Blog

  • ರಾಜ್ಯದ ಜನತೆಗೆ ಮಹತ್ವದ ಮಾಹಿತಿ : ಜಾತಿ ಗಣತಿ ಸಮೀಕ್ಷೆಯಲ್ಲಿ ನಿಮ್ಮ ಸಹಕಾರ ಅಗತ್ಯ

    ರಾಜ್ಯದ ಜನತೆಗೆ ಮಹತ್ವದ ಮಾಹಿತಿ : ಜಾತಿ ಗಣತಿ ಸಮೀಕ್ಷೆಯಲ್ಲಿ ನಿಮ್ಮ ಸಹಕಾರ ಅಗತ್ಯ

    ರಾಜ್ಯದ ಜನಸಂಖ್ಯೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಅರಿಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಈಗ ಅಂತಿಮ ಹಂತ ತಲುಪಿದೆ. ಈ ಸಮೀಕ್ಷೆಯು ಕೇವಲ ಅಂಕಿ-ಅಂಶಗಳ ಸಂಗ್ರಹಣೆಯಷ್ಟೇ ಅಲ್ಲ, ಮುಂದಿನ ದಶಕಗಳಲ್ಲಿ ರಾಜ್ಯದ ಶಿಕ್ಷಣ, ಉದ್ಯೋಗ ಮತ್ತು ಕಲ್ಯಾಣ ಯೋಜನೆಗಳ ರೂಪರೇಖೆ ನಿರ್ಧರಿಸುವ ಅತ್ಯಂತ ಮಹತ್ವದ ಹಂತವಾಗಿದೆ. ಸಮಗ್ರ ಮಾಹಿತಿಯ ಆಧಾರದ ಮೇಲೆ ಸರ್ಕಾರ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ವಿವಿಧ ಸಮುದಾಯಗಳ ಅಭಿವೃದ್ಧಿಗೆ ಸ್ಪಷ್ಟ ದಿಕ್ಕು ನೀಡಲು ಈ ಸಮೀಕ್ಷೆಯು ಪೂರಕವಾಗಲಿದೆ.

    ಸಮೀಕ್ಷೆಯ ವೇಳೆ ಕೆಲ ಮನೆಗಳು ಬಿಟ್ಟುಹೋಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ, ನಿಮ್ಮ ಮನೆಗೆ ಸಮೀಕ್ಷಾಧಿಕಾರಿಗಳು ಭೇಟಿ ನೀಡದಿದ್ದರೆ ತಕ್ಷಣವೇ 8050770004 ಗೆ ಕರೆ ಮಾಡಿ, ನಿಮ್ಮ ಕುಟುಂಬದ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಸರ್ಕಾರ ನಾಗರಿಕರನ್ನು ವಿನಂತಿಸಿದೆ. ನಾಗರಿಕರ ಸಹಕಾರದಿಂದ ಮಾತ್ರ ಈ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.

    ಸಮೀಕ್ಷಾ ಅವಧಿ ವಿಸ್ತರಣೆ ಯಾಕೆ?:

    ಸಮೀಕ್ಷಾ ಕಾರ್ಯ ಆರಂಭವಾದ ನಂತರ ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಸವಾಲುಗಳು ಎದುರಾಗಿದ್ದವು. ವಿವರಗಳನ್ನು ನೇರವಾಗಿ ಮೊಬೈಲ್ ಆಪ್‌ಗಳ ಮೂಲಕ ದಾಖಲಿಸುವ ವ್ಯವಸ್ಥೆ ಇರಲಿದ್ದು, ಕೆಲವೆಡೆ ಇಂಟರ್ನೆಟ್ ಸಂಪರ್ಕದ ಸಮಸ್ಯೆ ಎದುರಾದ ಕಾರಣ ಪ್ರಾರಂಭಿಕ ಹಂತ ನಿಧಾನಗತಿಯಲ್ಲಿ ನಡೆಯಿತು.

    ಅದೇ ರೀತಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ಬಾರಿ ಶಿಕ್ಷಕರ ಬದಲು ಸರ್ಕಾರಿ ನೌಕರರನ್ನು ಸಮೀಕ್ಷೆಗೆ ನಿಯೋಜಿಸಲಾಗಿತ್ತು. ದೀಪಾವಳಿ ರಜಾ ಅವಧಿಯಲ್ಲಿ ಅವರು ಲಭ್ಯರಾಗದ ಕಾರಣದಿಂದ ಸಮೀಕ್ಷಾ ಅವಧಿಯನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಹೆಚ್ಚು ಕುಟುಂಬಗಳನ್ನು ಒಳಗೊಂಡಂತೆ ಸಮೀಕ್ಷೆಯನ್ನು ನಿಖರವಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಸಲಾಗುತ್ತಿದ್ದು, ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಸಾಧ್ಯತೆಗಳು ಇವೆ.

    ಆತುರದಲ್ಲಿ ಸಮೀಕ್ಷೆ ನಡೆಯುತ್ತಿದೆಯೇ? ಸರ್ಕಾರದ ಸ್ಪಷ್ಟನೆ:

    ಸಮೀಕ್ಷೆ ಕಾರ್ಯವನ್ನು ವೇಗಗೊಳಿಸಲು ಸರ್ಕಾರವು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿದೆ. ಆರಂಭಿಕ ಹಂತದಲ್ಲಿ 3–4 ವಿಭಿನ್ನ ಆಪ್‌ಗಳನ್ನು ಅಭಿವೃದ್ಧಿಪಡಿಸಿ ಪರೀಕ್ಷಿಸಲಾಯಿತು. ಅವುಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಕೆಲವು ದಿನಗಳು ಬೇಕಾದ್ದರಿಂದ ಪ್ರಾರಂಭದಲ್ಲಿ ವಿಳಂಬ ಉಂಟಾಯಿತು.

    ಇದಲ್ಲದೆ, ಶಿಕ್ಷಕರಿಗೆ ಸಮೀಕ್ಷೆಯ ಜವಾಬ್ದಾರಿಯನ್ನು ನೀಡಿದಾಗ, ಅವರಿಗೆ ಮೊದಲಿನಿಂದಲೇ ಅಗತ್ಯ ತರಬೇತಿ ಮತ್ತು ಉತ್ಸಾಹದ ಕೊರತೆ ಇತ್ತು. ನಂತರ ಸರ್ಕಾರವು ಅವರಿಗೆ ತರಬೇತಿ ನೀಡಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿತು. ಇದೇ ವೇಳೆ, ಕೆಲವು ಮಾಧ್ಯಮಗಳಲ್ಲಿ ಸಮೀಕ್ಷೆ ನಡೆಯುತ್ತಿಲ್ಲ ಎಂಬ ತಪ್ಪು ಮಾಹಿತಿಗಳು ಹರಡಿದ್ದರಿಂದ ಪ್ರಾರಂಭಿಕ ಹಂತದಲ್ಲಿ ಗೊಂದಲ ಉಂಟಾಯಿತು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ನಿಮ್ಮ ಸಹಕಾರವೇ ಸಮೀಕ್ಷೆಯ ಯಶಸ್ಸು:

    ಈ ಸಮೀಕ್ಷೆ ಕೇವಲ ಒಂದು ಸರ್ಕಾರಿ ಪ್ರಕ್ರಿಯೆಯಲ್ಲ, ಅದು ಭವಿಷ್ಯದ ಪೀಳಿಗೆಯ ಶಿಕ್ಷಣ, ಉದ್ಯೋಗ ಹಾಗೂ ಕಲ್ಯಾಣದ ದಿಕ್ಕನ್ನು ನಿಗದಿಪಡಿಸುವ ಪ್ರಮುಖ ಹಂತ. ನಿಮ್ಮ ಮನೆಯಲ್ಲಿ ಸಮೀಕ್ಷಾಧಿಕಾರಿಗಳು ಭೇಟಿ ನೀಡಿದಾಗ ನಿಖರ ಮಾಹಿತಿಯನ್ನು ನೀಡುವುದು ನಾಗರಿಕರ ಕರ್ತವ್ಯ. ಮನೆಯನ್ನು ಬಿಟ್ಟು ಹೋಗಿದ್ದರೆ 8050770004 ಈ ಸಂಖ್ಯೆಗೆ ಕರೆ ಮಾಡಿ ತಕ್ಷಣ ಮಾಹಿತಿ ನೀಡಿ.

    apvc-iconPost Views: 38
  • ರಾಜ್ಯಾದ್ಯಂತ 1200 ಚದರಡಿ ಮನೆಗಳಿಗೆ ಓಸಿ ವಿನಾಯಿತಿ: ಸಚಿವ ಸಂಪುಟದ ಮಹತ್ವದ ನಿರ್ಧಾರ

    ರಾಜ್ಯಾದ್ಯಂತ 1200 ಚದರಡಿ ಮನೆಗಳಿಗೆ ಓಸಿ ವಿನಾಯಿತಿ: ಸಚಿವ ಸಂಪುಟದ ಮಹತ್ವದ ನಿರ್ಧಾರ

    ರಾಜ್ಯದ ಸಾವಿರಾರು ಗೃಹಮಾಲೀಕರಿಗೆ ಸರ್ಕಾರದಿಂದ ದೊಡ್ಡ ಸಡಗರದ ಸುದ್ದಿ ಬಂದಿದೆ. ಮನೆಯ ನಿರ್ಮಾಣದ ನಂತರ ಕಡ್ಡಾಯವಾಗಿ ಪಡೆಯಬೇಕಾದ ಆಕ್ಯುಪೆನ್ಸಿ ಸರ್ಟಿಫಿಕೇಟ್‌ (OC) ಅಥವಾ ಸ್ವಾಧೀನಾನುಭವ ಪತ್ರವನ್ನು ಪಡೆಯಲು ಈಗ ಅನೇಕ ಸಣ್ಣಮಟ್ಟದ ಮನೆಮಾಲೀಕರು ಎದುರಿಸುತ್ತಿದ್ದ ತಾಂತ್ರಿಕ ಅಡೆತಡೆಗಳು ಹಾಗೂ ಕಾನೂನು ಗೊಂದಲಗಳಿಗೆ ಸರ್ಕಾರ ಶಾಶ್ವತ ಪರಿಹಾರ ನೀಡಲು ಮುಂದಾಗಿದೆ.

    ಇದುವರೆಗೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಷ್ಟೇ ಜಾರಿಗೆ ಇದ್ದ 1200 ಚದರಡಿ ವಿಸ್ತೀರ್ಣದ ಒಳಗಿನ ಮನೆಗಳಿಗೆ ಓಸಿ ವಿನಾಯಿತಿ ನೀತಿಯನ್ನು ಈಗ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಕ್ರಮದಿಂದ ರಾಜ್ಯದಾದ್ಯಂತ ಸಾವಿರಾರು ಮನೆಗಳಿಗೆ ಕಾನೂನುಬದ್ಧ ಮಾನ್ಯತೆ ದೊರಕುವ ಸಾಧ್ಯತೆ ಇದೆ.

    ಏನಿದು ನಿರ್ಧಾರ?:

    ಬೆಂಗಳೂರು ನಗರದಲ್ಲಿ 30×40 ಅಡಿ (ಸುಮಾರು 1,200 ಚದರ ಅಡಿ) ಒಳಗಿನ ಮನೆಗಳಿಗೆ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣವಾಗಿದ್ದರೂ, ಅವುಗಳಿಗೆ ಓಸಿ ನೀಡದೇ ಇರಲು ಅನೇಕ ವರ್ಷಗಳಿಂದ ತೊಂದರೆ ಉಂಟಾಗುತ್ತಿತ್ತು. ಇದರಿಂದ ನೀರು, ವಿದ್ಯುತ್‌ ಮುಂತಾದ ಮೂಲಭೂತ ಸೌಕರ್ಯಗಳ ಸಂಪರ್ಕ ಪಡೆಯುವಲ್ಲಿ ನಾಗರೀಕರು ಕಷ್ಟ ಅನುಭವಿಸುತ್ತಿದ್ದರು.

    ಇದಕ್ಕೆ ಪರಿಹಾರವಾಗಿ, ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಈ ತರದ ಮನೆಗಳಿಗೆ ಓಸಿ ವಿನಾಯಿತಿ ನೀಡುವ ನೀತಿಯನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿತ್ತು. ಅದೇ ಮಾದರಿಯನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳು, ನಗರಸಭೆಗಳು ಹಾಗೂ ಪುರಸಭೆಗಳು ವ್ಯಾಪ್ತಿಯಲ್ಲಿಯೂ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

    ಯಾರಿಗೆ ಅನ್ವಯಿಸುತ್ತದೆ?:

    1,200 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳು.

    ನಕ್ಷೆ ಮಂಜೂರಾತಿ ಪಡೆಯದೇ ನಿರ್ಮಿಸಿದ ಮನೆಗಳು.

    ನೆಲಮಹಡಿ + 2 ಅಂತಸ್ತು, ಸ್ಟಿಲ್ಟ್ + 3 ಅಂತಸ್ತಿನವರೆಗೆ ನಿರ್ಮಿಸಲಾದ ವಸತಿ ಕಟ್ಟಡಗಳು.

    ಈ ತರದ ಮನೆಗಳಿಗೆ ಈಗಿನಿಂದ ಮುಂದೆ ಸ್ವಾಧೀನಾನುಭವ ಪತ್ರ ಕಡ್ಡಾಯವಿಲ್ಲದೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

    ಸುಪ್ರೀಂ ಕೋರ್ಟ್ ಸೂಚನೆ:

    ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶದ ಹಿನ್ನೆಲೆಯಲ್ಲಿ, ಈ ನಿರ್ಧಾರವನ್ನು ಸರಳವಾಗಿ ಜಾರಿಗೊಳಿಸುವಂತೆಯೂ, ಯಾವುದೇ ಕಾನೂನು ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದಿಂದ ಅನುಷ್ಠಾನಾತ್ಮಕ ಆದೇಶ ಹೊರಬಂದ ನಂತರ, ನಕ್ಷೆ ಮಂಜೂರಾತಿ ಪಡೆಯದ ನಿರ್ದಿಷ್ಟ ಮನೆಗಳಿಗೂ ಈ ವಿನಾಯಿತಿ ಅನ್ವಯವಾಗಲಿದೆ.

    ಈ ನಿರ್ಧಾರದಿಂದ, ಅನಧಿಕೃತವಾಗಿ ನಿರ್ಮಿಸಲ್ಪಟ್ಟ ಸಾವಿರಾರು ಸಣ್ಣಮಟ್ಟದ ಮನೆಗಳಿಗೆ ಕಾನೂನು ಮಾನ್ಯತೆ ದೊರೆಯುತ್ತದೆ.

    ನೀರು ಮತ್ತು ವಿದ್ಯುತ್‌ ಸಂಪರ್ಕ ಸುಗಮಗೊಳ್ಳುತ್ತದೆ. ಮನೆಮಾಲೀಕರಿಗೆ ದಾಖಲೆ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ. ನಗರಾಭಿವೃದ್ಧಿ ಇಲಾಖೆಯ ಕೆಲಸವೂ ಸರಳವಾಗುತ್ತದೆ.

    ಸರ್ಕಾರದ ಈ ನಿರ್ಧಾರ ರಾಜ್ಯದ ಅನೇಕ ಸಣ್ಣಮಟ್ಟದ ಮನೆಮಾಲೀಕರಿಗೆ ದೊಡ್ಡ ಶಾಂತಿ ನೀಡುವ ನಿರೀಕ್ಷೆಯಿದೆ. ಮನೆ ನಿರ್ಮಿಸಿದರೂ ಕಾನೂನು ಪ್ರಕ್ರಿಯೆಗಳ ಕೊರತೆಯಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದವರಿಗೆ ಇದು ನಿಜವಾದ ಗುಡ್ ನ್ಯೂಸ್ (Good News) ಆಗಿದೆ.

    apvc-iconPost Views: 86
  • ರುಚಿಗಿಂತ ಆರೋಗ್ಯ ಮುಖ್ಯ! ಚಿಕನ್‌ನ ಈ ಭಾಗಗಳು ನಿಮ್ಮ ದೇಹಕ್ಕೆ ಹಾನಿಕಾರಕ

    ರುಚಿಗಿಂತ ಆರೋಗ್ಯ ಮುಖ್ಯ! ಚಿಕನ್‌ನ ಈ ಭಾಗಗಳು ನಿಮ್ಮ ದೇಹಕ್ಕೆ ಹಾನಿಕಾರಕ

    ಇಂದಿನ ದಿನಮಾನದಲ್ಲಿ ಚಿಕನ್‌ ಮಾಂಸವು ಭಾರತೀಯರ ಅಡುಗೆಮನೆಯಲ್ಲಿ ಅಷ್ಟೇನೂ ಹೊಸ ಪದಾರ್ಥವಲ್ಲ. ನಗರಗಳಲ್ಲಿಯೂ ಗ್ರಾಮಾಂತರ ಪ್ರದೇಶಗಳಲ್ಲಿಯೂ ಜನರು ಚಿಕನ್‌ನ ರುಚಿಯನ್ನು ಸವಿಯುವುದು ದೈನಂದಿನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಹೋಟೆಲ್‌ಗಳು, ಕುಟುಂಬ ಸಮಾರಂಭಗಳು, ಹಬ್ಬ-ಹರಿದಿನಗಳು ಅಥವಾ ಸರಳ ಊಟ ಯಾವ ಸಂದರ್ಭವಾಗಿದ್ದರೂ ಚಿಕನ್‌ ಬಟ್ಟಲು ಹಾಜರಿರುವುದು ಸಾಮಾನ್ಯ. ರುಚಿ, ಪೌಷ್ಟಿಕಾಂಶ ಹಾಗೂ ಇತರೆ ಮಾಂಸಗಳಿಗಿಂತ ಹೋಲಿಕೆ ಮಾಡಿದಾಗ ಕಡಿಮೆ ಬೆಲೆಯು ಇದರ ಜನಪ್ರಿಯತೆಯ ಪ್ರಮುಖ ಕಾರಣಗಳಾಗಿವೆ.

    ಚಿಕನ್‌ನಲ್ಲಿ ವಿಟಮಿನ್ ಬಿ, ನಿಯಾಸಿನ್‌, ಪ್ರೋಟೀನ್ ಹಾಗೂ ಅಗತ್ಯ ಖನಿಜಾಂಶಗಳು ತುಂಬಿರುತ್ತವೆ. ಇವು ದೇಹಕ್ಕೆ ಶಕ್ತಿ ನೀಡುವುದಲ್ಲದೆ ರೋಗನಿರೋಧಕ ಶಕ್ತಿ, ಮೂಳೆಗಳ ದೃಢತೆ ಮತ್ತು ನರಮಂಡಲದ ಸರಿಯಾದ ಕಾರ್ಯನಿರ್ವಹಣೆಗೆ ಸಹಕಾರಿಯಾಗುತ್ತವೆ. ಸರಿಯಾಗಿ ಬೇಯಿಸಿದ ಚಿಕನ್ ಸುಲಭವಾಗಿ ಜೀರ್ಣವಾಗುವುದರಿಂದ ಎಲ್ಲ ವಯಸ್ಸಿನವರಿಗೂ ಸೂಕ್ತವಾದ ಆಹಾರವಾಗಿದೆ.

