Blog

  • ಬೋಧಕ-ಸಿಬ್ಬಂದಿಗೆ ಸಂತಸದ ಸುದ್ದಿ-ತುಟ್ಟಿಭತ್ಯೆ ಶೇಕಡ 58ಕ್ಕೆ ಹೆಚ್ಚಿಸಿ ಅಧಿಕೃತ ಆದೇಶ

    ಬೋಧಕ-ಸಿಬ್ಬಂದಿಗೆ ಸಂತಸದ ಸುದ್ದಿ-ತುಟ್ಟಿಭತ್ಯೆ ಶೇಕಡ 58ಕ್ಕೆ ಹೆಚ್ಚಿಸಿ ಅಧಿಕೃತ ಆದೇಶ

    ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ದೊಡ್ಡ ಗುಡ್ ನ್ಯೂಸ್. ಕೇಂದ್ರ ಸರ್ಕಾರವು UGC/ICAR/AICTE ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಪೂರ್ಣಕಾಲಿಕ ನೌಕರರಿಗಾಗಿ ತುಟ್ಟಿಭತ್ಯೆ ಶೇಕಡ 58ಕ್ಕೆ ಏರಿಸಲು ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ಹುದ್ದೆ ಅನುಸಾರ 1ನೇ ಜುಲೈ 2025ರಿಂದ ಜಾರಿಗೆ ಬರಲಿದೆ.

    ತುಟ್ಟಿಭತ್ಯೆ ಏಕೆ ಹೆಚ್ಚುತ್ತಿದೆ?
    2016ರಲ್ಲಿ ಪರಿಷ್ಕೃತ UGC/ICAR/AICTE ವೇತನ ಶ್ರೇಣಿಗಳಲ್ಲಿ ಬೋಧಕರಿಗೆ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳಿಗೆ ನೀಡಲಾಗುವ ತುಟ್ಟಿಭತ್ಯೆಯ ದರವು ಮೊದಲು ಮೂಲ ವೇತನದ 55% ಆಗಿದ್ದರಿಂದ ಇದನ್ನು ಶೇಕಡ 58ಕ್ಕೆ ಹೆಚ್ಚಿಸಲಾಗುತ್ತಿದೆ. ಈ ಕ್ರಮದ ಉದ್ದೇಶ, ಶೈಕ್ಷಣಿಕ ಕ್ಷೇತ್ರದಲ್ಲಿ ನೌಕರರ ಸ್ಥಿರತೆ ಮತ್ತು ಪ್ರೋತ್ಸಾಹವನ್ನು ಉತ್ತೇಜಿಸುವುದಾಗಿದೆ.

    ಮುಖ್ಯ ಅಂಶಗಳು:
    ಮೂಲ ವೇತನ ಎಂದರೆ ನೌಕರನು ತನ್ನ ಹುದ್ದೆಗೆ ಅನ್ವಯವಾಗುವ 2016ರ ಪರಿಷ್ಕೃತ ವೇತನ ಶ್ರೇಣಿಯಡಿಯಲ್ಲಿ ಪಡೆಯುವ ವೇತನ.
    ಈ ಆದೇಶವು ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ.
    ವೇತನದಲ್ಲಿ ಪರಿಗಣಿಸದ ಯಾವುದೇ ಉಪಲಬ್ಧಗಳನ್ನು ಮೂಲ ವೇತನದಲ್ಲಿ ಸೇರಿಸಬಾರದು.
    ಅನುಮೋದಿತ ತುಟ್ಟಿಭತ್ಯೆ ಮುಂದಿನ ಆದೇಶದವರೆಗೂ ನಗದು ರೂಪದಲ್ಲಿ ಪಾವತಿಸಬೇಕಾಗಿದೆ.
    ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು 2025ರ ಅಕ್ಟೋಬರ್ ವೇತನಕ್ಕೆ ಮುಂಚಿತವಾಗಿ ಪಾವತಿಸಬೇಕಾಗಿದೆ.
    ಐವತ್ತು ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರೈಸಲಾಗುವುದು; ಐವತ್ತು ಪೈಸೆಕ್ಕಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ತೊರೆದಿಡಲಾಗುವುದು.
    ತುಟ್ಟಿಭತ್ಯೆ ಸಂಭಾವನೆಯ ವಿಶೇಷ ಅಂಶವಾಗಿ ಮಾತ್ರ ತೋರಿಸಬೇಕಾಗಿದ್ದು, ಇದನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ವೇತನವೆಂದು ಪರಿಗಣಿಸಲಾಗುವುದಿಲ್ಲ.

    ಈ ಆದೇಶವು ವಿದ್ಯಾಭ್ಯಾಸದ ಹತ್ತಿರ ಕೆಲಸ ಮಾಡುವ ನೌಕರರಿಗೆ ಬಹುಮಾನ ಹಾಗೂ ಪ್ರೋತ್ಸಾಹದ ಹೊಸ ಹಂತವನ್ನು ನೀಡಲಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಅವರು ತಮ್ಮ ಸೇವೆಯ ಗುಣಮಟ್ಟವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತರುವಲ್ಲಿ ಸಹಾಯವಾಗಲಿದೆ.

    apvc-iconPost Views: 11
  • ಗಲ್ಲು ಶಿಕ್ಷೆಗೆ ಪರ್ಯಾಯ ಚರ್ಚೆ: ಸುಪ್ರೀಂ ಕೋರ್ಟ್‌ನಲ್ಲಿ ವಿಷದ ಚುಚ್ಚುಮದ್ದು ವಿಧಾನ ವಿಚಾರಣೆ

    ಗಲ್ಲು ಶಿಕ್ಷೆಗೆ ಪರ್ಯಾಯ ಚರ್ಚೆ: ಸುಪ್ರೀಂ ಕೋರ್ಟ್‌ನಲ್ಲಿ ವಿಷದ ಚುಚ್ಚುಮದ್ದು ವಿಧಾನ ವಿಚಾರಣೆ

    ಭಾರತದಲ್ಲಿ ಮರಣದಂಡನೆ ಎಂದರೆ ಸಾಮಾನ್ಯವಾಗಿ ಮನಸ್ಸಿಗೆ ಬರುವ ಚಿತ್ರ ಗಲ್ಲಿಗೇರಿಸುವುದು. ಈ ದೃಶ್ಯವು ಕೇವಲ ನ್ಯಾಯದ ಬಲವಾದ ಹಂತವಲ್ಲ, ಮಾನವೀಯ ಮೌಲ್ಯಗಳ ಪರೀಕ್ಷೆಯೂ ಹೌದು. ಕೊಲೆ, ಅತ್ಯಾಚಾರ, ಭಯೋತ್ಪಾದನೆ, ಸಾಮೂಹಿಕ ದೌರ್ಜನ್ಯ ಮುಂತಾದ ಭೀಕರ ಅಪರಾಧಗಳಿಗೆ ಮರಣದಂಡನೆ ವಿಧಿಸುವುದು ನ್ಯಾಯಾಂಗದ ಭಾಗವಾಗಿದ್ದರೂ, ಅಪರಾಧಿಯ ಜೀವವನ್ನು ಕೊನೆಗಾಣಿಸುವ ವಿಧಾನದಲ್ಲಿ ಮಾನವೀಯತೆ ಇರಬೇಕೇ? ಎಂಬ ಪ್ರಶ್ನೆ ಇತ್ತೀಚೆಗೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

    ಭಾರತದ ಸುಪ್ರೀಂ ಕೋರ್ಟ್ ಇದೀಗ ಇದೇ ವಿಷಯದ ಕುರಿತು ಗಂಭೀರವಾಗಿ ಚಿಂತನೆ ಆರಂಭಿಸಿದೆ, ಗಲ್ಲು ಶಿಕ್ಷೆಯ ಬದಲು ವಿಷದ ಚುಚ್ಚುಮದ್ದು (lethal injection) ಅಥವಾ ನೋವಿಲ್ಲದ ಇತರ ವಿಧಾನಗಳನ್ನು ಅಳವಡಿಸಬೇಕೇ ಎಂಬ ವಿಚಾರದಲ್ಲಿ ನ್ಯಾಯಾಂಗದ ನಿಲುವು ಚರ್ಚೆಗೆ ಗ್ರಾಸವಾಗಿದೆ.

    ಮರಣದಂಡನೆ ಎಂದರೇನು?
    ಮರಣದಂಡನೆ ಎಂದರೆ ನ್ಯಾಯಾಲಯವು ಒಬ್ಬ ಅಪರಾಧಿಗೆ ವಿಧಿಸುವ ಅಂತಿಮ ಶಿಕ್ಷೆ. ಭಾರತದಲ್ಲಿ ಇದು ಸಾಮಾನ್ಯವಾಗಿ ಗಲ್ಲು ಶಿಕ್ಷೆಯ ರೂಪದಲ್ಲಿ ಜಾರಿಯಲ್ಲಿದೆ. ಕೊಲೆ, ಅತ್ಯಾಚಾರ, ಭಯೋತ್ಪಾದನೆ, ಮಕ್ಕಳ ಮೇಲಿನ ಕ್ರೂರ ದೌರ್ಜನ್ಯ, ಸರಕಾರದ ವಿರುದ್ಧ ದಂಗೆ, ಮಾದಕ ವಸ್ತು ಕಳ್ಳಸಾಗಣೆ ಮತ್ತು ಸೇನಾ ದ್ರೋಹ ಮುಂತಾದ ಅಪರಾಧಗಳಿಗೆ ಮರಣದಂಡನೆ ವಿಧಿಸಬಹುದು. ಅಲ್ಲದೆ, ಸುಳ್ಳು ಸಾಕ್ಷಿಯಿಂದ ನಿರಪರಾಧಿಯು ಮರಣದಂಡನೆಗೆ ಗುರಿಯಾದರೆ, ಆ ಸುಳ್ಳು ಸಾಕ್ಷಿ ನೀಡಿದ ವ್ಯಕ್ತಿಗೂ ಇದೇ ಶಿಕ್ಷೆ ವಿಧಿಸಬಹುದು.

    ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಚರ್ಚೆ:
    ಬ್ರಿಟಿಷರ ಕಾಲದಿಂದಲೂ ಭಾರತದಲ್ಲಿ ಗಲ್ಲು ಶಿಕ್ಷೆ ಸಾಂಪ್ರದಾಯಿಕವಾಗಿ ಮುಂದುವರಿದಿದೆ. ಆದರೆ ಈಗ ವಿಶ್ವದ ಅನೇಕ ರಾಷ್ಟ್ರಗಳು ಮರಣದಂಡನೆಗೆ ಮಾನವೀಯ ಪರ್ಯಾಯ ಮಾರ್ಗಗಳನ್ನು ಹುಡುಕಿವೆ. ಈ ಹಿನ್ನೆಲೆಯಲ್ಲಿ ಕೆಲ ಸಾರ್ವಜನಿಕರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ, ಗಲ್ಲು ಶಿಕ್ಷೆಯ ಬದಲಿಗೆ ವಿಷದ ಚುಚ್ಚುಮದ್ದು, ಗುಂಡು ಹಾರಿಸುವುದು, ವಿಷ ಅನಿಲ ಅಥವಾ ವಿದ್ಯುತ್ ಪ್ರಹಾರದಿಂದ ಶಿಕ್ಷೆ ನೀಡುವ ಆಯ್ಕೆಯನ್ನು ನೀಡಬಹುದು ಎಂದು ಮನವಿ ಮಾಡಿದ್ದಾರೆ.

    ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ವಿಚಾರದಲ್ಲಿ ತಾತ್ವಿಕ ಸತ್ಯವಿದೆ ಎಂದು ಗಮನಿಸಿದೆ. ನೇಣು ಹಾಕುವ ವಿಧಾನದಲ್ಲಿ ವ್ಯಕ್ತಿಯ ತೂಕ, ಎತ್ತರ ಅಥವಾ ದೇಹದ ಸ್ಥಿತಿಯನ್ನು ಪರಿಗಣಿಸದೆ ಒಂದೇ ರೀತಿಯ ಕ್ರಮ ಅನುಸರಿಸಲಾಗುತ್ತದೆ. ಇದರಿಂದ ಕೆಲವು ಕೈದಿಗಳು ನಾಲ್ವತ್ತು ನಿಮಿಷಗಳವರೆಗೆ ನರಕಯಾತನೆ ಅನುಭವಿಸುತ್ತಾರೆ ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ. ಆದಾಗ್ಯೂ, ಕೇಂದ್ರ ಸರ್ಕಾರ ಈ ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಕೋರ್ಟ್ ಹೇಳಿದೆ.

    ಗಲ್ಲು ಶಿಕ್ಷೆಯ ವಿಧಾನ:
    ಅಪರಾಧಿಯನ್ನು ಗಲ್ಲಿಗೆ ಏರಿಸುವ ಮುನ್ನಾ ದಿನ ಅಧಿಕಾರಿಗಳು ಪರೀಕ್ಷೆ ನಡೆಸುತ್ತಾರೆ. ಕೈದಿಯ ತೂಕದಷ್ಟೇ ಮರಳು ತುಂಬಿದ ಚೀಲವನ್ನು ನೇತು ಹಾಕಿ ಹಗ್ಗದ ಬಲ ಪರೀಕ್ಷಿಸುತ್ತಾರೆ. ಬಳಿಕ ಕೈದಿಯ ಎತ್ತರಕ್ಕೆ ತಕ್ಕಂತೆ ಹಗ್ಗದ ಉದ್ದವನ್ನು ನಿಗದಿಪಡಿಸಲಾಗುತ್ತದೆ. ಆದರೆ ನೇಣು ಹಾಕಿದ ಕ್ಷಣದಲ್ಲೇ ಪ್ರಾಣ ಹೋಗುವುದಿಲ್ಲ, ಉಸಿರಾಟ ನಿಲ್ಲಲು ಸುಮಾರು 30–40 ನಿಮಿಷ ಬೇಕಾಗುತ್ತದೆ. ಇದರಿಂದಲೇ ಈ ಕ್ರಮವನ್ನು ಅಮಾನವೀಯ ಎಂದು ವಿಮರ್ಶಿಸಲಾಗಿದೆ.

    ವಿಷದ ಚುಚ್ಚುಮದ್ದು ವಿಧಾನ:
    ವಿಷದ ಚುಚ್ಚುಮದ್ದು ವಿಧಾನದಲ್ಲಿ ಮರಣದಂಡನೆ ಅತಿ ಕಡಿಮೆ ಯಾತನೆಯೊಂದಿಗೆ ಜಾರಿಗೊಳ್ಳುತ್ತದೆ. ಅಪರಾಧಿಯನ್ನು ಮಂಚದ ಮೇಲೆ ಮಲಗಿಸಿ ಹಗ್ಗಗಳಿಂದ ಕಟ್ಟಲಾಗುತ್ತದೆ. ಬಳಿಕ ಅಧಿಕಾರಿಗಳ ಸಮಕ್ಷಮದಲ್ಲಿ ಮೂರು ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ,
    ಅರಿವಳಿಕೆ ಮದ್ದು – ಅಪರಾಧಿಯನ್ನು ನಿದ್ರೆಗೆ ಜಾರಿಸುತ್ತದೆ.
    ಪ್ಯಾನ್‌ಕುರೋನಿಯಮ್ ಬೋಮೈಡ್ – ನರಗಳು ಮತ್ತು ಸ್ನಾಯುಗಳನ್ನು ಅಚಲಗೊಳಿಸುತ್ತದೆ.
    ಪೊಟ್ಯಾಸಿಯಮ್ ಕ್ಲೋರೈಡ್ – ಹೃದಯ ಬಡಿತವನ್ನು ನಿಲ್ಲಿಸುತ್ತದೆ.
    ಈ ಪ್ರಕ್ರಿಯೆ ಸುಮಾರು 10–15 ನಿಮಿಷಗಳಲ್ಲಿ ನೋವಿಲ್ಲದೆ ಜೀವಹರಣ ಮಾಡುತ್ತದೆ. ಅಮೆರಿಕಾ, ಚೀನಾ, ತೈವಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಇದೇ ವಿಧಾನ ಅಳವಡಿಸಲಾಗಿದೆ.

    ಗಲ್ಲು ಶಿಕ್ಷೆಯ ಅಂಕಿಅಂಶ:
    ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟಿಷರು ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸುತ್ತಿದ್ದರು.
    ಸ್ವಾತಂತ್ರ್ಯಾನಂತರ ಈ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ.
    2023ರ ವರೆಗೆ ಭಾರತದಲ್ಲಿ ಒಟ್ಟು 561 ಮಂದಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ಗಲ್ಲು ಶಿಕ್ಷೆಗೆ ವಿರೋಧದ ಕಾರಣ ಏನು?
    ಇದು ಅಮಾನವೀಯ ಮತ್ತು ಹಿಂಸಾತ್ಮಕ ಎಂದು ಅನೇಕರು ಪರಿಗಣಿಸುತ್ತಾರೆ.
    ಪ್ರಾಣ ಒಂದೇ ಬಾರಿಗೆ ಹೋಗದೆ ದೀರ್ಘಕಾಲದ ನೋವುಂಟಾಗುತ್ತದೆ.
    ಮರಣದಂಡನೆ ಅಪರಾಧವನ್ನು ತಡೆಯುತ್ತದೆ ಎಂಬ ದೃಢವಾದ ಸಾಬೀತುಗಳಿಲ್ಲ.
    ಈ ಕಾರಣಗಳಿಂದ ಹಲವಾರು ರಾಷ್ಟ್ರಗಳು ಈ ಶಿಕ್ಷೆಯನ್ನು ನಿಷೇಧಿಸಿವೆ ಅಥವಾ ಬದಲಾವಣೆ ಮಾಡಿದ್ದಾರೆ.

    ವಿವಿಧ ದೇಶಗಳಲ್ಲಿ ಮರಣದಂಡನೆ ವಿಧಾನಗಳು:
    ಗುಂಡು ಹಾರಿಸುವುದು – ರಷ್ಯಾ, ಇಂಡೋನೇಷ್ಯಾ, ಬಾಂಗ್ಲಾ, ಕೊರಿಯಾ ಮುಂತಾದ ದೇಶಗಳಲ್ಲಿ.
    ತಲೆ ಕತ್ತರಿಸುವುದು – ಸೌದಿ ಅರೇಬಿಯಾ, ಇರಾನ್, ಯೆಮೆನ್.
    ವಿಷದ ಚುಚ್ಚುಮದ್ದು – ಚೀನಾ, ಅಮೆರಿಕಾ, ಥಾಯ್ಲೆಂಡ್.
    ಕಲ್ಲು ಹೊಡೆದು ಕೊಲ್ಲುವುದು – ನೈಜೀರಿಯಾ, ಪಾಕಿಸ್ಥಾನ, ಸುಡಾನ್.
    ವಿದ್ಯುತ್ ಕುರ್ಚಿ ಅಥವಾ ವಿಷ ಅನಿಲ ಕೊಠಡಿ – ಅಮೆರಿಕಾ.

