತೀವಿ! – ಜಾರಕಿಹೊಳಿ ವ್ಯಂಗ್ಯ

    RSS ಗೀತೆ ಹಾಡಿದ್ರೆ CM ಸೀಟ್ ಸಿಗೋದಾದರೆ? ನಾವು ಇಬ್ಬರೂ ಹಾಡ್ತೀವಿ! – ಜಾರಕಿಹೊಳಿ ವ್ಯಂಗ್ಯ

    ಯಾದಗಿರಿ : ಆರ್ ಎಸ್ ಎಸ್ ಗೀತೆ ಹಾಡಿದರೇ ಮುಖ್ಯಮಂತ್ರಿ ಸ್ಥಾನ ಸಿಗುವಂಗ ಇದ್ದರೇ ನಾನು ಶಾಸಕ ಚನ್ನಾರಡ್ಡಿ ಪಾಟೀಲ್ ಇಬ್ಬರು ಹಾಡುತ್ತೆವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ವ್ಯಂಗ್ಯವಾಡಿದರು.

    ಇಲ್ಲಿನ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಂಸ್ಕ್ರತ ಭಾಷೆ ಚನ್ನಾಗಿ ಬಲ್ಲವರಾಗಿದ್ದಾರೆ. ಸಂಧರ್ಭಕ್ಕೆ ಅನುಸಾರವಾಗಿ ಅಧಿವೇಶನದಲ್ಲಿ ಹಾಡಿದ್ದಾರೆ ಅಷ್ಠೆ, ಬಿಜೆಪಿ ನಾಯಕ ಬಿ.ಎಲ್. ಸಂತೋಷ ಅವರನ್ನು ಟೀಕಿಸಿದ ಮಹೇಶ ತಿಮುರುಡಿ ಅವರನ್ನು ಒದ್ದು ಒಳಗೆ ಹಾಕಿದ್ದವೆ ಎಂಬ ಮಾತು ಕೂಡಾ ದೂರು ಬಂದ ಹಿನ್ನಲೆಯಲ್ಲಿ ಹೇಳಿದ್ದಾಗಿದೆ. ಈ ಎರಡನ್ನು ಬೇರೆ ರೀತಿಯಲ್ಲಿ ಹೊಲಿಕೆ ಮಾಡುವುದು ಸರಿಯಲ್ಲ ಎಂದರು.

    ಮುಂದಿನ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿ ನಡೆಯುತ್ತಾ ಎಂಬ ಪ್ರಶ್ನೆಗೆ ಅಂತಹದ್ದು ಏನು, ಅದೆಲ್ಲ ಪಕ್ಷದ ಕೇಂದ್ರ ಸಮಿತಿಗೆ ಬಿಟ್ಟಿದ್ದು ಎಂದರು. ಮಾಜಿ ಸಚಿವ ರಾಜಣ್ಣ ಅವರು ದೆಹಲಿಗೆ ಹೋಗಿ ನಾಯಕರನ್ನು ಭೇಟಿ ಮಾಡಿ ಆಗಿರುವ ಘಟನೆ ವಿವರಿಸುತ್ತಾರೆ, ಮುಂದಿನದು ಹೈಕಮಾಂಡಗೆ ಬಿಟ್ಟಿದ್ದು ಎಂದರು. ವಾಲ್ಮೀಕಿ ಸಮುದಾಯವನ್ನು ತುಳಿಯುವ ಕೆಲಸ ಈ ಸರ್ಕಾರ ಮತ್ತು ಪಕ್ಷದಿಂದ ನಡೆಯುತ್ತಿದೆ ಎಂಬುವುದು ಸುಳ್ಳು ಎಂದರು.

    ಬೇರೆಯವರಂತೆಯೇ ನಮ್ಮ ನಾಯಕ ರಾಹುಲ್ ಗಾಂಧಿ ಅವರು ರಿವೆಂಜ್ ಪಾಲಿಟಿಕ್ಸ್ ಮಾಡುವವರಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಬುರುಡೆ ಚಿನ್ನಯ್ಯ ಅರೆಸ್ಟ್ ಆದ ಬಗ್ಗೆ ಕೇಳಿದ ಪ್ರಶ್ನೆಗೆ ಧರ್ಮಸ್ಥಳ ಒಂದು ಊರು. ಅದೇನು ರಾಜ್ಯ, ರಾಷ್ಟ್ರದ ಸಮಸ್ಯೆ ಅಲ್ಲ. ಕೋರ್ಟ್ ಆದೇಶದಂತೆಯೇ ಸರ್ಕಾರ ತನಿಖೆ ನಡೆಸಿದೆ. ಅದರಿಂದ ಏನೇನು ಹೊರಬರಬೇಕು ಅದು ಬರುತ್ತದೆ. ನೀವೇ ಅದು ದೊಡ್ಡದಾಗಿ ನಿತ್ಯ ಬಿಂಬಿಸುತ್ತಿದ್ದಿರಿ ಎಂದು ಮಾಧ್ಯಮದವರ ಕಡೆ ಸಚಿವರು‌ ಬೊಟ್ಟು ಮಾಡಿದರು.

    ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಇದ್ದರು.

    ಬೆಳೆ ಹಾನಿ: ಸಮೀಕ್ಷೆ ವರದಿ ನಂತರ ಪರಿಹಾರ ವಿತರಣೆ.

    ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ವರದಿ ಕೊಟ್ಟ ನಂತರ ಪರಿಹಾರ ವಿತರಣೆಯಾಗುತ್ತದೆ. ಈ ಸರ್ಕಾರದಲ್ಲಿ ಇದುವರೆಗೂ ಒಂದು ಬ್ರೀಜ್ ನಿರ್ಮಿಸಿಲ್ಲ. ಈಗ ಆ ಕೆಲಸ ಶುರು ಮಾಡುತ್ತವೆ. ಹೊಸ ಸೇತುವೆಗಳ ನಿರ್ಮಾಣ, ಶಿಥಿಲಗೊಂಡ ಸೇತುವೆಗಳ ದುರಸ್ತಿ ಕೆಲಸ ಕೈಗೊಳ್ಳಲಾಗುವುದು.
    ನಕಲಿ ಜಾತಿ ಪ್ರಮಾಣ‌ ನೀಡುವುದನ್ನು ಜಿಲ್ಲಾಧಿಕಾರಿಗಳು ತಡೆಯುತ್ತಾರೆ ಎಂದು ಸಚಿವ ಜಾರಕಿಹೊಳಿ ಹೇಳಿದರು.

    apvc-iconPost Views: 307
  • ಎರಡು ವರ್ಷ ಕಾಣದಂತೆ ಮಾಯವಾದ ಸೋಲ್ಡ್ ಔಟ್ ಸಾಯಿಬಣ್ಣ ಬೋರಬಂಡಾ

    ಎರಡು ವರ್ಷ ಕಾಣದಂತೆ ಮಾಯವಾದ ಸೋಲ್ಡ್ ಔಟ್ ಸಾಯಿಬಣ್ಣ ಬೋರಬಂಡಾ

    ಯಾದಗಿರಿ: ಕರ್ನಾಟಕ ಅಧಿವೇಶನದಲ್ಲಿ ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಕ್ಷೇತ್ರದ ಸಮಸ್ಯೆಗಳ ಬಗ್ಗೆ, ಕಲ್ಯಾಣ ಕರ್ನಾಟಕದ ಧ್ವನಿಯಾಗಿ ಅಭಿವೃದ್ದಿ ಬಗ್ಗೆ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುವುದನ್ನು ಪ್ರಶ್ನಿಸಿದ ಸೋಲ್ಡ್ ಔಟ್ ಸಾಯಿಬಣ್ಣ ಬೋರಬಂಡಾ ನೀವು ಯಾವ ಪಕ್ಷದಲ್ಲಿ ಇರುತ್ತೀರಿ ಅಂತ ನಿಮಗೆ ಗೊತ್ತಿಲ್ಲಾ ಎಂದು ಜೆಡಿಎಸ್ ಯಾದಗಿರಿ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಪ್ರಶ್ನಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವಿಧಾನಸಭೆ ಚುನಾವಣೆಯ ನಂತರ ಹಲವು ದಿನಗಳಿಂದ ನಾಪತ್ತೆಯಾಗಿರುವ ನೀವು ಈಗ ಯಾವ ಪಕ್ಷದಲ್ಲಿದ್ದೀರಿ, ಒಂದ್ ವರ್ಷ ಬಿಜೆಪಿ, ಒಂದ್ ವರ್ಷ ಕಾಂಗ್ರೆಸ್ ಅಂತ ತಿರುಗುವ ನೀವು ಮೊದಲು ಯಾವ ಪಕ್ಷದಲ್ಲಿದ್ದೀರಿ ಎಂದು ಜನತೆಗೆ ತಿಳಿಸಿ, ಆ ನಂತರ ನೀವು ನಮ್ ಶಾಸಕರ ಬಗ್ಗೆ ಹೇಳಿಕೆ ನೀಡಿ, ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವ, ಹೇಳಿಕೆ ನೀಡುವ ಚಾಳಿಬಿಟ್ಟು ಅಭಿವೃದ್ಧಿ ಪರ ಮಾತನಾಡುವ ಶಾಸಕರಿಗೆ ಬೆಂಬಲ ಕೊಡುವುದನ್ನು
    ಕಲಿಯಿರಿ ಎಂದು ತಿಳಿಹೇಳಿದ್ದಾರೆ.