    ಆದರೆ, ಈ ಎಲ್ಲಾ ಪ್ರಯೋಜನಗಳ ನಡುವೆಯೇ ಒಂದು ಪ್ರಮುಖ ವಿಷಯವನ್ನು ಬಹುತೇಕ ಜನರು ಕಡೆಗಣಿಸುತ್ತಾರೆ ಕೋಳಿಯ ಎಲ್ಲಾ ಭಾಗಗಳೂ ಆರೋಗ್ಯಕರವಲ್ಲ. ಕೆಲವು ಭಾಗಗಳಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ, ಕೀಟಾಣುಗಳು, ಹಾರ್ಮೋನುಗಳು ಹಾಗೂ ಹೆಚ್ಚುವರಿ ಕೊಬ್ಬು ಅಂಶಗಳು ತುಂಬಿರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹೀಗಾಗಿ, ಯಾವ ಭಾಗಗಳನ್ನು ತಿನ್ನುವುದನ್ನು ತಪ್ಪಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಕೋಳಿಯ ಕುತ್ತಿಗೆ (Neck):

    ಕೋಳಿಯ ಕುತ್ತಿಗೆಯ ಭಾಗದಲ್ಲಿ ವಿಷಕಾರಿ ಸೂಕ್ಷ್ಮಜೀವಿಗಳು ಹಾಗೂ ದುಗ್ಧರಸ ಗ್ರಂಥಿಗಳು ಅಡಗಿರುತ್ತವೆ. ಇವು ಬೇಯಿಸಿದರೂ ಸಂಪೂರ್ಣ ನಾಶವಾಗದೇ, ದೀರ್ಘಾವಧಿಯಲ್ಲಿ ದೇಹದಲ್ಲಿ ಸಂಗ್ರಹವಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ತಜ್ಞರ ಎಚ್ಚರಿಕೆ. ಹೀಗಾಗಿ ಚಿಕನ್ ಖರೀದಿಸುವಾಗ ಕುತ್ತಿಗೆಯ ಭಾಗವನ್ನು ತೆಗೆದುಹಾಕುವುದು ಅತ್ಯವಶ್ಯಕ.

    ಶ್ವಾಸಕೋಶ, ತಲೆ ಮತ್ತು ಕರುಳು:

    ಈ ಭಾಗಗಳಲ್ಲಿ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ಕೀಟಾಣುಗಳು ತುಂಬಿರುತ್ತವೆ. ಅವುಗಳ ಸೇವನೆ ದೇಹದ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮೂತ್ರನಾಳದ ಸೋಂಕು, ಹೊಟ್ಟೆ ಉಬ್ಬರ ಹಾಗೂ ಕೊಬ್ಬಿನ ಪ್ರಮಾಣದ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

    ಕೋಳಿ ಕಾಲುಗಳು (Chicken Legs):

    ಕೋಳಿ ಕಾಲುಗಳಲ್ಲಿ ಹೆಚ್ಚುವರಿ ಹಾರ್ಮೋನುಗಳು ಸಂಗ್ರಹವಾಗಿರುತ್ತವೆ. ಇವು ದೀರ್ಘಾವಧಿಯಲ್ಲಿ ಹಾರ್ಮೋನಲ್ ಅಸಮತೋಲನ, ತೂಕದ ಹೆಚ್ಚಳ ಹಾಗೂ ಮೆಟಾಬಾಲಿಕ್ (Metabolic) ಸಮಸ್ಯೆಗಳಿಗೆ ಕಾರಣವಾಗಬಹುದು. ಮಕ್ಕಳ ಹಾಗೂ ಯುವಕರಲ್ಲಿ ಬೆಳವಣಿಗೆಗೆ ಸಂಬಂಧಿಸಿದ ಅಸಮತೋಲನಗಳೂ ಉಂಟಾಗುವ ಅಪಾಯವಿದೆ.

    ಕೋಳಿ ಚರ್ಮ (Chicken Skin):

    ಕೋಳಿ ಚರ್ಮವು ಕೊಬ್ಬಿನ ಅಂಶದಿಂದ ಸಮೃದ್ಧವಾಗಿದೆ. 100 ಗ್ರಾಂ ಚರ್ಮದಲ್ಲಿ ಸರಾಸರಿ 32 ಗ್ರಾಂ ಕೊಬ್ಬು ಇರುತ್ತದೆ. ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣ ಹೆಚ್ಚಾಗಿ, ಹೃದ್ರೋಗ, ಅಧಿಕ ರಕ್ತದೊತ್ತಡ ಹಾಗೂ ಸ್ಥೂಲತೆ ಸಮಸ್ಯೆಗಳು ತಲೆದೋರುತ್ತವೆ.

    ಯುಎಸ್ಟಿಎ (USDA) ಅಧ್ಯಯನ ಪ್ರಕಾರ, ಚರ್ಮವಿಲ್ಲದೆ ಬೇಯಿಸಿದ ಒಂದು ಕಪ್ ಚಿಕನ್‌ನಲ್ಲಿ 231 ಕ್ಯಾಲೊರಿಗಳು ಇದ್ದರೆ, ಚರ್ಮದೊಂದಿಗೆ ಅದೇ ಪ್ರಮಾಣದ ಚಿಕನ್‌ನಲ್ಲಿ 276 ಕ್ಯಾಲೊರಿಗಳು ಇರುತ್ತವೆ ಅಂದರೆ ಹೆಚ್ಚುವರಿ ಕ್ಯಾಲೊರಿಗಳೂ ಸೇರಿ ಅನಗತ್ಯ ಕೊಬ್ಬು ದೇಹಕ್ಕೆ ಸೇರುತ್ತದೆ.

    ಚಿಕನ್‌ ಅನ್ನು ಆರೋಗ್ಯಕರವಾಗಿ ಸೇವಿಸುವ ಸರಿಯಾದ ವಿಧಾನ:

    ಚಿಕನ್ ಖರೀದಿಸುವಾಗ ಕುತ್ತಿಗೆ, ತಲೆ, ಶ್ವಾಸಕೋಶ ಮತ್ತು ಕರುಳು ಭಾಗಗಳನ್ನು ತೆಗೆದುಹಾಕಿ.

    ಚರ್ಮವಿಲ್ಲದ ಚಿಕನ್ ಆಯ್ಕೆ ಮಾಡಿ ಬೇಯಿಸಿ ತಿನ್ನುವುದು ಒಳಿತು. ಎಣ್ಣೆಯಲ್ಲಿ ಕರಿಯುವ ಬದಲು ಬೇಯಿಸುವುದು ಅಥವಾ ಉಪ್ಪಿನ ನೀರಿನಲ್ಲಿ ಬೇಯಿಸುವುದು ಉತ್ತಮ.

    ಅತಿಯಾಗಿ ಸೇವಿಸುವುದನ್ನು ತಪ್ಪಿಸಿ, ಸಮತೋಲನದ ಆಹಾರ ಪದ್ಧತಿಯನ್ನು ಅನುಸರಿಸಿ.

    ಚಿಕನ್ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದರೂ ಅದರ ಕೆಲವು ಭಾಗಗಳು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂಬುದನ್ನು ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಆಯ್ಕೆ, ಸ್ವಚ್ಛ ಸಿದ್ಧತೆ ಹಾಗೂ ನಿಯಂತ್ರಿತ ಸೇವನೆಯ ಮೂಲಕ ಚಿಕನ್‌ನ ಪೌಷ್ಟಿಕ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು, ಅನಾರೋಗ್ಯದ ಅಪಾಯವನ್ನು ತಪ್ಪಿಸಬಹುದು.

    apvc-iconPost Views: 36
  • ಭಾರತ ಮೊದಲ ಏಕದಿನ ಪಂದ್ಯಕ್ಕೆ ಸಜ್ಜು: ಇಬ್ಬರು ಕನ್ನಡಿಗರಿಗೆ ಸಿಗುತ್ತಾ ಅವಕಾಶ ?

    ಭಾರತ ಮೊದಲ ಏಕದಿನ ಪಂದ್ಯಕ್ಕೆ ಸಜ್ಜು: ಇಬ್ಬರು ಕನ್ನಡಿಗರಿಗೆ ಸಿಗುತ್ತಾ ಅವಕಾಶ ?

    ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸತ್ಯಪರೀಕ್ಷೆಗೆ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮತ್ತೆ ಕಣಕ್ಕಿಳಿಯಲು ಸಜ್ಜಾಗಿವೆ. ಕಳೆದ ವರ್ಷದ ವಿಶ್ವಕಪ್ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋಲಿನ ಕಹಿ ಅನುಭವಿಸಿದ ಭಾರತಕ್ಕೆ, ಈ ಸರಣಿ ಒಂದು ರೀತಿಯ ಪ್ರತೀಕಾರದ ವೇದಿಕೆಯಾಗಿದೆ. ಇತ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ್ದ ನೆನಪು ಇದ್ದರೂ, ಈ ಬಾರಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ ಸ್ಥಳ, ಪಿಚ್, ತಂಡದ ಸಂಯೋಜನೆ ಎಲ್ಲವೂ ಭಾರತಕ್ಕೆ ಹೊಸ ಸವಾಲುಗಳು.

    ಪರ್ತ್‌ನ ವಾಕಾ ಮೈದಾನ ಎಂದರೆ ಬೌನ್ಸಿಗೆ ಪ್ರಸಿದ್ಧ ಅಲ್ಲಿ ವೇಗಿಗಳೇ ಮೇಲುಗೈ ಅದಕ್ಕಾಗಿಯೇ ಎಷ್ಟು ಪೇಸರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂಬ ಪ್ರಶ್ನೆ ಈಗ ತಂಡದ ಮುಂದಿದೆ.

    ಈ ಹಿನ್ನೆಲೆಯಲ್ಲಿ ಕನ್ನಡಿಗರ ಹೆಸರುಗಳೂ ಚರ್ಚೆಯಲ್ಲಿವೆ

    ಕೆಎಲ್ ರಾಹುಲ್, ತಂಡದ ವಿಕೆಟ್‌ಕೀಪರ್ ಬ್ಯಾಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಅನುಭವ, ತಾಳ್ಮೆ ಮತ್ತು ಮಧ್ಯ ಕ್ರಮದಲ್ಲಿ ನಿಲ್ಲುವ ಶಕ್ತಿ ಭಾರತಕ್ಕೆ ಅಗತ್ಯವಾದ ಅಂಶಗಳಾಗಿವೆ.

