ಯಾದಗಿರಿ: ವಾಹನ ಸವಾರರು ಉಲ್ಲಂಘಿಸುವ ಸಂಚಾರ ನಿಯಮಗಳಿಗೆ ದಂಡ ಹಾಕುವ ಕೆಲಸ ಕಳೆದ ಅ.6 ರಿಂದ ನಗರದಲ್ಲಿ ಆರಂಭಿಸಿರುವ ಪೊಲೀಸರು ಕೇವಲ ಮೂರೇ ವಾರದಲ್ಲಿ ಸುಮಾರು 750 ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆಂದು ಎಸ್ ಪಿ ಪ್ರಥ್ವಿಕ್ ಶಂಕರ್ ಹೇಳಿದ್ದಾರೆ.
ಶನಿವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವ ಮತ್ತು ಮೂರು ಜನರು ಕುಳಿತು ವಾಹನಗಳನ್ನು ಚಲಾಯಿಸುವ ಸವಾರರಿಗೆ ಆನ್ ಲೈನ್ ದಂಡ ಹಾಕಲಾಗುತ್ತಿದೆ. ಈ ಸಂಪರ್ಕ ರಹಿತ ದಂಡ ಹಾಕುವ ಉದ್ದೇಶವಿಷ್ಠೆ. ಮಂಡ್ಯದಲ್ಲಿ ಸಂಚಾರ ನಿಮಯ ಉಲ್ಲಂಘಿಸಿ ಹೋಗುತ್ತಿದ್ದ ಸವಾರರನ್ನು ಹಿಡಿಯಲು ಪೊಲೀಸರು ಮುಂದಾದಾಗ ತಪ್ಪಿಸಿಕೊಳ್ಳಲು ಹೋಗಿ ಜೀವ ಕಳೆದುಕೊಂಡಿದ್ದರಿಂದ ನಮ್ಮ ನಗರದಲ್ಲಿ ಸಂಪರ್ಕ ರಹಿತ ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ ಇದು ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಡೆ ವಿಸ್ತರಿಸಲಾಗುವುದೆಂದರು.
ಜೀವಕ್ಕಿಂತ ದೊಡ್ಡದ್ದು ಏನು ಇಲ್ಲ. ಆದರೇ ನಗರ ಸೇರಿದಂತೆಯೇ ಜಿಲ್ಲೆಯಲ್ಲಿ ಬಹುತೇಕ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿಯೇ ಸಂಚರಿಸುತ್ತಾರೆ. ಇದು ಅವರ ಜೀವಗಳಿಗೆ ಅಪಾಯವಿದ್ದು, ಇದನ್ನು ತಡೆಗಟ್ಟಲು ದಂಡ ಹಾಕುವ ಮೂಲಕ ಅರಿವು ಮೂಡಿಸುವ ಕೆಲಸ ನಡೆದಿದೆ. ಮುಂದೇ ಎಲ್ಲ ತರಹದ ಸಂಚಾರ ನಿಯಮಗಳನ್ನು ಉಲ್ಲಂಘಿಸಿವವಿಗೂ ಈ ಆನ್ ಲೈನ್ ದಂಡ ಹಾಕಲಾಗುವುದೆಂದರು.
ಐಟಿಎಂಎಸ್ ಅಳವಡಿಕೆಗೆ ಜಿಲ್ಲೆಗೆ 2.40 ಕೋಟಿ ರೂ. ಅನುದಾನ
ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಳವಡಿಕೆಗೆ ರಾಜ್ಯ ಸರ್ಕಾರವು ಸಂಚಾರ ಮತ್ತು ರಸ್ತೆ ಸುರಕ್ಷತಾ ಕಮಿಷನರ್ (ಸಿಟಿಆರ್‌ಎಸ್) ಅಡಿ ಜಿಲ್ಲೆಗೆ 2.40 ಕೋಟಿ ಅನುದಾನ ನೀಡಿದೆ ಎಂದರು.
ಐಟಿಎಂಎಸ್ ಅಡಿ ಹೈ ಡೆಫಿನಿಷನ್ ಸಿ.ಸಿ.ಟಿ.ವಿ ಕ್ಯಾಮೆರಾ, ಅಟೊಮೇಟಿಕ್ ನಂಬರ್ ಪ್ಲೇಟ್ ರಿಕಗ್ನಿಷನ್ (ಎಎನ್‌ಪಿಆರ್), ರಸ್ತೆಗಳಲ್ಲಿ ವಾಹನಗಳ ವೇಗವನ್ನು ಮಾಪನ ಮಾಡಿ ಅಳೆಯುವ ಸ್ಪೀಡ್ ರಾಡಾರ್ ತಂತ್ರಜ್ಞಾನದ ಗನ್, ಕ್ಯಾಟ್ ಐಸ್ ಉಪಕರಣ, ಡಿಜಿಟಲ್ ಸೈನ್ ಬೋರ್ಡ್‌ಗಳಂತಹ ಸಾಧನಗಳನ್ನು ಒಳಗೊಂಡಿರಲಿದೆ. ಈ ಸಾಧನಗಳ ಮೂಲಕ ತ್ರಿಬಲ್ ರೈಡ್, ಮೊಬೈಲ್ ಬಳಸುತ್ತಾ ವಾಹನಗಳ ಚಾಲನೆ, ಮಿತಿಗಿಂತ ವೇಗವಾಗಿ ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ.
ಈ ಒಟ್ಟು ಅನುದಾನದಲ್ಲಿ 1.40 ಕೋಟಿ ರೂ. ಜಿಲ್ಲೆಯ ಏಳು ಕಡೆ ಐಟಿಎಂಎಸ್ ಅಳವಡಿಕೆಗೆ ಬಳಕೆಯಾಗಲಿದ್ದು. ಉಳಿದ ಒಂದು ಕೋಟಿ ರೂ.ದಲ್ಲಿ ಎಲ್ಲ ರೀತಿಯ ಸಂಚಾರಿ ಸಾಮಾಗ್ರಿಗಳನ್ನು ಖರೀದಿಸಲಾಗುವುದೆಂದು ಅವರು ಹೇಳಿದರು.
ಮಹಿಳೆಗೆ ಅವಮಾನ ಘಟನೆ – ಇಬ್ಬರ ಬಂಧನ: ಶಹಾಪುರ ತಾಲೂಕಿನ ಚಾಮನಾಳ ತಾಂಡಾ ಮಹಿಳೆಯೊಬ್ಬಳ ತಲೆಗೂದಲು ಕತ್ತರಿಸಿ ತಲೆಗೆ ಸುಣ್ಣ ಹಚ್ಚಿ ಅಮಾನುಷವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆಯೇ ಕೆಂಭಾವಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಪ್ರಥ್ವಿಕ್ ಶಂಕರ್ ಹೇಳಿದ್ದಾರೆ.
