ಸಂಪೂರ್ಣತಾ ಅಭಿಯಾನದ ಸನ್ಮಾನ ಸಮಾರಂಭ
ಸತ್ಯಕಾಮ ವಾರ್ತೆ ತಾಳಿಕೋಟೆ:
ಹಿಂದೂಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕುವಂತಹ ಕೆಲಸವನ್ನು ಅಧಿಕಾರಿಗಳು ಮಾಡಿರುವದು ಸಂತಸ ಪಡುವಂತಹದ್ದಾಗಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರು ಹೇಳಿದರು.
ಮಂಗಳವಾರರಂದು ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಮಚಾಯತ್ ವಿಜಯಪುರ, ತಾಲೂಕಾಡಳಿತ ತಾಲೂಕಾ ಪಂಚಾಯತ್ ತಾಳಿಕೋಟೆ ಇವರ ಸಹಯೋಗದಲ್ಲಿ ಮಹಾತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದಡಿ ಸಂಪೂರ್ಣತಾ ಅಭಿಯಾನ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ದೇಶದಲ್ಲಿ ಅತೀ ಹಿಂದೂಳಿದ ತಾಲೂಕುಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ದಿ ಪಡಿಸಬೇಕೆಂಬ ಇಚ್ಚೆಯೊಂದಿಗೆ ಕೇಂದ್ರ ಸರ್ಕಾರವು ನೀತಿ ಆಯೋಗದ ಮೂಲಕ ರಾಜ್ಯದ ೧೪ ತಾಲೂಕುಗಳನ್ನು ಗುರುತಿಸಿ ಅತೀ ಹಿಂದೂಳಿದ ತಾಲೂಕುಗಳಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕು ಸೇರಿಸಿತ್ತು ಅದರಲ್ಲಿ ೩೯ ಸೂಚಂಕಗಳನ್ನು ಅಭಿವೃದ್ದಿ ಪಡಿಸುವದರಲ್ಲಿ ಕೇವಲ ೨ ವರ್ಷಗಳಲ್ಲಿ ೬ ಸೂಚಂಕಗಳನ್ನು ಶೇ.೧೦೦ ರಷ್ಟು ಅಭಿವೃದ್ದಿ ಪಡಿಸಿ ಬಂಗಾರದ ಪಧಕ ಪಡೆದುಕೊಳ್ಳುವಂತಹ ಕೆಲಸ ಅಧಿಕಾರಿಗಳು ಮಾಡಿರುವದು ಸಂತಸ ಪಡುವಂತಹದ್ದಾಗಿದೆ ಅಭಿವೃದ್ದಿ ಕಾರ್ಯಗಳಾಗಬೇಕಾದರೆ ಅಧಿಕಾರಿಗಳ ಸಾರ್ವಜನಿಕರ ಸಹಕಾರವೆಂಬುದು ಬಹುಮುಖ್ಯವಾಗಿ ಬೇಕಾಗುತ್ತದೆ ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಒಳಗೊಂಡು ೬ ಸೂಚಂಕಗಳನ್ನು ಶೇ.೧೦೦ ರಷ್ಟು ಅಧಿಕಾರಿಗಳು ಗುರಿಸಾದಿಸಿರುವದು ಮೆಚ್ಚುವಂತಹದ್ದಾಗಿದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೀ ಯೋಜನೆಯನ್ನು ಅಧಿಕಾರಿಗಳು ಅಚ್ಚುಕ್ಕಟ್ಟಾಗಿ ಕೆಲಸ ಮಾಡುವದರ ಜೊತೆಗೆ ಈ ಕಾರ್ಯಕ್ರಮದಲ್ಲಿ ಬಾಣಂತಿಯರಿಗೆ ಗೌರವಿಸುವಂತಹ ಕೆಲಸ ಮಾಡಿರುವದು ಶ್ಲಾಘನೀಯವಾಗಿದೆ ತಾಳಿಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು ಹಳ್ಳಿಗಳು ಬರುವದು ದೇವರ ಹಿಪ್ಪರಗಿ ಮತಕ್ಷೇತ್ರಕ್ಕೆ ಒಳಪಡುತ್ತವೆ ಈ ತಾಲೂಕಿನ ಅಭಿವೃದ್ದಿಗೆ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆಂದರು.