    ವಿಶ್ವದ ನಿಲುವು ಏನು?
    2ನೇ ಮಹಾಯುದ್ಧದ ಬಳಿಕ ವಿಶ್ವಾದ್ಯಂತ ಮರಣದಂಡನೆ ವಿರೋಧ ಚಳವಳಿ ಬಲವತ್ತಾಯಿತು.
    1977ರಲ್ಲಿ ಕೇವಲ 16 ರಾಷ್ಟ್ರಗಳು ಮರಣದಂಡನೆಯನ್ನು ನಿಷೇಧಿಸಿದ್ದರೆ, ಇಂದಿಗೆ 95 ರಾಷ್ಟ್ರಗಳು ಸಂಪೂರ್ಣವಾಗಿ ರದ್ದುಮಾಡಿವೆ.
    ಭಾರತ ಸೇರಿದಂತೆ 58 ರಾಷ್ಟ್ರಗಳಲ್ಲಿ ಮಾತ್ರ ಈ ಶಿಕ್ಷೆ ಇನ್ನೂ ಅಸ್ತಿತ್ವದಲ್ಲಿದೆ.

    ಇನ್ನು, ಮರಣದಂಡನೆ ಕುರಿತು ಚರ್ಚೆ ಕೇವಲ ಕಾನೂನಿನ ವಿಷಯವಲ್ಲ, ಅದು ಮಾನವೀಯತೆಯ ಮತ್ತು ನ್ಯಾಯದ ಮಧ್ಯದ ಸೂಕ್ಷ್ಮ ಸಮತೋಲನ. ಅಪರಾಧವನ್ನು ತಡೆಯುವ ಹೆಸರಿನಲ್ಲಿ ಅಪರಾಧಿಯನ್ನೇ ಕ್ರೂರವಾಗಿ ಕೊಲ್ಲುವುದು ಸರಿಯೇ ಎಂಬ ಪ್ರಶ್ನೆ ಸಮಾಜದ ಅಂತರಾಳವನ್ನು ತಟ್ಟುತ್ತಿದೆ.

    apvc-iconPost Views: 21
  • ಕರುಳಿನ ಆರೋಗ್ಯವನ್ನು ಕಾಪಾಡುವ ಕೆಲವು ಅತ್ಯುತ್ತಮ ಆಹಾರಗಳು ಇಲ್ಲಿವೆ!

    ಕರುಳಿನ ಆರೋಗ್ಯವನ್ನು ಕಾಪಾಡುವ ಕೆಲವು ಅತ್ಯುತ್ತಮ ಆಹಾರಗಳು ಇಲ್ಲಿವೆ!

    ನಮ್ಮ ದೇಹದ ಶ್ರೇಯಸ್ಸು ಕರುಳಿನ ಆರೋಗ್ಯದಿಂದಲೇ ಆರಂಭವಾಗುತ್ತದೆ ಎನ್ನುವುದು ಅತಿಶಯೋಕ್ತಿ ಅಲ್ಲ. ಸರಿಯಾದ ಜೀರ್ಣಕ್ರಿಯೆ ನಮ್ಮ ದೇಹದ ಸಮತೋಲನವನ್ನು ಕಾಪಾಡಿ ಶಕ್ತಿ, ಚೈತನ್ಯ ಮತ್ತು ರೋಗನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಕೆಲವು ಆಹಾರಗಳ ಕುರಿತು ತಿಳಿದುಕೊಳ್ಳೋಣ.

    ಫೈಬರ್ – ಕರುಳಿನ ಆರೋಗ್ಯದ ಹೀರೋ

    ನಾವು ತಿನ್ನುವ ಆಹಾರದಲ್ಲಿ ಫೈಬರ್ ಅಂಶ ತುಂಬಾ ಮುಖ್ಯ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಕರುಳಿನ ಚಲನವಲನ ಸರಾಗವಾಗಿರಲು ಇದು ನೆರವಾಗುತ್ತದೆ. ದಿನನಿತ್ಯದ ಆಹಾರದಲ್ಲಿ ಫೈಬರ್ ಸಮೃದ್ಧ ಪದಾರ್ಥಗಳನ್ನು ಸೇರಿಸುವುದು ಕರುಳಿನ ಆರೋಗ್ಯಕ್ಕೆ ಬಹಳ ಸಹಕಾರಿಯಾಗಿದೆ.

     ಹುರಿದ ಕಡಲೆ – ಚಿಕ್ಕದಾದರೂ ದೊಡ್ಡ ಲಾಭ

    ಹುರಿದ ಕಡಲೆ ನಮ್ಮ ಊಟದ ನಂತರ ತಿನ್ನಲು ಅತ್ಯುತ್ತಮವಾದ ಸ್ನ್ಯಾಕ್‌ ಆಗಿದೆ. ಇದರಲ್ಲಿ ಫೈಬರ್ ಹಾಗೂ ಪ್ರೋಟೀನ್ ಎರಡೂ ದೊರೆಯುತ್ತವೆ. ಕಡಲೆಯಲ್ಲಿರುವ ಕರಗದ ನಾರು ಮಲದ ಪ್ರಮಾಣವನ್ನು ಹೆಚ್ಚಿಸಿ ಮಲಬದ್ಧತೆಯನ್ನು ತಡೆಗಟ್ಟುವಂತೆ ಮಾಡುತ್ತದೆ. ಕರುಳಿನ ಚಲನೆಯನ್ನು ವೇಗಗೊಳಿಸಿ ಸುಲಭವಾಗಿ ತ್ಯಾಜ್ಯ ವಿಸರ್ಜನೆಗೆ ಸಹಾಯ ಮಾಡುತ್ತದೆ.

    ಕಪ್ಪು ಉದ್ದಿನ ಬೇಳೆ – ನೈಸರ್ಗಿಕ ಜೀರ್ಣಶಕ್ತಿ ವರ್ಧಕ

    ಕಪ್ಪು ಉದ್ದಿನ ಬೇಳೆ ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಹಿತಕರವಾಗಿದೆ. ಇದು ಫೈಬರ್‌ಗಳಿಂದ ಸಮೃದ್ಧವಾಗಿದ್ದು ಕರುಳಿನ ಚಲನಶೀಲತೆಯನ್ನು ಸುಧಾರಿಸುತ್ತದೆ. ಉದ್ದಿನ ಬೇಳೆಯಲ್ಲಿರುವ ನಾರು ಅಂಶ ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

     ಪೇರಳೆ – ಸರಳ ಹಣ್ಣು, ಶ್ರೇಷ್ಠ ಪ್ರಯೋಜನ

    ಪೇರಳೆ ಎಲ್ಲರಿಗೂ ಲಭ್ಯವಾಗುವ ಹಣ್ಣು. ಇದರಲ್ಲಿ ಕರಗುವ ಮತ್ತು ಕರಗದ ಎರಡೂ ರೀತಿಯ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ದಿನಕ್ಕೆ ಒಂದು ಪೇರಳೆ ತಿಂದರೆ ಮಲಬದ್ಧತೆಯ ಸಮಸ್ಯೆ ದೂರವಾಗುತ್ತದೆ.

    ಚಿಯಾ ಬೀಜಗಳು – ಚಿಕ್ಕದಾದರೂ ಅದ್ಭುತ

    ಚಿಯಾ ಬೀಜಗಳಲ್ಲಿ ಕರಗುವ ಫೈಬರ್ ಅಧಿಕವಾಗಿ ದೊರೆಯುತ್ತದೆ. ನೀರಿನೊಂದಿಗೆ ಸೇರಿ ಹೊಟ್ಟೆಯೊಳಗೆ ಜೆಲ್ ರಚನೆ ಮಾಡುತ್ತದೆ, ಇದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ಆಹಾರ ಸರಿಯಾಗಿ ಹಜಮಾಗುತ್ತದೆ. ಈ ಬೀಜಗಳು ಮಲವನ್ನು ಮೃದುವಾಗಿ ಮತ್ತು ಸುಲಭವಾಗಿ ಹೊರಬರುವಂತೆ ಮಾಡುತ್ತವೆ.

     ರಾಸ್ಪೆರಿ – ಕರುಳಿನ ಸ್ನೇಹಿತ ಹಣ್ಣು

    ರಾಸ್ಪೆರಿ ಹಣ್ಣಿನಲ್ಲಿರುವ ಫೈಬರ್ ಕರುಳಿನ ಒಳಗಿನ ಉಪಕಾರಿ ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತದೆ. ಈ ಸೂಕ್ಷ್ಮಜೀವಿಗಳು ದೇಹದೊಳಗೆ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಇದರ ಪರಿಣಾಮವಾಗಿ ದೇಹದಲ್ಲಿ ಪೋಷಕಾಂಶಗಳ ಶೋಷಣೆ ಸುಧಾರಿಸುತ್ತದೆ.