    ಮತ್ತೊಂದು ಹೆಸರು ಪ್ರಸಿದ್ಧ ಕೃಷ್ಣ ವೇಗದ ಬೌಲರ್. ವಾಕಾದಂತಹ ಪಿಚ್‌ನಲ್ಲಿ ಅವರ ಉದ್ದದ ಬೌನ್ಸ್ ಎದುರಾಳಿಗಳಿಗೆ ಕಠಿಣ ಪರೀಕ್ಷೆಯಾಗಬಹುದು. ಆದರೂ ಅವರ ಸ್ಥಾನ ಖಚಿತವೆಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಯುವ ವೇಗಿ ಹರ್ಷಿತ್ ರಾಣಾ ಅವರ ಪ್ರದರ್ಶನವೂ ಆಯ್ಕೆದಾರರ ಗಮನ ಸೆಳೆದಿದೆ.

    ಇತ್ತ ನಾಯಕ ಶುಭಮನ್ ಗಿಲ್ ನೇತೃತ್ವದ ಹೊಸ ತಂಡದತ್ತ ಎಲ್ಲರ ಕಣ್ಣು, ಏಷ್ಯಾ ಕಪ್ ಗೆಲುವಿನ ನಂತರ, ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯ ಕ್ಲೀನ್ ಸ್ವೀಪ್ ಮಾಡಿ ಈ ಎಲ್ಲ ಯಶಸ್ಸುಗಳ ನಡುವೆ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಆದರೆ ಆಸ್ಟ್ರೇಲಿಯಾದಂತಹ ಬಲಿಷ್ಠ ಎದುರಾಳಿಯ ಮುಂದೆ ಅದು ಸಾಕಾಗುತ್ತದೆಯಾ ಎಂಬುದು ಈಗಿನ ಪ್ರಶ್ನೆ.

    ಅಕ್ಟೋಬರ್ 19ರಂದು ಭಾನುವಾರ ನಡೆಯಲಿರುವ ಈ ಮೊದಲ ಏಕದಿನ ಪಂದ್ಯ ಕೇವಲ ಪಂದ್ಯವಲ್ಲ ಅದು ಗೌರವ, ಆತ್ಮಗೌರವ ಮತ್ತು ಪ್ರತೀಕಾರದ ಪರ್ತ್‌ನ ಬೌನ್ಸಿ ಪಿಚ್‌ನಲ್ಲಿ ವೇಗಿಗಳ ರಣಭೂಮಿ ಸಜ್ಜಾಗಿದೆ.

    apvc-iconPost Views: 5
  • ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ಮಾನವೀಯತೆ ಮೆರೆದ ರಿಷಬ್ ಶೆಟ್ಟಿ

    ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ಮಾನವೀಯತೆ ಮೆರೆದ ರಿಷಬ್ ಶೆಟ್ಟಿ

    ಭಾರತದ ಅತ್ಯಂತ ಜನಪ್ರಿಯ ಕ್ವಿಜ್ ಕಾರ್ಯಕ್ರಮವಾದ ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯು ಅನೇಕ ಪ್ರತಿಭಾವಂತರನ್ನು ಪರಿಚಯಿಸಿದೆ. ಈ ಬಾರಿ ಆ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರು ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ವಿನಯ, ಬುದ್ಧಿವಂತಿಕೆ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಅವರು ಕೇವಲ ಪ್ರೇಕ್ಷಕರ ಮನ ಗೆದ್ದಷ್ಟೇ ಅಲ್ಲ, ಒಂದು ಮಾದರಿಯನ್ನೂ ಸಹ ನಿರ್ಮಿಸಿದರು.

    ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರು ತಮ್ಮ ಜೀವನದ ಪಯಣ, ಕುಟುಂಬ, ಮತ್ತು ತಮ್ಮ ಸಾಮಾಜಿಕ ಸೇವಾ ಉದ್ದೇಶಗಳ ಕುರಿತು ಹೃದಯಸ್ಪರ್ಶಿಯಾಗಿ ಮಾತನಾಡಿದರು. ಅವರು ತಮ್ಮದೇ ಹೆಸರಿನಲ್ಲಿ ಸ್ಥಾಪಿಸಿದ ‘ರಿಷಬ್ ಫೌಂಡೇಶನ್’ ಮೂಲಕ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣ ಹಾಗೂ ದೈವ ನರ್ತಕರ ಜೀವನೋಪಾಯಕ್ಕೆ ಸಹಾಯ ಮಾಡಬೇಕೆಂಬ ಉದ್ದೇಶವನ್ನು ವ್ಯಕ್ತಪಡಿಸಿದರು.

    ಆಟದಲ್ಲಿ ಅವರು ಅತ್ಯಂತ ಶಾಂತ ಮತ್ತು ನಿಖರವಾಗಿ ಪ್ರಶ್ನೆಗಳಿಗೆ ಉತ್ತರಿಸಿದರು. ಆರಂಭದಲ್ಲಿ 50,000 ರೂ. ಮೌಲ್ಯದ ಪ್ರಶ್ನೆಯಿಂದ ಆರಂಭಿಸಿದ ಅವರು ಕ್ರಮೇಣ 12 ಪ್ರಶ್ನೆಗಳನ್ನು ಯಶಸ್ವಿಯಾಗಿ ಪೂರೈಸಿದರು. ವಿಶೇಷವಾಗಿ ಒಂದು ಕಠಿಣ ಪ್ರಶ್ನೆ “ಇಂಡೋನೇಷ್ಯಾದಲ್ಲಿರುವ ಜ್ವಾಲಾಮುಖಿಯ ಕೆಳಗೆ ಯಾವ ಹಿಂದೂ ದೇವರ ಪ್ರತಿಮೆ ಇದೆ?” ಎಂಬುದಕ್ಕೆ ಅವರು ಲೈಫ್ಲೈನ್ ಬಳಸಿಕೊಂಡು ಸರಿಯಾದ ಉತ್ತರವಾದ ‘ಗಣಪತಿ’ ಎಂದು ಹೇಳಿದರು.

    ಈ ಪ್ರದರ್ಶನದ ಫಲವಾಗಿ ರಿಷಬ್ ಶೆಟ್ಟಿ ಅವರು ₹12,50,000 ಮೊತ್ತದ ಬಹುಮಾನವನ್ನು ಗೆದ್ದರು. ಆದರೆ, ತಮ್ಮ ವೈಯಕ್ತಿಕ ಪ್ರಯೋಜನಕ್ಕಾಗಿ ಅದನ್ನು ಬಳಸದೇ, ಅದನ್ನೆಲ್ಲ ತಮ್ಮ ಫೌಂಡೇಶನ್‌ಗೆ ದಾನ ಮಾಡಿದರು. ಅವರ ಈ ನಡೆ ಎಲ್ಲರಿಗೂ ಪ್ರೇರಣೆಯಾಗಿತು.

    ಅಮಿತಾಭ್ ಬಚ್ಚನ್ ಅವರ ಆತಿಥ್ಯದಲ್ಲಿ ನಡೆದ ಈ ಶೋ ವೇಳೆ, ಆಯೋಜಕರು ಮತ್ತು ಸ್ಪಾನ್ಸರ್‌ಗಳೂ ಕೂಡಾ ರಿಷಬ್ ಅವರ ಮಾನವೀಯ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಫೌಂಡೇಶನ್‌ಗೆ 1,500 ಕಿಲೋ ಅಕ್ಕಿ, 1,500 ಕಿಲೋ ಗೋಧಿ, 1,500 ಕಿಲೋ ತುಪ್ಪ, ಜೊತೆಗೆ ಹಿರೋ ಎಕ್ಸ್‌ಟ್ರೀಂ 125 ಬೈಕ್ ನೀಡುವುದಾಗಿ ಘೋಷಿಸಿದರು.

    ಒಟ್ಟಿನಲ್ಲಿ, ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರ ಗೆಲುವು ಕೇವಲ ಹಣದ ಗೆಲುವಲ್ಲ ಅದು ಮಾನವೀಯತೆ ಮತ್ತು ಅದು ಸಾಮಾಜಿಕ ಜವಾಬ್ದಾರಿಯ ಗೆಲುವು.

    apvc-iconPost Views: 11
  • ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪತ್ನಿ ರಿವಾಬಾಗೆ ಪತಿ ಜಡೇಜಾರಿಂದ ಹೃದಯಸ್ಪರ್ಶಿ ಸಂದೇಶ

    ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪತ್ನಿ ರಿವಾಬಾಗೆ ಪತಿ ಜಡೇಜಾರಿಂದ ಹೃದಯಸ್ಪರ್ಶಿ ಸಂದೇಶ

    ಕ್ರೀಡಾಂಗಣದಲ್ಲಿ ರನ್‌ಗಳು ಮತ್ತು ವಿಕೆಟ್‌ಗಳ ಮೂಲಕ ಭಾರತದ ಹೆಮ್ಮೆ ಹೆಚ್ಚಿಸಿರುವ ರವೀಂದ್ರ ಜಡೇಜಾ, ಈ ಬಾರಿ ತಮ್ಮ ಪತ್ನಿಯ ಸಾಧನೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನ ರಾಜಕೀಯ ವೇದಿಕೆಯಲ್ಲಿ ಹೊಸ ಹೆಜ್ಜೆ ಇಟ್ಟಿರುವ ರಿವಾಬಾ ಜಡೇಜಾ ಈಗ ಗುಜರಾತ್ ರಾಜ್ಯದ ಸಚಿವರಾಗಿದ್ದು, ಈ ಸಂದರ್ಭದಲ್ಲಿ ಪತಿ ಜಡೇಜಾ ನೀಡಿದ ಸಂದೇಶ ಎಲ್ಲೆಡೆ ವೈರಲ್ ಆಗಿದೆ.

    2022ರ ವಿಧಾನಸಭೆ ಚುನಾವಣೆಯಲ್ಲಿ ಜಾಮನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಜಯಗಳಿಸಿದ ರಿವಾಬಾ, ಇದೀಗ ಗುಜರಾತ್ ಸರ್ಕಾರದ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈ ಯಶಸ್ಸು ಕೇವಲ ರಾಜಕೀಯ ವಿಜಯವಲ್ಲ, ಅದು ಮಹಿಳಾ ನಾಯಕತ್ವದ ಶಕ್ತಿಗೆ ಮತ್ತೊಂದು ಉದಾಹರಣೆ ಎಂದೂ ಹೇಳಬಹುದು.

    ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ, ಪತಿಯಾದ ಭಾರತದ ಅಲ್‌ರೌಂಡರ್ ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡರು. ಅವರು ತಮ್ಮ X ನಲ್ಲಿ ಬರೆದಿದ್ದು ಹೀಗೆ

    “ನಿನ್ನ ಸಾಧನೆಗಳ ಬಗ್ಗೆ ನನಗೆ ತುಂಬಾ ಹೆಮ್ಮೆ. ನೀನು ಯಾವ ಕ್ಷೇತ್ರದಲ್ಲಾದರೂ ಅದ್ಭುತ ಕೆಲಸ ಮಾಡುತ್ತೀಯ ಎಂಬುದು ನನ್ನ ನಂಬಿಕೆ, ನೀವು ಅನೇಕ ಜನರಿಗೆ ಪ್ರೇರಣೆಯಾಗುವಿರಿ ಎಂಬ ವಿಶ್ವಾಸ ನನಗೆ ಇದೆ. ಗುಜರಾತ್ ಸರ್ಕಾರದ ಸಚಿವೆಯಾಗಿರುವ ನಿಮಗೆ ಹಾರ್ದಿಕ ಶುಭಾಶಯಗಳು. ಜಯ ಹಿಂದ್!” ಎಂದು ಬರೆದಿದ್ದಾರೆ.

    ಈ ಸಂದೇಶಕ್ಕೆ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದರು. ಹಲವರು “ಈ ಜೋಡಿ ನಿಜಕ್ಕೂ ಪ್ರೇರಣೆಯಾದ ದಂಪತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಒಟ್ಟಿನಲ್ಲಿ, ಕ್ರಿಕೆಟ್ ಮೈದಾನದಲ್ಲಿ ದೇಶಕ್ಕೆ ಗೌರವ ತಂದ ಜಾಡೇಜಾ, ತಮ್ಮ ಪತ್ನಿಯ ರಾಜಕೀಯ ಸಾಧನೆಗೆ ಹೆಮ್ಮೆ ಪಟ್ಟು ಅಭಿನಂದಿಸಿರುವುದು ಒಳ್ಳೆಯ ವಿಚಾರ. ಪರಸ್ಪರ ಪ್ರೋತ್ಸಾಹ ಮತ್ತು ಗೌರವದಿಂದ ಕೂಡಿದ ಈ ಕ್ಷಣ, ಕ್ರೀಡೆ ಮತ್ತು ರಾಜಕೀಯದ ನಡುವಿನ ಹೃದಯಸ್ಪರ್ಶಿ ಸೇತುವೆಯಂತೆ ಕಂಡುಬಂದಿದೆ.

    apvc-iconPost Views: 37
  • ಸುರಕ್ಷಿತ ಹೂಡಿಕೆ, ಖಚಿತ ಲಾಭ: ಪೋಸ್ಟ್ ಆಫೀಸ್ RD ಮೂಲಕ ನಿಮ್ಮ ಭವಿಷ್ಯಕ್ಕೆ ಆರ್ಥಿಕ ನೆಲೆ

    ಸುರಕ್ಷಿತ ಹೂಡಿಕೆ, ಖಚಿತ ಲಾಭ: ಪೋಸ್ಟ್ ಆಫೀಸ್ RD ಮೂಲಕ ನಿಮ್ಮ ಭವಿಷ್ಯಕ್ಕೆ ಆರ್ಥಿಕ ನೆಲೆ

    ಭಾರತದಲ್ಲಿ ಆರ್ಥಿಕ ಭದ್ರತೆ ಹಾಗೂ ಖಚಿತ ಲಾಭ ನೀಡುವ ಹೂಡಿಕೆ ಆಯ್ಕೆಗಳನ್ನು ಹುಡುಕುವುದು ಬಹುತೇಕ ಕುಟುಂಬಗಳ ಪ್ರಮುಖ ಗುರಿಯಾಗಿದೆ. ಷೇರು ಮಾರುಕಟ್ಟೆ ಅಥವಾ ಮ್ಯೂಚುಯಲ್ ಫಂಡ್‌ಗಳಂತಹ ಆಯ್ಕೆಗಳು ಹೆಚ್ಚು ಲಾಭದ ಸಾಧ್ಯತೆ ನೀಡುತ್ತಿದ್ದರೂ, ಅವುಗಳಲ್ಲಿರುವ ಅಪಾಯದ ಮಟ್ಟವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಜನರು ಮತ್ತೆ ಸರ್ಕಾರದ ಅಧೀನದಲ್ಲಿರುವ ಪೋಸ್ಟ್ ಆಫೀಸ್ ಯೋಜನೆಗಳತ್ತ ಮುಖ ಮಾಡುತ್ತಿದ್ದಾರೆ, ಏಕೆಂದರೆ ಇವುಗಳಲ್ಲಿ ಸುರಕ್ಷತೆ, ನಿಗದಿತ ಬಡ್ಡಿದರ ಮತ್ತು ತೆರಿಗೆ ವಿನಾಯಿತಿ ಈ ಮೂರು ಅಂಶಗಳು ಹೂಡಿಕೆದಾರರಿಗೆ ಸ್ಥಿರತೆ ನೀಡುತ್ತವೆ.

    ಅಂಚೆ ಕಚೇರಿ ಹಲವು ರೀತಿಯ ಹೂಡಿಕೆ ಯೋಜನೆಗಳನ್ನು ಒದಗಿಸುತ್ತಿದ್ದು, ಅವುಗಳಲ್ಲಿ Recurring Deposit (RD) ಯೋಜನೆ ಜನಪ್ರಿಯವಾಗಿದೆ. ಇದು ಕೇವಲ ಸಣ್ಣ ಮೊತ್ತದಿಂದ ಪ್ರಾರಂಭಿಸಬಹುದಾದ, ನಿಶ್ಚಿತ ಅವಧಿಯ ಹೂಡಿಕೆ ಆಯ್ಕೆಯಾಗಿದ್ದು, ನಿರಂತರ ಹೂಡಿಕೆಯಿಂದ ದೊಡ್ಡ ಮೊತ್ತವನ್ನು ಸಂಗ್ರಹಿಸಲು ಸಹಕಾರಿ.

    ಯೋಜನೆಯ ಮುಖ್ಯ ವೈಶಿಷ್ಟ್ಯಗಳು:

    ಕಡಿಮೆ ಮೊತ್ತದಿಂದ ಆರಂಭ: ಕೇವಲ ₹100ರಿಂದಲೇ ಪ್ರತಿ ತಿಂಗಳು ಹೂಡಿಕೆ ಆರಂಭಿಸಬಹುದು.

    ₹50,000 ಪ್ರತಿ ತಿಂಗಳ ಹೂಡಿಕೆ ಉದಾಹರಣೆ: ನೀವು ಪ್ರತಿ ತಿಂಗಳು ₹50,000 ಹೂಡಿಸಿದರೆ, 5 ವರ್ಷಗಳಲ್ಲಿ ಒಟ್ಟು ₹30 ಲಕ್ಷವನ್ನು ಹೂಡಿಸಿದ್ದೀರಿ.

    ಬಡ್ಡಿದರದಿಂದ ಲಾಭ: ನಿಗದಿತ ಬಡ್ಡಿದರದಿಂದ ಈ ಮೊತ್ತವು 5 ವರ್ಷಗಳ ನಂತರ ಸುಮಾರು ₹35 ಲಕ್ಷಕ್ಕೆ ಬೆಳೆಯುತ್ತದೆ ಅಂದರೆ ₹5 ಲಕ್ಷದಷ್ಟು ಶುದ್ಧ ಲಾಭ.

    ಅವಧಿ: ಯೋಜನೆಯ ಅವಧಿ 5 ವರ್ಷಗಳಾಗಿದ್ದು, ಬಡ್ಡಿದರವು ಸಂಪೂರ್ಣ ಅವಧಿಗೆ ನಿಗದಿತವಾಗಿರುತ್ತದೆ.

    ಸುರಕ್ಷಿತ ಹಾಗೂ ಭದ್ರ ಹೂಡಿಕೆ ಆಯ್ಕೆ: 

    ಪೋಸ್ಟ್ ಆಫೀಸ್ RD ಯೋಜನೆ ಸರ್ಕಾರದ ನಿಯಂತ್ರಣದಲ್ಲಿರುವುದರಿಂದ, ಹೂಡಿಕೆದಾರರಿಗೆ ಯಾವುದೇ ಮಾರುಕಟ್ಟೆ ಅಪಾಯ ಇರುವುದಿಲ್ಲ. ಷೇರು ಮಾರುಕಟ್ಟೆಯ ಏರಿಳಿತಗಳಿಂದ ಅಥವಾ ಮ್ಯೂಚುಯಲ್ ಫಂಡ್‌ಗಳ ಅಸ್ಥಿರತೆಯಿಂದ ಸಂಪೂರ್ಣ ಮುಕ್ತ. ನಿಮ್ಮ ಹಣಕ್ಕೆ ಖಚಿತ ಬಡ್ಡಿದರ ಲಭ್ಯವಿರುವುದರಿಂದ, ಹೂಡಿಕೆ + ಲಾಭ ಎರಡೂ ಭದ್ರವಾಗಿರುತ್ತವೆ.

    ಸಾಲ ಹಾಗೂ ಹಣ ಹಿಂಪಡೆಯುವ ಸೌಲಭ್ಯಗಳು:

    ಖಾತೆ ಆರಂಭಿಸಿದ ಒಂದು ವರ್ಷದ ನಂತರ, ನೀವು ಹೂಡಿಕೆ ಮೊತ್ತದ 50% ವರೆಗೆ ಸಾಲ ಪಡೆಯುವ ಅವಕಾಶವಿದೆ.

