ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ ನಾಡ ಹಬ್ಬಕ್ಕೆ ಚಾಲನೆ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾದ ರಂಗAಪೇಟಿಯ ಕನ್ನಡ ಸಾಹಿತ್ಯ ಸಂಘದ ೮೩ ನೇ ವರ್ಷದ ನಾಡ ಹಬ್ಬಕ್ಕೆ ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ಭುವನೇಶ್ವರಿ ದೇವಿ ಮೂರ್ತಿಗೆ ಯಜ್ಙೇಶ್ವರ ಭಟ್ ಅವರು ನಾಡದೇವಿಗೆ ಪೂಜೆ ಸಲ್ಲಿಸಿದ ನಂತರ ಪ್ರಸಾದ ವಿತರಿಸಿದರು.
ಭೀಮಾನದಿ ತೀರದ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ
ಭೀಮಾನದಿ ತೀರದ ಹಲವು ಗ್ರಾಮಗಳಲ್ಲಿ ಪ್ರವಾಹದಿಂದ ಬೆಳೆ ಹಾನಿ ಸಂಭವಿಸಿದ್ದು, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಂಗಳವಾರ ಜೋಳದಡಗಿ ಹಾಗೂ ಶಿವನೂರು ಗ್ರಾಮಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿದರು.
ಸಮೀಕ್ಷೆ ವೇಳೆ ಹೆಮ್ಮಯಿಂದ ಮಾದಿಗ ಎಂದು ಬರೆಸಿ – ನೀಲೇಶ್ ಕೊಯಿನಿ
ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ನಡೆಸಲಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು ತಪ್ಪದೆ ಭಾಗವಹಿಸಿ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಮಾದಿಗ ಎಂದೇ ನಮೂದಿಸಬೇಕು, ಕೋಡ್ 61– ಮಾದಿಗ’ ಎಂದು ತಾಲೂಕ ಮಾದಿಗ ದಂಡೋರ ಕಾರ್ಯದರ್ಶಿ ನೀಲೇಶ್ ಕೊಯಿನಿ…
ಗುಣಮಟ್ಟದ ಕೆಲಸದೊಂದಿಗೆ ನಿಗದಿತ ಅವಧಿಯಲ್ಲಿ ಮುಗಿಸಿ: ಶಾಸಕ ಪಾಟೀಲ್ ಸೂಚನೆ
ಗುಣಮಟ್ಟ ಕಾಮಗಾರಿ ಆಗಬೇಕು ಮತ್ತು ನಿಗದಿತ ಅವಧಿಯಲ್ಲಿ ಮುಗಿಸಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ಸೆ.15 ರಂದು ಇಂಜಿನಿಯರ್ ದಿನಾಚರಣೆ: ಭೀಮಣ್ಣಗೌಡ ಕ್ಯಾತನಾಳ
ಇಲ್ಲಿನ ಕನ್ಟಟ್ರೆಕ್ಷನ್ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ನಿಂದ ನಗರದ ವಿವೇಕಾನಂದ ನಗರದ ತಾಯಮ್ಮ ದೇವಿ, ಹನುಮಾನ ಹಾಗೂ ಈಶ್ವರ ದೇವಾಲಯದ ಸಭಾಂಗಣದಲ್ಲಿ ಸೆ. 15 ರಂದು ಮಧ್ಯಾಹ್ನ 12 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಅವರ 164 ಜನ್ಮದಿನದಂಗವಾಗಿ ಇಂಜಿನಿಯರ್ ಡೇ…
ಗಣಪತಿ ಸರ್ಕಾರಕ್ಕೆ ಸದ್ಬುದ್ದಿ ನೀಡಲಿ : ಶಾಸಕ ಕಂದಕೂರ
ಅನ್ನದಾತರನ್ನು ಆ ಭಗವಂತ ಗಣೇಶ ಕಾಪಾಡಲಿ, ಅತಿವೃಷ್ಠಿಯಿಂದ ಹಾನಿಗೀಡಾದ ಪರಿಹಾರ ನೀಡಲು ಸರ್ಕಾರಕ್ಕೆ ಗಣಪತಿ ದೇವ ಸದ್ಬುದ್ದಿ ಕೊಡಲಿ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಧಾರಾಕಾರ ಮಳೆ – ಕೆರೆಯಂತಾದ ಶಾಲಾ ಆವರಣ
ನಗರದ ವಿವಿಧೆಡೆ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಬ್ರಹ್ಮಪುರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸಂಪೂರ್ಣವಾಗಿ ಮಳೆನೀರಿನಿಂದ ಕೇರೆಯಂತಾಗಿದ್ದು, ಶಾಲೆಗೆ ತೆರಳಿದ ಮಕ್ಕಳು ಪರದಾಡುವಂತಾಗಿದೆ.
ಜಾತಿ ಸಮೀಕ್ಷೆಯಲ್ಲಿ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಿಸಿ : ಮಹೇಶ ವಿಶ್ವಕರ್ಮ
ಇದೇ ಸೆ.22 ರಿಂದ ಆರಂಭವಾಗಲಿರುವ ಜಾತಿ ಸಮೀಕ್ಷೆ ವೇಳೆ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ಜಿಲ್ಲಾಧ್ಯಕ್ಷ ಮಹೇಶ ವಿಶ್ವಕರ್ಮ ತಿಳಿಸಿದ್ದಾರೆ.
ಬಾಲ್ಯ ವಿವಾಹ: ಪೋಕ್ಸೋ ಕೇಸ್ ದಾಖಲು
ಜಿಲ್ಲೆಯ ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಐದು ಮಂದಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಗ್ಯಾರಂಟಿ ಯೋಜನೆಗಳಿಂದ ಜನ ಸಂತೃಪ್ತರಾಗಿದ್ದಾರೆ- ಬಾಬುರಾವ್ ಚಿಂಚನಸೂರು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇಂದು ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ ರಾಜ್ಯದ ಜನತೆ ಲಾಭ ಪಡೆಯುತ್ತಿದ್ದಾರೆ, ಇದರಿಂದ ಜನ ಸಂತೃಪ್ತರಾಗಿದ್ದಾರೆ ಎಂದು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.