    ಕರುಳಿನ ಆರೋಗ್ಯ ಕಾಪಾಡುವುದು ದೀರ್ಘಕಾಲದ ಶಕ್ತಿಯ, ಸಂತೋಷದ ಮತ್ತು ಸಮತೋಲನದ ಗುಟ್ಟು. ಹೀಗಾಗಿ ದಿನನಿತ್ಯದ ಆಹಾರದಲ್ಲಿ ಇಂತಹ ನೈಸರ್ಗಿಕ, ಫೈಬರ್‌ಯುಕ್ತ ಪದಾರ್ಥಗಳನ್ನು ಸೇರಿಸಿ, ಕರುಳಿನ ಆರೈಕೆಗೆ ವಿಶೇಷ ಗಮನ ನೀಡಿದರೆ ಉತ್ತಮ.

    apvc-iconPost Views: 50
  • ಹೊಸ ಅವತಾರದಲ್ಲಿ ಟಾಲಿವುಡ್‌ನ ಡಾರ್ಲಿಂಗ್ ಪ್ರಭಾಸ್

    ಹೊಸ ಅವತಾರದಲ್ಲಿ ಟಾಲಿವುಡ್‌ನ ಡಾರ್ಲಿಂಗ್ ಪ್ರಭಾಸ್

    ಹೈದರಾಬಾದ್: ಸೌತ್ ಸಿನೆಮಾದ ಪ್ಯಾನ್ ಇಂಡಿಯಾ ಸ್ಟಾರ್, ಎಲ್ಲರ ಮನದ ಡಾರ್ಲಿಂಗ್ ಪ್ರಭಾಸ್ ಅವರ ಹುಟ್ಟುಹಬ್ಬ (ಅಕ್ಟೋಬರ್ 23) ಸಂದರ್ಭದಲ್ಲಿ ಅವರ ಹೊಸ ಸಿನಿಮಾ “ಫೌಜಿ” ಅಧಿಕೃತವಾಗಿ ಘೋಷಣೆಯಾಗಿದೆ.

    ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಭರ್ಜರಿಯಾಗಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಘೋಷಣೆಯ ಜೊತೆಗೆ ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ಈಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಪೋಸ್ಟರ್‌ನಲ್ಲಿ ಪ್ರಭಾಸ್ ಅವರ ತೀಕ್ಷ್ಣ ನೋಟ, ಯುದ್ಧ ಶಸ್ತ್ರಾಸ್ತ್ರಗಳು ಹಾಗೂ ಐತಿಹಾಸಿಕ ವಾತಾವರಣದ ವಿನ್ಯಾಸದಿಂದ ಕೂಡಿದೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

    ಚಿತ್ರದ ಕಥೆ 1940ರ ದಶಕದ ಬ್ರಿಟಿಷ್ ಭಾರತದ ಹಿನ್ನೆಲೆಯಲ್ಲಿದೆ ಎನ್ನಲಾಗಿದೆ. ಅಂದರೆ, ಇದು ಒಂದು ಪೀರಿಯಡ್ ಡ್ರಾಮಾ ಶೈಲಿಯ ಯುದ್ಧಕಥೆ ಆಗಿದ್ದು, ಪ್ರಭಾಸ್ ಅವರನ್ನು ಸಂಪೂರ್ಣ ಹೊಸ ಶೈಲಿಯಲ್ಲಿ ಕಾಣುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

    ಚಿತ್ರದಲ್ಲಿ ತಾರಾಬಳಗವೂ ಅತ್ಯಂತ ಭರ್ಜರಿಯಾಗಿದೆ ಇಮಾನ್ವಿ, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಾ ಪ್ರದಾ ಸೇರಿದಂತೆ ಹಲವಾರು ಹಿರಿಯ ಕಲಾವಿದರು ಕಾಣಿಸಿದ್ದಾರೆ.

    ಹುಟ್ಟುಹಬ್ಬದ ದಿನ ಬಿಡುಗಡೆಯಾದ ಈ ಘೋಷಣೆಯ ನಂತರ, ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಹ್ಯಾಷ್‌ಟ್ಯಾಗ್‌ಗಳು, ಪೋಸ್ಟರ್ ಹಂಚಿಕೆ, ಫ್ಯಾನ್ ಮೀಟಿಂಗ್‌ಗಳ ಮೂಲಕ “ಫೌಜಿ” ಬಗ್ಗೆ ಚರ್ಚೆ ಗರಿಗೆದರುತ್ತಿದೆ.

    apvc-iconPost Views: 6
  • IND Vs AUS 2nd ODI : ಅಡಿಲೇಡ್ ನಲ್ಲಿ ಮುಗ್ಗರಿಸಿದ ಗಿಲ್ ಪಡೆ

    IND Vs AUS 2nd ODI : ಅಡಿಲೇಡ್ ನಲ್ಲಿ ಮುಗ್ಗರಿಸಿದ ಗಿಲ್ ಪಡೆ

    ಅಡಿಲೇಡ್ : ಅಡಿಲೇಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಸೋಲು ಕಂಡಿದೆ. ಮೊದಲ ಏಕದಿನದಲ್ಲೇ ಸೋಲು ಕಂಡಿದ್ದ ಟೀಮ್ ಇಂಡಿಯಾ, ಈ ಪಂದ್ಯದಲ್ಲೂ ಆಸ್ಟ್ರೇಲಿಯಾದ ಬೌಲಿಂಗ್ ಹಾಗೂ ಬ್ಯಾಟಿಂಗ್ ದಾಳಿಗೆ ತತ್ತರಿಸಿ 3 ಪಂದ್ಯಗಳ ಸರಣಿಯನ್ನು 0–2 ಅಂತರದಿಂದ ಕಳೆದುಕೊಂಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 264 ರನ್‌ಗಳನ್ನು ಪೇರಿಸಿತು. ಆದರೆ ಗುರಿ ಬೆನ್ನಟ್ಟಿದ ಆತಿಥೇಯ ಆಸ್ಟ್ರೇಲಿಯಾ ತಂಡ ಇನ್ನೂ 22 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

    ಭಾರತದ ಇನ್ನಿಂಗ್ಸ್ ಆರಂಭದಿಂದಲೇ ಅಸ್ಥಿರವಾಗಿತ್ತು. ನಾಯಕ ಶುಭಮನ್ ಗಿಲ್ ಕೇವಲ 9 ರನ್ ಗಳಿಗೇ ವಿಕೆಟ್ ಕಳೆದುಕೊಂಡರೆ, ವಿರಾಟ್ ಕೊಹ್ಲಿ ನಿರಂತರ ಎರಡನೇ ಬಾರಿಗೆ ಸೊನ್ನೆಗೆ ಔಟಾದರು. ಆರಂಭಿಕ ಆಘಾತದ ನಂತರ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್ ಗೆ 118 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ನಿಶ್ಚಿತ ಭದ್ರತೆ ನೀಡಿದರು. ರೋಹಿತ್ 81 ರನ್ ಗಳಿಸಿದರು, ಅಯ್ಯರ್ 63 ರನ್ ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರರಾದ ಕೆಎಲ್ ರಾಹುಲ್ ಮತ್ತು ನಿತೀಶ್ ರೆಡ್ಡಿ ನಿರೀಕ್ಷೆಯ ಮಟ್ಟಕ್ಕೆ ಆಡಲಿಲ್ಲ.

    ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಕ್ಸೇವಿಯರ್ ಬಾರ್ಲೆಟ್ ಮತ್ತು ಸ್ಪಿನ್ನರ್ ಆ್ಯಡಂ ಝಂಪಾ ಅವರು ಭರ್ಜರಿ ಬೌಲಿಂಗ್ ತೋರಿದರು. ಝಂಪಾ ಅವರ ಸ್ಪಿನ್ ಬಲೆಗೆ ಭಾರತೀಯ ಬ್ಯಾಟರ್‌ಗಳು ತತ್ತರಿಸಿದರು. ಬಾರ್ಲೆಟ್ ಆರಂಭದಲ್ಲಿ ಭಾರತದ ಟಾಪ್ ಆರ್ಡರ್‌ನ ಮೂವರು ಆಟಗಾರರನ್ನು ಪೆವಿಲಿಯನ್ ಕಡೆ ಮುಖ ಮಾಡುವಂತೆ ಮಾಡಿದರು.

    ಆಸ್ಟ್ರೇಲಿಯಾದ ಪರ ಬ್ಯಾಟಿಂಗ್ ಮಾಡಲು ಇಳಿದವರು ಪ್ರಾರಂಭದಲ್ಲಿ ನಿಧಾನಗತಿಯಿಂದ ಆಡಿದರು. ನಾಯಕ ಮಿಚೆಲ್ ಮಾರ್ಷ್ (11) ಮತ್ತು ಟ್ರಾವಿಸ್ ಹೆಡ್ (28) ಬೇಗನೆ ಔಟಾದರೂ, ಮ್ಯಾಥ್ಯೂ ಶಾರ್ಟ್ (74) ಮತ್ತು ಅಂತಿಮ ಹಂತದಲ್ಲಿ ಅಜೇಯ ಅರ್ಧಶತಕ ಬಾರಿಸಿದ ಕೂಪರ್ ಕಾನೊಲಿ (61*) ಅವರು ಪಂದ್ಯವನ್ನು ಆಸ್ಟ್ರೇಲಿಯಾ ಕಡೆ ತಳ್ಳಿದರು. ಇವರ ತಾಳ್ಮೆಯ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾ ಭಾರತದಿಂದ 2 ವಿಕೆಟ್ ಗಳ ರೋಮಾಂಚಕ ಗೆಲುವು ಸಾಧಿಸಿತು.

    ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಏಕದಿನ ಸರಣಿಯನ್ನು 2–0 ಅಂತರದಿಂದ ಗೆದ್ದು ಭಾರತಕ್ಕೆ ನಿರಾಶೆ ಮೂಡಿಸಿದೆ. ವೇಗಕ್ಕೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಸ್ಪಿನ್ನರ್ ಝಂಪಾ ಅವರ ಬುದ್ಧಿವಂತ ಬೌಲಿಂಗ್, ಹಾಗೂ ಕಾನೊಲಿ–ಶಾರ್ಟ್ ಜೋಡಿಯ ಜಾಣ್ಮೆಯ ಬ್ಯಾಟಿಂಗ್ ಆಸ್ಟ್ರೇಲಿಯಾ ಗೆಲುವಿನ ಪ್ರಮುಖ ಅಸ್ತ್ರಗಳಾದವು.

    apvc-iconPost Views: 9
  • Bigg Boss Season 12 controversy:ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    Bigg Boss Season 12 controversy:ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ವಿವಾದದ ಕೇಂದ್ರಬಿಂದುವಾಗಿದೆ. ಮನರಂಜನೆ, ಡ್ರಾಮಾ ಮತ್ತು ಸಂವಾದಗಳೊಂದಿಗೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದ ಈ ಕಾರ್ಯಕ್ರಮ ಈಗ ಕಾನೂನು ಗೋಜಿಗೆ ಸಿಲುಕಿದೆ. ಸ್ಪರ್ಧಿಗಳ ನಡುವೆ ನಡೆದ ಒಂದು ಘಟನೆ, ಆಡಿದ ಮಾತು, ಬಳಸಿದ ಪದ ಬಳಕೆ ಮತ್ತು ಅದರ ಪರಿಣಾಮವಾಗಿ ಉಂಟಾದ ಸಾಮಾಜಿಕ ಪ್ರತಿಕ್ರಿಯೆ ಇವೆಲ್ಲದರ ಹಿನ್ನೆಲೆ ಈಗ ಚರ್ಚೆಗೆ ಗ್ರಾಸವಾಗಿದೆ.

    ಅಶ್ವಿನಿ ಗೌಡ ವಿರುದ್ಧ ದೂರು ದಾಖಲು:

    ಬಿಗ್‌ ಬಾಸ್‌ನ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನ ಪ್ರಕಾರ, ಬಿಗ್‌ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುವಾಗ “She is S… ಆ ಕ್ಯಾಟೆಗರಿ‌ನವರು” ಎಂಬ ಪದಬಳಕೆ ಮಾಡಿರುವುದು ವ್ಯಕ್ತಿತ್ವ ನಿಂದನೆಯಾಗಿದೆ ಎಂದು ಆರೋಪಿಸಲಾಗಿದೆ.

    ದೂರಿನಲ್ಲಿ ಅಶ್ವಿನಿ ಗೌಡ ಅವರೊಂದಿಗೆ ಕಲರ್ಸ್ ಕನ್ನಡ ಚಾನೆಲ್‌ನ ವ್ಯವಹಾರ ಮುಖ್ಯಸ್ಥ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ, ಹಾಗೂ ಡೈರೆಕ್ಟರ್ ಪ್ರಕಾಶ್ ಅವರ ಮೇಲೂ ಆರೋಪ ಹೊರಿಸಲಾಗಿದೆ. ಆರೋಪದಂತೆ, ಈ ರೀತಿಯ ನಿಂದನಾತ್ಮಕ ಪದಗಳನ್ನು ಸಂಪಾದನೆ ಮಾಡದೆ ಪ್ರಸಾರ ಮಾಡುವ ಮೂಲಕ ಚಾನೆಲ್ ಸಾಮಾಜಿಕ ಜವಾಬ್ದಾರಿಯನ್ನು ಉಲ್ಲಂಘಿಸಿದೆ. ಬಿಡದಿ ಪೊಲೀಸರು ಈ ಕುರಿತು ದೂರು ಸ್ವೀಕರಿಸಿ, ಎನ್‌ಸಿಆರ್ (Non-Cognizable Report) ದಾಖಲಿಸಿದ್ದಾರೆ ಅಂದರೆ ಇದು ಗಂಭೀರವಲ್ಲದ ಪ್ರಕರಣ ಎಂದು ಗುರುತಿಸಲಾಗಿದೆ.

    ದೂರಿನ ವಿಷಯವೇನು?: 

    ದೂರಿನಲ್ಲಿ ಉಲ್ಲೇಖಿಸಿರುವಂತೆ, ಬಿಗ್‌ ಬಾಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಗೌಡ ಅವರು ಬಳಸಿದ “S Category” ಎಂಬ ಪದ ಜಾತಿ ನಿಂದನೆ ಹಾಗೂ ವ್ಯಕ್ತಿತ್ವ ಹಾನಿಗೆ ಕಾರಣವಾಗುವಂತದ್ದು. ಈ ಪದ ಬಳಕೆ ಕೇವಲ ವ್ಯಕ್ತಿಗಷ್ಟೇ ಅಲ್ಲ, ಸಮಾಜದ ಕೆಲವು ವರ್ಗಗಳಿಗೂ ನೋವುಂಟುಮಾಡುತ್ತದೆ ಎಂಬ ಆರೋಪ ಇದೆ.

    ದೂರುದಾರ ಪ್ರಶಾಂತ್ ಮೆತಾಲ್ ಅವರ ಪ್ರಕಾರ, “ಇಂತಹ ಪದಗಳು ಸಾರ್ವಜನಿಕವಾಗಿ ಪ್ರಸಾರವಾಗುವುದರಿಂದ ಸಮಾಜದಲ್ಲಿ ತಪ್ಪು ಸಂದೇಶ ಹರಡುತ್ತದೆ ಮತ್ತು ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಿಸುವ ಉದ್ದೇಶದಿಂದ ಈ ಭಾಗವನ್ನು ತೆಗೆಯದೆ ಪ್ರಸಾರ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

    ರಕ್ಷಿತಾ ಶೆಟ್ಟಿ ಕ್ಯಾಮೆರಾ ಮುಂದೆ ಮಾತನಾಡುತ್ತಿದ್ದಾಗ, ಜಾಹ್ನವಿ ಮತ್ತು ಅಶ್ವಿನಿ ಗೌಡ ಫನ್ ಮಾಡಲು ಗೆಜ್ಜೆ (anklet) ಹಿಡಿದು ಅಲ್ಲಾಡಿಸಿದರೆಂದು ಹೇಳಲಾಗಿದೆ. ನಂತರ ಮನೆಯವರು ಯಾರು ಎಂದು ಕೇಳಿದಾಗ, ಇಬ್ಬರೂ ಅದು ರಕ್ಷಿತಾ ಮಾಡಿದ ಕೆಲಸ ಎಂದು ಸುಳ್ಳು ಹೇಳಿದ್ದಾರೆ.

    ಈ ವಿಷಯಕ್ಕೆ ಕೋಪಗೊಂಡ ರಕ್ಷಿತಾ ಇಬ್ಬರನ್ನೂ ಪ್ರಶ್ನಿಸಿದಾಗ ವಾಗ್ವಾದ ಉಂಟಾಯಿತು. ಅಶ್ವಿನಿ ಮತ್ತು ಜಾಹ್ನವಿ ತಮ್ಮ ತಪ್ಪನ್ನು ಒಪ್ಪದೆ ಗಲಾಟೆ ಮುಂದುವರಿಸಿದರು.

    ಮರುದಿನ ಬೆಳಗ್ಗೆ, ಅಶ್ವಿನಿ ಗೌಡ ಜಾಹ್ನವಿಯೊಂದಿಗೆ ಮಾತನಾಡುತ್ತಿದ್ದ ವೇಳೆ, ರಕ್ಷಿತಾಳ ಬಗ್ಗೆ “She is S… ಆ ಕ್ಯಾಟೆಗರಿಯವಳು” ಎಂದು ಹೇಳಿದ್ದು ಕ್ಯಾಮೆರಾದಲ್ಲಿ ಸೆರಿಯಾಗಿದೆ.

    ಸಾಮಾಜಿಕ ಪ್ರತಿಕ್ರಿಯೆ :

    ಈ ಘಟನೆ ಪ್ರಸಾರವಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಅಶ್ವಿನಿ ಗೌಡ ವಿರುದ್ಧ ಟೀಕೆಗಳ ಮಳೆ ಸುರಿಯುತ್ತಿದ್ದು, ಕೆಲವು ವೀಕ್ಷಕರು ಅವರ ಮಾತುಗಳನ್ನು ವೈಯಕ್ತಿಕ ಹಾಗೂ ಸಾಮಾಜಿಕ ನಿಂದನೆ ಎಂದು ಕರೆಯುತ್ತಿದ್ದರೆ, ಇನ್ನೂ ಕೆಲವರು ಬಿಗ್‌ ಬಾಸ್ ತಂಡದ ಸಂಪಾದನೆ ಮತ್ತು ಪ್ರಸಾರದ ನೀತಿಗಳನ್ನು ಪ್ರಶ್ನಿಸುತ್ತಿದ್ದಾರೆ.