    ತುರ್ತು ಅವಶ್ಯಕತೆಗಳಿಗೆ ಹಣ ಬೇಕಾದರೆ ಖಾತೆಯನ್ನು ಮುಚ್ಚದೆ ಭಾಗಶಃ ಹಣವನ್ನು ಹಿಂಪಡೆಯಬಹುದು.

    ಈ ಮಧ್ಯೆ ಹೂಡಿಕೆ ಮುಂದುವರಿದರೆ, ಬಡ್ಡಿ ಲಾಭದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.

    ಹೆಚ್ಚುವರಿ ಪ್ರಯೋಜನ:

    ಈ ಯೋಜನೆಗೆ ಹೂಡಿಕೆ ಮಾಡುವ ಮೂಲಕ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿ ₹1.5 ಲಕ್ಷವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಹೀಗಾಗಿ, ನಿಮ್ಮ ಹೂಡಿಕೆ ಕೇವಲ ಲಾಭ ನೀಡುವುದಲ್ಲದೆ, ತೆರಿಗೆ ಉಳಿತಾಯಕ್ಕೂ ಸಹಕಾರಿ ಆಗುತ್ತದೆ.

    ಇತರೆ ಜನಪ್ರಿಯ ಪೋಸ್ಟ್ ಆಫೀಸ್ ಯೋಜನೆಗಳು:

    ಪೋಸ್ಟ್ ಆಫೀಸ್ RD ಜೊತೆಗೆ ಇನ್ನೂ ಹಲವು ಆಕರ್ಷಕ ಯೋಜನೆಗಳು ಲಭ್ಯವಿವೆ,

    ಸುಕನ್ಯಾ ಸಮೃದ್ಧಿ ಯೋಜನೆ, ಹುಡುಗಿಯರ ಭವಿಷ್ಯಕ್ಕಾಗಿ ಅತ್ಯುತ್ತಮ ಹೂಡಿಕೆ ಆಯ್ಕೆ

    PPF (Public Provident Fund),Bestfriend ತೆರಿಗೆ ಉಳಿತಾಯ ಯೋಜನೆ.

    Fixed Deposit (FD) – ನಿಗದಿತ ಬಡ್ಡಿದರದ ಹೂಡಿಕೆ ಆಯ್ಕೆ.

    ಯಾವುದೇ ಹೂಡಿಕೆಗೆ ಮುನ್ನ ನಿಮ್ಮ ಮಾಸಿಕ ಆದಾಯ ಮತ್ತು ವೆಚ್ಚಗಳ ವಿಶ್ಲೇಷಣೆ ಮಾಡುವುದು ಬಹುಮುಖ್ಯ. ಸರಿಯಾದ ಯೋಜನೆಯೊಂದಿಗೆ ಹೂಡಿಕೆ ಮಾಡಿದರೆ, ಪೋಸ್ಟ್ ಆಫೀಸ್ ಯೋಜನೆಗಳು ನಿಮ್ಮ ಭವಿಷ್ಯಕ್ಕೆ ದೃಢ ಆರ್ಥಿಕ ನೆಲೆ ನೀಡುತ್ತವೆ.

    ಪೋಸ್ಟ್ ಆಫೀಸ್ RD ಯೋಜನೆ ಒಂದು ಕಡಿಮೆ ಅಪಾಯ ಖಚಿತ ಲಾಭ, ತೆರಿಗೆ ವಿನಾಯಿತಿ ನೀಡುವ ಅತ್ಯುತ್ತಮ ಹೂಡಿಕೆ ಮಾರ್ಗವಾಗಿದೆ. ಪ್ರತಿ ತಿಂಗಳು ₹50,000 ಹೂಡಿಕೆ ಮಾಡಿದರೆ ಕೇವಲ 5 ವರ್ಷಗಳಲ್ಲಿ ₹35 ಲಕ್ಷದಷ್ಟು ಮೊತ್ತವನ್ನು ಸಂಗ್ರಹಿಸಲು ಸಾಧ್ಯ. ಇಂದಿನ ಅಸ್ಥಿರ ಆರ್ಥಿಕ ಪರಿಸ್ಥಿತಿಯಲ್ಲಿ, ಈ ರೀತಿಯ ಯೋಜನೆಗಳು ದೀರ್ಘಾವಧಿಯ ಆರ್ಥಿಕ ಭದ್ರತೆಗೆ ಬಲವಾದ ಆಯ್ಕೆ ಆಗಬಹುದು.

    apvc-iconPost Views: 34
  • ಬೆಳಗ್ಗೆ ಖಾಲಿ ಹೊಟ್ಟೆಗೆ ಮೆಂತ್ಯ ನೀರು ಕುಡಿದರೇ, ದೇಹದಲ್ಲಿ ಹಲವಾರು ಪ್ರಯೋಜನಗಳ ಲಾಭ ಪಡೆಯಬಹುದು!

    ಬೆಳಗ್ಗೆ ಖಾಲಿ ಹೊಟ್ಟೆಗೆ ಮೆಂತ್ಯ ನೀರು ಕುಡಿದರೇ, ದೇಹದಲ್ಲಿ ಹಲವಾರು ಪ್ರಯೋಜನಗಳ ಲಾಭ ಪಡೆಯಬಹುದು!

    ಭಾರತೀಯ ಅಡುಗೆಮನೆಯಲ್ಲಿ ಮೆಂತ್ಯ (Fenugreek) ಒಂದು ಸಾಮಾನ್ಯ ಮತ್ತು ಅಗತ್ಯ ಪದಾರ್ಥ. ಇದು ಕೇವಲ ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ, ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ. ಪಾರಂಪರಿಕ ಆಯುರ್ವೇದದಲ್ಲೂ ಮೆಂತ್ಯ ಬೀಜಗಳಿಗೆ ಮಹತ್ತರ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ, ನೈಸರ್ಗಿಕ ಹಾಗೂ ಸರಳ ಗೃಹೌಷಧಿಗಳತ್ತ ಜನರು ಮತ್ತೆ ಮುಖಮಾಡುತ್ತಿರುವ ಹಿನ್ನೆಲೆಯಲ್ಲಿ ಮೆಂತ್ಯ ನೀರು ಕುಡಿಯುವ ಅಭ್ಯಾಸ ಒಂದು ಟ್ರೆಂಡ್ ಆಗಿದೆ.

    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೆನೆಸಿದ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಿಂದ ಹಿಡಿದು ತೂಕ ಇಳಿಕೆವರೆಗೆ ಹಲವು ಲಾಭಗಳು ದೊರೆಯುತ್ತವೆ. ಕೇವಲ ಒಂದೇ ವಾರದಲ್ಲಿ ಈ ನೈಸರ್ಗಿಕ ಪಾನೀಯವು ದೇಹದಲ್ಲಿ ಹಿತಕರ ಬದಲಾವಣೆಗಳನ್ನು ತರುವ ಸಾಮರ್ಥ್ಯವಿದೆ. ಇದೀಗ ಮೆಂತ್ಯ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ದೊರೆಯುವ ಪ್ರಮುಖ ಆರೋಗ್ಯ ಲಾಭಗಳನ್ನು ಬಗ್ಗೆ ತಿಳಿದುಕೊಳ್ಳೋಣ.

    ರಕ್ತದಲ್ಲಿನ ಸಕ್ಕರೆ ನಿಯಂತ್ರಣ:

    ಮೆಂತ್ಯ ಬೀಜಗಳಲ್ಲಿ ಫೈಬರ್ (ನಾರಿನಾಂಶ) ಅಧಿಕ ಪ್ರಮಾಣದಲ್ಲಿದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ರಕ್ತದಲ್ಲಿ ಸಕ್ಕರೆಯ ಹಠಾತ್ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಡಯಾಬಿಟೀಸ್ ನಿಯಂತ್ರಣಕ್ಕೆ ಮೆಂತ್ಯ ನೀರು ಸಹಾಯಕ ಎಂದು ಹಲವು ಅಧ್ಯಯನಗಳು ಸೂಚಿಸುತ್ತವೆ.

    ಜೀರ್ಣಕ್ರಿಯೆ ಸುಧಾರಣೆ ಮತ್ತು ಮಲಬದ್ಧತೆ ನಿವಾರಣೆ:

    ಮೆಂತ್ಯ ನೆನೆಸಿದ ನೀರು ನಾರಿನಾಂಶದಿಂದ ಸಮೃದ್ಧವಾಗಿರುವುದರಿಂದ, ಅಜೀರ್ಣ, ಮಲಬದ್ಧತೆ ಹಾಗೂ ಕರುಳಿನ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ನಿಯಮಿತ ಸೇವನೆ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ಸಹಕಾರಿ.

    ಹೃದಯದ ಆರೋಗ್ಯಕ್ಕೆ ಪೋಷಕ:

    ಮೆಂತ್ಯ ಹಾಕಿ ಕುದಿಸಿದ ನೀರು ‘ಕೆಟ್ಟ’ ಕೊಲೆಸ್ಟ್ರಾಲ್ (LDL) ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ತಗ್ಗುತ್ತದೆ ಮತ್ತು ಹೃದಯದ ಆರೋಗ್ಯ ಸುಧಾರಿಸುತ್ತದೆ.

    ರೋಗನಿರೋಧಕ ಶಕ್ತಿ ಹೆಚ್ಚಳ:

    ಮೆಂತ್ಯ ಬೀಜಗಳಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ. ನಿಯಮಿತವಾಗಿ ಮೆಂತ್ಯ ನೀರು ಕುಡಿಯುವುದು ವೈರಲ್ ಅಥವಾ ಸೀಸನಲ್ ಸೋಂಕುಗಳ ವಿರುದ್ಧ ದೇಹವನ್ನು ಬಲಪಡಿಸಲು ಸಹಾಯಕ.

    ತೂಕ ನಿಯಂತ್ರಣ ಮತ್ತು ಹೊಟ್ಟೆ ಕೊಬ್ಬು ಕರಗಿಸಲು ಸಹಾಯಕ:

    ಫೈಬರ್ ಅಧಿಕ ಪ್ರಮಾಣದಲ್ಲಿರುವುದರಿಂದ ಮೆಂತ್ಯ ನೀರು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ, ಅತಿಯಾಗಿ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡುತ್ತದೆ. ಇದು ಮೆಟಾಬಾಲಿಸಂ ಅನ್ನು ಸುಧಾರಿಸಿ ಕೊಬ್ಬು ಕರಗಿಸಲು ಸಹಕಾರಿ.

