ಸತ್ಯಕಾಮ ವಾರ್ತೆ ಗುರುಮಠಕಲ್:
ಯೋಗವು ಭಾರತದಲ್ಲಿ ಅಳವಡಿಸಿಕೊಂಡ ಸುಂದರವಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರಪಂಚದಾದ್ಯಂತ ಜನರು ಆರೋಗ್ಯಕರ ಜೀವನವನ್ನು ಹೊಂದಲು ಯೋಗವನ್ನು ಪ್ರಶಂಸಿಸುವತ್ತ ಸಾಗುತ್ತಿದ್ದಾರೆ ಎಂದು ಮುಖ್ಯಗುರು ವೀರೇಂದ್ರ ನಾಯಕ್ ಹೇಳಿದರು.
ಪಟ್ಟಣದ ಖಾಸಮಠ ಆವರಣದಲ್ಲಿ 11ನೇ ಅಂತರ್ ರಾಷ್ಟೀಯ ಯೋಗ ದಿನಾಚರಣೆಯ ಅಂಗವಾಗಿ ಮಾತನಾಡಿದ ಅವರು, ಯೋಗವು ಮಾನವೀಯತೆಗೆ ಸಂಪೂರ್ಣ ಮಸಾಜ್ ಅನ್ನು ಹೊಂದಿದೆ. ಇದು ಮಾನವ ದೇಹ, ಮನಸ್ಸು ಮತ್ತು ಆತ್ಮಕ್ಕೂ ಮಸಾಜ್ ಅನ್ನು ಹೊಂದಿದೆ. ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ಇದನ್ನು ಮೊದಲು ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2015 ರಲ್ಲಿ ಘೋಷಿಸಿದರು. ಅದರ ನಂತರ ಯೋಗ ದಿನವನ್ನು ಪ್ರಪಂಚದಾದ್ಯಂತ ಆಚರಿಸಲು ಪ್ರಾರಂಭಿಸಲಾಯಿತು ಮತ್ತು ಅದನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಪರಿವರ್ತಿಸಲಾಯಿತು ಎಂದು ತಿಳಿಸಿದರು.
- Advertisement -
ಇದೇ ಸಂಧರ್ಭದಲ್ಲಿ ಯೋಗಪಟುಗಳಾದ ಹಣಮಂತು ಹಾಗೂ ನರಸರೆಡ್ಡಿ ಶಾಲಾ ಮಕ್ಕಳಿಗೆ ಯೋಗದಿನವನ್ನು ವಿವಿಧ ಯೋಗ ಭಂಗಿಯ ಯೋಗ ಪ್ರದರ್ಶಿಸುವದರ ಮೂಲಕ ಆಚರಣೆಮಾಡಲಾಯಿತು. ಶಿಕ್ಷಕ ಲಾಲಪ್ಪ ಯಾದವ ಸ್ವಾಗತಿಸಿದರು.
ಈ ವೇಳೆ ನಿರ್ದೇಶಕ ಅಖಂಡೇಶ್ವರ ಹಿರೇಮಠ, ಮುಖ್ಯಗುರುಗಳಾದ ಸುದರ್ಶನ್ ಗೌಡ, ದೈ. ಶಿಕ್ಷಕ ನರಸರೆಡ್ಡಿ ಗಡ್ಡೆಸೂಗೂರು, ಚಂದ್ರಶೇಖರ್, ವಿಜಯಕುಮಾರ್, ಭಾಗ್ಯಲಕ್ಷ್ಮೀ ವಾರದ, ಮೌನಿಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

