Tag: Surapura

  • ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಸುರಪುರ: ಪಟ್ಟಣದ ನಗರಸಭೆಯ ಕಿರಿಯ ಅಭಿಯಂತರ ಮಹೇಶ್ ಮಾಳಗಿ ಅವರ ಬೊಂಬಾಯಿ ಬಸಣ್ಣ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಮಂಗಳವಾರ ರಾತ್ರಿ ನಡೆದಿರುವ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕುಟುಂಬದವರು ಮನೆಯಿಂದ ಹೊರಗಿದ್ದ ಸಂದರ್ಭ ಮನೆಯ ಬೀಗ ಮುರಿದು ಚಿನ್ನ–ಬೆಳ್ಳಿ ಆಭರಣಗಳು ಹಾಗೂ ನಗದು ಸೇರಿದಂತೆ ಸುಮಾರು ₹46.11 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

    ಮಂಗಳವಾರ ಸಂಜೆ 7.30ರಿಂದ ರಾತ್ರಿ 10.30ರ ನಡುವೆ ಸುರಪುರದ ದೀವಳಗುಡ್ಡದಲ್ಲಿ ಸಹೋದರನ ಪತ್ನಿಯ ಮನೆಯಲ್ಲಿ ದೇವರ ಕಾರ್ಯಕ್ಕೆ ಕುಟುಂಬದವರು ತೆರಳಿದ್ದರು. ಈ ವೇಳೆ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ.

    ಮನೆಯಲ್ಲಿ ಇತ್ತಿದ್ದ 642 ಗ್ರಾಂ ಬಂಗಾರದ ಆಭರಣಗಳು (ಮೌಲ್ಯ ₹44.94 ಲಕ್ಷ), 1295 ಗ್ರಾಂ ಬೆಳ್ಳಿಯ ಆಭರಣಗಳು (₹77,700) ಮತ್ತು ₹40,000 ನಗದು ಸೇರಿ ಒಟ್ಟು ₹46,11,700 ಮೌಲ್ಯದ ವಸ್ತುಗಳು ಕಳುವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಬೀಗ ಮುರಿದಿರುವುದು ಕಂಡ ಕುಟುಂಬದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸುರಪುರ ಠಾಣೆಗೆ ಅಧಿಕೃತ ದೂರು ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾದಗಿರಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಸುರಪುರ ಉಪವಿಭಾಗದ ಪ್ರಭಾರಿ ಡಿವೈಎಸ್ಪಿ ನಾಗರಾಜ, ಪಿಐ ಉಮೇಶ್ ನಾಯಕ್, ಪಿಎಸ್ಐ ಕೃಷ್ಣಾ ಸುಬೇದಾರ, ಸಿದ್ದಣ್ಣ ಯಡ್ರಾಮಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇದುವರೆಗೆ ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ತಹಸಿಲ್ದಾರ್ ಕಚೇರಿ ಮುಂದೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹೋರಾಟ

    ತಹಸಿಲ್ದಾರ್ ಕಚೇರಿ ಮುಂದೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹೋರಾಟ

    ಸತ್ಯಕಾಮ ವಾರ್ತೆ ಸುರಪುರ:
    ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಸರ್ವೇ ನಂಬರ್ 7/1 ರಲ್ಲಿನ ಖಾರೀಜ್ ಖಾತಾ ಜಾಗದಲ್ಲಿ 4 ಎಕರೆ ಜಾಗವನ್ನು ವಾಲ್ಮೀಕಿ ಸಮುದಾಯಕ್ಕೆ ಮೀಸಲಿಡುವಂತೆ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ತಹಸಿಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ವಾಲ್ಮೀಕಿ ಸಮುದಾಯ ತಾಲೂಕಿನಲ್ಲಿ ದೊಡ್ಡ ಸಮುದಾಯವಾಗಿದ್ದು,ಈ ಸಮುದಾಯ ಆರ್ಥಿಕವಾಗಿ,ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಅಭಿವೃಧ್ಧಿ ಹೊಂದಲು ಗ್ರಂಥಾಲಯ ಸೇರಿದಂತೆ ಸಮುದಾಯ ಭವನ ಯಾವುದೂ ನಿರ್ಮಾಣಗೊಂಡಿಲ್ಲ.ಆದ್ದರಿAದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಖಾರೀಜ್ ಖಾತಾ ಸರ್ವೇ ನಂಬರ್ 7/1 ರಲ್ಲಿ ಇರುವ 6 ಎಕರೆ 15 ಗುಂಟೆ ಜಮೀನಿನ ಪೈಕಿ ನಾಲ್ಕು ಎಕರೆ ಜಮೀನು ಮೀಸಲಿಟ್ಟು ನಮ್ಮ ಸಮಾಜಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

