ಇಂದಿನ ಡಿಜಿಟಲ್ ಯುಗದಲ್ಲಿ ಫೋನ್ ಮತ್ತು ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಇದೇ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಜನರನ್ನು ವಂಚಿಸುವ ಹೊಸ ಹೊಸ ಮಾರ್ಗಗಳನ್ನು ಸ್ಕ್ಯಾಮರ್‌ಗಳು ಕಂಡುಹಿಡಿಯುತ್ತಿದ್ದಾರೆ. ಬ್ಯಾಂಕ್ ಖಾತೆ, ಲಾಟರಿ, ಡೆಲಿವರಿ, ಡೆಬಿಟ್ ಕಾರ್ಡ್ ಅಥವಾ ಬಹುಮಾನ ಯಾವ ವಿಷಯವನ್ನಾದರೂ ನೆಪವನ್ನಾಗಿ ಮಾಡಿಕೊಂಡು ಅವರು ಜನರಿಂದ ಹಣ ಅಥವಾ ವೈಯಕ್ತಿಕ ಮಾಹಿತಿಯನ್ನು ಕಸಿದುಕೊಳ್ಳುತ್ತಾರೆ.
ಇತ್ತೀಚೆಗೆ ‘ಬೀನ್ವೆರಿಫೈಡ್’ (BeenVerified) ಎಂಬ ಅಮೆರಿಕಾದ ಸೈಬರ್‌ಸಿಕ್ಯೂರಿಟಿ ಕಂಪನಿಯೊಂದು ಮಹತ್ವದ ವರದಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಕಳೆದ ಕೆಲವು ತಿಂಗಳಲ್ಲಿ ಹೆಚ್ಚು ಸಂಖ್ಯೆಯ ಹಗರಣಗಳಿಗೆ ಬಳಸಲಾಗಿದ್ದ ಟಾಪ್ 10 ಮೋಸದ ಫೋನ್ ಸಂಖ್ಯೆಗಳು ಬಹಿರಂಗಗೊಂಡಿವೆ. ಈ ಸಂಖ್ಯೆಗಳ ಮೂಲಕ ಅನೇಕರು ಬಲಿಯಾಗಿರುವುದಾಗಿ ವರದಿಯಾಗಿದೆ. ನೀವು ಸಹ ನಿಮ್ಮ ಹಣ ಮತ್ತು ಡೇಟಾವನ್ನು ಕಾಪಾಡಿಕೊಳ್ಳಬೇಕೆಂದರೆ, ಕೆಳಗಿನ ಸಂಖ್ಯೆಗಳ ಕರೆ ಅಥವಾ ಮೆಸೇಜ್‌ಗಳಿಗೆ ಎಂದಿಗೂ ಪ್ರತಿಕ್ರಿಯೆ ನೀಡಬೇಡಿ.
ಹಗರಣಗಳಲ್ಲಿ ಹೆಚ್ಚು ಬಳಸಲಾಗಿರುವ 10 ಅಪಾಯಕಾರಿ ಸಂಖ್ಯೆಗಳು:
(865) 630-4266:
ಈ ಸಂಖ್ಯೆಯಿಂದ ಬರುವ ಕರೆಗಳಲ್ಲಿ ಜನರಿಗೆ “ನಿಮ್ಮ ವೆಲ್ಸ್ ಫಾರ್ಗೋ ಬ್ಯಾಂಕ್ ಖಾತೆ ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ” ಎಂಬ ಸಂದೇಶ ಬರುತ್ತದೆ. ನಂತರ “ಅನ್‌ಲಾಕ್ ಮಾಡಲು ಬ್ಯಾಂಕ್‌ಗೆ ಕರೆ ಮಾಡಿ” ಎಂದು ಹೇಳುತ್ತಾರೆ. ಇದು ನಕಲಿ ಬ್ಯಾಂಕ್ ಹಗರಣ.
(469) 709-7630:
ಈ ಕರೆಗಳಲ್ಲಿ “ನಿಮ್ಮ ಪಾರ್ಸೆಲ್ ವಿತರಣೆ ವಿಫಲವಾಗಿದೆ” ಎಂಬ ನೆಪ ಹೇಳಿ, ನೀವು ಅಥವಾ ನಿಮ್ಮ ಬಂಧುಗಳ ಹೆಸರು ಬಳಸಿ, ಆನ್‌ಲೈನ್ ಲಿಂಕ್ ಒತ್ತಿಸಲು ಅಥವಾ ಕರೆ ಮಾಡಲು ಪ್ರೇರೇಪಿಸುತ್ತಾರೆ.
(805) 637-7243:
ವೀಸಾ ಕಾರ್ಡ್ ಹಗರಣ ವಿಭಾಗದಿಂದ ಕರೆ ಬಂದಿದೆ ಎಂದು ನಂಬಿಸಲು ಪ್ರಯತ್ನಿಸುವ ಮೋಸಗಾರರು ಈ ಸಂಖ್ಯೆಯನ್ನು ಬಳಸುತ್ತಾರೆ.
(858) 605-9622:
ನಿಮ್ಮ ಬ್ಯಾಂಕ್ ಖಾತೆ ತಡೆಹಿಡಿಯಲಾಗಿದೆ ಎಂಬ ಎಚ್ಚರಿಕೆ ಸಂದೇಶಗಳು ಈ ಸಂಖ್ಯೆಯಿಂದ ಬರುತ್ತವೆ. ನಿಜವಾದ ಬ್ಯಾಂಕ್‌ಗಳು ಇಂತಹ ಕರೆಗಳನ್ನು ಮಾಡುವುದಿಲ್ಲ.
