- ಬೂದಿಹಾಳ ಪೀರಾಪೂರ ಏತ ನೀರಾವರಿ ಹೋರಾಟಕ್ಕೆ ರೈತ ಸಂಘಟನೆಯ ಬೆಂಬಲ
ಸತ್ಯಕಾಮ ವಾರ್ತೆ ತಾಳಿಕೋಟೆ:
ಬೂದಿಹಾಳ ಪೀರಾಪೂರ ಏತ ನೀರಾವರಿ ಕಾಮಗಾರಿಗೆ ಸಂಬಂದಿಸಿ ಕಳೆದ ೪ ದಿನಗಳಿಂದಲೂ ರೈತ ಸಂಘಟನೆಯ ನೇತೃತ್ವದಲ್ಲಿ ಸಾವಿರಾರು ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಾ ಸಾಗಿದರೂ ಯಾವೊಬ್ಬ ಸರ್ಕಾರದ ಜನಪ್ರತಿನಿಧಿ ಬೆಟ್ಟಿ ನೀಡದಿರುವದು ಅವರ ರೈತಪರ ಕಾಳಜಿ ಎತ್ತಿ ತೋರಿಸುತ್ತಿದೆ ರೈತರೆಲ್ಲರೂ ಒಗ್ಗಟ್ಟಾಗಿ ದ್ವನಿಗೂಡಿಸದಿದ್ದರೆ ರೈತ ಕುಲಕ್ಕೆ ಉಳಿಗಾಲವಿಲ್ಲಾವೆಂದು ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಅವರು ಹೇಳಿದರು.
ಮಂಗಳವಾರರಂದು ತಾಲೂಕಿನ ಕೊಡಗಾನೂರ ಕ್ರಾಸ್‌ನಲ್ಲಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಕೊನೆ ಹಂತದ ಎಫ್.ಐ.ಸಿ (ಹೊಲ ಗಾಲುವೆ) ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ೩೮ ಗ್ರಾಮಗಳ ರೈತಾಪಿ ಜನರು ನಡೆಸಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬೆಟ್ಟಿ ನೀಡಿ ತಮ್ಮ ರೈತ ಸಂಘ ಹಸಿರುಸೇನೆ ಸಂಘಟನೆಯ ವತಿಯಿಂದ ಬೆಂಬಲ ಸೂಚಿಸಿ ಮಾತನಾಡುತ್ತಿದ್ದ ಅವರು ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಕಾಮಗಾರಿಗೂ ಈಗಾಗಲೇ ಅವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ ಓರಪ್ಲೋ ಡಬ್ಬಿಗಳನ್ನು ಎಲ್ಲಿ ಕೂಡಿಸಬೇಕಿತ್ತು ಅಲ್ಲಿ ಕೂಡಿಸಿಲ್ಲಾ ರಾಜಕೀಯ ಒತ್ತಡಕ್ಕೆ ಮಣಿದು ಮನಸ್ಸಿಚ್ಚೆಯಂತೆ ಕೂಡಿಸಲಾಗಿದೆ ಇದರಿಂದ ರೈತರ ಜಮೀನುಗಳಿಗೆ ನೀರು ಬರುವದು ಕಡಿಮೆ ಎಂದು ಹೇಳಲಾಗುತ್ತಿದೆ ದೇಶಕ್ಕೆ ಅನ್ನ ನೀಡುವ ರೈತರ ಭವಣೆಗೆ ಸರ್ಕಾರಗಳು ಸ್ಪಂದಿಸಬೇಕು ಆದರೆ ಈಗೀನ ಕಾಂಗ್ರೇಸ್ ಸರ್ಕಾರ ಗ್ಯಾರೆಂಟಿ ನಿದ್ರೆಯಲ್ಲಿ ಜಾರಿದೆ ಅವರಿಗೆ ಯಾರೂ ಕಾಣುತ್ತಿಲ್ಲಾವೆಂದು ಹರಿಹಾಯ್ದ ಅವರು ರೈತರಿಗೆ ಯಾವುದೇ ಜಾತಿ ಪಕ್ಷವೆಂಬುದು ಇಲ್ಲಾ ಅವರಿಗೆ ಕೇವಲ ಬೆಳೆ ಬೆಳೆಯಬೇಕು ಎಂಬ ಚಿಂತೆಯಲ್ಲಿರುತ್ತಾರೆ ಬೂದಿಹಾಳ-ಫೀರಾಪೂರ ಯೋಜನೆಗೆ ಸಂಬಂದಿಸಿ ಡಬ್ಬಿಗಳು ಇನ್ನೂ ೫೦೦ ಕ್ಕೂ ಅಧಿಕ ಕೂಡಬೇಕಾಗಿದೆ ಈಗಾಗಲೇ ಹಾಕಲಾದ ಪೈಪುಗಳು ಪಿಡಬ್ಲುಡಿ ರಸ್ತೆಯಲ್ಲಿ ಹಾಕಿದ್ದಾರೆ ರೈತರೆಲ್ಲರೂ ಒಗ್ಗೂಡಿ ದ್ವನಿಗೂಡಿಸಬೇಕೆಂದು ಅವರು ಇಂಡಿ ಪಟ್ಟಣಕ್ಕೆ ಮುಖ್ಯಮಂತ್ರಿಗಳು ಬೆಟ್ಟಿ ನೀಡಿದಾಗ ನಮ್ಮ ರೈತ ಸಂಘದ ವತಿಯಿಂದ ಬೂದಿಹಾಳ-ಫೀರಾಪೂರ ಏತನೀರವಾರಿ ಯೋಜನೆಯ ಮುಕ್ತಾಯ ಹಂತದ ಕಾಮಗಾರಿ ಕೈಗೊಳ್ಳಲು ಮನವಿ ಸಲ್ಲಿಸಿದ್ದೇವೆ ಕೂಡಲೇ ಸ್ಪಂದಿಸುವ ಬರವಸೆ ನೀಡಿದ್ದಾರೆ ಅವರು ನೀಡಿದ ಬರವಸೆ ಬರವಸೆಯಾಗಿ ಉಳಿಯದಂತೆ ನಾವೇಲ್ಲಾ ರೈತರ ಉಗ್ರ ಸ್ವರೂಪದ ಹೋರಾಟಕ್ಕೆ ಅಣಿಯಾಗಬೇಕೆಂದರು.
ಇನ್ನೋರ್ವ ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘಟನೆ ಶ್ರೀಮತಿ ಸುಜಾತಾ ಅಸ್ಕಿ ಅವರು ಮಾತನಾಡಿ ಕಾಂಗ್ರೇಸ್ ಸರ್ಕಾರವು ತನ್ನ ಅಂಗೈ ತೋರಿಸಿದರೆ ಅವಲಕ್ಷಣ ಕಳೆದುಕೊಳ್ಳಲಿದೆ ಬ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ರೈತರ ಸಂಕಷ್ಟವೆಂಬುದು ಕಾಣುತ್ತಿಲ್ಲಾ ಕಳೆದ ೪ ದಿನಗಳಿಂದ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಮುಕ್ತಾಯ ಹಂತದ ಕಾಮಗಾರಿ ಕೈಗೊಳ್ಳಲು ಸಾವಿರಾರು ರೈತರು ಹೋರಾಟಕ್ಕೆ ಇಳಿದಿದ್ದರೂ ಕೂಡಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಿದ್ರೆಗೆ ಜಾರಿರುವದು ಅವರ ನಿಸ್ಕಾಳಜಿ ತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದ ಅವರು ಕೂಡಲೇ ಸರ್ಕಾರದ ಜನಪ್ರತಿನಿಧಿಗಳು ಸ್ಪಂದಿಸಿ ಹೋರಾಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂದರು.
