ವರದಿ; ಕುದಾನ್ ಸಾಬ್
ಸತ್ಯಕಾಮ ವಾರ್ತೆ ಯಾದಗಿರಿ
ನಗರದ ಹೊಸ ಪದವಿ ಕಾಲೇಜಿನ ವಾಸ್ತವ ಪರಿಸ್ಥಿತಿಯನ್ನು ನೋಡಿದರೆ, ಶಿಕ್ಷಣ ಸಂಸ್ಥೆ ಎಂದು ಕರೆಯುವುದು ಲಜ್ಜೆಯ ವಿಷಯವಾಯ್ತು. ಈ ಕಾಲೇಜು ನಿಜಕ್ಕೂ ಓದುವ ಸ್ಥಳವೇ? ಅಥವಾ ಕಾಡುಮೂಲಗಳ ತಾಣವೋ? ಅನ್ನಿಸುತ್ತದೆ.
ಹೌದು ಏಕೆಂದರೆ ಹೊಸ ಪದವಿ ಕಾಲೇಜಿನ ಕೌಂಪೌAಡ್ ಸುತ್ತ ಬೆಳೆದಿರುವ ಜಾಲಿಗಿಡ, ತರಗತಿಯೊಳಗೆ ನುಗ್ಗುವ ಹಾವು-ಚೇಳುಗಳು, ಓಡುವ ಬದಲು ಓಡಾಟ ನಡೆಯುವ ತರಗತಿಗಳು — ಇದು ಪ್ರತಿದಿನದ ದೃಶ್ಯ. ವಿದ್ಯಾರ್ಥಿಗಳು ಪುಸ್ತಕದ ಕಡೆಗಿಂತ ಜಿಗಿತದ ಕಡೆ ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಅದರಲ್ಲೂ ಕಾಲೇಜಿನ ಕಟ್ಟಡದ ಗೋಡೆಗಳ ಮೇಲೆ ಬೆಳೆದಿರುವ ಬಳ್ಳಿಗಳು ಆವರಿಸಿರುವುದರಿಂದ ಕೆಲವು ಕಿಟಕಿಗಳು ಮುಚ್ಚಲಾಗದ ಸ್ಥಿತಿಯಲ್ಲಿವೆ, ಇಂತಹ ಸ್ಥಿತಿ ಒಂದೆರಡು ದಿನಗಳಲ್ಲಿ ಉಂಟಾಗಿಲ್ಲ. ವರ್ಷಗಳಿಂದ ನಿರ್ವಹಣೆಗೆ ಸಂಬAಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಈ ಪರಿಸ್ಥಿತಿಗೆ ಕಾರಣವಾಗಿದೆ.
ಅಲ್ಲದೇ ವಿದ್ಯಾರ್ಥಿಗಳು ಈ ಬಗ್ಗೆ ಪ್ರಾಂಶುಪಾಲರ ಗಮನಕ್ಕೆ ತಂದರೇ ನೀವೇ ಜಾಲಿಗಿಡ ತೆಗೆದುಹಾಕಿ! ಸ್ವಚತೆ ಮಾಡಿ ಎಂದು ಹೇಳುತ್ತಾರಂತೆ, ಇದು ಪ್ರಾಶುಂಪಾಲರಿAದ ಬರಬಹುದಾದ ಮಾತುಗಳಾ? ಇದರಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣದಿಂದ ನಂಬಿಕೆ ಹೋಗುವುದಕ್ಕಿಂತ ದುರಂತ ಇನ್ನೊಂದು ಇಲ್ಲ.
ವಿದ್ಯಾರ್ಥಿಗಳ ಓದು ಕೇವಲ ಪಾಠಪುಸ್ತಕಗಳ ಸಾಲುಗಳಲ್ಲಿ ಸೀಮಿತವಲ್ಲ. ಅವರಿಗೆ ಬೇಕಾಗಿರುವ ಭದ್ರತೆ, ಸ್ವಚ್ಛತೆ ಮತ್ತು ಮಾನವೀಯ ಮೌಲ್ಯಗಳಿಂದ ತುಂಬಿದ ವಾತಾವರಣ. ಆದರೆ ಇದನ್ನೆಲ್ಲಾ ಮರೆತು ಬಿಟ್ಟು ಶಿಕ್ಷಣ ಸಂಸ್ಥೆಗಳ ನಿರ್ವಹಣೆಯನ್ನು ನಿರ್ಲಕ್ಷಿಸಿದಾಗ, ವಿದ್ಯಾರ್ಥಿಯ ಭವಿಷ್ಯವೇ ಹದಗೆಡುವ ಸ್ಥಿತಿಗೆ ತಲುಪುತ್ತದೆ. ಶಾಲೆ ಅಥವಾ ಕಾಲೇಜು ಕೇವಲ ಕಟ್ಟಡವಲ್ಲ – ಅದು ನೂರು ಕನಸುಗಳ ನೆಲೆ. ಈ ನೆಲೆ ಶುದ್ಧವಾಗಿರಬೇಕು, ಸುರಕ್ಷಿತವಾಗಿರಬೇಕು. ಏಕೆಂದರೆ ನಿರ್ವಹಣೆ ನಿಲ್ಲಿಸಿದಾಗ, ಶಿಕ್ಷಣದ ಭವಿಷ್ಯವೂ ನಿಲ್ಲುತ್ತದೆ! ಎಂಬುದನ್ನು ಅರಿತು ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ವಾತಾವಾರಣ ಕಲ್ಪಿಸಲು ಆಡಳಿತ ವರ್ಗ ಅಥವಾ ಪ್ರಾಂಶುಪಾಲರು ಮುಂದಾಗತ್ತಾರೋ ಎಂಬುದನ್ನು ಕಾದು ನೋಡೋಣ.
ಕಾಲೇಜಿನ ಸುತ್ತಮುತ್ತ ಜಂಗಲದAತಾಗಿ ಬೆಳೆದಿರುವ ಜಾಲಿಗಿಡಗಳು ವಿದ್ಯಾರ್ಥಿಗಳ ಸುರಕ್ಷತೆಗೆ ಮಾತ್ರವಲ್ಲದೆ ವಿದ್ಯಾಭ್ಯಾಸಕ್ಕೂ ತೀವ್ರ ಅಡ್ಡಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಲೇಜು ಆವರಣದ ಸುತ್ತಮುತ್ತಲನ್ನು ತಕ್ಷಣ ಸ್ವಚ್ಛಗೊಳಿಸಿ, ವಿದ್ಯಾಭ್ಯಾಸಕ್ಕೆ ಯೋಗ್ಯವಾದ ಶಾಂತ, ಸ್ವಚ್ಛ ಮತ್ತು ಭದ್ರ ವಾತಾವರಣವನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ.
– ಹೆಸರೇಳಲಿಚ್ಛಿಸದ ವಿದ್ಯಾರ್ಥಿ

