ಇಂದಿನ ದಿನಮಾನದಲ್ಲಿ ಚಿಕನ್ ಮಾಂಸವು ಭಾರತೀಯರ ಅಡುಗೆಮನೆಯಲ್ಲಿ ಅಷ್ಟೇನೂ ಹೊಸ ಪದಾರ್ಥವಲ್ಲ. ನಗರಗಳಲ್ಲಿಯೂ ಗ್ರಾಮಾಂತರ ಪ್ರದೇಶಗಳಲ್ಲಿಯೂ ಜನರು ಚಿಕನ್‌ನ ರುಚಿಯನ್ನು ಸವಿಯುವುದು ದೈನಂದಿನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಹೋಟೆಲ್‌ಗಳು, ಕುಟುಂಬ ಸಮಾರಂಭಗಳು, ಹಬ್ಬ-ಹರಿದಿನಗಳು ಅಥವಾ ಸರಳ ಊಟ ಯಾವ ಸಂದರ್ಭವಾಗಿದ್ದರೂ ಚಿಕನ್ ಬಟ್ಟಲು ಹಾಜರಿರುವುದು ಸಾಮಾನ್ಯ. ರುಚಿ, ಪೌಷ್ಟಿಕಾಂಶ ಹಾಗೂ ಇತರೆ ಮಾಂಸಗಳಿಗಿಂತ ಹೋಲಿಕೆ ಮಾಡಿದಾಗ ಕಡಿಮೆ ಬೆಲೆಯು ಇದರ ಜನಪ್ರಿಯತೆಯ ಪ್ರಮುಖ ಕಾರಣಗಳಾಗಿವೆ.
ಚಿಕನ್‌ನಲ್ಲಿ ವಿಟಮಿನ್ ಬಿ, ನಿಯಾಸಿನ್, ಪ್ರೋಟೀನ್ ಹಾಗೂ ಅಗತ್ಯ ಖನಿಜಾಂಶಗಳು ತುಂಬಿರುತ್ತವೆ. ಇವು ದೇಹಕ್ಕೆ ಶಕ್ತಿ ನೀಡುವುದಲ್ಲದೆ ರೋಗನಿರೋಧಕ ಶಕ್ತಿ, ಮೂಳೆಗಳ ದೃಢತೆ ಮತ್ತು ನರಮಂಡಲದ ಸರಿಯಾದ ಕಾರ್ಯನಿರ್ವಹಣೆಗೆ ಸಹಕಾರಿಯಾಗುತ್ತವೆ. ಸರಿಯಾಗಿ ಬೇಯಿಸಿದ ಚಿಕನ್ ಸುಲಭವಾಗಿ ಜೀರ್ಣವಾಗುವುದರಿಂದ ಎಲ್ಲ ವಯಸ್ಸಿನವರಿಗೂ ಸೂಕ್ತವಾದ ಆಹಾರವಾಗಿದೆ.
ಆದರೆ, ಈ ಎಲ್ಲಾ ಪ್ರಯೋಜನಗಳ ನಡುವೆಯೇ ಒಂದು ಪ್ರಮುಖ ವಿಷಯವನ್ನು ಬಹುತೇಕ ಜನರು ಕಡೆಗಣಿಸುತ್ತಾರೆ ಕೋಳಿಯ ಎಲ್ಲಾ ಭಾಗಗಳೂ ಆರೋಗ್ಯಕರವಲ್ಲ. ಕೆಲವು ಭಾಗಗಳಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ, ಕೀಟಾಣುಗಳು, ಹಾರ್ಮೋನುಗಳು ಹಾಗೂ ಹೆಚ್ಚುವರಿ ಕೊಬ್ಬು ಅಂಶಗಳು ತುಂಬಿರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹೀಗಾಗಿ, ಯಾವ ಭಾಗಗಳನ್ನು ತಿನ್ನುವುದನ್ನು ತಪ್ಪಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಕೋಳಿಯ ಕುತ್ತಿಗೆ (Neck):
ಕೋಳಿಯ ಕುತ್ತಿಗೆಯ ಭಾಗದಲ್ಲಿ ವಿಷಕಾರಿ ಸೂಕ್ಷ್ಮಜೀವಿಗಳು ಹಾಗೂ ದುಗ್ಧರಸ ಗ್ರಂಥಿಗಳು ಅಡಗಿರುತ್ತವೆ. ಇವು ಬೇಯಿಸಿದರೂ ಸಂಪೂರ್ಣ ನಾಶವಾಗದೇ, ದೀರ್ಘಾವಧಿಯಲ್ಲಿ ದೇಹದಲ್ಲಿ ಸಂಗ್ರಹವಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ತಜ್ಞರ ಎಚ್ಚರಿಕೆ. ಹೀಗಾಗಿ ಚಿಕನ್ ಖರೀದಿಸುವಾಗ ಕುತ್ತಿಗೆಯ ಭಾಗವನ್ನು ತೆಗೆದುಹಾಕುವುದು ಅತ್ಯವಶ್ಯಕ.
ಶ್ವಾಸಕೋಶ, ತಲೆ ಮತ್ತು ಕರುಳು:
ಈ ಭಾಗಗಳಲ್ಲಿ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ಕೀಟಾಣುಗಳು ತುಂಬಿರುತ್ತವೆ. ಅವುಗಳ ಸೇವನೆ ದೇಹದ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮೂತ್ರನಾಳದ ಸೋಂಕು, ಹೊಟ್ಟೆ ಉಬ್ಬರ ಹಾಗೂ ಕೊಬ್ಬಿನ ಪ್ರಮಾಣದ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಕೋಳಿ ಕಾಲುಗಳು (Chicken Legs):
ಕೋಳಿ ಕಾಲುಗಳಲ್ಲಿ ಹೆಚ್ಚುವರಿ ಹಾರ್ಮೋನುಗಳು ಸಂಗ್ರಹವಾಗಿರುತ್ತವೆ. ಇವು ದೀರ್ಘಾವಧಿಯಲ್ಲಿ ಹಾರ್ಮೋನಲ್ ಅಸಮತೋಲನ, ತೂಕದ ಹೆಚ್ಚಳ ಹಾಗೂ ಮೆಟಾಬಾಲಿಕ್ (Metabolic) ಸಮಸ್ಯೆಗಳಿಗೆ ಕಾರಣವಾಗಬಹುದು. ಮಕ್ಕಳ ಹಾಗೂ ಯುವಕರಲ್ಲಿ ಬೆಳವಣಿಗೆಗೆ ಸಂಬಂಧಿಸಿದ ಅಸಮತೋಲನಗಳೂ ಉಂಟಾಗುವ ಅಪಾಯವಿದೆ.
ಕೋಳಿ ಚರ್ಮ (Chicken Skin):
ಕೋಳಿ ಚರ್ಮವು ಕೊಬ್ಬಿನ ಅಂಶದಿಂದ ಸಮೃದ್ಧವಾಗಿದೆ. 100 ಗ್ರಾಂ ಚರ್ಮದಲ್ಲಿ ಸರಾಸರಿ 32 ಗ್ರಾಂ ಕೊಬ್ಬು ಇರುತ್ತದೆ. ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣ ಹೆಚ್ಚಾಗಿ, ಹೃದ್ರೋಗ, ಅಧಿಕ ರಕ್ತದೊತ್ತಡ ಹಾಗೂ ಸ್ಥೂಲತೆ ಸಮಸ್ಯೆಗಳು ತಲೆದೋರುತ್ತವೆ.
ಯುಎಸ್ಟಿಎ (USDA) ಅಧ್ಯಯನ ಪ್ರಕಾರ, ಚರ್ಮವಿಲ್ಲದೆ ಬೇಯಿಸಿದ ಒಂದು ಕಪ್ ಚಿಕನ್‌ನಲ್ಲಿ 231 ಕ್ಯಾಲೊರಿಗಳು ಇದ್ದರೆ, ಚರ್ಮದೊಂದಿಗೆ ಅದೇ ಪ್ರಮಾಣದ ಚಿಕನ್‌ನಲ್ಲಿ 276 ಕ್ಯಾಲೊರಿಗಳು ಇರುತ್ತವೆ ಅಂದರೆ ಹೆಚ್ಚುವರಿ ಕ್ಯಾಲೊರಿಗಳೂ ಸೇರಿ ಅನಗತ್ಯ ಕೊಬ್ಬು ದೇಹಕ್ಕೆ ಸೇರುತ್ತದೆ.
ಚಿಕನ್ ಅನ್ನು ಆರೋಗ್ಯಕರವಾಗಿ ಸೇವಿಸುವ ಸರಿಯಾದ ವಿಧಾನ:
ಚಿಕನ್ ಖರೀದಿಸುವಾಗ ಕುತ್ತಿಗೆ, ತಲೆ, ಶ್ವಾಸಕೋಶ ಮತ್ತು ಕರುಳು ಭಾಗಗಳನ್ನು ತೆಗೆದುಹಾಕಿ.
ಚರ್ಮವಿಲ್ಲದ ಚಿಕನ್ ಆಯ್ಕೆ ಮಾಡಿ ಬೇಯಿಸಿ ತಿನ್ನುವುದು ಒಳಿತು. ಎಣ್ಣೆಯಲ್ಲಿ ಕರಿಯುವ ಬದಲು ಬೇಯಿಸುವುದು ಅಥವಾ ಉಪ್ಪಿನ ನೀರಿನಲ್ಲಿ ಬೇಯಿಸುವುದು ಉತ್ತಮ.
ಅತಿಯಾಗಿ ಸೇವಿಸುವುದನ್ನು ತಪ್ಪಿಸಿ, ಸಮತೋಲನದ ಆಹಾರ ಪದ್ಧತಿಯನ್ನು ಅನುಸರಿಸಿ.
ಚಿಕನ್ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದರೂ ಅದರ ಕೆಲವು ಭಾಗಗಳು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂಬುದನ್ನು ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಆಯ್ಕೆ, ಸ್ವಚ್ಛ ಸಿದ್ಧತೆ ಹಾಗೂ ನಿಯಂತ್ರಿತ ಸೇವನೆಯ ಮೂಲಕ ಚಿಕನ್‌ನ ಪೌಷ್ಟಿಕ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು, ಅನಾರೋಗ್ಯದ ಅಪಾಯವನ್ನು ತಪ್ಪಿಸಬಹುದು.