ಇನ್ನೋರ್ವ ಅಧ್ಯಕ್ಷತೆ ವಹಿಸಿದ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಮಾತನಾಡಿ ತಾಳಿಕೋಟೆ ನಗರವು ಐತಿಹಾಸಿಕ ನಗರವಾಗಿದೆ ಮತ್ತು ವ್ಯಾಪಾರಿಕರಣ ನಗರವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗಿದೆ ಆದರೆ ಕೇಂದ್ರ ಸರ್ಕಾರವು ೩೯ ಮಾನದಂಡಗಳನ್ನು ಸೇರಿಸಿ ಅತೀ ಹಿಂದೂಳಿದ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಿ ಅಭಿವೃದ್ದಿ ಕಾರ್ಯಗಳಿಗೆ ಮುನ್ನುಡಿಯನ್ನು ಬರೆದಿತ್ತು ಅದರಂತೆ ಅಧಿಕಾರಿಗಳು ಕೇವಲ ೨ ವರ್ಷಗಳಲ್ಲಿ ಶ್ರಮವಹಿಸಿ ೩೯ ಮಾನದಂಡಗಳಲ್ಲಿ ೬ ರಲ್ಲಿ ಶೇ.೧೦೦ ರಷ್ಟು ಸಾಧನೆ ಮಾಡಿ ಗೋಲ್ಡ್ ಮೇಡಲ್ ಪಡೆದುಕೊಂಡಿರುವದು ಸಂತೋಷ ಪಡುವಂತಹದ್ದಾಗಿದೆ ಈ ತಾಳಿಕೋಟೆ ತಾಲೂಕು ವಿಜಯಪುರ ಜಿಲ್ಲೆಯ ಕೊನೆಯ ತಾಲೂಕಾ ಕೇಂದ್ರವಾಗಿತ್ತು ಈ ತಾಲೂಕಿಗೆ ಹೈದ್ರಾಬಾದ ಕರ್ನಾಟಕವು ಸೇರಿಕೊಳ್ಳುತ್ತಿರುವದರಿಂದ ಸಹಜವಾಗಿಯೇ ಹಿಂದೂಳಿದ ಪಟ್ಟಿಯಲ್ಲಿ ಸೇರಿಕೊಂಡಿತ್ತು ಯಾವುದೇ ಕೆಲಸ ಮಾಡಬೇಕೆಂದರೆ ಆತ್ಮ ಸ್ಥೈರ್ಯ, ಆತ್ಮ ವಿಸ್ವಾಸವೆಂಬುದು ಬೇಕಾಗುತ್ತದೆ ಅಂತಹ ಆತ್ಮ ವಿಸ್ವಾಸವನ್ನು ಹೊಂದಿದ ಅಧಿಕಾರಿಗಳು ತಾಲೂಕಿನ ಜನರ ಸಹಕಾರದೊಂದಿಗೆ ೬ ಸೂಚಂಕಗಳಲ್ಲಿ ಶೇ. ೧೦೦ ರಷ್ಟು ಗುರಿ ಸಾಧಿಸಿ ರಾಜ್ಯದ ಹಿಂದೂಳಿದ ೧೪ ತಾಲೂಕುಗಳಲ್ಲಿ ತಾಳಿಕೋಟೆ ತಾಲೂಕು ಗೋಲ್ಡ ಮೇಡಲ್ ಪಡೆದುಕೊಂಡು ಮೊದಲನೇಯದಾಗಿ ಹೊರಬರಲು ಪ್ರಯತ್ನಿಸಿರುವದು ಹೆಮ್ಮೆ ಪಡುವಂತಹದ್ದಾಗಿದೆ ಇನ್ನೂ ೩೩ ಸೂಚಂಕಗಳನ್ನು ಪೂರೈಸಬೇಕಾಗಿದೆ ಅಧಿಕಾರಿಗಳು ಕೆಲಸ ಮಾಡುತ್ತಿರುವ ಪರಿಯನ್ನು ಲಕ್ಷೀಸಿದರೆ ನಮ್ಮಲ್ಲಿಯೂ ಆತ್ಮ ವಿಸ್ವಾಸವೆಂಬುದು ಹೆಚ್ಚಿಸುವಂತೆ ಮಾಡಿದೆ ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ಮುಟ್ಟಬೇಕಾಗಿದೆ ಇದರಿಂದ ಹಳ್ಳಿಯಿಂದ ತಾಲೂಕು, ಜಿಲ್ಲೆ ದೇಶ ಎಂದಿಗೂ ಬಡವಾಗುವದಿಲ್ಲಾ ಅಧಿಕಾರಿಗಳ ಆತ್ಮ ಸ್ಥೈರ್ಯದ ಜೊತೆಗೆ ನಿಲ್ಲುವಂತಹ ಕೆಲಸ ರಾಜಕಾರಣಿಗಳು ಸಹ ಮಾಡಬೇಕೆಂದರು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಮಾತನಾಡಿ ಕೇಂದ್ರ ಸರ್ಕಾರವು ೨೦೧೮ ರಲ್ಲಿ ಮಹಾತ್ವಾಕಾಂಕ್ಷಿ ಯೋಜನೆಯೊಂದಿಗೆ ನಮ್ಮ ರಾಜ್ಯದ ೧೪ ತಾಲೂಕುಗಳನ್ನು ಗುರುತಿಸಿ ಹಿಂದೂಳಿದ ತಾಲೂಕುಗಳೆಂದು ಘೋಷಣೆ ಮಾಡಿತ್ತು ಅದರಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕು ಒಳಗೊಂಡಿತ್ತು ಇದನ್ನು ಸವಾಲಾಗಿ ಅಧಿಕಾರಿಗಳು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದರ ಪರಿಣಾಮ ೬ ಸೂಚಂಕಗಳಲ್ಲಿ ಶೇ.೧೦೦ ರಷ್ಟು ಸಾಧನೆ ಮಾಡಿದ್ದೇವೆ ಇನ್ನೂ ೩೩ ಸೂಚಂಕಗಳಿದ್ದು ಅವುಗಳನ್ನು ಸಾಧಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿವರ್ಗದವರು ಸಾಗಲಿದ್ದಾರೆಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎ.ಡಿ.ಅಲ್ಲಾಪೂರ ಅವರು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ಬಗ್ಗೆ ತಿಳಿ ಹೇಳಿದರು. ತಾಪಂ ಇಓ ನಿಂಗಪ್ಪ ಮಸಳಿ ಪ್ರಾಸ್ಥಾವಿಕ ಮಾತನಾಡಿದರು.
ಇದೇ ಸಮಯದಲ್ಲಿ ೬ ಸೂಚಂಕಗಳಲ್ಲಿ ಸಾಧನೆ ಮಾಡಿದ ಕೃಷಿ ಇಲಾಖೆಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ, ಆರೋಗ್ಯ ಇಲಾಖೆಯೊಳಗೊಂಡ ಅಧಿಕಾರಿವರ್ಗದವರನ್ನು ಹಾಗೂ ಗರ್ಭಿಣಿ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ತಾಲೂಕಾಡಳಿತದ ಅಧಿಕಾರಿಗಳಾದ ತಾಲೂಕಾ ತಹಶಿಲ್ದಾರ ವಿನಯಾ ಹೂಗಾರ, ಶರಣಗೌಡ ಬಿಳಗಿ, ಡಾ.ಸತೀಶ ತಿವಾರಿ, ಶಿವಮೂರ್ತಿ ಕುಂಭಾರ, ಆರ್.ಎಸ್.ಹಿರೇಗೌಡರ, ಬಿ.ಎಸ್.ಸಾವಳಗಿ, ಮತ್ತು ಎಚ್.ಎಸ್.ಪಾಟೀಲ, ಪ್ರಭುಗೌಡ ಮದರಕಲ್ಲ, ಮಡುಸಾಹುಕಾರ ಬಿರಾದಾರ, ಸಿದ್ದನಗೌಡ ಪಾಟೀಲ(ನಾವದಗಿ), ಮೊದಲಾದವರು ಉಪಸ್ಥಿತರಿದ್ದರು.
ಸಿಆರ್‌ಸಿ ರಾಜು ವಿಜಾಪೂರ ನಿರೂಪಿಸಿದರು. ತಾಪಂ ಸಹಾಯಕ ನಿರ್ದೇಶಕ ಬಿ.ಎಂ.ಸಾಗರ ವಂದಿಸಿದರು.

