Tag: yadagiri

  • ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ದಿನೇಶ್, ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

    ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ದಿನೇಶ್, ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025–28 ನೇ ಅವಧಿಯ ಚುನಾವಣೆಯು ನವೆಂಬರ್ 9ರಂದು ನಡೆಯಲಿದ್ದು, ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ದಿನೇಶ್ ವಿ.ಸಿ ಮತ್ತು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಯಾದಗಿರಿ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕ ಕುಮಾರಸ್ವಾಮಿ ಅವರು ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ನರಸಪ್ಪ ಅವರಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

    ಈ ವೇಳೆ ಸಂಜೆಕಾಲ ಪತ್ರಿಕೆಯ ಸಂಪಾದಕರಾದ ರಾಜೇಶ್ ಪಾಟೀಲ್, ಪತ್ರಕರ್ತರಾದ ತೋಟೆಂದ್ರ, ಮಲ್ಲು ಕಾಮರೆಡ್ಡಿ, ಕುದಾನ್ ಸಾಬ್, ಬಸವರಾಜ್ ಕಾಂಬಳೆ, ಮಂಜು ಬಿರಾದಾರ್, ದೇವಿಂದ್ರ ಕಿಲ್ಲನಕೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • 14ನೇ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಸಂಭ್ರಮದ ಜಾತ್ರಾ ಮಹೋತ್ಸವ 

    14ನೇ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಸಂಭ್ರಮದ ಜಾತ್ರಾ ಮಹೋತ್ಸವ 

    ಸತ್ಯಕಾಮ ವಾರ್ತೆ ಯಾದಗಿರಿ:

    ತಾಲ್ಲೂಕಿನ ಮುಂಡರಗಿ ಗ್ರಾಮ ಹೊರವಲಯದ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಿಂದ 14 ನೇ ವರ್ಷದ ಜಾತ್ರೆ ಜರುಗಿತು.

    ಮಠದ ಪೀಠಾಧಿಪತಿ ಶಿವ ಚಂದ್ರಶೇಖರ ಮುತ್ಯಾ ಮಾತನಾಡಿ ಪ್ರತಿವರ್ಷದಂತೆ ಮಠದಲ್ಲಿ ಜಾತ್ರೆ ನಡೆಯಲಿದ್ದು, ಸಾವಿರಾರು ಭಕ್ತರು ದೂರದ ಊರುಗಳಿಂದ ಆಗಮಿಸಿ ನಾಗಲಿಂಗೇಶ್ವರ ದರ್ಶನ ಮಾಡುವರು. ಜಾತ್ರೆಯ ಪೂರ್ವದಿನ ರಾತ್ರಿ ಭಜನೆ ಕಾರ್ಯಕ್ರಮ, ಬೆಳಿಗ್ಗೆ ಮುಂಡರಗಿ ಗ್ರಾಮದ ದ್ಯಾಮವ್ವ ದೇವಸ್ಥಾನಕ್ಕೆ ತೆರಳಿ ಉಡಿ ತುಂಬುವ ಕಾರ್ಯಕ್ರಮ, ಗಂಗಾ ಸ್ನಾನ, ನಾಗರ ಹುತ್ತಕ್ಕೆ ಪೂಜೆ, ಹಾಗೂ ನಿಜ ನಾಗರಕ್ಕೆ ಹಾಲುಣಿಸುವುದು ವಾಡಿಕೆ. ಜಾತ್ರೆಯಲ್ಲಿ ಹಲಗೆ ಕುಣಿತ, ಡೊಳ್ಳು ಕುಣಿತ, ಕೈ ಕುಸ್ತಿ ಪಂದ್ಯಗಳು ಜರುಗುತ್ತವೆ, ವಿಶೇಷ ಪೂಜೆಗಳು ನೆರವೇರುತ್ತವೆ ಎಂದರು.

    ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ್ ಮಾತನಾಡಿ ನಮ್ಮ ಸನಾತನ ಧರ್ಮವು ಮನುಷ್ಯನಿಗೆ ಭಯ, ಭಕ್ತಿ, ನಂಬಿಕೆ, ದಾನ, ಧರ್ಮ, ಸಂಸ್ಕೃತಿ, ಸಂಸ್ಕಾರ ಗಳು ಇದ್ದಾಗಲೇ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ, ನಾವು ಕೂಡ ಹಲವು ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತೇವೆ ವಿಶೇಷವಾಗಿ ನಾಗರ ಪಂಚಮಿ ಪ್ರಯುಕ್ತ ನಮ್ಮ ಭಾಗದ ಕಂದಕೂರು ಗ್ರಾಮದ ಬೆಟ್ಟದ ಕೊಂಡಮ್ಮಾಯಿ ಜಾತ್ರೆವೇಳೆಯಲ್ಲಿ ರಾಶಿಗಟ್ಟಲೇ ಸಾವಿರಾರು ಹಾವು, ಚೇಳುಗಳು ಹೊರಬಂದು, ಜನರೆಲ್ಲ ಅವುಗಳಿಂದ ಆಟವಾಡುವುದು ಸಾಮಾನ್ಯ ಮಾತಲ್ಲ. ಅಂತೆಯೇ ಹುತ್ತದಲ್ಲಿನ ನಿಜ ನಾಗರ ಹಾವನ್ನು ಹೊರತೆಗೆದು ಹಾಲುಣಿಸುವುದು ದೈವತ್ವದ ಮಾತು ಎಂದರು.

    ಕಾರ್ಯಕ್ರಮದಲ್ಲಿ ಹಳಿಗೇರ ಪೀಠದ ಹಣಮಂತ್ರಾಯ ಮುತ್ಯಾ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ರಮೇಶ್ ಕೋಟಿಮನಿ, ಶ್ರೀಧರ್ ಮಹಾಂತೇಶ್, ಅಶೋಕ್ ರೆಡ್ಡಿ ಎಲೇರಿ, ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ಮುದ್ನಾಳ್ ಸ್ವಾಮಿಗಳಿಂದ ಆಶೀರ್ವಾದ ಪಡೆದರು.

  • ಲೋಕದಾಲತ್ 2478 ಪ್ರಕರಣಗಳ ಇತ್ಯರ್ಥ

    ಲೋಕದಾಲತ್ 2478 ಪ್ರಕರಣಗಳ ಇತ್ಯರ್ಥ

    ಸತ್ಯಕಾಮ ವಾರ್ತೆ ಸುರಪುರ:
    ಇಲ್ಲಿಯ ನ್ಯಾಯಾಲಯದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಲೋಕದಾಲತ್ ನಲ್ಲಿ ಬ್ಯಾಂಕ್ ವ್ಯಾಜ್ಯಗಳು ಸೇರಿ 2478 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.

    ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಅವರು ಪ್ರಕರಣ ಒಂದರ ಇತ್ಯರ್ಥದ ಸಂದರ್ಭದಲ್ಲಿ ಭಾಗವಹಿಸಿದ್ದರು.ಅಲ್ಲದೆ ಜಿಲ್ಲಾ ಎರಡನೇ ಹೆಚ್ಚವರಿ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ,ಸುರಪುರ ಸೀನಿಯರ್ ಸಿವಿಲ್ ನ್ಯಾಯಾಧೀಶರಾದ ಫಕಿರವ್ವ ಕೆಳಗೇರಿ,ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಭಾಗವಹಿಸಿದ್ದರು.

    ಲೋಕ ಅದಾಲತ್‌ನಲ್ಲಿ ಒಟ್ಟು 4229 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.ಅವುಗಳಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 7 ಪ್ರಕರಣಗಳು ತೆಗೆದುಕೊಂಡು 4 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಇವುಗಳಲ್ಲಿ 1 ಲಕ್ಷ 50 ಸಾವಿರ ಪರಿಹಾರವನ್ನು ಕೊಡಿಸಲಾಗಿದೆ.ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 1444 ಪ್ರಕರಣಗಳು ತೆಗೆದುಕೊಂಡು 675 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. 18 ಲಕ್ಷ 46 ಸಾವಿರ 725 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಸಿವಿಲ್ ನ್ಯಾಯಾಲಯದಲ್ಲಿ 1437 ಪ್ರಕರಣಗಳನ್ನು ತೆಗೆದುಕೊಂಡು 928 ಪ್ರಕರಣಗಳನ್ನು ಇತ್ಯರ್ಥಗೊಳಿಸಿ,3 ಲಕ್ಷ 11 ಸಾವಿರ 824 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಹೆಚ್ಚುವರಿ ನ್ಯಾಯಾಲಯದಲ್ಲಿ 1341 ಪ್ರಕರಣಗಳು ಕೈಗೆತ್ತಿಕೊಳ್ಳಲಾಗಿತ್ತು, ಇವುಗಳಲ್ಲಿ 865 ಪ್ರಕರಣಗಳು ಇತ್ಯರ್ಥಗೊಳಿಸಿ 7 ಲಕ್ಷ 72 ಸಾವಿರ 550 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಅಲ್ಲದೆ ಬ್ಯಾಂಕ್ ವ್ಯವಹಾರದ 6 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 19 ಲಕ್ಷ 96 ಸಾವಿರ ರೂಪಾಯಿಗಳ ತುಂಬಿಸಲಾಗಿದೆ.

    ಒಟ್ಟು 4229 ಪ್ರಕರಣಗಳಲ್ಲಿ 2472 ಪ್ರಕರಣಗಳು ಇತ್ಯರ್ಥಗೊಂಡು 2769275 ರೂಪಾಯಿಗಳ ಪರಿಹಾರವನ್ನು ಕೊಡಿಸಲಾಗಿದೆ.ಅಲ್ಲದೆ 6 ಬ್ಯಾಂಕ್ ವ್ಯವಹಾರದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

    ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಅವರು,ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿಯವರು,ಹಿರಿಯ ಸಿವಿಲ್ ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿಯವರು,ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಉಪಸ್ಥಿತರಿದ್ದರು. ವಕೀಲರಾದ ಹಿರಿಯ ನ್ಯಾಯವಾದಿ ನಿಂಗಣ್ಣ ಚಿಂಚೋಡಿ,ವಿನೋದ ಜೇವರ್ಗಿ,ಎಮ್.ಎಸ್.ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಲೋಕ ಅದಾಲತ್‌ನಲ್ಲಿ ಪತಿ ಪತ್ನಿ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪ್ರಕರಣವೊಂದರಲ್ಲಿ ಪತ್ನಿಯೇ ಪತಿಗೆ ಒಂದಾಗಿ ಜೀವನ ಸಾಗಿಸುವ ಕುರಿತು ನ್ಯಾಯಾಧೀಶರ ಮುಂದೆ ಪತಿಗೆ ಮನವೊಲಿಸಿ ವಿಚ್ಛೇದನವನ್ನು ಕೈಬಿಟ್ಟು ನ್ಯಾಯಾಲಯದಲ್ಲಿ ಒಂದಾಗಿ ಹಾರ ಬದಲಾಯಿಸಿಕೊಂಡು ಎಲ್ಲ ನ್ಯಾಯಾಧೀಶರು ಹಾಗೂ ವಕೀಲರಿಗೆ ಸಿಹಿ ಹಂಚಿ ಒಂದಾಗಿ ನಡೆದ ಘಟನೆ ನಡೆಯಿತು.

  • ಕೇಂದ್ರದ ನಿಲುವಿಗೆ ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ ವಿರೋಧ

    ಕೇಂದ್ರದ ನಿಲುವಿಗೆ ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ ವಿರೋಧ

    ಸತ್ಯಕಾಮ ವಾರ್ತೆ ಹುಣಸಗಿ:
    ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರದಾರರ ಸಂಘದಿಂದ ಕೇಂದ್ರ ಸರಕಾರವು ನಿವೃತ್ತ ನೌಕರದಾರರ ಪಿಂಚಣಿಯ ಕುರಿತ ನಿಲುವನ್ನು ವಿರೋಧಿಸಿ, ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

    ಸಂಘದ ತಾಲೂಕು ಅಧ್ಯಕ್ಷ ನಾಗಪ್ಪ ಹಡಿಕ್ಯಾಳ ಹಾಗೂ ಪದಾಧಿಕಾರಿ ಆರ್.ಎಲ್ ಸುಣಗಾರ ಮಾತನಾಡಿ, ಕೇಂದ್ರ ಸರಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಆರ್ಥಿಕ ಬಿಲ್‌ನ್ನು ಮಂಡಿಸುವ ವೇಳೆ ೮ನೇ ವೇತನ ಆಯೋಗದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಮೇಲೆ ದಿ.೧-೪-೨೦೨೬ ರ ನಂತರ ನಿವೃತ್ತಿಯಾಗುವವರಿಗೆ ಮಾತ್ರ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲಾಗುವುದು.

    ಆದರೆ ೧-೪-೨೦೨೬ರ ಪೂರ್ವದಲ್ಲಿ ನಿವೃತ್ತಿಯಾದವರಿಗೆ ಪರಿಷ್ಕರಿಸುವುದು ಕಷ್ಟಕರ ಎಂದು ಹೇಳಿರುವ ಮಾತಿನ ವಿಚಾರವು ದೇಶದ ಎಲ್ಲ ರಾಜ್ಯಗಳ ನಿವೃತ್ತ ನೌಕರರಿಗೆ ಸಂಕಷ್ಟ ತಂದೊಡ್ಡಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.