    ಅಧಿವೇಶನದ ಸಂದರ್ಭಗಳಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ ಶಾಸಕರ ಕೆಲಸ ಅದನ್ನು ಅವರು ಸರಿಯಾಗಿ ಮಾಡುತ್ತಿದ್ದಾರೆ, ಕಳೆದ ಹಲವು ದಶಕಗಳವರೆಗೆ ಗುರುಮಠಕಲ್ ಕ್ಷೇತ್ರದಿಂದಲೇ
    ಆಯ್ಕೆಯಾಗಿ ಹೋದವರು ಇಲ್ಲಿಯ ವರೆಗೂ ಯಾರು ಅಧಿವೇಶನದಲ್ಲಿ ಧ್ವನಿ ಎತ್ತಿಲ್ಲಾ ಎನ್ನುವುದು ನಿಮಗೆ ನೆನಪಿರಲಿ ಎಂದಿದ್ದಾರೆ.

    ಹತ್ತಿಕುಣಿ ಮತ್ತು ಸೌದಾಗರ ಜಲಾಶಯಗಳ ಬಗ್ಗೆ ಸದನದಲ್ಲಿ ರೈತರ ಪರವಾಗಿ ಧ್ವನಿ ಎತ್ತಿ ಆ ಡ್ಯಾಂಗಳ ಅಭಿವೃದ್ಧಿಗಾಗಿ ಸರ್ಕಾರದ ಗಮನ ಸೆಳೆದರೆ ತಮಗೇಕೆ ಸಿಟ್ಟು ಆ ಭಾಗದ ಜನರ ಅಭಿವೃದ್ಧಿ ನಿಮಗೆ ಬೇಡವೆ ಇದನ್ನಿಟ್ಟುಕೊಂಡು ನೀವು ಹೇಳಿಕೆ ನೀಡಿದ್ದೀರಿಲ್ಲ
    ಜನರ ಅಭಿವೃದ್ಧಿಗಾಗಿ ಸದನದಲ್ಲಿ ಧ್ವನಿ ಎತ್ತಿರುವುದರಲ್ಲಿ ತಪ್ಪೇನಿದೆ ಎಂಬುದು ನೀವೇ ಹೇಳಬೇಕು ಎಂದಿದ್ದಾರೆ.

    ವಿಧಾಸಭೆ ಅಧಿವೇಶನದಲ್ಲಿ ನಮ್ಮ ಭಾಗದ ಧ್ವನಿಯಾಗಿ ನಮ್ ಶಾಸಕರು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ದೃಷ್ಠಿಕೋನವನ್ನಿಟ್ಟುಕೊಂಡು ಮಾತನಾಡುತ್ತಾರೆ, ಅದರಲ್ಲಿ ನಮ್ಮ ಗುರುಮಠಕಲ್ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಅವರ ಅಭಿವೃದ್ಧಿ ಸಹಿಸದ ನೀವು ಇಲ್ಲ ಸಲ್ಲದ ಹೇಳಿಕೆ ನೀಡುತ್ತಾ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾ ಕಾಲಹರಣ ಮಾಡುತ್ತಿರುವ ನೀಮ್ಮಿಂದ ನಮ್ ಶಾಸಕರು ಕಲಿಯಬೇಕಾಗಿಲ್ಲಾ, ನಮ್ ಶಾಸಕರು ಸದನದಲ್ಲಿ ಮಾತನಾಡಿದಾಗ ಪಕ್ಷಾತೀತವಾಗಿ ರಾಜ್ಯದ ಹಲವು ಶಾಸಕರು ಬೆಂಬಲ ನೀಡುತ್ತಿದ್ದಾರೆ ಅಂತದರಲ್ಲಿ ನೀವು ಯಾದಗಿರಿ ಜಿಲ್ಲೆಯವರಾಗಿ ವಿರೋಧ ಹೇಳಿಕೆ ನೀಡುತ್ತಿದ್ದೀರಿಲ್ಲ ಇದರಲ್ಲೆ ತಿಳಿಯುತ್ತೆ ನಿಮ್ಮ ಮೂರ್ಖತನದ ಬುದ್ದಿ. ನೀವು ಇದೆ ರೀತಿ ಮುಂದುವರೆಸಿದರೆ ನಾವು ನಿಮ್ಮ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    apvc-iconPost Views: 362
  • ಅಕಾಲಿಕ ಮಳೆಯಿಂದ ಹಾಳಾದ ಬೆಳೆಗಳಿಗೆ ಪರಿಹಾರ ನೀಡಲು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಮನವಿ

