ಸತ್ಯಕಾಮ ವಾರ್ತೆ ಯಾದಗಿರಿ:
ನಗರ ಸ್ವಚ್ಛ ಇದ್ದರೇ ಪರಿಸರ ಚೆನ್ನಾಗಿ ಇರುತ್ತದೆ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ವಚ್ಛತೆ ಮೊದಲ ಆದ್ಯತೆ ನೀಡಿ, ಪ್ಲಾಸ್ಟಿಕ್ ಬಳಕೆ ನಿಷೇದಿಸಿ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಹೇಳಿದರು.
ನಗರಸಭೆ ವತಿಯಿಂದ ಮಂಗಳವಾರ ನಗರದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನ ಹಾಗೂ ಪ್ಲಾಸ್ಟಿಕ್ ನಿಷೇಧದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರು ಈ ಕೆಲಸಕ್ಕೆ ಕೈಜೋಡಿಸಿದಾಗ ಇದು ಯಶಸ್ಸಿಯಾಗುತ್ತದೆ. ಕೇವಲ ನಗರಸಭೆಯಿಂದ ಮಾತ್ರ ಸಾಧ್ಯವಿಲ್ಲ. ಸ್ವಯಃ ಪ್ರೇರಿತರಾಗಿ ಜನರು ಇದಕ್ಕೆ ಮುಂದಾಗಬೇಕೆಂದರು.
ಪ್ರತಿಯೊಬ್ಬರು ತಮ್ಮ ಮನೆ ಮತ್ತು ಮನೆ ಮುಂದಿನ ಸ್ಥಳ ಶುಚಿ ಇಟ್ಟುಕೊಳ್ಳಬೇಕೆಂದರು. ಕಸ ವಿಲೇವಾರಿಗೆ ಮನೆ ಬಾಗಿಲಿಗೆ ವಾಹನ ಬರುತ್ತವೆ. ಆಗ ಮಾತ್ರ ಕಸ ಅದರಲ್ಲಿ ಹಾಕಿ. ಎಲ್ಲೆಂದರಲ್ಲಿ ಕಸ ಹಾಕುವುದರಿಂದಲೇ ಪರಿಸರ ಹಾಳಾಗುತ್ತಿದೆ ಎಂದು ಅನಪುರ ವಿಷಾದ ವ್ಯಕ್ಯಪಡಿಸಿದರು. ಜನರೊಂದಿಗೆ ನಗರಸಭೆ ಇದೆ. ನೀವು ಅಷ್ಠೆ, ನಮ್ಮೊಂದಿಗೆ ಈ ಕೆಲಸಕ್ಕೇ ಕೈ ಜೋಡಿಸಿರಿ ಎಂದರು.
ನಗರಸಭೆ ಸದಸ್ಯರಾದ ಮಂಜುನಾಥ್ ದಾಸನಕೇರಿ, ಹನುಮಂತ ನಾಯಕ್, ಪೌರಾಯುಕ್ತಾರು ಉಮೇಶ್ ಚವ್ಹಾಣ್, ಪರಿಸರ ಅಭಿಯಂತರ ಪ್ರಶಾಂತ, ಕಂದಾಯ ಅಧಿಕಾರಿ ಮಲ್ಲಿಕಾರ್ಜುನ, ಆರೋಗ್ಯ ನಿರಿಕ್ಷಕ ಪ್ರಶಾಂತ, ಸಿದ್ದಾರ್ಥ, ರಮೇಶ, ಶಂಭುಲಿಂಗ ಸೇರಿದಂತೆ ಮತ್ತಿತರರು ಇದ್ದರು
—-
—-

