ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಗೆ ಸ್ವಲ್ಪ ಮಟ್ಟಿಗೆ ನಗೆ ಮೂಡಿದೆ. ಸೋಮವಾರ ನಡೆದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು 9 ಪೈಸೆಗಳಷ್ಟು ಏರಿಕೆ ಕಂಡು 87.93 ರೂ.ಗೆ ತಲುಪಿದೆ ಎನ್ನಬಹುದು.
ರೂಪಾಯಿ ಕಳೆದ ಕೆಲವು ದಿನಗಳಿಂದ ದುರ್ಬಲ ಹಾದಿಯಲ್ಲಿ ಸಾಗುತ್ತಿದ್ದರೂ, ಈಗಿನ ಮಾರುಕಟ್ಟೆ ಸ್ವಲ್ಪ ರೂಪಾಯಿ ಮೌಲ್ಯಕ್ಕೆ ಚೇತರಿಕೆಯುಂಟಾಗಿದೆ. ವಿದೇಶಿ ಬಂಡವಾಳದ ಒಳಹರಿವು, ಕಚ್ಚಾತೈಲದ ಬೆಲೆ ಇಳಿಕೆ ಹಾಗೂ ದೇಶೀಯ ಷೇರುಪೇಟೆಯ ಚೈತನ್ಯ ಇವೆಲ್ಲರೂ ಸೇರಿ ರೂಪಾಯಿಗೆ ಬೆಂಬಲ ಉಂಟಾಗಿದೆ.
ಶುಕ್ರವಾರದ ಅಂತ್ಯದ ವೇಳೆಗೆ ರೂಪಾಯಿ 88.02 ರೂ. ಇದ್ದರೂ, ಸೋಮವಾರ ವಹಿವಾಟಿನ ಕೊನೆಯಲ್ಲಿ 87.93 ರೂ. ಗೆ ಮುಟ್ಟಿದೆ. ಬೆಳಿಗ್ಗೆ 87.94 ರೂ.ನಲ್ಲಿ ಆರಂಭವಾದ ರೂಪಾಯಿ ದಿನಪೂರ್ತಿ 87.74 ರೂ. ರಿಂದ 87.94 ರೂ. ಶ್ರೇಣಿಯಲ್ಲಿ ಚಲಿಸಿತು.
ಮಾರುಕಟ್ಟೆ ತಜ್ಞರ ಪ್ರಕಾರ, ವಿದೇಶಿ ಹೂಡಿಕೆದಾರರು ಮತ್ತೆ ಭಾರತೀಯ ಮಾರುಕಟ್ಟೆಯತ್ತ ಮುಖ ಮಾಡುತ್ತಿರುವುದು ರೂಪಾಯಿಗೆ ಶಕ್ತಿ ನೀಡಿದೆ. ಜೊತೆಗೆ ಅಂತರರಾಷ್ಟ್ರೀಯ ತೈಲದ ಬೆಲೆ ಇಳಿಕೆಯಿಂದ ಆಮದು ವೆಚ್ಚ ತಗ್ಗುವ ಸಾಧ್ಯತೆಯೂ ಇದೆ ಎಂದಿದ್ದಾರೆ.
ಆದರೆ ತಜ್ಞರು ಎಚ್ಚರಿಕೆಯೊಂದನ್ನೂ ಸಹ ನೀಡುತ್ತಾರೆ ಜಾಗತಿಕ ಮಾರುಕಟ್ಟೆಯ ಚಲನೆ, ಅಮೆರಿಕದ ಬಡ್ಡಿದರ ನಿರ್ಧಾರಗಳು ಮತ್ತು ಡಾಲರ್ ಸೂಚ್ಯಂಕದ ಬದಲಾವಣೆಗಳು ಮುಂದಿನ ದಿನಗಳಲ್ಲಿ ರೂಪಾಯಿಯ ದಿಕ್ಕನ್ನು ನಿರ್ಧರಿಸಲಿವೆ.
ಒಟ್ಟಾರೆ, ಈಗಿನ ಏರಿಕೆ ಸಣ್ಣದಾದರೂ ಅದು ಆಶಾದಾಯಕವಾಗಿದೆ. ರೂಪಾಯಿ ಬಲಪಡುವುದು ದೇಶದ ಆರ್ಥಿಕತೆಗೆ ಚೈತನ್ಯ ನೀಡುವ ಸೂಚನೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಮುಂದಿನ ವಹಿವಾಟು ದಿನಗಳಲ್ಲಿ ರೂಪಾಯಿ ಈ ಚೈತನ್ಯ ಮುಂದುವರಿಸುತ್ತದೆಯೇ ಎನ್ನುವುದು ಕಾದು ನೋಡಬೇಕಾಗಿದೆ.