    ಇನ್ನು, ಈ ಪ್ರಕರಣದಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಶ್ವಿನಿ ಗೌಡ ಅಥವಾ ಚಾನೆಲ್ ಪರವಾಗಿ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ. ಬಿಗ್‌ ಬಾಸ್ ಮನೆಯ ಮನರಂಜನೆ ಈಗ ವಿವಾದದ ಗೂಡಿನಲ್ಲಿ ಸಿಲುಕಿದೆ. ಶಿಸ್ತಿನ ಅಭಾವ ಕಾನೂನು ಗೊಂದಲಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸರು ಮತ್ತು ನ್ಯಾಯಾಲಯ ಯಾವ ಕ್ರಮ ಕೈಗೊಳ್ಳುತ್ತವೆ ಎಂಬುದು ಕಾದು ನೋಡಬೇಕಾಗಿದೆ.

    apvc-iconPost Views: 5
  • ನವೆಂಬರ್ 1ರಿಂದ ಹಂಪಿ–ಬೆಂಗಳೂರು ವಿಮಾನ ಸೇವೆ ಪುನರಾರಂಭ:

    ನವೆಂಬರ್ 1ರಿಂದ ಹಂಪಿ–ಬೆಂಗಳೂರು ವಿಮಾನ ಸೇವೆ ಪುನರಾರಂಭ:

    ವಿಶ್ವ ವಿಖ್ಯಾತ ಹಂಪಿಯ ಅದ್ಭುತ ವೈಭವವನ್ನ ನೇರವಾಗಿ ಅನುಭವಿಸಲು ಬಯಸುವ ಪ್ರವಾಸಿಗರಿಗೆ ಇದೀಗ ಸುಗಮ ಪ್ರಯಾಣದ ದಾರಿ ತೆರೆದಿದೆ. ಕರ್ನಾಟಕದ ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಕಣಜವಾದ ವಿಜಯನಗರ ಸಾಮ್ರಾಜ್ಯದ ಪುರಾತನ ರಾಜಧಾನಿ ಹಂಪಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಪ್ರತಿವರ್ಷ ಸಾವಿರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಹಂಪಿಗೆ ನೇರ ವಿಮಾನ ಸಂಪರ್ಕದ ಕೊರತೆ ಪ್ರವಾಸೋದ್ಯಮದ ಬೆಳವಣಿಗೆಗೆ ಅಡ್ಡಿಯಾಯಿತು. ಇದೀಗ ಆ ಅಡ್ಡಿ ದೂರವಾಗಲಿದೆ.

    ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ಹಂಪಿ ಬೆಂಗಳೂರು ವಿಮಾನಯಾನ ಸೇವೆಗೆ ಮತ್ತೆ ಜೀವ ದೊರೆತಿದೆ. ಪ್ರಾದೇಶಿಕ ವಿಮಾನಯಾನ ಸಂಸ್ಥೆ ಸ್ಟಾರ್ ಏರ್ (Star Air) ನವೆಂಬರ್ 1ರಿಂದ ಬೆಂಗಳೂರು–ವಿದ್ಯಾನಗರ–ಬೆಂಗಳೂರು ಮಾರ್ಗದಲ್ಲಿ ದೈನಂದಿನ ವಿಮಾನ ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಈ ಹೆಜ್ಜೆ ಕೇವಲ ಪ್ರವಾಸಿಗರಿಗಲ್ಲ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕೈಗಾರಿಕಾ ವಲಯಕ್ಕೂ ಸಂಜೀವನಿಯಾಗಲಿದೆ.

    ವಿಮಾನ ಸೇವೆಯ ಸಂಪೂರ್ಣ ವೇಳಾಪಟ್ಟಿ:

    ಬೆಳಗ್ಗೆ 7:50 ಕ್ಕೆ: ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುತ್ತದೆ.

    ಬೆಳಗ್ಗೆ 8:40 ಕ್ಕೆ: ವಿದ್ಯಾನಗರ ವಿಮಾನ ನಿಲ್ದಾಣ (ಹಂಪಿಗೆ ಸಮೀಪ) ತಲುಪುತ್ತದೆ.

    ಕೇವಲ 30 ನಿಮಿಷಗಳ ವಿರಾಮದ ಬಳಿಕ,

    ಬೆಳಗ್ಗೆ 9:10 ಕ್ಕೆ: ವಿದ್ಯಾನಗರದಿಂದ ವಿಮಾನ ಮರಳಿ ಹೊರಡುತ್ತದೆ.

    ಬೆಳಗ್ಗೆ 10:00 ಕ್ಕೆ: ಬೆಂಗಳೂರು ತಲುಪುತ್ತದೆ.

    ಈ ವೇಗದ ಮತ್ತು ಅನುಕೂಲಕರ ವೇಳಾಪಟ್ಟಿ ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಕೈಗೊಳ್ಳುವವರಿಗೆ ಹಾಗೂ ವ್ಯಾಪಾರ ವಹಿವಾಟುಗಳ ನಿಮಿತ್ತ ಆಗಮಿಸುವವರಿಗೆ ಅತ್ಯಂತ ಉಪಯುಕ್ತ.

    ಹಂಪಿಗೆ ತಲುಪುವ ಸುಗಮ ಮಾರ್ಗ:

    ವಿದ್ಯಾನಗರ ವಿಮಾನ ನಿಲ್ದಾಣ ಹಂಪಿಯಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿದೆ. ಇದುವರೆಗೂ ಹಂಪಿಗೆ ಪ್ರಯಾಣಿಕರು 150 ಕಿಲೋಮೀಟರ್ ದೂರದ ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಸಬೇಕಾಗುತ್ತಿತ್ತು. ಹೊಸ ವಿಮಾನ ಸೇವೆಯಿಂದ ಪ್ರಯಾಣದ ಸಮಯ ಮತ್ತು ವೆಚ್ಚ ಎರಡನ್ನೂ ಉಳಿತಾಯ ಮಾಡಬಹುದು.

    ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ:

    ಹಂಪಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮದ ಜೊತೆಗೆ ಕೈಗಾರಿಕಾ ವಲಯವೂ ವೇಗವಾಗಿ ಬೆಳೆಯುತ್ತಿದೆ. ವಿಶೇಷವಾಗಿ JSW ಉಕ್ಕು ಕಾರ್ಖಾನೆ ಹಾಗೂ ಅನೇಕ ಮಧ್ಯಮ ಮಟ್ಟದ ಉದ್ಯಮಗಳು ಇಲ್ಲಿವೆ. ಹೀಗಾಗಿ, ಸ್ಟಾರ್ ಏರ್‌ನ ಈ ಹೊಸ ವಿಮಾನ ಮಾರ್ಗವು ಉದ್ಯಮಿಗಳು, ತಂತ್ರಜ್ಞರು ಮತ್ತು ವ್ಯಾಪಾರಿಗಳಿಗೆ ವೇಗದ ಸಂಚಾರದ ಸೌಲಭ್ಯ ಒದಗಿಸಲಿದೆ.

    ಪ್ರವಾಸೋದ್ಯಮದ ದೃಷ್ಟಿಯಿಂದಲೂ ಈ ಸೇವೆ ಮಹತ್ವದ್ದಾಗಿದೆ. ಸ್ಥಳೀಯ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟ್ಯಾಕ್ಸಿ ಸೇವೆಗಳು ಹಾಗೂ ಪ್ರವಾಸಿ ಮಾರ್ಗದರ್ಶಕರು ಇದರ ಪ್ರಯೋಜನವನ್ನು ಅನುಭವಿಸಲಿದ್ದಾರೆ.

    ಇನ್ನು, ಹಂಪಿ ಪ್ರವಾಸಿ ಮಾರ್ಗದರ್ಶಕರ ಸಂಘದ ಕಾರ್ಯದರ್ಶಿಯೊಬ್ಬರು ಹೇಳಿವ ಪ್ರಕಾರ ಈ ಅತ್ಯಂತ ಅಗತ್ಯವಾದ ವಿಮಾನ ಸೇವೆಯನ್ನ ಮರುಪ್ರಾರಂಭಿಸಿದಕ್ಕಾಗಿ ನಾವು ಸ್ಟಾರ್ ಏರ್‌ಗೆ ಕೃತಜ್ಞರಾಗಿದ್ದೇವೆ. ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲಿನ ಅವಲಂಬನೆ ತಪ್ಪಲಿದ್ದು, ಪ್ರವಾಸಿಗರಿಗೆ ಹಂಪಿ ಇನ್ನಷ್ಟು ಹತ್ತಿರವಾಗಲಿದೆ.