    ಚರ್ಮದ ಆರೋಗ್ಯದಲ್ಲಿ ಸುಧಾರಣೆ:

    ಮೆಂತ್ಯ ನೀರಿನ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ–ಇನ್‌ಫ್ಲಮೇಟರಿ ಗುಣಗಳು ಚರ್ಮದ ಸೋಂಕುಗಳು, ಮೊಡವೆ, ಹಾಗೂ ಉರಿಯೂತಗಳನ್ನು ತಗ್ಗಿಸಲು ಸಹಾಯ ಮಾಡುತ್ತವೆ. ನಿಯಮಿತ ಸೇವನೆ ಚರ್ಮವನ್ನು ಒಳಗಿನಿಂದಲೇ ತೇಜೋಮಯಗೊಳಿಸುತ್ತದೆ.

    ಮೆಂತ್ಯ ನೀರು ನೈಸರ್ಗಿಕವಾಗಿದ್ದರೂ, ಪ್ರತಿಯೊಬ್ಬರ ದೇಹದ ಪ್ರತಿಕ್ರಿಯೆ ವಿಭಿನ್ನವಾಗಿರಬಹುದು. ಯಾವುದೇ ಹೊಸ ಪೌಷ್ಟಿಕ ಅಥವಾ ಆರೋಗ್ಯ ಕ್ರಮವನ್ನು ಆರಂಭಿಸುವ ಮೊದಲು ವೈದ್ಯರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆಯುವುದು ಅತ್ಯಾವಶ್ಯಕ. ವಿಶೇಷವಾಗಿ ಗರ್ಭಿಣಿಯರು, ಶಿಶುವಿಗೆ ಹಾಲುಣಿಸುವ ತಾಯಂದಿರು ಮತ್ತು ಡಯಾಬಿಟೀಸ್ ಔಷಧಿಗಳನ್ನು ಸೇವಿಸುತ್ತಿರುವವರು ತಜ್ಞರ ಮಾರ್ಗದರ್ಶನ ಪಡೆಯುವುದು ಸೂಕ್ತ.

    ಮೆಂತ್ಯ ನೀರು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಲಭವಾಗಿದ್ದು, ಅದರ ಲಾಭಗಳು ಅಪಾರ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಮೆಂತ್ಯ ನೀರು ನಿಮ್ಮ ದೇಹದ ಆರೋಗ್ಯದಲ್ಲಿ ನೈಸರ್ಗಿಕ ಬದಲಾವಣೆ ತರಬಲ್ಲ ಚಿಕ್ಕ ಹೆಜ್ಜೆ.

    apvc-iconPost Views: 38
  • ತಾಲಿಬಾನ್ ದಾಳಿಗಳಿಗೆ ಭಾರತವೇ ಹೊಣೆ? ಪಾಕಿಸ್ತಾನದ ಪ್ರಧಾನಿ ಹೊಸ ಆರೋಪ! 

    ತಾಲಿಬಾನ್ ದಾಳಿಗಳಿಗೆ ಭಾರತವೇ ಹೊಣೆ? ಪಾಕಿಸ್ತಾನದ ಪ್ರಧಾನಿ ಹೊಸ ಆರೋಪ! 

    ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಭಾಗದ ಉದ್ವಿಗ್ನತೆ ಮತ್ತೆ ಚರ್ಚೆಯ ಕೇಂದ್ರವಾಗಿದೆ. ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ನೀಡಿದ ಹೇಳಿಕೆ ದಕ್ಷಿಣ ಏಷ್ಯಾದ ರಾಜಕೀಯ ವಾತಾವರಣವನ್ನು ಮತ್ತೊಮ್ಮೆ ಕದಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನಡೆಸುತ್ತಿರುವ ಉಗ್ರ ದಾಳಿಗಳಿಗೆ ಭಾರತವೇ ಮೂಲ ಕಾರಣ ಎಂದು ಅವರು ಆರೋಪಿಸಿದ್ದಾರೆ.

    ಈ ಆರೋಪ ಕೇವಲ ಮಾತಿನ ಮಟ್ಟದಲ್ಲೇ ಇರದೇ, ರಾಜತಾಂತ್ರಿಕ ತೀವ್ರತೆಯನ್ನು ಹೆಚ್ಚಿಸಿರುವುದು ಖಚಿತ. ಷರೀಫ್ ಅವರ ಪ್ರಕಾರ, “ಅಫ್ಘಾನಿಸ್ತಾನದಲ್ಲಿ ನಡೆದ ಇತ್ತೀಚಿನ ದಾಳಿಗಳ ಹಿಂದೆ ಭಾರತನ ಕೈವಾಡವಿದೆ. ನಮ್ಮ ಭದ್ರತೆ ಮತ್ತು ಗಡಿಯಲ್ಲಿ ಅಶಾಂತಿ ಉಂಟುಮಾಡಲು ಭಾರತ ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಅವರು ಯಾವುದೇ ದೃಢವಾದ ಸಾಕ್ಷಿ ನೀಡದಿದ್ದರೂ ಕೂಡ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಈ ಒಂದು ಹೇಳಿಕೆ ದೊಡ್ಡ ವಿಷಯವಾಗಿ ಪರಿಣಮಿಸಿದೆ.

    ಇತ್ತ ಭಾರತದ ವಿದೇಶಾಂಗ ಇಲಾಖೆ ಈ ಆರೋಪವನ್ನು ಸಂಪೂರ್ಣವಾಗಿ ಪಕ್ಕಕ್ಕೆ ತಳ್ಳಿಹಾಕಿದೆ. “ಭಾರತವು ಯಾವ ಉಗ್ರ ಚಟುವಟಿಕೆಗೂ ಬೆಂಬಲ ನೀಡುವುದಿಲ್ಲ. ಪಾಕಿಸ್ತಾನವು ತನ್ನ ಆಂತರಿಕ ವೈಫಲ್ಯವನ್ನು ಮುಚ್ಚಲು ಹೊಸ ಆರೋಪಗಳ ಮೂಲಕ ಜನರ ಗಮನ ಬೇರೆಡೆ ತಿರುಗಿಸುತ್ತಿದೆ” ಎಂದು ಸ್ಪಷ್ಟನೆ ನೀಡಿದೆ.

    ವಿಶ್ಲೇಷಕರ ಪ್ರಕಾರ, ಪಾಕಿಸ್ತಾನದ ಆರ್ಥಿಕ ಹಿನ್ನಡೆ, ರಾಜಕೀಯ ಅಸ್ಥಿರತೆ ಮತ್ತು ತಾಲಿಬಾನ್‌ನಿಂದ ಉಂಟಾಗುತ್ತಿರುವ ಆಂತರಿಕ ಭದ್ರತಾ ಸಮಸ್ಯೆಗಳು ಪಾಕಿಸ್ತಾನ ಸರ್ಕಾರದ ಮೇಲೆ ಹೆಚ್ಚು ಒತ್ತಡ ತಂದಿವೆ. ಈ ಸಂದರ್ಭದಲ್ಲಿ ಷರೀಫ್ ಅವರ ಹೇಳಿಕೆ ಜನರ ಅಸಮಾಧಾನವನ್ನು ತಣ್ಣಗಾಗಿಸಲು ಪ್ರಯತ್ನವಾಗಿರಬಹುದು ಎಂಬ ಅಭಿಪ್ರಾಯಗಳು ಎಲ್ಲೆಡೆ ಕೇಳಿಬರುತ್ತಿದೆ.

    ಅಮೆರಿಕಾ ಮತ್ತು ಇತರ ರಾಷ್ಟ್ರಗಳು ಈ ವಿವಾದದ ಕುರಿತು ತಟಸ್ಥ ನಿಲುವು ಹಿಡಿದಿದ್ದರೂ, ಯಾವುದೇ ಉಗ್ರ ಚಟುವಟಿಕೆಗೆ ಬೆಂಬಲ ನೀಡುವುದು ತಪ್ಪು ಎಂಬ ಸಂದೇಶ ನೀಡಿವೆ. ಆದರೆ ಈ ಹೊಸ ಆರೋಪದ ಪರಿಣಾಮವಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಮತ್ತಷ್ಟು ಶೀತವಾಗುವ ಸಾಧ್ಯತೆ ಇದೆ ಎನ್ನಬಹುದು.

    apvc-iconPost Views: 7
  • Jio–Airtel‌ಗೆ ಸವಾಲು: BSNL ₹1 4G ಪ್ಯಾಕ್  

    Jio–Airtel‌ಗೆ ಸವಾಲು: BSNL ₹1 4G ಪ್ಯಾಕ್  

    ಭಾರತದ ಅತ್ಯಂತ ವೈಭವಶಾಲಿ ಹಾಗೂ ಹರ್ಷೋಲ್ಲಾಸದ ಹಬ್ಬಗಳಲ್ಲಿ ಒಂದಾದ ದೀಪಾವಳಿ, ಬೆಳಕಿನ ಜಯ, ಹೊಸ ಆರಂಭ ಹಾಗೂ ಕುಟುಂಬದ ಸಂಭ್ರಮದ ಸಂಕೇತವಾಗಿದೆ. ಪ್ರತಿ ವರ್ಷ ಈ ಸಮಯದಲ್ಲಿ ವ್ಯಾಪಾರ, ಹೂಡಿಕೆ ಮತ್ತು ಸೇವಾ ಕ್ಷೇತ್ರಗಳು ಗ್ರಾಹಕರ ಹೃದಯ ಗೆಲ್ಲಲು ವಿವಿಧ ರೀತಿಯ ಆಕರ್ಷಕ ಯೋಜನೆಗಳನ್ನು ಘೋಷಿಸುತ್ತವೆ. ಟೆಲಿಕಾಂ ಕ್ಷೇತ್ರದಲ್ಲಿಯೂ ಈ ಪೈಪೋಟಿ ತೀವ್ರವಾಗಿದ್ದು, ಖಾಸಗಿ ಕಂಪನಿಗಳು ವಿಭಿನ್ನ ರಿಯಾಯಿತಿ ಹಾಗೂ ಉಡುಗೊರೆಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿವೆ.