    ಒಂದು ವೇಳೆ ಈ ಮಾತಿನಂತೆ ಕೇಂದ್ರ ಸರಕಾರವು ನಿರ್ಣಯ ಅಂಗೀಕರಿಸಿದಲ್ಲಿ ನಿವೃತ್ತ ನೌಕರದಾರರಿಗೆ ತುಂಬ ತೊಂದರೆಯಾಗಲಿದೆ. ವೃದ್ದಾಪ್ಯದಲ್ಲಿರುವ ಇವರಿಗೆ ಈ ಸರಕಾರದ ನಿಲುವು ವಿವಿಧ ರೀತಿಯ ಸಂಕಷ್ಟ ತರಲಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಅವರು ಸರಕಾರವು ಕೂಡಲೆ ಈ ವಿಚಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

    ನಂತರ ದೇಶದ ಪ್ರಧಾನಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಹುಣಸಗಿಯ ತಹಶೀಲ್ದಾರರ ಮುಖಾಂತರ ಸಲ್ಲಿಸಲಾಯಿತು.

    ಇದಕ್ಕೂ ಮುಂಚೆ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರರ ಕಚೇರಿಯವರೆಗೂ ನಿವೃತ್ತನೌಕರರು ಮೌನವಾಗಿ ಮೆರವಣಿಗೆ ನಡೆಸಿದರು.

    ಈ ಸಂದರ್ಭ ನಿವೃತ್ತ ನೌಕರದಾರರ ಸಂಘದ ಧನೇಶನಾಯಕ ರಾಠೋಡ್, ಬಸಣ್ಣ ಗೊಡ್ರಿ, ಶಿವಪ್ಪ ಅಂಗಡಿ, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಶಾಂತಗೌಡ ಪಾಟೀಲ್, ಜಗದೀಶ ಶಹಪುರ, ಪ್ರಾಣೇಶ ಕುಲಕರ್ಣಿ, ಹುಸೇನಸಾಬ್, ಬಸಣ್ಣ ಚಿಂಚೋಳಿ, ಈಶ್ವರ ಬಡಿಗೇರ, ಬಿ.ಎಸ್. ಗೂಡಲಮನಿ ಸೇರಿದಂತೆ ಇತರರಿದ್ದರು.

  • ಜು.5ರಂದು ಗಿರಿನಾಡಿಗೆ ನಿಖಿಲ್ ಕುಮಾರಸ್ವಾಮಿ

    ಜು.5ರಂದು ಗಿರಿನಾಡಿಗೆ ನಿಖಿಲ್ ಕುಮಾರಸ್ವಾಮಿ

    ಸತ್ಯಕಾಮ ವಾರ್ತೆ ಯಾದಗಿರಿ :

    ನಗರದ ಹೊರ ವಲಯದ ಯರಗೋಳ ರಸ್ತೆ ಬಳಿಯ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಜು.5ರಂದು ನಡೆಯಲಿರುವ ಜನರೊಂದಿಗೆ ಜನತಾದಳ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸುಭಾಷ್ ಚಂದ್ರ ಕಟಕಟಿ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದ 110 ವಿಧಾನ ಸಭಾ ಕ್ಷೇತ್ರಗಳಲ್ಲಿ 58 ದಿನಗಳವರೆಗೆ ನಡೆಯಲಿದ್ದು, ಕಾರ್ಯಕ್ರಮ ನಂತರ ಶಹಾಪೂರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದರು.

    ಈ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ, ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರಡ್ಡಿ, ಮಾಜಿ ಶಾಸಕರಾದ ಗುರು ಪಾಟೀಲ ಶಿರವಾಳ, ಜೆಡಿಎಸ್ ಜಿಲ್ಲಾ ಮುಖಂಡರು, ಪದಾಧಿಕಾರಿಗಳು ಭಾಗವಹಿಸಲಿದ್ದು ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.

  • ಪುಟ್ಟ ಮಕ್ಕಳ ಬಾಲ ಪ್ರತಿಭೆಯನ್ನು ಗುರುತಿಸಲು ಬಾಲಮೇಳಗಳು ಸೂಕ್ತ ವೇದಿಕೆ; ವೀರಣ್ಣ ಗೌಡ ಪಾಟೀಲ್

    ಪುಟ್ಟ ಮಕ್ಕಳ ಬಾಲ ಪ್ರತಿಭೆಯನ್ನು ಗುರುತಿಸಲು ಬಾಲಮೇಳಗಳು ಸೂಕ್ತ ವೇದಿಕೆ; ವೀರಣ್ಣ ಗೌಡ ಪಾಟೀಲ್

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪುಟ್ಟ ಮಕ್ಕಳ ಬಾಲ ಪ್ರತಿಭೆಯನ್ನು ಗುರುತಿಸಲು ಬಾಲಮೇಳಗಳು ಸೂಕ್ತ ವೇದಿಕೆಯಾಗಿವೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕರಾದ ವೀರಣ್ಣ ಗೌಡ ಪಾಟೀಲ್ ಅವರು ಅವರು ಹೇಳಿದ್ದಾರೆ.

    ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದ ಅಂಗನವಾಡಿ ಮಕ್ಕಳಿಂದ ಬಾಲಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕರಾದ ವೀರಣ್ಣ ಗೌಡ ಪಾಟೀಲ್ ಅವರು ಮಾತನಾಡಿದರು
    ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದ ಅಂಗನವಾಡಿ ಮಕ್ಕಳಿಂದ ಬಾಲಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕರಾದ ವೀರಣ್ಣ ಗೌಡ ಪಾಟೀಲ್ ಅವರು ಮಾತನಾಡಿದರು.

    ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹಾಗೂ ಕಲಿಕೆ ಟಾಟಾ ಟ್ರಸ್ಟ್ ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಲಮೇಳ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಶಿಕ್ಷಣಕ್ಕೆ ಬೇಕಾದ ಉತ್ತಮ ಅಡಿಪಾಯಯವನ್ನು ಕಲಿಕಾ ಚಟುವಟಿಕೆಗಳ ಮೂಲಕ ದೊರಕಿಸಿಕೊಡಲಾಗುತ್ತದೆ ಎಂದರು.

    ಬಾಲಮೇಳ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ಕೆಲಸ ಮಾಡುತ್ತಿದೆ. ಮಕ್ಕಳ ಅಭಿರುಚಿ ಗುರುತಿಸಿ ಪೋಷಕರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

    ಈ‌‌‌ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕರಾದ ವೀರಣ್ಣ ಗೌಡ ಪಾಟೀಲ್,ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಷ ಪಾಟೀಲ್, ಸಿ. ಡಿ. ಪಿ. ಓ ಶರಣಬಸಪ್ಪ,ಗೌರಮ್ಮ, ಶಾಂತ, ಮುದ್ದೇಶ, ಸೇರಿದಂತೆ ಇತರರು ಇದ್ದರು.