    ಹಂಪಿ ಕೇವಲ ಪುರಾತನ ಅವಶೇಷಗಳ ತಾಣವಲ್ಲ, ಅದು ನಮ್ಮ ಸಂಸ್ಕೃತಿಯ ಜೀವಂತ ಚಿಹ್ನೆ. ಪ್ರವಾಸಿಗರು ಈಗ ವೇಗವಾಗಿ ಈ ಐತಿಹಾಸಿಕ ನಾಡಿಗೆ ತಲುಪುವ ಅವಕಾಶವನ್ನು ಪಡೆಯಲಿದ್ದಾರೆ. ಸ್ಟಾರ್ ಏರ್‌ನ ಈ ಹೊಸ ಸೇವೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ.

    apvc-iconPost Views: 9
  • ಶ್ರೀನಗರಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಇಂಧನ ಸೋರಿಕೆ; ಪೈಲಟ್‌ ತುರ್ತು ಕ್ರಮದಿಂದ ತಪ್ಪಿದ ಅಪಾಯ

    ಶ್ರೀನಗರಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಇಂಧನ ಸೋರಿಕೆ; ಪೈಲಟ್‌ ತುರ್ತು ಕ್ರಮದಿಂದ ತಪ್ಪಿದ ಅಪಾಯ

    ಇತ್ತೀಚಿಗೆ ವಿಮಾನಯಾನದಲ್ಲಿ ಸುರಕ್ಷತೆ ಅತಿ ಮುಖ್ಯವಾದ ಅಂಶವಾಗಿದೆ. ಯಾವುದೇ ತಾಂತ್ರಿಕ ದೋಷ ಅಥವಾ ತುರ್ತು ಪರಿಸ್ಥಿತಿಯು ವಿಮಾನ ಪ್ರಯಾಣವನ್ನು ತಕ್ಷಣ ಅಪಾಯಕ್ಕೆ ತರುವ ಸಾಧ್ಯತೆ ಹೊಂದಿದೆ. ಇತ್ತೀಚೆಗೆ ಇದೇ ರೀತಿಯ ತುರ್ತು ಘಟನೆ ಉತ್ತರ ಭಾರತದ ವಾರಣಾಸಿಯಲ್ಲಿ ಸಂಭವಿಸಿದೆ. ಶ್ರೀನಗರಕ್ಕೆ ಹಾರುತ್ತಿರುವ ಇಂಡಿಗೋ ವಿಮಾನದಲ್ಲಿ ಇಂಧನ ಸೋರಿಕೆಯ ತೊಂದರೆ (Fuel Leak) ಕಾಣಿಸಿಕೊಂಡು, ಪೈಲಟ್‌ ತುರ್ತು ಕ್ರಮ ಕೈಗೊಂಡಿದ್ದಾರೆ.

    ಕೋಲ್ಕತ್ತಾದಿಂದ ಶ್ರೀನಗರಗೆ ಹೊರಟಿದ್ದ ಈ ವಿಮಾನವು, ಮಾರ್ಗದಲ್ಲಿ ಇಂಧನ ಸೋರಿಕೆ ಉಂಟಾಗುತ್ತಿರುವುದನ್ನು ಪೈಲಟ್ ಗಮನಿಸಿದ್ದಾರೆ. ತಕ್ಷಣವೇ ಪೈಲಟ್‌ ತುರ್ತು ನಿರ್ಧಾರ ಕೈಗೊಂಡು, ವಿಮಾನವನ್ನು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರವಾಗಿ ಭೂಸ್ಪರ್ಶ ಮಾಡಿಸಿದ್ದಾರೆ. ಈ ವೇಳೆ ವಿಮಾನದಲ್ಲಿ ಇದ್ದ 166 ಪ್ರಯಾಣಿಕರು ಮತ್ತು ಸಿಬ್ಬಂದಿಯವರೆಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಾರಣಾಸಿ ಪೊಲೀಸ್ ಇಲಾಖೆ ತಿಳಿಸಿದೆ.

    ವಿಮಾನ ನಿಲ್ದಾಣದ ಅಧಿಕಾರಿಗಳು ಘಟನೆಯ ಕುರಿತು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಅದರೊಂದಿಗೆ, ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣದಲ್ಲಿ ತಂದುಕೊಂಡಿದ್ದಾರೆ ಎಂದು ಪ್ರಕಟಿಸಿದ್ದಾರೆ. ಘಟನೆಯಿಂದ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಉಳಿದ ವಿಮಾನಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.

    ಈ ಘಟನೆಯು ವಿಮಾನಯಾನದ ತಾಂತ್ರಿಕ ಸುರಕ್ಷತೆ, ತಕ್ಷಣ ನಿರ್ಧಾರ ಕೈಗೊಳ್ಳುವ ಪೈಲಟ್‌ ನೈಪುಣ್ಯ ಮತ್ತು ಸಹಜ ತುರ್ತು ಸಿದ್ಧತೆಗಳ ಮಹತ್ವವನ್ನು ಮತ್ತೊಮ್ಮೆ ಹೇಳುತ್ತಿದೆ. ಪ್ರಯಾಣಿಕರ ಸುರಕ್ಷತೆಯೆಂದರೆ ಯಾವತ್ತು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ.

    apvc-iconPost Views: 6
  • Asia Cup trophy controversy: ಬಿಸಿಸಿಐನಿಂದ ಮೊಹ್ಸಿನ್ ನಖ್ವಿಗೆ ಕಠಿಣ ಎಚ್ಚರಿಕೆ!

    Asia Cup trophy controversy: ಬಿಸಿಸಿಐನಿಂದ ಮೊಹ್ಸಿನ್ ನಖ್ವಿಗೆ ಕಠಿಣ ಎಚ್ಚರಿಕೆ!

    ಏಷ್ಯಾ ಕಪ್ 2025 ಮುಗಿದು ತಿಂಗಳಾದರೂ, ಭಾರತ ಜಯಿಸಿದ ಟ್ರೋಫಿ ಇನ್ನೂ ಟೀಂ ಇಂಡಿಯಾ ಕೈಗೆ ತಲುಪಿಲ್ಲ! ಈ ಅಸಾಮಾನ್ಯ ಸ್ಥಿತಿಯು ಈಗ ಕ್ರಿಕೆಟ್ ವಲಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥರಾಗಿರುವ ಮೊಹ್ಸಿನ್ ನಖ್ವಿ ಟ್ರೋಫಿಯನ್ನು ದುಬೈ ಕಚೇರಿಯಲ್ಲಿ ಇರಿಸಿಕೊಂಡಿರುವುದು ಬಿಸಿಸಿಐನ (BCCI) ಕೆಂಗಣ್ಣಿಗೆ ಗುರಿಯಾಗಿದೆ.

    ಸೆಪ್ಟೆಂಬರ್ 28ರಂದು ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿತ್ತು. ಆದರೆ ಪಂದ್ಯ ಅಂತ್ಯದ ವೇಳೆ ಟ್ರೋಫಿ ವಿತರಣಾ ಸಮಾರಂಭ ನಡೆಯಲಿಲ್ಲ. ಕಾರಣವೆಂದರೆ ಟೀಂ ಇಂಡಿಯಾ ಆಟಗಾರರು ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದರು. ನಖ್ವಿ ಅವರು ಪಾಕಿಸ್ತಾನದ ಆಂತರಿಕ ಸಚಿವರಾಗಿರುವುದರ ಜೊತೆಗೆ, ಕಾಶ್ಮೀರದ ಪೆಹಲ್ಗಾಮ್ ಉಗ್ರ ದಾಳಿಯ ನಂತರ ರಾಜಕೀಯ ಹೇಳಿಕೆಗಳನ್ನು ನೀಡಿದ ಕಾರಣದಿಂದಾಗಿ ಭಾರತೀಯ ತಂಡ ಅವರು ನೀಡುವ ಟ್ರೋಫಿಯನ್ನು ಸ್ವೀಕರಿಸದ ಸ್ವೀಕರಿಸಿರಲಿಲ್ಲ.

    ಈ ವಿವಾದದ ನಂತರ ಟ್ರೋಫಿಯನ್ನು ACC ಕಚೇರಿಯಲ್ಲಿ ಇರಿಸಲಾಗಿದೆ. ಇದರಿಂದ ಟ್ರೋಫಿ ಭಾರತಕ್ಕೆ ಹಸ್ತಾಂತರವಾಗದೆ, ಒಂದು ತಿಂಗಳಾದರೂ ದುಬೈಯಲ್ಲೇ ಉಳಿಯಿತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಇದೀಗ ಅಧಿಕೃತ ಇ-ಮೇಲ್ ಮೂಲಕ ಮೊಹ್ಸಿನ್ ನಖ್ವಿಗೆ ತೀವ್ರ ಎಚ್ಚರಿಕೆ ನೀಡಿದೆ. ಟ್ರೋಫಿಯನ್ನು ತಕ್ಷಣ ಭಾರತಕ್ಕೆ ಕಳುಹಿಸದಿದ್ದರೆ ವಿಷಯವನ್ನು ಐಸಿಸಿಗೆ (ICC) ಒಪ್ಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, “ಟೀಂ ಇಂಡಿಯಾ ಗೆದ್ದ ಟ್ರೋಫಿ ದುಬೈ ಕಚೇರಿಯಲ್ಲಿ ಉಳಿದಿರುವುದು ರಾಷ್ಟ್ರದ ಗೌರವಕ್ಕೆ ಧಕ್ಕೆ ಟ್ರೋಫಿಯನ್ನು ತಕ್ಷಣ ಹಸ್ತಾಂತರಿಸಬೇಕೆಂದು ನಾವು ನಖ್ವಿಗೆ ಸೂಚಿಸಿದ್ದೇವೆ, ಒಂದು ವೇಳೆ ಅವರು ನಿರ್ಲಕ್ಷಿಸಿದರೆ ನಾವು ಐಸಿಸಿಗೆ ದೂರು ನೀಡುತ್ತೇವೆ,” ಎಂದು ತಿಳಿಸಿದ್ದಾರೆ.

    ಆದರೆ ನಖ್ವಿಯ ಪ್ರತಿಕ್ರಿಯೆ ವಿವಾದವನ್ನು ಮತ್ತಷ್ಟು ಹುಟ್ಟುಹಕಿದೆ. ಅವರು “ಬಿಸಿಸಿಐ ಪ್ರತಿನಿಧಿಗಳು ದುಬೈಗೆ ಬಂದು ನನ್ನಿಂದಲೇ ಟ್ರೋಫಿಯನ್ನು ಪಡೆದುಕೊಳ್ಳಬೇಕು” ಎಂದು ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಬಿಸಿಸಿಐ ಈ ನಿಲುವನ್ನು ತೀವ್ರವಾಗಿ ವಿರೋಧಿಸಿದ್ದು, “ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ” ಎಂದು ಎಲ್ಲರಿಗೂ ಸ್ಪಷ್ಟಪಡಿಸಿದೆ.

