- ಹನ್ನೊಂದು ತೊಲಿ ಬಂಗಾರ ಸೇರಿ ರೂ 4,15,500 ನಗದು ವಶ
ಸತ್ಯಕಾಮ ವಾರ್ತೆ ಶಹಾಪುರ :
ತಾಲೂಕಿನ ಗೋಗಿ ಹಾಗೂ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನದ ವರದಿಗಳನ್ನು ಬೆನ್ನಟ್ಟಿ ಬೆರಳಚ್ಚು ಸೇರಿದಂತೆ ವಿವಿಧ ಆಯಾಮಗಳ ಮೂಲಕ ತನಿಖೆ ಕೈಗೊಂಡು ಪ್ರಕರಣ ಭೇದಿಸಿ ನಾಲ್ಕು ಲಕ್ಷ ಹದಿನೈದು ಸಾವಿರದ ಐದುನೂರು ರೂಪಾಯಿ ನಗದು ಸೇರಿ ಹನ್ನೊಂದು ತೊಲಿ ಬಂಗಾರದ ಆಭರಣ ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಜಾವೇದ್ ಇನಾಮದಾರ ಹೇಳಿದರು.
ನಗರದ ಆರಕ್ಷಕ ವೃತ್ತ ನೀರಿಕ್ಷಕ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತೀಚಿಗೆ ಗೋಗಿ ಹಾಗೂ ಭೀ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನ ನಡೆದ ಕುರಿತು ವರದಿಯಾಗಿದ್ದು. ಈ ಪ್ರಕರಣಗಳನ್ನು ಬೇಧಿಸಲು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಾದ ಪೃತ್ವಿಕ್ ಶಂಕರ ಹಾಗೂ ಕೆ ಎಸ್ ಪಿ ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಣೆಶ ಹಾಗೂ ಉಪ ಅಧೀಕ್ಷಕ ಸುರಪುರ ವಿಭಾಗದ ಜಾವೇದ್ ಇನಾಮದಾರ ಅವರ ಮಾರ್ಗದರ್ಶನದಲ್ಲಿ ನಗರದ ಸಿಪಿಐ ಶರಣಗೌಡ ನ್ಯಾಮನ್ನವರ ಗೋಗಿ ಹಾಗೂ ಭೀ ಗುಡಿ ಪಿ ಎಸ್ ಐಗಳಾದ ದೇವಿಂದ್ರರೆಡ್ಡಿ ಹಾಗೂ ಚಂದ್ರನಾಥ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳ ಮೂಲಕ ತನಿಖೆ ಕೈಗೊಂಡು ಗೋಗಿ ಠಾಣೆಯ ಗುನ್ನ ಸಂಖ್ಯೆ 52/2024, 48/2025, 61/2025,ಭೀ ಗುಡಿ ಠಾಣೆಯ ಗುನ್ನ ಸಂಖ್ಯೆ 02/2025 ರಲ್ಲಿ ಒಟ್ಟು ನಾಲ್ಕು ಹಗಲು ಹಾಗೂ ರಾತ್ರಿ ವೇಳೆ ಮನೆ ಗಳ್ಳತನ ಪ್ರಕರಣಗಳನ್ನು ಭೇದಿಸಿ ವಿಜಾಪುರ ಜಿಲ್ಲೆಯ ಅದೇ ತಾಲೂಕಿನ ಹೊನ್ನಾಳಿ ಗ್ರಾಮದ ಸಂತೋಷ ತಂದೆ ಶಿವಣ್ಣ ನಂದ್ಯಾಳನನ್ನು ದಸ್ತಗಿರಿ ಮಾಡಿ ಹನ್ನೊಂದು ತೊಲಿ ಬಂಗಾರದ ಆಭರಣಗಳೊಂದಿಗೆ 4,15,500 ರೂ ನಗದು ವಶಪಡಿಸಿಕೊಂಡು ಕ್ರಮ ಜರುಗಿಸಲಾಗಿದೆ ಎಂದರು.
ಆರೋಪಿಯ ಬೆರಳಚ್ಚು ಗುರುತಿನ ಸಹಾಯದಿಂದ ಬೆನ್ನಟ್ಟಿ ಆತನ ಚಲನವಲನಗಳನ್ನು ಹಿಂಬಾಲಿಸಿ ರಭಕವಿ ಬನಹಟ್ಟಿ, ಲಿಂಗಸೂರು, ಸುರಪುರು ಸೇರಿದಂತೆ ಬಸ್ ನಿಲ್ದಾಣಗಳಲ್ಲಿ ಯಾರದೋ ಬಳಸಿಕೊಂಡು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿದ ವಿವರ ಸಂಗ್ರಹಿಸಿ ಲಿಂಗಸೂರಿನಲ್ಲಿ ತನ್ನ ಪತ್ನಿಯ ಫೋನ್ ಕರೆಯಿಂದ ಬಾಡಿಗೆ ವಾಹನದಲ್ಲಿ ಶಾಪಿಂಗ್ ಮಹಲಿನಲ್ಲಿ ಸಂಚರಿಸಿದ್ದ ಸಿ ಸಿ ಟಿ ವಿಗಳಲ್ಲಿ ಸೆರೆ ಸಿಕ್ಕಿದ ಚಿತ್ರಣಗಳ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದರು.
ಸದರಿ ಕಳ್ಳತನ ಅಪಾರಧ ಪ್ರಕರಣಗಳನ್ನು ಪತ್ತೆ ಮಾಡಿದ ತಂಡದ ಸಿ ಪಿ ಐ, ಪಿ ಎಸ್ ಐ, ಹಾಗೂ ಸಿಬ್ಬಂದಿಗಳಾದ ಗೋಗಿ ಶ್ರೀಶೈಲ್ ಸಜ್ಜನ, ದೇವಿಂದ್ರಪ್ಪ, ಭೀಮನಗೌಡ, ಬಸನಗೌಡ, ನಾಗಪ್ಪ, ಹಾಗೂ ಸೋಮಯ್ಯ ರವರನ್ನು ಜಿಲ್ಲಾ ಪೊಲೀಸ್ ಅಧಿಕ್ಷಕರು ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು.