  • ಅ.26 ರಂದು ಅಭಾವೀಲಿಂ ಮಹಾಸಭಾದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ಅ.26 ರಂದು ಅಭಾವೀಲಿಂ ಮಹಾಸಭಾದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ಸತ್ಯಕಾಮ ವಾರ್ತೆ ಯಾದಗಿರಿ:

    ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯಾದಗಿರಿ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅರ್ಥಪೂರ್ಣವಾಗಿ ಬಹು ವಿಜೃಂಭಣೆಯಿಂದ ಇದೇ ಶನಿವಾರ 26 ರಂದು ಬೆಳಿಗ್ಗೆ 10-30 ಕ್ಕೆ ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿರುವ ಸಪ್ತಪದಿ ಕನ್ವೆಷನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಸಿದ್ದರಾಜರೆಡ್ಡಿ ತಿಳಿಸಿದರು.

    ಯಾದಗಿರಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಮಾಹಿತಿ ನೀಡಿ ಮಾತನಾಡುತ್ತಾ, ಅಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯಾದಗಿರಿ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಬ್ಬೆತುಮಕೂರು ವಿಶ್ವಾರಾಧ್ಯರ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿಗಳು, ನಾಲವಾರ ಕೋರಿಸಿದ್ದೇಶ್ವರ ಮಠದ ಷ.ಬ್ರ. ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿಗಳು ಮತ್ತು ಹೆಡಗಿಮದ್ರಾ ಶಾಂತಶಿವಯೋಗಿ ಮಠದ ಪೀಠಾಧಿಪತಿ ಷ.ಬ್ರ. ಶಾಂತಮಲ್ಲಿಕಾರ್ಜುನ ಪಂಡಿತಾರಾದ್ಯ ಮಹಾಸ್ವಾಮೀಜಿಗಳು ಪಾವನ ಸಾನಿಧ್ಯವನ್ನು ವಹಿಸಲಿದ್ದಾರೆ.

    ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಆಗಮಿಸಲಿದ್ದಾರೆ.

    ವಿಶೇಷ ಸನ್ಮಾನಿತರಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ಡಾ. ಶಂಕರ ಮಹಾದೇವ ಬಿದರಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ, ನೇತೃತ್ವವನ್ನು ಅ.ಭಾ.ವೀ.ಲಿಂ ಮಹಾಸಭಾ ಯಾದಗಿರಿ ನೂತನ ಜಿಲ್ಲಾಧ್ಯಕ್ಷರಾದ ಚನ್ನಪ್ಪಗೌಡ ಮೋಸಂಬಿ, ತಾಲೂಕಾಧ್ಯಕ್ಷರಾದ ರಾಜಶೇಖರ್ ಸಿ ಪಾಟೀಲ್ ಚಾಮನಳ್ಳಿ ಇವರು ವಹಿಸುವರು.

    ಸುದ್ದಿಗೋಷ್ಠಿ ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್‌ ಮಾಡಿ

    ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಮಾಜಿ ಸಚಿವರಾದ ಡಾ. ಎಬಿ. ಮಾಲಕರೆಡ್ಡಿ, ಮಾಜಿ ಶಾಸಕರಾದ ಗುರುಪಾಟೀಲ ಶಿವಾಳ, ಸಮಾಜದ ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ್, ಸಮಾಜದ ಮುಖಂಡರು ಹಿರಿಯ ನ್ಯಾಯವಾದಿಗಳಾದ ಎಸ್‌ಬಿ ಪಾಟೀಲ್, ಉದ್ಯಮಿಗಳು ಹಾಗೂ ಸಮಾಜದ ಮುಖಂಡರಾದ ಶರಣಪ್ಪಗೌಡ ಮಲ್ಹಾರ್, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವಿನಾಯಕ ಮಾಲಿಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷರಾದ ಬಸವರಾಜ ಜೈನ್, ಸಮಾಜದ ಮುಖಂಡರು ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ, ಮಹಾಸಭಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಪಾರ್ವತಿ ಕರೆಡ್ಡಿ ಮಲ್ಹಾರ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಅಯ್ಯಣ್ಣ ಹುಂಡೇಕಾರ, ಅ.ಭಾ.ವೀ.ಲಿಂ ಮಹಾಸಭಾದ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಮಣ್ಣೂರ್, ನಿಕಟಪೂರ್ವ ತಾಲೂಕಾಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಮಹಾಸಭಾ ಶಹಾಪೂರ ತಾಲೂಕಾಧ್ಯಕ್ಷ ಸಿದ್ದಣ್ಣ ಆರಬೋಳ,ಸುರಪುರ ತಾಲೂಕಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಆಗಮಿಸುವರು.

    ಇದೇ ವೇಳೆ ಯಡಿಯೂರುಸಿರಿ ಸಂಗೀತ ಪಾಠಶಾಲೆ ಯಾದಗಿರಿ ಇವರಿಂದ ವಚನ ಗಾಯನ ನಡೆಯಲಿದೆ.

    ಸಮಾಜೋದ್ದಾರಕ, ಗುರುಪರಂಪರೆಯ ತಿಲಕ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸ್ವಾಮೀಜಿಯವರು ಸ್ಥಾಪನೆ ಮಾಡಿದಂತಹ ಅಖಿಲ ವೀರಶೈವ ಲಿಂಗಾಯತ ಮಹಾಸಭಾಕ್ಕೆ ನಾಡಿನಲ್ಲಿ ಮಹೊನ್ನತ ಇತಿಹಾಸ, ಪರಂಪರೆ ಹೊಂದಿದೆ. ಸಂಸ್ಥಾಪಕ ಪೂಜ್ಯರ ಆಶಯದಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಧ್ಯೇಯೋದ್ದೇಶವನ್ನು ಪಾಲಿಸಿಕೊಂಡು ಸಮಾಜವನ್ನು ಅಖಂಡವಾಗಿ ಒಗ್ಗೂಡಿಸಿಕೊಂಡು ಹೋಗುವ ದಿಸೆಯಲ್ಲಿ ಸಮಾಜ ಸಂಘಟನೆಯ ಕಾರ್ಯ ಜಿಲ್ಲೆಯಲ್ಲಿ ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ. ಜಿಲ್ಲೆಯ ಸಮಸ್ತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಬಾಂಧವರು ಈ ಪದಗ್ರಹಣ ಸಮಾರಂಭದಲ್ಲಿ ನಿಗಧಿತ ಸಮಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

    ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ತಾಲ್ಲೂಕಾಧ್ಯಕ್ಷ ರಾಜಶೇಖರ ಪಾಟೀಲ ಚಾಮನಹಳ್ಳಿ,ಕೋಶಾಧ್ಯಕ್ಷ ಬಸನಗೌಡ ಕನ್ಯಾಕೋಳೂರ, ಅನ್ನಪೂರ್ಣ ಜವಳಿ, ವೀರಭದ್ರಪ್ಪ ಮೋಟಾರ್, ಜಗದೀಶ್ ಪಾಟೀಲ್, ಶರಣಪ್ಪ ಜಾಕ ಸೇರಿದಂತೆ ಇನ್ನಿತರರು ಹಾಜರಿದ್ದರು.
    ==================