    ಅಕಾಲಿಕ ಮಳೆಯಿಂದ ಹಾಳಾದ ಬೆಳೆಗಳಿಗೆ ಪರಿಹಾರ ನೀಡಲು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಮನವಿ

    ಯಾದಗಿರಿ : ವಾಯುಭಾರ ಕುಸಿತದಿಂದಾಗಿ ಒಂದು ವಾರದವರೆಗೂ ಸುರಿದ ಸತತ ಮಳೆಗೆ ಜಿಲ್ಲೆಯ ರೈತರು ಬಿತ್ತಿದ ಹೆಸರು, ತೊಗರಿ ಮತ್ತು ಹತ್ತಿ ಇತರೆ ಬೆಳೆಗಳು ಹಾಳಾಗಿದ್ದು, ಈಗ ಆರಂಭಿಸಲಿರುವ ಸಮೀಕ್ಷೆ ಬೇಗನೆ ಮುಗಿಸಿ ಹಾನಿಗೊಳಗಾದ ರೈತರಿಗೂ ಹಾಗೂ ಮನೆಗಳು ಕುಸಿದು ಸೂರು ಕಳೆದಕೊಂಡವರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಶುಕ್ರವಾರ ಅಧಿವೇಶನದಲ್ಲಿ ಮಾತನಾಡಿದ ಅವರು, ಈ ಬೆಳೆಗಳು ರಾಶಿ ಹಂತಕ್ಕೆ ಬಂದಿದ್ದವು, ಇದಕ್ಕೆ ಸಿದ್ದರಾಗಿದ್ದ ರೈತರಿಗೆ ಈ ಮಳೆ ಬರಸಿಡಿಲು ಬಡಿದಂತೆಯೇ ಆಗಿದೆ.

    ಹೆಸರು ರೈತರ ಮಿತ್ರ ಬೆಳೆ. 40 ದಿನಗಳಲ್ಲಿ ಕೈಸೇರುವ ಇದು ಮಾರಿ ಮುಂದಿನ ಬೆಳೆ ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದರು. ಆದರೇ ಅವರ ಕನಸು ನುಚ್ಚುನೂರಾಗಿದೆ. ಕಾರಣ ರೈತರು ಉಳಿದರೇ ಎಲ್ಲರೂ ಉಳಿದಂತೇ. ಕಾರಣ ತ್ವರಿತಗಯಲ್ಲಿ ಸಮೀಕ್ಷೆ ನಡೆಸಿ ಪರಿಹಾರ ವಿತರಿಸುವ ಆಗಬೇಕೆಂದು ಶಾಸಕರು ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಜಿಲ್ಲೆಯ ಆರು ತಾಲೂಕುಗಳಲ್ಲಿ ಮಳೆಯಿಂದ ಮನೆಗಳು ಕುಸಿದಿವೆ. ಇದರಿಂದ ಬಡವರ ಬದುಕು ಬೀದಿಗೆ ಬಂದಿದೆ. ಕಾರಣ, ಸಂಬಂಧಪಟ್ಟ ಅಧಿಕಾರಿಗಳಿಂದ ಇದರ ಸಮೀಕ್ಷೆ ಕೂಡಾ ನಡೆಸಿ ಪರಿಹಾರ ನೀಡಬೇಕೆಂದು ತುನ್ನೂರು ಮನವಿ ಮಾಡಿದ್ದಾರೆ.