- Advertisement -
ಇನ್ನೋರ್ವ ರೈತ ಮುಖಂಡ ಪ್ರಭುಗೌಡ ಮದರಕಲ್ಲ, ಹಣಮಗೌಡ ಗೂಗಲ್ಲ, ಚಿನ್ನಪ್ಪಗೌಡ ಮಾಳಿ, ರವಿಗೌಡ ಪಾಟೀಲ ಅವರು ಮಾತನಾಡಿ ಈ ಭಾಗದ ರೈತರ ಜೀವನಾಡಿಯಾಗಲಿರುವ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕಾಗಿದೆ ರೈತರು ಕೈಗೊಂಡಿರುವ ಹೋರಾಟಕ್ಕೆ ನಮ್ಮ ಬೆಂಬಲ ಅವರಿಗೆ ಸದಾ ವಿದೆ ಎಂದರು.
ಅಖಂಡ ಕರ್ನಾಟಕ ರೈತ ಸಂಘಟನೆಯ ರಾಜ್ಯ ಪ್ರದಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿದರು.
ಈ ಸಮಯದಲ್ಲಿ ರೈತ ಮುಖಂಡ ಪ್ರಭುಗೌಡ ಬಿರಾದಾರ, ಶಿವಪುತ್ರಪ್ಪ ಚೌದ್ರಿ, ಗುರುರಾಜ ಪಡಶೆಟ್ಟಿ, ರಾಯಪ್ಪಗೌಡ ಪಾಟೀಲ, ಸಾಹೇಬಗೌಡ ಯಾಳಗಿ, ಬಸನಗೌಡ ಯಾಳವಾರ, ಬಸನಗೌಡ ಚೌದ್ರಿ, ನಾನಾಗೌಡ ಬಿರಾದಾರ, ಎಚ್.ಎನ್.ಬಿರಾದಾರ, ಸುರೇಶಕುಮಾರ ಇಂಗಳಗೇರಿ, ಡಾ.ಪ್ರಭುಗೌಡ ಬಿರಾದಾರ(ಅಸ್ಕಿ), ಮಹಾದೇವ ಅಸ್ಕಿ, ಪರಶುರಾಮ ತಳವಾರ, ಪರಶುರಾಮ ನಾಲತವಾಡ, ಬಾಬುಗೌಡ ಬಿರಾದಾರ, ಚಿದುಗೌಡ ಬಿರಾದಾರ, ಶಂಕ್ರಗೌಡ ದೇಸಾಯಿ, ಬಸವರಾಜ ಹೊಸಳ್ಳಿ, ಡಿಎಸ್‌ಎಸ್ ಅಂಬೇಡ್ಕರ್ ದಾರಿ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜ ಕಟ್ಟಿಮನಿ, ಮುಖಂಡರುಗಳಾದ ಶಿವಶಂಕರ ಕಟ್ಟಿಮನಿ, ಸಿದ್ದಪ್ಪ ಹೊಸಮನಿ, ಶಾಂತಪ್ಪ ಕೊಡಗಾನೂರ, ಸಿದ್ದಪ್ಪ ಬಸರಿಕಟ್ಟಿ, ಬಸವರಾಜ ತಳವಾರ, ಕಾಶೆಪ್ಪ ತೊಗರಿ, ಒಳಗೊಂಡು ನಾವದಗಿ, ನೀರಲಗಿ, ಗೊಟಗುಣಕಿ, ಗುಂಡಕನಾಳ, ಫೀರಾಪೂರ, ಕಾರನೂರ, ಕೊಡಗಾನೂರ, ಅಸ್ಕಿ, ಗ್ರಾಮ ಒಳಗೊಂಡು ೩೮ ಗ್ರಾಮಗಳ ರೈತಾಪಿ ಜನರು ಪಾಲ್ಗೊಂಡಿದ್ದರು.