    ಯಾದಗಿರಿ ಜಿಲ್ಲಾ ಘಟಕ ರಚನೆ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರು, ಚನ್ನಪ್ಪಗೌಡ ಮೋಸಂಬಿ ಯಾದಗಿರಿ ಮತ್ತು ಉಪಾಧ್ಯಕ್ಷರುಗಳು ಸಂಗಾರೆಡ್ಡಿಗೌಡ ಪೋಲೀಸ್ ಪಾಟೀಲ ಮಲ್ಲಾರ ಯಾದಗಿರಿ, ಅಡಿವೆಪ್ಪ ಜಾತಾ ಶಹಾಪೂರ, ಶ್ರೀಮತಿ ಅನ್ನಪೂರ್ಣ ಡಾ. ಸಿ.ಎಂ. ಪಾಟೀಲ ಯಾದಗಿರಿ, ನರಸರೆಡ್ಡಿ ಪಾಟೀಲ ನಜರಾಪೂರ, ಪ್ರಧಾನ ಕಾರ್ಯದರ್ಶಿ ಡಾ. ಸಿದ್ಧರಾಜರೆಡ್ಡಿ ಯಾದಗಿರಿ, ಕೋಶಾಧ್ಯಕ್ಷರು ಬಸಣ್ಣಗೌಡ ಮಾಲಿ ಪಾಟೀಲ ಕನ್ಯಕೋಳೂರು ಯಾದಗಿರಿ, ಕಾರ್ಯದರ್ಶಿಗಳು ಚನ್ನಮಲ್ಲಿಕಾರ್ಜುನ ಅಕ್ಕಿ ಯಾದಗಿರಿ, ಬಸವರಾಜ ಅರುಣಿ ಶಹಾಪೂರ, ಶ್ರೀಮತಿ ಡಾ. ಕಮಲಾ ಇಂದೂಧರ ಶಿನ್ನೂರ ಯಾದಗಿರಿ, ಮಹೇಶ್ಚಂದ್ರ ಅನೇಗುಂದಿ ಶಹಾಪೂರ.

    ಕಾರ್ಯಕಾರಿ ಸದಸ್ಯರುಗಳು: ಬಸವಂತ್ರಾಯಗೌಡ ಮಾಲಿ ಪಾಟೀಲ ಯಾದಗಿರಿ, ವೀರಭದ್ರಯ್ಯಸ್ವಾಮಿ ಜಾಕಾಮಠ ಯಾದಗಿರಿ, ಶಂಕ್ರಪ್ಪಗೌಡ ಗೋನಾಲ ಯಾದಗಿರಿ, ರುದ್ರಗೌಡ ಪಾಟೀಲ ಮಲ್ಲಾಬಿ ಯಾದಗಿರಿ, ವೀರಭದ್ರಪ್ಪ ಮೋಟರ ಯಾದಗಿರಿ, ಬಸವರಾಜ ರಾಯಕೋಟಿ ಚಂಡ್ರಿಕಿ, ಚಂದ್ರಶೇಖರ ಅರಳಿ ಯಾದಗಿರಿ, ಚೇತನ ಪಾಟೀಲ ಬಾನಾ, ಸಿದ್ದಲಿಂಗಪ್ಪ ದೇಶಮುಖ ಶಹಾಪೂರ, ಶರಣಪ್ಪ ಗುರಪ್ಪ ಜಾಕಾ ಯಾದಗಿರಿ, ನಾಗಣ್ಣ ಶೀಲವಂತಪ್ಪ ಸಾಹು ಶಹಾಪೂರ, ಬಸವರಾಜ ಹೇರುಂಡಿ ಶಹಾಪೂರ, ಭೀಮರಡ್ಡಿ ಚಂದ್ರಾಯಗೌಡ ಪಾಟೀಲ ಗೋಗಿ, ಉಮೇಶ್ಚಂದ್ರ ಶೀಲವಂತಪ್ಪ ಗೋಗಿ, ಅನ್ನಪೂರ್ಣ ಜವಳಿ ಯಾದಗಿರಿ, ಸವಿತಾ ಶರಣಗೌಡ ಮಾಲಿ ಪಾಟೀಲ ಯಾದಗಿರಿ, ದೀಪಾ ಶಂಕ್ರಪ್ಪ ಅರುಣಿ ಯಾದಗಿರಿ, ಮೇಘಾ ಶರಣಗೌಡ ಹೋತಪೇಟ್, ಮಂಜುಳಾ ಆರ್.ಪಾಟೀಲ ಯಾದಗಿರಿ, ಮೀನಾಕ್ಷಿ ಭೀಮಾಶಂಕರ ಮುತ್ತಗಿ ಗುರುಮಠಕಲ್, ಜೋತಿ ಚನ್ನನಗೌಡ ಶಹಾಪೂರ, ಅನ್ನಪೂರ್ಣ ಸುಧಾಕರ ಗುಡಿ ಶಹಾಪೂರ.

     

    ಯಾದಗಿರಿ ತಾಲೂಕು ಘಟಕ ರಚನೆ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯಾದಗಿರಿ ತಾಲೂಕು ಘಟಕದ ಅಧ್ಯಕ್ಷರು ರಾಜಶೇಖರ ಸಿ.ಪಾಟೀಲ ಚಾಮನಹಳ್ಳಿ ಯಾದಗಿರಿ ಮತ್ತು ಉಪಾಧ್ಯಕ್ಷರುಗಳು ಶ್ರೀನಾಥ ಮಲ್ಲಕಾರ್ಜುನಪ್ಪ ಜೈನ ಯಾದಗಿರಿ, ಸ್ವಪ್ಪಾ ಮಂಜುನಾಥ ಲೇವಡಿ ಯಾದಗಿರಿ, ಪ್ರಧಾನ ಕಾರ್ಯದರ್ಶಿ ಅಯ್ಯಣ್ಣಗೌಡ ಮಲ್ಲಣ್ಣಗೌಡ ಕ್ಯಾಸಪ್ಪನಹಳ್ಳಿ, ಕೋಶಾಧ್ಯಕ್ಷರು ರಾಜಶೇಖರ ಮಹಾದೇವಪ್ಪ ಉಪ್ಪಿನ ಯಾದಗಿರಿ, ಕಾರ್ಯದರ್ಶಿಗಳು ಬಸರಡ್ಡಿ ಮಲ್ಲರಡ್ಡಿ ಪಾಟೀಲ ಎಂ.ಟಿ.ಪಲ್ಲಿ ಗುರುಮಠಕಲ್, ವಿಜಯಲಕ್ಷ್ಮೀ ಶಿವರಾಜ ಶಾಸ್ತ್ರೀ ಯಾದಗಿರಿ.

