ಸತ್ಯಕಾಮ ವಾರ್ತೆ ವಡಗೇರಾ:
Tag: mallikarjun kharge birthday
-

ಕಾಡಮಗೇರಾ ಗ್ರಾಮದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬ ಆಚರಣೆ
ಡಾ. ಮಲ್ಲಿಕಾರ್ಜುನ್ ಖರ್ಗೆ ಜಿ ರವರು ದೇಶ ಕಂಡ ಧೀಮಂತ ನಾಯಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಜೆ 371 ಕಲಾಂ ಜಾರಿಗೆ ತರುವ ಮೂಲಕ ಈ ಭಾಗದ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಸಾಬಣ್ಣ ಹಂಚಿನಾಳ ಹೇಳಿದರು.ತಾಲೂಕಿನ ಕಾಡಮಗೇರಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ. ಮಲ್ಲಿಕಾರ್ಜುನ್ ಖರ್ಗೆ ರವರ 83 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಾಖಲೆಯ ಹತ್ತು ಬಾರಿ ಶಾಸಕರಾಗಿ, ಮೂರು ಬಾರಿ ಸಂಸದರಾಗಿ, ಕೇಂದ್ರ, ರಾಜ್ಯ ಸಚಿವರಾಗಿ, ರಾಜ್ಯಸಭೆ, ಲೋಕಸಭೆ, ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕರಾಗಿ ಹಲವು ಉನ್ನತ ಹುದ್ದೆಗಳನ್ನು ನಿಭಾಯಿಸಿದ ಏಕೈಕ ವ್ಯಕ್ತಿ ಅಂದರೆ ತಪ್ಪಾಗಲಾಗದು ದೇವರು ಅವರಿಗೆ ಇನ್ನಷ್ಟು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಈ ಸಮಯದಲ್ಲಿ ಹಾರೈಸಿದರು.ಅವರ ಅಭಿಮಾನಿಗಳು ಕೇಕ್ ಕತ್ತರಿಸಿ. ಮಲ್ಲಿಕಾರ್ಜುನ್ ಖರ್ಗೆ ಜಿ ರವರ ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರುಗಳಾದ ಚಂದ್ರಶೇಖರ್ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ, ದೊಡ್ಡಪ್ಪ ಕಾಡಮಗೇರಾ, ನಾಗಪ್ಪ ಉಲ್ಟಿ ,ಮಲ್ಲು ಯಾದವ್, ರೆಡ್ಡಿ ಆನೂರ, ಹಣಮಂತ ನಾಟೇಕಾರ, ದೇವೇಂದ್ರಪ್ಪ ದೊರೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. -

ರಕ್ತದಾನ ಮಾಡಿ ಜೀವ ಉಳಿಸಿ : ಪಂಪನಗೌಡ ಕರೆ
ಸತ್ಯಕಾಮ ವಾರ್ತೆ ಯಾದಗಿರಿ:
ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪಂಪನಗೌಡ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನುಮ ದಿನವನ್ನು ಆಚರಿಸಿ, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ರಕ್ತಹಿನತೆಯಿಂದ ಬಳಲುವವರ ಸಂಖ್ಯೆ ಅಧಿಕವಾಗಿದೆ. ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೂ ರಕ್ತದ ಕೊರತೆ ಇದ್ದು, ಈ ಮೂಲಕ ರಕ್ತದಾನ ಶಿಬಿರ ಆಯೋಜಿಸಿ ಅನುಕೂಲ ಮಾಡಿಕೊಡಲಾಗುವುದೆಂದರು.
ರಕ್ತ ನೀಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗಿ ಮನುಷ್ಯನಿಗೆ ಹೊಸ ಚೈತನ್ಯ ಬರುತ್ತದೆ. ಹೀಗಾಗಿ ರಕ್ತ ನೀಡಲು ಹಿಂಜರಿಕೆ ಮಾಡಬಾರದೆಂದು ಪಂಪನಗೌಡ ಹೇಳಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಸ್ಸುಗೌಡ ಬಿಳ್ಹಾರ್, ಮಲ್ಲಣ್ಣ ದಾಸನಕೇರಿ, ಅನೀಲ್ ಹೆಡಗಿಮದ್ರಿ, ಮರೆಪ್ಪ ಬಿಳ್ಹಾರ್, ಮಲ್ಲಿಕಾರ್ಜುನ ಈಟೆ,ಸುರೇಶ ಮಡ್ಡಿ, ತಿಮ್ಮಣ್ಣ ನಾಯಕ, ಸಾಬಣ್ಣ ಬಾಡಿಯಾಳ್,ಮಲ್ಲಯ್ಯ ಕಸಬಿ, ಬಸವರಾಜ ಬುಡಯಿ,ಗುರುನಾಥ ರೆಡ್ಡಿ,ಬಾಪು ಗೌಡ ಮಾಚನೂರ್, ಮೈನುದ್ದೀನ್ ಮಿರ್ಚಿ, ಸೋಮಶೇಖರ ಮಸಕನಳ್ಳಿ ಶರಣಗೌಡ ಮಾಲಿಪಾಟೀಲ್. ಅಮರೇಶ ಜಾಕಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಹಣಮಂತರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.
ಸುಮಾರು 25 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.