    ಟ್ರೋಫಿಯು ಪ್ರಸ್ತುತ ದುಬೈನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಯಲ್ಲಿಯೇ ಇರಿಸಲಾಗಿದೆ. ನಖ್ವಿಯ ಅನುಮತಿಯಿಲ್ಲದೆ ಅದನ್ನು ಸ್ಥಳಾಂತರಿಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಅವರು ಹೇಳಿರುವಂತೆ, “ಸೂಕ್ತ ಸಮಯದಲ್ಲಿ ನಾನು ಸ್ವತಃ ಟ್ರೋಫಿಯನ್ನು ಹಸ್ತಾಂತರಿಸುತ್ತೇನೆ.” ಆದರೆ ಬಿಸಿಸಿಐಗೆ ಕಾಯುವ ಮನಸ್ಥಿತಿಯಲ್ಲಿಲ್ಲ.

    ಕ್ರೀಡೆ ಮತ್ತು ರಾಜಕೀಯ ಬೇರೆ ಎಂಬ ತತ್ವವನ್ನು ಮರೆತು, ಈ ವಿವಾದವು ರಾಜಕೀಯ ಬಣ್ಣ ತಾಳಿರುವುದು ದುಃಖಕರ. ಪಾಕಿಸ್ತಾನದ ರಾಜಕೀಯ ನಾಯಕರಾದ ನಖ್ವಿ ಕ್ರಿಕೆಟ್ ವೇದಿಕೆಯನ್ನು ತಮ್ಮ ನಿಲುವು ಪ್ರದರ್ಶನದ ಸ್ಥಳವನ್ನಾಗಿ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದೆ.

    ಸೆಪ್ಟೆಂಬರ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಮಣಿಸಿ ಏಷ್ಯಾ ಕಪ್ ಗೆದ್ದರೂ, ಟ್ರೋಫಿ ಮಾತ್ರ ಇನ್ನೂ ಭಾರತಕ್ಕೆ ತಲುಪಿಲ್ಲ. ಇದು ಕೇವಲ ಕ್ರೀಡಾ ಪ್ರಶಸ್ತಿ ವಿಚಾರವಲ್ಲ ರಾಷ್ಟ್ರದ ಗೌರವದ ವಿಷಯವಾಗಿದೆ.

    apvc-iconPost Views: 12
  • Greater Bengaluru: 7.5 ಲಕ್ಷ ಬಿ ಖಾತಾ ಆಸ್ತಿಗಳಿಗೆ ನವೆಂಬರ್ 2ರಿಂದ ಎ ಖಾತಾ ಸೌಲಭ್ಯ

    Greater Bengaluru: 7.5 ಲಕ್ಷ ಬಿ ಖಾತಾ ಆಸ್ತಿಗಳಿಗೆ ನವೆಂಬರ್ 2ರಿಂದ ಎ ಖಾತಾ ಸೌಲಭ್ಯ

    ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ನಗರದಲ್ಲಿ 7.5 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಹಾಗೂ ದಾಖಲಾತಿ ಸೌಲಭ್ಯವನ್ನು ನೀಡಲು ನವೆಂಬರ್ 2ರಿಂದ ಅಧಿಕೃತ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ನಗರದಲ್ಲಿ ಬಿ ಖಾತಾ ಆಸ್ತಿಗಳ ಪ್ರಮಾಣ ಹಾಗೂ ಅವುಗಳಿಗೆ ಸಂಬಂಧಿಸಿದ ವಿವರಣೆಗಳ ಕೊರತೆಯನ್ನು ಪೂರೈಸಲು, ಈ ಹೊಸ ಅಭಿಯಾನವು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.

    ಈ ಅಭಿಯಾನವು ಜಿಬಿಎ ವೆಲ್ಸ್ಟ್ ಪೋರ್ಟಲ್ ಹಾಗೂ ವಿಶೇಷ ಆ್ಯಪ್ ಮೂಲಕ ಮಾತ್ರ ಪ್ರಾರಂಭವಾಗಿದ್ದು, ಆಸ್ತಿ ಮಾಲೀಕರು ತಮ್ಮ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ. ಪ್ರಾಧಿಕಾರವು ಅರ್ಜಿ ಸಲ್ಲಿಕೆಗೆ 100 ದಿನಗಳ ಕಾಲಾವಧಿ ನೀಡಿದ್ದು, ಈ ಅವಧಿಯಲ್ಲಿ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಸೌಲಭ್ಯವನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.

    ಅರ್ಜಿ ಸಲ್ಲಿಕೆ ಹಾಗೂ ಶುಲ್ಕದ ನಿಯಮಗಳು:

    ಅರ್ಜಿ ಸಲ್ಲಿಕೆ ವೇಳೆ ಮಾರ್ಗಸೂಚಿ ದರದ 5% ಮೊತ್ತವನ್ನು ಅನುಮೋದನೆ ಶುಲ್ಕವಾಗಿ ಪಾವತಿಸಬೇಕು.

    2000 ಚದರ ಮೀಟರ್ ವರೆಗೆ ವಿಸ್ತೀರ್ಣವಿರುವ ಆಸ್ತಿಗಳಿಗೆ ಮಾತ್ರ ಎ ಖಾತಾ ಸೌಲಭ್ಯ ಲಭ್ಯವಿರುತ್ತದೆ.

    ಮೊದಲು ನಿವೇಶನ ಮಟ್ಟದಲ್ಲಿ ಮಾತ್ರ ಎ ಖಾತಾ ನೀಡಲಾಗಿದ್ದು, ನಂತರ ಸರ್ಕಾರದ ಪ್ರತ್ಯೇಕ ನಿಯಮಾವಳಿಯ ಪ್ರಕಾರ, ಆ ನಿವೇಶನಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ಎ ಖಾತಾ ಮಾನ್ಯತೆ ವಿತರಿಸಲಾಗುವುದು.

    ದಾಖಲೆಗಳ ಅಗತ್ಯತೆ:

    ಮಾಲೀಕರು ಅರ್ಜಿ ಸಲ್ಲಿಸುವಾಗ ಕೆಳಕಂಡ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ,

    ಆಧಾರ್ ಕಾರ್ಡ್

    ಸ್ವತ್ತಿನ ನೋಂದಣಿ ಪತ್ರ

    ಇ-ಖಾತೆ ವಿವರ

    ವಾಸಸ್ಥಳದ ವಿಳಾಸ

    ಕಂದಾಯ ಮತ್ತು ಇತರೆ ಶುಲ್ಕ ಪಾವತಿಗಳ ಮಾಹಿತಿ

    ಪರಿಶೀಲನೆ ಪ್ರಕ್ರಿಯೆ:

    ಅರ್ಜಿ ಸಲ್ಲಿಸಿದ ಬಳಿಕ, ಜಿಬಿಎ ಸಿಬ್ಬಂದಿ ಕಾಲಮಿತಿಯೊಳಗೆ ದಾಖಲೆಗಳನ್ನು ಪರಿಶೀಲಿಸಿ ನಿಯಮಾನುಸಾರ ಎ ಖಾತಾ ನೀಡಲಾಗುತ್ತದೆ. ಅರ್ಜಿಗೆ 500 ರೂ. ನೋಟರಿ ಶುಲ್ಕ ಮಾತ್ರ ವಿಧಿಸಲಾಗಿದೆ. ಇತರೆ ಯಾವುದೇ ಶುಲ್ಕವನ್ನು ಮುನ್ನೆಚ್ಚರಿಕೆಯಾಗಿ ಪಾವತಿಸುವ ಅಗತ್ಯವಿಲ್ಲ. ಅಧಿಕಾರಿಗಳು ಪರಿಶೀಲನೆ ವೇಳೆ ಅಗತ್ಯವಾದ ಇತರ ಶುಲ್ಕಗಳನ್ನು ಲೆಕ್ಕ ಹಾಕಿ ಪಾವತಿಗೆ ಗಡುವು ನೀಡುತ್ತಾರೆ. ಸಂಪೂರ್ಣ ಹಣ ಪಾವತಿಸಿದ ಬಳಿಕ, ಎ ಖಾತಾ ದಾಖಲಾತಿಯನ್ನು ಅಧಿಕೃತವಾಗಿ ವಿತರಿಸಲಾಗುತ್ತದೆ.

    ಒಟ್ಟಾರೆಯಾಗಿ, ನಗರದ ಬಿ ಖಾತಾ ಆಸ್ತಿಗಳ ಸಮಸ್ಯೆ, ದಾಖಲೆ ಕೊರತೆ ಮತ್ತು ವೈಧಿಕತೆಗೆ ಸಂಬಂಧಿಸಿದ ಭರತೆಯನ್ನು ಕಡಿಮೆ ಮಾಡಬೇಕಾದ ಅಗತ್ಯದಿಂದ ಈ ಅಭಿಯಾನವನ್ನು ರೂಪಿಸಲಾಗಿದೆ. ಇದು ನಗರದಲ್ಲಿ ಆಸ್ತಿ ಮಾಲೀಕರಿಗೆ ಪಾರದರ್ಶಕತೆ ಮತ್ತು ಭದ್ರತೆಯನ್ನು ಒದಗಿಸುವ ಪ್ರಮುಖ ಪ್ರಯತ್ನವಾಗಿದೆ.

    apvc-iconPost Views: 20