    ಕಾರ್ಯಕಾರಿ ಸದಸ್ಯರುಗಳು: ರಮೇಶ ಗುರುನಾಥರಡ್ಡಿ ದೊಡ್ಡಮನಿ ಯಾದಗಿರಿ, ರಾಮರಡ್ಡಿ ಶಿವರಡ್ಡಿ ಯಾದಗಿರಿ, ಶರಣಬಸಪ್ಪ ಬಸವರಾಜಪ್ಪ ಅವಂಟಿ ಇಡ್ಲೂರು, ನಾಗಪ್ಪ ಶರಣಪ್ಪ ಸಜ್ಜನ ಯಾದಗಿರಿ, ರವೀಂದ್ರ ಜಾಕಾ ಯಾದಗಿರಿ, ಜಗದೀಶ ಪಾಟೀಲ ಆಶನಾಳ, ಜಗದೀಶ ದುಂಡಪ್ಪಗೌಡ ಪಾಟೀಲ ಯಾದಗಿರಿ, ನೂರಂದಪ್ಪ ಲೇವಡಿ ಯಾದಗಿರಿ, ಡಾ. ವಿನಾಯಕ ಸಿ. ಪಾಟೀಲ ಅಬ್ಬೆತುಮಕೂರ, ನಿರ್ಮಲಾ ಸುಭಾಶ್ಚಂದ್ರ ಕೌಲಗಿ ಯಾದಗಿರಿ, ಪ್ರಮಿಳಾದೇವಿ ಡಾ. ಪ್ರಕಾಶ ರಾಜಾಪೂರ, ವೀಣಾ ಚಂದ್ರಶೇಖರ ಸೌದ್ರಿ ಯಾದಗಿರಿ,ವೇದಾ ಬಸವಂತರಡ್ಡಿ ಕರಡ್ಡಿ ಮಲ್ಲಾರ ಯಾದಗಿರಿ,ಸುಧಾ ಆನಂದರಡ್ಡಿ ವಡವಟ್ ಯಾದಗಿರಿ.

  • ಗೋಲ್ಡನ್ ಹವರ್ ನಲ್ಲಿ ಚಿಕಿತ್ಸೆಯಿಂದ 3 ಜೀವ ರಕ್ಷಣೆ: ಡಾ|| ಅಮೋಘ ಸಿದ್ದೇಶ್ವರ

    ಗೋಲ್ಡನ್ ಹವರ್ ನಲ್ಲಿ ಚಿಕಿತ್ಸೆಯಿಂದ 3 ಜೀವ ರಕ್ಷಣೆ: ಡಾ|| ಅಮೋಘ ಸಿದ್ದೇಶ್ವರ

    ಸತ್ಯಕಾಮ ವಾರ್ತೆ ಯಾದಗಿರಿ:

    ತುರ್ತು ಪರಿಸ್ಥಿತಿಯಲ್ಲಿ ಕಲ್ಬುರ್ಗಿ, ರಾಯಚೂರು ಮುಖಮಾಡುವ ಪರಿಸ್ಥಿತಿ ಇರುವ ವೇಳೆ ನಗರದಲ್ಲಿ ಸಿಪಾಕಾದೊಂದಿಗೆ ಆರಂಭಿಸಿದ 24*7 ಸೇವೆ ನೀಡುವ ಐಸಿಯು ಸೇವೆ ಹಾಗೂ (ಸುವರ್ಣ ತಾಸುಗಳ) ಗೋಲ್ಡನ್ ಹವರ್ (Golden Hour)ಅವಧಿಯ ಚಿಕಿತ್ಸೆಯಿಂದ ಮೂರು ಅಮೂಲ್ಯ ಜೀವ ಉಳಿದಿವೆ ಎಂದು ಇಲ್ಲಿನ ವಿಬಿಆರ್ ಮುದ್ನಾಳ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ವೈದ್ಯರಾದ ಡಾ. ಅಮೋಘ ಸಿದ್ದೇಶ್ವರ ನರಸಣಗಿ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕದ ಮೊದಲ ಸಿಪಾಕಾ ಜಾಗತಿಕ ಗುಣಮಟ್ಟದ ಐಸಿಯು ಸೇವೆಯ ಸೌಲಭ್ಯ ಆರಂಭಿಸಿದ ನಂತರ ಅನೇಕ ಜನತೆಗೆ ಇದರಿಂದ ಉಪಯೋಗವಾಗಿದೆ.

    ಅದರಲ್ಲೂ ವಿಶೇಷವಾಗಿ ಕಳೆದ ತಿಂಗಳೊಪ್ಪತ್ತಿನಲ್ಲಿ ಮೂರು ವಿಶಿಷ್ಟ ಸವಾಲಿನ ಪ್ರಕರಣಗಳು ಯಶಸ್ವಿಯಾಗಿ ನಿಭಾಯಿಸಿ ಜೀವ ಉಳಿಸಿದ ಘಟನೆಗಳು ನಡೆದಿವೆ ಎಂದು ವಿವರಿಸಿದ ಅವರು, ಬೆನ್ನು ಮೂಳೆ ನರ ಅಪ್ಪಚ್ಚಿಯಾಗಿದ್ದ ಪ್ರಕರಣವನ್ನು ಶಸ್ತçಚಿಕಿತ್ಸೆ ಮೂಲಕ ಗುಣಪಡಿಸಿದ್ದಲ್ಲದೇ ಕೇವಲ 6 ತಾಸಿನಲ್ಲಿಯೇ ರೋಗಿ ಐಸಿಯುನಿಂದ ಸಾಮಾನ್ಯ ನಂತೆ ನಡೆದುಕೊಂಡು ಹೋಗುವಂತೆ ಮಾಡಿದ ಪ್ರಕರಣ ಯಶಸ್ವಿಯಾಗಿತ್ತು ಎಂದು ತಿಳಿಸಿದರು.

    ಎರಡನೇ ಪ್ರಕರಣದಲ್ಲಿ ರೋಗಿ 15 ಬಿಪಿ ಮಾತ್ರೆ ಸೇವಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಸಂದರ್ಭದಲ್ಲಿ ತಕ್ಷಣವೇ ಗೋಲ್ಡನ್ ಹವರ್ಸ್ ನಲ್ಲಿ ಐಸಿಯುಗೆ ಸೇರಿಸಿ ಚಿಕಿತ್ಸೆ ಕೊಟ್ಟ ಪರಿಣಾಮ ಬಹುತೇಕ ಸತ್ತೇ ಹೋಗಿದ್ದ ವ್ಯಕ್ತಿ 4 ದಿನಗಳಲ್ಲಿ ಬಿಪಿ ಹತೋಟಿಗೆ ತಂದು ಪುನರ್ಜನ್ಮದೊಪಾದಿಯಲ್ಲಿ ಬದುಕಿದ ಪ್ರಕರಣ ದಾಖಲಾಯಿತು ಎಂದು ತಿಳಿಸಿದರು.