    ನಂತರ ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಸಂಘದ ತಾಲೂಕ ಗೌರವಾಧ್ಯಕ್ಷ ಸಿದ್ದನಗೌಡ ಕರಿಬಾವಿ,ತಾಲೂಕ ಅಧ್ಯಕ್ಷ ಭೀಮನಗೌಡ ಲಕ್ಷಿö್ಮÃ,ತಾ.ಪ್ರ ಕಾರ್ಯದರ್ಶಿ ನಾಗರಾಜ ನಾಯಕ ಪ್ಯಾಪ್ಲಿ,ಶ್ರೀ ವಾಲ್ಮೀಕಿ ಇಂಟರ್ನ್ಯಾಷನಲ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ,ಮುಖಂಡರಾದ ಭೀಮು ಹೆಚ್.ನಾಯಕ, ವಿಜಯಕುಮಾರ ಚಿಟ್ಟಿ,ಬಲಭೀಮ ನಾಯಕ ಬೈರಿಮಡ್ಡಿ,ವಿನೋದ ಕುಮಾರ ನಾಯಕ,ವೆಂಕಟೇಶ ಬೇಟೆಗಾರ, ವಾಸುದೇವ ನಾಯಕ, ಶ್ರೀನಿವಾಸ ನಾಯಕ ಲಕ್ಷಿö್ಮÃಪುರ,ಮೌನೇಶ ನಾಯಕ ಚಿಕ್ಕನಹಳ್ಳಿ, ದೇವು ನಾಯಕ ಜಾಲಿಬೆಂಚಿ,ನಾಗರಾಜ ದೇವತ್ಕಲ್,ರಂಗನಾಥ ನಾಯಕ ಲಕ್ಷಿö್ಮÃಪುರ,ಶಿವರಾಜ ಪಾಟೀಲ,ವಿಜಯಗೌಡ ಬೇವಿನಾಳ, ಶರಣು ಮಕಾಶಿ,ದೇವರಾಜ ದಳವಾಯಿ,ಕನಕಾಚಲ ನಾಯಕ ಜಾಗೀರದಾರ,ಸಂಜೀವಪ್ಪ ನಾಯಕ,ಗೋಪಾಲ ನಾಯಕ ಸತ್ಯಂಪೇಟೆ, ಮಲ್ಲಣಗೌಡ ಮಾಲಿ ಪಾಟೀಲ್,ಪರಮಣ್ಣ ಕಕ್ಕೇರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ವಾಲ್ಮೀಕಿ ಸಮುದಾಯಕ್ಕೆ ಸುರಪುರ ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಸರ್ವೇ ನಂಬರ್ 7/1 ರಲ್ಲಿ 4 ಎಕರೆ ಜಮೀನು ಮೀಸಲಿಡುವಂತೆ ಆಗ್ರಹಿಸಿ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರ.ಕಾರ್ಯದರ್ಶಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

     

    ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಹಿಂಬದಿಯ ಮೈದಾನದಲ್ಲಿ ಹಾಕಲಾಗಿರುವ ನೀಲಿ ಧ್ವಜದ ಸ್ಥಳದಲ್ಲಿ ಅಂಬೇಡ್ಕರ್ ಗ್ರಂಥಾಲಯ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಎರಡು ಎಕರೆ ಜಾಗ ನೀಡುವಂತೆ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
    ಮತ್ತೊಂದೆಡೆ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ಸಮುದಾಯದ ಅಭಿವೃಧ್ಧಿಗಾಗಿ ಗ್ರಂಥಾಲಯ,ಸಮಯದಾಯ ಭವನ ನಿರ್ಮಾಣಕ್ಕಾಗಿ ಸರ್ವೇ ನಂಬರ್ 7/1ರ ಖಾರೀಜ್ ಖಾತಾ ಜಮೀನಿನಲ್ಲಿ 4 ಎಕರೆ ಜಮೀನು ನೀಡುವಂತೆ ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ಧ್ವಜವನ್ನು ಹಾಕಲಾಗಿದೆ.

     

    • ಪಿ.ಐ ಉಮೇಶ ನಾಯಕ ದಕ್ಷ ಅಧಿಕಾರಿ-ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ

    ಸುರಪುರ: ನಗರದ ಪೊಲೀಸ್ ಠಾಣೆಯ ಪಿ.ಐ ಉಮೇಶ ನಾಯಕ ಅವರು ಒಬ್ಬ ದಕ್ಷ ಅಧಿಕಾರಿಯಾಗಿದ್ದಾರೆ.ಕೆಲವು ಸಂಘಟನೆಗಳು ಅವರ ವಿರುದ್ಧ ಮಾಡುತ್ತಿರುವ ಆರೋಪ ಸುಳ್ಳಾಗಿದ್ದು,ಯಾವುದೇ ಕಾರಣಕ್ಕೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು, ವರ್ಗಾವಣೆ ಮಾಡಬಾರದು.ಹಾಗೇನಾದರು ಮಾಡಿದಲ್ಲಿ ನಮ್ಮ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ಸುರಪುರ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಹಸಿಲ್ದಾರ್ ಮೂಲಕ ಪೊಲೀಸ್ ಮಹಾನಿರೀಕ್ಷಕರು ಈಶಾನ್ಯ ವಲಯ ಕಲಬುರ್ಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

     

  • ಲೋಕದಾಲತ್ 2478 ಪ್ರಕರಣಗಳ ಇತ್ಯರ್ಥ

    ಲೋಕದಾಲತ್ 2478 ಪ್ರಕರಣಗಳ ಇತ್ಯರ್ಥ

    ಸತ್ಯಕಾಮ ವಾರ್ತೆ ಸುರಪುರ:
    ಇಲ್ಲಿಯ ನ್ಯಾಯಾಲಯದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಲೋಕದಾಲತ್ ನಲ್ಲಿ ಬ್ಯಾಂಕ್ ವ್ಯಾಜ್ಯಗಳು ಸೇರಿ 2478 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.

    ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಅವರು ಪ್ರಕರಣ ಒಂದರ ಇತ್ಯರ್ಥದ ಸಂದರ್ಭದಲ್ಲಿ ಭಾಗವಹಿಸಿದ್ದರು.ಅಲ್ಲದೆ ಜಿಲ್ಲಾ ಎರಡನೇ ಹೆಚ್ಚವರಿ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ,ಸುರಪುರ ಸೀನಿಯರ್ ಸಿವಿಲ್ ನ್ಯಾಯಾಧೀಶರಾದ ಫಕಿರವ್ವ ಕೆಳಗೇರಿ,ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಭಾಗವಹಿಸಿದ್ದರು.

    ಲೋಕ ಅದಾಲತ್‌ನಲ್ಲಿ ಒಟ್ಟು 4229 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.ಅವುಗಳಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 7 ಪ್ರಕರಣಗಳು ತೆಗೆದುಕೊಂಡು 4 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಇವುಗಳಲ್ಲಿ 1 ಲಕ್ಷ 50 ಸಾವಿರ ಪರಿಹಾರವನ್ನು ಕೊಡಿಸಲಾಗಿದೆ.ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 1444 ಪ್ರಕರಣಗಳು ತೆಗೆದುಕೊಂಡು 675 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. 18 ಲಕ್ಷ 46 ಸಾವಿರ 725 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಸಿವಿಲ್ ನ್ಯಾಯಾಲಯದಲ್ಲಿ 1437 ಪ್ರಕರಣಗಳನ್ನು ತೆಗೆದುಕೊಂಡು 928 ಪ್ರಕರಣಗಳನ್ನು ಇತ್ಯರ್ಥಗೊಳಿಸಿ,3 ಲಕ್ಷ 11 ಸಾವಿರ 824 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಹೆಚ್ಚುವರಿ ನ್ಯಾಯಾಲಯದಲ್ಲಿ 1341 ಪ್ರಕರಣಗಳು ಕೈಗೆತ್ತಿಕೊಳ್ಳಲಾಗಿತ್ತು, ಇವುಗಳಲ್ಲಿ 865 ಪ್ರಕರಣಗಳು ಇತ್ಯರ್ಥಗೊಳಿಸಿ 7 ಲಕ್ಷ 72 ಸಾವಿರ 550 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಅಲ್ಲದೆ ಬ್ಯಾಂಕ್ ವ್ಯವಹಾರದ 6 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 19 ಲಕ್ಷ 96 ಸಾವಿರ ರೂಪಾಯಿಗಳ ತುಂಬಿಸಲಾಗಿದೆ.

    ಒಟ್ಟು 4229 ಪ್ರಕರಣಗಳಲ್ಲಿ 2472 ಪ್ರಕರಣಗಳು ಇತ್ಯರ್ಥಗೊಂಡು 2769275 ರೂಪಾಯಿಗಳ ಪರಿಹಾರವನ್ನು ಕೊಡಿಸಲಾಗಿದೆ.ಅಲ್ಲದೆ 6 ಬ್ಯಾಂಕ್ ವ್ಯವಹಾರದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

    ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಅವರು,ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿಯವರು,ಹಿರಿಯ ಸಿವಿಲ್ ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿಯವರು,ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಉಪಸ್ಥಿತರಿದ್ದರು. ವಕೀಲರಾದ ಹಿರಿಯ ನ್ಯಾಯವಾದಿ ನಿಂಗಣ್ಣ ಚಿಂಚೋಡಿ,ವಿನೋದ ಜೇವರ್ಗಿ,ಎಮ್.ಎಸ್.ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಲೋಕ ಅದಾಲತ್‌ನಲ್ಲಿ ಪತಿ ಪತ್ನಿ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪ್ರಕರಣವೊಂದರಲ್ಲಿ ಪತ್ನಿಯೇ ಪತಿಗೆ ಒಂದಾಗಿ ಜೀವನ ಸಾಗಿಸುವ ಕುರಿತು ನ್ಯಾಯಾಧೀಶರ ಮುಂದೆ ಪತಿಗೆ ಮನವೊಲಿಸಿ ವಿಚ್ಛೇದನವನ್ನು ಕೈಬಿಟ್ಟು ನ್ಯಾಯಾಲಯದಲ್ಲಿ ಒಂದಾಗಿ ಹಾರ ಬದಲಾಯಿಸಿಕೊಂಡು ಎಲ್ಲ ನ್ಯಾಯಾಧೀಶರು ಹಾಗೂ ವಕೀಲರಿಗೆ ಸಿಹಿ ಹಂಚಿ ಒಂದಾಗಿ ನಡೆದ ಘಟನೆ ನಡೆಯಿತು.