(863) 532-7969:
ಯಾವುದೇ ಬ್ಯಾಂಕ್ ಹೆಸರು ಹೇಳದೆ “ನಿಮ್ಮ ಡೆಬಿಟ್ ಕಾರ್ಡ್ ಸ್ಥಗಿತಗೊಂಡಿದೆ” ಎಂದು ಹೇಳುವ ಕರೆಗಳು ಈ ಸಂಖ್ಯೆಯಿಂದ ಬಂದಿವೆ.
(904) 495-2559:
ಈ ಸಂಖ್ಯೆ ಮೂಲಕ ಜನರಿಗೆ “ನೀವು AT&T ಲಾಟರಿ ಗೆದ್ದಿದ್ದೀರಿ” ಎಂಬ ಸುಳ್ಳು ಸಂದೇಶಗಳು ಕಳುಹಿಸಲ್ಪಟ್ಟಿವೆ.
(312) 339-1227:
ತೂಕ ಇಳಿಸುವ ಉತ್ಪನ್ನಗಳು ಅಥವಾ ನಕಲಿ ಪ್ಯಾಕೇಜ್ ಹಗರಣಗಳನ್ನು ಉತ್ತೇಜಿಸಲು ಈ ಸಂಖ್ಯೆಯನ್ನು ಬಳಸಲಾಗಿದೆ.
(917) 540-7996:
“ಸ್ಟ್ರೀಮ್ VI” ಎನ್ನುವ ಹೆಸರಿನಲ್ಲಿ ನಕಲಿ ಮಾರ್ಕೆಟಿಂಗ್ ಹಗರಣ ನಡೆಸಲಾಗಿದೆ.
(347) 437-1689:
ಉಚಿತ ಡೈಸನ್ ವ್ಯಾಕ್ಯೂಮ್ ಕ್ಲೀನರ್ ಅಥವಾ ಸಣ್ಣ ಡಾಲರ್ ಉಡುಗೊರೆಗಳ ಭರವಸೆ ನೀಡಿ ಜನರನ್ನು ವಂಚಿಸುವ ಕರೆಗಳು ಈ ಸಂಖ್ಯೆಯಿಂದ ಬರುತ್ತವೆ.
(301) 307-4601:
ಯುಎಸ್ಪಿಎಸ್ ವಿತರಣಾ ಹಗರಣ “ನಿಮ್ಮ ಪಾರ್ಸೆಲ್ ವಿಳಾಸ ತಪ್ಪಾಗಿದೆ” ಎಂಬ ನೆಪದಲ್ಲಿ ಲಿಂಕ್ ಕಳುಹಿಸಿ ವೈಯಕ್ತಿಕ ಮಾಹಿತಿ ಕಸಿಯುವ ಪ್ರಯತ್ನ.
ಹಾಗಿದ್ದರೆ ನೀವು ಹೇಗೆ ಸುರಕ್ಷಿತರಾಗಬಹುದು?:
ಅಜ್ಞಾತ ಸಂಖ್ಯೆಯಿಂದ ಬಂದ ಯಾವುದೇ ಕರೆ ಅಥವಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
ಬ್ಯಾಂಕ್, ಕ್ರೆಡಿಟ್ ಕಾರ್ಡ್ ಕಂಪನಿ ಅಥವಾ ಸರಕಾರಿ ಸಂಸ್ಥೆಗಳು ಎಂದಿಗೂ ವೈಯಕ್ತಿಕ ಮಾಹಿತಿಯನ್ನು ಕರೆ ಮೂಲಕ ಕೇಳುವುದಿಲ್ಲ.
ಯಾವುದೇ ಲಾಟರಿ ಅಥವಾ ಉಡುಗೊರೆ ಗೆದ್ದಿದ್ದೀರಿ ಎಂಬ ಸಂದೇಶ ಬಂದರೆ ಅದು ನೂರಕ್ಕೆ ನೂರು ಹಗರಣವಾಗಿರುತ್ತದೆ.
ಸಂಶಯಾಸ್ಪದ ಸಂಖ್ಯೆಗಳನ್ನು ತಕ್ಷಣ “Block” ಮಾಡಿ ಮತ್ತು “Report Spam” ಆಯ್ಕೆ ಬಳಸಿ.
ಬೀನ್ವೆರಿಫೈಡ್ ವರದಿಯ ಪ್ರಕಾರ, ಫೋನ್ ಹಗರಣಗಳು ದಿನೇದಿನೇ ಸುಧಾರಿತ ತಂತ್ರಜ್ಞಾನ ಬಳಸಿ ನಡೆಯುತ್ತಿವೆ. ಆದ್ದರಿಂದ ಪ್ರತಿಯೊಬ್ಬ ಮೊಬೈಲ್ ಬಳಕೆದಾರರೂ ಎಚ್ಚರಿಕೆಯಿಂದ ಇರಬೇಕು. ಒಂದು ತಪ್ಪು ಕರೆ ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ಮೊತ್ತವನ್ನೇ ಹಾಳುಮಾಡಬಹುದು. ಜಾಗರೂಕರಾಗಿರಿ, ಸುರಕ್ಷಿತರಾಗಿರಿ.