    apvc-iconPost Views: 368
  • ಬಾವಿಯಲ್ಲಿ ಬಿದ್ದು ಮೃತಪಟ್ಟ ಬಾಲಕನ ಶವ ಪರೀಕ್ಷೆ

    ಬಾವಿಯಲ್ಲಿ ಬಿದ್ದು ಮೃತಪಟ್ಟ ಬಾಲಕನ ಶವ ಪರೀಕ್ಷೆ

    ಹುಣಸಗಿ: ತಾಲೂಕಿನ ಜೋಗುಂಡಬಾವಿ ಗ್ರಾಮದಲ್ಲಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ 17 ವರ್ಷದ ಜಗದೀಶ ಎಂಬ ಬಾಲಕನ ಶವವನ್ನು ಹೊರತೆಗೆಸಿ ಮರು ಶವಪರೀಕ್ಷೆ ನಡೆಸಲಾಯಿತು.

    ಜಗದೀಶ, ಯಮನಪ್ಪ ಇಂಗಳಗಿ ಮತ್ತು ದುರ್ಗವ್ವ ದಂಪತಿ ಪುತ್ರ. ಏಪ್ರಿಲ್ 23ರಂದು ಗ್ರಾಮದ ಹಣಮಂತ ಅವರ ಜಮೀನಿನ ಬಾವಿಗೆ ಈಜಾಡಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ನಂತರ ಪೋಷಕರು ಹೊಲದಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ್ದರು.

    ಆದರೆ ಜುಲೈ 12ರಂದು ಮಗನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ತಂದೆ ಯಮನಪ್ಪ ಅವರು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಪ್ರಕಾರ ಪೋಷಕರ ಸಮ್ಮುಖದಲ್ಲಿ ತಹಶೀಲ್ದಾರ್ ಎಂ. ಬಸವರಾಜ ಅವರ ನೇತೃತ್ವದಲ್ಲಿ ಶವವನ್ನು ಹೊರತೆಗೆಸಿ ಶವಪರೀಕ್ಷೆ ನಡೆಸಲಾಯಿತು. ಈ ವೇಳೆ ಪಿಎಸ್‌ಐ ರಾಜಶೇಖರ ಹಾಗೂ ವೈದ್ಯರು ಉಪಸ್ಥಿತರಿದ್ದರು.

    apvc-iconPost Views: 74
  • ಬಲವಂತದ ದೇಣಿಗೆ ಬೇಡ: ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ

    ಬಲವಂತದ ದೇಣಿಗೆ ಬೇಡ: ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಮುಂಬರುವ ಗೌರಿ–ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ರಸ್ತೆಯಲ್ಲಿ ಗುಂಪುಕಟ್ಟಿಕೊಂಡು ವಾಹನಗಳನ್ನು ತಡೆದು ಬಲವಂತವಾಗಿ ದೇಣಿಗೆ ಸಂಗ್ರಹಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಸಿದೆ.

    ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ, ಹಬ್ಬದ ಸಂದರ್ಭಗಳಲ್ಲಿ ಕೆಲವು ಸಮಿತಿಗಳ ಸದಸ್ಯರು ರಸ್ತೆಗಳಲ್ಲಿ ಗುಂಪು ಸೇರಿ, ವಾಹನ ಸವಾರರಿಗೆ ಅಡಚಣೆ ಉಂಟುಮಾಡಿ ಬಲವಂತವಾಗಿ ಹಣ ಬೇಡುವ ಘಟನೆಗಳು ನಡೆಯುತ್ತಿರುವುದಾಗಿ ತಿಳಿಸಿದೆ. ಇಂತಹ ಕೃತ್ಯಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದರೊಂದಿಗೆ ರಸ್ತೆ ಅಪಘಾತಗಳ ಸಂಭವ ಹೆಚ್ಚಾಗುತ್ತದೆ ಎಂದು ಎಚ್ಚರಿಸಲಾಗಿದೆ.

    ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನೀಡಿದರೆ ಮಾತ್ರ ದೇಣಿಗೆಯನ್ನು ಸ್ವೀಕರಿಸಲು ಸೂಚನೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ರಸ್ತೆ ತಡೆದು ಹಣ ಸಂಗ್ರಹಿಸುವಂತಿಲ್ಲ ಎಂದು ತಿಳಿಸಿದೆ.

    ಗೌರಿ–ಗಣೇಶ ಹಬ್ಬವನ್ನು ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಹಬ್ಬವನ್ನು ನೆರವೇರಿಸಲು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಮ್ಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

    apvc-iconPost Views: 97