ನ್ಯಾಯವಾದಿಗಳ ಪೂರ್ವಭಾವಿ ಸಭೆ
ಸತ್ಯಕಾಮ ವಾರ್ತೆ ಗುರುಮಠಕಲ್ :
ಪಟ್ಟಣವು ತಾಲೂಕು ಕೇಂದ್ರವಾಗಿ ದಶಕಗಳೇ ಕಳೆದರೂ ಇನ್ನು ಸಂಬಂಧ ಪಟ್ಟ ಇಲಾಖೆಗಳು ಹಾಗೂ ನ್ಯಾಯಾಲಯ ಬರದೇ ಇರುವದಕ್ಕೆ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಸಿ. ಎಸ್. ಮಾಲಿಪಾಟೀಲ್ ವಿಷಾಧ ವ್ಯಕ್ತ ಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ಕಳೆದ 2012 ರಿಂದ ನ್ಯಾಯಾಲಯದ ಬೇಡಿಕೆಯಿಟ್ಟಿದ್ದೇವೆ, ಮಾನದಂಡದ ಪ್ರಕಾರ ತಾಲೂಕಿನಿಂದ 1200 ಪ್ರಕರಣಗಳು ಧಾಖಲಾಗುತ್ತಿದ್ದರು ಕುಂಠ ನೆಪ ಹೇಳಿ ಮುಂದೂಡುತ್ತಿರುವುದು ಸಹಿಸಲಾಗದು, ಪ್ರಯುಕ್ತ ಮುಂದಿನ ದಿನಗಳಲ್ಲಿ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತೇವೆ ಎಂದರು.
ಇದೇ ಸಂಧರ್ಭದಲ್ಲಿ ವಕೀಲ ಆನಂದ ರಾವ್ ನೀರೇಟಿ ಮಾತನಾಡಿ, ಸುತ್ತಮುತ್ತಲಿನ ಗ್ರಾಮಗಳಿಂದ ನಯವಾಧಿಗಳು ಸೇರಿದಂತೆ ಅರ್ಜಿದಾರರು ದೂರದ ಯಾದಗಿರಿಗೆ ಅಲೆಡದಾಡಬೇಕಾಗಿದೆ, ಸಮಯ ಸೇರಿದಂತೆ ಆರ್ಥಿಕ ಹೊರೆಯಾಗುತ್ತಿದ್ದು, ಪುರಸಭೆ ಕಾರ್ಯಾಲಯವು ಬೇಡಿಕೆಗೆ ಸ್ಪಂಧಿಸಿ ಟೌನ್ ಹಾಲ್ ಅನ್ನು ಬಳಕೆಗೆ ನೀಡಿದ್ದು ರಾಜಕೀಯ ಹಿತಾಶಕ್ತಿಯಿಲ್ಲದೆ ತಾಲೂಕ ಕೇಂದ್ರದಲ್ಲಿ ನ್ಯಾಯಾಲಯ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಸಂಬಂಧ ಪಟ್ಟವರು ಮುತುವರ್ಜಿ ವಹಿಸದಿದ್ದರೆ ಅತೀ ಶೀಘ್ರದಲ್ಲಿ ಹೋರಾಟ ಮಾಡುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಖಜಾಂಚಿ ಸಾಬಣ್ಣ, ಕೃಷ್ಣ ಮೇಧಾ, ರಾಜ ರಮೇಶ ಗೌಡ, ಗುರುನಾಥ ರೆಡ್ಡಿ ಅನಪುರ, ದೇವಪ್ಪ ಎಮ್, ವಿಶ್ವನಾಥ ರೆಡ್ಡಿ, ಸಂಜೀವ ಕುಮಾರ ಚಂದಾಪುರ, ಮೋಹನ ಕುಮಾರ್ ಗಜಾರೆ, ನರಸಪ್ಪ ಧನವಾಡ, ಕೃಷ್ಣ ಪಂಚಾಲ, ಮೊಗುಲಪ್ಪ ಯಾದ್ಲಾಪುರ, ಮೌನೇಶ್ ಕೊಂಕಲ್, ವಿಜಯಕುಮಾರ್ ಉಪಸ್ಥಿತರಿದ್ದರು.