    ಈ ಪೈಪೋಟಿಯಲ್ಲಿ ಇದೀಗ ಸರ್ಕಾರಿ ಟೆಲಿಕಾಂ ದೈತ್ಯ ಭಾರತ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕೂಡ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ, ಕಂಪನಿಯು ನಿಜಕ್ಕೂ ಗ್ರಾಹಕರಿಗೆ ಅಚ್ಚರಿ ಮೂಡಿಸುವ ಹೊಸ ಯೋಜನೆಯನ್ನು ಅನಾವರಣಗೊಳಿಸಿದೆ. ಕೇವಲ ₹1 ಕ್ಕೆ ಪೂರ್ಣ ಒಂದು ತಿಂಗಳ 4G ಸೇವಾ ಪ್ಯಾಕ್! ಇದು ಕೇವಲ ಆಫರ್‌ವಲ್ಲ, BSNL ತನ್ನ ನೆಟ್‌ವರ್ಕ್ ಶಕ್ತಿಯನ್ನು ದೇಶಾದ್ಯಂತ ತೋರಿಸಲು ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ.

    ಆಫರ್ ಮಾನ್ಯಾವಧಿ:

    ಈ ವಿಶಿಷ್ಟ ಯೋಜನೆ ಅಕ್ಟೋಬರ್ 15ರಿಂದ ನವೆಂಬರ್ 15, 2025ರವರೆಗೆ ಲಭ್ಯ. ಈ ಅವಧಿಯಲ್ಲಿ BSNL ಗೆ ಸೇರುವ ಹೊಸ ಗ್ರಾಹಕರು ಕೇವಲ ₹1 ನಾಮಮಾತ್ರ ಶುಲ್ಕ ಪಾವತಿಸಿ 30 ದಿನಗಳ ಕಾಲ ಸಂಪೂರ್ಣ 4G ಸೇವೆಯನ್ನು ಅನುಭವಿಸಬಹುದು ಯಾವುದೇ ಹೆಚ್ಚುವರಿ ಖರ್ಚು ಇಲ್ಲದೆ.

    ಯೋಜನೆಯ ಉದ್ದೇಶವೇನು?:

    ಈ ದೀಪಾವಳಿ ಆಫರ್‌ನ ಹಿಂದೆ ಹಲವು ಉದ್ದೇಶಗಳು ಅಡಗಿವೆ,

    ದೇಶೀಯವಾಗಿ ಅಭಿವೃದ್ಧಿಪಡಿಸಿದ BSNL ನ 4G ತಂತ್ರಜ್ಞಾನವನ್ನು ಜನರಿಗೆ ನೇರವಾಗಿ ಪರಿಚಯಿಸುವುದು.

    ಹಬ್ಬದ ವಾತಾವರಣವನ್ನು ಸದುಪಯೋಗಪಡಿಸಿಕೊಂಡು ಹೊಸ ಗ್ರಾಹಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವುದು.

    Jio ಮತ್ತು Airtel ಮುಂತಾದ ಖಾಸಗಿ ಕಂಪನಿಗಳಿಗೆ ಸ್ಪರ್ಧಾತ್ಮಕವಾಗಿ ನಿಲ್ಲುವುದು.

    ₹1 ಯೋಜನೆಯ ಪ್ರಮುಖ ಸೌಲಭ್ಯಗಳು ಹೀಗಿವೆ:

    ಈ ದೀಪಾವಳಿ ಪ್ಯಾಕ್ ಹೊಸ ಬಳಕೆದಾರರಿಗೆ BSNL ನೆಟ್‌ವರ್ಕ್‌ನ ಸಂಪೂರ್ಣ ಅನುಭವ ನೀಡಲು ವಿನ್ಯಾಸಗೊಳಿಸಲಾಗಿದೆ.

    ದಿನಕ್ಕೆ 2GB ಹೈ-ಸ್ಪೀಡ್ 4G ಡೇಟಾ.

    ಭಾರತದೆಲ್ಲೆಡೆ ಅನಿಯಮಿತ ಧ್ವನಿ ಕರೆಗಳು.

    ಪ್ರತಿದಿನ 100 ಉಚಿತ SMS.

    ಉಚಿತ ಸಿಮ್ ಕಾರ್ಡ್ ವಿತರಣೆ.

    ಈ ಎಲ್ಲಾ ಸೌಲಭ್ಯಗಳು 30 ದಿನಗಳ ಕಾಲ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ದೊರೆಯುತ್ತವೆ. ಹೊಸ ಗ್ರಾಹಕರು BSNL ನ ಸೇವಾ ಗುಣಮಟ್ಟ ಮತ್ತು ವೇಗವನ್ನು ನೇರವಾಗಿ ಪರೀಕ್ಷಿಸಲು ಇದು ಉತ್ತಮ q ಅವಕಾಶವಾಗಿದೆ.

    ಆಫರ್ ಪಡೆಯುವ ವಿಧಾನ:

    ಈ ಪ್ಯಾಕ್‌ನ್ನು ಪಡೆಯುವುದು ತುಂಬಾ ಸರಳ,

    ಹತ್ತಿರದ BSNL ಕಚೇರಿ ಅಥವಾ ಅಧಿಕೃತ ಅಂಗಡಿಗೆ ತೆರಳಿ ನೋಂದಣಿ ಮಾಡಿಕೊಳ್ಳಬಹುದು.

    ಅಥವಾ BSNL ನ ಅಧಿಕೃತ ವೆಬ್‌ಸೈಟ್ ಅಥವಾ ಆಪ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬಹುದು.

    ಪ್ರಾಥಮಿಕ ದೃಢೀಕರಣದ ಬಳಿಕ ಸೇವೆ ತಕ್ಷಣ ಸಕ್ರಿಯಗೊಳ್ಳುತ್ತದೆ.

    ಆಗಸ್ಟ್ ಆಫರ್‌ನ ಪ್ರಭಾವ:

    ಈ ಹೊಸ ಯೋಜನೆಯ ಹಿಂದೆ BSNL ಗೆ ಒಂದು ಮಹತ್ವದ ಹಿನ್ನೆಲೆ ಇದೆ. 2025ರ ಆಗಸ್ಟ್‌ನಲ್ಲಿ ಕಂಪನಿಯು ಇದೇ ರೀತಿಯ ಪ್ರಚಾರ ಆಫರ್ ಬಿಡುಗಡೆ ಮಾಡಿತ್ತು ಮತ್ತು ಅಚ್ಚರಿ ಮೂಡಿಸುವ ಪ್ರತಿಕ್ರಿಯೆ ದೊರೆಯಿತು, ಕೇವಲ ಒಂದು ತಿಂಗಳ ಅವಧಿಯಲ್ಲಿ 1.38 ಲಕ್ಷಕ್ಕೂ ಹೆಚ್ಚು ಹೊಸ ಗ್ರಾಹಕರು BSNL ಗೆ ಸೇರಿದರು. ಇದರ ಫಲವಾಗಿ, BSNL ಆಗಸ್ಟ್ ತಿಂಗಳಲ್ಲಿ ಹೊಸ ಗ್ರಾಹಕರ ದಾಖಲೆಯ ಆಧಾರದ ಮೇಲೆ Airtel ನಂತರ ದೇಶದ ಎರಡನೇ ಅತಿದೊಡ್ಡ ಮೊಬೈಲ್ ಸೇವಾ ಪೂರೈಕೆದಾರನಾಗಿ ಹೊರಹೊಮ್ಮಿತು. ಈ ಯಶಸ್ಸಿನಿಂದ, ದೀಪಾವಳಿಯ ಸಮಯದಲ್ಲಿ BSNL ತನ್ನ 4G ವಿಸ್ತರಣೆಗೆ ಮತ್ತಷ್ಟು ವೇಗ ನೀಡುತ್ತಿದೆ.

    ಆತ್ಮನಿರ್ಭರ್ ಭಾರತದತ್ತ ಹೆಜ್ಜೆ:

    BSNL ನ 4G ನೆಟ್‌ವರ್ಕ್ ಸಂಪೂರ್ಣವಾಗಿ ಭಾರತೀಯ ತಂತ್ರಜ್ಞಾನ ಆಧಾರಿತವಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋರ್ ನೆಟ್‌ವರ್ಕ್ ಮತ್ತು ಉಪಕರಣಗಳನ್ನು ಬಳಸಿ ನಿರ್ಮಿಸಲಾದ ಈ ಯೋಜನೆ ಆತ್ಮನಿರ್ಭರ್ ಭಾರತ್ ಉದ್ದೇಶದತ್ತ ಮಹತ್ವದ ಹಂತವಾಗಿದೆ.

    ದೀಪಾವಳಿಯ ಸಂಭ್ರಮದಲ್ಲಿ BSNL ಘೋಷಿಸಿರುವ ಈ ₹1 ಯೋಜನೆ, ಗ್ರಾಹಕರಿಗೆ ಯಾವುದೇ ಬಾಧ್ಯತೆ ಇಲ್ಲದೆ ಉನ್ನತ ಮಟ್ಟದ 4G ಅನುಭವ ನೀಡುವ ಅಪರೂಪದ ಅವಕಾಶವಾಗಿದೆ. ಇದು ಕೇವಲ ಮಾರ್ಕೆಟಿಂಗ್ ತಂತ್ರವಲ್ಲ , ಖಾಸಗಿ ಕಂಪನಿಗಳ ಬಲಿಷ್ಠ ನೆಟ್‌ವರ್ಕ್‌ಗಳಿಗೆ ನೇರ ಸವಾಲು ನೀಡುವ ಸರ್ಕಾರಿ ಸಂಸ್ಥೆಯ ಧೈರ್ಯಶಾಲಿ ಹೆಜ್ಜೆಯಾಗಿದೆ.

    apvc-iconPost Views: 32