    ಜೊತೆಗೆ ಹೊಲದಲ್ಲಿ ಕ್ರಿಮಿನಾಶಕ ಸಿಂಪಡನೆ ವೇಳೆ ಅಪಾಯಕಾರಿ ಕ್ರಿಮಿನಾಶಕ ದೇಶ ಸೇರಿದ ಕೆವಲ ಅರ್ಧ ತಾಸಿನಲ್ಲಿ ಐಸಿಯುಗೆ ಸೇರಿಸಿ ಚಿಕಿತ್ಸೆ ನೀಡಿದ್ದರಿಂದ ಆ ರೋಗಿಯೂ ಪ್ರಾಣ ಉಳಿಸಿದ ಪ್ರಕರಣ ಯಶಸ್ವಿಯಾಗಿ ನಿಭಾಯಿಸಲಾಯಿತು ಎಂದು ವಿವರಣೆ ನೀಡಿದರು.

    ಮೂರು ಪ್ರಕರಣಗಳಿಂದ ಗೋಲ್ಟನ್ ಹವರ್ ಎಂತಹ ಪವಾಡ ಮಾಡುತ್ತದೆ ಎಂಬುದು ನಮ್ಮ ಭಾಗದ ಜನತೆಗೆ ತಿಳಿಸುವ ಅಗತ್ಯತೆ ಮನಗಂಡು ಮಾಧ್ಯಮಗಳ ಮುಂದೆ ಬಂದುದಾಗಿ ಹೇಳಿದ ಅವರು, ಜಿಲ್ಲೆಯಲ್ಲಿ ವಿಶೇಷವಾಗಿ ಅಪಘಾತ, ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಬರುವ ತುರ್ತು ಸಂದರ್ಭಗಳಲ್ಲಿ ಗೋಲ್ಡನ್ ಹವರ್ ನ ಸದುಪಯೋಗಕ್ಕೆ ಚೆನ್ನೆöÊನ ಸಿಪಾಕಾ ನೆರವಿನೊಂದಿಗೆ ಆರಂಭಿಸಿದ ಐಸಿಯು ನಲ್ಲಿ ಯುಕೆ (ಲಂಡನ್) ನ ಗುಣಮಟ್ಟದ ಮಾರ್ಗದರ್ಶಿ ಸೂತ್ರಗಳನ್ವಯ ಕಾರ್ಯನಿರ್ವಹಣೆಯಿಂದಾಗಿ ಅಮೂಲ್ಯ ಮೂರು ಜೀವಗಳು ಉಳಿಸಲು ಸಾದ್ಯವಾಯಿತು ಎಂದು ವಿವರಿಸಿದರು.

    ಈ ಸಂದರ್ಭದಲ್ಲಿ ಮಾರುತಿ ಕಲಾಲ್, ಭೀಮು ಹಾಗೂ ಗುಣಮುಖರಾದ ರೋಗಿಗಳ ಕುಟುಂಬದವರು ಇನ್ನಿತರರು ಇದ್ದರು.

  • ಸೆ.14 ರಂದು ರಾಷ್ಟೀಯ ಲೋಕ ಅದಾಲತ್

    ಸೆ.14 ರಂದು ರಾಷ್ಟೀಯ ಲೋಕ ಅದಾಲತ್

    ಸತ್ಯಕಾಮ ವಾರ್ತೆ ಯಾದಗಿರಿ:
    ಸೆ.14(SEP 14) ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್(LOK ADALAT) ನಡೆಯುತ್ತಿದ್ದು, ಬಾಕಿ ಇರುವ ವ್ಯಾಜ್ಯಗಳನ್ನು ಸಾರ್ವಜನಿಕರು ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ  ಜಿಲ್ಲಾ  ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮರಿಯಪ್ಪ ಅವರು ಹೇಳಿದರು.
    ಶನಿವಾರ ನಗರದ ಜಿಲ್ಲಾ ನ್ಯಾಯಾಲಯದ ಕಚೇರಿಯಲ್ಲಿ ನೆಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ. ಇದರ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಲೋಕ್ ಅದಾಲತ್ತನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಅದಾಲತ್‌ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ಈ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾ‌ರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್. ಕಾಯ್ದೆಯಡಿಯ ಪ್ರಕರಣಗಳನ್ನು ಪರಿಹರಿಸಿಕೊಳ್ಳಬಹುದು. ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು (ವಿಚ್ಛೇದನ ಹೊರತು ಪಡಿಸಿ) ಪಿಂಚಣಿ ಪ್ರಕರಣಗಳು, ವೇತನ ಭತ್ಯೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕಾ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
    ಇದುವರೆಗೆ ಜಿಲ್ಲೆಯ್ಯಾದಂತ ಒಟ್ಟು 4325 ಪ್ರಕರಣಗಳನ್ನು ಲೋಕ ಅದಾಲತನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಯಾದಗಿರಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಒಟ್ಟು 04 ಬೆಂಚ್‌ ಗಳನ್ನು, ಶಹಾಪೂರ 03 ಮತ್ತು ಸುರಪೂರದಲ್ಲಿ 03 ಬೆಂಚ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಬೆಂಚನಲ್ಲಿ ಒಬ್ಬರು ನ್ಯಾಯಾಧೀಶರು ಹಾಗೂ ಒಬ್ಬರು ವಕೀಲರು ಸಂಧಾನಕಾರರಾಗಿ ಭಾಗವಹಿಸುವರು, ಅವರ ಮುಖಾಂತರ ರಾಜೀ ಸಂಧಾನ ಮಾಡಿಸಲಾಗುವುದು ಎಂದು ಹೇಳಿದರು.
    ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಪ್ರಕರಣಗಳನ್ನು ಬಗೆಹರಿಸಿಕೊಂಡಲ್ಲಿ ಸಾಕಷ್ಟು ಸಮಯ ಮತ್ತು ಹಣ ಉಳಿತಾಯ ಮಾಡಬಹುದಾಗಿದೆ. ಸಿವಿಲ್ ಪ್ರಕರಣಗಳಲ್ಲಿ ರಾಜೀ ಆದರೆ ನ್ಯಾಯಾಲಯಕ್ಕೆ ತುಂಬಿದ ನ್ಯಾಯಾಲಯ ಶುಲ್ಕ ಸಹ ವಾಪಸ್ಸಾಗುತ್ತದೆ. ಮತ್ತು ಇದರಿಂದ ಉಭಯ ಪಕ್ಷಗಾರರಲ್ಲಿ ದ್ವೇಷದ ಭಾವನೆ ಕಡಿಮೆಯಾಗಿ ಸಾಮರಸ್ಯ ಮೂಡುತ್ತದೆ. ಸಾರ್ವಹನಿಕರು ವಿಶೇಷವಾಗಿ ಕಕ್ಷಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
  • ನಾಲತವಾಡ-ನಾರಾಯಣಪೂರದಲ್ಲಿ ಮೋಹರಂ ನಿಮತ್ತ ಜೋರಾದ ಖರೀದಿ

