ಸತ್ಯಕಾಮ ವಾರ್ತೆ ಯಾದಗಿರಿ:
ಆರ್.ಎಸ್.ಎಸ್. ನಿಲುವುಗಳನ್ನು ಪ್ರಶ್ನಿಸಿ ಸಾರ್ವಜನಿಕ, ಸರ್ಕಾರದ ಪ್ರದೇಶಗಳಲ್ಲಿ ಶಾಖೆ ಪ್ರದರ್ಶನ ಮಾಡುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಸಲ್ಲಿಸಿದ ಮನವಿ ಪತ್ರದ ಬಗ್ಗೆ ವಿರೋಧಿಸಿ ಅನೇಕರು ಪ್ರಿಯಾಂಕ್ ಖರ್ಗೆ ಅವರಿಗೆ ಫೋನ್ ಕರೆ ಮೂಲಕ ಜೀವ ಬೆದರಿಕೆ, ಭಯ ಹುಟ್ಟಿಸುವ ಕಾರ್ಯ ಮಾಡುತ್ತಿರುವುದು ಖಂಡನೀಯ, ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಒರಿಜಿನಲ್ ಹಿಂದೂಗಳಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಸರ್ಕೀಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಟ್ವೀಟ್ ಹಲವರಿಗೆ ಜೀರ್ಣಿಸಿಕೊಳ್ಳಲು ಆಗದೆ ಅಡ್ಡ ಮಾರ್ಗದಿಂದ ವೈಯಕ್ತಿಕ ನಿಂದನೆ ಹೇಳುತ್ತಿರುವುದು ಅದು ಅವರ ಮನಸ್ಥಿತಿ ತೋರಿಸುತ್ತಿದೆ ಎಂದರು.
ಈ ದೇಶದಲ್ಲಿ ಮಹಾತ್ಮ ಗಾಂಧಿಯನ್ನೆ ಕೊಂದ ಸಂತತಿ ಇವರದು, ಇತಿಹಾಸದಲ್ಲಿ ಒರಿಜಿನಲ್ ಹಿಂದೂಗಳ ಇವರ ಪರವಾಗಿ ಇರುವುದು ಯಾವ ಸಾಕ್ಷಿಯೂ ಇಲ್ಲ. ಒರಿಜಿನಲ್ ಹಿಂದೂಗಳು ಪ್ರಿಯಾಂಕ್ ಖರ್ಗೆ ಅವರ ಪರವಾಗಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

