ಸತ್ಯಕಾಮ ವಾರ್ತೆ ಲಿಂಗಸುಗೂರ:
ರಾಜ್ಯ ಸರಕಾರ ಎಲ್ಲಾ ರೈತ ಬಾಂಧವರಿಗೆ ಉಪಯೋಗವಾಗುವ ಸಲುವಾಗಿ ಪೌತಿ ಖಾತಿ ಆಂದೋಲನ(ಇ-ಪತಿ)ಜಾರಿಗೆ ತಂದಿದ್ದು, ಲಿಂಗಸುಗೂರ ತಾಲೂಕಿನಲ್ಲಿ 11 ಸಾವಿರ ಪೌತಿ ಖಾತೆದಾರರಿರುವ ಮಾಹಿತಿ ಇರುವದರಿಂದ ತಾಲೂಕಿನ ಎಲ್ಲಾ ಗ್ರಾಮದ ರೈತರು ತಮ್ಮ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪೌತಿ ಖಾತ ಮಾಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಸತ್ಯಮ್ಮ ತಿಳಿಸಿರುವರು.
ಪಹಣಿ ಪತ್ರಿಕೆಯಲ್ಲಿ ಪೌತಿ ಆದಂತಹ ಖಾತೆದಾರರ ಹೆಸರನ್ನು ತೆಗೆದು ಅವರ ವಂಶಸ್ಥರ ಹೆಸರನ್ನು ವಂಶವೃಕ್ಷ ಪ್ರಮಾಣಪತ್ರದ ದಾಖಲು ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ರೈತರು ಬ್ಯಾಂಕ ಸಾಲ ಪಡೆಯಲು. ಬೆಳ ವಿಮೆ, ತಲುಪಬೇಕಾದಂತಹ ಸರಕಾರಿ ಸೌಕರ್ಯಗಳನ್ನು ಹಾಗೂ ಮುಂತಾದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಿರುತ್ತದೆ. ಕಾರಣ ಎಲ್ಲಾ ರೈತರು ಪೌತಿಖಾತೆ ಮಾಡಿಸಿಕೊಳ್ಳಲು ತಿಳಿಸಿರುವರು.
ಪೌತಿಖಾತೆ ಮಾಡಿಸಲು ಬೇಕಾಗಿರುವ ದಾಖಲಾತಿಗಳು ಪೌತಿದಾರರ ಮರಣ ಪ್ರಮಾಣಪತ್ರ, ವಂಶವೃಕ್ಷ ಪ್ರಮಾಣ ಪತ್ರ, ಚಾಲ್ತಿ ಪಹಣಿ, ಪೌತಿ ಖಾತೆ ಅರ್ಜಿ, ವಂಶವೃಕ್ಷದಲ್ಲಿರುವ ಎಲ್ಲರ ಆಧಾರ ಕಾರ್ಡ ಸಲ್ಲಿಸಿ ಪೌತಿ ಖಾತೆ ಮಾಡಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿರುವರು.

