ಗುರುಮಠಕಲ್: ಭಾರತ ಸ್ವಾತಂತ್ರದ ನಂತರ ಹಲವಾರು ದಶಕಗಳ ವರೆಗೂ ಸಣ್ಣಪುಟ್ಟ ರಾಷ್ಟ್ರಗಳೊಂದಿಗೆ ಹೋಲಿಕೆ ಆಗುತ್ತಿತ್ತು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಲಾಢ್ಯ ರಾಷ್ಟ್ರಗಳ ಜೊತೆ ಸರಿಸಮವಾಗಿ ಜಾಗತಿಕ ಮಟ್ಟದಲ್ಲಿ ಎಲ್ಲಾ ರಂಗದಲ್ಲಿ ಸ್ಪರ್ಧೆ ನೀಡುವಂತಾಗಿದ್ದೇವೆ ಎಂದು ಶಾಸಕ ಶರಣು ಗೌಡ ಕಂದಕೂರು ಹೇಳಿದರು.
ಪಟ್ಟಣದ ಜವಾಹರಲಾಲ ನೆಹರು ಕ್ರೀಡಾಂಗಣದಲ್ಲಿ 79ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಯೋತ್ಪಾದಕರ ಕುತಂತ್ರಕ್ಕೆ 27 ಜನ ಭಾರತೀಯರು ಬಲಿಯಾಗಿರುವ ಪ್ರತಿಕಾರವಾಗಿ ಆಪರೇಷನ್ ಸಿಂಧೂರ್ ಕಾರ್ಯಚರಣೆ ವಿರೋಧಿಗಳಿಗೆ ನಿದ್ದೆಗೆಡಿಸಿದೆ. ಭಾರತದ ವಿದೇಶಾಂಗ ನೀತಿಯು ಹಿಂದೆ ರಕ್ಷಣಾತ್ಮಕವಾಗಿತ್ತು. ಈಗ ತೀಕ್ಷವಾಗಿದ್ದು, ಕೊರೋನಾ ಕಾಲದಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ಕಂಡು ದೊಡ್ಡ ದೇಶಗಳು ಕೂಡ ಬೆರಗಾಗಿವೆ ಎಂದು ಅವರು ಬಣ್ಣಿಸಿದರು.
ಅಧ್ಯಕ್ಷ ಭಾಷಣಕ್ಕೂ ಮುಂಚೆ ಕಲಬುರಗಿ ಶರಣ ಬಸವೇಶ್ವರ ಸಂಸ್ಥಾನದ ಪೀಠಾಧೀಪತಿಗಳಾದ ಡಾ||ಶರಣಬಸಪ್ಪ ಅವರಿಗೆ ಸಂತಾಪ ಸೂಚಿಸಿದರು, ವೇದಿಕೆ ಮೇಲಿದ್ದ ಪುರಸಭೆ ಮುಖ್ಯಾಧಿಕಾರಿಗಳಿಗೆ ಮತ್ತು ತಾಲೂಕ ದಂಡಾಧಿಕಾರಿಗಳಿಗೆ ಶಿಸ್ತು ಮತ್ತು ಸಮಯ ಪರಿಪಾಲನೆ ಮಾಡುವಂತೆ ಎಚ್ಚರಿಕೆ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಉಪನ್ಯಾಸ ನೀಡಿದ ಚಂದ್ರಶೇಖರ್ ಪಾಟೀಲ್, ಅಜ್ಞಾತ ಸ್ವಾತಂತ್ರ ವೀರರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸೋಣ ಕೇವಲ ಒಂದು ವ್ಯಕ್ತಿಯಿಂದ ಸ್ವಾತಂತ್ರ ನಮಗೆ ಬಂದಿಲ್ಲ, ಸಾವಿರಾರು ದೇಶಭಕ್ತರು ದೇಶಕ್ಕಾಗಿ ಹುತಾತ್ಮರಾಗಿರುವ ಪ್ರಯುಕ್ತ ನಮಗೆ ದೇಶ ಸ್ವಾತಂತ್ರ ಸಿಕ್ಕಿದೆ ಜಲಿಯನ್ ವಾಲಿಬಾಲ್ ಹತ್ಯಾಕಾಂಡ ಹಾಗೂ ದೇಶಭಕ್ತ ಉದಂ ಸಿಂಗ್ ಅವರ ಕುರಿತು ವಿವರಿಸಿ ಮಕ್ಕಳಲ್ಲಿ ದೇಶಭಕ್ತಿ ಮೂಡಿಸಿದರು.
ಇದಕ್ಕೂ ಮುಂಚೆ ತಾಲೂಕ ದಂಡಾಧಿಕಾರಿ ಹಾಗೂತಹಸೀಲ್ದಾರ ಶಾಂತಗೌಡ ಬಿರಾದಾರ ಧ್ವಜಾರೋಹಣ ನೆರವೇರಿಸಿ ಪ್ರಾಸ್ಥಾವಿಕ ನುಡಿ ಹೇಳಿದರು.
ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಈ ವೇಳೆ ವೇಧಿಕೆಮೇಲೆ ಜಯಶ್ರೀ ಪೊ.ಪಾಟೀಲ್ ಪುರಸಭೆ ಅಧ್ಯಕ್ಷರು, ರೇಣುಕಾ ವಿ.ಪಡಿಗೆ ಉಪಾಧ್ಯಕ್ಷರು, ಅಂಬ್ರೇಶ್ ಪಾಟೀಲ್ ತಾ.ಪಂ ಇ. ಓ, ಭಾರತಿ.ಸಿ.ದಂಡೋತಿ ಪುರಸಭೆ ಮುಖ್ಯಾಧಿಕಾರಿ, ವೀರಣ್ಣ.ಎಸ್. ದೊಡ್ಡಮನಿ ಆರಕ್ಷಕ ನಿರೀಕ್ಷಕರು, ನರಸಿಂಹಸ್ವಾಮಿ ಉಪ ತಹಶೀಲ್ದಾರ್ ಸೇರಿದಂತೆಮುಖಂಡರುಗಳು ಸಾರ್ವಜನಿಕಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