    ನಾಲತವಾಡ-ನಾರಾಯಣಪೂರದಲ್ಲಿ ಮೋಹರಂ ನಿಮತ್ತ ಜೋರಾದ ಖರೀದಿ

    1. ಮೊಹರಂ ಆಚರಣೆಗೆ ಕಳೆ ಹೆಚ್ಚಿಸಿದ ಮುಂಗಾರು ಮಳೆ 
    2. ಉತ್ತಮ ಮಳೆ ಬೆಳೆ ನಿರೀಕ್ಷೆ ತಂದ ಖುಷಿ, ಸರ್ವ ಧರ್ಮಿಯರ ಮೊಹರಂ ಖರೀದಿ ಜೋರು.
    3. ನಾಲತವಾಡ-ನಾರಾಯಣಪೂರದಲ್ಲಿ ಮೋಹರಂ ನಿಮತ್ತ ಜೋರಾದ ಖರೀದಿ
    • ವರದಿ: ಪ್ರೀತಿ ಪಿ ರಾಠಿ

    ಸತ್ಯಕಾಮ ವಾರ್ತೆ ನಾರಾಯಣಪೂರ:

    ಈ ವರ್ಷ ಆರಂಭದಲ್ಲೇ ಮುಂಗಾರು ಮಳೆ ರೈತರಲ್ಲಿ ಆಶಾ ಭಾವನೆ ಮೂಡಿಸುವ ಮೂಲಕ ಈಗಾಗಲೇ ಬಿತ್ತನೆಯೂ ಮುಗಿದಿದೆ, ಅತ್ತ ಉತ್ತಮ ಫಸಲೂ ಸಹ ಚಿಗುರೊಡೆದಿದ್ದು ರೈತರಲ್ಲಿ ಮತ್ತಷ್ಟು ಖುಷಿ ತಂದಿದೆ, ಈಗಾಗಿ ಅಣ ಯಾಗಿರುವ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬ ಆಚರಣೆಯ ಹಿನ್ನಲೆಯಲ್ಲಿ ನಾರಾಯಣಪೂರ ವ್ಯಾಪ್ತಿಯ ಹಳ್ಳಿಗಾಡು ಪ್ರದೇಶದಲ್ಲಿ ಹಬ್ಬದ ಆಚರಣೆಯ ಸಾಮಾನುಗಳ ಖರೀದಿ ಮಾರುಕಟ್ಟೆಯಲ್ಲಿ ಜೋರಾಗಿದೆ ನಡೆದಿದೆ.

    ಖರೀದಿ ಜೋರು: ನಾರಾಯಣಪೂರ ಸೇರಿದಂತೆ ಗಡಿ ಭಾಗದ ನಾಲತವಾಡ ಪಟ್ಟಣದ ಪ್ರಮುಖ ಮಾರುಕಟ್ಟೆ ಬಸವೇಶ್ವರ, ಕನಕ ವೃತ್ತ ಹಾಗೂ ಗಣೇಶ ವೃತ್ತದ ಬಳಿ ಸಿದ್ದಗೊಂಡಿರುವ ಮೋಹರಂ ಅಲಾಯಿ ದೇವರುಗಳಿಗೆ ಅವಶ್ಯಕತೆ ಹೂಗಳು ತುರಾಯಿ, ಪಂಜೆಗಳಿಗೆ ಬೆಳ್ಳಿ ಸಾಮಾನುಗಳು ಹಾಗೂ ಭಕ್ತರು ಅರ್ಪಿಸುವ ದಾರದ ಲಾಡಿ, ಚಿನ್ನಿ ಸಕ್ಕರೆ, ಉತ್ತತ್ತಿ ಮತ್ತು ಲೋಬಾನು ಖರೀದಿ ಪುರುಷೊತ್ತಿಲ್ಲದೆ ನಡೆದಿದೆ.

    ಇಷ್ಟಾರ್ಥ ಪೂರೈಕೆ:

    ಮೋಹರಂ ಶೋಕದ ಹಿನ್ನಲೆ ಹೊಂದಿದ್ದು ಭೇದ ಭಾವವಿಲ್ಲದೇ ಹಿಂದೂ ಮುಸ್ಲಿಂರ ಹಲವರು ಫಕೀರ್‌ಗಳು ಆಗುತ್ತಾರೆ, ಮೋಹರಂ ಹಬ್ಬವು ಪ್ರವಾದಿ ಮಹ್ಮದರ ಮೊಮ್ಮಕ್ಕಳಾದ ಹಸನ್ ಹುಸೇನ್‌ರ ಕರ್ಬಲಾ ಯುದ್ದದ ಪ್ರತೀಕವಾಗಿ ಆಚರಿಸಲಾಗುತ್ತಿದೆ.

    ಗೂಳೆ ಹೋದವರು ತವರಿಗೆ:

    ವರ್ಷವಿಡೀ ದುಡಿಯಲು ಪರ ರಾಜ್ಯಗಳಿಗೆ ಗೂಳೆ ಹೋದವರು ಮೋಹರಂ ಆಚರಿಸಲತ್ತಿದ್ದಾರೆ, ತಾವು ಬೇಡಿಕೊಂಡ ಅಲಾಯಿ ದೇವರುಗಳಿಗೆ ಇಷ್ಟಾರ್ಥ ಪೂರೈಸಲು ಪಂಜೆಗಳಿಗೆ ಮಲಮಲ ಬಟ್ಟೆ, ಡೋಲಿ ದೇವರುಗಳಿಗೆ ಬೆಳ್ಳಿ ಛತ್ರಿಗಳನ್ನು ಅರ್ಪಿಸುವ ನಿಟ್ಟಿನಲ್ಲಿ ಬಂಗಾರದ ಅಂಗಡಿಗಳಲ್ಲಿ ಖರೀದಿ ಜೋರಾಗಿ ನಡೆದಿದೆ.

    ಮಣ್ಣಿನ ಮಡಿಕೆಗೆ ಡಿಮ್ಯಾಂಡ್:

    ಅಲಾಯಿ ದೇವರುಗಳಿಗೆ ಸಾಂಪ್ರಾದಾಯಿಕವಾಗಿ ಆಚರಣೆ ವೇಳೆ ಹಲವರು ಮಣ್ಣಿನ ಮಡಿಕೆಯಲ್ಲಿ ಶರಬತ್, ನೈವೇದ್ಯ ತಯಾರಿಸಿ ಅರ್ಪಿಸುತ್ತಾರೆ, ಹಾಗಾಗಿ ಪಟ್ಟಣದಲ್ಲಿ ಮಣ್ಣಿನ ಮಡಿಕೆ ಖರೀದಿಗೂ ಜನ ಮುಂದಾಗಿದ್ದಾರೆ.